ಹೀಂಗೊಂದು ಹರಟೆ

September 25, 2011 ರ 10:30 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

‘ಹರಟೆ ಮಾಡೆಡಿ ಮಕ್ಕಳೆ. ಆನು ರೆಜ ಮನುಗಿ ಒರಗುತ್ತೆ. ನಿಂಗಳೇ ಹೇಳಿ…., ಆನು ಎಲ್ಲಿ ಮನುಗೆಕ್ಕು? ಕೊಟ್ಟಗೆಲಿಯೋ? ಮನೆ ಜೆಗಲ್ಲಿಯೋ? ಮತ್ತೆ, ಅಲ್ಲಿಗೆ ಬಂದು ಹರಟೆ ಮಾಡಿರೆ ಎನಗೆ ಪಿಸುರು ಬಕ್ಕು.’
ಅಜ್ಜ° ಹೀಂಗೆ ಹೇಳಿರೆ ಮತ್ತೆ ರೆಜ ಹೊತ್ತು ಅಲ್ಲಿಗೆ ಆರಿಂಗೂ ಹೋತಿಕ್ಕಲೆ ಎಡಿಯ. ಒರಕ್ಕಿನ ಹಾಳು ಮಾಡಿರೆ ಎಂಗೊ ಬೆನ್ನಿಂಗೆ ಹಾಳೆ ಕಟ್ಟೆಕ್ಕಷ್ಟೆ. ಮಧ್ಯಾಹ್ನ ಉಂಡಿಕ್ಕಿ ರೆಜ ಮನುಗಿ ಒರಗದ್ರೆ ಪ್ರಾಯ ಅದವಕ್ಕೆ ಎಡಿತ್ತಿಲ್ಲೆ ಇದಾ. ಮತ್ತೆ ಎಂಗಳ ಪಟಲಾಂ ಗೌಜಿ ಮಾಡ್ಲೆ ಬೇರೆ ಜಾಗೆಯೇ ಹುಡ್ಕೆಕ್ಕಷ್ಟೆ! ರಜೆ ದಿನ ಎಲ್ಲರೂ ಸೇರಿ ಸುಮ್ಮನೆ ಕೂದರೆ ಎಂಗಳ ಮಕ್ಕೊ ಹೇಳಿ ಹೇಳುಗಾ? ಗೌಜಿ ಇದ್ದರೇ ಅಲ್ಲದಾ ಮಕ್ಕೊ ಇದ್ದವು ಹೇಳಿ ಗೊಂತಪ್ಪದು.
ಎಂಗೊಗೂ ಅಷ್ಟೆ, ಆದಿತ್ಯವಾರ ಒಂದೇ ದಿನ ಪುರುಸೊತ್ತಿಪ್ಪದು. ಬಾಕಿ ದಿನ ಒಬ್ಬೊಬ್ಬ° ಒಂದೊಂದು ಕ್ಲಾಸ್. ಮನೆಗೆ ಬಂದ ಮತ್ತೆ ಹೋಂ ವರ್ಕ್, ಲೆಕ್ಕ ಮಾಡುವದು, ಪ್ರಬಂಧ ಬರವದು, ಕೋಪಿ  ಬರವದು, ಶಾಲೆಲಿ ತಪ್ಪು ಉತ್ತರ ಹೇಳಿದ್ದಕ್ಕೆ ಇಂಪೊಸಿಶನ್ ಬರವದು, ಇನ್ನೂ ಏನೇನೋ ಕೆಲಸಂಗೊ.

ಹೀಂಗೆ ಹರಟೆ ಮಾಡಿಂಡು ಇತ್ತಿದ್ದ ಕಾಲ ಕಳುದತ್ತು. ಎಲ್ಲರೂ ಅವರವರ ಕೆಲಸಲ್ಲಿ ಬೇರೆ ಬೇರೆ ದಿಕ್ಕೆ ಕೆಲಸಕ್ಕೆ ಸೇರಿದವು. ಈಗ ಒಬ್ಬಬ್ಬನೂ ಸಿಕ್ಕೆಕ್ಕಾರೆ ರಜೆ ಹಾಕಿ ಅವು ಇಪ್ಪ ಊರಿಂಗೆ ನಾವು ಹೋಯೆಕ್ಕು ಇಲ್ಲದ್ದರೆ, ರಜೆ ಹಾಕಿ ಅವು ಇತ್ಲಾಗಿ ಬರೆಕು.
ಸಂಸಾರ ಸಮೇತ ಬರೆಕಾರೆ, ಬಸ್ಸಿಲ್ಲಿಯೋ ರೈಲಿಲ್ಲಿಯೋ ಟಿಕೆಟ್ ಸಿಕ್ಕಲೆ ಬಂಙ.
ಹಾಂಗಾಗಿ ಮತಾಡೆಕ್ಕಾರೆ ಮೊಬೈಲೋ, ದೂರವಾಣಿಯೋ, ಇಲ್ಲದ್ರೆ ಪೇಸ್ ಬುಕ್ಕಿಲ್ಲಿಯೋ, ಜೀಟಾಕಿಲ್ಲಿಯೋ ಚಾಟ್ ಗತಿ.

* * *

ಕೆಲಸಕ್ಕೆ ಸೇರಿದ ಹೊಸತ್ತು. ದೊಡ್ಡ  ಕಂಪೆನಿಲಿ ಒಂದು ಸಣ್ಣ ಕೆಲಸ.
ಅಲ್ಲಿಯೂ ಒಂದು ಸಣ್ಣ ಪಟಲಾಂ ಸೇರಿತ್ತು. ಕೂದೊಂಡು ಹರಟೆ ಹೊಡವಲೆ ಎಂತಾಯೆಕ್ಕು.
ಒಂದೋ ಆರದ್ದಾರೂ ರೂಂಲ್ಲಿ ಒಡ್ಡೋಲಗ, ಇಲ್ಲದ್ದರೆ ಹೊತ್ತೋಪಗ ಪಾರ್ಕಿನ ಹಸಿರು ಹುಲ್ಲೇ ಹಸೆ, ಆಕಾಶವೇ ಮಾಡು.
ಬೊಬ್ಬೆ ಹೊಡೆದರೆ ಮಾಡು ಹಾರಿ ಹೋಕು ಹೇಳಿ ಹೆದರಿಕೆ ಇಲ್ಲೆ. :-) ವಿಶಯ ಇಂತದ್ದೇ ಹೇಳಿ ಇಲ್ಲೆ.

ಒಬ್ಬ° ಅವನ ಡಿಪಾರ್ಟ್ ಮೆಂಟಿಲ್ಲಿ ಆದ ತಮಾಶೆಯ ಹೇಳಿರೆ, ಇನ್ನೊಬ್ಬ° ಹಿಂದಾಣ ದಿನ ನೋಡಿದ ಸಿನೆಮಾದ ಹೀರೋ ಹೀರೋಯಿನ್ ಬೆಳಿ ಡ್ರೆಸ್ಸಿಲ್ಲಿ ಮಳೆಗೆ ನೆನೆದ ಕತೆ, ಸಿನೆಮಾ ಬಿಟಿಕ್ಕಿ ಬಪ್ಪಗ ಒಂದು ಕೂಸು ಇವಂಗೆ ಲೈನ್ ಹೊಡದ್ದು ಹೇಳಿ ಜಾನ್ಸಿ ಇವ° ಅದಕ್ಕೆ ಸ್ಮೈಲ್ ಕೊಟ್ಟದು, ನೆಗೆ ಮಾಡಿ ಅಪ್ಪಗ ಅದರ ಕೆನ್ನೆಲಿ ಗುಳಿ ಬಿದ್ದದು, ಇನ್ನೊಂದು ಸರ್ತಿ ಹೋದರೆ ನಿನ್ನ ಕೆನ್ನೆಲಿ ಅದರ ಚಪ್ಪಲಿ ಪೆಟ್ಟಿನ ಗುಳಿ ಬೀಳುಗು ಹೇಳಿ ಮತ್ತೊಬ್ಬ° ಅವನ ಕಾಲು ಎಳವದು, ಇನ್ನೊಬ್ಬಂಗೆ ಬಸ್ಸಿಲ್ಲಿ ಬಪ್ಪಗ ಅವನ ಕ್ಲಾಸ್ ಮೇಟ್ ಕೂಸು ಸಿಕ್ಕಿ ಮಾತಾಡಿದ್ದು, ಅದರ ಮದುವೆ ಹೇಳಿಕೆ ಕಳುಸುತ್ತೆ ಹೇಳಿದ್ದು, ಇವಂಗೆ ಬೇಜಾರು ಆದ್ದು, ಇನ್ನೂ ಹಲವಾರು ವಿಶಯಂಗೊ.
ಒಂದಕ್ಕೊಂದು ಸೇರಿಂಡು ಅಕೇರಿಗೆ ರಾಜಕಾರಣವೋ, ಅಂದ್ರಾಣ ಊಟಕ್ಕೆ ಹೋಟ್ಲಿಂಗೆ ಹೋಪದೋ, ರೂಮಿಲ್ಲಿಯೆ ಎಂತಾರೂ ಮಾಡುವದೋ, ಅಲ್ಲ ಯೇವತ್ರಾಣ ಹಾಂಗೆ ಬೈಕ್ಕೊಂಡು ಕೇಂಟಿನಿಲ್ಲಿಯೇ ಉಂಬದೋ, ಎಲ್ಲಾ ಹರಟೆ ಹೊಡವಲೆ ಸುರು ಮಾಡಿರೆ ಸಮಯ ಹೋದ್ದು ಗೊಂತಪ್ಪದು ಒಂದೋ ಹಶು ಆಯೆಕ್ಕು, ಇಲ್ಲದ್ದರೆ ಡ್ಯೂಟಿಗೆ ಹೆರಡ್ಲೆ ಸಮಯ ಆತು ಹೇಳಿ ನೆಂಪಾಯೆಕ್ಕು.

* * *

ಅಂದ್ರಾಣ ಚರ್ಚೆ ರೆಜ ಬೇರೆ ಲೈನಿಲ್ಲಿ ಹೆರಟತ್ತು.
ನಾವು ಎಂತಾರೂ ವಸ್ತುಗಳ ಪರ್ಚೇಸ್ ಮಾಡ್ತಲ್ಲದ, ಅದರ ಹಿಂದೆ ಒಂದು ಘಟನೆ ಇರ್ತು. ಅದರ ಬಗ್ಗೆ ಇಂದು ಮಾತಾಡುವೊ° ಹೇಳಿದ° ಒಬ್ಬ°.
ಆಕ್ಕು, ಆಗದ್ದಿಲ್ಲೆ. ಆರು ಸುರು ಮಾಡುವದು.

ಮುನ್ನ ಸುರು ಮಾಡಿರೆ, ಅವನ ಫ್ರೆಂಡಿಂಗೆ ಚೂಡಿದಾರ ತೆಗದ ಕತೆ ಸುರು ಅಕ್ಕು.
ಅವ° ಚೆಂದ ಇದ್ದು ಹೇಳಿ ತೆಕ್ಕೊಂಡೋಗಿ ಕೊಟ್ಟದು, ಅದು ಲಾಯಿಕ ಇಲ್ಲೆ ಹೇಳಿ ಮೋರೆ ಪೀಂಟಿಸಿದ್ದು, ಮತ್ತೆ ಇಬ್ರೂ ಒಟ್ಟಿಂಗೆ ಹೋಗಿ ಗೆನಾ ಡ್ರೆಸ್ ತೆಗದ್ದು,ಇವನ ಕೈಂದ ಎರಡು ಸಾವಿರ ಜಾರಿದ್ದು, ಅಲ್ಲಿಂದ ಮತ್ತೆ ಪಬ್ಬಾಸಿಂಗೆ ಹೋಗಿ ಗಡ್ ಬಡ್ ತಿಂದು ಪೈಸೆ ಕೊಡ್ಲಪ್ಪಗ ಪರ್ಸ್ ಖಾಲಿ ಆಗಿ ಗಡಿ ಬಿಡಿ ಆದ್ದು, ಅದರ ತಮ್ಮಂಗೆ ಇವ° ಪೆನ್ ಸೆಟ್ ತೆಗದು ಕೊಟ್ಟದು, ನನ್ನ ಅಕ್ಕನ ಫ್ರೆಂಡ್ ಈ ಪೆನ್ ಕೊಟ್ಟದು ಹೇಳಿ ಆ ಮಾಣಿ ಊರಿಡೀ ಹೇಳಿಂಡು ಬಂದದು,  ಇದೆಲ್ಲಾ ಎನಗಂತೂ ಕೇಳಿ ಕೇಳಿ ಸಾಕಾಯಿದು.
ಪುನಃ ಅದೇ ಕತೆ ಬೇರೆ ರೂಪಲ್ಲಿ ಬೇಡ ಹೇಳಿದೆ.

ಇಂದ್ರಾಣದ್ದು ಸುರು ಮಾಡುವದು ಎನ್ನ ಸರದಿ ಹೇಳಿದೆ.
ಶ್ರೀಶ° ಎಂತದೋ ಗಮ್ಮತ್ತು ಮಾಡಿದ್ದ°, ಹೇಳ್ಲೆ ಕಾದು ಕೂಯಿದ°… ಹೇಳಿಗೊಂಡು ,” ಹುಂ! ನಡಕ್ಕಟ್ಟು” ಹೇಳಿದ° ವಿಶ್ವ°. “ಅಂದೊಂದು ದಿನ.., ಸುರತ್ಕಲ್ ಬೀಚಿಲ್ಲಿ ಆರೊಟ್ಟಿಂಗೋ ನೋಡಿದೆ, ಆ ಕತೆಯಾ?” ಕೇಳಿದ° ಮುನ್ನ. “ನಿನ್ನ ನೋಡಿದ್ದಿಲ್ಲೆ ಜಾನ್ಸೆಡ,  ಲೈಟ್ ಟವರಿನ ಮೇಗಂಗೆ ‘ಅದರ’ ಕರಕ್ಕೊಂಡು ಹೋದ್ದರ ಆನು ನೋಡಿದ್ದೆ ಮಿನಿಯಾ°….. ;-)”. ಆನು ಮುನ್ನನ ಹೊಡೆಂಗೆ ಪಿಸುರಿಲೇ ತಿರುಗಿದೆ. ಅಂಬಗ ಅವ°, “ಇಲ್ಲೆ ಮಾರಾಯಾ. ನಿನ್ನ ಬಾಯಿಗೆ ಕೋಲು ಹಾಕುತ್ತಿಲ್ಲೆ. ಹೇಳ್ತರ ಹೇಳಿಕ್ಕು. ಇರುಳಾಣ ಅಡಿಗೆ ನಿನ್ನ ರೂಮಿಲ್ಲಿಯೇ. ನಿನ್ನ ನಳಪಾಕ ಮಿಸ್ ಮಾಡ್ಲೆ ಆನು ತಯಾರಿಲ್ಲೆ..” ಹೇಳಿದ°
ಹಾಂಗಾರೆ ಕೇಳುವಂತರಾಗಿ, ರೆಜ ನಾಟಕೀಯವಾಗಿಯೇ ಹೇಳಿದೆ- ಆನು ಸುರೂ ಮೊಬೈಲ್ ತೆಗದ ಕತೆಯ.

* * *

ಅಂದೊಂದು ದಿನ  ಹೊತ್ತೋಪಗ ಸುರತ್ಕಲಿಲ್ಲಿ ನೆಡಕ್ಕೊಂಡು ಹೋಗಿಂಡಿತ್ತಿದ್ದೆ.-ಹೇಳಲೆ ಸುರು ಮಾಡಿದೆ.
‘ಎಲ್ಲಿ ಕಾಲೇಜ್ ಬಿಡ್ತ ಸಮಯಲ್ಲಿ…, ಗೋವಿಂದದಾಸ ಕಾಲೇಜಿನ ಎದುರಾ?’ ಕೆಣಕ್ಕಿದ° ವಿಶ್ವ!
‘ಅಲ್ಲ ಮಾರಾಯಾ, ಅವ° ಸ್ಟುಡಿಯೋಕ್ಕೆ ಹೋದ್ದು ಹೇಳುಗು ಈಗ,’ ಸ್ವರ ಸೇರಿಸಿದ ಮುನ್ನ!
‘ಅಪ್ಪು.. ಅಲ್ಲೆ ಸ್ಟುಡಿಯೋದ ಹೆರ ನಿಂದರೆ ಸಾಕಿದ ಕಣ್ಣು ತಂಪು ಮಾಡ್ಲೆ,’-ಸ್ವಂತ ಅನುಭವಂಗಳ ಹೇಳ್ಲೆ ಸುರುಮಾಡಿದವು ಒಬ್ಬೊಬ್ಬನೇ ! “ಕೇಳ್ಕಾನಿ ನಲ್ಲ ರಸಂಮಿಂಡ್”
‘ಅದೆಲ್ಲಾ ಅಲ್ಲ ಮಾರಾಯ. ಎನ್ನ ಕತೆ ಅಷ್ಟೆಲ್ಲಾ ರೊಮಾಂಟಿಕ್ ಅಲ್ಲ. ಕೂಸುಗಳ ನೋಡುದು ಬಿಟ್ರೆ ಪೇಟೆಲಿ ಬೇರೆಂತ ಕೆಲಸ ಇಲ್ಲೆಯಾ?’ ರೆಜ ಗರಂ ಆಗಿಯೇ ಕೇಳಿದೆ.
‘ನಿಂಗೊಗೆ ಅಷ್ಟೊಂದು ಇಂಟ್ರೆಸ್ಟ್ ಇದ್ದರೆ, ಬೀಜಿ ಸ್ಕೂಲ್ ಮತ್ತೆ ಕೆನರಾ ಕಾಲೇಜ್ ಬಿಡುವಾಗ ಅಲ್ಲಿ ಬೈಕಿಲ್ಲಿ ತಿರುಗಾಡಿ’- ರೆಜಾ ಕೋಪ ತೋರಿಸಿದೆ.
‘ಇಂದ್ರಾಣ ಅಡಿಗ್ಗೆ ನೀರುಳ್ಳಿ ಕೊಚ್ಚಿ ಕೊಡ್ತ ಕೆಲ್ಸ ಆನೇ ಮಾಡ್ತೆ, ನೀನು ಸುರು ಮಾಡು,’ ಹೇಳಿ ಮೆಲ್ಲಂಗೆ ಬೆಣ್ಣೆ ಹಚ್ಚಿದ “ಈಚ”.
ಯಾವ್ದಾದರೂ ಅಕ್ಕು, ಕಣ್ಣಿಲ್ಲಿ ಮೂಗಿಲ್ಲಿ ನೀರು ಹರುಶಿಗೊಂಡು, ನೀರುಳ್ಳಿ ಕೊಚ್ಚುತ್ತ ಕೆಲಸ ಹೇಳಿರೆ ಎನಗೆ ಅಷ್ಟಕ್ಕಷ್ಟೆ. ಸರಿ ಒಪ್ಪಿದೆ.

* * *

ತಂಗೆ ಕಾಲೇಜಿಂಗೆ ಸೇರಿದ ಸಮಯ. ದೂರದ ಊರು. ಕ್ಷೇಮ ಸಮಾಚಾರ ತಿಳಿಯೆಕ್ಕಾರೆ ಫೋನೇ ಗತಿ.
ಇತ್ಲಾಗಿಂದ ಹೋಸ್ಟೆಲಿಂಗೆ ಪೋನ್ ಮಾಡಿರೆ ಅದು ಸಿಕ್ಕುವದು ಕಷ್ಟ. ಅತ್ಲಾಗಿಂದ ಅದು ಮಾಡೆಕ್ಕಾರೆ ಫೋನ್ ಬೂತಿಂಗೆ ಹೋಗಿ ಕಾದು ಕೂದು ಮಾಡೆಕ್ಕಷ್ಟೆ.
ಎನಗೊಂದು ಮೊಬೈಲ್ ತೆಗದು ಕೊಡ್ತೀರಾ ಕೇಳಿಯಪ್ಪಗ ಇಲ್ಲೆ ಹೇಳ್ಲೆ ಆವ್ತಾ.
ಕೂಸುಗೊ ದೂರದೂರಿಲ್ಲಿ ಇಪ್ಪಗ ಅವರ ಕ್ಷೇಮ ಸಮಾಚಾರ ತಿಳಿವಲೆ ಎಂತಾದ್ರೂ ಒಂದು ವೆವಸ್ಥೆ ಆಯೆಕ್ಕಲ್ಲದಾ. ಅಕ್ಕು ಹೇಳಿ ಒಂದು ತೆಗವಲೆ ಅಲ್ಲಿಯೇ ಏರ್ಪಾಡು ಮಾಡಿ ಆತು. ಅಣ್ಣ ತೆಗದು ಕೊಟ್ಟದು ಹೇಳಿ ಅದು ಸಂಭ್ರಮಿಸಿಂಡು ಇತ್ತಿದ್ದು.
ರೆಜಾ ಸಮಯ ಹೋದಪ್ಪಗ “ಅಣ್ಣ ನಿನಗೂ ಒಂದು ಮೊಬೈಲ್ ತೆಕ್ಕೊ” ಹೇಳಿ ವರಾತ ಕುಟ್ಟಲೆ ಸುರು ಮಾಡಿತ್ತು.
ಮನೆಲಿ ಲಾಂಡ್ ಲೈನ್ ಇದ್ದಲ್ಲದಾ, ನೀನು ಅಲ್ಲಿಗೇ ಫೋನ್ ಮಾಡು. ಅಲ್ಲಿಯೇ ಮಾತಾಡುವೊ°. ಆಪೀಸಿಲ್ಲಿ ಹೇಂಗೂ ಬೇರೆ ವೆವಸ್ಥೆ ಇದ್ದಲ್ಲದಾ. ಎನಗೆ ಈಗ ಸದ್ಯಕ್ಕೆ ಬೇಡ ಹೇಳಿ ಮಂಕಾಡಿಸಿ ಅದರ ಬಾಯಿ ಮುಚ್ಚಿಸಿದೆ.

* * *

(ಚಿತ್ರ: ಅಂತರ್ಜಾಲ ಕೃಪೆ)

ಮನೆಗೆ ರೆಜಾ ಅಂಗಡಿ ಸಾಮಾನು, ತರಕಾರಿ ಎಲ್ಲಾ ಆಯೆಕ್ಕು ಹೇಳಿ ಕೈ ಚೀಲ ಹಿಡ್ಕೊಂಡು ಸುರತ್ಕಲಿಲ್ಲಿ ಹೋಗಿಂಡು ಇತ್ತಿದ್ದೆ. ಹೂಗಿನ ಮಾರ್ಕೆಟ್ ದಾರಿ ಅಗಿ ತರಕಾರಿಗೆ ಹೋಯೆಕ್ಕಿದಾ.
ಮಾರ್ಕೆಟಿನ ಬಾಯಮ್ಮ ಮೊಬೈಲಿಲ್ಲಿ ಮಾತಾಡ್ತಾ ಇತ್ತಿದ್ದು. ಒಂದರಿ ಕೆಮಿ ಹತ್ರಂಗೆ, ಒಂದರಿ ಬಾಯಿ ಹತ್ರಂಗೆ ಮೊಬೈಲಿನ ಹಿಡ್ಕೊಂಡು ದೊಡ್ಡ ಸ್ವರಲ್ಲಿ ಹೂಗಿನ ರೇಟ್ ವಿಚಾರಿಸಿಂಡು ಇತ್ತಿದ್ದು.
ಮೊಳ ಎಷ್ಟು ದೊಡ್ಡ ಹೇಳಿ ಕೈ ಕರಣ ಮಾಡಿಂಡು ಇತ್ತಿದ್ದು ನೋಡಿರೆ, ಆಚಿಗೆ ಮಾತಾಡ್ತಕ್ಕೆ ಇದರ ಮೊಳ ಅಳತೆ ಕಾಂಗೋ ಹೇಳಿ ಸಂಶಯ ಬಕ್ಕು ಆರಿಂಗಾರೂ.
ಓಹ್! ಬೇರೆ ಊರಿನ ರೇಟ್ ತಿಳುದು ಇಲ್ಲಿಯೂ ಅದಕ್ಕೆ ಸರಿಯಾಗಿ ಏರುಸಲೆ, ಮೊಬೈಲ್ ಇದಕ್ಕೆ ಅನುಕೂಲ ಆವ್ತು ಹೇಳಿ ಅತು. ತೊಂದರೆ ಇಲ್ಲೆ.
ಲಾಭ ಸಿಕ್ಕುವಾಗ ಎಂತಕೆ ಬಿಡೆಕು ಅಲ್ಲದಾ?

ಊರಿಂಗೆ ಸುರುವಿಂಗೆ ಫೋನ್ ಬಂದಿಪ್ಪಗ ಕೆಲವೊಂದು ಘಟನೆಗಳ ಹೇಳಿ ನೆಗೆ ಮಾಡಿಂಡು ಇತ್ತಿದ್ದು ನೆಂಪಿಂಗೆ ಬಂತು.
ಅದ್ದುಲ್ಲಬ್ಯಾರಿ ಮಮ್ಮದೆಬ್ಯಾರಿ ಹತ್ರೆ ಹೀಂಗಿಪ್ಪ ಬೆಲ್ಲ ನಿಂಗಳ ಅಂಗಡಿಲಿ ಇದ್ದಾ ಹೇಳಿ ಕೈ ಕರಣ ಮಾಡಿ ಫೋನಿಲ್ಲಿ ಮಾತಾಡಿದ್ದು, ಪೋಲೀಸ್ ಪೇದೆ ಅದರ ಅಪೀಸರನ ಫೋನ್ ಬಂದಪ್ಪಗ ಎದ್ದು ನಿಂದು ಸಲಾಂ ಹೊಡದು ಮತ್ತೆ ಮತಾಡ್ಲೆ ಸುರು ಮಾಡಿದ್ದು, ಮನೆಲಿ ಫೋನ್ ಶಬ್ದ ಅಪ್ಪಗ ’ಬಂದೇ ಬಂದೇ” ಹೇಳಿಂಡು ಮನೆ ಹೆಮ್ಮಕ್ಕೊ ಓಡಿ ಹೋಗಿ ಫೋನ್ ತೆಗದ್ದು, “ನೀವು ಕರೆ ಮಾಡಿದ ದೂರವಾಣಿ ಸದ್ಯಕ್ಕೆ ದುರಸ್ತಿಯಲ್ಲಿ ಇದೆ” ಹೇಳಿ ಹೆಮ್ಮಕ್ಕಳ ಸ್ವರ ಕೇಳಿದ ಅಜ್ಜಂಗೆ ಪಿಸುರು ಬಂದು, ನೀನೆಂತಕೆ ಅಲ್ಲಿ ಹೋಗಿ ಹರಟೆ ಮಾಡುತ್ಸು ಹೇಳಿ ಬೈದ್ದು, ಇತ್ಯಾದಿ…

ಬಾಯಮ್ಮನ ಹತ್ರಂದ ರೆಜಾ ಹೂಗು ತೆಕ್ಕೊಂಡು ತರಕಾರಿ ತೆಗವಲೆ ಹೋವ್ತಾ ಇತ್ತಿದ್ದೆ.
ದಾರಿ ಕರೇಲಿ ಚರಂಡಿ ಕೆಲಸ ಆವ್ತಾ ಇದ್ದು. ಘಟ್ಟದ ಕಡೆಯವು ಕೆಲಸಕ್ಕೆ. ಒಂದು ಹೆಣ್ಣು ಅದ್ರ ಸಂಚಿಂದ ಮೊಬೈಲ್ ತೆಗದು “ಅಲೋ ಅಲೋ” ಹೇಳ್ಲೆ ಸುರು ಮಾಡಿತ್ತು.
ಎನಗೆ ಆಶ್ಚರ್ಯ!!. ಇವಕ್ಕೆ ಅದರ ಉಪಯೋಗ ಮಾಡ್ಲೆ  ಹೇಂಗೆ ಅರಡಿತ್ತು ಹೇಳಿ !!. ಇವೆಲ್ಲಾ ಶಾಲೆಗೆ ಹೋಗಿ ಕಲ್ತ ಬಾಬ್ತು ಅಲ್ಲ. ಕೂಲಿ ಕೆಲಸದವು. ಇವಕ್ಕೂ ಇದರ ಅಗತ್ಯ ಇದ್ದಂಬಗ, ಚೆಲಾ ಪೊಳಿಯೇ !!!

ಮಳೆಗಾಲ ಸುರು ಅಪ್ಪಲಾತು.
ಮಳೆಗಾಲಕ್ಕೆ ಆವ್ತ ಹಾಂಗಿಪ್ಪ ಚಪ್ಪಲಿ ತೆಗೆಕು ಹೇಳಿ ಅಲ್ಲಿಯೇ ಚಪ್ಪಲಿ ಅಂಗಡಿಗೆ ನುಗ್ಗಿದೆ.
ಅಂಗಡಿ ಯೆಜಮಾನ ಪರಿಚಯದ್ದು. ಎಂತದೋ ಪೋನಿಲ್ಲಿ ಮಾತಾಡಿಂಡು ಇತ್ತಿದ್ದು. ಕೆಲಸದ್ದರ ಹತ್ರೆ ಹೇಳಿತ್ತು, ಇವ್ರಿಗೆ ಒಂದು ಒಳ್ಲೆ ಚಪ್ಪಲಿ ಕೊಡಿ ಹೇಳಿ.
ಹುಡುಗ ಒಂದೊಂದೇ ನಮೂನೆಯ ಚಪ್ಪಲಿ ತೆಗದು ತೋರುಸಲೆ ಸುರು ಮಾಡಿಯಪ್ಪಗ ಸುರು ಆತದ, ಅದರ ಮೊಬೈಲ್ ರಿಂಗ್ ಅಪ್ಪಲೆ. ನಾನು ಈಗ ಬರ್ತೇನೆ ಹೇಳಿದ ಮನುಷ್ಯ ಹೆರ ಹೋಗಿ ಪಟ್ಟಾಂಗ ಹೊಡವಲೆ ಸುರು ಮಾಡಿತ್ತು.
ಕೆಲಸದ್ದು ಮೋಬೈಲಿಲ್ಲಿ ಬ್ಯುಸಿ, ದನಿ ಲಾಂಡ್ ಲೈನಿಲ್ಲಿ ಬ್ಯುಸಿ. ನಾವು ನೋಡಿದಲ್ಲೆ ಬಾಕಿ..!

ಹೆರ ಹೋದ ಮನುಷ್ಯ ಒಳ ಬಂದು ಪುನಃ ಚಪ್ಪಲಿ ಎಳದು ಹಾಕಲೆ ಸುರು ಮಾಡಿತ್ತು, ಪುನಃ ಎಂತದೋ ಮೆಸೇಜ್ ಬಂತು ಹೇಳಿ ಮೊಬೈಲಿನ  ಗುರುಟಲೆ ಸುರು ಮಾಡಿತ್ತು.

* * *

ಎರಡು ದಿನ ಕಳುದಪ್ಪಗ ತಂಗೆಯ ಫೋನ್ ಬಂತು. ಈ ಸುದ್ದಿಗಳ ಎಲ್ಲಾ ಹೇಳಿದೆ.
ಅದಕ್ಕೆ ನೆಗೆ ತಡೆತ್ತಿಲ್ಲೆ. ಅನು ಹೇಳಿರೆ ಕೇಳಿದ್ದಿಲ್ಲೆ. ಕಂಡತ್ತಾ ಈಗ. ಇನ್ನಾದರೂ ಒಂದು ಮೊಬೈಲ್ ತೆಗದಿಕ್ಕು. ಮನೆಗೆ ಇನ್ನು ಬಪ್ಪ ಅತ್ತಿಗೆ ಹತ್ರೆ ಮಾತಾಡ್ಲೆ ಉಪಯೋಗ ಅದರೂ ಅಕ್ಕು ಹೇಳಿ ಛೇಡಿಸಿತ್ತು.
ಮುಂದೆ ಎಂತ ಆತು ಹೇಳಿರೆ, ಅಂತೂ ಇಂತೂ ಅಂಗಡಿಗೆ ಹೋಗಿ ಒಂದು ಮೊಬೈಲ್ ತೆಕ್ಕೊಂಡೆ.

ಅದರಲ್ಲಿ ಮಾತಾಡ್ಲೂ ಎಡಿತ್ತು. ಬೇರೆ ಸುಮಾರು ಏರ್ಪಾಡುಗೊ ಇದ್ದು.  ಅದು ತೆಗದ ಮತ್ತೆ  ಎಂತೆಲ್ಲಾ  ಗಡಿಬಿಡಿ ಆತು ಹೇಳಿ ಇನ್ನೊಂದು ಸರ್ತಿ ಶುದ್ದಿ ಹೇಳ್ತೆ.

ಈಗ ಹಶು ಆವ್ತಾ ಇದ್ದು. ‘ಈಚ’ ಬೇಗ ನೀರುಳ್ಳಿ ಕೊಚ್ಚಿ ಕೊಡು, ‘ಮುನ್ನ’ ಬೇಗ ಕ್ಯಾರೆಟ್ ತುರುದು ಕೊಡು, ‘ವಿಶ್ವ’ ಬೇಗ ಅಕ್ಕಿ ತೊಳದು ಕೊಡು.
ಎಲ್ಲರು ಸೇರಿ ಕ್ಯಾರೆಟ್ ರೈಸ್  ಮಾಡಿ ಉಣ್ತ ಕಾರ್ಯಕ್ರಮ ಮಾಡುವೊ°.
ನಿಂಗೊಲ್ಲಾ ರುಚಿ ರುಚಿ ಅಡಿಗೆ ಮಾಡ್ತಿ ಹೇಳಿ ಗೊಂತಿದ್ದು. ಇನ್ನೊಂದು ಸರ್ತಿ ಊಟಕ್ಕೆ ನಿಂಗಳಲ್ಲಿಗೆ ಆತಾ !!!

* * *

ಹೀಂಗೊಂದು ಹರಟೆ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  [ಒಂದರಿ ಕೆಮಿ ಹತ್ರಂಗೆ, ಒಂದರಿ ಬಾಯಿ ಹತ್ರಂಗೆ ]
  [ಒಂದು ಹೆಣ್ಣು ಅದ್ರ ಸಂಚಿಂದ ಮೊಬೈಲ್ ತೆಗದು “ಅಲೋ ಅಲೋ” ಹೇಳ್ಲೆ ಸುರು ಮಾಡಿತ್ತು.]
  ಅಂತೂ ಇವ° ಅದರ ನೋಡಿದಲ್ಲೇ ಬಾಕಿ !.

  ಒಟ್ಟಾರೆ, ತಂಗೆ, ಹೂ ಮಾರ್ತೊಳು, ಬಾಯಮ್ಮ ನಿಂಗಳ ಮೊಬೈಲ್ ಫೋನ್ ತೆಗವಲೆ ಪ್ರೇರೇಪಿಸಿತ್ತು ನೋಡಿ.!

  ಇನ್ನಾಣದ್ದು ತಂಗಗೆ ಫೋನು ಮಾಡಿ ಇದಾ ನೋಡು ಕಂಡತ್ತೊ (ಕಾಣುತ್ತೊ) ಆನು ಮಾಡಿದ ಕ್ಯಾರೆಟ್ಟು ರೈಸ್ ಹೇಳಿದ್ದಾಯ್ಕೊ!! 😉 :-)

  ಅಂತೂ ಈ ಶುದ್ದಿ ಪಷ್ಟಾಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಶ್ಯಾಮಣ್ಣ
  ಶ್ಯಾಮಣ್ಣ

  (ಬಾಯಮ್ಮನ ಹತ್ರಂದ ರೆಜಾ ಹೂಗು ತೆಕ್ಕೊಂಡು )
  ಹೂಗು ಎಂತಕೆ ತೆಕ್ಕೊಂಡದು? 😉

  [Reply]

  ಶ್ರೀಶಣ್ಣ

  ಶ್ರೀಶಣ್ಣ Reply:

  ಶ್ಯಾಮಣ್ಣೋ,
  ಅದು ಮನೆ ದೇವರಿಂಗೆ :)

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಶ್ರೀಶಣ್ಣೋ,
  ದೇವರ ಗೊಂತಿದ್ದು, ಇದಾರು “ಮನೆದೇವರು” ಹೇಳಿರೆ?
  ಅತ್ತಿಗೆ ಬರೆಕಷ್ಟೇ ಹಳೀದಾಂಗಿತ್ತು ತಂಗೆ..

  [Reply]

  VN:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  ಶ್ಯಾಮಣ್ಣ Reply:

  (ಮನೆಗೆ ಇನ್ನು ಬಪ್ಪ ಅತ್ತಿಗೆ ಹತ್ರೆ ಮಾತಾಡ್ಲೆ ಉಪಯೋಗ ಅದರೂ ಅಕ್ಕು )
  ಮಂಗ್ಳೂರ ಮಾಣಿ ಹೇಳಿದಾಂಗೆ ಈ “ಮನೆ ದೇವರು” ಆರಪ್ಪಾ?

  [Reply]

  ಶ್ರೀಶಣ್ಣ

  ಶ್ರೀಶಣ್ಣ Reply:

  ಶ್ರೀಶಣ್ಣಂಗೆ ಮನೆ ದೇವರು ಹೇಳಿರೆ, ನಿಂಗೊ ಜಾನ್ಸಿದ ದೇವರು ಅಲ್ಲ. :)
  ಅಂಬಗ ಆ ದೇವರು ಬಂದಾಯಿದಿಲ್ಲೆ. ಬೇಗ ಬರಲಿ ಹೇಳಿ, ಹೂಗು ಹಾಕಿ ಪ್ರಾರ್ಥನೆ ಮಾದುವ ಸಮಯದ ಕತೆ ಇದು.

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಓ ಹಂಗೋ?… ಅಂಬಗ ಒಟ್ಟಿಂಗೆ ಹಣ್ಣು ಕಾಯಿ ಮಾಡ್ಸಿದ್ದಿಲ್ಲೆಯಾ?

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಓ ಹಾಂಗೋ..??
  ಸರಿ ಸರಿಃ)

  VN:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ಶ್ರೀಶಣ್ಣಾ.
  ನಿಂಗಳ ಬೈಲಿಲ್ಲಿ ಕಾಣದ್ದೆ ಅಸಕಾಗಿಯೊಂಡಿತ್ತು. ಬಂದಿ ಅನ್ನೇ.. ಸಮಾಧಾನ ಆತಿದ..

  { ಬಸ್ಸಿಲ್ಲಿ ಬಪ್ಪಗ ಅವನ ಕ್ಲಾಸ್ ಮೇಟ್ ಕೂಸು ಸಿಕ್ಕಿ ಮಾತಾಡಿದ್ದು, ಅದರ ಮದುವೆ ಹೇಳಿಕೆ ಕಳುಸುತ್ತೆ ಹೇಳಿದ್ದು, ಇವಂಗೆ ಬೇಜಾರು ಆದ್ದು} – ಮಾಣಿಗೂ ಬೇಜಾರಾತು..

  ಬೀಜಿ ಸ್ಕೂಲ್- ಅದೆಲ್ಲಿ??? ಮಾಣಿಗೆ ಗೊಂತಿಲ್ಲದ್ದ ಶಾಲೆಯೋ ಮಂಗ್ಳೂರಿಲ್ಲಿ?

  ಈಗ ಕೆನರಾ ಕಾಲೇಜಿನ ವರೆಗೆ ಹೋಯೆಕು ಹೇಳಿ ಇಲ್ಲೆ ಅಣ್ಣೋ, ನಿಂಗೊ ಅಲೋಶಿಯಸ್ಸಿಲ್ಲಿ ಅಲ್ಲದಾ ಕಲ್ತದು? ಪಾಪ ನಿಂಗೊ ಕಲಿವಗ ಮಾಣಿಯಂಗೊ ಮಾತ್ರ ಇದ್ದದು ಕಾಣ್ತು…. :( ಈಗ ಅಲ್ಲಿಯಾಣ ಕಟ್ಟೆಲಿ ಕೂರಿ ನಿಂಗೊ ಮದ್ಯಾಹ್ನದ ಹೊತ್ತಿಂಗೆ.. ಆ ಬೆಶಿಲಿಂಗೂ ತಂಂಂಂಪಾವುತ್ತು… ಒಂದರಿ ಒಟ್ಟಿಂಗೆ ಹೋಪೊ.. ಅತ್ತಿಗೆಗೆ ಹೇಳಿಕ್ಕೆಡಿ, ಮತ್ತೆ ಎನ್ನ ಮನೆಗೆ ಸೇರುಸ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮಾಣಿ ಮನೇಲಿ ಗೊಂತಾರೆ ಅಡ್ಡಿ ಇಲ್ಯೋ?!! ಅದಾ , ಗಣೇಶ ಮಾವಂಗೆ ಕಣ್ಣು ಕೆಂಪಾವ್ತಡ- ನಾ ಕಂಡು ಬೆಳದ ಮಾಣಿ ಹೀಂಗೋ ಹೇದು !!!

  [Reply]

  ಶ್ರೀಶಣ್ಣ

  ಶ್ರೀಶಣ್ಣ Reply:

  ಎಲ್ಲಾರಾ ಮನೆ ದೋಸೆ ತೂತು ಹೇಳಿ ಕೇಳಿದ್ದಿ ಅಲ್ಲದಾ ಭಾವಯ್ಯ?

  [Reply]

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಇದಾ ಅವಕ್ಕೆ ಹೇಳಿಕ್ಕೆಡಿ ಆತಾ?

  [Reply]

  VN:F [1.9.22_1171]
  Rating: 0 (from 0 votes)
  ಶ್ರೀಶಣ್ಣ

  ಶ್ರೀಶಣ್ಣ Reply:

  ಮಾಣಿ,
  ಆನು ಹೇಳಿದಲ್ಲಿ ಆದರೆ ಮೂರು ಕಾಲೇಜಿನವು ಸಿಕ್ಕುತ್ತವಿದ (ಬೀಜಿ, ಕೆನರಾ, ಶಾರದಾ)
  ಈಗ ಗೊಂತಾತಾ :) :)

  [Reply]

  ನೆಗೆಗಾರ°

  ನೆಗೆಗಾರ° Reply:

  ಎನಗೊಂದು ಸೀಟು ಸಿಕ್ಕುಗೋ?
  ಅಂತೇ – ಬೆಶಿಲಿಂಗೆ ಕೂಪಲೆ.
  ಯಪ್ಪಾ – ಎಂತಾ ಸೆಕೆ ಈಗ, ಅಲ್ಲದೋ ? 😉

  [Reply]

  ಶ್ರೀಶಣ್ಣ

  ಶ್ರೀಶಣ್ಣ Reply:

  ಅಪ್ಪಪ್ಪಾ ಅಪ್ಪು.
  ಸೆಖೆ ತಡವಲೆ ಎದಿತ್ತಿಲ್ಲೆ ಮಂಗ್ಳೂರಿಲ್ಲಿ.
  ತಂಪು ಕನ್ನಡಕ ಹಾಕಿಕ್ಕಿಯೇ ಕೂರು ಅಲ್ಲಿ.
  ಒಂದು ಸಂಶಯ ಇದ್ದನ್ನೆ!!!
  ಕಾಲೇಜುಗೊಕ್ಕೆ ರಜೆಯಾ ಹೇಳಿ ಈಗ :) :)

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಹಾಂ.. ಅಪ್ಪನ್ನೇ.. ಗೊಂತಾತು. ಅದೂ – short form ಗೊಂತಿತ್ತಿಲ್ಲೆ ಎನಗೆ.. ಎನ್ನ ಶಾಲೆಗೆ ಹೋಪಲೆ ಅದೇ ದಾರಿ ಇದಾ.. ಹಾಂಗಾಗಿ ದಿನಕ್ಕೆ ೧-೨ ಸರ್ತಿ ಅಲ್ಲಿಯೇ ಕಾಂಗು ಎನ್ನ…

  [Reply]

  VN:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  {ಈಗ ಅಲ್ಲಿಯಾಣ ಕಟ್ಟೆಲಿ ಕೂರಿ ನಿಂಗೊ ಮದ್ಯಾಹ್ನದ ಹೊತ್ತಿಂಗೆ.. ಆ ಬೆಶಿಲಿಂಗೂ ತಂಂಂಂಪಾವುತ್ತು…} ನೀರೊಳ ಕೂದು ಬೆಗರಿದವನ ಕತೆ ಗೊಂತಿತ್ತಿದ್ದು, ಈ ಕತೆ ಹೊಸತ್ತು ನವಗೆ,- ಬೆಶಿಲಿಲಿ ಒಣಗಿರೂ ತಂಪಪ್ಪ ಕತೆ !

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಹೆಹೆಃ)ಃ)ಃ)

  [Reply]

  VN:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  ಶ್ಯಾಮಣ್ಣ Reply:

  ನವಗೆ ಪ್ರಾಯ ಆತು ಕುಮಾರ ಭಾವ… ನಮ್ಮ ಕಾಲಲ್ಲಿ ಕಣ್ಣು ಮಾಂತ್ರ ತಂಪು ಆಗಿಂಡು ಇದ್ದದು… ಈಗ ಎಲ್ಲ ಈ ಮಾಣಿಯಂಗೊ ಹೇಳಿದಂಗೆ ಆವುತ್ತೋ ಏನೋ…

  [Reply]

  VN:F [1.9.22_1171]
  Rating: 0 (from 0 votes)
 4. ನೆಗೆಗಾರ°

  ಯೇ ಶೀಚಣ್ಣ,
  ನಿನ್ನ ಹರಟೆ ತಡಯಲೆಡಿಯದ್ದೆ ಬಂದದಾನಿಲ್ಲಿಗೆ.
  ಶುದ್ದಿ ಚೆಂದಲ್ಲಿ ಹೇಳಿದ್ದೆ ಅಪ್ಪೋಹ್….

  ಇದೂ – ನೀನು ಹೊಸತ್ತು ಪೋನು ತೆಗವಗ, ನಿನ್ನತ್ರೆ ಇಪ್ಪ ಹಳತ್ತರ ಎನಗೆ ಕೊಡುವೆಯಾ?
  ಅದಿದ್ದರೆ ಆಳುಗೊಕ್ಕೆ ಕೆಲಸ ಹೇಳುಲೆ ಸುಲಾಬ ಆವುತ್ತಡ.

  [Reply]

  VA:F [1.9.22_1171]
  Rating: +1 (from 1 vote)
 5. ಶ್ರೀಶಣ್ಣ
  ಶ್ರೀಶಣ್ಣ

  ಅದರ ನಮ್ಮ ಚೆನ್ನೈ ಭಾವಯ್ಯ ಚೆಡ್ಡಿ ಹಾಕದ್ದ ಮಾಣಿಗೆ ಕೊಟ್ಟಿದವಲ್ಲದಾ?

  [Reply]

  ಬೋಸ ಬಾವ

  ಬೋಸ ಬಾವ Reply:

  ಎಬೇ…!ಅದಾರು…! ಚೀ..!
  ಅವ೦ಗೆ ಒ೦ದಾರಿ ಪೋನು ಮಾಡಿ, ಚೆಡ್ಡಿ ಹಾಕುಲೆ ಹೇಳಿಕ್ಕಿ ನೋಡೊ…

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಶಾ...ರೀಪುತ್ತೂರುಬಾವಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡುವಿನಯ ಶಂಕರ, ಚೆಕ್ಕೆಮನೆಪ್ರಕಾಶಪ್ಪಚ್ಚಿಬೋಸ ಬಾವಪೆಂಗಣ್ಣ°ಕಳಾಯಿ ಗೀತತ್ತೆಅಕ್ಷರದಣ್ಣಪೆರ್ಲದಣ್ಣಪುಟ್ಟಬಾವ°ಉಡುಪುಮೂಲೆ ಅಪ್ಪಚ್ಚಿವೇಣಿಯಕ್ಕ°ಜಯಶ್ರೀ ನೀರಮೂಲೆಶ್ರೀಅಕ್ಕ°ದೇವಸ್ಯ ಮಾಣಿರಾಜಣ್ಣವಾಣಿ ಚಿಕ್ಕಮ್ಮವೆಂಕಟ್ ಕೋಟೂರುನೀರ್ಕಜೆ ಮಹೇಶಕೊಳಚ್ಚಿಪ್ಪು ಬಾವದೊಡ್ಮನೆ ಭಾವಕಾವಿನಮೂಲೆ ಮಾಣಿಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ