ಇದಾ ಯಕ್ಷಗಾನ..

March 5, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

‘ಯಕ್ಷಗಾನ ‘ ಹೇಳಿಯಪ್ಪಗಳೇ ಹಲವರಿಂಗೆ ಮೈ ನವಿರೇಳುತ್ತು, ಕೆಲವರಿಂಗೆ ಮೈ ಅಕ್ಕಿ ಕಟ್ಟುತ್ತು.
– ತಪ್ಪಲ್ಲ, ಒಬ್ಬೊಬ್ಬಂಗೆ ಒಂದೊಂದು ಅಭಿರುಚಿ.

ಯಕ್ಷಗಾನ ಕಲಾವಿದರು ಬಹಳಷ್ಟು ಮಂದಿ ಉನ್ನತ ಯಶಸ್ಸು ಪಡದ್ದವು.
ಯಕ್ಷಗಾನಕ್ಕೆ ಅದೆಷ್ಟು ಮಂದಿ ಕಲಾ ರಸಿಕರೂ ಕೂಡ.
ಅದೊಂದು ಶಾಸ್ತ್ರೀಯ ಕಲೆ.

ಆದರೆ , ಈ ಯಕ್ಷಗಾನ ಕೂಟಕ್ಕೋ ಆಟಕ್ಕೋ ಜೆನ ಸೇರೋದೆಷ್ಟು?!
ಸುರುವಪ್ಪಗ ಹಲವರ ಕಾಣುತ್ತು ಹಾಜರಿ ಹಾಕಿಯೊಂಡು. ಅರ್ಧ ಅಪ್ಪಗ ಅರ್ಧಂದಲೂ ಕಮ್ಮಿ ಆತೋ, ಮುಗಿಯಲಪ್ಪಗ ಬರೇ ಬೆರಳೆಣಿಕೆ.
ಇಡೀ ಇರುಳಾಣದ್ದೇ ಆಗಲಿ ಅಲ್ಲಾ ಹಗಲಾಗಲೀ ಅಲ್ಲಾ ಬರೇ 3 ಘಂಟೆದೇ ಆಗಲೀ ಕಥೆ ಇದುವೆ.

ಇದೆಂತಕೆ ಹೀಂಗೆ ಆವ್ತು?
ಜೆನರ ಅಖೇರಿ ವರೇಗೆ ಉಳಿಸಿಯೊಂಬಲ್ಲಿ ಯಕ್ಷಗಾನ ಅಸಮರ್ಥ ಆಯ್ದು ಹೇಳಿ ಲೆಕ್ಕವೋ?
ಜೆನಂಗೊಕ್ಕೆ ಅಷ್ಟು ಪುರುಸೊತ್ತಿಲ್ಲೆ ಹೇಳಿ ತೆಕ್ಕೊಳೆಕೊ? ಅಲ್ಲ  ನವಗೆ ಇಷ್ಟು ಸಾಕು ಹೇಳಿಯೋ??
ಬಿಡಿ.., ಅಖೇರಿ ವರೇಗೆ ಕೂದು ನೋಡ್ತವರ ದೃಷ್ಠಿಕೋನಲ್ಲಿ ನಮ್ಮಷ್ಟಕ್ಕೆ ನಾವು ಕೂದು ಚರ್ಚೆ ಮಾಡುವೊ ಇಲ್ಲಿ.

ನಿಂಗಳ ಅನಿಸಿಕೆ ಒಪ್ಪಲ್ಲಿ ಬರದಿಕ್ಕಿ.  ಎನ್ನ ಅಭಿಪ್ರಾಯ – ಯೋಚಿಸಿ ಮತ್ತೆ ಬರೆತ್ತೆ.

ಬೇಡಾ. , ಅಂತೇ ಉದ್ದ ಎಳವದು ಎಂತಕೆ ಅಲ್ಲದೋ. ಇಲ್ಲೆ ಹೇಳಿಕ್ಕುವೋ ಆಗದೋ.

ಯಕ್ಷಗಾನ ಒಂದು ಸೃಜನಶೀಲ ಕಲೆ. ಕಲಾವಿದನ ಸಂಪೂರ್ಣ ‘ಸ್ವಾತ್ರಂತ್ರ್ಯ’.

ಬಾಕಿ ಕಲೆಗಳ ಹಾಂಗೇ ( ಅಲ್ಲ , ಹೆಚ್ಚೇ) ಆಳಕ್ಕೂ ನೀಳಕ್ಕೂ ವಿಶಾಲಕ್ಕೂ ಎದ್ದು ನಿಂದ ‘ಗಂಡು’ ಕಲೆ (ಹೆಮ್ಮಕ್ಕೊಗೆ ಇಪ್ಪದಲ್ಲ ಹೇಳಿ ಅರ್ಥ ಮಾಡಿಗೊಳ್ಳೆಡಿ).

ಮೂಲ ಕಥೆಗೆ ಧಕ್ಕೆ ಬಾರದ್ದ ಹಾಂಗೆ ವರ್ತಮಾನ ವಿದ್ಯಮಾನವನ್ನೂ  ಅಳವಡಿಸಿಗೊಂಡು, ರಂಜನೆಗೂ, ಚಿಂತನಗೂ, ವಿಷಯ ಮಂಡನೆಗೂ, ಚರ್ಚಗೂ ಆಸ್ಪದ ಇಪ್ಪ ರಸದೂತಣ ಇದರಲ್ಲಿದ್ದು. ಹಳೆ ಆಟ ಕೂಟಗಳ ಮೆಲುಕು ಹಾಕಿ ವಿಮರ್ಶಸಿ ಮೈ ನವಿರೇಳುವವು ಅದೆಷ್ಟು ಮಂದಿ ಇಲ್ಲೆ ಈಗ್ಲೂ. ಅಂದರೂ  ಈಗೀಗ ಆಟಕ್ಕೆ ಜನ ಇಲ್ಲೆ ಕೂಟಕ್ಕೂ ಜನ ಇಲ್ಲೆ (ಕೊನೆತನಕ). ಏಕೆ?.

೧. ಹಲವರಿಂಗೆ ಪುರುಸೊತ್ತಿಲ್ಲೇ. (ಯಾವದಕ್ಕೆ ಮತ್ತೆ ಇದ್ದೋ ಇವಕ್ಕೆ – ಎಲ್ಲಿ ಹೋದರೂ , ಹೋಪಲೂ ಬಪ್ಪಲೂ ಅಂಬರೇಪು. ಇದೇ ಕಾರಣ ಸಾಕಾವ್ತು).

೨. ಶಾರೀರಿಕ ತೊಂದರೆ – (ಆಕ್ಷೇಪಿಸಲಾಗದು).

೩. ಅಭಿರುಚಿ ಇಲ್ಲೆ ( ಒತ್ತಾಯ ಇಲ್ಲೆ. ಬಾರದ್ದಿಪ್ಪದೇ ಒಳ್ಳೆದು).

ಬಂದವಕ್ಕೆ ಎಂಥ ಕಮ್ಮೀ ಆತು?

ಇಲ್ಲಿ  ಕಲಾವಿದರ ಮೇಲೆಯೇ ತಪ್ಪು ಕಾಣೆಕ್ಕಾವ್ತು. (ಕ್ಷಮಿಸಿ , ಇದು ಇಲ್ಲಿ ಚಿಂತನೆ – ವಿಮರ್ಷಗೆ ಮಾತ್ರ). ಬಂದ ಕಲಾವಿದರಿಂಗೆ ಕೂಟವ – ಆಟವ ಭರ್ಜರಿ ಜಯಪ್ರದ ಗೊಳುಸುವೋ ಹೇಳಿ ಕಾಂಬೋದು ಅಪರೂಪ. ತನ್ನ ತನವ ಮೆರೆಸೋದು ಹೇಂಗೆ ಹೇಳಿ ಭಾವನೆಯೇ ಎದ್ದು ಕಾಣುತ್ತು. ಅನುಕರಣೆ ಹಲವು ದಿಕ್ಕೆ ತನಗೆ ಚಂದ ಹೇಳಿ ಕಂಡರೂ ಬಾಕಿದ್ದವಕ್ಕೆ ಸಹಿಸಲೆಡಿತ್ತಿಲ್ಲೆ ಹೇಳಿ ಗ್ರೆಶುತ್ತವಿಲ್ಲ್ಯೋ!. ಆಚವನ ಹೇಂಗೆ ಬಗ್ಗುಸೋದು ಹೇಳಿಯೇ ತನ್ನ ದೃಷ್ಟಿ. ತನ್ನ ತನವ ಮೆರೆಸಿ ಸಭೆಂದ ಚಪ್ಪಾಳೆ ಗಳಿಸಿಗೊಂಡರೆ ತತ್ಕಾಲಿಕ ವಿಜ್ರಿಂಬಿಸಿದ್ದಷ್ಟೇ ಬಂತು. ಕಥಾಭಾಗವ ಹೇಂಗೆ ಚೆಂದಕ್ಕೆ ಅನ್ಯ ಕಲಾವಿದರೊಂದಿಂಗೆ ಹೊಂದಿಗೊಂಡು ಚಂದಗಾಣಿಸಿ ಕೊಡ್ವೋ ಹೇಳುವ ವಾತಾವರಣ ಕಮ್ಮಿ.

ಆಟಲ್ಲಿ ಆಗಲೀ ಕೂಟಲ್ಲ್ಯೇ ಆಗಲೀ ಭಾಗವತಂಗೆ ಪ್ರಮುಖ / ಪ್ರಥಮ ಸ್ಥಾನ. ಆದರೆ ಅವನ ಕೆಲಸ ಪದ್ಯ ಹೇಳೋದು ಮಾತ್ರ ಸೀಮಿತ ಆವ್ತಾ ಇದ್ದು.  ಡೈರೆಕ್ಷನ್ ಅವಂಗೇ ಬಾಕಿಪ್ಪವು ಮಾಡ್ಲೆ ಸುರುಮಾಡಿರೆ ನಮ್ಮ ರಾಷ್ಟ್ರಪತಿಯಷ್ಟೇ ಬೆಲೆ ಅಪ್ಪೋ ಅಲ್ಲದೋ. ಅರ್ಥಧಾರಿಗೋ ಅವಂಗೇ ಬೇನ್ನು ಹಾಕಿ ಕೂದರೆ ದೊಡ್ಡ ಜೆನ ಹೇಳಿ ಲೆಕ್ಕವೋ?! ಸಭೆಯವು ಹಾಂಗೆ ಚಂದ ಕಾಣುತ್ತು ಹೇಳಿ ಆರಾರು ಹೇಳಿದ್ದವೋಪ್ಪ?!! ಭಾಗವತಂಗೆ ಪಕ್ಕಬಲ- ಪಕ್ಕವಾದ್ಯ. ಅದು ಹಿಮ್ಮೇಳ ಹೇಳಿ ಹೇಳುತ್ತಾದರೂ ಹಿಂದೆ ಕೂರ್ತದು ಅಲ್ಲನ್ನೇ! ಎಡ ಬಲ ಹೊಡೇಲಿ ಜೆತೆಲಿ ಹೋದರೆ ಕಾಂಬಲೂ ಚಂದ. [ ಹೊಳ್ಳನ ಪದಕ್ಕೆ ಉಪಾಧ್ಯಾಯ ಮೃದಂಗ ನುಡಿಸುವದರ ನೋಡ್ಲೇ ಚಂದ – ಅದೊಂದು ಪ್ರತ್ಯೇಕ ದೃಶ್ಯಾವಳಿ ಕಣ್ಣಿಂಗೆ , (ಆನು ಕಂಡದು ಇತ್ತೀಚಗೆ ಪೆರಡಾಲಲ್ಲಿ – ಬಲಿಪ, ಹೊಳ್ಳ, ತೆಂಕಬೈಲು, ಪದ್ಯಾಣ, ಉಪಾಧ್ಯಾಯ ಸಂಗಮ) ]. ಭಾಗವತ ಸನ್ನಿವೇಶಕ್ಕೆ ತಕ್ಕ ಪದ ಚೊಕ್ಕ ಮಾಡೆಕು. ಎನಗೆ ಇದು ಲಾಯಕ್ಕ ಹಾಡ್ಲೆ ಬತ್ತು ಹೇಳಿ ಸನ್ನಿವೇಶಕ್ಕೆ ಸರಿಬಾರದ್ದ ಪದ್ಯಂಗಳ ರಾಗ ಹಾಕಿ ಎಳದರೆ ಕೆಲವರ ಚಪ್ಪಾಳೆಗಟ್ಟಿಸಿಕೊಂಬಲೆ ಅಕ್ಕಷ್ಟೆ. ‘ಸುಧನ್ವಾರ್ಜನ’ ಪ್ರಸಂಗಲ್ಲಿ ಸುಧನ್ವ ರಣರಂಗಕ್ಕೆ ಹೊಪಲೇ ಸಜ್ಜಾಗಿ ಮಡದಿ ಪ್ರಭಾವತಿಯ ಅಂತಪುರಲ್ಲಿ ಕಂಡು ಹೇಳಿಕ್ಕಿ ಹೋದೀಕಿತೆ ಹೇಳ್ಯೊಂಡು ಬಂದಿಪ್ಪಗ ‘ಸತಿಗೆ ಶೋಡಶದ ಋತುಸಮಯ….’ ಹೇಳಿ ೭ -೮ ಆವೃತ್ತಿ ಹಾಕಿ ಶೋಡಶದ ಋತುಸಮಯ ಶೋಡಶದ ಋತುಸಮಯ ಹೇಳಿ ಕಚ್ಚಿ ಬಲುಗಿ ರಾಗ ಎಳೆಕ್ಕಾದ ಅಗತ್ಯ ಇದ್ದೋ?. ಯುದ್ಧ ಸನ್ನಿವೇಷಲ್ಲಿ ‘ಹುಡುಗಾ ನೀನು ಬೆಡಗಿನ ನುಡಿಯ ಕಟ್ಟಿಡು…’ – ಇದರ ಬಗೆ ಬಗೆಲಿ ಹಾಡಿ ವೇಷಧಾರಿಯೂ / ಅರ್ಥಧಾರಿಯೂ ಭಾಗವತನ ಒಟ್ಟಿ೦ಗೆ ಪ್ರತಿಸ್ಪಂದಿಸ್ಯೊಂಡು ರಂಜನೆ ಮಾಡಿರೆ ಎಂತ ಕಮ್ಮಿ ಆಗಿ ಹೋಕಪ್ಪ!. ಗದಾಯುದ್ಧಲ್ಲಿ ಸಂಜಯನೊಟ್ಟಿ೦ಗೆ ಉದ್ದ ಎಳದಿಕ್ಕಿ ‘ನಿನ್ನೆಯ ಬಲುಹೇನು..’  ಮಾಗಧ ವಧೆಲಿ  ‘ತಿಳಿಯದಾದಿರೆ ನಮ್ಮ ಕಂಸಗೆ …’ ಅಪ್ಪಗ ವೇಷಧಾರಿಗೆ ಬಚ್ಚಿತ್ತು ಹೇಳಿ ಜಾರಿಗೊಂಬದೋ?!

ಆಟಲ್ಲಿ ವೇಷಧಾರಿಗೊ ಭಾಗವತನ , ಹಿಮ್ಮೇಳದವರ ಅಂಬಗಂಬಗ ತಿರುಗಿ ನೋಡೆಕ್ಕಾದ್ದು ಎಂತ ಇದ್ದು. ಅವರದ್ದು ತಪ್ಪಾಯ್ದು ಹೇಳಿ ಎತ್ತಿ ತೋರ್ಸಲೋ?. ರಂಗಸ್ಥಳಕ್ಕೆ ಬಂದವೋ ಸುರುವಾತು ಕಿರೀಟ ಗಟ್ಟಿ ಕಟ್ಟೋದು, ಸೆರಗು ಸರಿ ಮಾಡಿಗೊಂಬದು, ತಿರುಗಿ ನಿಂದು  ನೀರು ಕುಡಿವದು. ನವಗೆ ಗೊಂತಿಲ್ಯೋ ಅವಕ್ಕೆ ವೇಷ ಕಟ್ಟಲೆ ಅರಡಿತ್ತು ಹೇದು. ಹೀಂಗೂ ತೋರ್ಸೇಕೋ?!! ವೇಷ ಕಟ್ಟಿಗೊಂಡು ಕತ್ತಿ, ಬಿಲ್ಲು ಬಾಣ ಕೈಲಿ ಹಿಡ್ಕೊಂಡು ಬಂದು ನಿಂದರೆ ವೇಷ ಹೇಳಿ ಅಕ್ಕಷ್ಟೆ, ಪಾತ್ರ ಅವನೊಳ ಹೊಕ್ಕಿ ಕಾಣೆಡದೋ! . ಬಣ್ಣಗಾರಿಕೆ ಹ್ಮ್ಮ್ಮ್ …ಒಟ್ಟಾರೆ ಹರಕೆ ಸಂದಾಯ. ಅಡ್ಡಕ್ಕೂ ಉದ್ದಕ್ಕೂ ಬಣ್ಣ ಕಂಡರೆ ಸಾಕಾವ್ತು. ಎದುರು ವೇಷಧಾರಿ ಪದಕ್ಕೆ ಇದು ಎನ್ನ ಪದ್ಯ ಅಲ್ಲ ಗ್ರೇಶಿಗೊಂಡು ತಿರುಗಿ ನಿಂಬದು ಸರ್ವಥಾ ಸರಿ ಹೇಳಿ ಎನಗೆ ಕಾಣುತ್ತಿಲ್ಲೆಪ್ಪ. (ಬೇಡ ಬಿಟ್ಟಿಕ್ಕು ಹೇಳ್ತೀರೋ?, – ಆನೋಪ್ಪೆ ). ಆಚವನ ಏಕ್ಷನಿಂಗೆ ಈಚವ ರಿಯಾಕ್ಷನ್ ಕೊಡದ್ರೆ ಎಷ್ಟು ಆಭಾಸ. ಪುಂಡುವೇಷ ಕುಣಿಯದ್ದೆ ಅಂತೇ ಬಾಯಿ ಮಾತಿಲ್ಲಿ ಸುಧಾರ್ಸುವೆ ಹೇಳಿ ಗ್ರೇಶಿರೆ ಅದು ಕುಂಬಳೆ ಸುಂದರಂಗೆ ಮಾತ್ರ ಎಡಿಗಪ್ಪದು.

ಆಟ ಕಳುದಿಕ್ಕಿ ಚೌಕಿ ಸುತ್ತ ಕ್ಲೀನ್ ಮಾಡಲೆ ಯೋಪಾ….!!! ನಾವೂ ನಾಗರೀಕರೋ!

ಸಿನೆಮಾಕ್ಕೋ ನಾಟಕಕ್ಕೋ ನಾಟ್ಯಕ್ಕೋ ಡೈರೆಕ್ಟರ್ ಹೇಳಿ ಒಬ್ಬ ಜವಬ್ದಾರಿಯವ ಇರುತ್ತ. ಖುಷಿ ಬಂದಾಂಗೆ ಕಲಾವಿದಂಗೆ ಎಂತ ಮಾಡ್ಲೂ ಸ್ವಾತಂತ್ರ್ಯ ಇಲ್ಲೆ. ಎಲ್ಲಾ ಪ್ರಿ-ಪ್ರಿಪೇರ್ಡ್, ಡಿಸಿಪ್ಲೀನಡ. ಯಕ್ಷಗಾನಲ್ಲಿ ಪ್ರತಿಯೊಬ್ಬ ಕಲಾವಿದನು ತನ್ನೆ ತಾನೇ ‘ಕಲಾವಿದ’ನಾಗಿ ತಯಾರು  ಮಾಡಿಗೊಂಡು ಸಭೆ ಮುಂದೆ ಬರೆಕು, ಪಾತ್ರ ಗೌರವ , ಸನ್ನಿವೇಶ ಪರಿಕಲ್ಪನೆ ಇದ್ದುಗೊಂಡು ರಂಗಸ್ಥಳಲ್ಲಿ ಪ್ರೇಕ್ಷಕಂಗೆ ಪ್ರಸಂಗ ಕಾಲಕ್ಕೆ ತನ್ನ ತಾನೇ ಅರಿಯದೆ ಹೋಗಿಬಿಡುತ್ತಾಂಗೆ ಆಯೇಕು  ಹೇಳಿಯೇ ಎನ್ನ ವಾದ ಮಂಡನೆ.

ಇದಾ ಯಕ್ಷಗಾನ.., 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. drmahabala
  dr mahabala sharma

  Yakshagaana heli oppannana websiteli kandappaga enage reply baradikkuva heli kandattu.Aanu kaleda 15 varshanda itlaagi yakshagaaanava taalamadddaleya nodtta baynde.Modamodalu yakshagaana sabheli tubha jananga ittiddavu,aadare eega yakshagaana sabheli jananga tumbha kammi.kaaarana halaaavaaru ikku.

  1.tv serial , vcd, dvd, computer haavali.
  2. koodukutumbha illadde ipadu.
  3. badalaada culture,
  4.forigen samskritiya ella vidhangalalliyu alavadisuva yuvaka yuvatiyaru
  5.parokshavaagi kelavu kalaavidarugala tannatana meresuva reetili maaduva vartanega.
  heenge halavaaru kaarananga ikku.

  eega yakshagaana & taalamaddalegala cd sulabhalli sikkuttu,
  irulidee oraku gettu aata nodekkare manege beega haakiye hoyekkada paristiti ella manegalalliyu iddeega.
  cinema dance ,cinema haadu iddare haangippa karyakramakke jana saagara serttu,classical music,bharata naatya,bhaavageete,yakshagaana,thaalamaddale ityaadigalaalli janangokke eega aasaaktti kammi aaydu.

  yakshaagaana kalavidara (kelavu kalavidaru) tannatanava melaisuva baralli kelavondu prasanga ardalle nindadu,ardalle cut maadi padangala haarisi munduvarsekkkaggi bandadu ityyaadi kooda kaaranave.

  entade aagaali, yakshagaanalippa olleya vishayangalanne naavu kaanekku.nijavaada bouddika kasarattu,navarasangalannu ottinge kaamba bhaghya, pouraanika kathe upakathegala meluku haakuva, aa chende pettu,maddale, impaada bhaagavatike,etc tumbha kushi koduttu manassinge.

  balipa,puttige,padyaana,ammannnaya,kaalinga naavuda,kolagi,dhaareshwara,mandecha,kadatoka,kubanooru ityaadi bhagavatike kelle chanda,
  obbaninda obbana bhagavatike vishesha.balippanga balippane saati.
  ade reeti chipparu,nidle,adooru,delatamajalu,valakunja,upadyaya,gudigaaru,ityaadi chende maddale pettu taste bere.
  veshabhooshana,nritya,arthagaarikeya gattu gaambheeryate ella pratiyobba kalavidaringu ondondu veshakke ondondu visheshatega iddu. adara nodiye tiliyekkaste.
  kevala 1 prasangha irulidee aadiyondiddavu eega 3 or 4 tundu prasanghagala aadtta iddavu.kaalamiti yakshagaana maadttavu.
  eega hosa reetili vaada samvaada heltta prayoga kooda thaalamaddaleli nadesutta iddavu.
  pouraanika kathe appaga prastuta sanniveshada kathe heludu tappu,matte haangippa taalamaddalege hopa interest aaringude baara.
  ILLI BARADA VISHAYANGA AARA MANASSINGU BENE APPALE BEKAAGI BARADDALLA,IPPA VISHAYAVA HELIDDASTE.
  Yene aagali yakshaagana helutta kale uliyekku,adara naavu belesekku.

  Yakshaganam Gelge.

  [Reply]

  VA:F [1.9.22_1171]
  Rating: 0 (from 0 votes)
 2. drmahabala
  dr mahabala sharma

  yakshagaaana poorti nodekku heli interest ippavakkude avara mane taapatrayangalo,atava marudinada duty nempaaagiyo ardanda hopadaadikku.
  orakkugedlaaga heli doctorga kotta nirdeshangala paalusudaadiku.
  kelavu jana yakshagana nodle heli bandu oora suddi maatadigondu yakshagaana sariyaagi nodtavakkude upadra maaduva bhaavandriddavu.aa kaarananda innu munde yakshagaanakke hovttille heli teermaana madida bhavanru ikku.hehehe.
  namma ooriliye aada 1 prasanghalli nadeda ghatane nempaatu.
  prasangha vaali vadhe. vaaliya prashnege raama sari uttara kodadda kaarana vaali ssayuta ille heli laastinge vaali saayadde prasangha mugudattu.
  innondu kade vaali vadhe prasangalli sugreeva and sriraamana naduve maatugarike samaya sumaaru tindu hogi,taare part maadlippava avana businge time aatu heli aaringu heladde allinda jaaage kaali maadida kaarana tare iklladde, suruvaana yuddhavu illadde vaali vadhe aada kathe .hehehe.
  heenge aadare matte haangippa thaalamaddlege hoyekku heli kaana.
  eganavakke mane odava kathe ippa manehaaalu serialga laayaku appadaaadiku.
  pouraanika kathe,adallippa neetiga aaringu beda.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಯಕ್ಷಗಾನದ ವಿಷಯಲ್ಲಿ ಕಳಕಳಿಲಿ ಬರದ ಚೆನ್ನೈ ಭಾವನ ಬರಹಕ್ಕೆ ಡಾಗುಟ್ರು ಮಾವನ ಒಳ್ಳೆ ಪ್ರತಿಕ್ರಿಯೆ.
  ಯಕ್ಷಗಾನ ಒ೦ದು ಪರಿಪೂರ್ಣ ಕಲೆ.ಸ೦ಗೀತ,ನೃತ್ಯ,ಅಭಿನಯ,ಭಾವನೆ,ಮಾತು ಹೀ೦ಗೆ ರ೦ಗಸ್ಥಳದ ಮೇಲೆ ವಿವಿಧ ಪ್ರಾಕಾರ೦ಗೊ ಒಟ್ಟಿ೦ಗೆ ಸಿಕ್ಕುವ ಅದ್ವಿತೀಯ ಕಲೆ.ಕೆಲವು ದಶಕ೦ಗಳ ಮದಲು ನಮ್ಮ ಜೀವನಕ್ರಮ ಈಗಾಣಷ್ಟು ಸ್ಪರ್ಧಾತ್ಮಕವಾಗಿ ಇತ್ತಿಲ್ಲೆ.ಆವಗ ಜೆನ೦ಗೊಕ್ಕೆ ಇದ್ದದು ಇದೊ೦ದೇ ಸರಿಯಾದ ಮನರ೦ಜನೆ.ಈಗ ದುರ್ದರ್ಶನದ ಹಾವಳಿ ನಮ್ಮ ಹವ್ಯಾಸ೦ಗಳ ಬದಲುಸಿದ್ದು ರಜ ಮಟ್ಟಿ೦ಗೆ ಸತ್ಯ.
  ನಿ೦ಗೊ ಇಬ್ರೂ ಹೇಳಿದ ಹಾ೦ಗೆ ಯಕ್ಷಗಾನ ಕಾರ್ಯಕ್ರಮಕ್ಕೆ ಜೆನ ಕಮ್ಮಿ ಅಪ್ಪಲೆ ಕೆಲವು ಕಾರಣ೦ಗೊ ಇದ್ದು.ನಮ್ಮ ಜೀವನಕ್ರಮ೦ದ ಹಿಡುದು ಕಲಾವಿದರ ಉಮೇದಿನ ವರೆಗೆ.
  ಇನ್ನು ರ೦ಗದ ಮೇಲೆ ತಾನೇ ಮೆರೆಯೆಕ್ಕು ಹೇಳಿ ಪ್ರಸ೦ಗ೦ದಲೂ ಹೆಚ್ಚು ಬೆಳವಲೆ ಪ್ರಯತ್ನ ಮಾಡುವ ಕಲಾವಿದರ ವಿಷಯ ಮಾತಾಡಿ ಸುಖವಿಲ್ಲೆ.ಕಥೆಯ ಭಾವನೆಗಳ ಮರದು ಕೊಣಿವವಕ್ಕೆ ಆರು ಬುದ್ಧಿ ಹೇಳೆಕ್ಕಾದ್ದದು?
  ಆಟ ಶುರು ಅಪ್ಪದರ ಮದಲು ಪಾತ್ರಧಾರಿಗೊ ಭಾಗವತರ ಹತ್ತರೆ ಕೂದು ಪ್ರಸ೦ಗ ಹೇ೦ಗೆ ಹೋಯೆಕ್ಕಾದ್ದದು ಹೇಳಿ ಮಾತಾಡಿಗೊ೦ಬಷ್ಟ್ತು ಶಿಸ್ತು ಬೆಳೆಶಿರೆ ಆಟ ಇನ್ನೂ ಮೇಲೆ ಬೀಳುಗು.
  ಆದರೆ,ಯಕ್ಷಗಾನ ಒಳಿವೊದಕ್ಕೆ,ಬೆಳವೊದಕ್ಕೆ ಯೇವ ಸ೦ಶಯವೂ ಇಲ್ಲೆ.ಅದರ ಒಳುಶುವ ಮಾತೇ ಇಲ್ಲೆ.
  ಇ೦ದು ಬೆ೦ಗಳೂರಿನ ಸುಮಾರು ಯುವ ಉದ್ಯೋಗಿಗೊ ಊರಿಲಿ ಒಳ್ಳೆ ಕಾರ್ಯಕ್ರಮದ ಶುದ್ದಿ ಸಿಕ್ಕಿರೆ ರಜೆ ಮಾಡಿಯಾದರೂ ಹೋಪ ಪ್ರಯತ್ನ ಮಾಡೊದರ ಕಾ೦ಬಗ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇದ್ದು ಹೇಳಿ ಕಾಣುತ್ತಿಲ್ಲೆ.
  ಮನ್ನೆ ಅಕ್ಷರನ ಲೇಖನಲ್ಲಿ ಶ್ಯಾಮಣ್ನ ಉಡುಪಿಲಿ ಆದ ಶಾಲಾಮಟ್ಟದ ಕಾರ್ಯಕ್ರಮಲ್ಲಿ ಎಷ್ಟು ಮಕ್ಕೊ ಭಾಗವಹಿಸಿದ್ದವು ಹೇಳಿ ಸೂಕ್ಷ್ಮಲ್ಲಿ ವಿವರಿಸಿತ್ತಿದ್ದವು.ಇನ್ನು,ಕಟೀಲಿಲಿ,ಪೆರ್ಲಲ್ಲಿ,ಬೆ೦ಗಳೂರಿಲಿ ಸುಮಾರು ಮಕ್ಕೊ ಯಕ್ಷಗಾನವ ಶಾಸ್ತ್ರೀಯವಾಗಿ ಆಸಕ್ತಿಲಿ ಕಲ್ತುಗೊ೦ಡಿದ್ದವು.
  ಚೆನ್ನೈ ಭಾವ೦ಗೆ ಧನ್ಯವಾದ,ವಿಚಾರಮ೦ಡನೆಗೆ.
  ಚೆನ್ನಬೆಟ್ಟಣ್ಣ ಎಲ್ಲಿದ್ದೇ??

  [Reply]

  VA:F [1.9.22_1171]
  Rating: +1 (from 1 vote)
 4. ಭೂಪಣ್ಣ
  Bhoopa

  ಚೆನ್ನೈ ಭಾವಯ್ಯಾ..

  ಯಕ್ಶಗಾನದ ಬಗ್ಗೆ, ಬದಲಾದ ಅಭಿರುಚಿಗಳ ಬಗ್ಗೆ ಎಷ್ತು ಚೆ೦ದಕ್ಕೆ ಚಿತ್ರಣ ಕೊಟ್ತಿದಿ…

  ಎನಗೆ ಈಗಲೂ ನೆನಪ್ಪಿದ್ದು. ಸಣ್ನ ಆದಿಪ್ಪಗ ಅಜ್ಜ ಅಜ್ಜಿಯೊಟ್ತಿ೦ಗೆ ಕೋಡಪದವಿ೦ಗೆ ಆಟಕ್ಕೆ ಹೋಪೆಯ. ಇಡೀ ಇರುಳು ಆಟ ನೋಡಿ ಮನಗೆ ಬ೦ದುಗೊ೦ಡಿತ್ತಿದ್ದೆಯ.

  ಈಗ ಬರೀ ಸಿನೆಮದ ಹಾ೦ಗೆ. ಬರೇ ೩ ಘ೦ಟೆ….

  [Reply]

  ನೆಗೆಗಾರ°

  ನೆಗೆಗಾರ° Reply:

  ಭೂಪಣ್ಣನ ಕಾಂಬಲೆ ಇಲ್ಲೆನ್ನೆ?
  ಪಕ್ಕದ್ಮನೆ ರಾಧಕ್ಕಂದೇ ಬರೇ ೩ ಘಂಟೆ ಕಮ್ಮಿ ಆತು ಹೇಳ್ತವು. 😀

  [Reply]

  VA:F [1.9.22_1171]
  Rating: 0 (from 0 votes)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇದಾ ಭೂಪಣ್ಣನ ಕಾಣದ್ದೆ ಒಳ್ಳೆತ ಅಸಕ್ಕ ಆಯಿದಾತೋ. ಸೂಟೆ ಕಟ್ಟಿ ಕಿಚ್ಚು ಕೊಟ್ಟು ಹುಡ್ಕಿರೂ ಕಾಣುತ್ತಿಲ್ಲೆ . ಹೀಂಗೆ ಅಪರೂಪ ಆಗಿಕ್ಕೇಡಿಪ್ಪ.

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಯಕ್ಷಗಾನ ನಮ್ಮದೇ ಕಲೆ ಹೇಳುವ ಅಭಿಮಾನ ನವಗೆಲ್ಲರಿಂಗೂ. ಒಂದರಿ ಅದರಲ್ಲಿ ಆಸಕ್ತಿ ಬಂದವಂಗೆ ಅದರಿಂದ ದೂರ ಇಪ್ಪದು ಕಷ್ಟ. ಎಲ್ಯಾರು ಯಕ್ಷಗಾನದ ತುಣುಕು ಸಿಕ್ಕಿರೂ ಮೈ ನವಿರೇಳುತ್ತು.

  ಊರಿಲ್ಲಿಪ್ಪವಕ್ಕೆ ಯಕ್ಷಗಾನ ನಿತ್ಯ ಜೆಂಬಾರದ ಹಾಂಗೆ ಇದ್ದಾದರೂ ದೂರ ಇಪ್ಪ ನವಗೆ ಹೀಂಗೂ ಕೂದು ರಜಾ ನಮ್ಮ ಹಳೆ ನೆಂಪ ಮೆಲುಕು ಹಾಕುವೋ ಹೇಳುವ ಉದ್ದೇಶ. ಅದರಲ್ಲಿಪ ಒಳ್ಳೆದು ಕೆಟ್ಟದು ಸಾರ್ವಜನಿಕಕ್ಕೆ ಬಿಡುವೋ. ಒಳಿತು – ಕೆಡುಕು ಇಲ್ಲದ ಸಂಗತಿ ಯಾವುದಿದ್ದು. ಆದರೆ ಅದರಲ್ಲಿಪ್ಪವ ಅದರ ತನ್ನ ತಾನೇ ಪ್ರೇಕ್ಷಕನಾಗಿ ಚಿಂತಿಸಿದರೆ ತನ್ನಲ್ಲಿಪ್ಪ ದೋಷವನ್ನಾರು ತಿಕ್ಕಿ ತೊಳದಿಕ್ಕಲಕ್ಕು. ಇನ್ನೊಬ್ಬಂಗೆ ಹೇಳುವಾಗ ಹೀಂಗೆ ಲಾಯಕ್ಕಿಲ್ಲೆ ಹೇಳಿ ಅರ್ತು ಹೇಳ್ಲಕ್ಕು.ಅಭಿರುಚಿಲಿ ಇದರ ಓದಿ ನಮ್ಮೊಂದಿಂಗೆ ತಮ್ಮ ಅನಿಸಿಕೆಯನ್ನೂ ಹಂಚಿ ಕೊಂಡ ಡಾ.ಮಹಾಬಲ ಶರ್ಮ ಅಣಿಲೆ, ರಘು ಭಾವಯ್ಯ, ಭೂಪ ಭಾವ ಎಲ್ಲೋರಿಂಗೂ ಧನ್ಯವಾದಂಗಳು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಸುವರ್ಣಿನೀ ಕೊಣಲೆವೇಣೂರಣ್ಣಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಶಾ...ರೀಕೊಳಚ್ಚಿಪ್ಪು ಬಾವದೇವಸ್ಯ ಮಾಣಿವಸಂತರಾಜ್ ಹಳೆಮನೆಶರ್ಮಪ್ಪಚ್ಚಿಶುದ್ದಿಕ್ಕಾರ°ಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಚೂರಿಬೈಲು ದೀಪಕ್ಕಪವನಜಮಾವಕಾವಿನಮೂಲೆ ಮಾಣಿಹಳೆಮನೆ ಅಣ್ಣಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿರಾಜಣ್ಣvreddhiಬಟ್ಟಮಾವ°ಬಂಡಾಡಿ ಅಜ್ಜಿಸಂಪಾದಕ°ದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ