ಬಾವಾ – ಮಜ್ಜಿಗೆ ದೊಂಡೆಲಿ ಸಿಕ್ಕುಸೆಡ!

April 19, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಸಗೆಲಿ ಜಂಬಾರದ ಸೀಸನ್ನು.
ಮನೆಲಿ ಐದು ಜೆನ ಇಪ್ಪಗ ಐದು ಕಡೇಂಗೆ ಹೋದರೂ ಎಲ್ಲಾ ಕರೆಯೋಲಗಳನ್ನೂ ಸುಧಾರುಸುಲೆ ಪೂರೈಸುತ್ತಿಲ್ಲೆ.
ಆದರೂ ಎಡಿಗಾಷ್ಟು ಮಟ್ಟಿಂಗೆ ಸೇರುಲೆ ಎಡಿಗಾದರೆ – ರಿಮಾರ್ಕು ಬಾರದ್ದೇ ನೆಂಟಸ್ತಿಗೆ ಒಳಿಸಿಕೊಳ್ಳೆಕ್ಕಲ್ಲದೋ?

ನಾವು ಪಬ್ಲಿಕ್ಕಿಲ್ಲಿ “ಬ್ರಾಹ್ಮಣೋ ಭೋಜನ ಪ್ರಿಯಃ” ಹೇಳುವ ವಕ್ರೋಕ್ತಿಗೆ ನಾಚಿಕೆ ಪಡೆಕಾದ ಅವಸ್ಥೆ ಇಂದ್ರಾಣ ನೆರೆಕರೆಲಿ ಆಗದ್ದ ಹಾಂಗೆ ಎಲ್ಲರು ಮನಸ್ಸು ಮಾಡೆಕ್ಕು.

ಬಾಳಗೆ ನೆಲಂದ ಹಾರುವ ಸಗಣದ ಹೊಡಿ.
ಈಗ ನಮ್ಮಲ್ಲಿ ಹಲವಾರು ಜವ್ವನ ಜವ್ವಂತ್ಯಕ್ಕೊ ಮೈಕ್ರೋ ಬಯಾಲಜಿ ಕಲ್ತು ಉಶಾರಿ ಆಯಿದವು.
ಅವಕ್ಕೆ ಪಂಚಗವ್ಯದ ಬಗ್ಗೆ ಟೀಕೆ ಮಾಡ್ಲೆ ತಕ್ಕ ತಲೆ ಓಡದ್ದರೂ ಬರೇ ಸಗಣದ ನೆಲದ ಬಗ್ಗೆ, ತಣ್ಣೀರಿನ ಬಗ್ಗೆ ಎಲ್ಲಾ ತಲೆ ಕೆಡುಸಿಕೊಂಡು – ಕೋಲಿಫಾರ್ಮ್, ಕೋಲಿಫಾರ್ಮ್ ಹೇಳಿ ಹೇಳ್ತವು.
ಮತ್ತೆ ಕೆಲವು ಮಕ್ಕೊ ಹೋಶ್ಟೆಲಿಲ್ಲಿ ತಣ್ಣೀರು ಕುಡುದು ಅಮೀಬಿಯಾಸಿಸ್ ಹೇಳುವ ಅಜೀರ್ಣಕ್ಕೆ ಸಿಕ್ಕಿ ಬಿದ್ದದೂ ಇದ್ದು. ಎಂತ ಇಲ್ಲದ್ದರೂ ರಜಾ ಗಾಳಿ ತಳ್ಪುಲೆ ಹೊದಕ್ಕೆ ವಸ್ತ್ರವೋ, ಜೆಂಬುಕಾನವೋ, ಮಡ್ಲ ಮರೆಯೋ ಎಂತಾರು ಕಟ್ಟುಲೆ ಕಾಸಿಲ್ಲಿ ಸಿರಿವಂತ ಆಗಿರೆಡದ್ದರೂ ಮನಸ್ಸಿಲ್ಲಿ ಮೋಡರ್ನು ಆಗಿರೆಕ್ಕನ್ನೇ ಬಾವಯ್ಯಾ.
ಹೀಂಗಿಪ್ಪಗ ಆದಷ್ಟು ಬಾಳಗೆ ಸಗಣದ ಹೊಡಿ ಹಾರದ್ದ ಹಾಂಗಿಪ್ಪ ವೆವಸ್ಥೆ ಮಾಡಿಕೊಂಡು ಮೆರವದು ಒಳ್ಳೆದಲ್ಲದೋ?

ಕೂಪಲೆ ಹಾಕುವ ಗೋಣಿ, ಊಟದ ಹಸೆ ಇವುಗಳ ಕ್ಲೀನ್ ಮಾಡುವ ಯೋಚನೆ ಹಲವರಿಂಗಿಲ್ಲೆ.
ಹಸೆಯ ಮೇಲೆ ಕೂದದ್ದರ ಗುರ್ತ ವೇಷ್ಟಿಗೆ ಬಕ್ಕು.

ಬೋರಿನ ನೀರು ಕುಡಿಯದ್ದೆ ಇದ್ದರೆ, ಬೇರೆ ನೀರಿಲ್ಲೆ ಹೇಳುವ ಸಂದರ್ಭ ಕೆಲವು ವರ್ಷಂಗಳಲ್ಲಿ ಇರುತ್ತು.
ಬೋರಿನ ನೀರಿಲ್ಲಿ ಲೆಡ್, ಆರ್ಸೆನಿಕ್ ಹೇಳುವ ವಿಷ ಲೋಹಂಗೊ ಎಲ್ಲಾ ರಜಾ ರಜ ಇರ್ತಡ.
ಹಾಂಗಿಪ್ಪ ನೀರು ಯಾವಾಗಲೂ ಕುಡಿವದರಿಂದ ಕಿಡ್ನಿ, ಲಿವರು ಎಲ್ಲಾ ಹಾಳಾವುತ್ತಡ.
ಯಾವಾಗಲೂ ಊಟ, ಆಸರಿಂಗೆಯ ಮಟ್ಟಿಂಗೆ ಬಾವಿ ನೀರಿನಷ್ಟು ಉತ್ತಮ ಬೇರೆ ಯಾವುದಿಲ್ಲೆ. ಕೆಲವು ಕಡೆ ಸುಲಾಭ ಆವುತ್ತು ಹೇಳಿ ಕುಪ್ಪಿಲಿ ಸಿಕ್ಕುವ ಬಣ್ಣದ ನೀರು ಕಲಸಿ ಸರ್ಬತ್ತು ಹೇಳಿ ಕೊಡ್ತವು.
ಕೆಲವು ಚೀಪು ವಸ್ತುಗಳಿಂದ ಹೊಟ್ಟೆ ಬೇನೆ, ಎಲರ್ಜಿ ಅಷ್ಟೇ ಅಲ್ಲ ಕ್ಯಾನ್ಸರು ಕೂಡಾ ಬತ್ತಡ. ಕೆಲವು ಚೋಕ್ಲೇಟುಗಳುದೇ ಅಷ್ಟೇ ಭಾವಾ, ಕುಡಿವಲೆ ಸರಿಯಾದ ಕಲಬೆರಕೆ ಇಲ್ಲದ್ದ ಬೆಶಿನೀರು (ಕೊದುಶಿ ತಣಿಶಿದ) ಇದ್ದರೆ ಅದೇ ಐಶ್ವರ್ಯದ ಸಂಕೇತ ಹೇಳೆಕ್ಕಷ್ಟೇ.

ಇನ್ನು ಕೈಲಿ ಬಳುಸೆಕ್ಕೋ ಅಲ್ಲ ಕೈಲಿಲ್ಲಿಯೋ – `ಫುಡ್ ಪ್ರಿಪೇರ್ಡ್ ಅನ್ ಟಚ್ಡ್ ವಿತ್ ಹ್ಯಾಂಡ್’ ಹೇಳುವ ವಿಚಾರ ಈಗೀಗ ಅಲ್ಲಲ್ಲಿ ಚರ್ಚಗೆ ಬತ್ತಾ ಇದ್ದು.
ಹಾಂಗಿಪ್ಪಗ ತಾಳು, ಭಕ್ಷ್ಯ ಎಲ್ಲ ಬಳುಸೆಕ್ಕಾದ್ದದು ಹೇಂಗೆ ಹೇಳುವ ವಿಚಾರ ಒಪ್ಪಣ್ಣನ ಬೈಲಿಲ್ಲಿ ಇಪ್ಪ ಪಂಚಾಯ್ತಿಗೆಲಿ ತೀರ್ಮಾನ ಆಗಲಿ.

ಈ ತಿಂಗಳು ಎರಡು-ಮೂರು ಕಡೆ ಎನಗೆ ಆದ ಅನುಭವವ ಬೈಲಿನ ಅಣ್ಣ ಅಕ್ಕಂದ್ರ ಹತ್ತರೆ ಹೇಳದ್ರೆ ಎನಗೆ ಒರಕ್ಕೇ ಬಾರ.
ಊಟದ ಅಕೇರಿ ಐಟೆಂ ಮುಜ್ಜಿ ಅಲ್ಲದೋ.
ಮಜ್ಜಿಗೆಯ ಬಗ್ಗೆ ಹೆಚ್ಚು ಗಹನವಾದ ವಿಶ್ಲೇಷಣೆ ಮಾಡಿರೆ, ಬೈಲು ತುಂಬಾ ಅದುವೇ ಅಕ್ಕು. ಅದರ ಬದಲಿಂಗೆ ಮಜ್ಜಿಗೆ ನೀರು, ನೀರು ಮಜ್ಜಿಗೆ = ಇವುಗಳ ಫೋರ್ಮುಲವೂ ಬೇರೆ ಬೇರೆ ಅಡಿಗೆ ಮಾಡುವ ಅಪ್ಪಚ್ಯಕ್ಕಳ ಕೈ ಚಳಕವ ಹೊಂದ್ಯೊಂಡು ಇರುತ್ತು.

ಸರೀ ಬೇಯದ್ದ ಬೆಳ್ತಿಗೆ ಅಶನವ, ಅರ್ಜೆಂಟಿಲ್ಲಿ ನೀರು ಮಜ್ಜಿಗೆಯೊಟ್ಟಿಂಗೆ ಸುರ್ಪುವಗ ದೊಂಡೆಲಿ ಸಿಕ್ಕುತ್ತು ಭಾವಾ, ಅದೂ ಸಾಲದ್ದಕ್ಕೆ, ಮಜ್ಜಿಗೆ ಹಂತಿಯ ಕೊಡಿಲಿ ಬಪ್ಪಗಳೇ ಕೆಲವು ಜೆನ ಏಳುಲೆ ಅಂಬ್ರೆಪ್ಪು ಕಟ್ಟುತ್ತವು.
ಅರ್ಜೆಂಟಿಲ್ಲಿ ಸುರ್ಪುವಗ ಮಜ್ಜಿಗೆ ರಜಾ ಮಂದ ಇಲ್ಲದ್ರೆ ಲೂಬ್ರಿಕೇಶನ್ ಇಲ್ಲದ್ದೇ ದೊಂಡೆಲಿ ಸಿಕ್ಕುತ್ತು.
ಹಾಂಗಿಪ್ಪಗ, ಅಶನಕ್ಕೆ ಬೆಳೀ ರಜಾ ಇಪ್ಪ ತಣ್ಣೀರು ಬಳುಸುವದರ ಹಿಂದೆ ಅಡಿಗೆಯವರ ಕೈಚಳಕವೂ ಇಲ್ಲದ್ದೇ ಇಲ್ಲೆ.
ಒಟ್ಟಾರೆ ಮೇಗೆ, ಮುಗುಳಕ್ಕಿ ಅಶನ, ಅಂಬ್ರೆಪ್ಪು, ನೀರು ಮಜ್ಜಿಗೆ ಒಟ್ಟಿಂಗೆ ಸೇರಿರೆ ಕೌರವರ ಸೈನ್ಯ ಗೆಂಟ್ಲಿಲ್ಲಿ ಸಿಕ್ಕುತ್ತು.
ಹಾಂಗಾಗಿ ಅಶನ ಬೇಶುದು, ಮಜ್ಜಿಗ್ಗೆ ನೀರು ಹಾಕುವದಕ್ಕೆ ಒಂದು ಅಳತೆ ಮಡುಗುವದು, ಅಂಬ್ರೆಪ್ಪು ಕಟ್ಟದ್ದೇ ಇಪ್ಪದು ಹೀಂಗೆಲಾ ಜಾಗ್ರತೆ ಮಾಡಿತ್ಸು ಕಂಡ್ರೆ ಔತಣಕ್ಕೂ ಯಾವ ರಿಮಾರ್ಕುದೇ ಬಾರ.

ಧರ್ಮಕ್ಕೆ ಬೂಸು ಕುಟ್ಟಲೆ ಬಂದು ಕೊರತ್ತೆ ಹೇಳುತ್ತೆ ಹೇಳಿ ಬೈಯೆಡ ಭಾವಾ.
ಎಲ್ಲಾ ಜಾತಿಯವುದೇ ಬಾಕ್ ವರ್ಡ್ ಹೇಳಿಕೊಂಡು ಮುಂದುವರಿವಗ ನಾವು ಮಾಂತ್ರ ಫಾರ್ವರ್ಡಾಗಿ ಹಿಂದುಳಿತ್ತನ್ನೇ ಹೇಳಿ.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಬಾಲಣ್ಣ

  ಮುರಲೀ,
  ಪೊಯಿಂಟು ಸರಿ ! ನಮ್ಮ , ನಮ್ಮ ಮನೆ, ಊರ ಕಲ್ಯಾಣ ಮಂಟಪ,, ದೇವಸ್ಥಾನಂಗಳಲ್ಲಿಯ ಅಡಿಗೆ ಕೊಟ್ಟಗೆ, ಪಾತ್ರಂಗಳ ಕಥೆ?
  ನೀರು, ಅಡಿಗೆ ಮಾಡುವವರ ವೈಯುಕ್ತಿಕ ಶುಚಿತ್ವ, ಕೈ, ಬಾಯಿ ! ! !

  ಹೀಂಗೆ.. ನಮ್ಮ “ಸೊ ಕಾಲ್ದ್ – ಪರಿಶುದ್ದ ಹೋಟಲುಗಳ ಕಥೆಯೂ ಇದರಿಂದ ಹೆಚ್ಚು ಭಿನ್ನ ಅಲ್ಲ ! ಆನು ಅರಿಶಿನ ಕೊಂಬಿನ ಸಂಸ್ಕರಿಸುವ (ಬೇಸಿ ಒಣಗಿಸುವ), ಬೇಳೆಗಳ ಮಾಡುವ(……ಬೇಳೆ ಅಲ್ಲ, ಧಾನ್ಯಂಗಳ…! ), ಹಾಲಿನ ಡೈರಿಗಳ ಸಂಗತಿಗಳ ಬರದರೆ ! ! …ಅವಕ್ಕೆಲ್ಲಾ ಗುಣಮಟ್ಟದ ಸರ್ತಿಫಿಕೇಟುಗೊ- ಬೇಕಾಶ್ತು ಸಿಕ್ಕಿಕ್ಕು ! .

  ಗುಣಗ್ರಾಹಿತ್ವ , ಗುಣಮಟ್ಟಕ್ಕೆ ಪ್ರಥಮ ಆದ್ಯತೆ….ಎಲ್ಲ ಮನಸ್ಸಿನ ಆಳಂದ ಹೆರ ಬಂದರೆ ಮಾತ್ರ ಪರಿಣಾಮ ಅಕ್ಕು. ಅಲ್ಲದೋ , ನಾವು ಬರದರೆ ಓದಿದವಕ್ಕಾದರೂ ಸರಿ ಹೇಳಿ ತೋರಿರೆ, ಅವು ನಾಕು ಜನಕ್ಕೆ ಹೇಳಿರೆ, ನಿಧಾನಕೆ, ಧ್ನಾತ್ಮಕವಾದ ಬದಲಾವಣೆ ಬಕ್ಕು ಹೇಳಿ ಎನಗೂ ತೋರ್ತು !
  ಲಾಯಕಾಯಿದು, ಒಪ್ಪಂಗೊ ! !

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಶುಚಿತ್ವಕ್ಕೆ ನಾವು ಕೊಡುವ ಪ್ರಾಶಸ್ತ್ಯ ಸಾಲ.ಮುರಲಿ ಅಣ್ಣ ,ಶರ್ಮಣ್ಣ ಬರೆದ್ದರ ಆನು ಒಪ್ಪುತ್ತೆ.
  ಮಾಡಿದ ವಸ್ತುಗಳ ಮುಚ್ಚಿ ಮಡುಗುದು ಬೇಕು.,ಆಸರಿಂಗೆ ಕುಡಿವಲ್ಲಿ ಒಂದೇ ಬಕೆಟಿಲಿ ಗ್ಲಾಸು ಅದ್ದಿ ಅದ್ದಿ ಕೊಡುದು,ಇನ್ನೊಂದರಲ್ಲಿ ನೀರು ಮಡುಗಿ ತೊಳೆಸಿದ ಹಾಂಗೆ ಮಾಡುದು ಕಾಂಬಾಗ ಹೇಸಿಗೆ ಆವುತ್ತು.ಇದಕ್ಕೆ ಟ್ಯಾಪ್ ಇಪ್ಪ ಮುಚ್ಚಳು ಇಪ್ಪ ಪಾತ್ರೆ ಉಪಯೋಗಿಸುದು ಒೞೆದು.ಲೋಟವ ಸರೀ ತೊಳೆವ ವ್ಯವಸ್ತೆ ಮಾಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಶ್ಮಿ

  ನಿಂಗೊ ಬರದ ವಿಷಯ ಎಲ್ಲೋರು ಸೇರಿ ವಿಮರ್ಶೆ ಮಾದೆಕ್ಕಪ್ಪ ವಿಚಾರ .
  ಎನ್ನ ಕೆಲವು ಅನಿಸಿಕೆಗೊ ಈ ರೀತಿ ಇದ್ದು .
  ೧.ಜೆಮ್ಬ್ರ ತೆಗವ ಮನೆಯವ ಮಿತಿ ಮೀರಿ ಹೇಳಿಕೆ ಕೊಡುದು. ಇದರಿಂದಾಗಿ ಅವಕ್ಕೆ ಎಷ್ಟು ಜನ ಬಕ್ಕು ಹೇಳಿ ಅಂದಾಜಿ ಮಾಡ್ಲೆ ಎಡಿತಿಲ್ಲೆ. ಹಾಗಿಪ್ಪ ಸಂಧರ್ಭಲ್ಲಿ ಮಜ್ಜಿಗೆ ನೀರು ಅಲ್ಲ — ನೀರನ್ನೇ ಮಜ್ಜಿಗೆ ಮಾಡೆಕ್ಕದ ಸಂಧರ್ಬ ಬಪ್ಪದು.(ತುಂಬ ನೀರಿನ್ಗೆ ರಜ್ಜ ಮಜ್ಜಿಗೆ ಹಾಕುದು )
  ೨. ಈಗ ಹೆಚ್ಚಿನೂರು ಊಟಕ್ಕಪ್ಪಗಲೇ ಬಪ್ಪದು. ಇದರಿಂದಾಗಿ ಅಡಿಯೋರಿನ್ಗೆ ಊಟಕ್ಕೆ ಎಷ್ಟು ಅಕ್ಕಿ ಹಾಕೆಕ್ಕು ಹೇಳಿ ಅಂದಾಜಿ ಸಿಕ್ಕದ್ದೇ ಅಪ್ಪದು. ಊಟಕ್ಕೆ ಕೂದ ಮತ್ತೆ ಅಕ್ಕಿ ಹಾಕೆಕ್ಕಾಗಿ ಬಂದು ಮತ್ತೆ ಅತಿಥಿಗೊ ಮುಗುಳಕ್ಕಿ ಆಶನವನ್ನೇ ಉಣ್ನೆಕ್ಕಾಗಿ ಬಪ್ಪದು.
  ೩. ವ್ಯಾಪರಿಗೋ ಗ್ರಾಹಕರ ಬೇಡಿಕಗೆ ಅನುಗುಣವಾದ ಸಾಮಾನುಗಳ ಕೊಡ್ಥವು. ಹಾನ್ಗೆಏ ಕಲ್ಯಾಣ ಮಂಟಪಲ್ಲಿ ಜೆಮ್ಬ್ರ ತೆಗವ ಜೇನ್ಗೋ ಊಟಕ್ಕೆ ಕೊಪಲ್ಲಿಪ್ಪ ಗೋಣಿ ಲೈಕಾ ಬೇಕು ಹೇಳದ್ದರೆ ಅವಕ್ಕೆ( ಕಲ್ಯಾಣ ಮಂಟಪದ ) ಗೊಂಥಪ್ಪದು ಹೆಂಗೆ?ನಾವು ಕರ್ಚು ಮಾಡ್ಲೆ ತಯಾರಿದ್ದರೆ, ಮೊದಲೇ ನಾವು ಕೇಳಿದರೆ ಅವು ತ್ಹೊಲೇಶಿ ಹಾಕವಾ?
  ೪. ಪಲ್ಯವ ಸಟುಗಿಲಿ ಹನ್ತಿಗೆ ಬಳುಸುಲೇ ಹೆಚ್ಚು ಹೊತ್ತು ಬೇಕಾವ್ಥು . ಹಾನ್ಗಾಗಿ ಕೈ ಚೀಲ ಹಾಕಿ( glouse ) ಬಳುಸುದು ಒಳ್ಳೇದು.ದೊಡ್ಡ ಹನ್ಥಿ ಆದರೆ ಬಳುಸುವವರ ಕಷ್ಟ ಅವಕ್ಕೆ ಗೊಂಥಕ್ಕಸ್ತೆ.
  ೫. ಮಜ್ಜಿಗೆ ಮತ್ತೊಂದು ಕೊಡಿಲಿ ಎತ್ತೆಕ್ಕಾರೆ ಮೊದಲೇ ಎದ್ದಿಕ್ಕಿ ಹೊಪವು –(ಅ) ಜನ ಹೆಚ್ಚು ಸೇರಿ ಕೈ ತ್ಹೊಳವಲೆ ಕಾದು ಕುರೆಕ್ಕಾವುತ್ತು. ಬಸ್ಸಿಲಿ ಬಂದೊರಿನ್ಗೆ ಬಸು ತಪ್ಪಿ ಹೋಪ ಸಮಸ್ಯೆ ಇರುತ್ತು(.ಬ) ಮತ್ತೊಂದು ನಮೂನೆಯ ಜೇನ್ಗೋ” ಕೆಸವವಿನ ಕಾಲಿಲಿ ಕಂಜಿ ಕಟ್ಟಿಕ್ಕಿ ಬಪ್ಪವರು” . ಇವು ತಡವಾಗಿ ಬಂದು, ಬೇಗ ಹೊಯೇಕ್ಕಾದವು. ಮೊದಲು ಬಂದವರ ವಾಹನವ ತೆಗವಲೆ ಎಡಿಯದ್ದ ಹಾಂಗೆ ಪಾರ್ಕ್ ಮಾಡಿ ಅವ್ಯವಸ್ತೆ ಉಂಟು ಮಾಡುವವು.
  ಅವ್ಯವಸ್ತೆಗೆ ಮನೆ ಯಜಮಾನನೇ ಜವಾಬ್ದಾರಿ ಹೊರೆಕ್ಕು . ಅಡಿಗೆಯವರ ಹೇಳಿ ಪ್ರಯೋಜನ ಇಲ್ಲೆ .ಅಡಿಗೆಯೋರಿನ್ಗೆ ಅವರ ಅಡಿಗೆ ಒಳ್ಳೆದಾಯೇಕ್ಕು ಹೇಳಿಯೇ ಇರುತ್ತು.( ಮನೇಲಿ ಅಡಿಗೆ ಮಾಡುವವರ ಕೇಳಿ ನೋಡಿ ಅಮ್ಮ/ ಹೆಂಡತಿ/ ಅಕ್ಕ,ತಂಗೆಕ್ಕೋ ).ಜೆಮ್ಬ್ರಲ್ಲಿ ಅದಕ್ಕೆ ಬೇಕಪ್ಪ ಸಾಮಾಗ್ರಿಗಳ ಯಜಮಾನ ಸರಿಯಾಗಿ ಒದಗುಸದ್ದರೆ ಅಡಿಗೆಯವು ಎಂಥ ಮಾಡ್ಲೆ ಎಡಿಗು?
  ಮದುವೆ ಅಡಮ್ಬರಲ್ಲಿ ಮಾಡಿ ಅಡಿಗೆಯವರ ಸಂಬಳ ಕೊಡ್ಲೇ ಆಶೆ ಮಾಡುವ ಜೆನಂಗಳು ಇದ್ದವು.. ಆನು ಹೇಳ್ತಾರೆ ಅಡಿಗೆಯೋರಿಂಗು, ಪುರೋಹಿಥರಿಂಗು ಹಣ ಕೊಡ್ಲೇ ಆಶೆ ಮಾಡ್ಲಾಗ. ಹಾಂಗೆ ಹೇಳಿ ಪಾಪದವು ಜೆಮ್ಬ್ರ ತೆಗೆತ್ತಾರೆ ಅವರ ಕೈನ್ದ ಪುರೋಹಿತರು, ಅಡಿಗೆಯೋರು ಹೆಚ್ಚು ಕೆಳುಲು ಆಗ .

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಲ್ಲಾ.., ಆನು ಹೇಳಿರೆ ನಿಂಗೊಗೆಲ್ಲಾ ಆಗದ್ದೆ ಬಕ್ಕು., ಎಲ್ಲೋರಿಂಗೂ ಇಟ್ಟು ಕಷ್ಟ ಮಡಿಕ್ಕೊಂಡು ಊಟ ಹಾಕೇಕು ಹೇಳಿ ಎಂತ ?! ಹೆಂಗೂ ಊಟದ ಹೊತ್ತಿಂಗೆ ಬಪ್ಪವು ಹೇಳಿಕೆ ಹೇಳಿದ್ದನ್ನೇ ಹೇಳ್ವ ಸಂಕಟಲ್ಲಿ ಬಪ್ಪ ಹಾಂಗೇ ಇದ್ದನ್ನೇ. ಕುಡಿವಲೆ ಒಂದು ಕುಪ್ಪಿ ತಿಂಬಲೆ ಒಂದು ಪೆಕೆಟು ಕೊಟ್ಟು ಸುಧರಿಕೆ ಮುಗಿಶಿಕ್ಕಲಕ್ಕೋದು! (ಪ್ರತ್ಯೇಕಕೌಂಟರ್) . ಮಂಟಪಲ್ಲಿ ಬಂದು ಗಿಫ್ಟ್ ಕೊಟ್ಟು ಕೈ ಕುಲುಕಿಸಿ ಹೆರಡಲೆ ಅಂಬೇರ್ಪು ಇಪ್ಪವಕ್ಕೆ ದೊಡ್ಡ ಮನಸ್ಸಿನ ಇಷ್ಟು ಉಪಚಾರ ಸಾಲದೋ. ಮತ್ತೆ ಅಂಬರೇಪು ಇಲ್ಲದ್ದೆ ಮದುವೆ ಚಂದಗಾಣಿಸಿ ಕೊಡಲೆ ಬಂದವು ಚಂದಲ್ಲಿ ಕೂದು ತೃಪ್ತಿಲ್ಲಿ ಸಾವಕಾಶ ಮಾಡಿರೆ ಚಂದ ಅಲ್ಲದೋ.
  ಒಂದು ಹೊಡೆಲಿ ಬ್ರುಗುವಲ್ಲಿ ಇನ್ನೊಂದು ಹೊಡೆಲಿ ಅಂಬೇರ್ಪುವಲ್ಲಿ! ಶಿವ ಶಿವ!!

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಅನಿತಾ ನರೇಶ್, ಮಂಚಿಬೋಸ ಬಾವಮುಳಿಯ ಭಾವಅಜ್ಜಕಾನ ಭಾವಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಕೊಳಚ್ಚಿಪ್ಪು ಬಾವಸಂಪಾದಕ°ಬಟ್ಟಮಾವ°ವೆಂಕಟ್ ಕೋಟೂರುಚೆನ್ನೈ ಬಾವ°ದೊಡ್ಡಮಾವ°ಹಳೆಮನೆ ಅಣ್ಣವಿದ್ವಾನಣ್ಣಒಪ್ಪಕ್ಕಪ್ರಕಾಶಪ್ಪಚ್ಚಿನೀರ್ಕಜೆ ಮಹೇಶಕೇಜಿಮಾವ°ಶರ್ಮಪ್ಪಚ್ಚಿಮಾಲಕ್ಕ°ಗೋಪಾಲಣ್ಣಅನುಶ್ರೀ ಬಂಡಾಡಿದೊಡ್ಡಭಾವತೆಕ್ಕುಂಜ ಕುಮಾರ ಮಾವ°vreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ