Oppanna.com

ಮೊಳೆ ಹೊಡೆವಲುದೆ ಕೆಪ್ಯಾಸಿಟಿ ಬೇಕು !

ಬರದೋರು :   ಸುರೇಖಾ ಚಿಕ್ಕಮ್ಮ    on   04/11/2013    20 ಒಪ್ಪಂಗೊ

ಎನಗೆ “ತಲೆ ಕೊರೆವದು” ಹೇಳಿರೆ ಭಯಂಕರ ಇಷ್ಟ. ಎನ್ನ ಈ “ಇಷ್ಟ” ಸಾಕಷ್ಟು ಜೆನಕ್ಕೆ “ಸಂಕಷ್ಟ” ಹೇಳಿ ಎನಗುದೆ ಗೊಂತಿದ್ದು. ಆದ್ರೆ ಆರಿಂಗೊ ಕಷ್ಟ ಆವುತ್ತು ಹೇಳಿ ಎನ್ನ ಇಷ್ಟವ ಬಿಡುಲೆಡಿತ್ತಾ ?
ಸಣ್ಣಾಗಿಪ್ಪಗ ಅಮ್ಮನ ತಲೆ ಕೊರೆದುಕೊಂಡಿತ್ತಿದ್ದೆ. ಪಾಪದ ಅಮ್ಮ ಎನ್ನ ಪ್ರಶ್ನೆಗೊಕ್ಕೆಲ್ಲ ಉತ್ತರ ಕೊಡ್ಲೆಡಿಯದ್ದೆ, ಒಂದು ಬೆಲ್ಲದ ಉಂಡೆ ಕೈಗೆ ಕೊಟ್ಟಿಕ್ಕಿ, ಸಾಗಹಾಕಿಗೊಂಡಿತ್ತು ! ಮತ್ತೆ ಎನ್ನ ಶಾಲೆಗೆ ಅಟ್ಟಿದ ಮತ್ತೆ, ತಲೆ ಕೊರೆಸಿಕೊಳ್ಳುಲೆ ಗೆಳೆಯ-ಗೆಳತಿಯರು ಸಿಕ್ಕದವು. ಕಿರಿಯ ಪ್ರಾಥಮಿಕ ಶಾಲೆಯ ಎನ್ನ ಜೊತೆಗಾರರು ಎನ್ನ ತಲೆ ಕೊರೆತಕ್ಕೆ ಎಷ್ಟು ಹೊಂದಿಕೊಂಡವು ಗೊಂತಿದ್ದಾ ? ಆನು ಮಾತಾಡದ್ದೆ “ಠೂ” ಬಿಟ್ಟರೆ, ಕಡ್ಡಿ (ಬಳಪ) ಕೊಟ್ಟು ರಾಜಿ ಮಾಡಿಕೊಂಡಿತ್ತಿದ್ದವು. ಎನಗೆ ಸರೀ ನೆಂಪಿದ್ದು ! ರಾಘವೇಂದ್ರ ಹೇಳಿ ಒಬ್ಬ° ಇತ್ತಿದ್ದ°. ಬಳಪಕ್ಕೆ ಬೇಕಾಗಿ ಆನು ದಿನಾ ಅವನೊಟ್ಟಿಂಗೆ “ಠೂ” ಬಿಟ್ಟುಗೊಂಡಿತ್ತಿದ್ದೆ. ಶಾಲೆ ಬಿಟ್ಟು ಮನೆಗೆ ಹೋಪಲಪ್ಪಗ ಅವನತ್ರ ಇಪ್ಪ ಎಲ್ಲ ಬಳಪ ಎನಗೆ ಕೊಟ್ಟಿಕ್ಕಿ, ರಾಜಿ ಮಾಡಿಕೊಂಡು ಮನೆಗೆ ಹೋಗಿಗೊಂಡಿತ್ತಿದ್ದ°. ಪಾಪ ! ಎಷ್ಟು ಸರ್ತಿ ಮನೇಲಿ ಬೈಸಿಕೊಂಡನೊ ಎಂಥದೊ ?  ಸ್ಲೇಟಿಲಿ ಬರೆವಷ್ಟು ದಿನವುದೆ ಆನು ಬಳಸಿದ್ದು ರಾಘವೇಂದ್ರ ಕೊಟ್ಟ ಬಳಪವನ್ನೆ. ಬಳಪಕ್ಕಾಗಿ ಅಪ್ಪನ ಕೇಳಿದ ನೆನಪೇ ಇಲ್ಲೆ ! ಮೊನ್ನೆ ಊರಿಗೆ ಹೋದಪ್ಪಗ ರಾಘವೇಂದ್ರನ್ನ ಮಾತಾಡ್ಸಿ “ಸೋರಿ” ಕೇಳಿಕ್ಕಿ ಬೈಂದೆ.
ಮತ್ತೆ ಮಾಧ್ಯಮಿಕ ಶಾಲೆಗೆ ಬಂದ ಮತ್ತೆ ಆನೇ ತರಗತಿಲಿ ಲೀಡರ್.  ಹಾಂಗೆ ನನ್ನ ಚಾಳಿಗೆ ಆರಿಂದಲೂ ಉಪದ್ರ ಬೈಂದಿಲ್ಲೆ ! ಏಳನೇ ಇಯತ್ತೆಲಿಪ್ಪಗ ಆನು ಶಾಲೆಗೆ ಹೋಗದ್ದ ದಿನ ಲೀಡರ್ ಸೆಲೆಕ್ಟ್ ಮಾಡಿದ್ದು- ಮರುದಿನ ಮಾತಾಡುವವರ ಲಿಸ್ಟ್ ಲಿ ಎನ್ನ ಹೆಸರೆ ಮೊದೂಲು ಇದ್ದದ್ದು- ಮುಖ್ಯೋಪಾಧ್ಯಾಯರು ಎನಗೆ ಬೆತ್ತದ ರುಚಿ ತೋರ್ಸಿದ್ದು ಎಲ್ಲ ಹೇಳಿರೆ ಎನ್ನ ಮರ್ಯಾದಿಯೆ ಹೋಪದು. ಅಲ್ಲದಾ ?
ಹಿರಿಯ ಪ್ರಾಥಮಿಕ ಶಾಲೆಯ ಜೀವನವುದೆ ಎನ್ನ ಇಷ್ಟಕ್ಕೆ ಪೂರಕವಾಗಿಯೆ ಇದ್ದತ್ತು ! ಭಾಷಣ-ಚರ್ಚಾಸ್ಪರ್ಧೆಗಳು  ಎನ್ನ ಚಾಳಿಗೆ ಹೊಸ ವೇದಿಕೆ ಆದದ್ದು – “ಮಾತಿನ ಮಲ್ಲಿ” ಬಿರುದು ಸಿಕ್ಕಿದ್ದು – ಆನು ಖುಷಿ೦ದಲೆ “ಬಿರುದು ಸ್ವೀಕಾರ” ಮಾಡಿದ್ದು – ಎಲ್ಲವುದೆ  ಹೈಸ್ಕೂಲ್ ಜೀವನದ ಸವಿಸವಿ ನೆನಪು !
ಎನ್ನ ಮಗ° “ಮೊಳೆ ಹೊಡೆವಲೆ ” ಸುರು ಮಾಡಿಯಪ್ಪಗ,  ಮೊಳೆ ಹೊಡೆಸಿಕೊಂಬದರ ಕಷ್ಟದ ಅರಿವು ಎನ್ನ ಅನುಭವಕ್ಕೆ ಬಂದದ್ದು ! ತುಂಬಾ….. ಬಂಙ ಬಿದ್ದು, ಈಗ ಎನ್ನ ಚಾಳಿಯ ಹಿಡಿತಕ್ಕೆ ತೈಂದೆ. ಈಗ ಆನೇ ಆರ ತಲೆಗೂ ಮೊಳೆ ಹೊಡಿತ್ತಿಲ್ಲೆ – ಅವಾಗಿಯೇ ಬಂದಪ್ಪಗ – ಸಿಕ್ಕಿಪ್ಪ ಅವಕಾಶ ಬಿಟ್ಟು ಕೊಡ್ತೂ ಇಲ್ಲೆ.  ಅಂಥಾ ಸ೦ದರ್ಭದ  ಅನುಕೂಲಕ್ಕಾಗಿಯೇ ಅನಾಸಿನ್ – ಅಮೃತಾಂಜನ್ ಜೊತೆಲಿ ಮಡಗಿಕೊಂಡಿರ್ತೆ.
ಸಣ್ಣಾಗಿಪ್ಪಗ “ಪಟ್ ಪಟಾಂತ ಏನ್ ಚೆನ್ನಾಗಿ ಮಾತಾಡುತ್ತು ಕೂಸು” ಹೇಳಿದ ಜನಗಳೇ, ಈಗ “ಏನ್ ವಟವಟಾಂತ ಮಾತಾಡುತ್ತು ಈ ಹೆಮ್ಮಕ್ಕ” ಹೇಳಿ ಮೂಗುಮುರಿತ್ತವು. ವಾಚಾಳಿ- ವಟಸುಬ್ಬಿ ಮುಂತಾದ ಬಿರುದನ್ನೂ ಕೊಡ್ತವು. ಎದುರಿಂದ “ನಿಂಗೊ ಬಿಡಿಪ್ಪಾ. ಕಲ್ಲನ್ನುದೆ ಕುಟ್ಟಿ ಮಾತಾಡಿಸ್ತೆ” ಹೇಳಿ ಹೊ(ತೆ)ಗಳುವ ಜೆನ ಹಿಂದಿಂದ “ಅದರ ಬಾಯಿ ಬೊಂಬಾಯಿ” ಹೇಳಿ ವ್ಯಂಗ್ಯ ಮಾಡ್ತವು. ಆರು ಏನು ಹೇಳಿದ್ರೆ ಎನಗೆಂತ ? ಆನಂತು ಎನ್ನ ಚಾಳಿ ಜೊತೆಲಿ ಸುಖ(?)ವಾಗಿ ಇದ್ದೆ !
ಎನ್ನ ತಲೆ ತಿನ್ನುವ ರೀತಿಲುದೆ ಗಮ್ಮತ್ತಿದ್ದು ! ತೀರ ವ್ಯಾವಹಾರಿಕ ಜೆನಂಗಳತ್ರೆ ಆಧ್ಯಾತ್ಮದ ಬಗ್ಗೆ, ತೀರ ಆಸ್ತಿಕರತ್ರ ಪ್ರಾಪಂಚಿಕ ವಿಷಯಂಗಳ ಬಗ್ಗೆ ಕೊರಿತ್ತೆ. ಅವು “ಸಾಕಪ್ಪಾ ಇದರ ಸಹವಾಸ” ಹೇಳಿ ಎದ್ದು ಹೋಯೆಕ್ಕು. ಅಂಬಗ ಎನಗೆ ಭಯಂಕರ ಖುಷಿ ಆವುತ್ತು! ಅವಕ್ಕೆ ಇಷ್ಟ ಇಪ್ಪ ವಿಷಯ ಬಿಟ್ಟು, ಉಳಿದ ವಿಷಯದ ಬಗ್ಗೆ ಕೊರೆವಲೆ ತುಂಬ ಖುಷೀ ಆವುತ್ತು. ಬೇರೆಂತ ವಿಷಯ ಸಿಕ್ಕದ್ರೆ “ನಮೋ ಬ್ರಿಗೇಡ್” ಬಗ್ಗೆ ಬೇಕಾದ್ರೂ ಒಂದು ಗಂಟೆ ಕೊರೆವಲೆಡಿತ್ತು ! ಅದು ಎನ್ನ ಕೆಪ್ಯಾಸಿಟಿ ! (??) ಹೂಂ ಮತ್ತೇ …….. ಮೊಳೆ ಹೊಡೆವುಲುದೆ ಕೆಪ್ಯಾಸಿಟಿ ಬೇಕು !
ಒಂದು ವಿಷಯಲಿ ತುಂಬ ಹುಶಾರಾಗಿರ್ತೆ. ಯಾವದು ಗೊಂತಿದ್ದಾ ? ಎನಗಿಂತ ದೊಡ್ಡ ಬ್ಲೇಡ್ ಪಾರ್ಟಿ ಎದುರಿಗೆ ಬಂತು ಹೇಳಿ ಗ್ರೇಶಿಕೊಳ್ಳಿ. ಬಾರೀ ಬ್ಯುಸಿ ಇಪ್ಪಂಗೆ ನಾಟಕ ಮಾಡಿ ತಪ್ಪಿಸಿಕೊಂಡು ಬಿಡ್ತೆ ! ಎನ್ನ ತಲೆ ಮಾಂತ್ರ ಕೊರೆಸಿಕೊಳ್ತಿಲ್ಲೆ.
ಈಗ ನೋಡಿ ಎಷ್ಟು ಚಂದಕೆ ನಿಂಗಳ ತಲೆ ಕೊರೆದೆ ? ಅನಾಸಿನ್ – ಅಮೃತಾಂಜನ್ ರೆಡಿ ಇದ್ದು. ಬೇಕಾ ?

20 thoughts on “ಮೊಳೆ ಹೊಡೆವಲುದೆ ಕೆಪ್ಯಾಸಿಟಿ ಬೇಕು !

  1. ಎನಗುದೆ ತಲೆತಿಂಬ ಗುಣ ಇತ್ತು ಈಗಲೂ ರಜ್ಜ ಇದ್ದು !ಬರಹ ತುಂಬಾ ಜೀವಂತಿಕೆ ತುಂಬಿ ಇದ್ದು ಲಾಯಕ್ಕು ಆಯಿದು ,ಸುರೇಖಾ ಚಿಕ್ಕಮ್ಮ

    1. ೫೦ % ಇಪ್ಪ ವಿಷಯ. ಮತ್ತೆಲ್ಲ ಬರೇ ಕಲ್ಪನೆ ! ಓದುಗರ ಖುಷಿಗಾಗಿ ! ಮಾತಾಡುವ ಆಸೆಯೆಲ್ಲ ಲೇಖನ ಬರೆದಪ್ಪಗಲೆ ತೃಪ್ತಿ ಆವುತ್ತು.

  2. ಕಲ್ಲನ್ನೂ ಕುಟ್ಟಿ ಮಾತಾಡ್ಸಿ– ಒಹೋ ಜಕ್ಕಣ ಅ೦ಶವೇ ಇರೆಕು.

    1. ಅಪ್ಪಪ್ಪು. ಹಳೇ ಜನ್ಮಲಿ ಜಕಣಾಚಾರಿ ಆನೆಯೋ ಕಾಣ್ತು ! ಒಂದರಿ ‘ಪೂರ್ವ ಜನ್ಮ’ ಕಾರ್ಯಕ್ರಮಕ್ಕೆ ಹೋಗಿಬರೆಕ್ಕು ! ಯಾವ ‘ಗುರು’ ಅಕ್ಕಪ್ಪಾ ?

      1. (ಜಕಣಾಚಾರಿ ಆನೆಯೋ ಕಾಣ್ತು)
        ಆನೆಯಾ? ಅದು ಜಕಣಾಚಾರಿ ಹೇಳಿರೆ ಮನುಷ್ಯ ಅಲ್ಲದಾ?

        1. ಶೆ ! ಈ ಹವ್ಯಕದ ‘ಆನೆ’ ಕಷ್ಟಕ್ಕೆ ಬಂತನ್ನೆ ! ‘ಆನು ಹಿಂದಿನ ಜನ್ಮಲಿ ಜಕಣಾಚಾರಿ ಅಗಿತ್ತಿದ್ದೆನೋ ಎಂಥದೋ’ ಅಂಥ ಚೇಂಜ್ ಮಾಡುವನಾ ? ಇನ್ನು ವೆಂಕಟರಮಣ ಬಾವ ಹೇಳಿದಾಂಗೆ ಎಲೆ ತಿಂಬಲೆ ಸುರುಮಾಡಿರೆ ‘ಪೀಕುದಾನಿ’ ಹಿಡಿವಲೆ ವಿಷ್ಣುವರ್ಧನ ಆಗಿ ಆರು ಸಿಕ್ಕುಗು ? (ಜಕಣಾಚಾರಿ ಸಮಾ ಎಲೆ ತಿಂದುಕ್ಕೊಂಡಿತ್ತಿದ್ದನಡ).

  3. ಓ ಇವ್ವು ‘ಸಮಾ ಬ್ಲೇಡು’ ಹೇಳ್ಸು ಇದರ್ನೇಯೋ!! ಸಮ ಸಮ

    1. ಒಂದು ಲೇಖನ ಓದಿ, ಎನ್ನ ಬಗ್ಗೆ ಇಷ್ಟು ಬೇಗ ಹೀಂಗೊಂದು ಅಭಿಪ್ರಾಯ ತೆಕ್ಕೋಂಬದಾ ? ಎನ್ನ ಇಷ್ಟು ಬೇಗ ಜೆನ ನಂಬುತವಾ ? ಶೆ !

  4. ಅಂತೂ ನಿಂಗಳ ಕಂಡಪ್ಪಗಳೆ ಓಡೆಕ್ಕಾದ ಪರಿಸ್ಠಿತಿ ಬಂತನ್ನೆ!

    1. ಹೆದರೆಡಿ. ಲೇಖನಲಿ ೫೦ % ಮಾಂತ್ರ ಸತ್ಯ. ಆನು ಬಾರಿ ಒಪ್ಪಕ್ಕ ! ನಂಬಿ ಪ್ಲೀಸ್………….

      1. ಆನು ಬಾರಿ ಒಪ್ಪಕ್ಕ ! ನಂಬಿ ಪ್ಲೀಸ್……
        ಜ೦ಪ್ ಹೊಡದ್ದರ ನೋಡಿ ,ಆ
        ಸ೦ಶಯವೇ ಇಲ್ಲೆ.!!!!!!!!!!!!!!

        1. ಸತ್ಯಕ್ಕು ಬೇರೆಯವಿಗೆ ಉಪದ್ರ ಕೊಡ್ತಿಲ್ಲೆ………. ಅಷ್ಟು ಒಪ್ಪಕ್ಕ !

  5. ತಲೆ ಕೊರೆತ್ತವು ಸಿಕ್ಕಿಯಪ್ಪಗ ಅಪ್ಪ ಪಜೀತಿ ಅನುಭವಿಸಿದವನೇ ಬಲ್ಲ. ಚಿಕ್ಕಮ್ಮನ ತಾಕತ್ತು ನೋಡಿ ಯಬ್ಬ ಹೇಳಿ ಆತು. ಚಿಕ್ಕಮ್ಮಂಗೆ ಕೊರೆತ್ತ ಇನ್ನೊಬ್ಬ ಸಿಕ್ಕಿ ಅಪ್ಪಗ ಜಾಗ ಕಾಲಿ ಮಾಡಿದ್ದು ಕೇಳಿ ನೆಗೆ ಬಂತು. ಮುಳ್ಳಿನ ಮುಳ್ಳಿಂದಲೇ ತೆಗೆಕಾಡ. ಮೊಳೆಯ ಮೊಳೆಲೇ ನಿವಾರಣೆ.

    1. ಒಂದರಿ ನೆಗೆ ಬಂತನ್ನೆ – ಸಾರ್ಥಕ ಆತು ಲೇಖನ ಬರದ್ದು ! ಲೇಖನದ ಉದ್ದೇಶ ಅಷ್ಟೆ !

  6. ಯೆಬಾ..ನಿಂಗಳ ಕೆಪ್ಯಾಚಿಟಿಯೇ….

    1. ಇದು ಕಮೆಂಟಾ ? ಹೊಗಳಿಕೆಯಾ ? ಗೊಂತಾಯ್ದಿಲ್ಲೆನ್ನೆ !

  7. ಇದಾ.. ಇದಕ್ಕೆ ಎಂಗಳ ಹೊಡೆಲಿ ” ತಲೆ ತಿಂಬದು” ಹೇಳ್ತವು. ತಿಂಬಲೆ ಬೇರೆಂತದೂ ಸಿಕ್ಕದ್ರೆ…. ಆರಿಂದಾದ್ರೂ ತಲೆ ತಿಂದರಾತು..

    1. ತಿಂಬಲೆ ಬೇರೆದು ಸಿಕ್ಕಿದ್ರೆ ತಿಂದುಕೊಂಡಿಪ್ಪದಾ ? ಎನ್ನ ತೂಕದ ಗತಿ ಎಂಥಪ್ಪಾ ! ಆರಿಂದಾದ್ರು ತಲೆ ತಿಂದರೆ ತೂಕ ವ್ಯತ್ಯಾಸ ಆವುತಿಲ್ಲನ್ನೆ. ಅದೆ ಸೇಫ್ ! ಎನ್ನ ಮರ್ಯಾದೆ ಗತಿ – ಅಧೋಗತಿ !

  8. ಚಿಕ್ಕಮ್ಮ, ನಿಂಗಳ ಹಾಂಗೇ ಆನೂ ತುಂಬಾ ಮಾತಾಡಿಕೊಂಡಿತ್ತಿದ್ದೆ. ಈ” ತಲೆ ತಿಂಬದರ “ನಿಲ್ಲುಸಲೆ ಊರವು ಎನಗೆ “ಎಲೆ ತಿಂಬಲೆ” ಕಲುಸಿದವು. ಅಂದಿಂದ ಊರವೂ, ಆನೂ ನೆಮ್ಮದಿಯಾಗಿದ್ದಿಯೊ. ಹರೇ ರಾಮ.

    1. ಹಾಂಗಾರೆ ಆನುದೆ ‘ಎಲೆ ತಿಂಬಲೆ’ ಸುರು ಮಾಡ್ಡೆಕ್ಕಾ ? ಆಮೇಲೆ ಎನ್ನನ್ನ ‘ಎಲೆ ತಿಂಬ ಚಿಕ್ಕಮ್ಮ’ (ವೀಳ್ಯಾದ ಎಲೆ – ಬಾಳೆ ಎಲೆ ಅಲ್ಲ) ಹೇಳಿ ತಮಾಷೆ ಮಾಡುಗು. ಆನು ಆಮೇಲೆ ಎಲೆ ತಿಂಬದರ ಬಗ್ಗೆ ಲೇಖನ ಬರೆಯೆಕಾವುತ್ತು ! ಸಹಿಸಿಕೊಂಬಲೆಡಿಗೋ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×