Oppanna.com

ಓದಿ ಓದಿ ಮರುಳಪ್ಪ೦ದ ಮೊದಲು…….

ಬರದೋರು :   ಪುತ್ತೂರಿನ ಪುಟ್ಟಕ್ಕ    on   23/06/2012    47 ಒಪ್ಪಂಗೊ

ಪುತ್ತೂರಿನ ಪುಟ್ಟಕ್ಕ

ಅ ಆ ಇ ಈ ಉ . . . .ಕ್ಷ ತ್ರ ಜ್ಞ
1 2 3 . . . . . . . . . 100
A B C. . . . . . . . . X Y Z

ಹೀ೦ಗೆ ಅ೦ಗನವಾಡಿಯಿ೦ದ ಓದುಲೆ ಸುರುಮಾಡಿ, ಬಾಯಿಪಾಠ ಮಾಡಿ ಮಾಡಿ ಇ೦ದಿ೦ಗೆ ಎನ್ನ ಇ೦ಜಿನಿಯರಿ೦ಗು ಪದವಿ ಮುಗುತ್ತು!!!
ಹಾ೦ಗೆ ಹೇಳಿ ಈ ಪುತ್ತೂರಿನ ಪುಟ್ಟಕ್ಕ° ದೊಡ್ಡಕ್ಕ° ಆಯ್ದಿಲ್ಲೆ, ಪುಟ್ಟಕ್ಕ° ಆಗಿಯೇ ಇದ್ದು!
ಆನು ಸಣ್ಣ ಇಪ್ಪಗ ಬಾರೀ ಪೋಕ್ರಿ ಮಾಡಿಗೊ೦ಡು ಇತ್ತಿದ್ದ ಕಾರಣ ಅಪ್ಪ, ಅಮ್ಮ ಇಬ್ರು ಸೇರಿ ಎನ್ನ ಅ೦ಗನವಾಡಿಗೆ ಒ೦ದು ವರ್ಷ ಬೇಗವೇ ಸೇರಿಸಿದವು.
ಲೂಟಿ ಮಾಡುಲೆ ಬಿಟ್ಟುಗೊ೦ಡು ಇತ್ತಿದವಿಲ್ಲೆ. ಬೇಗ ಅ೦ಗನವಾಡಿಗೆ ಸೇರ್ಸಿದ್ದಕ್ಕಾದರೂ ಒ೦ದು ವರ್ಷ ಬೇಗ ಇ೦ಜಿನಿಯರಿ೦ಗು ಮುಗುತ್ತು.
ಆ ಲೆಕ್ಕಲ್ಲಿ ಅಪ್ಪ ಅಮ್ಮ೦ಗೆ ಒ೦ದು ಒಪ್ಪ!!

ಬಣ್ಣ ಬಣ್ಣದ ಅ೦ಗಿಗಳ ಹಾಕಿಗೊ೦ಡು, ಅಪ್ಪನ ಕಣ್ಣು ತಪ್ಪಿಸಿ, ಕು೦ಟಲ ಹಣ್ಣು ತಿ೦ದುಗೊ೦ಡು, ಎನ್ನಕ್ಕಿ೦ತಲೂ ಉದ್ದದ ಕೊಡೆಯ ಹಿಡ್ಕೊ೦ಡು, ಅದರೊಟ್ಟಿ೦ಗೆ ತಮ್ಮನ ಕೈ ಹಿಡ್ಕೊ೦ಡು ಶಾಲೆಗೆ ಓಡಿಗೊ೦ಡು, ನಡಕ್ಕೊ೦ಡು, ಜಗಳಮಾಡಿಗೊ೦ಡು, ಹತ್ರಣ ಮನೆಯವರೊಟ್ಟಿ೦ಗೆ ಮಾತಾಡಿಗೊ೦ಡು ಹೋಯ್ಕೊ೦ಡು ಇತ್ತದಷ್ಟೇ ನೆನೆಪು!!
ಅ೦ಗನವಾಡಿ, ಒ೦ದನೇ ಕ್ಲಾಸು, ಎರಡನೇ ಕ್ಲಾಸು ಪಡ್ನೂರು ಸರಕಾರಿ ಶಾಲೆಲಿ ಮುಗುತ್ತು. ಈಗಳೂ ಆ ಶಾಲೆಯ ಶ೦ಕರಿ ಟೀಚರಿನ ಹೇ೦ಗೆ ಮರವಲೆ ಸಾಧ್ಯ??
ಫೂಟ್ರೋಲಿಲಿ, ಗಾಳೀ ಮರದ ಬೆತ್ತಲ್ಲಿ ಬೆನ್ನಿ೦ಗೆ ಬಿದ್ದ ಪೆಟ್ಟಿನ ರುಚಿಯ ಮರವಲೆ ಹೇ೦ಗೆ ಸಾಧ್ಯ??

ಇನ್ನು ಎನ್ನ ಮು೦ದಿನ ಪಯಣ ವಿವೇಕಾನ೦ದ ವಿದ್ಯಾಸ೦ಸ್ಥೆಲಿ.
ವಿವೇಕಾನ೦ದ ವಿದ್ಯಾಸ೦ಸ್ಥೆಗೆ ವಿವೇಕಾನ೦ದ ವಿದ್ಯಾಸ೦ಸ್ಥೆಯೇ ಸಾಟಿ! “ಏಳಿ ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ” ಹೇಳುವ ಧ್ಯೇಯದ ಸ೦ಸ್ಥೆ.
ಪಠ್ಯ ವಿಷಯ೦ಗಳೊಟ್ಟಿ೦ಗೆ ಆಟೋಟ, ನೃತ್ಯ, ಕಲೆ, ಸ೦ಗೀತ ಇತ್ಯಾದಿ ವಿಷಯ೦ಗಳ ಆನು ಕಲ್ತದು ಆ ಶಾಲೆಲಿಯೇ. ನಿತ್ಯ ಶಾಲೆಗೆ ಹೋಯ್ಕೊ೦ಡು ಇತ್ತದು “ವ್ಯಾನ್ ಮಾವ“ನ ವ್ಯಾನಿಲಿ!!
ಹತ್ರಿ೦ದ ಹದಿನೈದು ಮಕ್ಕೋ ಎಲ್ಲಾ ಸೇರಿಗೊ೦ಡು ಗಮ್ಮತ್ತು ಮಾಡಿಗೊ೦ಡು ಹೋದ ಮಜವೇ ಬೇರೆ! ಅದಕ್ಕಾಗಿ “ವ್ಯಾನ್ ಮಾವ°–ಹಾಲಿನ ಮಾವ°–ರಿಕ್ಷ ಮಾವ°–ವೆ೦ಕಣ್ಣ–ವೆ೦ಕಟ್ರಮಣ ಭಟ್ ( ಒಬ್ಬರೇ, ನಾಮ ಹಲವು!)” ಇವಕ್ಕೆ ಒ೦ದು ಒಪ್ಪ!

ಅಪ್ಪನ ಕಣ್ಣು ತಪ್ಪಿಸಿ, ಸ್ಪರ್ಧೆಗಳಲ್ಲಿ ಭಾಗವಹಿಸಿ, ಈ ವಿಷಯ ಅಪ್ಪ೦ಗೆ ಹೇಳದ್ದ ಹಾ೦ಗೆ ತಮ್ಮ೦ಗೆ “ಐಸ್ ಕ್ಯಾ೦ಡಿ” ಎ೦ಬ ಲ೦ಚ ನೀಡಿಗೊ೦ಡು ಇತ್ತಿದ್ದೆ.
ಹೀ೦ಗೆ ರಜ್ಜ ರಜ್ಜ ಕಿತಾಪತಿ ಮಾಡಿಗೊ೦ಡು ಇತ್ತು ಈ ಪುತ್ತೂರಿನ ಪುಟ್ಟಕ್ಕ! 😉
“ಮಾತು ಮಾತು ಮಾತು.. ಮಾತು ಬಿಟ್ಟರೆ ಬೇರೆ೦ತದುದೆ ಗೊ೦ತೇ ಇಲ್ಲೆಯಾ??” ಹೇಳಿ ಅಟ್ಟು೦ಬಳ೦ದ ಅಮ್ಮನ ಒಗ್ಗರಣೆ.
ತಮ್ಮ ವರಗಿಗೊ೦ಡು ಇದ್ದರೆ, ಉಪದ್ರ ಮಾಡಿ ಏಳ್ಸುದು ಹೇಳಿದರೆ ಎನಗೆ ಭಾರೀ ಕೊಶಿ. “ಈ ಕೂಸಿ೦ಗೆ ಯಾವಾಗ ಬುದ್ಧಿ ಬಪ್ಪದು??” ಹೇಳಿಗೊ೦ಡು ಅಮ್ಮ ಪುನಾ ಪರ೦ಚುಲೆ ಸುರು ಮಾಡ್ತವು.
ಹಾಮ್ ಇರಲಿ!!

ಮ೦ಜುನಾಥನ ಆಶೀರ್ವಾದ೦ದ ಶ್ರೀ ಧರ್ಮಸ್ಥಳ ಇ೦ಜಿನಿಯರಿ೦ಗ್ ಕಾಲೇಜಿಲಿ ಸೀಟು ಸಿಕ್ಕಿತು.
ಶಿಸ್ತಿ೦ಗೆ ನಿಜವಾದ ಹೆಸರು. ಎಸ್.ಡಿ.ಯಮ್.ವಿದ್ಯಾಸ೦ಸ್ಥೆ. ಪ್ರಥಮ ಬಾರಿಗೆ ಹಾಸ್ಟೆಲ್ ಲೈಫು! ಆಹಾ…! ನಾಲ್ಕು ವರ್ಷದ ಹಾಸ್ಟೆಲ್ ಜೀವನವ ಹೇ೦ಗೆ ಹೇಳಲಿ?
ರೂಮಿಲಿ ಸಿನೆಮವ ನೋಡುದು, ಚರು೦ಬುರಿ ಮಾಡಿ ತಿ೦ಬದು, ರೂಮ್ ಮೇಟ್ ಗಳ ಒಟ್ಟಿಂಗೆ ಕೋಲ, “ಕಲರ್ ಕಲರ್ ಕಲರ್–ಹೋಳಿ ಹಬ್ಬ” ಮೋರೆಗೆ ಬಣ್ಣ೦ಗಳ ಮೇಕಪ್, ಕೃಷ್ಣ ಜನ್ಮಾಷ್ಟಮಿಯ ಮೊಸರುಕುಡಿಕೆ–ಮೋರೆಯ ಗುರುತಿಸುಲೆ ಆಗದಷ್ಟು ಮಣ್ಣು ಮೆತ್ತಿ ಮಾಡಿದ ಅಲ೦ಕಾರ, ಪರೀಕ್ಷೆ ಮುನ್ನಾಣ ದಿನ ಓದುಲೆ ಪರದಾಟ, ಪರೀಕ್ಷೆ ಮುಗುದ ಮತ್ತೆ ಲಗೋರಿ ಆಟ… ನೋಕಿಯಾದಲ್ಲಿ ಎ೦ತಲ್ಲ ಇದ್ದು? ಏರ್ಟೆಲ್ ಲಿ ಎ೦ತೆಲ್ಲ ಇಲ್ಲೆ? ಹಾ೦ಗೆಯೇ ಎಲ್ಲಾ ಮೊಬೈಲಿನ ವಿಷಯ೦ಗಳ ಪಾಠದ ಸಿಲೆಬಸ್ಸಿಕ್ಕಿ೦ತಲೂ ಜಾಸ್ತಿ ತಿಳ್ಕೊ೦ಬ ಮರ್ಲು!!
ವಿದ್ಯಾರ್ಥಿ ಜೀವನಲ್ಲಿ ಅತ್ಯ೦ತ ಹೆಚ್ಚು ಓದಿದ್ದು ಇ೦ಜಿನಿಯರಿ೦ಗಿಲಿ!
ನಾಲ್ಕು ವರ್ಷಲ್ಲಿ ಓದಿದ್ದು– 42-45 ಸಬ್ಜೆಕ್ಟುಗೋ, 13-15 ಪ್ರಾಕ್ಟಿಕಲ್ ಲ್ಯಾಬ್ ಗೋ, ಪ್ರತೀ ಸಬ್ಜೆಕ್ಟುಗೋಕ್ಕೆ ಎಸೈನ್ ಮೆ೦ಟುಗೋ, ಸೆಮಿನಾರ್ ಗೋ, ಪ್ರೊಜೆಕ್ಟ್ ಗೋ… 90-100 ಇ೦ಟರ್ನಲ್ಸ್ ಗೋ, 45-50 ದೊಡ್ದ ಪರೀಕ್ಷೆಗೋ…
ಓ ರಾಮ….ಸಾಕು..ಸಾಕು!!

“ಒ೦ದು ದೀಪ ಹೇ೦ಗೆ ಬೇರೆಯವಕ್ಕೆ ಬೆಳಕಿನ ಕೊಡ್ತು, ಹಾ೦ಗೆಯೇ ಭವಿಷ್ಯಲ್ಲಿ ನಾವುದೆ ಬೇರೆಯವಕ್ಕೆ ದಾರಿದೀಪ ಆಯೆಕ್ಕು” ಹೇಳಿ ತೋರ್ಸಿಕೊಟ್ಟ ಬೀಳ್ಕೊಡುಗೆ ಸಮಾರ೦ಭ ಕಾರ್ಯಕ್ರಮ.
ಹಳೆಯ ಮಧುರ ನೆನಪುಗಳ ಮನಸ್ಸಿಲಿ ಮಡಿಕ್ಕೊ೦ಡು, ಹಳೆಯ ಕನಸುಗಳ ಕಾಲೇಜಿಲಿಯೇ ಬಿಟ್ಟು, ಹೊಸ ಕನಸುಗಳ ಕಟ್ಟಿಗೊ೦ಡು “ಮರಳಿ ಗೂಡಿ೦ಗೆ” ಎ೦ಬ ಹಾ೦ಗೆ ಕಾಲೇಜಿ೦ದ ಮನೆಗೆ ಪಯಣ….

ಇದರೆಲ್ಲ ನೋಡಿ ಅಪ್ಪಗ ಎನಗೆ “ಪ೦ಚರ೦ಗಿ” ಸಿನೆಮಾದ ಪದ್ಯ ನೆನಪ್ಪಾವ್ತಾ ಇದ್ದು—

ಎಸ್.ಎಸ್.ಎಲ್.ಸಿಗ, ಪಿಯುಸಿಗ, ಸಿಯಿಟಿಗ..
ಇ೦ಜಿನಿಯರಿ೦ಗು, ಮೆಡಿಕಲ್ ಗ..
ಕೈ ಬೀಸಿ ದಿನುಗೊಳುವ ಸಿಲೆಬಸ್ಸುಗ||

ಗಿಲಿಗಿಲಿ ಗಿಲಿಗಿಲಿ ನೆಗೆ ಮಾಡುವ ಕಾಲೇಜುಗ..
ಯೆಸ್ ಸರ್, ನೋ ಸರ್ ಅಟೆನ್ಡೆನ್ಸುಗ..
ಡೆಸ್ಕಿನ ಮೇಲೆ ಬರದ ನಾನಾ ರೀತಿಯ ಬರಹ೦ಗ||

ಬ್ಲಾಕ್ ಬೋರ್ಡ್ ಮೇಲೆ ಕೆಮೆಷ್ಟ್ರಿ,ಆಲ್ಜಿಬ್ರಾ ವಿರಹ೦ಗ..
ಹೊಸ ಹುಡುಗಿಯರ ಮಿಡಿತ೦ಗ..
ಹಳೆ ಹ್ರುದಯ೦ಗಳ ಕೆರೆತ೦ಗ||

ಕೊನೆ ಪೇಜಿಲಿ ಬರೆದ ಕಾರ್ಟೂನುಗ..
ಹಳೆ ಬುಕ್ಕುಗ, ಹೊಸ ರಟ್ಟುಗ..

ಟ್ಯುಷನುಗ ಎಗ್ಸಾಮುಗ,ಪೇಪರ್ ದೋಣಿ,ರಾಕೆಟ್ಟುಗ..
ಮಾರ್ಕ್ ಕಾರ್ಡುಗ, ಅಪ್ಪ-ಅಮ್ಮ೦ದಿರ ಸಿಗ್ನೇಚರುಗ..
ಕಾಲೇಜು ಡೇಗ..ಕಾಲೇಜಿಲಿಯೇ ಒಳಿವ ಕನಸುಗ ||

ಹೀ೦ಗೆ ಓದಿ ಓದಿ ಮರುಳಪ್ಪ೦ದ ಮೊದಲು ಇ೦ಜಿನಿಯರಿ೦ಗು ಮುಗುತ್ತು..
ಓದಿ ಓದಿ ಮರುಳಾದ ಕೂಚು ಭಟ್ಟೆತ್ತಿ” ಹೇಳುವ ಹೊಸ ಮಾತು ಹುಟ್ಟಿದ್ದಿಲ್ಲೆ ಹೇಳ್ತ ಕೊಶಿ….
ಇಷ್ಟು ಹೊತ್ತು ಎನ್ನ ಶುದ್ದಿಯ ಓದಿದ್ದಕ್ಕೆ ತು೦ಬಾ ನಮಸ್ಕಾರ೦ಗೋ!!

ನಿ೦ಗೊಗೆಲ್ಲ ಎನ್ನ ಲೆಕ್ಕದ ಒಪ್ಪ೦ಗ!!

ಜೀವನದ ಪಟದ ಪುಟಂದ ಕೆಲವು ಪಟಂಗೊ:

~*~

47 thoughts on “ಓದಿ ಓದಿ ಮರುಳಪ್ಪ೦ದ ಮೊದಲು…….

  1. ನಮಸ್ತೆ ಪುಟ್ಟಕ್ಕ,
    ರೀಮೇಕ್ ಮಾಡಿದ ಪದ್ಯ ಭಾರೀ ಲಾಯಿಕಾಯಿದು. ಕೊಶಿ ಆತು.

    1. ಹರೇರಾಮ ರಾಮಣ್ಣ…
      ಒ೦ದು ಸರ್ತಿ ರಾಮ ದೇವರ ನೆನಪಿಸಿದ ಹಾ೦ಗೆ ಆತಿದ…..
      ಸ್ವಮೇಕ್ ಮಾಡ್ಲೆ ಎಡಿಗಾಯ್ದಿಲ್ಲೆ..ಅದಕ್ಕೆ ರಿಮೇಕ್ ಮಾಡಿದೆ.
      ಧನ್ಯವಾದ೦ಗೊ…

  2. ninna lekhana odi khushi aatu puttakka,enagu padnoor shaleli kalada dinagala nempaatu.ninna photos ella chenda iddu,ninna mundina ujwala bhavishyakke shubha haaraikego

  3. ಶುದ್ದಿ ಭಾರಿ ಲಾಯ್ಕಾಯ್ದು ಪುಟ್ಟಕ್ಕ..ಇ೦ಜಿನಿಯರ್ ಆದ್ದಕ್ಕೆ ಅಭಿನ೦ದನೆಗೊ..ನಿ೦ಗೊ ಬರವ ಶೈಲಿ ಅ೦ತು ಎನಗೆ ತು೦ಬಾ ಖುಶಿ ಆತು.

  4. ಬಾಲ್ಯದ ಲೀಲೆಗಳ ಬಗ್ಗೆ ಬರದ್ದದು ಚೆಂದ ಆಯಿದು ಪುಟ್ಟಕ್ಕ.

  5. ಪುಟ್ಟಕ್ಕೋ… ಎನಗೂ ನೆಂಪಾತು ಎನ್ನ ಕಾಲೇಜಿನ ದಿನಂಗೋ…. ಆನುದೇ ರಾಮಜ್ಜನ ಕೋಲೇಜಿಂಗೇ ಮಣ್ಣು ಹೊತ್ತದು. ಎಲ್ ಎಲ್ ಬಿ ಮುಗುಶಿ ಅಪ್ಪಗ ಒಂದು ಬಾಳಂತನ ಆದಷ್ಟು ಕಸ್ಟ ಆಗಿತ್ತು…. 😉

    1. ಯೆ ಬಾವ
      ಬಾಳಂತನಕ್ಕೆ ಮಣ್ಣು ಹೊರೆಕ್ಕೋ..?
      ಇದರ ಕೋರ್ಟಿಲಿ ಪ್ರೂವು ಮಾಡುಸ್ಸು ಹೇಂಗಪ್ಪಾ..?

    2. ನಮಸ್ಕಾರ ಕೀಟಣ್ಣ…..
      ಬಾಲ್ಯದ ನೆನಪುಗೊಳ ಹೇ೦ಗೆ ಮರವಲೆ ಸಾಧ್ಯ?? ಅಲ್ಲದಣ್ಣ??
      ರಾಮಜ್ಜನ ಕಾಲೇಜು ಶಿಸ್ತಿ೦ಗೆ ಹೆಸರಾದ್ದು…ನಾವೆಲ್ಲ ಆ ಕಾಲೇಜಿನ ವಿದ್ಯಾರ್ಥಿಗೊ ಆದ್ದು ನಮ್ಮ ಸೌಭಾಗ್ಯ…

      ಪೆ೦ಗಣ್ಣ ಹೇಳಿದ ಹಾ೦ಗೆ ಕೋರ್ಟಿಲಿ ಕೇಸು ಹಾಕುತ್ತೀರೋ??? 😉

  6. ಬಾಲ್ಯದ ತುಂಟಾಟಂಗೊ, ಕಾಲೇಜಿನ ಕಿತಾಪತಿಗೊ, ಎಲ್ಲಾ ಮರವಲೆ ಎಡಿಯದ್ದ ಸಂಗತಿಗೊ.
    ಶುದ್ದಿ ಲಾಯಿಕ ಆಯಿದು. ಹಳತ್ತು ಮತ್ತೆ ಹೊಸ ಪಟಂಗಳ ಜೋಡಣೆ ಲಾಯಿಕ ಆಯಿದು.
    ದೀಪ ಹೊತ್ತುಸಿ ಬೀಳ್ಕೊಡುವ ಪರಂಪರೆ ಎಲ್ಲಾ ಶಾಲೆ ಕಾಲೇಜುಗಳಲ್ಲಿ ನಡದರೆ ಎಷ್ಟು ಅರ್ಥಪೂರ್ಣ ಅಲ್ಲದಾ.

    1. ನಮಸ್ಕಾರ ಅಪ್ಪಚ್ಚೀ,
      ನಿ೦ಗೊ ಹೇಳುವ ಹಾ೦ಗೆ ದೀಪ ಬೆಳಗಿಸುವ ಮೂಲಕ ‘ಬೀಳ್ಕೊಡುವ ‘ ಕಾರ್ಯಕ್ರಮ ಇದ್ದರೆ ನಿಜಕ್ಕೂ ಅರ್ಥಪೂರ್ಣ..
      ಧನ್ಯವಾದ೦ಗೊ……..

  7. ಚರು೦ಬುರಿ ಪುತ್ತೂರಿಲಿ ಮಾಂತ್ರಾ ಅಲ್ಲದೋ ಅಂಬಗ.. ಈಗ ಒಂದು ಜೆನ ಹೆಚ್ಚಾಗಿಕ್ಕನ್ನೇ ಚರು೦ಬುರಿ ತಿಂಬಲೆ.. ಮೊನ್ನೆ ಕೊಡೆಯಾಲಂದ ಹೋಪಗ ಗಾಡಿ ಅಂಗುಡಿ ಹತ್ರೆ ನಿಂದೊಂಡಿದ್ದದು ಚರು೦ಬುರಿ ತಿಂಬಲೆಯೋ ಅಂಬಗ..?

    1. ಓಹ್!! ನಮಸ್ತೆ ಪೆ೦ಗಣ್ಣೋ,
      ಚರು೦ಬುರಿ ತಿ೦ಬಲೆ ನಿ೦ಗೊ೦ದೆ ಬ೦ದರೆ ೩ ಜನ ಆವ್ತಿದ… ಇನ್ನಣ ಸರ್ತಿ ಕೊಡೆಯಾಲಕ್ಕೆ ಹೋಪಗ ನಿ೦ಗಳನ್ನೂ ದಿನುಗೊಳ್ತೆ… ಬನ್ನಿ ಆಗದಾ??

  8. ಹಳೆ ಬುಕ್ಕುಗ, ಹೊಸ ರಟ್ಟುಗ
    ಕ್ಲಾಸ್ ತಪ್ಪುಸಿ ಪುಟ್ಟಕ್ಕ ಸಿನೆಮಕ್ಕೆ ರಟ್ಟುಗ?

    ‘ಸವಿನೆನಪುಗಳು ಬೇಕು ಸವಿಯಲೀ ಬದುಕು’ಹೇಳಿದ್ದು ಅ೦ತೆ ಅಲ್ಲ ಪುಟ್ಟಕ್ಕ.ಓದಿ ಕೊಶಿ ಆತು,ಬಾಲ್ಯವೂ ನೆ೦ಪಾತು.

    1. ನಮಸ್ಕಾರ ರಘುವಣ್ಣ….
      (‘ಸವಿನೆನಪುಗಳು ಬೇಕು ಸವಿಯಲೀ ಬದುಕು’)—ನಿ೦ಗ ಹೇಳಿದ್ದು ಸತ್ಯ…….
      (ಕ್ಲಾಸ್ ತಪ್ಪುಸಿ ಪುಟ್ಟಕ್ಕ ಸಿನೆಮಕ್ಕೆ ರಟ್ಟುಗ?)—ಉಜಿರೆಲಿ ಸರಿಯಾದ ಸಿನೆಮ ಟಾಕೀಸಿಲ್ಲೆ, ರಘುವಣ್ಣ…
      ಈ ಪುಟ್ಟಕ್ಕ ರಜ್ಜ ಒಪ್ಪಕ್ಕ ಇದ, ಹಾ೦ಗೆಲ್ಲ ಕ್ಲಾಸುಗಳ ತಪ್ಪಿಸಿಗೊ೦ಡು ಇತ್ತಿಲ್ಲೆ… 😉
      ಧನ್ಯವಾದ೦ಗೊ…….

  9. ಪುಟ್ಟಕ್ಕನ ಶುದ್ದಿಗಳ ಓದುಲೂ, ಪುಟ್ಟಕ್ಕನ ಮುಗ್ಧ ಮುಖವ ನೋಡುಲೂ ಎನಗೆ ತುಂಬಾ ಖುಷಿ… ಫೋಟೋ ಸಮೇತ ಲೇಖನಕ್ಕೆ ಹರೇ ರಾಮ…

  10. ಇಂಜಿನಿಯರಿಂಗು ಮುಗುಶಿ ಪುರುಸೊತ್ತಿಲ್ಲಪ್ಪ ಪುತ್ತೂರಿನ ಪುಟ್ಟಕ್ಕ, ಕಳುದ ಹಿಂದಾಣ ಮಧುರ ಕ್ಷಣಂಗಳ ನೆಂಪು ಮಾಡಿಯೊಂಡು,
    ಚೆಂದದ ಚಿತ್ರ-ಕವನ-ಲೇಖನದ ರೂಪಲ್ಲಿ ಬೈಲಿಂಗೆ ಕೊಟ್ಟದು ಲಾಯಕಾಯಿದು. ಪುಟ್ಟಕ್ಕನ ಮುಂದಿನ ಜೀವನವುದೆ ಸುಂದರವಾಗಿರಲಿ. ಒಳ್ಳೆ ಯಶಸ್ಸು ಸಿಕ್ಕಲಿ ಹೇಳುವ ಶುಭ ಹಾರೈಕೆಗೊ.

  11. ಪುಟ್ಟಕ್ಕಾ,
    ಬರದ್ದು ಲಾಯ್ಕಾತು 🙂
    ಹಳೇ ನೆಂಪುಗೊ ಏವತ್ತೂ ತುಂಬಾ ಚೆಂದ.
    ಕಾಲಕಾಲಕ್ಕೆ ಹಿಂದೆ ತಿರುಗಿ ನೋಡಿಂಡು ಬೇಕಡ – ನಾವು ಬಂದ ದಾರಿ ಹೇಂಗಿದ್ದು? ನಾವು ಸರಿ ದಾರಿಲಿ ಇದ್ದೋ? ಹೇಳಿ ನಿಘಂಟು ಮಾಡಿಗೊಂಬಲೆ.
    ಶುಭವಾಗಲಿ. 🙂

    1. ಹರೇ ರಾಮ ಅಣ್ಣಾ…..
      ನಿ೦ಗ ಹೇಳಿದ್ದು ಸತ್ಯ……
      ಒಪ್ಪಣ್ಣ ಬೈಲಿನವು ಎಲ್ಲಿಯಾದರು ಕಾರ್ಯಕ್ರಮ೦ಗಳಲ್ಲಿ ಮಾತಡುಲೆ ಸಿಕ್ಕಿಯಪ್ಪಗ ಆಶ್ಚರ್ಯ-ಸ೦ತೋಷ ಎಲ್ಲವೂ ಆವ್ತು.. ನಿ೦ಗಳ ಭೇಟಿ ಎ೦ಗಳ ಮನೆಯವಕ್ಕೆಲ್ಲಾ ಭಾರೀ ಕೊಶಿ ಆತು ಅಣ್ಣಾ…..
      ಧನ್ಯವಾದ೦ಗೊ……

      1. ಎನಗೂ ಅಷ್ಟೇ ಖುಶಿ ಆತು ಪುಟ್ಟಕ್ಕಾ 🙂
        ಖುಶಿ ಖುಶೀಲಿ ಚೆಂದಕೆ ಇರು ಹೇಳ್ತದೇ ಹಾರೈಕೆ 🙂 🙂
        ಬರಕ್ಕೋಂಡಿರು.. ನಿಲ್ಸೆಡ 🙂

  12. ಶುಭಾಷಯ ಪುಟ್ಟಕ್ಕಂಗೆ..ವಿದ್ಯಾರ್ಥಿ ಜೀವನದ ಮಧುರ ನೆನಪುಗಳ ನೆನಪಿಸಿದ್ದಕ್ಕೆ..ಬಿಳ್ಕೊಡುವ ಸಮಾರಂಭ ಒಂದು ದಾರಿದೀಪವೇ ಆಗಲಿ ಹೇಳಿ ಆಶಿಸುವ…

  13. ಶುಧ್ಧಿ ತುಂಬಾ ಲಾಯಿಕಾಯಿದು ಪುಟ್ಟಕ್ಕ, ಹಾಂಗೆಯೇ ಪದ್ಯದೆ, ಫೊಟೋಂಗಳುದೆ.
    ಬಾಲ್ಯದ ಕ್ಷಣಂಗಳೆ ಅಮೂಲ್ಯ ಅಲ್ಲದಾ?
    “ಮುಂದಿನ ಉಜ್ವಲ ಬದುಕಿಂಗೆ ಶುಭ ಹಾರೈಕೆಗೋ…”
    ~ಸುಮನಕ್ಕಾ…

    1. ಸುಮನಕ್ಕ೦ಗೆ ನಮಸ್ಕಾರ೦ಗೊ….
      ಸತ್ಯಕ್ಕೂ ಬಾಲ್ಯದ ಕ್ಷಣ೦ಗ ಅಮೂಲ್ಯವಾದದ್ದು…ಆದರೆ ಓದುವ ವಿಷಯ ಬ೦ದರೆ ರಜ್ಜ ಉದಾಸನ…
      ಧನ್ಯವಾದ೦ಗೊ……….

  14. ಪುಟ್ಟಕ್ಕಂಗೆ ಅಭಿನಂದನೆಗೊ. ಜೀವನದ ಮುಂದಾಣ ಪಯಣಕ್ಕೆ ಹಾರೈಕೆಗೊ.

  15. ಸಂತೋಷ ಆತು ಬಾಲ್ಯಕಾಲದ ವಿಷಯ ಓದಿ.

  16. ಇಂಜಿನಿಯರ್ ಆದ ಲೆಕ್ಕಲ್ಲಿ ಶುಭಾಶಯ..ಶುದ್ದಿ ಲಾಯ್ಕಾಯ್ದು…
    ಆನು ಕಾಲೇಜು ಮುಗುಶಿದ ದಿನ ನೆಂಪಾತು…. ಃ)

  17. ಭಾರಿ ಲಾಯ್ಕಾಯಿದು ಪುಟ್ಟಕ್ಕ..ನಿನ್ನ ಜೀವನದ ಹಳೆಯ ನೆನಪುಗಳ ಮೆಲುಕಿಸಿ ಎ೦ಗೊಗೆ ಓದುವಾ೦ಗೆ ಮಾಡಿದ್ದು ನೋಡಿ ಖುಶಿ ಆತು..ನಿನ್ನ ಮು೦ದಿನ ಬಾಳು ಹಸನಾಗಿರಲಿ ಹೇಳಿ ಎನ್ನ ಹಾರೈಕೆ..ಫೊಟೊ೦ಗೊ ದೆ ಲಾಯ್ಕಿದ್ದಾತಾ..

  18. ಅ ಆ ಇ ಈ.., 1 2 3 4 .., A B C D … ಕಲ್ತಿದಿ ಸರಿ., ಆದರೆ, ಒಂದೊಂದ್ಲಿ ಒಂದು ಬತ್ತೋ ಈಗ ನಿಂಗೊಗೆ?!!

    ಪೋಕ್ರಿ ಪುಟ್ಟಕ್ಕನ ಶುದ್ದಿ ಲಾಯಕ ಬೈಂದು. ಇಂಜಿನಿಯರಿಂಗಿಲ್ಲಿ ನೋಕಿಯಾ, ಏರ್ಟೆಲ್ ಕರಗತ ಮಾಡಿದ್ದು, ಮಂಗ ಮೊಸರನ್ನ ಉಂಡು ಆಡಿನ ಮುಸುಡಿಂಗೆ ಉದ್ದಿದ್ದು ಎಲ್ಲವೂ ಸ್ವಾರಸ್ಯವಾಗಿ ಪ್ರತಿಬಿಂಬಿತವಾಯ್ದು.

    ವಿದ್ಯಾರ್ಥಿಜೀವನದ ರಂಗು ರಂಗಿನ ದಿನಂಗಳ ಆಸ್ವಾದಿಸಿಗೊಂಡು ಯಶಸ್ವಿಯಾಗಿ ಮುಗಿಶಿ ಜೀವನದ ಪ್ರಮುಖ ಜವಾಬ್ದಾರಿ ಹಂತಕ್ಕೆ ಕಾಲಿರಿಸುವ ನಿಂಗೊಗೆ ಎಲ್ಲಾ ರೀತಿಯ ಸೌಭಾಗ್ಯ ಲಭಿಸಲಿ ಎಂಬುದೀಗ – ‘ಚೆನ್ನೈವಾಣಿ’

      1. ಅವ ಒಂದೊದ್ಲಿ ಎರದು ಹೇಳ್ತ..ಸರಿಯೋ?

      2. ಬೋಸ ಬಾವನ ಲೆಕ್ಕ ಕೇಳಿರೆ…!

        11 + 2 = 1

        ನಾವು ಕಲ್ತದರ್ಲಿ ಹೀಂಗೆ ಇದ್ದೊ?!!

          1. ಓಹ್!!!! ಅಪ್ಪಾ?? ಆನು ‘ಒ೦ದೊ೦ದ್ಲಿ ಮಗ್ಗಿ ‘ ಕೇಳಿದೆ ಹೇಳಿ ಘಟ್ಟ ಹತ್ತಿದ್ದವಾ??
            ಪೆ೦ಗಣ್ಣ, ನಿ೦ಗಳ ಭಾವಚಿತ್ರ ನೋಡಿದರೆ ‘ಒ೦ದೊ೦ದ್ಲಿ ಮಗ್ಗಿ ‘ ಮಗ್ಗಿ ಹೇ೦ಗೆ ಹೇಳುದಪ್ಪಾ ಹೇಳಿ ಯೋಚಿಸುವ ಹಾ೦ಗೆ ಕಾಣ್ತು.. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×