Oppanna.com

ಪಾರುವ ಪಂಚಾತಿಗೆ

ಬರದೋರು :   ತೆಕ್ಕುಂಜ ಕುಮಾರ ಮಾವ°    on   28/06/2011    8 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಆಫೀಸಿಂದ ಬಪ್ಪಗ ಇಂದು ರಜ್ಜ ತಡವಾಗಿ ಹೋತು.
ಯೇವಗಳೂ ಆರುವರೆ ಒಳ ಮನೆ ಮುಟ್ಟುತ್ತೆ. ಅಕೇರಿಯಾಣ ಮೀಟಿಂಗು ಮುಗುಶಿ ಮನೆ ಮುಟ್ಟುವಗ ಘಂಟೆ ಒಂಬತ್ತು; ಪಾರು ಎನಗೆ ಚಾಯ ಮಾಡಿ ಮಡಿಗಿತ್ತಿದ್ದು – ಸ್ಟೋವಿನ ಮೇಲೆ ಪಾತ್ರಲ್ಲಿ ಹಾಂಗೆ ಮುಚ್ಚಿಗೊಂಡು ಕಂಡತ್ತು.
“ತಡ ಆವುತ್ತರೆ ಫೋನು ಮಾಡ್ಲೆ ಅರಡಿಯದ ? ಆನು ನಿಂಗಳ ಯೇವತ್ತರಾಣ ಹೊತ್ತಿಂಗಪ್ಪಗ ಚಾಯಕ್ಕೆ ಮಡಿಗಿದ್ದೆ, ಬಂದ ಕೂಡ್ಲೆ ಕುಡಿವಲಕ್ಕು ಗ್ರೇಶಿಗೊಂಡು. ಇನ್ನು ಈಗ ಕುಡಿವಲಿದ್ದ..?”
“ಹೂಂ..ಕುಡಿವದು. – ಚಾಯ ಎಷ್ಟೊತ್ತಿಂಗೆ ಕೇಳಿರೂ ಬೇಡ ಹೇಳಿ ಆಗ.”

ಹಾಂಗೆ ಕಪ್ಪಿಲಿ ಎರೆಶಿ ತಂದು ಕೊಟ್ಟತ್ತು ಪಾರು, ಪಾತ್ರವ ತೊಳವಲೆ ಮಡಿಗಿಕ್ಕಿ.

ತೊಡಿಗೆ ತಾಗಿಸಿದ್ದರಲ್ಲಿಯೇ ಎನಗೆ ತಣ್ಕಟೆ ಹೇಳಿ ಅತು. ಹಾಂಗೇ ವರದಿ ಒಪ್ಪಿಸಿದೆ.
ಇನ್ನೊಂದು ಪಾತ್ರವ ತೆಕ್ಕೊಂಡು ಕೂದಲ್ಲಿಗೆ ಬಂದು ಕಪ್ಪಿಲಿ ಇದ್ದ ಚಾಯವ ಬಗ್ಗಿಸಿ ಅಡಿಗೊಳಂಗೆ ಹೋತು. ಹೆಜ್ಜೆಯ ಭಾರಕ್ಕೆ ಗೊಂತಾಯಿದು ಎನಗೆ, ಪಾರುಗೆ ಪಿಸುರು ಬಯಿಂದು ಹೇಳಿ.
ಈಗ ಮಾತಾಡಿಸಿದರೆ ಕಾರ್ಯ ಕೆಡುಗು. ಆನು ತಳಿಯದ್ದೆ ಕೂದೆ.

“ಇದಾ ಬೆಶಿ ಬೆಶೀ… ಕುಡಿರಿ. ಎನಗೆ ರಟ್ಟೆಗೆ ವ್ಯಾಯಾಮ ಕಮ್ಮಿ ಅಪ್ಪದಕ್ಕೆ ಇದೆಲ್ಲ… ಎರಡೆರಡು ಪಾತ್ರಂಗ ತೊಳವಲೆ ಮಾಡುದು.”
“ಒಳ್ಳೆ ಪಂಚಾತಿಗೆ ಆತನ್ನೆ ಪಾರೂ.. ಚಾಯ ಬೆಶಿ ಬೆಶೀ ಕುಡುದರೇ ಅಲ್ಲದ ಅದರ ರುಚಿ ಇಪ್ಪದು!”.
ಅಷ್ಟು ಹೇಳಿದ್ದೆ ಎನ್ನದು ತಪ್ಪಾಗಿ ಹೋತು.!
“ನಿಂಗೊಗೆ ‘ಐಸ್ ಟೀ’ ಹೇಳಿಗೊಂಡು ತಣ್ಕಟೆ ಚಾಯ ಕುಡಿವಲೆ ಲಾಯಿಕ್ಕಾಯಿದು, ಅದೂ ಒಂದಷ್ಟು ಪೈಸೆ ಮುಗುಶಿ, ಮನೆಲಿ ಚಾಯ ರಜ್ಜ ತಣುದರೆ ತಣ್ಕಟೆ ಹೇಳಿ ಆಪ್ಪದಲ್ಲದಾ..?”

“ರಜ್ಜ ಅಲ್ಲ ಪೂರ ತಣುದ್ದು” ಹೇಳಿ ನಾಲಗೆ ಕೊಡೀ೦ಗೆ ಬ೦ದರೂ ಆನು ಬಾಯಿ ಬಿಟ್ಟಿದಿಲ್ಲೆ.– ಸುಮ್ಮನೆ ಮಾತು ಮುಂದುವರಿಗಲ್ಲದ್ದೆ ಎಂತ ಗುಣ ಇಲ್ಲೆ ಅದರಂದ.
ಗಾಂಧಾರಿಯೇ,
ಸಮಯ ಕಳೆಯದ್ದೆ ಖಾರ ಇಳಿತ್ತಿಲ್ಲೆ.

ಪಾರುಗೆ ಕೆಲವು ಸಂದರ್ಭಲ್ಲಿ ಮರವದು ಇರ್ತು, ಸುಮಾರು ಸರ್ತಿ ಚಾಯಕ್ಕೆ ಸಕ್ಕರೆ ಹಾಕುಲೂ ಮರೆಗು.
ಹಾಂಗೇಳಿ, ಆನು ಮಾಡಿದ ಎಲ್ಲಾ ಸಾಹಸಂಗಳ ಇದುವರೆಗೆ ಮರದ್ದದಿಲ್ಲೆ, ಮದುವೆಯ ಲಾಗಯ್ತಿಂದಲೂ. ಸರಿಯಾದ ಸಂದರ್ಭಲ್ಲಿ ಬೇಕಪ್ಪಗ ನೆಂಪಿಂಗೆ ಬಪ್ಪಲೂ ಬತ್ತು.

ಈ ಕತೆಯೂ ಹಾಂಗೆ, ಸುಮಾರು ಸಮಯಕ್ಕೆ ಮದಲಾಣದು.
ಈಗಾಣ ಮನೆಗೆ ಬಂದ ಶುರುವಿಲಿ, ಒಂದರಿ ತರಕಾರಿ ತಪ್ಪಲೆ ಇಬ್ರೂ ಒಟ್ಟಿಂಗೆ ಹೆರಟೆಯ°. ಮಾರ್ಗದ ಎರಡೂ ಹೊಡೆಲಿ ಟೈಲ್ಸ್ ಹಾಕಿ ಕಾಲ್ದಾರಿ ಚಂದ ಆಯಿದು, ನೆಡವಲೆ.
ಸುಮಾರು ಒಂದು ಮೈಲು ನಡೆಯೆಕ್ಕು ರಿಲಯನ್ಸ್ ಫ್ರೆಶ್ಶಿಂಗೆ – ತಾಜಾ ತರಕಾರಿ ಸಿಕ್ಕುವ ಏಕೈಕ ಜಾಗೆ ಇದು ಹೇಳಿ ಪಾರುವ ನಂಬಿಕೆ. ಅಲ್ಲಿ ತರಕಾರಿ ಸೆಲೆಕ್ಟ್ ಮಾಡುವಾಗ ಒಟ್ಟಿಂಗೆ ಆನೂ ಬೇಕು. ರಜ ದೊಡ್ಡಕ್ಕೆ ಮಾತಾಡಿಗೊಂಡು ನಿಧಾನಕ್ಕೆ ಒಂದೊಂದೇ ತುಂಬುಸುದು ಕ್ರಮ.

“ಬೆಂಡೆ ಲಾಯಿಕಿದ್ದು, ನಾಳಂಗೆ ಡಬ್ಬಿಲಿ ಚಪಾತಿಯೊಟ್ಟಿಂಗೆ ಅಕ್ಕಲ್ಲದಾ?”
“ಹೂಂ..”
“ಕ್ಯಾಬೇಜು ಒಳ್ಳೆ ಫ್ರೆಷ್ ಕಾಣ್ತು. ತೆಕ್ಕೊಂಬ°
.”
“ಅದರ ತಾಳ್ಳು ಚಪಾತಿಯೊಟ್ಟಿಂಗೆ ಎನಗೆ ಲಾಯ್ಕಾವುತ್ತಿಲ್ಲೆ, ಬರೇ ಡ್ರೈ..”
ಮೆಲ್ಲಂಗೆ ಪಾರುವ ಕೆಮಿಲಿ ಉರುಗಿದೆ.
ಮಕ್ಕೊಗೆ ಇಷ್ಟ ಅವುತ್ತದು, ಒಂದೊಂದರಿ ನಿಂಗಳೂ ತಿಂಬಲಾಗದಾ..

ಎನ್ನದು ಮೌನ.- ಖಂಡಿತಾ ಸಮ್ಮತಿಯ ಮುದ್ರೆ ಅಲ್ಲ ಅದು.

ಪಾರುಗೆ ಇದು ಅರ್ಥ ಆಗದ್ದ ಬಗೆ ಅಲ್ಲ.
“ಆತಪ್ಪ, ರಜ್ಜ ಎಸರು ಎಸರಾಗಿ ಮಾಡ್ಲಕ್ಕು, ಅಂಬಗ ಸರಿ ಅಕ್ಕನ್ನೆ. ಅಲ್ಲದ್ದರೆ ಆನು ಎಂತರ ಮಾಡೆಕ್ಕು ದಿನಾಗಿಲೂ ನಿಂಗೊಗೆಲ್ಲಾ ಅಪ್ಪಾಂಗೆ. ಮಕ್ಕೊಗೆ ಬೇರೆ, ನಿಂಗೊಗೆ ಬೇರೆ ಮಾಡ್ಲೆ ಪೂರೈಸ ಎನ್ನಂದ!”

ಅಪ್ಪು! ಪಾರು ಉದೀಯಪ್ಪಗ ಐದು ಘಂಟೆಗೆ ಎದ್ದರೆ ಮಕ್ಕಳ ಶಾಲೆಗೆ ಕಳಿಸಿ, ಎನ್ನನ್ನೂ ಎಂಟು ಘಂಟೆಗೆ ಆಫೀಸಿಂಗೆ ಕಳುಸುವವರೆಗೆ ಒಂದು ಘಳಿಗೆ ಪುರುಸೊತ್ತು ಇರ್ತಿಲ್ಲೆ.
ಮಕ್ಕೊಗೆ ಡಬ್ಬಕ್ಕೆ ಚಪಾತಿ, ಅದಕ್ಕೆ ಬೇಕಾದ ಪಲ್ಯ, ಉದಿಯಪ್ಪಗಾಣ ಕಾಫಿ ತಿಂಡಿ ಹೇಳಿ ಎಲ್ಲ ಮುಗುಶಿಯಪ್ಪಗ ಹಣೆಲಿ ಸಣ್ಣಕ್ಕೆ ಬೆಗರು ಮೂಡ್ಲೆ ಶುರುವಾವುತ್ತು.
ಆನು ಮಕ್ಕಳ ಹೆರಡಿಸಿ, ಮಿಂದುಗೊಂಡು ರೆಡಿ ಅಗಿ ಅಂದ್ರಾಣ ಪೇಪರು ಹಿಡ್ಕೊಂಡು ಕೂರುತ್ತೆ.
ಮಕ್ಕಳೂ ಒಟ್ಟಿಂಗೆ ಸೋಫಲ್ಲಿ ಬಂದು ಕೂರ್ತವು. ಕಾಫಿ ತಿಂಡಿ ಕೂದಲ್ಲಿಗೆ ಅಯೆಕ್ಕು, ಮಕ್ಕಳೂ ಕೂದಲ್ಲಿಂದ ಏಳ್ತವಿಲ್ಲೆ.
ಪಾರು ಎಲ್ಲೊರ ವಿಚಾರ್ಸಿಗೊಂಡು ತಿನ್ನಿಸಿ ಸಮಯಕ್ಕಪ್ಪಗ ಹೆರಡುಸುದು ಸುಲಭದ ಕೆಲಸ ಅಲ್ಲ.

“ನಿಂಗಳೂ ಒಂದೊಂದರಿ ತಿನ್ನೆಕ್ಕು ಆತಾ….?” ಈಗ ಮಂಕಾಡ್ಸಿಗೊಂಡು ಕೇಳಿತ್ತು.
“ಅಕ್ಕು ಬಂಗಾರು, ತೊಂದರೆ ಇಲ್ಲೆ.”
ತೊಂದರೆ ಇದ್ದು ಹೇಳಿ ಹೇಳ್ಲೆ ಎನಗೆ ಮನಸ್ಸು ಬಾರ!
ನಾಕು ದಿನಕ್ಕೆ ಬೇಕಪ್ಪ ತರಕಾರಿ ಕಟ್ಟಿಸಿಗೊಂಡು ವಾಪಾಸು ಹೆರಟೆಯ°..ಮನೆಗೆ ತಿರುಗುವಲ್ಲಿ ಮಾರ್ಗದ ಕರೆಲಿ ಕಾಫಿ ಡೇ ಇದ್ದು. ಒಂದರಿ ಹೋಯೆಕ್ಕು ಹೇಳಿ ಗ್ರೇಶಿಗೊಂಬದು ಕೆಲವು ದಿನ ಆತು. ಪಾರು ಒಟ್ಟಿಂಗೆ ಇಪ್ಪಗ ಇಂದೇ ಅಕ್ಕನ್ನೆ.

“ಬಾ… ಇಲ್ಲಿ ಒಂದರಿ ಕಾಫಿ ಕುಡುದು ಬಪ್ಪ.”
“ಛೆ ! ಬೇಡಪ್ಪ ಎನಗೆ ಈಗ ಎಂತದೂ ಬೇಕಾವುತ್ತಿಲ್ಲೆ.”
” ‘A Lot can Happen over Coffee’ – ಹೇಳಿ ಬರದ್ದವು, ನಾವೂ ನೋಡುವ ಒಂದರಿ, ಗೊಂತಾಗೆಡದಾ. ಚಾಯವೂ ಸಿಕ್ಕುಗು ಇಲ್ಲಿ.”

ಪಾರು ಕಾಫಿ ಕುಡಿತ್ತಿಲ್ಲೆ.
ಮದುವೆ ಆದ ಶುರುವಿಲಿ ಒಂದರಿ ಒಟ್ಟಿಂಗೆ ಬೊಂಬಾಯಿ ದರ್ಶನಕ್ಕೆ ಹೋಗಿತ್ತಿದ್ದೆಯ°.
ಎಕ್ವೇರಿಯಮ್ಮಿನ ಹತ್ತರೆ ಕ್ಯಾಂಟೀನಿಲಿ ಬಟಾಟೆ ವಡ ಕಂಡು “ತಿನ್ನೆಕ್ಕೊ” ಹೇಳಿ ಕೇಳಿತ್ತಿದ್ದೆ. ಬೇಡ ಹೇಳಿದ ಮೇಲೆ ಆನು ಕೊಡಿಸಿದ್ದಿಲ್ಲೆ.-
ನಿನ್ನ ಅಪ್ಪ°, ಆನು ಒಂದರಿ ಬೇಡ ಹೇಳಿದ್ದಕ್ಕೆ ಎನಗೆ ಬಟಾಟೆ ವಡೆ ಕೊಡುಸಿದ್ದವೇ ಇಲ್ಲೆ, ಒತ್ತಾಯ ಆದರೂ ಮಾಡೆಕ್ಕನ್ನೆ, ಊಹೂಂ..ಇಲ್ಲೆ!– ಮಕ್ಕೊಗೆ ಕತೆ ಹೇಳುವ ಲೆಕ್ಕಲ್ಲಿ ಆನು ಮರದ್ದದರ ಅಂಬಗಂಬಗ ನೆಂಪು ಮಾಡ್ಸಿಗೊಂಡು ಇರ್ತು!! 🙁

ಈ ಪಂಚಾತಿಗೆ ಬೇಡ ಹೇಳಿ ಆನು ಪಾರುವ ಕೈ ಹಿಡುದು ಸೀದ ಒಳ ಹೊಕ್ಕೆ.
ಒಳಾಣ ವ್ಯವಸ್ಥೆಗ, ಮೆಸ್ತಂಗೆ ಇಪ್ಪ ಸೀಟು, ಮೋರೆ ಕಾಂಬಾ೦ಗೆ ಇಪ್ಪ ಮೇಜು ಎಲ್ಲ ನೋಡಿ ಸಂಭ್ರಮ ಆತು.
ಯೂನಿಫೋರ್ಮಿಲಿ ಇತ್ತ ವೇಟರ್ ಬಂದು ಮೆನು ಕಾರ್ಡು ಮಡಿಗಿಕ್ಕಿ ಹೋತು. ಕಾಫಿ , ಚಾಯ ಇಷ್ಟೊಂದು ಬಗೆಲಿ ತಯಾರು ಆವುತ್ತಾ ಇಲ್ಲಿ ಹೇಳಿ ಕಂಡತ್ತು ಎನಗೆ.
ನೋಡಿ ನೋಡಿ ‘ಲಿಚಿ ಟೀ’ ಯ ರುಚಿ ನೋಡ್ಲಕ್ಕುಗ್ರೇಶಿ ಪಾರುವ ಮೋರೆ ನೋಡಿದೆ. ಹೂಂಕುಟ್ಟಿತ್ತಲ್ಲದ್ದೆ ಎಂತ ಅಭಿಪ್ರಾಯ ಬಯಿಂದಿಲ್ಲೆ.

ಅಕೇರಿಗೆ – “ಎನಗೆ ಎಂತದೂ ಬೇಡ. ನಿಂಗೊ ತೆಕ್ಕೊಳ್ಳಿ.” ಎನಗೆ ಮಾಂತ್ರ ಆರ್ಡರು ಕೊಟ್ಟೆ.
ರಜ ಸಮಯ ಕಳುದು ದೊಡ್ಡ ಜ್ಯೂಸಿನ ಗ್ಲಾಸಿಲಿ ಚಾಯ ತಂದು ಮಡಿಗಿತ್ತು. ಕುಡಿವಲೆ ‘ಸ್ಟ್ರಾ’ವುದೇ.
ಚಾಯದ ಡಿಕೋಕ್ಷನ್ನಿಂಗೆ ಲಿಚಿ ಹಣ್ಣಿನ ಜ್ಯೂಸ್ ಸೇರ್ಸಿ, ಅರೆವಾಶಿ ಗ್ಲಾಸಿನಷ್ಟು ಐಸು ಹಾಕಿ, ಹಾಲು ಹಾಕದ್ದೆ ಮಾಡಿದ ಚಾ !

ಹೀ..ರಿ ಕುಡುದೆ. ಪಾರು ಹತ್ತರೆ ರುಚಿ ನೋಡ್ಲೆ ಹೇಳಿರೆ ಸರ್ವಥಾ ಒಪ್ಪಿದ್ದಿಲ್ಲೆ.
ಬಿಲ್ ನೋಡಿ ಪಾರು ಹೇಳಿತ್ತು , “ಹೆರಾಣ ಬೋರ್ಡು ಬದಲುಸಲೆ ಹೇಳಿ ಇವಕ್ಕೆ, A Lot of money can Happen over Coffee or Tea to the Cashier.”
ಚಾಯ ಲಾಯಿಕಿತ್ತಿದ್ದು, ಪಾರು. ನೀನು ರುಚಿ ನೋಡೆಕ್ಕಾತು.
“ಆತು, ಆತು, ನಿಂಗೊಗೆ ರುಚೀ ಆತನ್ನೆ ಸಾಕು. ಇಷ್ಟು ಪೈಸೆ ಹಾಕಿರೆ ತಣ್ಕಟೆ ಚಾಯವ ಲಾಯಿಕ್ಕಿಲ್ಲೆ ಹೇಳುವಿರ ನಿಂಗೊ ಹೇಂ. ? ಒಳುದ ಐಸಿನ ಕರುಕುರುನೆ ತಿಂದು ಮುಗುಸೆಕ್ಕಾತು, ಅದಕ್ಕೂ ಚಾರ್ಜು ಮಾಡಿದ್ದವನ್ನೆ. !”

ಛೆಲಾ..ಇದರ ಪಂಚಾತಿಗೆಯೇ.ಎನಗೆ ಎಂತ ಉತ್ತರ ಕೊಡ್ಲೂ ತಲೆಗೆ ಹೊಳೆದ್ದಿಲೆ. – “ತಡವಾತು, ಹೆರಡುವ ಇನ್ನು” ಹೇಳಿ ಅರ್ಜೆಂಟ್ ಮಾಡಿದೆ.

(ಇದು ಪ್ರಾರ೦ಭ..
ಬೈಲಿನ ಬಡಾಯಿ ಚಾವಡಿಲಿ (BBC) ಇನ್ನೂ ಮು೦ದುವರಿಗು ಈ ಪ೦ಚಾತಿಗೆ ..)

8 thoughts on “ಪಾರುವ ಪಂಚಾತಿಗೆ

  1. ಲಾಯಿಕಾಯಿದು………….B.B.C ಲಿ ಪ೦ಚಾತಿಗೆ ಇನ್ನು ಬರಲಿ ……….ಎನ್ಗ ಓದಿ ಹೊಟ್ಟೆತು೦ಬ ನೆಗೆಮಾಡುತ್ತೆಯ………..

  2. ಹೇ ಹೇ ..ಲಾಯಕ ಆಯಿದು ಬರದ್ದು ..
    ಮುಂದುವರಿಸಿ …ಬರವಣಿಗೆ

  3. ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದ.
    ಇದು ಪಾರುವ ಗೆಂಡನ ಅನುಭವಂಗೊ, ಬೈಲಿನವಕ್ಕೆ ತಿಳುಶೆಲೆ ಎಡಿಗೊ ಹೇಳಿ ಕೇಳಿದ್ದಕ್ಕೆ ಒಪ್ಪಿ ಆನು ಬರದ್ದದು. ದಯಮಾಡಿ ತಪ್ಪು ತಿಲ್ಕೊಳ್ಳೆಡಿ. ಪಾರು ಎನ್ನ ಹೆಂಡತ್ತಿ ಅಲ್ಲ.

  4. ಪಂಚಾತಿಗೆ ಭಾರೀ ಲಾಯಕ್ಕಾಯ್ದು ಕುಮಾರಣ್ಣ. ಸ್ವಾನುಭವ, ಸೀಕ್ರೇಟ್ ಒಫ್ ಹ್ಯಾಪಿ ಮಾರೈ ಡ್ ಲೈಪ್ ಹೀಂಗೇ ಸ್ವಾರಸ್ಯ ವಾಗಿ ಹಂಚುತ್ತಾ ಇರಿ.

  5. ಹ.ಹ್ಹಾ.. ಕುಮಾರ ಮಾವನ ಪ೦ಚಾತಿಗೆಲಿ ಎಡಿಯ. ಅಲ್ಲಾ, ಬೊ೦ಬಾಯಿಲಿ ಬಟಾಟೆ ವಡೆ ಒತ್ತಾಯ ಮಾಡದ್ದದು ಬೇಕಾಗಿಯಪ್ಪಗ ನೆನಪ್ಪಪ್ಪದು ಸಾಕು.
    ಕೆಲವು ಸರ್ತಿ ಮಾತಾಡದ್ದೆ ಕೂದರೇ ಗುಣ,ಅಲ್ಲದೋ? ಲಘುಹಾಸ್ಯ ಚೆ೦ದಕ್ಕೆ ಓದುಸಿಗೊ೦ಡು ಹೋತು.ಸುಖ ಸ೦ಸಾರದ ಸೂತ್ರ ಒ೦ದೊ೦ದೇ ಬರಳಿ,ಈ ಪ೦ಚಾತಿಗೆಲಿ.

  6. ಏವದೋ ಲಾಯಕಿನ ಪುಸ್ತಕದ ವಿಮರ್ಶೆ ಆಯಿಕ್ಕು ಹೇಳಿ ಓದಲೆ ಸುರುಮಾಡಿದೆ ಅದಾ. ನೋಡಿರೆ, ಇದು ಸ್ವಂತ ಅನುಭವದ ಮಾತು. ಬರಕ್ಕೊಂಡು ಹೋದ ಪಂಚಾತಿಗೆ ಭಾರೀ ಚೆಂದ ಆಯಿದು. ಕಳುದ ವಾರದ, ಒಪ್ಪಣ್ಣ ಬರದ ಸಂಸಾರದ ಸರಿಗಮಕ್ಕೆ ಒಪ್ಪುವಂತಹ ಲೇಖನ.
    “ನಾಲಗೆ ಕೊಡೀ೦ಗೆ ಬ೦ದರೂ ಆನು ಬಾಯಿ ಬಿಟ್ಟಿದಿಲ್ಲೆ” – ಸುಖಸಂಸಾರದ ಗುಟ್ಟಿನ ಬಿಡುಸಿ ಮಡಗಿದ್ದ, ಕುಮಾರಣ್ಣ.
    ಕಡೇಣ, ಹೋಟೆಲ್ಲಿನ ಪ್ರಸಂಗ, ನಿಜವಾಗಿ ಅಪ್ಪಂತಹ ಘಟನೆಯೇ ಸರಿ. ಕುಮಾರಣ್ಣನ, ಬಿಸಿ ಬಿಸಿ, ಬಿಬಿಸಿ ವಾರ್ತೆ ಮುಂದುವರಿಯಲಿ.

  7. ಆಹಾ..!!!! ಇದು ಭಾರೀ ಲಾಯಿಕಿದ್ದನ್ನೆ!!!! ಒಪ್ಪ೦ಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×