ಪಾರುವ ಮರಾಠಿ ಕ್ಲಾಸು

September 10, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮದುವೆ ಕಳುದ ಶುರು,ಆ ಸಮಯಲ್ಲಿ ಆನು ಬೊಂಬಾಯಿಲಿ ಇತ್ತಿದ್ದೆ. ಬೊಂಬಾಯಿ ಹೇಳಿರೆ ಊರಿಲಿಪ್ಪವಕ್ಕೆ ಬೊಂಬಾಯಿ, ಸತ್ಯಕ್ಕಾರೆ ಬಾಂಬೆ  ಸೆಂಟ್ರಲಿಂದ ೫೦ ಕಿಲೊಮೀಟರು ದೂರಲ್ಲಿಪ್ಪ ಜಾಗೆ. ಥಾಣೆ – ಕಲ್ಯಾಣ ಕಳುದು ಉಲ್ಲ್ಹಾಸನಗರ ದಾಂಟಿ ಅಂಬರನಾಥಂದ ಮತ್ತಾಣ  ಜಾಗೆ, ಮರಾಠಿ ಮಾತಾಡುವ ಜೆನಂಗಳೇ ಜಾಸ್ತಿ ಇಪ್ಪ ಬದಲಾಪುರ. ಪಾರುಗೆ ಎಲ್ಲ ಹೊಸತ್ತು – ಜಾಗೆ, ಮನುಷ್ಯರು, ಇಲ್ಯಾಣ  ಭಾಷೆ, ಕ್ರಮಂಗೊ, ಮತ್ತೆ ಜೀವನ ಶೈಲಿ, ಎಲ್ಲವನ್ನೂ ಶುರೂ ನೋಡ್ತದು. ದೊಡ್ಡ ಹೆಂಚಿನ ಮನೆ, ಮನೆ ಎದುರು ದೊಡ್ಡ ಜಾಲು, ಜಾಲ ಕರೆಲಿ ಹೂಗಿನ ತೋಟ – ಇದರ ನಡುಕೆ ಬೆಳದು ದೊಡ್ಡ ಆದವು ಬೊಂ ಬಾಯಿ ಹಾಂಗಿಪ್ಪ ದೊಡ್ಡ ಪೇಟೆಲಿ, ಫ್ಲಾಟುಗಳಲ್ಲಿ  ಜೀವನ ಅಷ್ಟು ಸುಲಭದ ಮಾತಲ್ಲ.  ಬಾಗಿಲು ತೆಗದು ಒಳ ಹೊಕ್ಕರೆ ಅಲ್ಲಿಗೇ ಮುಗುತ್ತು ಹೇಳುವಷ್ಟು ದೊಡ್ಡಕ್ಕಿಪ್ಪ ಮನೆ.!  ಕೈ – ಕಾಲು ಆಡುಸುಲೆ ಜಾಲು ಎಲ್ಲಿದ್ದು !  ಬಾಗಿಲು ತೆಗದರೆ ತೊಳಸಿ ಕಟ್ಟೆ ಸುತ್ತ ಇಪ್ಪ ಜಾಗೆಯಷ್ಟಕ್ಕೆ ವೆರಾಂಡ, ಅಲ್ಲಿ ಮೂರು ಹೊಡೆಲಿ ಮೂರು ಮನೆ ಗಳ ಬಾಗಿಲುಗೊ. ಗಾಳಿ ಬರಲಿ ಹೇಳಿ ನಮ್ಮ ಮನೆ ಬಾಗಿಲು ತೆಗದು ಕೂದರೆ, ಒಳಾಣದೆಲ್ಲ ಎದುರು ಮನೆಯವಕ್ಕೆ ಕಾಂಗು . ಹಾಂಗಾಗಿ ಮನೆ ಒಳ ಬಾಗಿಲಿಪ್ಪಲ್ಲೆಲ್ಲ ಕರ್ಟನ್ ಹಾಕ್ಸಿ ಆತು. ಗಿಳಿ ಬಾಗಿಲು ತೆಗವನೋ, ಆಚಿಕಿಪ್ಪ ಬಿಲ್ಡಿಂಗಿನವಕ್ಕೆ ಕಾಣ್ತು. ಇಪ್ಪ ಗಿಳಿ ಬಾಗಿಲುಗೊಕ್ಕೆಯೂ ಕರ್ಟನ್ ಹಾಕ್ಸಿತ್ತು. ಆಷ್ಟಪ್ಪಗ ಮನೆ ಒಳ ಕಸ್ತಲೆ ಅತು. ಹಗಲಿಂಗೂ ಲೈಟು ಹೊತ್ತುಸೆಕ್ಕಾದ ಅನಿವಾರ್ಯ ಪರಿಸ್ತಿತಿ.!

ಇಂಥಾ ಸ್ಥಿತಿಲಿ ಒಬ್ಬನೇ ಇಡೀ ದಿನ ಮನೆ ಒಳವೇ ಕೂದೊಂಡು ಸಮಯ ಕಳೆಯಡದ ?

ಶುರು ಎರಡು ದಿನ ಟಿವಿಲಿ ಚಾನೆಲ್ಲುಗಳ ಬದಲ್ಸಿ ಬದಲ್ಸಿ ನೋಡಿಗೊಂಡು ಸಮಯ ಹೋದ್ದದು ಗೊಂತಾಯಿದಿಲ್ಲೆಡ, ಪಾರುಗೆ. ಮತ್ತೆ ಮತ್ತೆ “ಅದೇ ರಾಗ – ಅದೇ ತಾಳ” ಹೇಳಿ ನೋಡಿದ್ದನ್ನೇ ನೋಡಿ  ಅಸಕ್ಕ ಹಿಡಿವಲೆ ಶುರುವಾತು. ದಿನಾಗಿಳೂ ಹೊತ್ತೋಪಗ ಆನು ಬಂದ ಮೇಲೆ ಮರದಿನಕ್ಕಿಪ್ಪ ನೆಟ್ಟಿಕಾಯಿ, ಸಾಮಾನು ತಪ್ಪಲೆ ಹೋಪದು ಶುರುವಾತು. ದಿನಲ್ಲಿ ಒಂದು ಘಂಟೆ ಹೊತ್ತಾದರೂ ಸಮಯ ಕಳವಲೆ ಆವುತ್ತನ್ನೆ, ಹೊತ್ತು ಹೋಗದ್ದದಕ್ಕೆ.!

“ಒಂದರಿ ಎದುರು ಮನೆಲಿಪ್ಪವರ ಮಾತಾಡ್ಸಿ ಗುರ್ತ ಮಾಡಿಗೊಂಬಲಕ್ಕನ್ನೆ” ಎನ್ನ ಮನಸ್ಸಿಲಿಪ್ಪದರ ಸೂಚಿಸಿದೆ.

“ಇಲ್ಲಿ ಎಲ್ಲೋರು ಇಂಗ್ಲೀಷಿಲಿ ಮಾತಾಡುದಾಯಿಕ್ಕು, ಎನಗೆ ಇಂಗ್ಲೀಷು ಓದುಲೆ ಬರವಲೆ ಎಡಿತ್ತು,  ಮಾತಾಡ್ಲೆ ಸರಿ ಅರಡಿತ್ತಿಲೆ ”

ಪಾರು ಅದರ ಮನಸಿಲಿಪ್ಪ ಅಳುಕ್ಕಿನ ಹೇಳಿಗೊಂಡತ್ತು.  ಆನು ಹೈಸ್ಕೂಲಿಲಿ ಇತ್ತಿಪ್ಪಗ ನೋಡಿದ  ಯೇವದೋ ಒಂದು ಯಕ್ಷಗಾನಲ್ಲಿ , ವಿಟ್ಲ ಜೋಷಿ ಹೇಳಿದ ಮಾತು ನೆಂಪಾಗಿ  ನೆಗೆ  ಬಂತು – ಬರಿಲಿಕ್ಕೆ ಗೊತ್ತುಂಟು, ಓದ್ಲಿಕ್ಕೆ ಗೊತ್ತಿಲ್ಲ ” ! ನೆಗೆಯ  ಮನಸ್ಸಿನೊಳವೇ ಮಡಿಕ್ಕೊಂಡು ಪಾರುಗೆ ಸಮಾದಾನ ಹೇಳಿದೆ.

” ಹಾಂಗೆಂತ ಇಲ್ಲೆ. ಸ್ಟೈಲಿಂಗೆ ಬೇಕಾಗಿ  ಇಂಗ್ಲೀಷಿಲಿ ಮಾತಾಡುವ ಕ್ರಮ ಇಲ್ಲೆ, ಇಲ್ಯಾಣ ಜೆನಂಗೊಕ್ಕೆ.  ಹಿಂದಿ ಸಾಧಾರಣ  ಎಲ್ಲೊರು ಮಾತಾಡ್ತವು. ನೀನು ಹೇಂಗೂ ಹಿಂದಿ ಕಲ್ತಿದೆನ್ನೆ, ಹಾಂಗಾಗಿ ಕಷ್ಟ ಆಗ. ಮತ್ತೆ, ಭಾಷೆ ಕಲಿಯೆಕ್ಕಾರೆ ಛಳಿ ಬಿಟ್ಟು ಮಾತಾಡೆಕ್ಕು. ಅವಗಳೇ ಅಭ್ಯಾಸ ಅಪ್ಪದು.”

ಮತ್ತೆ ನಾಕು ದಿನ ಕಳುದು ಶುದ್ದಿ ಹೇಳಿತ್ತು, ಪಾರು. ಎದುರು ಮನೆ ಹೆಮ್ಮಕ್ಕಳ ಮಾತಾಡ್ಸಿತ್ತಡ. ಅವಕ್ಕೆ ಮರಾಠಿ ಬಿಟ್ಟು ಬೇರೆ ಯೇವ ಭಾಷೆಯೂ ಬತ್ತಿಲ್ಲೆಡ !

“ಅಂಬಗ ನೀನು ಹೇಂಗೆ ಮಾತಾಡ್ಸಿದೆ ?”

” ಆನು, ಎನಗೆ ಗೊಂತಿಪ್ಪಾಂಗೆ ಹಿಂದಿಲಿ ಮಾತಾಡಿದೆ. ಅವು ಮರಾಠಿಲಿ ಮಾತಾಡಿದವು.”

“ನಿನಗೆ ಎಷ್ಟು ಅರ್ಥ ಆಯಿದು, ನೀನು ಮಾತಾಡಿದ್ದರಲ್ಲಿ ಅವಕ್ಕೆ ಎಷ್ಟು ಗೊಂತಾಯಿದು ?”

“ಉಮ್ಮ,ಎನಗೆ ಒಂದೂ ಅರ್ಥ ಆಯಿದಿಲ್ಲೆ, ಅವಕ್ಕೆ ಎಷ್ಟು ಗೊಂತಾಯಿದೋ, ಎನಗರಡಿಯ. ಅವರ ಹೆಸರು ಗೊಂತಾತು – ಅಲಕಾ, ಇಬ್ರು ಕೂಸುಗೊ ಅವಕ್ಕೆ.”

” ಎಂತದೋ – ದೋನ್ ಮುರ್ಗಿ ಅಮಲ – ಹೇಳಿದಾಂಗೆ ಕೇಳಿತ್ತು. ಎನಗೆ ಎಂತದೂ ಗೊಂತಾಯಿದಿಲ್ಲೆ. ಮತ್ತೆ ಅವರ ಅಲ್ಬಮ್ಮಿಂದ  ಫಟ ತೋರ್ಸಿದವು, ಅಷ್ಟಪ್ಪಗ ಅಂದಾಜಿ ಮಾಡಿದೆ ಆನು”

” ಅಯ್ಯೋ…ಅದು ಮುರ್ಗಿ ಅಲ್ಲ, ಮುಲ್ಗಿ – ಕೂಸುಗೊಕ್ಕೆ ಮರಾಠಿಲಿ ಹಾಂಗೆ ಹೇಳುದು. ಮಾಣ್ಯಂಗೊಕ್ಕೆ – ಮುಲ್ಗ. – ದೋನ್ ಮುಲ್ಗಿ ಅಮಲ ( ಎಂಗೊಗೆ ಇಬ್ರು ಕೂಸುಗೋ ) ಹೇಳಿದ್ದಾದಿಕ್ಕು.” ಆನು ತಿದ್ದಿದೆ.

“ಮತ್ತೆ ಎಂತೆಲ್ಲ ಪಟ್ಟಾಂಗ ಹೊಡೆದಿ ನಿಂಗೊ ?”

” ಉಮ್ಮ, ಅವು ಉದ್ದಕ್ಕೆ ಮಾತಾಡಿಗೊಂಡಿತ್ತಿದ್ದವು. ಎನಗೆ ಒಂಚೂರೂ ಅರ್ಥ ಆಯಿದಿಲ್ಲೆ. ಆನು ಅಂತೆ ಹೂಂಕುಟ್ಟಿದೆ ಅಷ್ಟೆ.- ಮಾತು ಕಮ್ಮಿ ಹೇಳಿ ಗ್ರೇಶಿದವೋ ಏನೋ ? ”

“ಅಂತೆ ಹಾಂಗೆಲ್ಲ ಗ್ರೇಶವಪ್ಪ, ನೀನು ಹಿಂದಿಲಿ ಎರಡು ಶಬ್ದ ಆದರೂ ಹೇಳಿಪ್ಪೆ – ಇಲ್ಲೆಯೋ.?”

” ಎಂತದೋ – ಉಮಿ ಕಾಯಿ ಬೋಳ್ತ ನಾಯಿ –  ಹಾಂಗೆತದೋ ಹೇಳಿದವಪ್ಪ. ಎನಗೆ ಅವರತ್ತರೆ ಮತ್ತೆ ಮಾತಾಡೆಕ್ಕು ಹೇಳಿ ಕಂಡಿದಿಲೆ”

” ಛೆ..ಛೇ…ಹಾಂಗೆಲ್ಲ ತಿಳ್ಕೊಳ್ಳೆಕ್ಕಾದ್ದಿಲ್ಲೆ ನೀನು. ಅವು ಬಹುಶಃ – ತುಮಿ ಕಾಹಿ ಪಣ್ ಬೋಲತ್ ನಾಹಿ – ಹೇಳಿದ್ದಾದಿಕ್ಕು. (ನಿಂಗೊ ಎಂತ ಮಾತಾಡ್ತೂ ಇಲ್ಲೆ). ”

” ಅಪ್ಪು, ಅವು ಎಂತರ ಹೇಳುದು ಗೊಂತಾದರೆ ಹಿಂದಿಲಿ ಉತ್ತರ ಕೊಡ್ಲಾವುತಿತ್ತು., ಎನಗೆ ಎಂತದೂ ತಲೆ ಬುಡ ಗೊಂತಾವುತ್ತಿಲೆ ”

ಪಾರುವ ಸಮಸ್ಯೆ ಗಂಭೀರವಾದ್ದೆ ಹೇಳಿ ಅನಿಸಿತ್ತು ಎನಗೆ. ಕನ್ನಡ,  ಹಿಂದಿ, ತುಳು ಮೇಲಂದ ಮಳಯಾಳವೂ ಅರಡಿಗು ಪಾರುಗೆ. ಆದರೂ ಎದುರು ಮನೆ ಹೆಮ್ಮಕ್ಕಳೊಟ್ಟಿಂಗೆ ಹೂಂಕುಟ್ಟುಲೆ ಮಾಂತ್ರ ಎಡಿಗಪ್ಪದಷ್ಟೆಯೋ !!  ಆ ಹೆಮ್ಮಕ್ಕೊಗೆ ಬಹುಶಃ ಹಿಂದಿ ಅರ್ಥ ಅಕ್ಕು, ಮಾತಾಡ್ಲೆ ಕಷ್ಟ ಅಪ್ಪದಾದಿಕ್ಕು.

“ನೀನು ಒಂದು ಕೆಲಸ ಮಾಡು. ಅರ್ಥ ಆವುತ್ತಿಲೆ ಹೇಳಿ ಮಾತಾಡ್ತದರ ನಿಲ್ಲುಸೆಡ. ನೀನು ಹಿಂದಿಲಿ ಪ್ರಶ್ನೆ ಮಾಡು,ಅಂಬಗ ಅವು ಎಂತ ಉತ್ತರ ಕೊಡ್ತವು ನೋಡುವ . ಅವು ಹೇಳಿದ್ದರ ನೆಂಪು ಮಡಿಕ್ಕೊ, ಹೊತ್ತೋಪಗ ಬಂದಿಕ್ಕಿ ಆನು ಅರ್ಥ ಹೇಳಿ ಕೊಡುವೆ.  ನೀನು ಹೀಂಗೆ ಮುಂದುವರಿಸಿರೆ, ಬೇಗ ವರ್ಷದೊಳ ಭಾಷೆ ಕಲಿವೆ. ! ಎನಗೆ ಮರಾಠಿ ಕಲಿವಲೆ ನಾಲ್ಕೈದು ವರ್ಷ ಬೇಕಾಗಿ ಬಂತು. ”

ಮತ್ತೆ ಒಂದು ವಾರ ಕಳುದು ಎನ್ನ ಸಹೋದ್ಯೋಗಿ ಒಬ್ಬನ ಮುಖಾಂತರ ” ಕನ್ನಡ್ ಶಿಖುವುಯಾ ” (ಕನ್ನಡ ಕಲಿಯೋಣ) ಹೇಳ್ತ ಪುಸ್ತಕ ತರಿಸಿದೆ. ಮರಾಠಿಗೊಕ್ಕೆ ಕನ್ನಡ ಕಲಿವಲೆ ಅನುಕೂಲವೂ, ಸುಲಭವೂ ಆವುತ್ತ ನಮುನೆಯ ಪುಸ್ತಕ. ಇದನ್ನೇ, ಕನ್ನಡ ಗೊಂತಿಪ್ಪವು ಮರಾಠಿ ಕಲಿವಲೂ ಉಪಯೋಗುಸುಲಕ್ಕು ಹೇಳಿ ಕಂಡತ್ತು ಎನಗೆ. ನಿತ್ಯ ವ್ಯವಹಾರಲ್ಲಿ ಉಪಯೋಗುಸುತ್ತ ಶಬ್ದಂಗೊ, ಸಣ್ಣ ವಾಕ್ಯಂಗಳ ಕನ್ನಡ – ಮರಾಠಿ ಎರಡರಲ್ಲೂ ಕೊಟ್ಟಿದವು, ಮಾತು ಕಲಿವವಕ್ಕೆ ಒಳ್ಳೆ ಕೈಪಿಡಿ ಹೇಳಿ ಅನಿಸಿತ್ತು. ಪಾರುಗೆ ರಜ್ಜ ಗೆಲವು ಬಂತು. ಹೊತ್ತೋಪಗ ಆನು ಮನೆಗೆ ಬಂದ ಮೇಲೆ ಕೆಲವು ಶಬ್ದ, ವಾಕ್ಯಂಗಳ ಕೇಳಿಗೊಂಡು ಇತ್ತಿದ್ದು. ಹೀಂಗೆ ರಜ್ಜ ಸಮಯ ಕಳುದತ್ತು.

ಒಂದು ದಿನ, ಹೊತ್ತೋಪಗ ಮನೆಗೆ ಬಂದ ಹಾಂಗೆ ಪಾರು ಕೇಳಿತ್ತು. ” ಈ ಸೌತ್ ಲಿ ಇಪ್ಪವಕ್ಕೆ –  ಎಲ್ಲೋರನ್ನುದೆ ‘ಮದ್ರಾಸಿ’ ಹೇಳಿ ದೆನುಗೇಳುದೆಂತಕೆ. ? ”

” ಅಲ್ಲ, ಸಂಗತಿ ಎಂತರ ? ನಿನಗೆ ಈ ಸಂಶಯ ಬಪ್ಪಲೆ ಕಾರಣ ಎಂತ ?”

” ಈಗ, ಕೆಲವು ದಿನ ಲಾಗಾಯ್ತು, ಮಧ್ಯಾಹ್ನ ಉಂಡಾದಿಕ್ಕಿ ಆನು ಬಾಗಿಲು ತೆಕ್ಕೊಂಡು ನಿಂಬದು, ಅದೇ ಹೊತ್ತಿಲಿ ಆಚಿಕೆಂದ ಅಲಕನೂ ಬಂದು ನಿಲ್ತವು. ಆನು ಹಿಂದಿಲಿ ಮತಾಡುದು, ಅವು ಮರಾಠಿಲಿ. ಅವಕ್ಕೆ ಹಿಂದಿ ಅರ್ಥ ಅವುತ್ತು.  ಎನಗುದೇ ಈಗ ಕೆಲವು ಮರಾಠಿ ಶಬ್ದ ಗೊಂತಾವುತ್ತು.

ಜ್ಹೆವಣ್ ಜ್ಹಲ ಕಾ( ಊಟ ಆತೋ ?) – ಹೇಳಿ ಶುರು ಮಾಡ್ತೆ ಆನು”

” ಒಳ್ಳೆದಾತನ್ನೆ. ಎಂತ ತಪ್ಪಿಲ್ಲೆ, ನೀನು ಮಾತಾಡಿದ್ದರಲ್ಲಿ ”

” ಇಂದು, ಮಾತಾಡಿಗೊಂಡು – ಟೇಮ್ ಕಿತಿ ಜ್ಹಲ ( ಟೈಮ್ ಎಷ್ಟಾತು ?) ವಿಚಾರ್ಸಿತ್ತು. ಆನು ಹೇಳಿದೆ. ಆಷ್ಟಪ್ಪಗ ಅವು ಕೇಳಿದವು – ತುಮಿ ಮದ್ರಾಸಿ ಆಹೇತ್ ಕಾ ( ನಿಂಗೊ ಮದ್ರಾಸಿಯೊ ?) ಆನು ಅಲ್ಲ, ಎಂಗೊ ಕರ್ನಾಟಕದವು, ಮದ್ರಾಸಿಗೊ ತಮಿಳು ಮಾತಾಡುದು, ಎಂಗೊ ಕನ್ನಡ ಹೇಳಿ ಎಷ್ಟು ವಿವರಿಸಿರೂ, – ಹೋ..ತೇತ್ ಮಣಲಾ ಮಿ. (ಅಪ್ಪು, ಅದನ್ನೇ ಹೇಳಿದ್ದು ಆನು) – ಅದೆಂತಕೆ ಅವು ಹಾಂಗೆ ಹೇಳುದು ? ನಾವೆಂತ  ಮದ್ರಾಸಿಗಳಾ ? ”

” ಎಂತ ಅರ್ಥ ಆಗದ್ದರೂ, ಅರ್ಥ ಆಯಿದಿಲ್ಲೆ ಹೇಳಿ ಒಪ್ಪಿಗೊಂಬಲೆ ನಾಮೂಸು ಅಪ್ಪವು, ಹೀಂಗೆ – ಅನೂ ಅದನ್ನೇ ಹೇಳುದು’ ಹೇಳಿ ಮಾತು ನಿಲ್ಲುಸುತ್ತವು. ಅದಿರಳಿ, ಅವು ಘಂಟೆ ಕೇಳಿದ್ದಕ್ಕೆ ನೀನು ಎಂತ ಹೇಳಿದೆ ?’

” ಒಂದೂವರೆ ಆಗಿತ್ತಿದ್ದು, – ಸಾಡೆ ಏಕ್ – ಹೇಳಿದೆ ”

” ನೀನು ‘ಮದ್ರಾಸಿ’ ಹೇಳಿ ಎನಗೂ ಅರ್ಥ ಆತು ಈಗ. ಒಂದು ವರೆಗೆ  ಡೇಡ್ ಹೇಳೆಕ್ಕಪ್ಪದು. ಹಿಂದಿ ಮಾತಾಡುವ ಆರೇ ಆಗಲಿ ಹೀಂಗೆ ಹೇಳವು, ನಮ್ಮ ಹೊಡೆಂದ ಬಂದವೇ ಆಯೆಕ್ಕಷ್ಟೆ. ಹಿಂದಿ ಮಾತಾಡುವ ಪ್ರಾಂತದವು ಬಿಟ್ರೆ ಬಾಕಿ ಎಲ್ಲೋರುದೇ ‘ಮದ್ರಾಸಿ’ಗೊ ಇವಕ್ಕೆ. ‘ಮದ್ರಾಸಿ’ – ಹೇಳಿರೆ ಇವರ ಮಾತಿಲಿ ಸೌತ್ ನವು ಹೇಳಿ ಲೆಕ್ಕ, ಪ್ರತ್ಯೇಕ ಪರ್ಯಾಯ ಶಬ್ದ ಅರಡಿಯಕ್ಕನ್ನೆ ! ”

” ಇಂದು ಒಂದು ತಮಾಷೆ ಆತು, ಕೇಳಿ. ಹೀಂಗೆ ಮಾತಾಡಿಗೊಂಡಿಪ್ಪಗ  ಅಲಕಾ ಕೇಳಿದವು, – ಮುಂಬಯಿ ಫಿರಯಲ ಗೆಲೆ ಕಾ.? (ಬೊಂಬಾಯಿ ಸುತ್ತಿ ಬಯಿಂದಿರಾ ?). ಹಾಂಗೆ, ಮನ್ನೆ ಹೋಗಿ ಬಂದ ವಿಷಯ ಹೇಳಿದೆ. ಇಲ್ಲಿ ನೋಡ್ಲೆ ಇಪ್ಪ ಜಾಗೆಗೊ, ವಿಶೇಷಂಗೊ ಏನಾರು ಇದ್ದೋ  ಕೇಳಿದ್ದಕ್ಕೆ, ಎಂಗೊ ನೋಡಿ ಬಂದ ಜಾಗೆಗಳನ್ನೇ ಪಟ್ಟಿ ಮಾಡಿದವು.

ಶಿವಾಜಿ ಪಾರ್ಕ್ ಭಗೀತ್ಲೆ ಕಾ , ತಿಕಡೆ ‘ಜೋಶಿ ವಡೆವಾಲೆಂಚ್ಯ’ , ವಡಪಾವ್ ಅಕ್ಕ..s ಮುಂಬಯ್ ಮದೆ ವರ್ಲ್ಡ್ ಫೇಮಸ್ ಅಹೆ ! (ಶಿವಾಜಿ ಪಾರ್ಕ್ ನೋಡಿದ್ದಿರಾ, ಅಲ್ಲಿ ‘ಜೋಶಿ ವಡೆವಾಲ’ ದವರ ವಡಪಾವ್ ಇಡೀ..s ಬೊಂಬಾಯಿಲಿ ವರ್ಲ್ಡ್ ಫೇಮಸ್.!)

“ಅಲ….” ಪಾರುಗೆ ನೆಗೆ ತಡವಲೆ ಎಡಿಯ , ಮಾತು ಅರ್ಧಲ್ಲಿಯೇ ನಿಲ್ಲುತ್ತು.

“ಅಲ…”

“ಪಾರು….! ಇದಾ,  ಒಂದಾ ನೆಗೆ ಮಾಡು. ಅಲ್ಲ, ಹೇಳೆಕ್ಕಪ್ಪದರ ಮದಾಲು ಹೇಳು. ಎರಡೂ ಒಟ್ಟೊಂಟ್ಟಿಂಗೆ ಆದರೆ ಎನಗೆ ಎಂತದೂ ಅರ್ಥ ಆಗ. ”

ಒಂದೈದು ನಿಮಿಷ ಅದರಷ್ಟಕ್ಕೆ ನೆಗೆ ಮಾಡಿತ್ತು, ಕಣ್ಣ ನೀರು ಬಪ್ಪಲಿವರೆಗೆ.!

“ಅಲಕ ಈ ‘ವರ್ಲ್ಡ್ ಫೇಮಸ್’ ವಡಪಾವಿನ ಇಷ್ಟರವರೆಗೆ ರುಚಿ ನೋಡಿದ್ದಿಲೆಡ . ಇವರ ವಿವರಣೆಗೆ ಎನಗೆ ನೆಗೆ ಬಪ್ಪದು, ಕುರುಡ ಆನೆ ನೋಡಿದ ಕತೆಯಾಂಗೆ ”

” ಇವಕ್ಕೆ ಬೊಂಬಾಯಿಯೇ ಪ್ರಪಂಚ, ಅದು ಬಿಟ್ರೆ ಬೇರೆ ಯೇವ ಜ್ಞಾನವೂ ಇಲ್ಲೆ ಕಾಣ್ತು ”  ಪಾರುವ ನೆಗೆ ಮತ್ತೂ ರಜ್ಜ ಹೊತ್ತು ನಿಂದಿದಿಲೆ.

ಅಕಟಾ…!  ನಮ್ಮ ನೆರೆಮನೆಯವರ ‘ಮಹಾಜ್ಞಾನ’ಕ್ಕೆ ಎನಗೂ ನೆಗೆ ತಡದು ಕೂಪಲೆ ಎಡಿಗಾಯಿದಿಲೆ.!

ಮರದಿನ, ಎನಗೆ ರಜೆ ಇತ್ತು. ಮಧ್ಯಾಹ್ನ ಇವರ ಮಾತುಕತೆ ಶುರುವಪ್ಪಗ ಆನು ಸೋಫಲ್ಲಿ ಕೂದೊಂಡು ಕೇಳಿದೆ. ಮದ್ರಾಸಿ, ಸೌತ್ – ಚರ್ಚೆ ಮತ್ತೆ ಬಂತು. ಅಲಕನ ಯೆಜಮಾನ್ರ ಸ್ವರವೂ ಕೇಳಿತ್ತು. ಆನುದೇ ಎದ್ದು ಬಂದು ಪಾರುವ ಕರೇಲಿ ನಿಂದೆ. ‘ಮಿಸ್ಟರ್ ಅಲಕ’ನ ಪರಿಚಯ ಮಾಡಿಗೊಂಡು, ಎನ್ನ ಪರಿಚಯವನ್ನೂ ಹೇಳಿದೆ. ಈ ಮನುಷ್ಯನ ಮೂಗು ಇನ್ನು ರಜ್ಜ ಉದ್ದ ಇರ್ತಿದ್ದರೆ ವಿಘ್ನಹರ ಗೆಣಪತಿ ರೂಪವೇ.  ತಲೆ ಕಾಂಬಗ ಗ್ರೇಶದ್ದೆಯೂ ಎನ್ನ ಶ್ಯೂ ಪಾಲಿಷ್ ಮಾಡುವ ಬ್ರಶ್ ನೆಂಪಾತು !  ಎಂಗ ಮಂಗಳೂರಿನವು, ಕನ್ನಡ ಮಾತಾಡುವವು ಹೇಳಿ ವಿವರ ಕೊಟ್ಟೆ.

ಸಮಜ್ಹಲಾ. ತುಮಿ ಕರ್ನಾಟಕಸೇ, ಕಾನಡಿ..s. ಹೈ ನಾ...” (ಗೊಂತಾತು. ನಿಂಗೊ ಕರ್ನಾಟಕಂದ, ಕಾನಡಿ…ಅಲ್ಲದೋ !) ಮರಾಠಿ – ಹಿಂದಿ ಮಿಶ್ರ ಭಾಷೆಲಿ ತನಗೆ ಅರ್ಥ ಆದ್ದರ ಒಪ್ಪಿಸಿದ, ಮಹಾನುಭಾವ.!

ಸುಮ್ಮನೆ ‘ಹುಂ”ಕುಟ್ಟಿದೆ.  ಮಹಾರಾಷ್ಟ್ರದವು ‘ಮರಾಠಿ’,  ಮದ್ರಾಸ್ ನವು ‘ಮದ್ರಾಸಿ’  ಇಪ್ಪ ಹಾಂಗೆ, ಕರ್ನಾಟಕದವು  ‘ಕಾನಡಿ’, ಅಷ್ಟೆ !

“ ಒಂದರಿ ಹೋಗಿ  ‘ಕನ್ನಡಿ’ಲಿ ನಿನ್ನ ಮೋರೆ ನೋಡಿಗೊ”, ಹೇಳೆಕ್ಕಾದ್ದರ ಆನು ಮನಸ್ಸಿಲಿಯೇ  ಮಡಿಕ್ಕೊಂಡೆ. ಪಾರುವ ‘ಮರಾಠಿ ಕ್ಲಾಸು’ ಬೇರೆಂತ ವಿಘ್ನ ಇಲ್ಲದ್ದೆ ಮುಂದುವರಿಯಲಿ ಹೇಳ್ತ ಸ್ವಾರ್ಥವೂ ಇದ್ದತ್ತು.

~*~*~

ಪಾರುವ ಮರಾಠಿ ಕ್ಲಾಸು, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಅಹಾಹಾ… ಪಷ್ಟು ಕ್ಲಾಸಾಯಿದು ಕುಮಾರಣ್ಣಾ.. ನಿ೦ಗಳ ಲೇಖನಕ್ಕುದೆ ಕಾದು ಕೂರ್ತ ಹಾ೦ಗೆ ಆವ್ತಾ ಇದ್ದು.. ಒಪ್ಪ೦ಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಾವು ಬೇರೆ ಊರಿಂಗೆ ಹೋಗಿ ಅಲ್ಲಿಯೇ ಇರೆಕಾದ ಸಂದರ್ಭಲ್ಲಿ ಅಲ್ಲಿಯಾಣ ಭಾಷೆ ಕಲಿತ್ತ ಅನಿವಾರ್ಯತೆ ಉಂಟಾವ್ತು. ಹಾಂಗೆ ಕಲಿವಾಗ ಎಷ್ಟೆಲ್ಲಾ ಅನುಭವಂಗೊಆವ್ತು ಹೇಳ್ತರ ನಿರೂಪಣೆ ಲಾಯಿಕ ಅಯಿದು.
  ಮ್ಲಯಾಳಿಗೊ, ತೆಲುಗರು, ತಮಿಳರು ಇಲ್ಲಿ ಬಂದು ಕನ್ನಡ ಕಲಿವಾಗ, ಅವು ಬತ್ತ ಬಂಙ ಕಂಡಿದೆ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಬೊಂಬಾಯಿಯ ಫ್ಲಾಟುಗಳ ವರ್ಣನೆ ಲಾಯಕಾಯಿದು. ಪರ ಊರಿಲ್ಲಿ ಭಾಶೆ ಗೊಂತಿಲ್ಲದ್ದೆ ಪರದಾಟ ಮಾಡೆಕಾದ್ದು ಸಹಜವೇ. ಮರಾಠಿ ಕಲಿಯಲೆ ಹೆರಟ ಪಾರು ಪ್ರಸಂಗಲ್ಲಿ ನೈಜತೆ ಇದ್ದು. ಸರಸ ವಿರಸದೊಟ್ಟಿಂಗೆ ಕುಮಾರಣ್ಣನ ಅನುಭವ ಸರಣಿ ಚೆಂದಕೆ ಹರುದು ಬತ್ತಾ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಏ ಕುಮಾರ ಮಾವಾ,
  ಬೊ೦ಬಾಯಿಯ ಹಳೆ ನೆನಪುಗೊ ಎಲ್ಲಾ ಮತ್ತೆ ಕಣ್ಣ ಮು೦ದೆ ಬ೦ತದಾ,ಭಾಷೆ ಅರಡಿಯದ್ದೆ ಅಸಬಡುದ್ದದು ಇತ್ಯಾದಿ..ಇತ್ಯಾದಿ.. ಏನೇ ಆಗಲಿ,ಹೇ೦ಗೇ ಇರಳಿ ಬದುಕ್ಕುವ ಕಲೆಯ ಸರೀ ಕಲುಶಿ ತಲಗೆ ಅರದು ಮೆತ್ತುವ ಪೇಟೆ ಬೊ೦ಬಾಯಿ,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ಕುಮಾರಮಾವಾ..
  ಪಾರು ಅತ್ತೆಯ ಒಟ್ಟಿಂಗೇ ಬೆಳದ ಮಧುರಾನುಭವದ ಸವಿಜೀವನವ ರಸವತ್ತಾಗಿ ಬೈಲಿಂಗೆ ಹೇಳ್ತಿ.
  ಅದರ ಓದಿ ನೆಗೆಮಾಡ್ತದೇ ಒಂದು ಗಮ್ಮತ್ತು ಒಪ್ಪಣ್ಣಂಗೆ!

  ಪಾರು ಅತ್ತೆಯ ಸಹನೆಗೆ ನಮೋನಮಃ!!
  ಆಗಲಿ, ಅಂತೂ ಮಾರಾಟಿಗಳ ಎಡೆಲಿ ಮರಾಟಿ ಕಲ್ತಿ, ಅಲ್ಲದೋ?

  ಮಾಷ್ಟ್ರುಮಾವ ಹೇಳುದು ಕೇಳಿ “ಶಾಮಾ ಚೆ ಆಯಿ” ಹೇಳ್ತ ಕಾದಂಬರಿ ಇದ್ದು ಹೇಳಿ ಗೊಂತಿತ್ತು. ಅದೊಂದೇ ಮರಾಟಿ ಗೆರೆ ಬಪ್ಪದು ಒಪ್ಪಣ್ಣಂಗೆ! 😉

  ಹರೇರಾಮ :-)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ಅನು ಉಡುಪುಮೂಲೆಸುವರ್ಣಿನೀ ಕೊಣಲೆಶ್ಯಾಮಣ್ಣಪುಟ್ಟಬಾವ°ಸರ್ಪಮಲೆ ಮಾವ°ಚೆನ್ನೈ ಬಾವ°ಪುತ್ತೂರಿನ ಪುಟ್ಟಕ್ಕಕೊಳಚ್ಚಿಪ್ಪು ಬಾವಮಾಲಕ್ಕ°ದೇವಸ್ಯ ಮಾಣಿಪೆಂಗಣ್ಣ°ಡಾಗುಟ್ರಕ್ಕ°ಶ್ರೀಅಕ್ಕ°ಶೀಲಾಲಕ್ಷ್ಮೀ ಕಾಸರಗೋಡುಮುಳಿಯ ಭಾವಅನಿತಾ ನರೇಶ್, ಮಂಚಿಅಕ್ಷರದಣ್ಣಅನುಶ್ರೀ ಬಂಡಾಡಿvreddhiಚೆನ್ನಬೆಟ್ಟಣ್ಣಚುಬ್ಬಣ್ಣಉಡುಪುಮೂಲೆ ಅಪ್ಪಚ್ಚಿಸಂಪಾದಕ°ಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ