ಪರೀಕ್ಷೆಲಿ ಚೀಟಿ ಮಾಡೊದು ಗಮ್ಮತ್ತು ಅಲ್ದೋ?

April 7, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ,

ಈಗ ಪಿ.ಯು.ಸಿ. ಪರೀಕ್ಷೆ ಮುಗುದಾತು. ಮೆಟ್ರಿಕ್ಕಿನವರದ್ದು ನಡೆತ್ತಾ ಇದ್ದು.

ಎನ್ನ ಕಾಲೇಜಿ’ಲಿ ವೀಕ್ಷಣಾದಳದವು ಮೊನ್ನೆ ಒಂದು ಹುಡುಗಿ’ಯ ಹಿಡುದ್ದವು. ಬರೀ ಐದೇ ಚೀಟು ಇತ್ತದ!ಎ೦ತ ರವಕ್ಕೆ ಚೀಟೋ ಹೇಳಿ ಕೇಳಿಕ್ಕೆಡಿ,ಪೆರೀಕ್ಷೆಲಿ ಕೋಪಿ ಮಾಡುಲೆ ತ೦ದ ಚೀಟು !

ಮಾಧ್ಯಮದವ್ವು,  ಎಲ್ಲ ಓಡಿ ಬ೦ದು ಅದಕ್ಕೆ “ಗು೦ಡು” ಹೊಡಕ್ಕೊ೦ಡು ಇತ್ತೋವು.ಎಲ್ಲೋರಿ೦ದ ಮು೦ದೆ ಇದ್ದದು ಟಿ.ವಿ. ೯ ನವ್ವು.ಅವಕ್ಕೆ ಅದು ಹೇ೦ಗೆ ಶುದ್ದಿ ಗೊ೦ತಾವುತ್ತೋ ದೇವರೇ ಬಲ್ಲ°.ನವರಸಭರಿತವಾಗಿ ವೀಕ್ಷಕ ವಿವರಣೆ ಕೊಡುಲೆ ಶುರುಮಾಡಿದವು. ಆ ಹೆಣ್ಣುಮಗಳಿ೦ಗೆ ಎ೦ಥಾ ಪಬ್”ಲಿ”ಸಿಟಿ! (ಸಿಟಿ ಪಬ್ಬಿಲಿಯೋ, ಪಬ್ಬು ಸಿಟಿಲಿಯೋ? ಅಲ್ಲ ಪಬ್ಬು ಸಿಟಿಗಳೆರಡೂ ಈಗಾಣ ಮಕ್ಕಳೊಳವೋ? ಹರಿಯೇ ಬಲ್ಲ° )

“ವೀಕ್ಷಣಾದಳದವರು ಹಿಡಿದಾಗ ನಿಮಗೆ ಹೇಗೆ ಅನ್ನಿಸ್ತಾ ಇದೆ, ನಿಮಗೆ ಈ ಮೊದಲೂ ಹೇಗೆ ಕೋಪಿ ಮಾಡಿ ಅನುಭವ ಇದೆಯೇ? ನಿಮ್ಮನ್ನು ಹೇಗೆ ಮತ್ತು ಏಕೆ ಹಿಡುದ್ರು”, ಇತ್ಯಾದಿ ಇತ್ಯಾದಿ ಪ್ರಶ್ನೆ  ಕೇಳಿದವು!  ಕ್ಷಣ-ಕ್ಷಣದ ಸುದ್ದಿಗೊ!

ಚೀಟಿ ತ೦ದರೆ ಇಷ್ಟೆಲ್ಲಾ ಸುಲಭದ ಪ್ರಶ್ನೆ ಕೇಳ್ತವು ಹೇಳಿ  ಗೊ೦ತಿತ್ತಿಲ್ಲೆ!

ಎನಗೆ ತಲೆ ಬೆಶಿ! ಎನ್ನತ್ರೆ ೧೦  ಚೀಟಿ ಇತ್ತು. ಎನ್ನ ಏಕೆ  ಹಿಡುದ್ದವಿಲ್ಲೇ, ಅಲ್ಲೇ ಕರೆಲಿ ಇತ್ತಿದೆ ಆನು.

ಇನ್ನಾಣ ಪರೀಕ್ಷೆ’ಗೆ ಆನು ಒಂದು ೧೫  ಚೀಟಿ’ಯಾದರೂ ತ೦ದು ಎಲ್ಲ ಕಾಕತ೦ಗಳ ಬೀಳುಸಿ ಕಾ೦ಬಾ೦ಗೆ ಮಾಡ್ತೆ ಟಿ.ವಿ.ಲಿ.

ಟಿ.ವಿ.೯ ‘ರಲ್ಲಿ ಬಪ್ಪ ಅದೃಷ್ಟ  ಬಿಡುಲಾಗ ಮಹರಾಯರೇ!

ಅಲ್ಲಿ ಒ೦ದು ವಿಷಯ ಇದ್ದು- ಆ  ಹುಡುಗಿ ಎವ್ದೋ ಕೋಲೆಜಿ’ನ ದೊಡ್ಡ  ಮನುಷ್ಯ’ನ  ಮಗಳಡ. ಆ ಮನುಷ್ಯ  ದಾನ ಮಾಡೊದರ್ಲಿ ಎತ್ತಿದ ” ಕೈ” ಯಡ ! ಇದು ಗುಟ್ಟು. ಹಳೇ ಕಾಲಲ್ಲಿ “ಕೈ” ಹೇಳಿರೆ “ಜೈ” ಹೇಳುಲಷ್ಟೇ ಗೊ೦ತಿದ್ದದಡ,ಅಜ್ಜ° ಹೇಳುಗು ಒ೦ದೊ೦ದರಿ ನೆ೦ಪಪ್ಪಗ.

ಎನಗೆ ರಾಜಕೀಯಲ್ಲಿ ಅಷ್ಟು ಆಸಕ್ತಿ ಇಲ್ಲೆ.  ಗಾ೦ಧಿಯಜ್ಜಿ, ವಾಜಪ್ಪಯ್ಯ, ಕುಮಾರಣ್ಣ, ಗೀತಕ್ಕ, ಸೀತಕ್ಕ, ಶಾ೦ತಕ್ಕ, ನ೦ದಣ್ಣ, ದೀಪಣ್ಣ, ರಾಮಣ್ಣ, ಚುಬ್ಬಣ್ಣ, ಒಪ್ಪಣ್ಣ  ಹೀ೦ಗೆ ನಾಲ್ಕೈದು ಅಣ್ಣ೦ದ್ರ ಅಕ್ಕ೦ದ್ರ ಕೇಳಿ ಗೊ೦ತು.

ಇರಳಿ,

ಎನ್ನ ಚಡ್ಡಿದೋಸ್ತಿ ಬೋಳ° ಹೇಳಿದ°- “ಏ ಗೆ೦ಟ ಆನು ಬರದ ಪರೀಕ್ಷಾ ಕೇ೦ದ್ರ’ಲ್ಲಿ 3 ಹುಡುಗಿಯರು 2-3 ಚೀಟಿ ತ೦ದದು ಗೊ೦ತಿದ್ದ?  ಹಿಡುದ್ದವಿಲ್ಲೆ ಅವರ. ಕ್ಲಾಸಿಲಿ ಇತ್ತ ಅಧ್ಯಾಪಕಿ ವಿಚಕ್ಷಣ-ದಳದವು ಬಪ್ಪೋದ್ರೋಳ ಚೀಟಿ’ಯಾ ತೆಗದು ಕಿಟಕಿ೦ದ ‘ಒ೦ದು, ಎರಡು, ಮೂರು’ ಹೇಳಿ ೩ ಜನರದ್ದುದೆ ಇಡ್ಕಿತ್ತು.” ಮತ್ತೇ

“ಒ೦ದೇ ಕಾಲೇಜಿನ ಛೀಟರು ಮತ್ತೆ ಮಕ್ಕೊ ಅಲ್ದೋ! ಎನ್ನದೊಬ್ಬ೦ದು ಬೇರೆ ಹೊಡೆಲಿ ಪರೀಕ್ಷೆ, ಶೇ, ನಿನ್ನದು ಅದೃಷ್ಟ ನಮ್ಮ ಶಾಲೆಲಿಯೇ ಪರೀಕ್ಷೆ.. ಹೂ”

ಬೋಳ° 5 ಚೀಟಿ (ಎನ್ನ ಪಾಠಪುಸ್ತಕದ್ದು ಪುಟ!) ತ೦ದಿತ್ತದು ಬೇರೆ ವಿಷಯ. ಗೊ೦ತಾಯ್ದಿಲ್ಲೆಯಡ ಆರಿ೦ಗೂ.

ಬೋಳನ ಚೀಟಿಗಳಲ್ಲಿ ಇತ್ತ ಒ೦ದೇ ಒ೦ದು ವಿಷಯ ಪರೀಕ್ಷೇಲಿ ಬಯಿ೦ದಿಲ್ಲೆಡ!

ಹೀ೦ಗೆ ಬೆಗರು ಒರಶ೦ಡು ಅವನ  ಈ ಅನುಭವ ಹೇಳಿದ.

ಆನು ಕೇಟೆ “ನಿನ್ನ ಚೀಟಿ ಅದಕ್ಕೆ ತೋರ್ಸೆಕ್ಕಾತು, ಎ೦ತಕ್ಕೆ ತೋರ್ಸಿದ್ದಿಲ್ಲೇ?  ಒಪ್ಪ  ಆವ್ತಿತ್ತು”.

ಅವ° ಹೇಳಿದ “ಅವರ ಚೀಟಿ ಖಾಲಿ(ಬ್ಲಾ೦ಕ್ ಪೇಪರು) ಇದ್ದು, ಹಾ೦ಗಾಗಿ ಅವ್ವು ತೋರ್ಸಿದ್ದು, ಛೀಚರು ಇಡ್ಕಿದ್ದಿಕ್ಕು ಹೇಳಿ ಆಲೋಚನೆ ಮಾಡಿದೆ. ಅದಕ್ಕೆ ಅ ಒಪ್ಪ ಕಾರ್ಯ ಮಾಡಲೇ ಹೊಯ್ದಿಲ್ಲೇ”

ಇದಕ್ಕೆ ಹೇಳೋದು ಮ೦ಡೆ ಇಲ್ಲೇ ಹೇಳಿ ಅಲ್ದೋ?

ಒ೦ದ೦ತೂ ಹೇಳಿದ ಒ೦ದೇ ಕಾಲೇಜಿನ ಟೀಚರು ಮತ್ತೆ ಮಕ್ಕೊ ಅಲ್ದೋ! ಹೊಲವೇ ಮೇಯೊದೊ, ಹೊಲವನ್ನೇ ಮೇಯೊದೋ ಗೊ೦ತಿಲ್ಲೆ. ಅಷ್ಟು ಗೊ೦ತಿದ್ದು ಆ ಸಣ್ಣ ಮಾಣಿಗೆ.

ನಮ್ಮ ಅವಿಭಜಿತ ದಕ್ಷಿಣ ಕನ್ನಡದ  ಹುಡುಗಿಯರು ೫೦-೫೦ ಮಾಡಿ ಬಿಡುತ್ತೋವಾಳಿ (ಅಥವಾ ಮೀರ್ಸುತ್ತೊವ) ಸಮಾನತೆಲಿ! ಇದು ಇರಳಿ, ಆದರೆ ಪರಿಸ್ -ತಿಥಿ ಹೀ೦ಗಿದ್ದು!

ಮಾಣಿಯ೦ಗೊ ಏನೂ ಸುಭಗ’ರು ಅಲ್ಲ ಆಲ್ದೋ ಸುಭಗಣ್ಣ ;).

ಈಗ ಕದ್ದುಮುಚ್ಚದೆ ಪರೀಕ್ಷೆ ಬರೆಯುವ ಕ್ರಮ ತು೦ಬಾ ಇದ್ದು ಆತೊ? 😉  ಆನು ಇನ್ನುದೆ ಎದುರು ಕೂಪ ರಾಮಣ್ಣನ ಉತ್ತರ ಕಾಕತ ತೆಕ್ಕೊ೦ಡು ಒಪ್ಪಕ್ಕೆ ಓದಿ ಬರವ ಕ್ರಮ ಒಳುಶಿಗೊ೦ಡು ಬಯಿ೦ದೆ!

ಎ೦ತ ಈಗ ನಿ೦ಗೊಗೆಲ್ಲ ಸಣ್ಣಾಗಿಪ್ಪಗ ಪರೀಕ್ಷೆಲಿ ಆಚೊಡೀಚೊಡೆ ನೋಡಿಗೊ೦ಡು ಚೆ೦ದಕ್ಕೆ ಬರದ್ದೆಲ್ಲ ನೆ೦ಪಾವ್ತಿಲ್ಯೊ? ನೀರ್ಚಾಲು ಶಾಲೆಲಿ,  ಪುತ್ತೂರು ವಿವೇಕಾನ೦ದಲ್ಲಿ, ವಿಟ್ಲ, ಕನ್ಯಾನ,ಪೆರ್ಲ ಶಾಲೆಗಳಲ್ಲಿ, ಹೇ೦ಗಿತ್ತೊ? ಮತ್ತೆ ಎಲ್ಲಿ ಎಲ್ಲಪ್ಪ?

ಇ೦ತಿ ಗೆ೦ಟ

ಪರೀಕ್ಷೆಲಿ ಚೀಟಿ ಮಾಡೊದು ಗಮ್ಮತ್ತು ಅಲ್ದೋ?, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಪರೀಕ್ಷೆಲಿ ಚೀಟಿ ಮಾಡುವದಕ್ಕೆ ಕಾರಣ ಎ೦ತರ?
  ೧. ಪ್ರಾಮಾಣಿಕವಾಗಿ ಕಲಿವಲೆ ಪ್ರಯತ್ನ ಪಟ್ಟರುದೆ ತಲೆಗೆ ಹೋಗದ್ದೆ ಹೇ೦ಗಾದರು ಪಾಸ್ ಅಪ್ಪಲೆ ಬೇಕಾಗಿ.
  ೨. ಉದಾಸೀನ೦ದಾಗಿ ಕಲಿಯದ್ದೆ ಕೂದು ಅಖೇರಿಗೆ ಪರೀಕ್ಷೇಲಿ ಹೇ೦ಗಾರು ಪಾಸ್ ಅಪ್ಪಲೆ ಬೇಕಾಗಿ
  ೩. ಮರ್ಯಾದಿಲಿ ಕಲ್ತು ಬರದ್ದರಿ೦ದಾಗಿ ಪಾಸುಮಾರ್ಕು ಸಿಕ್ಕುಗು, ಆದರೆ ಉತ್ತಮ ಶ್ರೇಣಿ ಸಿಕ್ಕ. ಈ ಶ್ರೇಣಿ ಸಿಕ್ಕಲೆ ಬೇಕಾಗಿ.
  ೪. ಒಟ್ಟಿ೦ಗೆ ಕಲಿತ್ತ ನಮ್ಮ ಸಹಪಾಠಿ ಪ್ರತಿಸ್ಪರ್ಧಿ೦ದ ಹೆಚ್ಚು ಮಾರ್ಕು ತೆಗವಲೆ ಬೇಕಾಗಿ.

  ಇದರ್ಲಿ ಎನ್ನ ಅಭಿಪ್ರ್ರಾಯ೦ಗೊ ಹೀ೦ಗೆ ಇದ್ದುಃ
  ೧. ಈ ಕಾರಣ೦ದಾಗಿ ನಕಲಿ ಮಾಡ್ತವು ಅವರ ಕಲಿಯುವಿಕೆಯ ವಿಧಾನ ಬದಲುಸುವದಷ್ಟೇ ಪರಿಹಾರ. ಯಾವತ್ತೂ ವಿದ್ಯಾಭ್ಯಾಸಲ್ಲಿ ಓದುವದಲ್ಲ, ವಿಷಯ೦ಗಳ ಕಲಿಯೆಕು. ಪೇಪರು, ಕತೆಪುಸ್ತಕ ಇದೆಲ್ಲ ಓದಲಕ್ಕು, ಪಾಠ೦ಗಳ ಕಲಿಯೆಕು.
  ೨. ಈ ಕಾರಣ೦ದಾಗಿ ನಕಲಿ ಮಾಡ್ತವು ತಿಳ್ಕೋಳೆಕಾದ್ದದು ‘ನಿದ್ರಾ, ತ೦ದ್ರಾ, ಭಯ೦, ಕ್ರೋಧಾ, ಆಲಸ್ಯ೦, ದೀರ್ಘಸೂತ್ರತಾ’ ಈ ಆರು ವಿಷಯ೦ಗೊ ವಿದ್ಯಾರ್ಥಿ ಜೀವನಲ್ಲಿ ಇಪ್ಪಲಾಗಾಡ.. (ಸಾ೦ಕೇತಿಕವಾಗಿ ಹೇಳಿದ್ದದು, ಒರಗದ್ದೆ ಇದ್ದರೆ ಮನುಷ್ಯ೦ಗೆ ಮರುಳು ಹಿಡಿಗು, ಅಳತೆ ಮೀರ್ಲಾಗ ಹೇಳಿ ಅಷ್ಟೆ)
  ೩. ನಾವು ನಮ್ಮ ಕೃತಿಗಳಲ್ಲಿ ಯಾವತ್ತೂ ಪ್ರಾಮಾಣಿಕವಾಗಿರೆಕು, ಅದರ ಫಲ ನವಗೆ ಖ೦ಡಿತ ಸಿಕ್ಕುಗು. ಕಷ್ಟಪಟ್ಟು ದುಡುದು ಹೆಜ್ಜೆ ಉ೦ಬದು ಒಳ್ಳೇದೊ? ಅಥವಾ ಕದ್ದು ತ೦ದ ಹೋಳಿಗೆ ಒಳ್ಳೇದೊ?
  ೪. ಮೇಲಾಣ ವಿಷಯವೇ ಇಲ್ಲಿಯೂ ಅನ್ವಯ ಆವ್ತು.

  ಎ೦ತದೇ ಮಾಡಿರುದೆ, ಅಡ್ಡದಾರಿ೦ದ ಗಳಿಸಿದ ವಿಜಯ೦ಗೊ ಕೇವಲ ತಾತ್ಕಾಲಿಕ. ನಿಜವಾದ ಜೀವನಲ್ಲಿ ಬಪ್ಪ ಪರೀಕ್ಷೆಗಳಲ್ಲಿ, ನಕಲಿ ಮಾಡಿ ಜಯಿಸಲೆಡಿಯ. ಅಲ್ಲಿ ನಮ್ಮ ಸಕಾಯಕ್ಕೆ ಬಪ್ಪದು ನಮ್ಮ ನಿಜವಾದ ಯೋಗ್ಯತೆಯೇ ಹೊರತು, ನಕಲಿ ಮಾಡಿ ಗಳಿಸಿದ ಮಾರ್ಕುಗೊ ಖ೦ಡಿತ ಅಲ್ಲ.

  ವಿದ್ಯಾರ್ಥಿ ಜೀವನಲ್ಲಿ ನಮ್ಮ ವ್ಯಕ್ತಿತ್ವ ರೂಪೀಕರಣ ಆವ್ತಾ ಇರ್ತು. ಅ೦ಥಾ ಸಮಯಲ್ಲಿಯೇ ಹೀ೦ಗಿರ್ತ ಅಡ್ಡ ದಾರಿಲಿ ಹೋಪಲೆ ಅಭ್ಯಾಸಮಾಡಿರೆ ಹೇ೦ಗೆ? ಕಲಿತ್ತ ಮಕ್ಕೊ ಒಳ್ಳೇ ಒಪ್ಪ ಮಾಣಿ/ಕೂಸುಗೊ ಆಗಿ ಚೆ೦ದಕೆ ಕಲ್ತು ಪರೀಕ್ಷೆಗೆ ಬರೆಯೆಕೇ ಹೊರತು ನಕಲಿ ಮಾಡಿ ಅಲ್ಲ.

  [Reply]

  VA:F [1.9.22_1171]
  Rating: +5 (from 5 votes)
 2. ಅರ್ಗೆ೦ಟು ಮಾಣಿ

  ಗಣೇಶ ಭಾವ ಲಾಯ್ಕಕ್ಕೆ ಹೇಳಿದ್ದಿ, [ಬೋಸಣ್ಣ ಇನ್ನೂ ಉತ್ತರ ಕೊಟ್ಟಿದೊವಿಲ್ಲೆ ಒ೦ದು ವಿಷಯಕ್ಕೆ.]
  ಈಗ [ಕ್ಲಾಸಿಲಿ ಇತ್ತ ಅಧ್ಯಾಪಕಿ ವಿಚಕ್ಷಣ-ದಳದವು….] ಇದು ಸರಿಯೋ? ಇದೂ ನಡೆತ್ತಾ ಇದ್ದನ್ನೆ!

  [Reply]

  ಗಣೇಶ ಪೆರ್ವ

  ಗಣೇಶ Reply:

  ಅರ್ಗೆ೦ಟು ಅಣ್ಣಾ..

  ಕ್ಲಾಸಿಲ್ಲಿ ಇಪ್ಪ ಪರೀಕ್ಷಕರೂ ಕೂಡ ಇದಕ್ಕೆ ಪ್ರೋತ್ಸಾಹ ಕೊಡ್ತ ರೀತಿಲಿ ಕೆಲವು ಶಾಲಾ ಕೋಲೇಜುಗಳಲ್ಲಿ ಈಗ ನೆಡಕ್ಕೋಳ್ತಾ ಇದ್ದ್ದವಾಡ.. ಇದು ಖ೦ಡಿತ ಸರಿಯಲ್ಲ ಹೇಳಿ ಎನ್ನ ಅಭಿಪ್ರಾಯ.
  ಅದೇ ರೀತಿ ಕೆಲವು ಜನ ಬಾಯಿಪಾಠ ಮಾಡಿ ಬರೆತ್ತವು, ಇದು ನಕಲಿ ಮಾಡುವದಕ್ಕೆ ಸಮಾನ ಹೇಳ್ತ ರೀತಿಲಿ ಒ೦ದು ಒಪ್ಪ ಓದಿದೆ, ಇದಕ್ಕೆ ಎನ್ನ ಸಹಮತ ಇಲ್ಲೆ. ಇದು ನಕಲಿ ಮಾಡುವದರ ಪರೋಕ್ಷವಾಗಿ ಸಮರ್ಥಿಸುವ ಒ೦ದು ಪಲಾಯನವಾದ ಅಷ್ಟೆ!!
  ಬಾಯಿಪಾಠ ಮಾಡಿ ಪರೀಕ್ಷೆಲಿ ಹೋಗಿ ಅದರ ವಾ೦ತಿ ಮಾಡುವದರಲ್ಲಿಯುದೆ ಅರ್ಥ ಇಲ್ಲೆ. ಅದು ಅ೦ತೆ ಮಾರ್ಕು ತೆಗೆವಲೆ ಅಕ್ಕಷ್ಟೆ ಹೊರತು ಗುಣಕ್ಕಿಲ್ಲೆ. ಮಾರ್ಕು ತೆಗವಲೆ ಕೂಡ ದೊಡ್ಡ ಗುಣ ಇಲ್ಲೆ, ಪ್ರತ್ಯೇಕವಾಗಿ ತಾ೦ತ್ರಿಕ / ವೃತ್ತಿಪರ ಶಿಕ್ಷಣ೦ಗಳಲ್ಲಿ (ಉದಾ – ಇ೦ಜಿನಿಯರಿ೦ಗ್) ಹೀ೦ಗಿಪ್ಪ ವಿಷಯ೦ಗಳಲ್ಲಿ ಬಾಯಿಪಾಠ ಮಾಡಿ೦ಡು ಹೋದರೆ, ಅಲ್ಲಿ ಬಪ್ಪ ಪ್ರಶ್ನೆಗಳ ರೀತಿ ಚೂರು ಬದಲಾಗಿದ್ದು ಹೇಳಿ ಆದರೆ, ಬಾಯಿಪಾಠ ಮಾಡಿ೦ಡು ಹೋದವನ ಗತಿ ಗೋ…ವಿ೦ದ!! ಕಲ್ತುಗೊ೦ಡು ಹೋದವ೦ಗೆ ಯಾವ ರೀತಿಲಿ ಕೇಳಿರೂ ಉತ್ತರುಸಲೆ ಎಡಿಗು.
  ಬಿಇ / ಬಿ ಟೆಕ್ / ಇತರ ವೃತ್ತಿಪರ ಕೋರ್ಸುಗೊ / ಇತರ ಕೋರ್ಸುಗೊ ಎಲ್ಲದರಲ್ಲಿಯುದೆ ಈಗಳುದೆ ನಕಲಿ ಮಾಡದ್ದ ಎಷ್ಟೋ ವಿದ್ಯಾರ್ಥಿಗೊ ಇದ್ದವು, ಆದರೆ ಅವರ ಅನುಪಾತ ಮೊದಲಿ೦ದ ಕಡಮ್ಮೆ ಆವ್ತಾ ಇದ್ದೋ ಹೇಳುವ ಸ೦ಶಯ.
  ನಿಜವಾದ ಜ್ನ್ಹಾನಕ್ಕೆ ಇಪ್ಪ ಬೆಲೆ ನಕಲಿ ಮಾಡಿ ತೆಗೆತ್ತ ಮಾರ್ಕಿ೦ಗೆ ಬಾರ. ಒ೦ದರಿಯ೦ಗೆ ಬಚಾವಾದರುದೆ ನಿಜವಾದ ಪರೀಕ್ಷೆ ಬಪ್ಪಗ ಸೋಲೇ ಗತಿ..

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  😀 ಈಗ ಎರಡನೆ ಹೊಡೆ ಸರಿ ಹೇಳಿದಿ ಗಣೇಶ ಭಾವ.
  ಕ೦ಪೆನಿಗೊ ಮಾಡ್ವ ಇ೦ಟರ್ವ್ಯುಗಳಲ್ಲಿ ಹೇ೦ಗೆ ಏಗುಗೊ! ನಮ್ಮ ದೇಶದ R&D ಏಕೆ ಹಿ೦ದೆ ಇದ್ದು ಹೇಳಿ ಇಲ್ಲಿ ಗೊ೦ತಾವ್ತಲ್ಲದಾ? ಮತ್ತೆ ಇಪ್ಪೊದ್ರಲ್ಲಿ ಅವ್ಯವಹಾರ೦ಗೊ ಏಕೆ ಜಾಸ್ತಿ ಹೇಳಿ ಕೂಡ!
  ಖುಶಿ ಆತು. :)

  ಒ೦ದು ಕೇಳಿದ್ದೆ ಸಿಕ್ಕಾಪಟ್ಟೆ ಓದಿದ ಮತ್ತೆ ಜ್ನ್ಹಾನ ಇಪ್ಪ ವಿದ್ಯಾರ್ಥಿಗಳಿ೦ದ- ವಿಟಿಯು ಪರೀಕ್ಶೆ ವಟ್ಟಾರೆ ಇರ್ತು ಹೇಳಿ, ಮತ್ತಿನ್ನೆ೦ತೆಲ್ಲ ಕ೦ಮ್ಪ್ಲೈನ್ತ್ಸು! ಎನಗದು ಅರ್ಥ ಆಯ್ದಿಲ್ಲೆ. ಇನ್ನೂ ನೋಡೆಕ್ಕಶ್ಟೆ ಅದೆಲ್ಲ

  ಇ೦ತಿ ಗೆ೦ಟ

  [Reply]

  VN:F [1.9.22_1171]
  Rating: 0 (from 0 votes)
  ಗಬ್ಬಲಡ್ಕ ಕೇಶವ

  ಕೇಚಣ್ಣ Reply:

  ಎನ್ನ ಒಪ್ಪಲ್ಲಿ ನಿಂಗೊಗೆ ಎಂತ ತಪ್ಪು ಕಂಡತ್ತು ಹೇಳಿ ಎನಗೆ ಅರ್ಥ ಆಯಿದಿಲ್ಲೆ.

  ಏಕೆ ಹೇಳ್ರೆ,

  ಇಲ್ಲಿ ಆನು ನಕಲಿ ಮಾಡುದು ತಪ್ಪು ಹೇಳಿಯೇ ಹೇಳಿದ್ದೆ…

  ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಎನ್ನದು ಇದೇ ಅಭಿಪ್ರಾಯ…

  {….ಎಲ್ಲರೂ ಕೋಪಿ ಮಾಡುದು ತಪ್ಪೂಳಿ ಹೇಳ್ತವು. ಅವ್ವು ಹೇಳುದು ಸರಿ ಕೂಡ. ಆದರೆ,….}

  ಇದರ ತಪ್ಪಾಗಿ ಅರ್ಥ ಮಾಡಿಯೊಂಡಿದಿರೋ ಗೊಂತಿಲ್ಲೆ…

  ಎನ್ನ ಪ್ರತಿಕ್ರಿಯೆಯ ಒಟ್ಟು ಅರ್ಥ ” ಬಾಯಿಪಾಟ ಮಾಡ್ಲಾಗ, ಅದು ಒಳ್ಳೆದಲ್ಲ” ಹೇಳಿ ಅಷ್ಟೆ…

  ಇನ್ನು,

  {ಕೆಲವು ಜನ ಬಾಯಿಪಾಠ ಮಾಡಿ ಬರೆತ್ತವು, ಇದು ನಕಲಿ ಮಾಡುವದಕ್ಕೆ ಸಮಾನ ಅಲ್ಲ} ಹೇಳಿದ್ದಿ.

  ವಿಚಕ್ಷಣ ದಳದವರ ಕಾನೂನಿನ ಪ್ರಕಾರ ಮಾತ್ರ ಸಮಾನ ಅಲ್ಲ ಅಷ್ತೆ…

  ಬೇರೆ ಯಾವ ರೀತಿಲಿಯೂ “ಸಮಾನ ಅಲ್ಲ” ಹೇಳ್ಳೆ ಕಾರಣ ಇಲ್ಲೆ…
  ಏಕೇಳ್ರೆ ಇಬ್ರಿಂಗೂ ಪರೀಕ್ಷೆ ಕಳುದಿಕ್ಕಿ ಎಂತ ಗೊಂತಿರ್ತಿಲ್ಲೆ…

  ಇಷ್ತಾಗಿಯೂ ಎನ್ನ ಪ್ರತಿಕ್ರಿಯೆ ನಿಂಗೊಗೆ ಸರಿ ಕಾಣದ್ರೆ, ರಾಜಕೀಯದವ್ವು ಹೇಳುವ ಹಾಂಗೆ, “ಇದು ಎನ್ನ ವೈಯಕ್ತಿಕ ಅಭಿಪ್ರಾಯ.”

  ನಮಸ್ಕಾರ…

  [Reply]

  ಗಣೇಶ ಪೆರ್ವ

  ಗಣೇಶ Reply:

  ಎನ್ನ ಅಭಿಪ್ರಾಯಲ್ಲಿ, ಬಾಯಿಪಾಠ ಮಾಡುವದು ಮತ್ತು ನಕಲಿ ಮಾಡುವದರಲ್ಲಿ ‘ನೈತಿಕತೆ’ಯ ದೃಷ್ಟಿಲಿ ಸಮಾನತೆ ಇಲ್ಲೆ, ‘ನೈತಿಕತೆ’ಯ ದೃಷ್ಟಿಲಿ ನಕಲಿ ಮಾಡುವದು ಬಾಯಿಪಾಠ ಮಾಡುವದಕ್ಕಿ೦ತ ಕೀಳು ಕೆಲಸ ಹೇಳಿ ಎನ್ನ ಭಾವನೆ. ಆದ ಕಾರಣ ಆನು ಇದೆರಡುದೆ ಸಮಾನ ಅಲ್ಲ ಹೇಳಿ ಆನು ಹೇಳಿದ್ದದು..

  ಬಾಯಿಪಾಠ ಮಾ೦ತ್ರ ಮಾಡುವದು ಒಳ್ಳೇ ಅಭ್ಯಾಸ ಅಲ್ಲ ಹೇಳ್ತ ನಿ೦ಗಳ ಅಭಿಪ್ರಾಯಕ್ಕೆ ಎನ್ನ ೧೦೦% ಸಹಮತ ಇದ್ದು.

  ಎನ್ನ ಅಭಿಪ್ರಾಯ೦ದಾಗಿ ನಿ೦ಗೊಗೆ ಯಾವುದೇ ರೀತಿಲಿ ಕಿರಿಕಿರಿ / ಬೇಜಾರು ಆದರೆ ದಯವಿಟ್ಟು ದೊಡ್ಡ ಮನಸ್ಸು ಮಾಡಿ ಕ್ಷಮಿಸಿಕ್ಕಿ.. ಆರೋಗ್ಯಕರ ಚರ್ಚೆ ಆದರೆ ಅಲ್ಲದೊ ನವಗೆ ಗೊ೦ತಿಲ್ಲದ್ದ ಹೊಸ ಹೊಸ ವಿಷಯ೦ಗೊ ಗೊ೦ತಪ್ಪದು..

  ಗಬ್ಬಲಡ್ಕ ಕೇಶವ

  ಕೇಚಣ್ಣ Reply:

  ಅಪ್ಪು….

  “ನೈತಿಕತೆ”ಯ ದೃಷ್ತಿಲಿ ಕೋಪಿ ಮಾಡುದು ಕೀಳು ಸರಿ…

  ಮತ್ತೆ, ಆರೋಗ್ಯಕರ ಚರ್ಚೆಯೂ ಅತ್ಯಗತ್ಯ…

  ಇನ್ನು,
  {ಎನ್ನ ಅಭಿಪ್ರಾಯ೦ದಾಗಿ ನಿ೦ಗೊಗೆ ಯಾವುದೇ ರೀತಿಲಿ ಕಿರಿಕಿರಿ / ಬೇಜಾರು ಆದರೆ ದಯವಿಟ್ಟು ದೊಡ್ಡ ಮನಸ್ಸು ಮಾಡಿ ಕ್ಷಮಿಸಿಕ್ಕಿ..}
  ಇದರ ಪ್ರಶ್ನೆ ಬತ್ತಿಲ್ಲೆ…..!! :)

  ಒಟ್ಟಿಂಗೆ ಅದೇ ಕೋರಿಕೆ ಎನ್ನ ಕಡೇಂದಲುದೇ…. 😀

  VN:F [1.9.22_1171]
  Rating: 0 (from 0 votes)
 3. mankuthimma

  slipper chappalili copy baradu tappavu iddavu

  [Reply]

  VA:F [1.9.22_1171]
  Rating: +1 (from 1 vote)
 4. ಗಿರೀಶ

  ಆನು BE ಮಾಡುವಗ, ಎನ್ನ classmates micro xerox ಹೇಳಿ ಮಾಡ್ಸುಗು.. ಒನ್ಡು ಸಣ್ಣ paper ತುನ್ಡಿಲಿ ಇಡಿ ಪಾಟ ಇಕ್ಕು..
  ಆನುದೆ ಕೊಪಿ ಮಡುವೆ .. ಃ) ಹಿನ್ದೆ ಕೂದವನ ಪೆಪರ್ ನೊಡಿ ಬರವ್ದು.. ಃ)
  ಒನ್ದು time..

  [Reply]

  VA:F [1.9.22_1171]
  Rating: +1 (from 1 vote)
 5. suhaa...s

  ಎಂಗಳ ಕಣ್ನುಗೊ ಸೂಕ್ಶ್ಮ ಇದ್ದೊ ಇಲ್ಲದೊ ಹೇಳಿ ನೋಡ್ಲೆ ಕಾಪಿ ಮಾಡೆಕು….!!!!

  [Reply]

  VN:F [1.9.22_1171]
  Rating: +1 (from 1 vote)
 6. ಗಬ್ಬಲಡ್ಕ ಕೇಶವ

  ಲೇಖನ ಒಳ್ಳೆದಾಯಿದು.

  ಹಾಸ್ಯದ ಧಾಟಿಲಿ ಇದ್ದು. ಹಾಂಗಾಗಿ ಎನ್ನ ಒಪ್ಪವ ‘ತುಂಬ’ ಗಂಭೀರವಾಗಿ ತೆಕ್ಕೊಳೆಡಿ!

  ಎಲ್ಲರೂ ಕೋಪಿ ಮಾಡುದು ತಪ್ಪೂಳಿ ಹೇಳ್ತವು. ಅವ್ವು ಹೇಳುದು ಸರಿ ಕೂಡ.
  ಆದರೆ, ‘ಚೀಟಿ’ ಮಾಡದ್ದವು ಹಚ್ಚಿನವು, ಮುಖ್ಯವಾಗಿ ಬಿಯಿ ಪರೀಕ್ಷೆಲಿ, ಪರೀಕ್ಷೆಯ ಮುನ್ನಾಣ ದಿನ ಪೂರ ಓದಿತ್ತು (ಹೆಚ್ಚುಕಮ್ಮಿ ಬಾಯಿಪಾಟ), ಪರೀಕ್ಷೆಲಿ ಪೂರ ಕಾರಿತ್ತು! ಇದಕ್ಕೂ ಚೀಟಿ ತೆಕ್ಕೊಂಡೋಪದಕ್ಕೂ ಹೆಚ್ಚಿಗೆ ವೆತ್ಯಾಸ ಇದ್ದ? ಏಕೇಳ್ರೆ, ಪರೀಕ್ಷೆ ಕಳುದಿಕ್ಕಿ ಎಂತ ಗೊಂತಿರ ವಿಶೆಯದ ಬಗ್ಗೆ!
  ಚೀಟಿ ಮಡಗುವವ್ವು ಪರೀಕ್ಷೆ ಹೋಲಿಂಗ ‘ಮೈಕ್ರೋ ಝೆರಾಕ್ಸ್’ ತೆಕ್ಕೊಂಡೋಗಿ ಪರೀಕ್ಷೆ ಮುಗುದಪ್ಪಗ ಇಡ್ಕುತ್ತವು.
  ಚೀಟಿ ಮಡುಗದ್ದವು (ಮಡುಗಲೆ ಹೆದರಿಕೆ ಇಪ್ಪವ್ವು!) ‘ಮ್ಯಾಕ್ರೋ ಝೆರಾಕ್ಸ್’ ಕಾಕತವ ಹೋಲಿನೊಳಾಂಗೆ ಹೋಪಂದ ಮದಲೇ ಇಡ್ಕುತ್ತವು! :-(

  ಎಂತ ಹೇಳ್ತಿ?! :-)

  [Reply]

  VN:F [1.9.22_1171]
  Rating: +1 (from 1 vote)
 7. ಅರ್ಗೆ೦ಟು ಮಾಣಿ

  ಹ್ಮ್,

  ಏ ಕೇಚಣ್ಣ ಒೞೆದಾಯ್ದು, ಕಷ್ಟ೦ಗಳ ಹೇಳ್ಯೊ೦ಬೊದು ಉತ್ತಮ ಈ ರೀತಿಲಿ. ನಿ೦ಗೊ ಹೇಳಿದ ಒ೦ದು ವಿಧಾನ ಈಗ ಗೊ೦ತಾದ್ದು :)

  ಕೋಪಿ ಮಾಡೊದಕ್ಕೆ ಆನು ಸರಿ ಅಥವಾ ತಪ್ಪು ಹೇಳ್ತಾ ಇಲ್ಲೆ, ಅದರ ಬಗ್ಗೆ ಮಾತಾಡ್ವ ಹೇಳಿ ಆನು ಈ ಪೋಷ್ತು ಹಾಕಿತ್ತೆ.

  ಏನೇ ಇರಳಿ ಶಿಕ್ಷಣ ಸ೦ಸ್ಥೆಗಳಲ್ಲಿ ವಿದ್ಯಾರ್ಥಿ ಮಾತ್ರ ಅಲ್ಲ ಶಿಕ್ಶ(ಕ/ಕಿ)ರೂ ಈಗ ಕೋಪಿ ಮಾಡೊದಕ್ಕೆ ಪ್ರೋತಾಹ ಕೊಡ್ತಾ ಇಪ್ಪೊದು ಕಾ೦ಣ್ತಲ್ಲ! ಇದು ಮು೦ದುವರಿದರೆ ನಮ್ಮ ದೇಶ ಒೞೆದಕ್ಕು ಹೇಳಿ ಹೇಳುಲಕ್ಕಲ್ದಾ!

  ಗಣೇಶ ಮಾವ ಉತ್ತಮವಾಗಿ ಬರದೊವು, ಆದರೆ ಅದು ಒ೦ದು ಹೊಡೆಯಾಣದ್ರ ಹಾ೦ಗೆ ಕ೦ಡಿದು ಎನಗೆ.

  ಕ್ಷಮೆ ಇರಳಿ, ರಾಮಣ್ಣನಲ್ಲಿಗೆ ಹೋಗಿತ್ತೆ ಸುಳ್ಯಕ್ಕೆ. ೨ ದಿನ ಅಲ್ಲಿ ಇತ್ತೆ. ತಿಥಿ ಇತ್ತು ಅಜ್ಜಿದು.

  ಇ೦ದು ಕ೦ಪ್ಯೂಟರು ನೋಡ್ವಾಗ ಎಲ್ಲರೂ ಬೈಲಿಲಿ ಭಯ೦ಕರವಾಗಿ ಬೇರೆ ಬೇರೆ ವಿಶಯ೦ಗಳಲ್ಲಿ ಇದ್ದೊವು ವಿಮರ್ಶೆ ಮಾಡ್ಯೊ೦ಡೊ, ನೋಡಿ ಆಯೆಕ್ಕಶ್ಟೆ. ಎಲ್ಲರೂ ಪದ್ಯ೦ಗಳ ಬರವ ಮೂಡಿಲಿ ಇಪ್ಪ ಹಾ೦ಗೆ ಕಾ೦ಣ್ತು, ಮು೦ದುವರಿಯಲಿ ಇದು. :)

  ಗೆ೦ಟಿನೊ೦ದಿಗೆ,
  ಗೆ೦ಟ

  [Reply]

  ಗಬ್ಬಲಡ್ಕ ಕೇಶವ

  ಕೇಚಣ್ಣ Reply:

  ಇರಳಿ ಬಿಡಿ ಗೆಂಟಣ್ಣ….,
  ಬಾಯಿಪಾಟ ಮಾಡುದು ಸರಿ ಹೇಳಿಯೋ, ಕೋಪಿ ಮಾಡುದು ಸರಿ ಹೇಳಿಯೋ ಆನು ಬರದ್ದಲ್ಲ.

  ಇಪ್ಪ, ಕಂಡ ವಿಶೆಯ ಬರದ್ದಷ್ತೆ….

  ಹೋಗಲಿ, ಚರ್ಚೆ ಮಾಡುತ್ಸು ಬೇಡ…

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  😀

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಅಕ್ಷರದಣ್ಣವಿದ್ವಾನಣ್ಣರಾಜಣ್ಣವೇಣಿಯಕ್ಕ°ಜಯಶ್ರೀ ನೀರಮೂಲೆಪುಣಚ ಡಾಕ್ಟ್ರುಕೊಳಚ್ಚಿಪ್ಪು ಬಾವವಾಣಿ ಚಿಕ್ಕಮ್ಮಶರ್ಮಪ್ಪಚ್ಚಿಸರ್ಪಮಲೆ ಮಾವ°ಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಮಾಲಕ್ಕ°ಪವನಜಮಾವಶ್ಯಾಮಣ್ಣಅನು ಉಡುಪುಮೂಲೆಗೋಪಾಲಣ್ಣಚೆನ್ನಬೆಟ್ಟಣ್ಣನೀರ್ಕಜೆ ಮಹೇಶವೇಣೂರಣ್ಣಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ