ಪೆಟ್ರೋಲಿಂಗೆ ಏರಿಯಪ್ಪಗ ನಮ್ಮವಕ್ಕೆ ಏರಿತ್ತೋ?

May 23, 2012 ರ 11:15 pmಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬುಲ್ಲೆಟ್ ಬಾವ: ಪೆಟ್ರೊಲು 82 ಮೈಲೇಜು 28
ಚೆನ್ನೈ ಬಾವ: ಇನ್ನು ಒಂದು ಟ್ರಿಪ್ಪು ನೆಡಕ್ಕೊಂಡೇ, ಇಲ್ಲದ್ರೆ ಅಸಲಾಗ
ದೊಡ್ಡಬಾವ: ಮತ್ತೆ ಹರತಾಳ.. ಸಂಬಳ ಏರಿದಸ್ಟೆ ಪೆಟ್ರೋಲಿಂಗೂ ಏರಿತ್ತು. ನೆಗಾಡೆಕ್ಕೋ? ಕೂಗೆಕ್ಕೋ?
ತೆಕ್ಕುಂಜ ಮಾವ: ಪೆಟ್ರೊಲು ಇಲ್ಲದ್ದೆ ಓಡುತ್ತರ ಕಂಡು ಹಿಡುದರಾತನ್ನೇ
ಮುಳಿಯ ಬಾವ: ವಾಲುವ ಬಸ್ಸೇ ಗೆತಿ.. ಅದಕ್ಕೂ ಹೆಚ್ಚಕ್ಕೊ?
ಚೆನ್ನೆಬೆಟ್ಟು: ಓಪೀಸು ಬಸ್ಸು ಎಲ್ಲಿ ನಿಂಬದಪ್ಪಾ..
ಪೆರ್ವದಣ್ಣ: ಓಯೀ ರಜಾ ನೀರು ಕಳುಗಿಕ್ಕಿ
ಸುಭಗ: ಇಂದು ತುಂಬಿಸಿದ್ದು ಮುಗಿವಲಪ್ಪಗ ಬೇಲೆನ್ಸು ಮಾಡುವ
ಮಾಮಸಮ: ಮನೆಲೇ ಕೂದು ಕೆಲ್ಸ ಮಾಡುದೋ?
ಅಭಾವ: ನಾವು ನೆಡಕ್ಕೊಂಡೇ ಹೋಪ
ಒಪ್ಪಣ್ಣ: ಎತ್ತಿನ ಗಾಡಿಲಿ ಬಪ್ಪವಕ್ಕೆ ಕೈ ಹಿಡಿವನೋ?
ಬೋಚ: ರೈಲು ಬಿಡುದೋ?
ನೆಗೆಗಾರ: ಇಮಾನು ಮೇಲೆ ಹೋಪನೋ?
ಶರ್ಮಪ್ಪಚ್ಚಿ: ವಾಚಿನ ಪ್ರತಿಫಲನಂದ ಓಡ್ಸುಲೆಡಿಗೋ?
ಡೈಮಂಡು: ಗೇಸಿಲಿ ಒಡ್ಸುವನೋ?
ಅಡ್ಕತ್ತಿಮಾರು ಮಾವ : ಬೆಟ್ರಿಲಿ ಓಡುಸುತ್ತದು ನಮ್ಮ ಗುಡ್ಡೆ ಹತ್ತುಗೊ?
ಬೊಳುಂಬು ಮಾವ : ಇನ್ನೊಂದು ನಾಟಕ ಬರವಲಕ್ಕೋ ?
ಆಚೆಕರೆಮಾಣಿ: ಕೆಂಪಾನೆಗೆ ಹೊಗೆ ಹಾಕೆಕಸ್ಟೇ..
ಪುಟ್ಟಭಾವ : ಅಂಬಗ ಆನಿನ್ನು ಅತ್ಲಾಗಿ ಬರೆಡದೊ?
ಈಚ ಭಾವ : ಪೆಟ್ರೋಲ್ ಬಿಟ್ಟು ಡೀಸಲಿನದ್ದರ ಹಿಡಿವನೊ?
ಅನುಪಮಕ್ಕ : ಕಾರು ಬಿಟ್ಟು ಸ್ಕೂಟಿಯೇ ಸಾಕೊ?
ಶೇಡಿಗುಮ್ಮೆ ಪುಳ್ಳಿ: ಆನೀಗ ಎಂತ ಮಾಡೆಕು?
ಕೊಳಚ್ಚಿಪ್ಪು ಭಾವ: ಡೋಲರಿಂಗೆ ಉಬ್ಬುವಾಗ ಎಣ್ಣಗೂ ಏರೆಡದೋ?
ಬೆಟ್ಟುಕಜೆ ಅನಂತಣ್ಣ : ಒಂದು ಜಂಬ್ರಂದಲೇ ಇನ್ನೊಂದು ಜಂಬ್ರಕ್ಕೆ ಹೋತಿಕ್ಕುದೋ?
ಯೆನಂಕೂಡ್ಳಣ್ಣ: ಆನಿಗಲೇ ಹೆರಟೆ ಪೆಟ್ರೊಲು ಪಂಪು ಹತ್ತರೆ ಪಟ ತೆಗವಲೆ
ಬಂಡಾಡಿ ಪುಳ್ಳಿ: ಎನಗೆಂತ ಮಾಡೇಡ, ಅದೆಲ್ಲ ಅವ್ವು ನೋಡಿಗೊಳ್ತವು.!
ಪುತ್ತೂರ ಪುಟ್ಟಕ್ಕ : ಎನಗೂ ಎಂತ ಆಗೇಡ . ಆನೂ ಹಿಂದೆ ಕೂಬವಳು.
ದೊಡ್ಡಜ್ಜನ ಪುಳ್ಳಿ: ಪೆಟ್ರೊಲಿಂಗೆ ಏರಿತ್ತು, ಹರತಾಳ ಇಕ್ಕು, ಪಿಕ್ನಿಕ್ ಪಿಕ್ಸು ಮಾಡುಲಕ್ಕು
ಒಪ್ಪಕ್ಕ: ಇನ್ನು ಕೋಲೇಜಿಂಗೆ ಹೇಂಗೆ ಹೋಪದಪ್ಪಾ..
ಬಂಡಾಡಿ ಅಜ್ಜಿ : ಮದಲಿಂಗೆ ಹೀಂಗೆಲ್ಲ ಇದ್ದತ್ತಿಲ್ಲೆಪ್ಪಾ
ದೀಪಿಕಾ : ಆನೊಂದು ಪದ್ಯ ಹೇಳೆಕಾ
ಶ್ರೀ ಅಕ್ಕಾ : ಅಲ್ಲ ಎಂತ ಸೊಕ್ಕು ಅವಕ್ಕೆ ಹೀಂಗೊಂದು
ಜಯಕ್ಕ: ಗೋ ಅರ್ಕಂದ ಕಾರು ಓಡುಸೆಲೆಡಿಯದೋ
ಸುವರ್ಣಿನಿ ಅಕ್ಕ: ಎಂಗಳ ಟ್ರಿಪ್ಪು ಎಲ್ಲಾ ಕ್ಯಾನ್ಸಲ್, ಇನ್ನು ಅಪ್ಪೆ ಮೆಡಿ ತಪ್ಪದು ಹೇಂಗೆ?
ಬಟ್ಟಮಾವ : ಶೋ ದೇವರೇ ಎಂತ ಸೆಕೆ ಇದು. ಎಂತ ಏರಿತ್ತೋ. ಒಂದು ಚೆಂಬು ನೀರುದೇ ಬೆಲ್ಲವುದೇ ಇತ್ತೆ ಕೊಂಡ ಮದಾಲು
ಪಂಜ ಚಿಕ್ಕಯ್ಯ: ಇಲ್ಲಿ ಬಂದರೆ ಆಳುಗೊ, ಅಲ್ಲಿ ಹೋದರೆ  ಪೆಟ್ರೊಲು, ನಾವಂತೂ ಲಗಾಡಿ
ದೊಡ್ಮನೆ ಭಾವ : ಹೇ ಹೀಗೂ ಆವ್ತನ ಅಪ್ಪೀ
ಶ್ಯಾಮಣ್ಣ : ನಿಲ್ಲು ನಿಲ್ಲು ಇದರ್ದೊಂದು ಕಾರ್ಟೂನ್ ಮಾಡಿಕ್ಕುತ್ತೆ
ಪೆರ್ಲದಣ್ಣ: ಸಾಡೇಸಾತು..
ಪೆದ್ದಣ್ಣ: ಇದೆಂತ್ಸರ? ನಾಕು ಹೋಳಿಗೆ ಇದ್ದರೆ ಹಾಕಿಕ್ಕಿ..

ನಿಂಗಳದ್ದೂ ಇದ್ದರೆ ಸೇರ್ಸಿಕ್ಕಿ..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ನಮ್ಮ ದೇಶದ ಆಮದು ಹೆಚ್ಚಿದ್ದು,ರಫ್ತು ಕಮ್ಮಿ ಆಯಿದು,ಸ್ವಾಭಾವಿಕವಾಗಿ ಡೋಲರಿನ ಬೇಡಿಕೆ ಹೆಚ್ಚಾತು.
  ರಫ್ತು ಹೆಚ್ಚಾಯೆಕ್ಕಾರೆ ಯೂರೋಪು ಇತ್ಯಾದಿ ದೇಶ೦ಗಳ ಹಣಕಾಸು ಪರಿಸ್ಥಿತಿ ಸರಿ ಆಯೆಕ್ಕು.ಎಲ್ಲಾ ಚಕ್ರವ್ಯೂಹದ ಹಾ೦ಗಿದ್ದು,ಸ್ಥಿತಿ.
  ಕೃಷಿಲಿಯೂ ನಮ್ಮ ಸ್ವಾವಲ೦ಬನ ಕಮ್ಮಿ ಆಯಿದು,ಸ್ವದೇಶಿ ಚಿ೦ತನೆ ಎ೦ತಕೆ ಬೇಕು ಹೇಳಿ ಈಗ ಅರ್ಥ ಮಾಡಿಗೊ೦ಬ ಹಾ೦ಗಾತು.
  ಪೆಟ್ರೋಲು, ವಿದೇಶ೦ದ ಆಮದು ಅಪ್ಪ ಎಲ್ಲಾ ಅಡಿಗೆ ಎಣ್ಣೆ.. ಇತ್ಯಾದಿಗಳ ಬಳಕೆ ಕಮ್ಮಿ ಮಾಡೊದು ತನ್ನ ಕರ್ತವ್ಯ ಹೇಳಿ ಭಾರತದ ಪ್ರತಿಯೊಬ್ಬ ಪ್ರಜೆಯೂ ತಿಳುಕ್ಕೊಳ್ಳೆಕ್ಕಾದ ವಿಷಯ.

  [Reply]

  VA:F [1.9.22_1171]
  Rating: +2 (from 2 votes)
 2. ಗಣೇಶ ಮಾವ°
  ಗಣೇಶ ಮಾವ°

  ಕಲ್ಮಕಾರು ಪ್ರಸಾದಣ್ಣ ಹೇಳಿದ್ದಕ್ಕೆ ಎನ್ನ ವೋಟು.ಆನು ಅದೇ ಆಲೋಚನೆಲಿ ಇದ್ದೆ..ಹೇಂಗೆ?ನಿಂಗಳ ಅಭಿಪ್ರಾಯ?

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಎಂತ ಏರಿರೂ ಬೈಲಿನವರ ಸಮತೋಲನಕ್ಕೆ ಕರಕ್ಕೊಂಡು ಬಪ್ಪ ಪೆಂಗಣ್ಣ೦ಗೆ ಅದೆಷ್ಟು ಅಭಿನಂದನೆ ಹೇಳಿರೂ ಸಾಲ…

  “ಪೆಟ್ರೋಲ್ ಬೆಲೆಯೇರಿಕೆ… ಹರತಾಳ… ಶ್ರೀ ರಾಮ ಜಯ ರಾಮ ಜಯ ಜಯ ರಾಮ…”

  [Reply]

  VA:F [1.9.22_1171]
  Rating: 0 (from 0 votes)
 4. ಅನು ಉಡುಪುಮೂಲೆ

  ಮನ್ನೆ ಎಂಗಳ ಪೈಕಿಯವು ಬೇಟ್ರಿ ಸ್ಕೂಟರಿಲಿ ಒಂದು ಜೆಂಬ್ರಕ್ಕೆ ಹೋದವಡ . ಅವು ವಾಪಾಸು ಬಪ್ಪಗ ಅರ್ಧ ದಾರಿಗೆ ಎತ್ತುಗ ಬೇಟ್ರಿ ಕಾಲಿ ಆತಡ . ಮತ್ತೆ ಎಂತ ಮಾಡಿದವು ಹೇಳಿ ಗೊಂತಿಲ್ಲೆ…………………

  ಅವು ದೊಡ್ಡ ಕೇನು ಹಿಡ್ಕೊಂಡು ತಿರುಗುದು ಆರೋ…. ಕಂಡಿದವಡ!!!!!!!!!!!!!!!!!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಶ್ರೀಅಕ್ಕ°ಕಜೆವಸಂತ°ಮುಳಿಯ ಭಾವನೆಗೆಗಾರ°ಸಂಪಾದಕ°ಅಕ್ಷರ°ಉಡುಪುಮೂಲೆ ಅಪ್ಪಚ್ಚಿವೇಣಿಯಕ್ಕ°ದೊಡ್ಡಭಾವಚೆನ್ನೈ ಬಾವ°ಬೊಳುಂಬು ಮಾವ°ಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುವೆಂಕಟ್ ಕೋಟೂರುಅನುಶ್ರೀ ಬಂಡಾಡಿಗೋಪಾಲಣ್ಣಚುಬ್ಬಣ್ಣಎರುಂಬು ಅಪ್ಪಚ್ಚಿಅನು ಉಡುಪುಮೂಲೆಚೂರಿಬೈಲು ದೀಪಕ್ಕಡಾಮಹೇಶಣ್ಣವಿದ್ವಾನಣ್ಣಪೆಂಗಣ್ಣ°ವಾಣಿ ಚಿಕ್ಕಮ್ಮಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ