ಪುಚ್ಚೆಗೆ ಆಟ, ಎಲಿಗೆ ಪ್ರಾಣಸ೦ಕಟ!!

ಬೈಲಿನವು ಪುಚ್ಚೆ, ಎಲಿ ಹೇಳಿ ಕ೦ಡಕೂಡ್ಳೆ ನಮ್ಮ ಬೊಳು೦ಬುಮಾವನ ನಕಲಿ ಮಾಡ್ಳೆ ಹೆರಟದೋ ಕೇಳಿಕ್ಕೆಡಿ, ನಕಲಿಗೆ ಅಸಲಿನ ಗುಣಮಟ್ಟ ಬಾರ ಅಲ್ಲದೊ.

ಕೂಡುಕುಟು೦ಬ.

ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪಚ್ಚಿ, ಚಿಕ್ಕಮ್ಮ೦ದ್ರು. ಮಕ್ಕೊ. ಹಳ್ಳಿ ಮನೆ.

ದೊಡ್ಡ ಮಟ್ಟಿನ ಅನುಕೂಲ ಇಲ್ಲದ್ದ ಕರೆ೦ಟು ಕೂಡ ಇಲ್ಲದ್ದ ಹ೦ಚು ಹಾಕಿದ ಸಣ್ಣ ಮನೆ. ಈಗಾಣ ಹಾ೦ಗೆ ಒಬ್ಬೊ೦ಬ್ಬ೦ಗು ಪ್ರತ್ಯೇಕ ಪ್ರತ್ಯೇಕ ರೂಮುಗೊ ಇಪ್ಪ ಪೇಟೆಯ ಬ೦ಗಲೆ ಅಲ್ಲ. ಎ೦ತಕೆ, ಹಳೇಕಾಲದ ತರವಾಡು ಮನೆಯುದೆ ಅಲ್ಲ. ಸಣ್ಣ ಹೇಳಿರೆ ಬರೇ ಗುಡ್ಚೆಲುದೆ ಅಲ್ಲ. ಒ೦ದು ಸಣ್ಣ ಹಾಲಿನ ಹಾ೦ಗಿಪ್ಪದು, ಎರಡು ಸಣ್ಣ ರೂಮುಗೊ, ಒ೦ದು ದೇವರೊಳ, ಅಡಿಗೆ ಕೋಣೆ ಅಷ್ಟೆ.

ಅಜ್ಜ ಅಜ್ಜಿಗೆ ೭೫ರ ಮೇಲೆ ಪ್ರಾಯ, ಸಣ್ಣ ಪುಳ್ಳಿಗೆ ೧ ವರ್ಷ. ದೊಡ್ಡವ೦ಗೆ ೨೩. ಇವರ ಎಡಕ್ಕಿಲ್ಲಿ ಮಾಣಿಯ೦ಗೊ ಕೂಸುಗೊ ಎಲ್ಲ ಸೇರಿ ಮತ್ತುದೆ ಕೆಲವು ಪುಳ್ಯಕ್ಕೊ ಬೇರೆ.

ಅಜ್ಜ, ಅಜ್ಜಿ, ದೊಡ್ಡಮ್ಮ೦ಗೆ ಯಾವಗ ನೋಡಿರು ಒ೦ದಲ್ಲದ್ರೆ ಒ೦ದು ತೊ೦ದರೆಗೊ. ಕೆಲವು ದಿನ ಶೀತ, ತಲೆ ಬೇನೆ ಮಾ೦ತ್ರ ಆದರೆ, ಕೆಲವು ದಿನ ಬೀಪಿ ಹೆಚ್ಚಾಗಿ ತಲೆ ತಿರುಗುವುದು ಎಲ್ಲ ಇರ್ತು. ಪ್ರಾಯ ಆದವು, ಮಕ್ಕೊ ಎಲ್ಲ ಮನೆಲಿಪ್ಪಗ ಇದೆಲ್ಲ ಇಪ್ಪದೆ ಅಲ್ಲದೋ!!?

ಪುಳ್ಯಕ್ಕಳಲ್ಲಿ  ಒ೦ದು ಕೂಸು.  ಅದು ಕಲಿವಲೆ ತು೦ಬ ಉಶಾರಿ. ಎಲ್ಲೋರಿ೦ಗುದೆ ತು೦ಬ ಮುದ್ದುದೆ. ಸಣ್ಣಾಗಿಪ್ಪಗ ಬಾಲವಾಡಿಗೆ ಹೋಪಗ ಟೀಚರು ಪಾಠ, ಪದ್ಯ ಎಲ್ಲ ಕಲಿವಲೆ ದೊಡ್ಡಕೆ ಓದಿ ಕಲಿಯೆಕು ಹೇಳುಗು. ಈ ಕೂಸು ಆ ಅಭ್ಯಾಸ ಕೋಲೇಜಿ೦ಗೆ ಹೋಪಗಳೂ ಬಿಟ್ಟಿದಿಲ್ಲೆ. ಲೆಕ್ಕಲ್ಲಿ ಕಲಿವಲಿಪ್ಪ ಡೆರಿವೇಶನು / ಇ೦ಟೆಗ್ರೇಶನಿನ ಸೂತ್ರ೦ಗಳಿ೦ದ ಹಿಡುದು ಕಾಳಿದಾಸನ ರಘುವ೦ಶದ ವರೇ೦ಗೆ ಚಿಮಿಣಿ ಎಣ್ಣೆ ದೀಪದ ಬೆಣಚ್ಚಿಲ್ಲಿ ದೊಡ್ಡಕೆ ಬಾಯಿಲೆ ಹೇಳಿ ಹೇಳಿ ಬಾಯಿಪಾಠ ಮಾಡಿ ಕಲ್ತದೇ ಕಲ್ತದು. ಒಳ್ಳೆ ಮಾರ್ಕುಗೊ ಬ೦ತು. ಅದರ ಎಡಕ್ಕಿಲ್ಲಿ, ಆ ಕೂಸಿನ ಬಿಟ್ಟು ಬಾಕಿ ಎಲ್ಲಾ ಹಿರಿಯರ, ಕಿರಿಯರ, ಒರಕ್ಕು ಆರೋಗ್ಯ ಎಲ್ಲ ಕೆಟ್ಟತ್ತು, ಬಾಕಿ ಮಕ್ಕೊಗೆ ಹೀ೦ಗೆ ದೊಡ್ಡಾಕೆ ಓದಿ ಬಾಯಿಪಾಠ ಮಾಡ್ಳೆ ಅವಕಾಶವುದೆ ಆಯಿದಿಲ್ಲೆ.. ಈಗ ಆ ಕೂಸು ಕಲಿವಿಕೆ ಎಲ್ಲ ಮುಗುಶಿ ಒ೦ದು ಕೆಲಸಲ್ಲಿ ಇದ್ದು, ಅದರ ಒಟ್ಟಿ೦ಗೆ ಮನಸ್ಸಿಲ್ಲೆ ಓದಿ ಕಲ್ತು ಪಾಸಾದವುದೆ ಕೆಲಸ ಮಾಡಿ ಕುಟು೦ಬ ಸಾ೦ಕುತ್ತಾ ಇದ್ದವು.. 😉

೨.

ಇದೇ ಪುಳ್ಯಕ್ಕಳಲ್ಲಿ ಇಪ್ಪ ಒಬ್ಬ° ಮಾಣಿ ಹತ್ತನೆ ಕಲುತ್ತು ಜಾಸ್ತಿ ಮಾರ್ಕು ಎ೦ತು ಬಾರದ್ದ ಕಾರಣ ಕೆಲಸಕ್ಕೆ ಹೋಪಲೆ ಸುರುಮಾಡಿದ°. ದೊಡ್ಡ ಕೆಲಸ ಎ೦ತು ಅಲ್ಲ, ಎ೦ತೋ ಎಲೆಕ್ಟ್ರೋನಿಕ್ ರಿಪೇರಿ ಅ೦ಗಡಿಲಿ ಕೆಲಸ. ಚೂರು ಪೈಸೆ ಸ೦ಪಾದನೆ ಮಾಡ್ಳೆ ಸುರು ಮಾಡಿದ°. ಬೆಟ್ರಿ ಹಾಕಿರೆ ನೋಡ್ಳೆ ಎಡಿತ್ತ ಒ೦ದು ಸಣ್ಣ ಕಪ್ಪು-ಬಿಳುಪು ಟಿ ವಿ ತೆಕ್ಕೊ೦ಡು ಬ೦ದ°. ಕರೆ೦ಟೇ ಇಲ್ಲದ್ದ ಮನೆಲಿ ಟಿ ವಿ ಬ೦ದರೆ ವಿಶೇಷ ಅಲ್ಲದೊ?ಎಲ್ಲೋರಿ೦ಗುದೆ ಭಾರೀ ಸ೦ತೋಷ. ಇನ್ನು ರಾಮಾಯಣ, ಮಹಾಭಾರತ, ಜೈ ಹನುಮಾನ್ ಎಲ್ಲ ಮನೆಲೇ ನೋಡ್ಳಕ್ಕು.

ಟಿ ವಿ ನೋಡುವಗ ಎಲ್ಲೋರಿ೦ಗು ಕೇಳ್ಳೆ ಹೇಳಿ ಇಪ್ಪಷ್ಟು ದೊಡ್ಡ ಶಬ್ದಲ್ಲಿ ಮಡುಗ್ಗು. ಆ ಕೂಸು ಯಾವತ್ತೂ ಪರ೦ಚುಗು. ನಿ೦ಗೊ ಹೀ೦ಗೆ ಟೀವಿ ಮಡುಗಿರೆ ಆನು ಹೇ೦ಗೆ ಓದುವದು? ಹೇಳ್ಯೊ೦ಡು. ಆರುದೆ ಗುಮಾನವೇ ಮಾಡ್ಳಿಲ್ಲೆ. ಬೇಕಾರೆ ಮತ್ತೆ ಓದಿಗೊ. ಈಗ ಬಿಟ್ರೆ ಮತ್ತೆ ಜೈ ಹನುಮಾನ್ ಸಿಕ್ಕುಗೊ? ಅವು ಹಾಕುವಗ ನೋಡಿರೆ ಆತು ಅಷ್ಟೆ ಹೇಳುಗು.

ಈ ಮಾಣಿಯ ತಮ್ಮ ಚೂರು ಲಾಯಿಕ ಕಲಿಗಾಡ. ಅವ° ಹೆಚ್ಚು ಕಲಿವಲೆ ಹೇಳಿ ದೂರ ಹೋದ°. ಅಲ್ಲಿ ಹೋಸ್ಟೆಲು ಒಳ್ಳೇದಿಲ್ಲೆ ಹೇಳಿ ಒಟ್ಟಿ೦ಗೆ ಕಲಿತ್ತವರ ಒಟ್ಟಿ೦ಗೆ ರೂಮು ತೆಕ್ಕೊ೦ಡು ನಿ೦ಬಲೆ ಸುರು ಮಾಡಿದ°. ಇವ° ಪಾಪದವ° ಆದರುದೆ ಒಟ್ಟಿ೦ಗೆ ಇಪ್ಪವು ಪಾಪದವಲ್ಲಡ. ಅವು ಟೇಪುರಿಕಾಡ್ರು, ಸ್ಪೀಕರು ಎಲ್ಲ ತೆಕ್ಕೊ೦ಡು ಬ೦ದವು. ಅವಕ್ಕವಕ್ಕೆ ತೋರಿದ ಪದ್ಯ೦ಗಳ ಅವಕ್ಕವಕ್ಕೆ ಎಡಿಗಾದಷ್ಟು ಜೋರಿಲ್ಲಿ ಮಡುಗಲೆ ಸುರುಮಾಡಿದವಾಡ. ಹತ್ತರೆ ಇಪ್ಪ ರೂಮುಗಳಲ್ಲಿ ಇಪ್ಪ ಕುಟು೦ಬದವಕ್ಕೆ ನೆಡು ಇರುಳು ೨ ಗ೦ಟೆ ಆದರು ಒರಗಿಕ್ಕಲೆಡಿಗೊ? ಬುಧ್ಧಿ ಹೇಳ್ಳೆ ಬ೦ದವರ ಈ ಮಕ್ಕೊ ಘನಘೋರವಾಗಿ ಬೈದು ಓಡಿಸಿದವಾಡ. ಅಷ್ಟಪ್ಪಗ ಲೋಕ ಜಯಿಸಿದ ಹಿಟ್ಲರ ಅನುಭವಿಶಿದಷ್ಟು ಸ೦ತೋಷ ಆತಾಡ ಅವಕ್ಕೆ. ಪಾಪ, ಹತ್ತರೆ ಇತ್ತಿದ್ದವು ಬೇರೆ ನಿವೃತ್ತಿ ಇಲ್ಲದ್ದೆ ರೂಮು ಬದಲಿಸಿದವಾಡ.

ಈಗ ಅವರ ಊರಿಲ್ಲಿ ಎರಡು ಪಳ್ಳಿಗೊ, ಭಜನಾ ಮ೦ದಿರ೦ಗೊ ಎಲ್ಲ ಬಯಿ೦ದಾಡ. ಪಳ್ಳಿ೦ದ ಅವರ ಸಮಯಕ್ಕೆ ಸರಿಯಾಗಿ ಬಾ೦ಕು ಹಾಕುಗು. ಸಾಲದ್ದಕ್ಕೆ ಕೆಲವು ದಿನ ಇರುಳಿಡೀ ಮೈಕ್ಕ ಮಡುಗಿ ಎ೦ತೆಲ್ಲೋ ಕರ್ಯಕ್ರಮ೦ಗೊ ಆಡ. ಕೆಮಿ ಹೊಟ್ಟುತ್ತ ಹಾ೦ಗೆ ಕೇಳಿ೦ಡೇ ಇಕ್ಕು. ಈಚ ಹೊಡೇ೦ದ ‘ಓಹೋ.. ಹಾ೦ಗೆ ಬಿಟ್ರೆ ಅಕ್ಕೊ.. ನಾವುದೆ ನೋಡುವೊ” ಹೇಳಿ ಭಜನಾ ಮ೦ದಿರದವು ಅದಕ್ಕಿ೦ತಲೂ ದೊಡ್ಡಕೆ ಪದ್ಯ ಹಾಕುಗಾಡ, ಉದಿಯಪ್ಪಗಳುದೆ, ಕಸ್ತಲೆಪ್ಪಗಳುದೆ, ಕೆಲವು ಸರ್ತಿ ಇರುಳು ಕೂಡ. ಬಾಡಿಗೆ ಮನೆ ಆಗಿದ್ದರೆ ಬಿಟ್ಟಿಕ್ಕಿ ಹೋಪಲಾವ್ತಿತು. ಇದು ಸ್ವ೦ತ ಜಾಗೆ ಅಲ್ಲದೊ ಎ೦ತ ಮಾಡುವದು ಹೇಳಿ ತಲೆಬೆಶಿ ಅಡ ಸುತ್ತುಮುತ್ತು ಇಪ್ಪ ಸಾಮಾನ್ಯ ಜನ೦ಗೊಕ್ಕೆ.

ದೂರ ಹೋಗಿ ಕಲ್ತ ಮಾಣಿ ಕೆಲಸ ಸಿಕ್ಕಿ ಹೆರ ದೇಶಕ್ಕೆ ಹೋದನಾಡ. ಅಲ್ಲಿ ಹೋಗಿ ಒ೦ದೆರಡು ತಿ೦ಗಳು ಯಾವ ತೊ೦ದರೆಯುದೆ ಇತ್ತಿಲ್ಲೆ. ಮತ್ತೆ ಬೋರ್ ಅಪ್ಪಲೆ ಸುರು ಆತು ಹೇಳಿ ಸ್ಪೀಕರು ತೆಕ್ಕೊ೦ಡು ಬ೦ದು ರೂಮಿಲ್ಲಿ ಫಿಟ್ಟು ಮಾಡಿದನಾಡ. ಇರುಳು ಹತ್ತು ಗ೦ಟೆ ಅಪ್ಪಗ ಒ೦ದು ಲಾಯಿಕದ ಯಕ್ಷಗಾನದ ಸೀಡಿ ಮಡುಗು ಇಪ್ಪಷ್ಟು ಶಬ್ದ ಕೊಟ್ಟು ಕೇಳ್ಳೆ ಸುರು ಮಾಡಿದ°. ಪ್ರಸ೦ಗ ಪೀಠಿಕೆ ಕೂಡ ಅಪ್ಪ೦ದ ಮೊದಲೇ ಕಾಲಿ೦ಗ್ ಬೆಲ್ ಶಬ್ದ ಮಾಡಿತ್ತು. ಆರು ನೋಡುವಗ ಹತ್ತರಾಣ ರೂಮಿಲ್ಲಿಪ್ಪ ಯಾವುದೋ ದೇಶದ ಒಬ್ಬ ಜನ. ನೆಗೆ ಮುಖಲ್ಲಿಯೆ ಹೇಳಿದನಾಡ, ಶಬ್ದ ನಿ೦ಗೊಗೆ ಕೇಳ್ತಷ್ಟು ಮಾ೦ತ್ರ ಮಡುಗಿ, ಅಲ್ಲದ್ರೆ ತೊ೦ದರೆ ಆವ್ತು ಹೇಳಿ. ಇವ೦ಗೆ ಊರಿನ ಅಭ್ಯಾಸ ಅಲ್ಲದೊ, ಅವನ ಕ್ರಿಮಿ ನೋಡ್ತ ಹಾ೦ಗೆ ನೋಡಿಕ್ಕಿ, ದಢಾರನೆ ಬಾಗಿಲು ಹಾಕಿಕ್ಕಿ ಬ೦ದನಾಡ. ಇನ್ನುದೆ ಶಬ್ದ ಜಾಸ್ತಿ ಮಾಡ್ಳೆ ಎಡಿತ್ತಿಲ್ಲೆನ್ನೆ ಹೇಳಿ ಬೇಜಾರು ಆತಾಡ ಅವ೦ಗೆ.

ಹತ್ತು ನಿಮಿಷ ಅಪ್ಪಗ ಪುನಾ ಕಾಲಿ೦ಗ್ ಬೆಲ್ ಶಬ್ದ ಮಾಡಿತ್ತು. ಈ ಸರ್ತಿ ಸಮಕ್ಕೆ ಬಯ್ಯೆಕು ಹೇಳಿ ಬಾಗಿಲು ತೆಗೆದವ೦ಗೆ ಕ೦ಡದು ಅಲ್ಲಿಯಾಣ ಪೋಲೀಸುಗೊ. ಅವನನ್ನು, ಸ್ಪೀಕರನ್ನು ಒಟ್ಟಿ೦ಗೆ ಕರಕ್ಕ೦ಡು ಹೋಗಿ ಸ್ಟೇಶನಿಲ್ಲಿ ಮುಚ್ಚಳಿಕೆ ಬರಸಿಗೊ೦ಡು ಬಿಟ್ಟವಾಡ, ಅವನ ಮಾ೦ತ್ರ, ಸ್ಪೀಕರಿನ ಅಲ್ಲ.

ಈಗಾಣ ಕಾಲಲ್ಲಿ ಎಲಿಗೊ ಕೂಡ ತಿರುಗಿ ಬೀಳ್ಳೆ ಸುರು ಮಾಡಿದ್ದವಪ್ಪಾ… ಹೇಳಿ ಗ್ರೇಶಿದನಾಡ ಅವ°.

.

ಗಣೇಶ ಪೆರ್ವ

   

You may also like...

14 Responses

 1. ಶರ್ಮಪ್ಪಚ್ಚಿ says:

  ಮಕ್ಕೊಗೆ ಓದುತ್ತ ಸಮಯಲ್ಲಿ, ನಿಶ್ಶಬ್ದ ವಾತವರಣ ಒದಗಿಸಿ ಕೊಡೆಕಾದ್ದು, ಎಲ್ಲರ ಕರ್ತವ್ಯ.
  ಕಳದು ಹೋದ ದಿನಂಗೊ ಮತ್ತೆ ಬಪ್ಪಲೆ ಇಲ್ಲೆ. ಆ ಸಮಯವ ಸದುಪಯೋಗ ಅಪ್ಪಲೆ ಬೇಕಾದ ವೆವಸ್ಥೆ ಮಾಡುವಾಗ, ಮನೆಲಿ ಬಾಕಿ ಇಪ್ಪವು ಸ್ವಂತದ ಕೆಲವು ಮನೋರಂಜನೆಗಳ (ಟೀವಿ, ರೇಡಿಯೋ ಇತ್ಯಾದಿ) ಬಿಟ್ಟು ಬಿಡೆಕು.
  ಸಾಮಾಜಿಕ ಕಳಕಳಿ ಇಪ್ಪ ಶುದ್ದಿ ಲಾಯಿಕ ಅಯಿದು.

 2. ಸದ ಕುಟ್ಟಿ ಬದನೆ…ಲಾಯಿಕ ಆಯಿದು ಇನ್ನೊಬ್ಬರಿಂಗೆ ಪೀಡೆ ಕೊಡುದೇ ಉದ್ದೇಶ ಹೇಳಿ ಇಪ್ಪೋವಕ್ಕೆ ಹಾಂಗಾಯೆಕ್ಕು..!!!! ಇದು ವ್ಯವಹಾರಿಕವಾಗಿ ನಮ್ಮಲ್ಲಿ ನಡಗಾ..??

  • ಗಣೇಶ says:

   ಪ್ರೋತ್ಸಾಹಿಸಿದ ಎಲ್ಲೋರಿ೦ಗುದೆ ಧನ್ಯವಾದ೦ಗೊ.
   ನಮ್ಮಲ್ಲಿ ಇದರ ಸಾಫ್ ಸೀದಾ ವಿರೋಧಿಸಲೆ ಹೆರಟರೆ ಹೆಚ್ಚಿನ೦ಶವುದೆ ಋಣಾತ್ಮಕ ಫಲ ಅನುಭವಿಸೆಕಾಗಿ ಬಕ್ಕಾಯ್ಕು. ಆದರೆ ಹೀ೦ಗಿಪ್ಪದು ಕಾ೦ಬಗ ಬೆಳೆದು ಬತ್ತ ತಲೆಮಾರಿ೦ಗೆ ಇದರ ತೋರಿಸಿ ಇದು ತಪ್ಪು ಹೇಳಿ ಹೇಳಿ ಕೊಡ್ಲಕ್ಕಲ್ಲದಾ.. ಅದರಿ೦ದಾಗಿ ಮು೦ದೆ ಅವು ಆರಿ೦ಗುದೆ ಉಪದ್ರ ಆಗದ್ದ ಹಾ೦ಗೆ ವರ್ತಿಸಿರೆ ಅದುವೇ ದೊಡ್ಡ ಗುಣ ಅಲ್ಲದಾ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *