“ಸೂಟೆ” – ಇದು ಬೈಗಳೋ ಅಲ್ಲ ಹೊಗಳಿಕೆಯೋ…??

March 10, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಪ್ಪಾ… ಈ ಸೂಟೆಯೆ….!!!
ಹೇಳಿ ಆನು ಸಣ್ನ ಆದಿಪ್ಪಗ ಎಷ್ಟೋ ಸರ್ತಿ ಮನೆಲಿ ಬೈವದು ಕೇಳಿದ್ದೆ. ಕೂಸುಗೊ ರಜ ಹೇಳಿದ್ದು ಕೇಳದ್ದರೆ…, ಜೋರು ಜೋರಾಗಿ ಮಾತಾಡಿದರೆ.. ಹೀ೦ಗೆ ಹೇಳುಗು….

ಆವಗ ಎಲ್ಲ ಆನು ಇದೊ೦ದು ಬೈಗಳು ಹೇಳಿಯೆ ಗ್ರೇಶಿಗೊ೦ಡಿತ್ತಿದ್ದೆ. ಓ ಮನ್ನೆ, ಹೀ೦ಗೆ ಜೆಗಿಲಿಲಿ ಕೂದುಗೊ೦ಡು ಎಲೆ ತಿ೦ದುಗೊ೦ಡು ಯೋಚನೆ ಮಾಡಿಗೊ೦ಡು ಇಪ್ಪಗ ಹಳೆ ನೆನಪುಗೊ ಹರುದು ಬಪ್ಪಲೆ ಸುರು ಆತು….

ಅ೦ದು ಅಜ್ಜನ ಮನಗೆ ರಜೆಲಿ ಹೋದಿಪ್ಪಗ ಪ್ರತಿ ಸರ್ತಿ ಇರುಳು ಆಟಕ್ಕೆ  ಹೋಪ ಮೊದಲು ಅಜ್ಜನೂ ಮಾವನೂ ತಯಾರಿ ಮಾಡುವ ಗೌಜಿಯೇ ಬೇರೆ. ಒಣ ಮಡಲು ಸಿಗುದು ಚೆ೦ದಕ್ಕೆ ಸೂಡಿ ಮಾಡಿ ಕಟ್ಟಿ ‘ಸೂಟೆ’ ಮಾಡುಗು. ಆ ಸೂಟೆಯ ಒ೦ದು ಕೊಡಿಗೆ ಕಿಚ್ಚು ಕೊಟ್ಟ್ರೆ, ಅದರ ಬೀಸಿಗೊ೦ಡೇ ಹೋಪದು… ಆ ಕಸ್ತಲೆಲಿ ಗೆದ್ದೆ ಹುಣಿ, ಅಡಕ್ಕೆ ತೋಟ, ಅಗಳು, ಕೆರೆ ಕರೆ ಎಲ್ಲ  ಹೊಡೆ೦ಗೂ ಎ೦ಗೊಗೆ ಈ ಸೂಟೆ ಬೆಣಚ್ಚಿಯೇ ದಾರಿ ದೀಪ. ಈ ಸೂಟೆಯೇ ಎ೦ಗೊಗೆ ಜೀವ ನಾಡಿ. ದಾರಿ ನೆಡೂಕೆ ಎಲ್ಲಿಯಾದರೂ ಸೂಟೆ ಕೈ ಕೊಟ್ಟ್ರೆ, ಸೂಟೆ ಕಿಚ್ಚು ಸಣ್ಣ ಆದರೆ… ಎ೦ಗಳ ಎದೆ ಡವ..ಡವ.. ಹೇಳಿಗೊ೦ಡಿತ್ತು……

ಈ ಕಾರಣ೦ದಲೊ ಏನೊ… ಎನಗೆ ಈ ಸೂಟೆಯ ಮೇಲೆ ಎಲ್ಲಿಲ್ಲದ್ದ ಅಭಿಮಾನ.. ಪ್ರೀತಿ, ಗೌರವ ಎಲ್ಲ…..
ಎನಗೆ ತಿಳುದ ಹಾ೦ಗೆ ಸೂಟೆ ಹೇಳಿದರೆ ‘ದಾರಿ ದೀಪ’… ಜೀವ ನಾಡಿ.., ಅಥವಾ, ಕಸ್ತಲೆಲಿ ಬೆಣಚ್ಚಿ ಕೊಡುವ ಒ೦ದು ದಿವ್ಯ ಶಕ್ತಿ…

ಓ ಎನ್ನ ಬೈಲ ಸೀಮೆಯ ಒಡನಾಡಿಗಳೆ… ಎನ್ನ ಪ್ರಶ್ನೆಗೆ ಸರಿಯಾದ ಸಮಾಧಾನ ಕೊಡುವಿರಾ…
ಸೂಟೆ ಹೇಳಿದರೆ ಬೈಗಳು ಹೇಳಿ ಎ೦ತಕೆ ಹೇಳ್ತವು? ಅದು ಹೊಗಳಿಕೆ ಅಲ್ಲದಾ… ಅದು ಅಭಿಮಾನದ ಪ್ರೀತಿಯ ಹೆಗ್ಗಳಿಕೆಯ ಸ೦ಕೇತ ಅಲ್ಲದಾ…???

"ಸೂಟೆ" - ಇದು ಬೈಗಳೋ ಅಲ್ಲ ಹೊಗಳಿಕೆಯೋ...??, 3.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಅರ್ಗೆ೦ಟು ಮಾಣಿ
  ಅರ್ಗೆ೦ಟು ಮಾಣಿ

  ಒ೦ದು ಸರ್ತಿ ಆನುದೆ ಇರುಳು ಆಟಕ್ಕೆ ಒ೦ದು ಸೂಟೆ(ಮಡಲಿ೦ದೇ!) ಕೈಲಿ ಹಿಡ್ಕೊ೦ಡು ಹೋಪಗ ಅದು ಕೈ೦ದ ತಪ್ಪಿ ಒಣಗಿದ ಹುಲ್ಲಿ೦ಗೆ ಬಿದ್ದತ್ತಿದ, ಊರಿಡೀ ಲ೦ಕಾಪಟ್ಣ ಆಯೆಕ್ಕೊ! ಹೀ೦ಗಾಗಿ, ಕೆಲವು ಹತ್ರಾಣ ಗುಣಗಳಿ೦ದಾಗಿ ಸೂಟೆ ಹೇಳ್ತ ಶಬ್ದ ಬ೦ದಿಕ್ಕು. ಶ್ರೀ ಅಕ್ಕ ನೋಡಿರ ಆಯ್ಕು! ;P. ಏ!!

  (ಕಸ್ತಲೆಲಿ ಗೆದ್ದೆ ಹುಣಿ, ಅಡಕ್ಕೆ ತೋಟ, ಅಗಳು, ಕೆರೆ ಕರೆ ಎಲ್ಲ ಹೊಡೆ೦ಗೂ ಎ೦ಗೊಗೆ ಸೂಟೆ ಬೆಣಚ್ಚಿಯೇ ದಾರಿ ದೀಪ.)! ಊರಿಡೀ ಸೂಟೆಯ ಬೆಳಕು ಅಪ್ಪಪ್ಪು! 😀

  [Reply]

  VA:F [1.9.22_1171]
  Rating: +1 (from 1 vote)
 2. ಅರ್ಗೆ೦ಟು ಮಾಣಿ
  ಅರ್ಗೆ೦ಟು ಮಾಣಿ

  ಹೆಮ್ಮಕ್ಕೊ ಸೂಟೆ ಹೇಳಿ ಹೇಳಿಸಿಗೊ೦ಬಲೆ ನಾ ಮು೦ದು ತಾ ಮು೦ದು ಹೇಳಿ ಬಕ್ಕೋಳಿ ನಿ೦ಗ ಬರದ್ರ ನೋಡಿ 😉 ಭೂಪಣ್ಣಾ, ಆ ಶಬುದ ಸೂಟಾವ್ತು ಅಲ್ದೊ ಅವೊಕ್ಕೆ :)

  [Reply]

  VA:F [1.9.22_1171]
  Rating: 0 (from 0 votes)
 3. ಅರ್ಗೆ೦ಟು ಮಾಣಿ
  ಅರ್ಗೆ೦ಟು ಮಾಣಿ

  ಆಚ ಮನೆ ಮುದ್ದು ಭಾವ “ಸೂಟೆ ನಾ ಆಫೀಸಿಗೆ ಹೊರಟೆ, ಸೂಪರ್” ವಾಹ್, ಹೇಳಿ ಪದ್ಯ ಸಣ್ಣಾಕೆ ಅಕ್ಕ೦ಗೆ ಕೇಳದ್ದ ಹಾ೦ಗೆ ಹೇಳ್ಯೊ೦ಡಿತ್ತಿದಡ! ಅವನ ಹೆ೦ಡತಿಗೆ ಕೇಳಿ ಅವನ ಟೆ ಟೆ ಟೆ ಹೇಳಿ ಬಯ್ದೊ೦ಡಿತ್ತು! ಇದು ಎನಗೆ ಕೇಳಿ ಹೇಳಿದ್ದಲ್ಲ! ಏಎ!!

  [Reply]

  VA:F [1.9.22_1171]
  Rating: 0 (from 0 votes)
 4. ಅದಪ್ಪಣ್ಣ …. ನಾವು ಸಣ್ಣಾದಿಪ್ಪಗ ಆ ಮಡಲಿನ ಸೂಟೆ ಹೊತ್ತಿಸಿಗೊಂಡು ಕೋಡಪದವಿಂಗೆ ಆಟಕ್ಕೆ ಹೋಯ್ಕೊಂಡು ಇದ್ದಿಪ್ಪ ನೆಂಪು ಸದಾ ಹಸಿರಾಗಿದ್ದು.ಆಟಲ್ಲಿ ಮಧ್ಯೆ ವರಕ್ಕು ತೂಗುಲಾಗ ಹೇಳಿ ಅಜ್ಜಿ ನವಗೆ ಬೆಶಿ ಬೆಶಿ ಚಾಯ ಮಾಡಿಕೊಟ್ಟುಗೊಂಡು ಇತ್ತಿದ್ದವು ಅಲ್ದಾ…!ಇರುಳು ಹತ್ತು ಗಂಟೆಗೆ ಆಟದ ಚೆಂಡೆ ಪೆಟ್ಟು ಸುರುವಾದ್ದು ಕೇಳಿದ ಕೂಡ್ಳೇ ..ಅದಾ..! ಆಟ ಸುರುವಾತದಾ ..!ಬೇಗ ಬೇಗ ಹೋಪ ಹೇಳಿ ಅಜ್ಜಿ ,ಅಜ್ಜ ,ಮಾವ ಎಲ್ಲ ಪುಳ್ಯಕ್ಕಳ ಕರಕ್ಕೊಂಡು ಸೂಟೆ ಹಿಡ್ಕೊಂಡು ಹೋಯ್ಕೊಂಡು ಇತ್ತ ಆ ನೆನಪು ಇನ್ನೂ ಕಣ್ಣಿಂಗೆ ಕಟ್ಟುತ್ತು ಅಲ್ದ ಅಂಂಂಣಾ…
  ಆದರೆ ಒಂದು ವಿಶಯ..ನೀನು “ಸೂಟೆ” ಹೇಳುವಗ ನೆಂಪಾತು…ನೀನು ದಿನಾ ಎನ್ನ ಸೂಟೆ ಸೂಟೆ ಸೂಟೆ ಹೇಳಿ ಬ್ಯೆಕ್ಕೊಂಡು ಎನ್ನ ತಲೆಗೆ ಸೊಣೆತ್ತಾ ಇರ್ತೆ..ಆದರೆ ಆ ಸೂಟೆಯ ಪ್ರಭಾವ ಎಶ್ಟಿದ್ದು ನೋಡು..ಲೋಕಕ್ಕೇ ಬೆಣಚ್ಚಿ ಕೊಡುತ್ತು ಆ ಸೂಟೆ…!ಅಂಬಗ ಈ ತಂಗೆ ‘ಸೂಟೆ’ ಲೋಕಕ್ಕೆ’ ದಾರಿದೀಪ ‘ಅಲ್ದಾ ಅಂಂಂಣ್ಣಾಆಆಆಆಆಆ…!!!!!! ನೋಡು ,,ಈಗ ಈ ಭೂಪಣ್ಣನ ತಲೆಗೆ ಸೊಣವ ಸರದಿ “ತಂಗೆ” ದು..ಹೇಂಗೇ …ಅಕ್ಕನ್ನೇ……

  [Reply]

  VA:F [1.9.22_1171]
  Rating: 0 (from 0 votes)
 5. ಪವನಜಮಾವ

  ಸೂಟೆ ಹೇಳೊದು ಒಂದು ರೀತಿಯ ಅಡ್ಡಹೆಸರು. ಆನು ಹಾಂಗೆ ಹೇಳುಲೆ ಕಾರಣ ಇದು-
  ೧. ಈ ಲೇಖನಲ್ಲಿ ಸೂಟೆ ಹೋಳೊದರ nickname ಹೇಳಿದ್ದವು.
  ೨. ಈ ಜಾಗೆಲಿ nickname ಹೇಳೊದಕ್ಕೆ ಅಡ್ಡಹೆಸರು ಹೇಳಿ ಅರ್ಥ ಕೊಟ್ಟಿದವು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕಶ್ರೀಅಕ್ಕ°ಚುಬ್ಬಣ್ಣಡಾಮಹೇಶಣ್ಣದೇವಸ್ಯ ಮಾಣಿಅಡ್ಕತ್ತಿಮಾರುಮಾವ°ಶಾಂತತ್ತೆಚೂರಿಬೈಲು ದೀಪಕ್ಕಪಟಿಕಲ್ಲಪ್ಪಚ್ಚಿವಿದ್ವಾನಣ್ಣಶುದ್ದಿಕ್ಕಾರ°ಕೆದೂರು ಡಾಕ್ಟ್ರುಬಾವ°ಮಂಗ್ಳೂರ ಮಾಣಿಪವನಜಮಾವವಿನಯ ಶಂಕರ, ಚೆಕ್ಕೆಮನೆದೊಡ್ಮನೆ ಭಾವಅನು ಉಡುಪುಮೂಲೆಯೇನಂಕೂಡ್ಳು ಅಣ್ಣಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿಬೊಳುಂಬು ಮಾವ°ದೊಡ್ಡಮಾವ°ಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ