Oppanna.com

ಯೋಗಾಭ್ಯಾಸೇನ ಸುಖಿನೋ ಭವಂತು !

ಬರದೋರು :   ತೆಕ್ಕುಂಜ ಕುಮಾರ ಮಾವ°    on   23/09/2013    24 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

“ಪಾರೂ…ಏ.. ಪಾರೂ…”
ಇದು ಎತ್ತ ಹೋಯಿದಪ್ಪ…ಶುದ್ದಿ ಇಲ್ಲೆ ಹೇಳಿಯೊಂಡು ಆನು ಸಣ್ಣವನ ದೆನುಗೇಳಿ ಅಮ್ಮನ ಹುಡ್ಕುಲೆ ಕಳುಗಿದೆ.ಹೆರ ಹೋಪಲೆ ಸಿಕ್ಕಿತ್ತನ್ನೆ ಹೇಳಿ ಕೊಶಿಲಿಯೇ ಅವ° ಓಡಿದ.ರಜ್ಜ ಹೊತ್ತಿಲಿ ಪಾರು ಒಳ ಬಂದು ವಿಚಾರ್ಸಿತ್ತು.
” ಎಂತ್ಸಕ್ಕೆ ಎನ್ನ ದೆನುಗೇಳಿದ್ದು ?”
“ಸಣ್ಣವ° ನಿನ್ನ ಹುಡ್ಕುಲೆ ಹೆರ ಹೋಯಿದ°,ಸಿಕ್ಕಿದನೋ ?”
“ಇಲ್ಲೆನ್ನೆ.ಅವ° ಕೆಳ ಆಟ ಆಡ್ಲೆ ಹೋಗಿಕ್ಕು.ನಿಂಗೊಗೆಂತಾಯೆಕ್ಕು ಈಗ ಅದು ಹೇಳಿ”
ಎಂತ್ಸರ ಹೇಳೊದು ? ಛೇ.!
ಕೆಲವು ದಿನ ಲಾಗಯ್ತು ಪಾರು ಉರುಗುಲೆ ಶುರು ಮಾಡಿದ್ದತ್ತು.ದಿನಾಗಿಲೂ ರಜ್ಜ ವ್ಯಾಯಾಮ ಮಾಡಿ, ಅಲ್ಲದ್ದರೆ ಯೋಗವನ್ನಾದರೂ ಮಾಡಿ.ಇದ್ಯಾವುದೂ ಎಡಿಯದ್ದ್ರರೆ ಒಂದರ್ಧ ಘಂಟೆ ಆದರೂ ನಡೆರಿ ಹೇಳಿಯೊಂಡು ತಲೆ ತಿಂತು. ಎನಗೀಗ ಮದಲಾಣ ಹಾಂಗಲ್ಲ,ಅಫೀಸಿಲಿ ಹೆಚ್ಚಾಗಿ ಕೂದೊಂಡೇ ಕೆಲಸ ಮಾಡ್ಲಿಪ್ಪದು.ರಜ್ಜವೂ ದೈಹಿಕ ವ್ಯಾಯಾಮ ಇಲ್ಲೆ ಹೇಳಿಯೇ ಆಯಿದು. ಕೆಲಸದ ಒತ್ತಡಕ್ಕೆ ಏನೂ ಕಮ್ಮಿ ಇಲ್ಲೆ.ಇನ್ನು ಶುಗರು, ಕೊಲೆಸ್ತ್ರಾಲು ಹೇಳ್ಯೊಂಡು ಶುರುವಪ್ಪಲಾಗನ್ನೆ ಹೇಳ್ತ ಯೇಚನೆ ಪಾರುಗೆ. ಹಾಂಗಾಗಿಯೇ ಮನೆಲಿಯಾದರೂ ರಜ್ಜ ವ್ಯಾಯಾಮ ಮಾಡ್ಲೆ  ಎನ್ನ ಒತ್ತಾಯ ಮಾಡೊದು. ಹೇಳುಲೆ ಶುರು ಮಾಡಿ ವಾರ ಎರಡು ಆತು.ನಾಳಂದ ಉದೀಯಪ್ಪಗ ಬೇಗ ಎದ್ದಿಕ್ಕಿ ಶುರು ಮಾಡ್ತೆ ಹೇಳಿದೋನು ಮರದಿನ ಯೇವತ್ರಾಣ ಹೊತ್ತಿಂದ ತಡವಾಗಿಯೇ ಎದ್ದೆ.ಉದಿಯಪ್ಪಗಳೇ ಆಯೆಕ್ಕು ಹೇಳಿ ಏನಿಲ್ಲೆನ್ನೆ,ಹೊತ್ತೋಪಗ ಬಂದಿಕ್ಕಿ ಮಾಡ್ತೆ ಹೇಳಿದ ಮಾತು, ಮಾತಿಲಿಯೇ ನಿಂದತ್ತು. ಹೀಂಗೆ, ಉದಿಯಪ್ಪಗ – ಹೊತ್ತೋಪಗ ಹೇಳ್ಯೊಂಡು ವಾರ ಎರಡು ಸುಲಾಭಲ್ಲಿ ಕಳುದತ್ತು.
ಮತ್ತೂ ಮುಂದೆ ಹಾಕಿ ದಿನ ಕಳವದು ಸರಿಯಲ್ಲ ಹೇಳಿ ಎನ್ನ ಮನಸ್ಸಿಂಗೆ ಕಂಡತ್ತು.ಮದಲು ಕೊಲೇಜಿಂಗೆ ಹೋಗಿಯೊಂಡಿತ್ತಿದ್ದ ಸಮಯಲ್ಲಿ ಯೋಗಾಸನ ಮಾಡಿಗೊಂಡಿತ್ತಿದ್ದೆ.ಆ ನೆಂಪಿಲಿ ಉದೆಗಾಲಕ್ಕೆ ಎದ್ದು ಸೂರ್ಯನಮಸ್ಕಾರ ಮಾಡೊದು ಹೇಳಿ ನಿಘಂಟು ಮಾಡಿದೆ. ಆದರೆ ಎಲ್ಲ ಹನ್ನೆರಡು ಸುತ್ತಿನ ಆಸನಂಗಳ ಕ್ರಮ ಪ್ರಕಾರ ಈಗಳೂ ಮಾಡ್ಲೆ ಎಡಿಗಕ್ಕೋ ಹೇಳ್ತ ಸಂಶಯ ಬಂತು.ಎರಡು ಸರ್ತಿ ಮಾಡಿಯೂ ನೋಡಿದೆ.ಹಸ್ತ ಪಾದಾಸನಲ್ಲಿ ಬಗ್ಗಿ ಕೈಗಳ ಪಾದವ ಮುಟ್ಟೊದು ಬಿಡಿ, ಹೆಬ್ಬೆಟ್ಟಿಂದ ಅರ್ಧ ಫೀಟು ಮುಂದಂಗೇ ಹೋತಷ್ಟೆ.ಮತ್ತೂ ಹತ್ತರೆ ತಪ್ಪಲೆ ಹೊಟ್ಟೆ ಅಡ್ಡ ಬಂತು. ಅದಲ್ಲದ್ದೆ ಏಕಪಾದ ಪ್ರಸರಣಾಸನ,ಅಧೋಮುಖ ಶ್ವಾನಾಸನ,ಭುಜಂಗಾಸನ ಮಾಡುವಗ ಎಲ್ಲ ಸರಿಗಟ್ಟು ಆಯಿದಿಲ್ಲೆ ಹೇಳಿಯೇ ಎನಗೆ ಅನಿಸಿತ್ತು.ಹಾಂಗಾಗಿ ಸೂರ್ಯನಮಸ್ಕಾರ ಶುರು ಮಾಡೆಕ್ಕಾರೆ, ಮದಾಲು ಹೊಟ್ಟೆ ಮತ್ತೆ ಸೊಂಟದ ಸುತ್ತಲಿಪ್ಪ ಬೊಜ್ಜಿನ ಕರಗುಸೊದು ಒಳ್ಳೆದು ಹೇಳಿ ಗ್ರೇಶಿ ಪ್ರತ್ಯೇಕವಾಗಿ ಕೆಲವು ಆಸನಂಗಳ ಮಾಡ್ತ ನಿರ್ಧಾರಕ್ಕೆ ಬಂದೆ. ಈಗೊಂದರಿ ಪ್ರಾಕ್ಟೀಸು ಮಾಡೊದು ಹೇಳಿ ಊರ್ಧ್ವಾಸನ,ಹಸ್ತ ಪಾದಾಸನ,ಭುಜಂಗಾಸನ, ತ್ರಿಕೋಣಾಸನ ಮಾಡ್ಲೆ ಶುರು ಮಾಡಿದೆ. ಸೊಂಟಲ್ಲಿಯೂ, ಗೆಂಟಿಲಿಯೂ ಬೇನೆ ಎಳಗುಲೆ ಶುರುವಾದರೂ ಒಂದರಿ ನುಸುಲಾದರೆ ಮತ್ತೆ ತೊಂದರೆ ಇಲ್ಲೆನ್ನೆ ಹೇಳಿ ನಿಲ್ಲುಸದ್ದೆ ಮುಂದುವರಿಸಿದೆ.ಇಷ್ಟೆಲ್ಲ ಆಸನಂಗಳ ಮಾಡ್ತ ಕ್ರಮವ ಮನನ ಮಾಡ್ಯೊಂಡು ನಾಳೆ ಉದೆಗಾಲಕ್ಕೆ ಶುರು ಮಾಡೊದು ಹೇಳಿ ಘಟ್ಟಿ ನಿರ್ಧಾರಕ್ಕೆ ಬಂದೆ.ಅಕೇರಿಗೆ ಪದ್ಮಾಸನ ಹಾಕಿ ಕೂದೆ. ರಜ್ಜ ಹೊತ್ತಿಲಿ ಗೆಂಟಿಲಿ ಚೂಯಿಂಕನೆ ಇಂಜೆಕ್ಷನ್ನು ಕುತ್ತಿದ ನಮುನೆ ಅನುಭವ ಆತು.ಇನ್ನು ಸಾಕು ಹೇಳಿ ಕಾಲು ಬಿಡುಸುತ್ತೆ, ಫಕ್ಕನೆ ಬಿಡೆಕ್ಕೆ. ಕಾಲು ಸರ್ತ ಮಾಡ್ಲೆ ಹೆರಟರೆ ಗೆಂಟು ಬೇನೆ ಒಂದರಿಯೇ ಜೋರು ಎಳಗಿತ್ತು.ಎರಡೂ ಕಾಲಿನ ಅರ್ಧಕ್ಕೆ ಮಡಿಸಿ ಅಲ್ಲೇ ಕೂದೆ, ಒಟ್ಟಿಂಗೆ ಪಾರುವನ್ನೂ ದೆನುಗೇಳಿದೆ.
“ಅಪ್ಪದೆಂತರ. ಎನ್ನ ಎರಡು ಕಾಲೂ ಸರ್ತ ಆವುತ್ತಿಲೆ.ಒಳ್ಳೆತ ಬೇನೆ ಎಳಗಿತ್ತಿದ.”
“ಅದು ಹೇಂಗೆ ಸಡನ್ನು ಬೇನೆ ಶುರುವಾದ್ದು ? ವ್ಯಾಯಾಮ ಮಾಡ್ಲೆ ಹೆರಟು ಎಡವಟ್ಟು ಮಾಡಿಗೊಂಡಿರೋ ? ಒಂದೇ ದಿನಲ್ಲಿ ಎಲ್ಲವನ್ನೂ ಮಾಡ್ತೆ ಹೇಳಿ ಹೆರಡ್ಲಕ್ಕೋ ? ಹಾಂಗಾಗಿಯೇ ಬೇನೆ ಎಳಗಿದ್ದಾಯಿಕ್ಕು. ದಿನಾಗಿಳೂ ರಜ್ಜ ರಜ್ಜವೇ ಶುರುಮಾಡಿ ಅಭ್ಯಾಸ ಮಾಡಿಗೊಂಬದಲ್ಲದೋ? ಶ್ಯೋ, ಹೀಂಗೆ ಮಾಡಿರೆ ನಿಂಗೊಗೆ ಗೆಂಟು ಬೇನೆಯೂ ಎಳಗುಗು,ಎನಗೆ ತಲೆ ಬೇನೆಯೂ.ಹ್ಹುಂ.”
ಪಾರುವ ಪರಂಚಾಣ ಶುರುವಾತು.” ಎನ್ನ ಗೆಂಟು ಬೇನೆಗೂ ನಿನ್ನ ತಲೆ ಬೇನೆಗೂ ಎಂತ್ಸಕ್ಕೆ ಗೆಂಟು ಹಾಕುತ್ತೆ ? ಯ್ಯಬ್ಬ,ಕಾಲು ಸರ್ತ ಮಾಡ್ಲೆ ಎಡಿತ್ತಿಲೇಳಿ. ಕಲ್ಲಾರಿಮೂಲೆಂದ ತಂದ ಆ ಬೇನೆಣ್ಣೆ ರಜ್ಜ ಉದ್ದಿರೆ ಸರಿ ಅಕ್ಕು, ಎಂತ ?”
“ಅದನ್ನೇ ಹೇಳಿದ್ದು ತಲೆಬೇನೆ ಹೇಳಿ.ಇನ್ನು ನಿಂಗಳ  ಗೆಂಟು ಉದ್ದೆಕ್ಕು ಆನು. ಕೆಲಸ ಕಮ್ಮಿ ಆಪ್ಪದಕ್ಕೆ ಇದೂ ಒಂದು ಅಲ್ಲದೋ? ಇರಲಿ.” ಈ ಸರ್ತಿ ಕೋಪ ಇತ್ತಿಲೆ,ಅದೊಂದು ನಮುನೆ ಸೆಡವು ಪಾರುದು.
ಅಪ್ಪನ ಮನೆಂದ ತಂದ ಅಕ್ರದ ಕಡ್ಡಿಯೇ ಆಗಲಿ,ಅದರ ವಿಷಯ ತೆಗದರೆ ಎಂತ ತಲೆಬೇನೆಯೂ ಮಂಗಮಾಯ ಆಗದ್ದೆ ಇರ್ತೋ ? ಆನು ಅದನ್ನೆ ಪ್ರಯೋಗ ಮಾಡಿದೆ.  ಪಾರುವ ಮೋರೆಲಿ ಇತ್ತಿದ್ದ ಗೆಂಟು ಸಡಿಲು ಆತು. ಎಣ್ಣೆ ತಂದು ಎರಡೂ ಕಾಲ ಗೆಂಟಿಂಗೆ ಮಸಾಜು ಶುರು ಮಾಡಿತ್ತು. ಅರ್ಧ ಘಂಟೆಲಿ ಕಾಲು ಸರ್ತ ಮಾಡ್ಲೆ ಎಡಿಗಾತು. ಆದರೆ,ಬೇನೆ ಪೂರ ಹೋಯಿದಿಲೆ.
“ಇನ್ನು ಎರಡು ದಿನ ಹೀಂಗೆ ಉದ್ದಿರೆ ಬೇನೆಯೂ ಗುಣ ಅಕ್ಕು.ಮತ್ತೆಯೇ  ವ್ಯಾಯಾಮ ಶುರು ಮಾಡ್ತೆ, ಆಗದೋ?”
ಶುರುವಪ್ಪಗಳೇ ವಿಘ್ನ, ಛೇ.! ಆ ದೊಡ್ಡ ಹೊಟ್ಟೆಯವನೇ ಪಾರು ಮಾಡೆಕ್ಕಟ್ಟೆ.
ಎರಡು ದಿನ ಎಣ್ಣೆ ಉದ್ದಿದ್ದರಲ್ಲಿ ಗುಣ ಸಿಕ್ಕಿದ್ದಪ್ಪು.
“ಊರಿಲಿಪ್ಪೋರು ಕೃಷಿ, ತೋಟ ಮಾಡಿಗೊಂಡಿಪ್ಪೋರಿಂಗೆ  ದಿನಾಗಿಳೂ ಲಾಯ್ಕ ವ್ಯಾಯಾಮ ಸಿಕ್ಕುಗು ಅಪ್ಪೋ .ಉದೀಯಪ್ಪಗ ಎದ್ದಿಕ್ಕಿ ಬಿದ್ದ ಅಡಕ್ಕೆ ಹೆರ್ಕಿಕ್ಕಿ ಬಂದರೂ ಸಾಕಾವುತ್ತು. ಬಹುಶಃ ಹಾಂಗಾಗಿಯೇ ಮನೆ ದೊಡ್ಡಪ್ಪಂಗೆ, ಸೋದರ ಮಾವಂಗೆ ಎಲ್ಲ, ಬಿಪಿ – ಶುಗರು ಹೇಳಿ ಎಂತ ತೊಂದರೆ ಇಲ್ಲದ್ದು ” ಪಾರು ಎಣ್ಣೆ ಉದ್ದಿಗೊಂಡಿಪ್ಪಗ ಆನು ಹೀಂಗೆ ಮಾತು ತೆಗದೆ.
“ವ್ಯಾಯಾಮ ಮಾಂತ್ರ ಅಲ್ಲ, ಶಿಸ್ತಿಲಿಯೂ ಇರ್ತವು.ಮೀಸ್ಸೆಬೈಲು ದೊಡ್ಡಪ್ಪನ ಕಾಣ್ತಿಲೆಯೋ. ಅವು ಅವರ ಹೊತ್ತಿಂಗೆ ತಿಂಡಿ, ಕಾಪಿ, ಊಟ ಮಾಡಿರೆ ಮತ್ತೆ ಎಡೆ ಎಡೆಲಿ ಎಂತ ತೆಕ್ಕೊಳ್ತವಿಲ್ಲೆ.ಆಸರಿಂಗೆ ಬೇಕಾರೆ ಮಜ್ಜಿಗೆ ಕುಡಿಗು.ಎಷ್ಟು ಆರೋಗ್ಯಲ್ಲಿದ್ದವು ಗೊಂತಿದ್ದೋ.! ಈಗಳೂ ತೋಟಕ್ಕೆ ಹೋಗಿ ಒಂದು ಕಟ್ಟ ಹುಲ್ಲು ಮಾಡಿಗೊಂಡು ಬತ್ತವು.”
“ನವಗೂ ಒಂದು ತೋಟ ಇರ್ತಿದ್ದರೆ ನಿತ್ಯ ವ್ಯಾಯಾಮ ಸಿಕ್ಕುತಿತ್ತು,ಅಲ್ಲದೊ?”
“ಹೂಂ… ಇದೆಂತ,ಬಾಯಿ ವಾಸನೆ ಹೋಪಲೆ ಹೇಳುದೊ ನಿಂಗೊ ? ಅಪ್ಪಲಿಲ್ಲೆ ಹೋಪಲಿಲ್ಲೆ.”
ಮರದಿನ ಹೊತ್ತೋಪಗ ಮನೆಗೆ ಬಂದವಂಗೆ ಅರ್ಧ ಡಜನು ಪ್ಲಾಸ್ಟಿಕ್ ಚೆಂಡು ತೋರ್ಸಿತ್ತು ಪಚ್ಚೆ,ಅರಶಿನ,ಕೆಂಪು ಬಣ್ಣದ್ದು.
“ಇಷ್ಟೆಲ್ಲ ಚೆಂಡು ಒಂದರಿಯೇ ಎಂತಕೆ ತಪ್ಪದು. ಸಣ್ಣವ° ಆಟ ಆಡೊದು ಹೇಳಿ ಒಂದೊಂದೆ ಇಡ್ಕಿಕ್ಕಿ ಬಕ್ಕು”
“ಇದು ಸಣ್ಣವಂಗೆ ಆಟ ಆಡ್ಲೆ ತಂದದಲ್ಲ. ನಿಂಗೊಗಿಪ್ಪದು, ವ್ಯಾಯಾಮಕ್ಕೆ.ಹೇಂಗೆ ಹೇಳಿ ತೋರ್ಸುತ್ತೆ,ನಿಲ್ಲಿ.”
ಪಾರು ಆ ಚೀಲಂದ ಒಂದೊಂದೇ ಚೆಂಡಿನ ತೆಗದು ನೆಲಕ್ಕೆ ಬೀಳುಸಿತ್ತು.ಬಿದ್ದ ಚೆಂಡು ಅತ್ತಿತ್ತ ಓಡಿ ಎಲ್ಲೆಲ್ಲೋ ಹೋಗಿ ನಿಂದತ್ತು.ಮತ್ತೆ ಒಂದೊಂದನ್ನೆ ಹೆಕ್ಕಿ ತೆಗದು ಚೀಲಕ್ಕೆ ತುಂಬುಸಿತ್ತು.ಎಲ್ಲ ತುಂಬಿಸಿ ಆದ ಮತ್ತೆ ಇನ್ನೊಂದರಿ ಎಲ್ಲ ಚೆಂಡಿನ ಬೀಳಿಸಿತ್ತು.ವಾಪಾಸು ಒಂದೊಂದೇ ಹೆಕ್ಕಿ ಚೀಲಕ್ಕೆ ಹಾಕಿತ್ತು.ಚೀಲಂದ ನೆಲಕ್ಕೆ ಬೀಳುಸೊದು,ಹೆಕ್ಕಿ ಚೀಲವ ತುಂಬುಸೊದು ಈ ಆಟವ ನಾಕು ಸರ್ತಿ ಮಾಡಿ ತೋರ್ಸಿತ್ತು.
“ಹ್ಹೆ, ಇದೆಂತ ಮಕ್ಕಳಾಟ ನಿನ್ನದು ? ಬೇರೆ ಯೇನಾರು ಒಳ್ಳೆ ಕೆಲಸ ಇಲ್ಲೆಯೋ ಮಾಡ್ಲೆ ?”
“ತಳಿಯದ್ದೆ ನೋಡಿ ನಿಂಗೊ. ಒಂದರಿಯಾದರೂ ತೋಟಲ್ಲಿ ಅಡಕ್ಕೆ ಹೆರ್ಕುದರ ನೋಡಿದ್ದಿರೋ ?”
ಪೇಟೆಲಿ ಹುಟ್ಟಿ ಬೆಳದವ ಆನು.ದೊಡ್ದ  ರಜೆಲಿಯೋ,ದಸರ ರಜೆಲಿಯೋ ಅಜ್ಜನ ಮನೆಗೆ ಹೋಗಿಪ್ಪಗ ತೋಟಕ್ಕೆ ಹೋಪದಿತ್ತು. ಅದು ಭಾವಂದ್ರೊಟ್ಟಿಂಗೆ ಢುರ್ರ್…ಹೇಳಿ ಬಸ್ಸು ಬಿಟ್ಟುಗೊಂಡು ಓಡುವ ಆಟಕ್ಕಪ್ಪಗ ಮಾಂತ್ರ. ಅಲ್ಲದ್ದರೆ ತೋಟದೊಳ ನೆಕ್ಕರೆ ಮಾವಿನಣ್ಣು ತಿಂಬಲೆಯೋ,ಜಂಬು ನೇರಳೆ ತಿಂಬಲೆ ಬೇಕಾಗಿಯೊ ಹೋಪದಿತ್ತು ಅಷ್ಟೆ.! ಮಾವ° ಉದಿಯಪ್ಪಗ ಎದ್ದಿಕ್ಕಿ ತೋಟಕ್ಕೆ ಹೋಗ್ಯೊಂಡು ವಾಪಾಸು ಬಪ್ಪಗ ಕೈಲಿ ಹಾಳೆ ಪಡಿಗೆಲಿ ಅಡಕ್ಕೆ ತೆಕ್ಕೊಂಡು ಬಂದುಗೊಂಡಿದ್ದದು ನೆಂಪಾತೆನಗೆ.
“ತೋಟಕ್ಕೆ ಹೋಗಿ ವ್ಯಾಯಮ ಮಾಡ್ಲೆ ಊರಿಂಗೆ ಹೋಗಿಯೇ ಆಯೆಕ್ಕಾದ್ದಿಲ್ಲೆ.ಇಲ್ಲಿಯೇ ಶುರು ಮಾಡಿ ನಿಂಗೊ” ಹೇಳಿ ಪಾರು ಚೆಂಡಿನ ಚೀಲವ ಎನ್ನ ಕೈಗೆ ದಾಂಟುಸಿತ್ತು.
ಪಾರುವ ಈ ಕೆಣಿ ಎನಗೆ ಕೊಶಿ ಆತು.ಅಕ್ಕು ಹೇಳಿ ಒಪ್ಪಿ ಆನುದೆ ಶುರು ಮಾಡಿದೆ. ಏಳೆಂಟು ಸರ್ತಿ ಬೀಳ್ಸೊದು ಹೆರ್ಕೊದು ಮಾಡಿಯಪ್ಪದ್ದೆ ಹಣೆಲಿ ಸಣ್ಣಕ್ಕೆ ಬೆಗರ ಸಾಲು ಮೂಡಿತ್ತು.ಇನ್ನು ನಾಳೆ ಲಾಗಯ್ತು  ದಿನಾಗಿಳೂ ಈ ವ್ಯಾಯಾಮ ಮಾಡೊದು ಹೇಳಿ ನಿಘ್ಹಂಟು ಮಾಡಿದೆ. ಆದರೆ ಸೊಂಟ ಬೇನೆ ಹಿಡ್ಕೊಂಡಿದು ಹೇಳಿ ಮರದಿನ ಉದಿಯಪ್ಪಗ ಎದ್ದಪ್ಪಗಳೇ ಗೊಂತಾದ್ದು. ಬೆನ್ನು ಪೂರ ಸರ್ತ ಆವುತ್ತಿಲೆ.!
ಪುಣ್ಯಕ್ಕೆ, ಎರಡು ತಿಂಗಳು ಉದ್ದುತ್ತರೆ ಸಾಕಪ್ಪಷ್ಟು ಕಲ್ಲಾರಿಮೂಲೆ ಎಣ್ಣೆ ಸ್ಟೋಕು ಇದ್ದತ್ತು.ಈಗ ಗೆಂಟಿನೊಟ್ಟಿಂಗೆ ಸೊಂಟಕ್ಕೂ ಉದ್ದಾಣ ಶುರುವಾತು.ಆನು ಮಾಂತ್ರ ಚೆಂಡಿನಾಟವ ನಿಲ್ಲುಸಿದ್ದಿಲೆ. ಒಂದು ವಾರ ಯೇವ ಅಡ್ಡಿ ಇಲ್ಲದ್ದೆ ಮುಂದುವರಿಸಿದೆ. ಸೊಂಟಬೇನೆಯೂ ಯೇವ ತಕರಾರು ಮಾಡದ್ದೆ ಘಟ್ಟಿ ಕೂದತ್ತು.
“ಈ ಕೆಲಸ ಆಗ ಪಾರು. ಸಾಕಿನ್ನು ಎನಗೆ ಚೆಂಡಿನಾಟ” ಇನ್ನು ಹೀಂಗೆ ಮುಂದುವರುಸುಲೆಡಿಯ ಹೇಳಿ ಆತೆನಗೆ.
“ಅಂಬಗ ಉದಿಯಪ್ಪಗೆ ಎದ್ದು ನಡವಲೆ ಶುರುಮಾಡಿ.ಬೇಗ ಎಬ್ಬುಸುವೆ ಆನು.”
“ಈ ಚಳಿ ಹವೆಗೆ ಉದಿಯಪ್ಪಗ ಎದ್ದು ನಡದರೆ ಶೀತ ಹಿಡಿಗನ್ನೆ”
“ಶುರುಮಾಡೆಕ್ಕಾರೆ ಅಡ್ಡಿ ಹೇಳ್ತಿರನ್ನೆ ನಿಂಗೊ. ಈ ವಿಘ್ನ ಕಳವಲೆ ಯೇವ ದೊಡ್ಡ ಹೊಟ್ಟೆಯೋನಿಂಗೂ ಎಡಿಗಾಗ. ನಿಂಗಳೇ ಪರಿಹಾರ ಕಂಡುಗೊಳ್ಳೆಕ್ಕು, ಹ್ಹುಂ.”
“ಅಕ್ಕು..ಅಕ್ಕು.ನಾಳಂದಲೆ ಶುರು ಮಾಡ್ತೆ, ಸರಿಯಾ.?” ಪೂರ್ತಿ ಮನಸ್ಸಿಂದ ಹೇಳಿದ್ದಲ್ಲ ಹೇಳುದು ಪಾರುಗೆ ಅರ್ಥ ಆಯಿದು.
“ನಿಂಗಳ ಆರೋಗ್ಯಕ್ಕೆ ಬೇಕಾಗಿಯಲ್ಲದ ಹೇಳುದು. ನಿಂಗಳ ಆರೋಗ್ಯ ಒಳ್ಳೆದಿದ್ದರೆ ಮನೆ ಆರೋಗ್ಯವೂ ಒಳ್ಳೆದಕ್ಕು,ಎಂತ ?” ಪಾರುವ ಈ ಮಾತಿನೆದುರು ಯೇವ ಅಡ್ಡಿಗಳೂ ಮತ್ತೆ ಎನ್ನತ್ತರೆ ಸುಳುದ್ದಿಲೆ.
ಮರದಿನಂದ ಎನ್ನ ಉದಿಯಪ್ಪಗಾಣ ನಡಿಗೆ ಯೇವ ವಿಘ್ನ ಇಲ್ಲದ್ದೆ ಶುರುವಾತು.

~~~<>~~~

24 thoughts on “ಯೋಗಾಭ್ಯಾಸೇನ ಸುಖಿನೋ ಭವಂತು !

  1. ಲೇಖನ/ಅನುಭವ ಲಾಯ್ಕ್ ಆಯ್ದು. ಒಪ್ಪಗಳುದೆ ರೈಸಿದ್ದು. ಎಲ್ಲರ ವ್ಯಾಯಾಮದ ಕಥೆಯೂ ಹೀಂಗೆ ಅಲ್ಲದೊ. ಆದ್ರು ಬೇರೆ ದಾರಿ ಇಲ್ಲೆ. ಏನಾರು ಒಂದು ಮಾಡ್ಲೆ ಬೇಕನ್ನೆ !

  2. ಮಾವ ನಿಂಗಳ ಲಹರಿ ಹೆಚ್ಚಿನ ಆಫೀಸು ಮಾವಂಗಳ ಮನೆ ಮನೆ ಕತೆ….. ಎನಗೂ ಇಲ್ಲಿ ಎಣ್ಣೆ ಶಾಖ ಕೊಟ್ಟು ಮೈಕರಗಿತ್ತೇ ವಿನಾ ಅವರ ಬೆನ್ನು ಬೇನೆ ಕಮ್ಮಿಯೇ ಆಯಿದಿಲ್ಲೆ….

  3. ತೆಳು ಹಾಸ್ಯಲ್ಲಿ ಮೂಡಿ ಬಂದ ಅತ್ತೆ ಮಾವನ ಸಂಭಾಷಣೆಗೊ, ಅತ್ತೆಯ ಕಾಳಜಿ ಎಲ್ಲವೂ ತುಂಬಾ ಚೆಂದ ಆಯಿದು.
    ಯೋಗವೇ ಆಗಲಿ, ವಾಕಿಂಗೇ ಆಗಲಿ ಒಂದರಿ ಸುರು ಮಾಡಿ ಅಪ್ಪಗ ಕೈ ಕಾಲು ಬೇನೆ, ಮುಂದುವರುಸಲೆ ಉದಾಸೀನ ಎಲ್ಲಾ ಇಪ್ಪದೇ. ಉದಿಯಪ್ಪಗ ಬೇಗ ಏಳೆಕ್ಕು ಹೇಳುವಾಗಲೇ ಚಳಿ ಕೂಬದು ಹೆಚ್ಚು. ಒಂದರಿ ಹೆರಟರೆ ಮತ್ತೆ ಮುಂದೆ ಹೋವುತ್ತು. ಹೊಟ್ಟೆ ಇಳುಶಲೆ ಒಂದು ಆರೋಗ್ಯ ಸೂತ್ರ ಇದ್ದು.(ಮೊನ್ನೆ ಸೌಖ್ಯವನಲ್ಲಿ ಕಲ್ತು ಬಂದದು)
    ಡಿನಕ್ಕೆ ೩ ಲೀಟರ್ ನೀರು ಕುಡಿವದು,
    ಎರಡು ಹೊತ್ತು ಊಟ (ಹೊಟ್ಟೆ ಬಿರಿವಷ್ಟು ಅಲ್ಲ- ಹೊಟ್ಟೆಯ ಮೂರನೇ ಒಂದು ಭಾಗ ಘನ ಆಹಾರ, ಇನ್ನೊಂದು ಮೂರನೇ ಒಂದು ಭಾಗ ದ್ರವ ಆಹಾರ, ಬಾಕಿ ಒಳುದ ಜಾಗೆ ಖಾಲಿ),
    ಒಂದು ಗಂಟೆ ವ್ಯಾಯಾಮ/ಯೋಗ ಇತ್ಯಾದಿ,
    ವಾರಕ್ಕೆ ಒಂದು ದಿನ ಉಪವಾಸ.
    ಇರುಳು ಉಂಬದು ಮತ್ತೆ ಮನುಗುವ ಸಮಯದ ಅಂತರ ಕಮ್ಮಿಲಿ ೩ ಗಂಟೆ ಇರೆಕ್ಕು.

    1. ಓಳ್ಳೆ ಮಾಹಿತಿ ಅಪ್ಪಚ್ಚಿ.

  4. ಕು೦ಬಳಕಾಯಿ ಕಳ್ಳ ಹೇಳಿದರೆ ಬೆನ್ನು [ಬೆನ್ನು ಅಲ್ಲಾ , ಹೆಗಲು ] ಮುಟ್ಟಿ ನೋಡಿಕೊ೦ಡ ಹೇಳಿ ಆಯಿದು,

    1. ಹೊಟ್ಟೆ ಮುಟ್ಟಿಗೊಂಡಿದಿಲೆನ್ನೆ ಭಾವ.

  5. {ಯೇವ ದೊಡ್ಡ ಹೊಟ್ಟೆಯೋನಿಂಗೂ ಎಡಿಗಾಗ}
    ಕು೦ಬಳಕಾಯಿ ಕಳ್ಳ ಹೇಳಿದರೆ ಬೆನ್ನು ಮುಟ್ಟಿ ನೋಡಿಕೊ೦ಡ ಹೇಳಿ ಆಯಿದು ಎನ್ನ ಸ್ಥಿತಿ.
    ನಾವು ಹೊಟ್ಟೆ ಮುಟ್ತಿಗೊ೦ಡದು ಅಷ್ಟೆ !
    ಏನೇ ಪಾರು ಅತ್ತೆಯ ಕೆಣಿ ಮೆಚ್ಚೆಕ್ಕಾದ್ದು..

    1. ವ್ಯಾಯಾಮ ಮಾಡ್ತೋರ ಹಸ್ತ ಮುಟ್ಟಿಗೊಂಡರೆ ನವಗೂ ಅದರ ಫಲ ಸಿಕ್ಕುವಾಂಗೆ ಯೇನಾರು ಕೆಣಿ ಇದ್ದೋ ನೋಡೆಕ್ಕು ,ಅಲ್ಲದೋ ?

      1. ನಿ೦ಗಳ ಮಾತಿನೆಡೆಲಿ ಮೂಗು ತೂರುಸುದ್ದಕ್ಕೆ ಕ್ಷಮೆ ಇರಲಿ ಮಾವ – ಹಸ್ತ ಮಟ್ಟುದರಿ೦ದ , ಕಣ್ಣುಮುಚ್ಹಿ ಹಾಕಿದರುದೆ ಹಸ್ತಾಕ್ಷರಕ್ಕೆ ಬೆಲೆ ಹೆಚ್ಹು.

  6. “ಬೇಡ ಪಾರೂ ಚೆಂಡಿನಾಟ ಸೊಂಟ ಬೇನೆಯೂ. . . .” ಹೇಳಿ ಮಾವ ಹೇಳೆಕಾಗಿ ಬಂತಾನೆ. ಪಾರು ಅತ್ತೆಯ ಕೆಣಿ ಲಾಯಕಾಯಿದು. ದೊಡ್ಡ ಹೊಟ್ಟೆಯ ಕರಗುಸಲೆ, ದೊಡ್ಡ ಹೊಟ್ಟೆಯವನ ಕರುಣೆ ಬೇಕು ಹೇಳುವದು ನಿಜ. ಕುಮಾರ ಮಾವನ ಸಂಸಾರದ ಸರಿಗಮ ಏವತ್ತುದೆ, ನಮ್ಮ ಬೈಲಿಂಗೆ ರಸಗವಳ.

    1. ನಿಂಗಳ ಮೆಚ್ಚುಗೆಯ ಒಪ್ಪ ಎಂಗೊಗೆ ಮತ್ತೂ ಬರವಲೆ ಸ್ಪೂರ್ತಿ ಭಾವ.

  7. ಮಾವ, ಆ ಎಣ್ಣೆಯ ನಿ೦ಗೊ ಔನ್ಸ್ ಲೆಕ್ಕಲ್ಲಿ ನಿ೦ಗಳ ತಲೆಗೆ ಹಾಕಿದರೆ ಅತ್ತೆ ಅಷ್ಟು ಚುರುಕಾದ್ದು ಹೇ೦ಗೆ ಹೇಳಿ ಗೊ೦ತಕ್ಕು. ಅತ್ತೆಗಾದರೆ ಬಿ೦ದು ಲೆಕ್ಕಲ್ಲಿ ಸಾಕಕ್ಕು. ;-).

    1. ಭಾಗ್ಯಕ್ಕ ನಿಂಗೊಗೆ ಬರವಗ ತಪ್ಪಿದ್ದಾಯಿಕ್ಕು.ಎನ್ನ ತಲೆಲಿ ಸಣ್ಣಕ್ಕೆ ಕೂದಲು ಇಪ್ಪದು,ಅದೂ ಒಳುದ್ದಕ್ಕೆ ಒಂದೆರಡು ಬಿಂದು ಮಾಂತ್ರವೇ ಸಾಕಾವ್ತ್ತು.ಪಾರುವ ತಲೆಲಿ ಇಪ್ಪ ಕೂದಲಿಂಗೆ ಔನ್ಸು ಲೆಕ್ಕಲ್ಲಿಯೇ ಬೇಕಕ್ಕು.

      1. ನಿ೦ಗಳ ರೀತಿಲಿ ನಿ೦ಗೊ ಸರಿಯೇ ಮಾವ. ಆನು ಯೋಚನೆ ಮಾಡಿದ ರೀತಿಲಿ ಆನು ತಪ್ಪಲ್ಲ.

  8. ಮಾವ, ಅಡಕ್ಕೆ ಹೆರ್ಕುಲೆ ಪ್ರಾಕ್ಟೀಸ್ ಮಾಡಿದ್ದು ಮಾಂತ್ರ ಭಾಳಾ ಚಲೋ ಆಯಿದು. ಪಾರುಅತ್ತೆಯ ತಲೆಗೆ ಕೊಡೇಕ್ಕೆ- ಬಡಿಗೆಲಿ ಅಲ್ಲ! ತಲೆಲಿ ಬಂದ ಯೋಚನೆಗೆ ಬಹುಮಾನ ಕೊಡೆಕ್ಕು ಹೇಳಿ. ಈ ಆರಂಭಶೂರತ್ವ ಹೆಚ್ಚಿನ ಮನೆಗಳಲ್ಲಿಯೂ ಇದ್ದಂಬಗ! ನಿಂಗಳ ಎಲ್ಲ ಸಮಸ್ಯೆಗಳಂದಲೂ ಪಾರುಮಾಡ್ಳೆ ಆ ದೊಡ್ಡಹೊಟ್ಟೆಯೋನು ಪಾರುಅತ್ತೆಗೆ ಕಂಟ್ರಾಕ್ಟು ಕೊಟ್ಟಿದನೋ ಹೇಂಗೆ? ಅಂತೂ ಲಾಯ್ಕಾದ್ದು ಅಪ್ಪು!

    1. ನಿಂಗಳ ಒಪ್ಪವೂ ಲಾಯ್ಕಾಯಿದು ಅತ್ತೆ.

  9. ಆರೋಗ್ಯಂ ತಂತು ನಾನೇನ…. ಮಮ ಜೀವನ….. 🙂

  10. ಎನ ಮಂಡೆಬೆಶಿ ಸುರುಮಾಡಿತ್ತನ್ನೇ ಈ ಶುದ್ದಿ. ಎನಗೂ ವೋಕಿಂಗು ಹೋಯೇಕು ಹೇದು ಇದ್ದಪ್ಪ ಕೆಲವು ವೊರಿಶ ಆತು ಯೋಚನೆ ಮಾಡ್ಸು. ಆದರೆ ಎನ ಉದಿಯಪ್ಪಗಳೇ ಬೆಶಿಲು ಕಾಯ್ತು ಇಲ್ಲಿ, ಆಪೀಸು ಕುರ್ಚಿಲಿ ಹೋಗಿ ಕೂಬಲೆ ಸಮಯವೂ ಆವ್ತು ಹ್ಹು!
    ಮನಸ್ಸಿದ್ದರೆ ಮನೇಲಿಯೇ ಯೋಗ ಮಾಡ್ಯೊಂಬಲಕ್ಕಪ್ಪೋ. ಯೋಚನೆ ಮಾಡೆಕ್ಕಾದ್ದೇ. ಬರೇ ಯೋಚನೆ ಮಾಡಿರೆ ಸಾಕೋ ?! ಇದೂ ಯೋಚನೆ ಸುರುವಾತೀಗ.
    ಶುದ್ದಿಗೊಂದು ಒಪ್ಪ ಇತ್ಲಾಗಿಂದ.

    1. ಮನಸ್ಸಿದ್ದರೆ ಮಾರ್ಗ. ಮನಸ್ಸು ಮಾಡಿರೆ ಯೋಗ.ಯೋಗ ಮಾಡಿರೆ ಅರೋಗ್ಯ – ಇದು ಪಾರು ಉವಾಚ.

    2. “ನಾಳೆಂದ ವಾಕಿಂಗ್ ಹೊಪದೇ ” ಹೇಳಿ ಮನೆಗೋಡೆಲಿ ಬರದು ನೇಲ್ಸಿ ಭಾವ. ಮತ್ತೆ ದಿನಾ ಎದ್ದಾಂಗೆ ಅದರ ನೋಡಿರೆ ಆತು. ಆರಾರು ವಾಕಿಂಗ್ ಹೋಪದು ಯಾವಾಗಂದ ಹೇಳಿ ಕೇಳಿರೆ ತೋರ್ಸುಲೆ ಬೋರ್ಡ್ ಇದ್ದನ್ನೆ.

  11. ಮಾವಾ°,
    ಆನೂ ಯೋಗಾಸನ ಮಾಡೆಕೂ ಹೇಳಿ ಗ್ರೇಶುದು ಮಾವಾ°, ಉದಿಯಪ್ಪಗ ಎಚ್ಚರಿಗೆಯೇ ಆವುತ್ತಿಲ್ಲೆ!
    ಹಾಂಗಾಗಿ ಇರುಳು ಉಂಡಿಕ್ಕಿ ಅರ್ಧ ಘಂಟೆ ನೆಡವದು ಈಗ 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×