19-ಜನವರಿ-2016 : ಮುಜುಂಗಾವು ವಿದ್ಯಾಪೀಠಲ್ಲಿ ಸಂಸ್ಕೃತಾಸಕ್ತರಿಂಗಾಗಿ “ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ”

ಸನಾತನ ಧರ್ಮದ ಅಡಿಪಾಯವೇ ಸಂಸ್ಕೃತ – ಸಂಸ್ಕಾರ – ಸಂಕೃತಿ. ಇದು ಮೂರರನ್ನೂ ಭದ್ರವಾಗಿ ಮಡಿಕ್ಕೊಂಡರೆ ಮಾಂತ್ರ ನಮ್ಮ ಮುಂದಾಣ ಪೀಳಿಗೆಗೊಕ್ಕೆ ನಮ್ಮ ಹೆರಿಯೋರು ಒಳಿಶಿ ಬೆಳೆಶಿದ ಧರ್ಮ ಒಳುದು ಕಾಂಗು. ಧರ್ಮವ ಒಳಿಶುದು ನಮ್ಮಎಲ್ಲರ ಕೈಲಿದ್ದು. ಅದರ್ಲಿಯೂ ವಿಶೇಷವಾಗಿ, ಸಂಸ್ಕೃತ – ವೇದ ಅಭ್ಯಾಸ ಮಾಡಿ, ಅದರ ಅನುಭವಿಸಿ, ಅದರ ಪ್ರಕಾರ ಜೀವಿಸುವ ಸನಾತನಿಗಳ ಕೈಲಿದ್ದು.

ಸಮಾಜದ ಸಂಸ್ಕಾರವ ಉದ್ಧರುಸೆಕ್ಕಾರೆ – ಅದು ಸಂಸ್ಕೃತವೇ ಆಯೆಕ್ಕಷ್ಟೆ.

ಇಂದಿನ ಸಮಾಜ, ಸಂಸ್ಕೃದ ಹೋರಾಟ, ತತ್ಸಮಾನ ವಾತಾವರಣಂಗೊ, ನಮ್ಮ ವೇದನಿಧಿಗಳಲ್ಲಿ ಅಡಕವಾಗಿಪ್ಪ ಸುಜ್ಞಾನ-ವಿಜ್ಞಾನಂಗೊ, ಸುಭಾಷಿತಲ್ಲಿ ಹೊಂದಿಪ್ಪ ಬುದ್ಧಿಮಾತುಗೊ – ಇದೆಲ್ಲವನ್ನೂ ಒಂದು ದಿನ ನಾವು ಕೂದುಗೊಂಡು ಮಾತಾಡಿರೆ ಹೇಂಗಿಕ್ಕು?

ಇದೇ ಸಂಗತಿಗಾಗಿ ಒಂದು ದಿನದ ಪರಿಚರ್ಚಾತ್ಮಕ ಶಿಬಿರವ ನಾವು ಆಯೋಜನೆ ಮಾಡಿದ್ದು.
ನಮ್ಮ ಬೈಲಿನ ಎಲ್ಲ ನೆಂಟ್ರ ಸುಧಾರಿಕೆಲಿ, ಮುಳ್ಳೇರ್ಯ ಮಂಡಲದ ಧರ್ಮವಿಭಾಗದ ಜಂಟೀ ಸಹಯೋಗಲ್ಲಿ ಬೆಳಗಿಬಪ್ಪ ಈ ಕಾರ್ಯಕ್ರಮಕ್ಕೆ ವೇದ – ಮಂತ್ರ – ಸುಭಾಷಿತ – ಜ್ಯೋತಿಷ್ಯ – ಸಂಸ್ಕಾರ – ಸಂಸ್ಕೃತ -ಸಂಸ್ಕೃತಿ – ಆಸಕ್ತರಾದ ಎಲ್ಲರೂ ಬಂದು ಭಾಗವಹಿಸೆಕ್ಕು, ಕಾರ್ಯಾಗಾರವ ಯಶಸ್ಸುಗೊಳುಸೆಕ್ಕು – ಹೇಳ್ತದು ನಮ್ಮ ಕೋರಿಕೆ.

ನಮ್ಮ ಬೈಲಿನ ಸಂಪನ್ಮೂಲವ್ಯಕ್ತಿಗಳಾದ ಕೂಳಕ್ಕೂಡ್ಳು ಮಹೇಶಣ್ಣ, ಪೆರ್ಲ ಸದಾಶಿವ ಮಾಷ್ಟ್ರು, ಬೆಂಗ್ಳೂರು ಲೋಹಿತಣ್ಣ ಇತ್ಯಾದಿ ಮಹನೀಯರ ತರಗತಿಗೊ ಆ ದಿನ ನೆಡೆತ್ತು. ಹಿರಿಯರಾದ ಕೋಣಮ್ಮೆ ಭಟ್ಟಮಾವ ಉದ್ಘಾಟನೆಗೆ ಬಂದು ಆಶೀರ್ವಾದ ಮಾಡ್ತವು. ಗೌರವಾನ್ವಿತ ಪಳ್ಳತ್ತಡ್ಕ ಭಟ್ಟಮಾವ ಸಮಾರೋಪಕ್ಕೆ ಬಂದು ಎಲ್ಲೋರಿಂಗೂ ಶುಭಹಾರೈಸುತ್ತವು. ದರ್ಭೆಮಾಷ್ಟ್ರು ಶಾಮಣ್ಣ, ಹಿಳ್ಳೆಮನೆ ಸತ್ಯಣ್ಣ, ಮಾಷ್ಟ್ರುಮಾವ, ಶರ್ಮಪ್ಪಚ್ಚಿ, ಗಣೇಶಮಾವ, ಶ್ರೀಅಕ್ಕ, ಉಡುಪಮೂಲೆ ಅಕ್ಕ, ಹಳೆಮನೆ ತಮ್ಮಣ್ಣ , ಮುಳ್ಳೇರ್ಯಧರ್ಮ ಪ್ರಧಾನ ಕೂಟೇಲು ಕೇಶವಣ್ಣ, ಬಳ್ಳಮೂಲೆ ಮಾಷ್ಟ್ರು, ಮಠದ ಹಲವು ಪದಾಧಿಕಾರಿಗೊ – ಎಲ್ಲೋರುದೇ ಆ ದಿನ ಬಂದು ಸೇರುತ್ತವು. ನೂರಾರು ವೈದಿಕರು, ಗೃಹಸ್ಥರು ಸೇರಿ ತರಗತಿಗಳ ಯಶಸ್ವಿ ಮಾಡಿಕೊಡುವ ನಿರೀಕ್ಷೆ ನಮ್ಮೆಲ್ಲರ ಹೆಗಲಮೇಲೆ ಇದ್ದು.

ಎಲ್ಲೋರುದೇ ಬತ್ತಿರಲ್ದೋ?

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಾ – ಯೇವ ಯೇವಗ ಧರ್ಮಕ್ಕೆ ಗ್ಲಾನಿ ಬತ್ತೋ ಆಯಾ ಸಂದರ್ಭಲ್ಲಿ ಶ್ರೀದೇವತಾಸ್ವರೂಪವೊಂದು ಬಂದು ಧರ್ಮದ ಪುನರುತ್ಥಾನಕ್ಕೆ ಸಮಾಜವ ಅಣಿಮಾಡ್ತು.

 

ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ - ಆಮಂತ್ರಣ ಪತ್ರಿಕೆ

ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ – ಆಮಂತ್ರಣ ಪತ್ರಿಕೆ

Admin | ಗುರಿಕ್ಕಾರ°

   

You may also like...

3 Responses

  1. ಚೆನ್ನೈ ಭಾವ° says:

    ಹರೇ ರಾಮ. ಒಪ್ಪ ಕಾರ್ಯ. ಶ್ರೀ ಸಂಸ್ಥಾನದ ಆಶೀರ್ವಾದಂದ ಯಶಸ್ಸಾಗಲಿ.

  2. ಕಾರ್ಯಕ್ರಮಕ್ಕೆ ಶುಭಹಾರೈಕೆ.ನಮ್ಮ ಸನಾತನ ಸಂಸ್ಕೃತಿ ಒಳುದು ಬೆಳೆಯಲಿ. ಹೀಂಗಿದ್ದ ಕಾರ್ಯಕ್ರಮಂದಲಾಗಿಯಾದರೂ ಮುಂದಿನ ಜನಾಂಗ ಸುಸಂಸ್ಕೃತೀಯರಾಗಲಿ .

  3. ಬೊಳುಂಬು ಗೋಪಾಲ says:

    ಕಾರ್ಯಾಗಾರ ಚೆಂದಕೆ ನೆಡೆಯಲಿ. ಎಲ್ಲೋರಿಂಗುದೆ ಅದರ ಪ್ರಯೋಜನ ಸಿಕ್ಕಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *