25-ಅಗೋಸ್ತು : ಬೆಂಗುಳೂರಿಲಿ ಬೈಲಿನ ಮಿಲನ, ಗುರುಭೇಟಿ, ಪುಸ್ತಕ ಬಿಡುಗಡೆ

ಹರೇರಾಮ ಎಲ್ಲೋರಿಂಗೂ.
ನಮ್ಮೆದುರೇ ಹುಟ್ಟಿ ಪ್ರಕಟ ಆದ ಈ ಬೈಲು ದಿನದಿನವೂ – ಅನುದಿನವೂ ಬೆಳೆತ್ತಾ ಇದ್ದು. ನಿತ್ಯವೂ ಹೊಸ ಹೊಸ ಸಾಹಿತ್ಯ ಸೃಷ್ಟಿ ಆವುತ್ತಾ ಇದ್ದು. ಈ ಪ್ರವಾಹವ ಹೀಂಗೇ ಒಳಿಶಲೆ, ಬೆಳೆಶಲೆ, ಬೆಳವ ಬೈಲಿನ ಸಾಗುವಳಿಯ ಹಸನು ಮಾಡ್ಳೆ ಅಂಬಗಂಬಗ ಒಟ್ಟುಸೇರಿಗೊಂಡಿರೇಕು ನಾವು. ಅಲ್ಲದೋ?
ಕಳುದೊರಿಶ ಯೇನಂಕೂಡ್ಳು ಕಿಶೋರಣ್ಣನ ಮನೆಜೆಗಿಲಿಲಿ “ಬೈಲಿನ ಮಿಲನ – 2011” ಹೇಳ್ತ ಹೆಸರಿಲಿ ನಾವೆಲ್ಲೋರುದೇ ಸೇರಿದ್ದು ನಿಂಗೊಗೆ ನೆಂಪಿಕ್ಕು. ಶರ್ಮಪ್ಪಚ್ಚಿ ಆ ಮಿಲನದ ಚೆಂದದ ಶುದ್ದಿ ಬರದು ದಿನದ ನೆಂಪು ಅಮರವಾಗಿಪ್ಪ ಹಾಂಗೆ ಮಾಡಿದ್ದವು.
ಆ ದಿನ ಸೇರಿರದ್ದೋರು ಈ ಸಂಕೊಲೆಲಿಪ್ಪ ಶುದ್ದಿ ಓದಿ ನೆಂಪು ಮಾಡಿಗೊಂಬಲಕ್ಕು.
http://oppanna.com/lekhana/sharmappacchi/yenankudlu-bailu-milana-get-together
ಈಗ ಮತ್ತಾಣ ಒರಿಶದ ಕೊಶಿಯ ಶುದ್ದಿ.
~

Raghaveshwara Bharati swamiji

ನಮ್ಮ ಗುರುಗೊ – ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ

ಈ ಒರಿಶದ “ಬೈಲಿನ ಮಿಲನ”ವ ಅಭೂತಪೂರ್ವವಾಗಿ ಆಚರುಸಲೆ ಅವಕಾಶ ಸಿಕ್ಕಿದ್ದು.
ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ಬೈಲಿಂಗೆ ಬಂದು ನಮ್ಮೆಲ್ಲೋರ ಆ ದಿನ ಹರಸುತ್ತವು. ಬೈಲಿನ ಮಿಲನದ ಒಟ್ಟಿಂಗೆ ಬೈಲಿನ ಎಲ್ಲೋರಿಂಗೂ ಗುರುಭೇಟಿಲಿ ಭಾಗಿ ಆಗಿ, ಸಾಹಿತ್ಯಿಕ ವಿಮರ್ಶೆ, ಮಾತುಕತೆ, ಚರ್ಚೆ, ವಿಚಾರ-ವಿನಿಮಯ ಮಾಡ್ತ ಅವಕಾಶ ಇದ್ದು.
ಬೈಲಿನ ಕೆಲವು ಶುದ್ದಿಗಳ ಒಟ್ಟುಸೇರ್ಸಿ ಮಾಡಿದ ಪುಸ್ತಕಂಗಳ ಅದೇ ದಿನ ಶ್ರೀಗುರುಗೊ ಅನುಗ್ರಹಿಸಿ ಬಿಡುಗಡೆಮಾಡ್ತವು.

ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿವರ:

ಬಿಡುಗಡೆ ಮಾಡ್ತೋರು: ಶ್ರೀಗುರುಗೊ
ಸ್ಥಳ: ನಂದನ ಚಾತುರ್ಮಾಸ್ಯ, ಸಭಾಮಂದಿರ, ರಾಮಾಶ್ರಮ. ಗಿರಿನಗರ – ಬೆಂಗ್ಳೂರು
ಸಮಯ: 25-ಅಗೋಸ್ತು-2012, ಮಧ್ಯಾನ್ನ 12:30ರ ಮತ್ತೆ,

 ಪುಸ್ತಕ -1:
ಶೀರ್ಷಿಕೆ: ಒಪ್ಪಣ್ಣನ ಒಪ್ಪಂಗೊ – ಒಂದೆಲಗ°.
ಬರದೋರು: ಒಪ್ಪಣ್ಣ
ಮುನ್ನುಡಿ: ವಿದ್ವಾನಣ್ಣ
 ಪುಸ್ತಕ -2
ಶೀರ್ಷಿಕೆ: ಹದಿನಾರು ಸಂಸ್ಕಾರಂಗೊ, ಯಾವದು? ಹೇಂಗೆ? ಎಂತಕೆ?
ಬರದೋರು: ಚೆನ್ನೈ ಭಾವ°
ಮುನ್ನುಡಿ: ಪಳ್ಳತ್ತಡ್ಕ ಭಟ್ಟಮಾವ°
   

ಬೈಲಿನ ಎಲ್ಲೋರುದೇ ಬಂದು ಕಾರ್ಯಕ್ರಮವ ಚೆಂದಗಾಣುಸಿಕೊಡೇಕು.

ಗುರುಗಳ ಆಶೀರ್ವಾದವ ಪಡಕ್ಕೊಳೇಕು,
ಹವ್ಯಕ ಸಾಹಿತ್ಯ ಬೆಳವಣಿಗೆಲಿ ಕೈಜೋಡುಸೇಕು-
ಹೇಳ್ತದು ಬೈಲಿನ ಪರವಾಗಿ ಹೇಳಿಕೆ.
~
ಬೈಲಿನ ಪರವಾಗಿ
Admin@oppanna.com

Admin | ಗುರಿಕ್ಕಾರ°

   

You may also like...

16 Responses

 1. ಅಂದು ಲೋಕಾರ್ಪಣೆ ಅಪ್ಪ ಪುಸ್ತಕಂಗಳ ಬಗ್ಗೆ ಸ್ವಲ್ಪ ವಿವರ ಕೊಟ್ರೆ ಒಳ್ಳೆದಿತ್ತು

  • ಎಮ್. ಕೆ. says:

   ಪವನ ಮ೦ತ್ರಕ್ಕೆ ——- ಚಿತ್ರ ಉದುರಿ/ಹೆದರಿ(– ಇ೦ದ್ರಾಯ-ತಕ್ಷಕಾಯ——-) ವಿವರ ಸಮೇತ ಬ೦ತಲ್ಲದೋ ,ಭಾವ.

   • ಇದಾರು ಪೂರ್ತಿ ಹೆಸರು ಹೇಳದ್ದ ಎಮ್.ಕೆ?
    { /ಹೆದರಿ}
    ನಮ್ಮದೇ ಬೈಲಿಲಿ ನವಗೆಂತಕೆ ಬಾವ ಹೆದರಿಕೆ? ಮಾವ ಕೇಳಿದ್ದು ಸರಿಯಾದ ಪ್ರಶ್ನೆ, ಅದಕ್ಕೆ ಸರಿಯಾದ ಮಾಹಿತಿಯ ಕೊಟ್ಟಿದು ನಾವು.
    ಇದರ್ಲಿ ಹೆದರಿಕೆಯ ಪ್ರಶ್ನೆ ಎಂತಗೆ ಬಂತು?

    ಈಗ ಹೇಳಿ, ನಿಂಗಳ ಪೂರ್ತಿ ಹೆಸರು ಹೇಳುಲೆ ಹೆದರಿದಿರೋ? 🙂

    • ಎಮ್. ಕೆ. says:

     ನಿ೦ಗಳ ಉದ್ದೇಶ ಮಡಗಿ ಬರದ್ದು ಅಲ್ಲ ಅದು . ಭಾವನ ಮೇಲಿನ ಅಭಿಮಾನ೦ದ ಬರದ್ದು. ನಿ೦ಗಳ ರೇಟಿ೦ಗ್ಲ್ಲೇ ಎಲ್ಲರೂ ಗುರಿ/ ಕಾರ ಅರದು ಮಡಗಿದ ಹಾ೦ಗೆ ಕಾಣುತ್ತು. ಬೈಲು ಮನ್ನಿಸೆಕ್ಕು.

 2. ಕೊಶಿಯ ಶುದ್ದಿಯನ್ನ ಸಾಕಷ್ಟು ಮು೦ಚೆ ಹೇಳಿದ್ದಕ್ಕೆ ಧನ್ಯವಾದ.

 3. Yajnesh says:

  ತುಂಬಾ ಖುಷಿ ವಿಶ್ಯ. ಇನ್ನು ಹತ್ತು ಹಲ್ವಾರು ಪುಸ್ತಕಗಳು ಬರ್ಲಿ.

 4. pakalakunja gopalakrishna says:

  ತುಂಬಾ ಖುಷಿ ವಿಶ್ಯ.

  ಇನ್ನು ಹತ್ತು ಹಲ್ವಾರು ಪುಸ್ತಕಗಳು ಬರ್ಲಿ.

  ಧನ್ಯವಾದ

 5. ಕಾರ್ಯಕ್ರಮಕ್ಕೆ ಬಪ್ಪಲೆ ಬೆಂಗಳೂರು ಬಂಡಿಗೆ ಟಿಕೆಟ್ಟು ತೆಕ್ಕೊಂಡು ಆಯಿದು. ಬೈಲಿನವೆಲ್ಲ ಗುರುಗಳ ಒಟ್ಟಿಂಗೆ ಭೇಟಿ ಅಪ್ಪದು,
  ಅಲ್ಲಿ ನಮ್ಮವರದ್ದೇ ಎರಡು ಪುಸ್ತಕಂಗೊ ಬಿಡುಗಡೆ ಅಪ್ಪದು ಸಂತೋಷದ ವಿಷಯ. ಎರಡು ಪುಸ್ತಕಂಗಳದ್ದು ಮುಖಪುಟ ತುಂಬಾ ಚೆಂದಕೆ ಬಯಿಂದು.
  ಒಳಾಣ ಹೂರಣವುದೆ ಒಪ್ಪ ಶುದ್ದಿಗಳೇ. ಒಪ್ಪಣ್ಣನ, ಚೆನ್ನೈ ಭಾವಯ್ಯನ ಶ್ರಮ ಸಾರ್ಥಕ ಆಗಲಿ. ಹವ್ಯಕರೆಲ್ಲೋರುದೆ ಈ ಪುಸ್ತಕಂಗಳ ಓದುತ್ತ ಹಾಂಗಾಗಲಿ.
  ಶುಭಾಶಯಂಗೊ.

  • ಮಾವಾ°,
   ಏವ ದಿನದ ಬಂಡಿ?
   ಪುಟ್ಟಕ್ಕನೂ, ಆಚಕರೆ ಮಾಣಿಯೂ, ಈ ಮಾಣಿಯೂ, ಶರ್ಮಪ್ಪಚ್ಚಿಯೂ 24ರ ಇರುಳಾಣ ರೈಲಿಲ್ಲಿ…
   🙂
   ನಿಂಗೊ?

   • ಹಳೆಮನೆ ಅಣ್ಣನೂ, ತಮ್ಮನೂ ಬೊಳುಂಬು ಮಾವನೊಟ್ಟಿಂಗೆ ಕೊಡೆಯಾಲಂದ ಅದೇ ಬಂಡಿಗೆ ಬಪ್ಪದು ಹೇಳಿ ಟಿಕೇಟು ಬುಕ್ ಮಾಡಿ ಆಯಿದು. ದೊಡ್ಡಭಾವ° ಪುತ್ತೂರಿಂದ ಸೇರಿಯೊಂಗು.

 6. ಗಣೇಶ ಮಾವ° says:

  ಶ್ರಮ ಸಾರ್ಥಕ ಆಗಲಿ…ಶುಭಾಶಯಂಗೊ…ಹರೇರಾಮ…

 7. ಪುಟ್ಟಭಾವ ನೈಜೀರಿಯಾಂದ says:

  ತುಂಬಾ ಕೊಶಿಯ ವಿಷಯ! ಕಾರ್ಯಕ್ರಮ ಲಾಯ್ಕಾಗಲಿ…ಮತ್ತೆ ವರದಿ ಬರ್ಲಿ ಆತೋ 🙂

 8. ಸುಮನ ಭಟ್ ಸಂಕಹಿತ್ಲು. says:

  ತುಂಬಾ ಸಂತೋಷದ ವಿಷಯ…
  ಎಂಗೊ ಇಲ್ಲಿಂದಲೇ ಶ್ರೀ ಗುರುಗಳ ಆಶೀರ್ವಾದಂಗಳ ಬೇಡುತ್ತೆಯೋ.
  ಕಾರ್ಯಕ್ರಮಕ್ಕೆ ಶುಭಾಶಯಂಗೊ.
  ಮತ್ತೆ ವಿವರವಾದ ವರದಿ ಫೊಟೊ ಸಮೆತ ಬಪ್ಪಗ ಖುಶಿಲಿ ಓದುತ್ತೆ.

 9. ಕೃಷ್ಣಭಾವ° says:

  ಗುರುಗಳ ದಯಂದ ಎಲ್ಲೋರಿಂಗೂ ಶುಭವಾಗಲಿ.

 10. ಇಂದು ಪುಸ್ತಕಂಗಳ ಸ್ವಲ್ಪ ಪುಟ ತಿರುಗಿಸಿದೆ. ಲಾಯಕ್ಕಾಯಿದು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *