‘ಭವಿಷ್ಯ – 2012’ : ಅವಲಂಬನದ ಕಾರ್ಯಾಗಾರ

April 29, 2012 ರ 11:30 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವರ್ಶದ ಹಾಂಗೆ ಈ ವರ್ಶವೂ ಬೆಂಗಳೂರಿನ ನಮ್ಮ ಯುವಕರು ಸೇರಿ ಶ್ರೀ ಗುರುಗಳ ಮಾರ್ಗದರ್ಶನಲ್ಲಿ ನಡೆಸ್ತಾ ಇಪ್ಪ ಅವಲಂಬನ ತಂಡ ನಮ್ಮ ಊರಿಲಿ ಹೈಸ್ಕೂಲ್ ಮತ್ತು ಪಿ. ಯು.. ಸಿ. ಮಕ್ಕೊಗೆ ಹಾಂಗೂ ಅವರ ಅಪ್ಪ ಅಮ್ಮಂದಿರಿಂಗೆ ಬದಲಾವ್ತಾ ಇಪ್ಪ ಜಗತ್ತಿಲಿ ಹೊಸ ಹೊಸ ಅವಕಾಶಂಗಳ ಪರಿಚಯಿಸುವ ಬಗ್ಗೆ ‘ ಭವಿಷ್ಯ – 2012 ‘ ಹೇಳ್ತ ಕಾರ್ಯಾಗಾರವ ಇಟ್ಟುಕೊಂಡಿದವು.
ಈ ಭವಿಷ್ಯ ಕಾರ್ಯಗಾರ ನಮ್ಮ ಸಮಾಜಂದ ದೂರವೇ ಉಳುದ ಐ.ಎ.ಎಸ್, ಐ.ಪಿ.ಎಸ್ ಇತ್ಯಾದಿ ಆಡಳಿತಾತ್ಮಕ ಸೇವೆ, ವಾಣಿಜ್ಯ, ಆರ್ಥಿಕ, ವಿಜ್ಞಾನ, ಸಂಶೋಧನಾ ಕ್ಷೇತ್ರಂಗಳಲ್ಲಿ ಇಪ್ಪಂತ ವಿಪುಲ ಅವಾಕಾಶಗಳ ಬಗ್ಗೆ ಆಯಾ ಕ್ಷೇತ್ರಂಗಳಲ್ಲಿ ಸಾಧನೆ ಮಾಡಿದವರಿಂದಲೇ ಮಾಹಿತಿ ಕೊಡುವಂತಹದ್ದು.
ವಿದ್ಯಾರ್ಥಿಗೊ ಯಾವುದೋ ಒತ್ತಡಕ್ಕೋ ಅಧವಾ ತಪ್ಪು ಮಾಹಿತಿಂದಲೋ ಬದುಕಿನ ದಾರಿ ಕಂಡುಕೊಂಬ ಬದುಲು, ಅವರ ಆಸಕ್ತಿಯ ಕ್ಷೇತ್ರಲ್ಲೇ ಜೀವಾನೋಪಾಯವ ಕಂಡುಕೊಂಬಲ್ಲಿ ಈ ಕಾರ್ಯಕ್ರಮ ಒಂದು ಪ್ರಯತ್ನ. ಇದರೊಟ್ಟಿಂಗೆ ಸಂಗೀತ, ಚಿತ್ರಕಲೆ, ಸಾಹಿತ್ಯ, ಕ್ರೀಡೆ ಹಾಂಗೂ ರಂಗಕಲೆ ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲುತ್ತು. ಮನೋವೈಜ್ಞಾನಿಕ ಪರೀಕ್ಷೆಯ ಮಾಡಿ ಮಕ್ಕಳ ಸಾಮರ್ಥ್ಯವ ಅಳೆಯುವ ಹಾಂಗೂ ಆ ಮೂಲಕ ಅವರ ಆಸಕ್ತಿಯ ಕ್ಷೇತ್ರಂಗಳ ಗುರುತಿಸುವಲ್ಲಿಯೂ ಸಹಾಯ ಮಾಡ್ತು.

ನಮ್ಮ ಬೈಲಿನ ವ್ಯಾಪ್ತಿಯ ಊರುಗಳ ಎಂಟು, ಒಂಭತ್ತು, ಹತ್ತನೇ ತರಗತಿ ಮತ್ತು  ಪಿ.ಯು.ಸಿ. ಹವ್ಯಕ ವಿದ್ಯಾರ್ಥಿ ವಿದ್ಯಾಥಿನಿಯಕ್ಕಳ, ಅವರ ಪಾಲಕರ ಈ ಕಾರ್ಯಗಾರಕ್ಕೆ ಬಪ್ಪಲೆ ಹೇಳೆಕ್ಕು ಹೇಳಿ ಬೈಲಿನ ಓದುಗರಲ್ಲಿ ವಿನಂತಿ.

ವಿವರಂಗೊ:
ಎಂತದು?
‘ಭವಿಷ್ಯ’ (ಹತ್ತರ ಮತ್ತು ಪಿ.ಯು.ಸಿ. ನಂತರ ಮುಂದೇನು) ಕಾರ್ಯಾಗಾರ

ಆರಿಂಗೆ?
ಎಂಟು, ಒಂಭತ್ತು, ಹತ್ತನೇ ತರಗತಿ ಮತ್ತು  ಪಿ.ಯು.ಸಿ. ಹವ್ಯಕ ವಿದ್ಯಾರ್ಥಿ ವಿದ್ಯಾಥಿನಿಯಕ್ಕೊಗೆ, ಮತ್ತು ಅವರ ಅಪ್ಪ ಅಮ್ಮಂದಿರಿಂಗೆ

ಯಾವಾಗ?
05 ಮೇ 2012 ಶನಿವಾರ ಮತ್ತು 06 ಮೇ 2012 ಭಾನುವಾರ, 9:30 ರಿಂದ ಸಂಜೆಯವರೆಗೆ

ಎಲ್ಲಿ?
ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವು.

ಎಂತೆಲ್ಲ?
ಭಾರತೀಯ ಸಂಸ್ಕೃತಿ ಆಧಾರಿತ ವ್ಯಕ್ತಿತ್ವ ವಿಕಸನ
ವಿದ್ಯಾರ್ಥಿಗಳ ನೈಜ ಆಸಕ್ತಿ ಅರಿವಿಗೆ ಮನೋವೈಜ್ನಾನಿಕಪರೀಕ್ಷೆ  ಮತ್ತು ಅದರ ವಿಶ್ಲೇಷಣೆ
ಮಹತ್ಸಾಧನೆಗೆ ಬೇಕಾದ ಮಾನಸಿಕ ಮತ್ತು ದೈಹಿಕ ಸಿದ್ಧತೆಗೊ (ಏಕಾಗ್ರತೆ, ಆಸಕ್ತಿ ವೃದ್ದಿ ಇತ್ಯಾದಿ)
ಎಂಜಿನೀರಿಂಗ್ ವಿಭಾಗದ ಅವಕಾಶ ಮತ್ತು ಅದರ ತಯಾರಿ (ಲಾಜಿಕಲ್ ರೀಸನಿಂಗ್ ಇತ್ಯಾದಿ)
ಆಡಳಿತಾತ್ಮಕ ಸೇವೆಗೊ (ಐ.ಪಿ.ಎಸ್, ಐ.. ಏ. ಎಸ್ ಇತ್ಯಾದಿ)
ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ವಿವಿಧ ವಿದ್ಯಾರ್ಥಿವೇತನಗಳು
ಸಂಗೀತ/ಲಲಿತಕಲೆ/ಪತ್ರಿಕೋದ್ಯಮ ಅವಕಾಶಂಗಳ ಗಣಿ

ಸಂಪರ್ಕ:
ಪವನಜ ಮಾವ: 09902633113
ದೊಡ್ಡೇರಿ ಮಧುಕೇಶ: 09844220393
ಶ್ಯಾಮ ಭಟ್ ದರ್ಭೆ-ಮಾರ್ಗ: 09446283049
ಎಡಪ್ಪಾಡಿ ಬಾವ: 09449595208

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಮಂಗ್ಳೂರ ಮಾಣಿ

  ‘ಭವಿಷ್ಯ – 2012’ – ಹೇಳಿಯಪ್ಪಗ, ಇದೆಂತ ಅಭಾವ° 2012ರ ಭೂಕಂಪವ ಹೇಳ್ತನೋಗ್ರೇಶಿದೆ.
  ನೋಡಿರೆ ಅಲ್ಲ.
  ಆದರೆ ಇದು ಮತ್ತೂ ಲಾಯಕಿದ್ದು.
  :)
  ಹೀಂಗಿಪ್ಪ ಕಾರ್ಯಕ್ರಮಂಗೊ ಇನ್ನೂ ಇನ್ನೂ ಆಗಳಿ, ಕಾರ್ಯಕ್ರಮಕ್ಕೆ ಶುಭಕಾಮನೆಗೊ :)

  [Reply]

  VN:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಹರೇ ರಾಮ…

  [Reply]

  VA:F [1.9.22_1171]
  Rating: 0 (from 0 votes)
 3. ಸುವರ್ಣಿನೀ ಕೊಣಲೆ
  Suvarnini Konale

  ತುಂಬಾ ಉಪಕಾರಿ ಕಾರ್ಯಕ್ರಮ, ಆದಷ್ಟು ಹೆಚ್ಚು ಜನ ಹೀಂಗಿದ್ದ ಕಾರ್ಯಕ್ರಮಂಗಲ ಉಪಯೊಗ ಪಡಕ್ಕೊಳ್ಳೆಕು, ಈ ವರ್ಷ ತಪ್ಪಿರೂ ಮುಂದಾಣ ವರ್ಷ ಆದರೂ ಇದರಲ್ಲಿ ಭಾಗವಹಿಸೆಕು.
  ಹತ್ತನೇ ಕ್ಲಾಸು ಅಥವಾ ಪಿಯುಸಿ ಕಳುದ ಕೂಡ್ಲೇ ಎಂತ ಮಾಡುದು ಹೇಳಿ ತಲೆಬೆಶಿ ಅಪ್ಪದು ಸಹಜ. ಸಾಮಾನ್ಯವಾಗಿ ಈಗಾಣ್ ಅಕಾಲಲ್ಲಿ ಯಾವ ಡಿಗ್ರೀ ಮಾಡಿರೆ ಹೆಚ್ಚು ಸಂಬಳದ ಕೆಲಸ ಸಿಕ್ಕುಗು ಹೇಳಿ ಲೆಕ್ಕ ಹಾಕಿ ಕೋರ್ಸಿಂಗೆ ಸೇರುವ ಅಭ್ಯಾಸ ಶುರು ಆಯ್ದು !!
  ಸಂಬಳಕ್ಕೆ ಕೆಲಸ ಮಾಡುದು ತಪ್ಪಲ್ಲ, ಆದರೂ ಹೆಚ್ಚು ಪೈಸೆಯ ಆಶೆಗೆ ತನಗೆ ಆಸಕ್ತಿ ಇಪ್ಪದ್ದ್ ವಿಷಯವ ಅಧ್ಯಯನ ಮಾಡಿ, ಆಸಕ್ತಿ ಇಲ್ಲದ್ದ ಕೆಲಸವ ಮಾಡಿ ಜೀವನಲ್ಲಿ ತೃಪ್ತಿ ಇಲ್ಲದ್ದೆ ಇಪ್ಪದು ನವಗೆ ನಾವೇ ಮಾಡಿಗೊಂಬ ಮೋಸ ಅಲ್ಲದಾ? ! ಅದರ ಬದಲು ಆಸಕ್ತಿ ಇಪ್ಪ ವಿಷಯವ ಕಲ್ತು ಅದರಲ್ಲಿ ನಮ್ಮ ಜೀವನವ ನಾವು ಕಂಡುಗೊಂಬದು ಒಳ್ಲೆದಲ್ಲದಾ?
  ಸಾಮಾನ್ಯವಾಗಿ ಹೆಚ್ಚಿನ ಮಕ್ಕೊಗೆ ತನಗೆ ಆಸಕ್ತಿ ಇಪ್ಪ ವಿಷಯ ಯಾವುದು ಹೇಲಿಯೇ ಗೊಂತಿರ್ತಿಲ್ಲೆ, ಕೇಳಿರೆ ಅವ್ವು ಹೇಳುದು ಒಂದೇ -ಸಾಪ್ಟ್’ವೇರ್, ಬ್ಯುಸಿನೆಸ್ ಮ್ಯಾನೇಜ್’ಮೆಂಟ್ ! ಹಾಂಗೆ ಹೇಳುವ ಹೆಚ್ಚಿನ ವಿದ್ಯಾರ್ಥಿಗೊಕ್ಕೆ ಆ ವಿಷ್ಯಲ್ಲಿ ಆಸಕ್ತಿ ಅಥವಾ ಪರಿಣಿತಿ ಇರ್ತಿಲ್ಲೆ, ಕೇವಲ ವ್ಯಾಮೋಹ ಮಾಂತ್ರ ! ಹೀಮ್ಗಿದ್ದ ಕಾರ್ಯಾಗಾರಲ್ಲಿ ಭಾಗವಹಿಸಿ, ಅಥವಾ ಆಪ್ತಸಲಹೆಗಾರರ ಸಹಾಯಂದ, ತನ್ನ ನಿಜವಾದ ಆಸಕ್ತಿ ಮತ್ತು ಪರಿಣಿತಿಯ ತಿಳ್ಕೊಂಡು ಮುಂದುವರೆವದು ಎಲ್ಲ ರೀತಿಂದಲೂ ಒಳ್ಲೆದು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಜಯಗೌರಿ ಅಕ್ಕ°vreddhiಅನುಶ್ರೀ ಬಂಡಾಡಿಅಕ್ಷರದಣ್ಣವೇಣೂರಣ್ಣವಸಂತರಾಜ್ ಹಳೆಮನೆಗಣೇಶ ಮಾವ°ದೊಡ್ಮನೆ ಭಾವಮಂಗ್ಳೂರ ಮಾಣಿನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಪಟಿಕಲ್ಲಪ್ಪಚ್ಚಿಪೆರ್ಲದಣ್ಣವಿನಯ ಶಂಕರ, ಚೆಕ್ಕೆಮನೆದೀಪಿಕಾಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಮಾಲಕ್ಕ°ಪುಟ್ಟಬಾವ°ದೇವಸ್ಯ ಮಾಣಿಶ್ರೀಅಕ್ಕ°ಜಯಶ್ರೀ ನೀರಮೂಲೆಅನಿತಾ ನರೇಶ್, ಮಂಚಿವಿದ್ವಾನಣ್ಣದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ