Oppanna.com

ನರಸಿಂಹ ಭಟ್ಟರಿಂಗೆ ಸನ್ಮಾನ

ಬರದೋರು :   ಗೋಪಾಲಣ್ಣ    on   18/12/2011    3 ಒಪ್ಪಂಗೊ

ಗೋಪಾಲಣ್ಣ

ಕಾಸರಗೋಡಿನ ಹಿರಿಯ ಸಾಹಿತಿ,ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀ ಅಡ್ಯನಡ್ಕ ನರಸಿಂಹ ಭಟ್ಟರು ಈಗ ಎಂಬತ್ತು ವರ್ಷದ ಹಿರಿಯ ಚೇತನ.ಅವು ಕನ್ನಡ, ಆಂಗ್ಲ ಭಾಷೆಲಿ ಆಳವಾದ ಪಾಂಡಿತ್ಯ ಹೊಂದಿದ್ದವು.ಡಿ.ವಿ.ಜಿ.ಬರೆದ ಮಂಕು ತಿಮ್ಮನ ಕಗ್ಗ,ಮರುಳ ಮುನಿಯನ ಕಗ್ಗ,ಗೋವಿಂದ ಪೈಗಳ ವೈಶಾಖಿ,ಗೊಲ್ಗೊಥಾ-ಹೀಂಗೆ ಹಲವು ಉದ್ಗ್ರಂಥಂಗಳ ಕನ್ನಡಂದ ಆಂಗ್ಲ ಭಾಷೆಗೆ ಅನುವಾದ ಮಾಡಿದ್ದವು.
ಶೈಕ್ಷಣಿಕ ರಂಗಲ್ಲಿ ಶಿಸ್ತಿನ ಮುಖ್ಯೋಪಾಧ್ಯಾಯರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದವು.ಕಾಸರಗೋಡಿಲಿ ಕನ್ನಡವ ಉಳಿಸಿ ಬೆಳೆಸುವಲ್ಲೂ ತುಂಬ ಕೊಡುಗೆ ಕೊಟ್ಟಿದವು.ಹೆಚ್ಚಿಗೆ ಪ್ರಚಾರ ಇಲ್ಲದ್ದೆ ಇವರ ಸಾಧನೆಗೊ ಕರ್ನಾಟಕದ ಬಾಕಿ ಪ್ರದೇಶದ ಜನಂಗೊಕ್ಕೆ ಗೊಂತಾಯಿದೇಇಲ್ಲೆ ಹೇಳಿ ತೋರುತ್ತು.
ಕಾಸರಗೋಡಿನ ಕನ್ನಡಾಭಿಮಾನಿಗೊ ಅಡ್ಯನಡ್ಕ ನರಸಿಂಹ ಭಟ್ಟರಿಂಗೆ ದಿನಾಂಕ ೩೧-೧೨-೨೦೧೧ ಶನಿವಾರ ಕಾಸರಗೋಡಿನ ಲಲಿತ ಕಲಾಸದನಲ್ಲಿ ಸನ್ಮಾನ ಮಾಡುತ್ತವು.ಕೃತಿ-ಸ್ಮೃತಿ ಹೇಳುವ ಅಭಿನಂದನಾ ಗ್ರಂಥದ ಸಮರ್ಪಣೆ ಆವುತ್ತು.ಉದಿಯಪ್ಪಗ ೯-೩೦ ರಿಂದ ರಾತ್ರಿ ತನಕ ಬೇರೆ-ಬೇರೆ ಕಾರ್ಯಕ್ರಮ,ಕವಿ-ಕಾವ್ಯದರ್ಶನ,ಸಾಂಸ್ಕೃತಿಕ ಕಾರ್ಯಕ್ರಮ- ನಡೆತ್ತು.
ಈ ಕಾರ್ಯಕ್ರಮಕ್ಕೆ ಹತ್ತರೆ ಇಪ್ಪವು ಎಲ್ಲಾ ಹೋಗಿ ಭಾಗವಹಿಸೆಕ್ಕು.ಈ ಕಾರ್ಯಕ್ರಮವ ಆಯೋಜಿಸಿದವರೂ ಕೂಡಾ ನಮ್ಮ ಮೆಚ್ಚುಗೆಗೆ ಅರ್ಹರು.

3 thoughts on “ನರಸಿಂಹ ಭಟ್ಟರಿಂಗೆ ಸನ್ಮಾನ

  1. ಇಂದು ಪುನಃ ಈ ಲೇಖನ ಕಂಡತ್ತು. ಅವರ ಕಾರ್ಯಕ್ರಮ ಆ ದಿನ ಭಾರೀ ಲಾಯಕ ಆಗಿತ್ತು.ಜೀವನದಿ ಹೇಳಿ ಅವರ ಅಭಿನಂದನಾ ಗ್ರಂಥದ ಶಿರೋನಾಮೆ, ಕಾಸರಗೋಡಿನ ಬಗ್ಗೆ ಆಸಕ್ತಿ ಇಪ್ಪೋರಿಂಗೆ ಓದಲೆ ಅಕ್ಕು.

  2. ಗೋಪಾಲಣ್ಣ,
    ಇವರ ಪರಿಚಯ ಕಮ್ಮಿಯೇ ಹೇಳಿ ಕಾಣುತ್ತು. ಮಾಹಿತಿಗೆ ಧನ್ಯವಾದ.ಅರ್ಹರಿ೦ಗೆ ಸಮ್ಮಾನ ಮಾಡುತ್ತಾ ಇಪ್ಪದು ಒಳ್ಳೆ ಕೆಲಸ.

  3. ಹೆಚ್ಚಿಗೆ ಪ್ರಚಾರ ಇಲ್ಲದ್ದೆ ಸಾಧಿಸಿದ ಶ್ರೀ ಅಡ್ಯನಡ್ಕ ನರಸಿಂಹ ಭಟ್ಟರಿಂಗೆ ಹೃತ್ಪೂರ್ವಕ ಅಭಿನಂದನೆಗೋ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×