Oppanna.com

15-09-2013 ಆದಿತ್ಯವಾರ ಒಪ್ಪಣ್ಣ ಸಮಾವೇಶ – ಮಾಣಿ ಮಠ ಪೆರಾಜೆ

ಬರದೋರು :   ಶುದ್ದಿಕ್ಕಾರ°    on   05/09/2013    5 ಒಪ್ಪಂಗೊ

ಒಪ್ಪಣ್ಣನ ಬೈಲಿನ ಮಿಲನ ಶ್ರೀಗುರುಗಳ ದಿವ್ಯ ಉಪಸ್ಥಿತಿಲಿ 14.9.2013 ಶನಿವಾರ ನೆಡವದು ನಿಂಗೊಗೆ ಅರಡಿಗನ್ನೆ! ಅದರ ಮರದಿನ ನಮ್ಮ ಎಲ್ಲಾ ಒಪ್ಪಣ್ಣಂದ್ರ ಸಮಾವೇಶ ಮಾಣಿ ಮಠಲ್ಲಿ ನೆಡವಲಿದ್ದು. ಎಲ್ಲೋರೂ ಈ ಸಂದರ್ಭಲ್ಲಿ ಇದ್ದುಗೊಂಡು ಶ್ರೀಗುರುಭೇಟಿಯ ಅವಕಾಶ ಪಡಕ್ಕೊಂಬಲಕ್ಕು ಹೇಳಿ ಮಹಾಮಂಡಲಂದ ಹೇಳಿಕೆ ಕೊಟ್ಟಿದವು.
~
ಬೈಲಿನ ಪರವಾಗಿ

~
 
15-09-2013 ಆದಿತ್ಯವಾರ ಒಪ್ಪಣ್ಣ ಸಮಾವೇಶ – ಮಾಣಿ ಮಠ ಪೆರಾಜೆ
ಪ್ರೀತಿಯ ಒಪ್ಪಣ್ಣಂಗಳೇ, ಶುಭಾಶಯಂಗ.
ನಾಡ್ದು 15 ಕ್ಕೆ ನಮ್ಮ ಶ್ರೀಗುರುಗಳ ಮಾರ್ಗದರ್ಶನಲ್ಲಿ ನಿಂಗ ಎಲ್ಲರ ಇರುವಿಕೆಯೊಟ್ಟಿಂಗೆ ಒಪ್ಪಣ್ಣ ಸಮಾವೇಶ ನಡವ ಸಂಗತಿ ಈಗಾಗಲೇ ಗೊಂತಾದಿಕ್ಕು. ಈಗಾಗಲೇ ನಡೆದ ಒಪ್ಪಕ್ಕ ಹಾಗೂ ಅಬ್ಬೆಕ್ಕಳ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡದ ಸಂಗತಿ ನಿಂಗೊಗೆ ಗೊಂತಾದಿಕ್ಕು. ಇದೀಗ 15 ರ ಕಾರ್ಯಕ್ರಮದ ಯಶಸ್ಸು ನಿಂಗಳ ಕೈಲಿದ್ದು. ನಾಡ್ದಿನ ಕಾರ್ಯಕ್ರಮಲ್ಲಿ ನಮ್ಮ ಶ್ರೀಗುರುಗ ಎರಡು ಅವಧಿ ( ಉದಿಯಪ್ಪಗಳುದೆ, ಮಧ್ಯಾಹ್ನ ಮೇಲುದೆ) ನಿಂಗಳೊಟ್ಟಿಂಗಿದ್ದು ನಿಂಗಳ ಹಲವು ಸಮಸ್ಯೆ ಪ್ರಶ್ನೆಗೊಕ್ಕೆ ಪರಿಹಾರ ಕೊಡುವ ಸಾಧ್ಯತೆ ಇದ್ದು. ಸಾಧ್ಯ ಇದ್ದಷ್ಟು ಮೊದಲೇ ನಿಂಗ ಇ-ಮಾಧ್ಯಮದ ಮೂಲಕ ಪ್ರಶ್ನೆಗಳ ಕಳಿಸಿದರೆ ( 13-09-2013 ರ ಮೊದಲು) ವ್ಯವಸ್ಥೆ ಮಾಡಲೆ ತುಂಬ ಸಹಾಯ ಆವುತ್ತು. ಕಳುಸುತ್ತಿರನ್ನೆ?
ನಿಂಗ ಈ ವಿಷಯಂಗಳ ಮೇಲೆ ಅಥವಾ ನಿಂಗ ಬಯಸುವ ಇತರ ವಿಷಯಂಗಳ ಮೇಲೆ ಪ್ರಶ್ನೆ ಮಾಡುಲಕ್ಕು.

  • ಶ್ರೀಮಠದ ಮೇಲೆ
  • ಶಿಕ್ಷಣದ ಮೇಲೆ ವಟುಶಿಕ್ಷಣ/ ಬ್ರಾಹ್ಮಣ ಸಂಸ್ಕಾರದ ಪ್ರಭಾವ
  • ಸಂಧ್ಯಾವಂದನೆ – ವೇದಪಾಠ
  • ಗಾಯತ್ರೀ ಉಪಾಸನೆ
  • ಕೃಷಿ-ಸ್ವೋದ್ಯೋಗ ಮತ್ತಿತರ
  • ಹಿಂದೂ ಧರ್ಮದ ಪ್ರಾಚೀನತೆ
  • ಶಂಕರಾಚಾರ್ಯರ ಪರಂಪರೆ
  • ಹವ್ಯಕ ಇತಿಹಾಸ -ವಿಶಿಷ್ಟತೆ
  • ಜಾತಿ-ಜಾತ್ಯತೀತತೆ
  • ಸಾಹಿತ್ಯ- ಸಂಸ್ಕೃತಿ-ಕಲೆ
  • ಆಹಾರ-ವಿಹಾರ, ಉಡುಗೆ-ತೊಡುಗೆ
  • ಬಾಹ್ಯಾಕರ್ಷಣೆ
  • ಕೌಟುಂಬಿಕ ಜೀವನ
  • ಹೆತ್ತವರು, ಹಿರಿಯರೊಂದಿಗೆ ಸಾಮರಸ್ಯದ ವಿಚಾರ
  • ಕಲಿಕೆ-ನೆನಪು-ಏಕಾಗ್ರತೆ ಮತ್ತು ಜೀವನಕ್ರಮ
  • ಬೆಳಗಿನ ದಿನಚರಿ
  • ವಿದೇಶೀ ವ್ಯಾಮೋಹ
  • ಕೂಸುಗಳೊಟ್ಟಿಂಗೆ ಸಂವಹನ- ಗೆಳೆತನ ಇತ್ಯಾದಿ
  • ಸಾಮಾಜಿಕ-ಧಾರ್ಮಿಕ -ಕೌಟುಂಬಿಕ- ಔದ್ಯೋಗಿಕ ಬದುಕುಗಳ ಸಮತೋಲನ
  • ಸಂಬಂಧ ಸುಧಾರಣೆ- ಸುಧರಿಕೆ- ಜಂಬ್ರಂಗಳಲ್ಲಿ ಪಾಲ್ಗೊಳ್ಳುವಿಕೆ
  • ಶಿಕ್ಷಣ-ಕಲೆ ಸಾಂಸ್ಕೃತಿಕ ಮತ್ತಿತರ ಕ್ಷೇತ್ರಂಗಳಲ್ಲಿ ನಮ್ಮ ನಾಯಕತ್ವದ ಕುರಿತು.
  • ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ

 
ನಿಂಗೊ ಪ್ರಶ್ನೆಗಳ ಕಳ್ಸೆಕ್ಕಾದ ಮಿಂಚಂಚೆಃ info@oppanna.org
ನಿಂಗ ಪ್ರಶ್ನೆಗಳನ್ನೂ ಕಳುಸೆಕ್ಕು , ಬಪ್ಪಲೂ ಬೇಕು.
ಇಲ್ಲಿ ಎರಡು ವಿಭಾಗಂಗ ಇದ್ದು-

  • ಕಿರಿಯರ ವಿಭಾಗ( 6 ರಿಂದ 9ನೇ ಕ್ಲಾಸು)
  • ಹಿರಿಯರ ವಿಭಾಗ( 10ನೇ ಕ್ಲಾಸಿಂದ ಮೇಲೆ)

 
ಈ ಶಿಬಿರದ ಸಮಯ ಉದಿಯಪ್ಪಗ 8.30 ರಿಂದ ಹೊತ್ತೋಪಗ 5.00 ಗಂಟೆವರೆಗೆ.
 
ನಿಂಗಳೂ ಬನ್ನಿ, ಬಪ್ಪಗ ಒಪ್ಪಣ್ಣಂಗಳನ್ನೂ ಕರ್‍ಕೊಂಡು ಬನ್ನಿ.
ನೆನಪಿಡಿಃ ಇದು ನಮ್ಮ ಪೂಜ್ಯ ಗುರುಗಳೊಟ್ಟಿಂಗೆ ನಿಂಗೊಗೆ ಸಿಕ್ಕುವ ಅಪೂರ್ವ ಅವಕಾಶ. ಮತ್ತೆ ಛೇ. ಛೇ ಹೇಳುವಾಂಗೆ ಮಾಡಡಿ.
~
ನಿಂಗಳ ವಿಶ್ವ ಮಾವನುದೆ ಮಹಾಮಂಡಲದ ಪದಾಧಿಕಾರಿಗಳುದೆ
ಶ್ರೀರಾಮಚಂದ್ರಾಪುರ ಮಠ
 

5 thoughts on “15-09-2013 ಆದಿತ್ಯವಾರ ಒಪ್ಪಣ್ಣ ಸಮಾವೇಶ – ಮಾಣಿ ಮಠ ಪೆರಾಜೆ

  1. ನಾವಿದ್ದು ಇಡೀ ದಿನ…ಎಲ್ಲರನ್ನೂ ಕರಕ್ಕೊಂಡು ಬಪ್ಪಲೆ ಶತಪ್ರಯತ್ನ ಮಾಡ್ತೆ.

  2. ಭಾರೀ ಉತ್ತಮ ಕಾರ್ಯ.

    1. ॥ ಶ್ರೀ ಗುರುಭ್ಯೋ ನಮಃ ॥
      ಹರೇ ರಾಮ;ಬಹಳ ಸ೦ತೋಷದ ವಿಚಾರ. ಸಮಾವೇಶಕ್ಕೆ ಶುಭಾಶಯಂಗೊ.ಎನಗೆ ಬಪ್ಪಲಾವುತ್ತಿಲ್ಲೆನ್ನೇ ಹೇದು ಬೇಜಾರಾವುತ್ತು. ಕಾರ್ಯಕ್ರಮದ ಬಗ್ಗೆ ವಿವರವಾಗಿ ಮತ್ತೆ ಪ್ರಕಟಿಸಿ ಹೇಳಿ ಇತ್ಲಾಗಿಂದ ಕೋರಿಕೆ.ಎಲ್ಲ ಕಾರ್ಯಕ್ರಮವುದೆ ಒಳ್ಳೆ ರೀತಿಲಿ ನಡೆಯಲಿ ಹೇದು ಹಾರೈಸುತ್ತೆ.ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×