ಚೈತನ್ಯಶಂಕರನ ‘ಪಾರಮ್ಯ’ ಬಿಡುಗಡೆ…

August 20, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನೋರಿಂಗೆ ಒಂದು ಕೊಶೀ ಶುದ್ದಿ…

ನಮ್ಮ ಬೈಲಿನ ಹೆರಿಯೋರಾದ ಚೆಂಬರ್ಪು ಸತ್ಯಮಾವನ ಅರಡಿಗಲ್ಲದೋ?
ನಮ್ಮ ಊರಿನ ಚೆಂಬರ್ಪಿಂದ, ಹೆರಿಯೋರ ಕಾಲಲ್ಲಿಯೇ ಹೊಸನಗರದ ಹೊಡೆಂಗೆ ಹೋಗಿ, ಪ್ರಸ್ತುತ ಬೆಂಗುಳೂರಿಲಿ ದೊಡ್ಡ ಉದ್ಯೋಗಲ್ಲಿಪ್ಪ ನಮ್ಮೆಲ್ಲರ ಸೀಯಚ್ಚೆಸ್ ಮಾವ!
ಶ್ರೀ ಗುರುಗಳ, ಶ್ರೀಮಠದ ನಿಷ್ಠೆಯ  ಸರಳ ಸಜ್ಜನ. ಚೆಂದದ ನೆಗೆಯೇ ಅವರ ಗುರ್ತ! :-)

ಅವು, ನಮ್ಮ ಬೈಲಿಂಗೆ ವಿಶೇಷ ‘ಹೇಳಿಕೆ ಕಾಗತ’ ಕಳುಸಿ ಕೊಟ್ಟಿದವು.
ಎಂತರದ್ದು?

ಅವರ ಮಗ ಶ್ರೀ ಚೈತನ್ಯ ಶಂಕರ ಸಣ್ಣ ಇಪ್ಪಾಗಳೇ ಸಂಗೀತಲ್ಲಿ ಆಸಗ್ತಿ ಇದ್ದಿದ್ದ ವೆಗ್ತಿ –  ಅಪ್ಪಮ್ಮನ ಹಾಂಗೇ.
ಪಂ. ಪರಮೇಶ್ವರ ಹೆಗಡೆಯ ಶಿಷ್ಯ ಆಗಿ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿಗೊಂಡವು.
ಇಂಜಿನಿಯರು ಅಪ್ಪದರ ಒಟ್ಟಿಂಗೇ, ಸಂಗೀತಾಭ್ಯಾಸವೂ ಯಶಸ್ವಿ ಆಗಿ ನೆಡದ್ದು; ಇಂದಿನ ಒರೆಂಗೂ.

ಇಂದು, ಅವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿ; ಅದರೊಟ್ಟಿಂಗೇ, ಗಾಯನದ ಸೀಡಿ “ಪಾರಮ್ಯ”ದ ಬಿಡುಗಡೆ ಕಾರ್ಯಕ್ರಮ.

ಕಾರ್ಯಕ್ರಮ ವಿವರ:
ಜಾಗೆ: ಅಖಿಲ ಹವ್ಯಕ ಮಹಾಸಭಾ ಆವರಣ, ಮಲ್ಲೇಶ್ವರಂ, ಬೆಂಗಳೂರು.
ಹೊತ್ತು: ಇಂದು, 20-ಆಗಷ್ಟ್-2011 ಹೊತ್ತೋಪಗ; ಆರೂವರೆಂದ ಎಂಟೂವರೆ ಒರೆಂಗೆ.

ಬೆಂಗುಳೂರಿಲೇ ಇಪ್ಪ ಸಂಗೀತಾಸಕ್ತರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಕೆಲಿ ಸೇರಿ, ಯಶಸ್ವಿಗೊಳುಸೇಕು – ಹೇಳಿ ಸೀಯಚ್ಚೆಸ್ ಮಾವ ಹೇಳಿಕೆ ಹೇಳಿದ್ದವು.

ನಮ್ಮ ಮಾಣಿಯ ಈ ಸಂಗೀತ ಸಾಧನೆಯ ಕಂಡು ಬೈಲಿನೋರು ಹೆಮ್ಮೆ ಪಡ್ತವು.
ಸಂಗೀತ ಲೋಕಲ್ಲಿ ಇನ್ನೂದೇ ಪಾರಮ್ಯ ಸಾಧಿಸಲಿ  – ಹೇಳ್ತದು ನಮ್ಮ ಹಾರೈಕೆ.

|| ಹರೇರಾಮ ||

ಹೇಳಿಕೆಕಾಗತ ಇಲ್ಲಿದ್ದು:

ಚೈತನ್ಯಶಂಕರನ ‘ಪಾರಮ್ಯ’ ಬಿಡುಗಡೆ..., 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕಾರ್ಯಕ್ರಮಕ್ಕೆ ಶುಭ ಹಾರೈಕೆಗೊ.
  ಸಂಗೀತ ಕ್ಷೇತ್ರಲ್ಲಿ ಚೈತನ್ಯನ ಹೆಸರು ಉಜ್ವಲವಾಗಿ ಬೆಳಗಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಶುಭಾಶಯಗಳು.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ಕಾರ್ಯಕ್ರಮಕ್ಕೆ ಶುಭ ಕಾಮನೆಗೊ. ಒಳ್ಳೆದಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 4. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಚೈತನ್ಯಂಗೆ ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 5. ಸಿಂಧೂ

  ಎನ್ನ ತಮ್ಮ (cousin) ನ ಸಂಗೀತಕ್ಕೆ ಶುಭ ಹಾರೈಸಿದೋರಿಂಗೆ ಧನ್ಯವಾದ. ಕಾರ್ಯಕ್ರಮ ಲಾಯೆಕಾತು. ಎರಡು ಹಾಡುಗಳ ಹಿಂದೂಸ್ಥಾನಿ ಶೈಲಿಲಿ ಗಾಯನವೂ ಇತ್ತು. ಬಂದೋರೆಲ್ಲೋರಿಂಗೆ ಮೂಡೆ, ಕಾಯಿಹಾಲು, ವಡೆ, ಹಲ್ವದ ಉಪಹಾರ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಸಂಪಾದಕ°ಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಕೆದೂರು ಡಾಕ್ಟ್ರುಬಾವ°ಚೆನ್ನೈ ಬಾವ°ವಸಂತರಾಜ್ ಹಳೆಮನೆಗಣೇಶ ಮಾವ°ಪುಟ್ಟಬಾವ°ಶೇಡಿಗುಮ್ಮೆ ಪುಳ್ಳಿಕೇಜಿಮಾವ°ಬಂಡಾಡಿ ಅಜ್ಜಿಶುದ್ದಿಕ್ಕಾರ°ಜಯಶ್ರೀ ನೀರಮೂಲೆವಾಣಿ ಚಿಕ್ಕಮ್ಮಪೆಂಗಣ್ಣ°ರಾಜಣ್ಣಕೊಳಚ್ಚಿಪ್ಪು ಬಾವವೇಣೂರಣ್ಣವಿದ್ವಾನಣ್ಣಕಜೆವಸಂತ°ಕಳಾಯಿ ಗೀತತ್ತೆವಿಜಯತ್ತೆದೊಡ್ಡಭಾವಮಾಲಕ್ಕ°ಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ