ತೆಂಕಲಾಗಿಂದ ಹೇಳಿಕೆ ಬಂತು

November 5, 2012 ರ 2:59 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾರ್ಯಕ್ರಮ ಮನ್ನೆಯೇ ಸುರುವಾಯಿದು.

ಹೇಳಿಕೆ ಕಾಕತ ಕೈಗೆ ಸಿಕ್ಕುವಗ ಮಾಂತ್ರ ರಜಾ ತಡವಾತು.

ಆದರೂ ಈ ಕಾರ್ಯಕ್ರಮ ಇನ್ನೂ ಒಂದುವಾರ-ಬಪ್ಪ ಆಯಿತ್ಯವಾರದ ಒರೇಗೆ- ಇಪ್ಪಕಾರಣ ಬೈಲಿಂಗೆ ಹೇಳಿಕೆಯ ಈಗ ಹೇಳಿರೂ ಸಾಲದ್ದೆ ಇಲ್ಲೆ ಹೇಳಿ ತೋರಿತ್ತು.

* * * *

ತೆಂಕಲಾಗಿ ಕಣ್ಣಾನೂರಿಂದ ಸುಮಾರು ಎಂಟತ್ತು ಮೈಲಿ ಮೂಡಕ್ಕೆ ‘ಕಣ್ಣಾಡಿಪರಂಬ’ ಹೇಳ್ತ ಜಾಗೆ.

ಅಲ್ಲಿ ಶ್ರೀ ಧರ್ಮಶಾಸ್ತಾ  ಕ್ಷೇತ್ರಂ ಹೇಳ್ತ ಒಂದು ಶಿವ ದೇವಸ್ಠಾನ. ಅತ್ಯಂತ ಅಪರೂಪದ, ಮಹತ್ವದ ‘ಅತಿರುದ್ರ ಮಹಾಯಜ್ಞ’ ಕಾರ್ಯಕ್ರಮ ಮನ್ನೆ 31ಕ್ಕೆ ಅಲ್ಲಿ ಸುರುವಾಯಿದು. ನಾಳ್ದು 11 ರ ವರೆಗೆ ಇರ್ತು. ವಿವರಂಗಳ ನಿಂಗೊಗೆ ಇಲ್ಲಿ ನೇಲುಸಿದ ಹೇಳಿಕೆ ಕಾಕತಲ್ಲಿ ಕಾಂಬಲಕ್ಕು.

ಅಷ್ಟು ದೂರ ಅಪ್ಪ ಈ ಕಾರ್ಯಕ್ರಮ ನವಗೆ ಬೈಲಿನೋರಿಂಗೆ ‘ಹತ್ರಾಣದ್ದು’ ಹೇಳಿ ತೋರ್ಲೆ ಎರಡು ಕಾರಣ ಇದ್ದು.
( (ದೂರ ಹೇಳಿರೆ ಅಂಥಾ ದೂರ ಏನೂ ಅಲ್ಲ; ಕಾಸ್ರೋಡಿಂದ ನೂರು ಮೈಲಿ ಒಳ ನಿಂಗು. ಅಷ್ಟೇ ಉಳ್ಳೊ))

ಒಂದು- 7ನೇ ತಾರೀಕಿಂಗೆ ಅಲ್ಲಿ ಅಪ್ಪ ‘ ಗೋ ಸಮ್ಮೇಳನ’ ಕ್ಕೆ ನಮ್ಮ ಗುರುಗೊ ದಿವ್ಯ ಸಾನ್ನಿಧ್ಯ ಕೊಡ್ತವು!

ಎರಡು- ನಮ್ಮ ಗುರುಗಳ ಸಾನ್ನಿಧ್ಯ ಅಲ್ಲಿ ಸಿಕ್ಕುವಾಂಗೆ ಅಪ್ಪಲೆ ಏರ್ಪಾಡು ಮಾಡಿದವು ಬೈಲಿನ ‘ದೊಡ್ಡಜ್ಜ°’..!!

ಅಲ್ಯಾಣ ಕಮಿಟಿಯವರತ್ರೆ ಅಲ್ಲಿಗೆ ಗುರುಗಳ ಬರುಸುವ ಜೆಬಾದಾರಿಕೆಯ ತೆಕ್ಕೊಂಡು; ಅದಕ್ಕನುಸರಿಸಿ ಗಿರಿನಗರಲ್ಲಿ ಬೈಲಿನ ಭೇಟಿ ಸಂದರ್ಭಲ್ಲಿ  ಮಠದವರತ್ರೆ, ಪರಿವಾರದವರತ್ರೆ ಬೇಕುಬೇಕಾದಾಂಗೆ ಮಾತಾಡಿ ಏರ್ಪಾಡು ಮಾಡಿ “ಇದಾ ಅಳಿಯೋ, ನವಂಬ್ರ 7ಕ್ಕೆ ನವಗೆ ಕಣ್ಣಾಡಿಪ್ಪರಂಬಿಂಗೆ ಹೋಪಲಿದ್ದು; ನೆಂಪಿರಳಿ” ಹೇಳಿತ್ತಿದ್ದವು ಅಂಬಗಳೇ!
ಯಾಗಲ್ಲಿ ಭಾಗವಹಿಸೆಕ್ಕು, ಗುರುಗಳ ಸೇವೆ ಮಾಡೆಕ್ಕು ಹೇಳಿ ಎಲ್ಲ ಅವರ ಮನಸ್ಸಿನಾಳದ ಆಶೆ ಇದ್ದರೂ ದೊಡ್ಡಜ್ಜನ ಆಶೆ ಕನಸಾಗಿಯೇ ಒಳುದತ್ತು. :-(

ಬೈಲಿನ ತೆಂಕ್ಲಾಗಿಯಾಣ ಈ ಕಾರ್ಯಕ್ರಮಕ್ಕೆ ಅನುಕೂಲ ಅಪ್ಪೋರು ಆ ದಿನಕ್ಕಾದರೂ ಒಂದಾರಿ ಅಲ್ಲಿಗೆ ಹೋಗಿ ಬಪ್ಪೊ°, ಆಗದೋ?

* * * *

ಮಲಯಾಳಲ್ಲಿ ಇಪ್ಪ ಆ ಇನ್ನೊಂದು ಕಾಕತ – ಶ್ರೀಗುರುಗಳ ವಯನಾಡು ಭೇಟಿ ಕಾರ್ಯಕ್ರಮದ ಹೇಳಿಕೆ. ವಯನಾಡು ಜಿಲ್ಲೆಯ ‘ಪನಮರ’ ಹೇಳ್ತಲ್ಲಿ ಮೊಕ್ಕಾಂ ಇದ್ದು ಅಲ್ಯಾಣ ಸಮಾಜಬಂಧುಗಳ ಅನುಗ್ರಹಿಸುತ್ತವು ಗುರುಗೊ.  ‘ದೊಡ್ಡಜ್ಜ’ನ ತಮ್ಮ ರತ್ನಾಕರ ಭಟ್ಟರೇ ಈ ಕಾರ್ಯಕ್ರಮದ ಸಂಯೋಜಕರು!

ಅವರೊಟ್ಟಿಂಗೆ ಕೆಲವು ಜೆವ್ವನಿಗರು ಅಲ್ಯಾಣ ಜಿಲ್ಲಾ ಕಲೆಕ್ಟ್ರ° ಆಗಿಪ್ಪ ನಮ್ಮ ಎಡನ್ನೀರು ಗೋಪಾಲಣ್ಣನನ್ನೂ ಸೇರುಸಿಯೊಂಡು ಈ ಕಾರ್ಯಕ್ರಮದ ಏರ್ಪಾಡು ಮಾಡಿದ್ದವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ ಸುಭಗ ಬಾವ. ಬೈಲಿಂಗೆ ಅಲ್ಯಾಣ ಸಂಬಂಧವ ಪರಿಚಯಿಸಿದ್ದು ಒಳ್ಳೇದಾತು. ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ತೆಂಕ್ಲಾಗಿಯಾಣ ‘ನಮ್ಮ’ ಕಾರ್ಯಕ್ರಮ – ದೊಡ್ಡಜ್ಜ ನಿಘಂಟು ಮಾಡಿದ ಕಾರ್ಯಕ್ರಮಕ್ಕೆ ಅವರ ದೊಡ್ಡಳಿಯನೇ ಹೇಳಿಕೆ ಕಳ್ಸಿದ್ದು ವಿಶೇಷ ಆತು.

  [Reply]

  VN:F [1.9.22_1171]
  Rating: +1 (from 1 vote)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಅಲ್ಲಿ ಹವ್ಯಕ ಬ್ರಾಹ್ಮಣ ಮಹಾಸಭ! ಓದಿ ಆಶ್ಚರ್ಯ ಆತು.ತೆಂಕಲಾಗಿ ಹೋದವರು ಮಲೆಯಾಳಿಗಳೇ ಆಗಿ,ಹವ್ಯಕ ಕ್ರಮಂಗಳ ಮರೆತ್ತವು ಹೇಳಿ ಆನು ಗ್ರೇಶಿದ್ದು.
  ಸಂತೋಷ.ನಾವು ಹೊಸನಗರಕ್ಕೆ,ಕೊಲ್ಲೂರಿಂಗೆ ಹೋವುತ್ತ ಹಾಂಗೆ ಕಣ್ಣೂರು ಭಾಗಕ್ಕೆ ಹೋವುತ್ತಿಲ್ಲೆ.ನವಗೆ ಭಾಷಾವ್ಯತ್ಯಾಸ,ಸಂವಹನದ ಕೊರತೆ ಎಲ್ಲಾ ಕಾರಣ.ನಮ್ಮ ನೆಂಟ್ರು ಆ ಹೊಡೆ ಇಲ್ಲದ್ದರೆ ಹೋಪ ಅವಕಾಶವೂ ಕಮ್ಮಿ.
  ಯಾಗ ಚಂದವಾಗಿ ನಡೆಯಲಿ.

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ ಪೆರ್ವ

  ಯಾಗದ ವಿಷಯ ಎನಗೆ ೩-೪ ದಿನ ಮದಲೇ ಗೊ೦ತಾಯಿದು ಸುಭಗ ಬಾವಾ.. ಇಲ್ಲಿ೦ದಲೇ ಹೊಡಾಡ್ಯೊ೦ಬದು ಅಷ್ಟೆ..

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  raghumuliya

  ಶುಭವಾಗಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವವಾಣಿ ಚಿಕ್ಕಮ್ಮಚುಬ್ಬಣ್ಣಅನು ಉಡುಪುಮೂಲೆಶರ್ಮಪ್ಪಚ್ಚಿಶಾಂತತ್ತೆಪಟಿಕಲ್ಲಪ್ಪಚ್ಚಿಗಣೇಶ ಮಾವ°ಶೇಡಿಗುಮ್ಮೆ ಪುಳ್ಳಿಒಪ್ಪಕ್ಕಬಂಡಾಡಿ ಅಜ್ಜಿಶ್ಯಾಮಣ್ಣಶಾ...ರೀಚೂರಿಬೈಲು ದೀಪಕ್ಕನೆಗೆಗಾರ°ಅಕ್ಷರದಣ್ಣಶೀಲಾಲಕ್ಷ್ಮೀ ಕಾಸರಗೋಡುಅಕ್ಷರ°ವಿಜಯತ್ತೆಕೆದೂರು ಡಾಕ್ಟ್ರುಬಾವ°ಶ್ರೀಅಕ್ಕ°ಪೆರ್ಲದಣ್ಣಕಳಾಯಿ ಗೀತತ್ತೆಪುತ್ತೂರಿನ ಪುಟ್ಟಕ್ಕಸಂಪಾದಕ°ಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ