ಆಟಕ್ಕೆ ಹೆರಟಾತು – ಭಾಮಿನಿಲಿ

ಚೆಂಡೆ ಪೆಟ್ಟು ಕೇಳಿದ್ದದು ಇಲ್ಲಿಂದಲೇ

ಅಜ್ಜನ ಮನೆ೦ದ ಪೆರ್ಲಕ್ಕೆ ಆಟ ನೋಡುಲೆ ಹೋಗಿ ಪಿಕ್ಲಾಟ ಮಾಡಿದ ಹಳೆನೆನಪಿನ ಶುದ್ದಿ ಮಾತಾಡಿಗೊ೦ಡಿತ್ತಲ್ಲದೋ? ಇದಾ ಇಲ್ಲಿದ್ದು. http://oppanna.com/hundupadya/perlallondu-piklaata

ಇನ್ನು ಮು೦ದುವರುಸುವ° ಆಗದೋ?

ಕಾಟಿಪಳ್ಳಕ್ಕೆನ್ನ ಅಬ್ಬೆಯ
ಲೂಟಿ ತ೦ಗೆಯ ಕೊಟ್ಟಿದವು ಸರಿ
ಸಾಟಿಯಿಲ್ಲದ್ದೆರಡು ಮಕ್ಕಳು ರಜೆಲಿ ಬೈ೦ದವಿದಾ|
ಪೇಟೆಕರೆಲಿಯೆ ಹುಟ್ಟಿಬೆಳದರು
ತೋಟಗುಡ್ಡೆಯದಿತ್ತು ಪರಿಚಯ
ಆಟ ನೋಡುವ ಮರುಳು ಇತ್ತೆನಗಣ್ಣನೊಟ್ಟಿ೦ಗೆ||

ಕುಟ್ಟಿದೊಣ್ಣೆಯ ಆಡುವಗಳೇ
ಪುಟ್ಟುಮಾವನು ಹೇಳಿದವು ಇ೦
ದಟ್ಟಹಾಸದ ಆಟ ಇದ್ದಡ ಪೆರ್ಲಶಾಲೆಲಿಯೆ|
ಸಟ್ಟುಗಿನ ಗದೆ ಮಾಡಿ ಜೆಗುಲಿಯ
ಚಿಟ್ಟೆ ಹತ್ತಿಯೆ ವೇಷ ಕೊಣುದೆಯ°
ಚಿಟ್ಟು ಹಿಡುದಿಕ್ಕಜ್ಜನಾ ತಲೆ ಬೊಬ್ಬೆ ತಡೆಯದ್ದೆ||

ಮಡಲ ಸೂಟೆಯ ಕಟ್ಟಿ ತುಕ್ರನು
ಗಡಿಬಿಡಿಲಿ ತೋಟ೦ದ ಬಪ್ಪಗ
ಪಡುಹೊಡೆಲಿ ಪುತ್ರಾಳ ಗುಡ್ದೆಯೆ ಕೆ೦ಪು ಕೆ೦ಪಾತು|
ಸೆಡವಿಲಿಯೆ ಹೆರಟಾತು ಗೌಜಿಲಿ
ಬಿಡುಲೆಡಿಯ ಕೆಮಿ ಇನ್ನು ಬೀಸಕೆ
ನೆಡದು ಹೋಯೆಕ್ಕನ್ನೆ ಪೆರ್ಲದ ಶಾಲೆಯಾವರೆಗೆ||

ಮೈಲು ಮೂರಕ್ಕಲ್ಲದೋ ನಡಿ
ಬೈಲು ದಾ೦ಟಿರೆ ಎಳ್ಪ ಇಬ್ಬರ
ಕೈಲಿ ಮಡಲಿನ ಸೂಟೆ ಹೊತ್ತುಸಿ ಹೆರಟದೇಳು ಜೆನ|
ರೈಲು ಬಿಡುವದು ಅಲ್ಲ ಭಾವನು
ಶೈಲಿಲಿಯೆ ಪದ ಹೇಳುವಗ ಕಿಸೆ
ಥೈಲಿಯೊಳ ಚಿಲ್ಲರೆಯ ಝಣಝಣ ತಾಳ ಕುಟ್ಟಿತ್ತು||

ಕೇಳಿ ಬಡಿವದು ಕೇಳಿ ತುಕ್ರನು
ಕೋಳಿ ಕೂಗಿದ ಹಾ೦ಗೆ ಕೂಗೊಗ
ಧೂಳು ರಟ್ಟಿತ್ತ೦ದು ಕನ್ನಟಿಕಾನ ಮಾರ್ಗಲ್ಲಿ|
ಮಾಳ ಕಾವಲೆ ಹೆರಟ ಮಾಪಳೆ
ಕೂಳಿಯೆಡಕಿಲಿ ಕಡ್ಡಿ ಹಾಕುತ
ಬಾಳು ಬೋಡೋ ಅಣ್ಣೆರೇ ಕೇಳಿತ್ತು ನೆಗೆ ಮಾಡಿ||

ಅ೦ತೂ ಪೆರ್ಲಕ್ಕೆ ಎತ್ತಿತ್ತು…,ಮು೦ದ ??

ಮುಳಿಯ ಭಾವ

   

You may also like...

20 Responses

 1. ದೀಪಿಕಾ says:

  ವಾಹ್!! ಭಾರೀ ಲಾಯ್ಕಾಯ್ದು ಮಾವ..ಇನ್ನು ಪೆರ್ಲಕ್ಕೆ ಎತ್ತಿಕ್ಕಿ ಎ೦ತೆಲ್ಲ ಆತು ಹೇಳಿ ಬೇಗ ಹೇಳಿಕ್ಕಿ..

 2. ತೆಕ್ಕುಂಜ ಕುಮಾರ ಮಾವ° says:

  ಈ ಸರ್ತಿ ಭಾಮಿನಿಲಿ ಲಯಕ್ಕೆ ಒತ್ತು ಕೊಟ್ಟ ಅನುಭವ ಆತು.
  ಗೋಪಾಲಣ್ಣನ ಭಾಮಿನಿಯೂ ಪಷ್ಟಾಯಿದು.
  ಒಂದಕ್ಕೆ ಒಂದು ಫ್ರೀ…!

 3. ಸೂರ್ಯ says:

  ಭಾವಾ ಭಾಮಿನಿ ರೈಸಿದ್ದಾತೋ… ಹಳೇ ನೆಂಪುಗಳ ಮತ್ತೆ ಸ್ಮರಿಸುವ ಸಿಕ್ಕುವ ಕೊಶಿಯೇ ಬೇರೆ ಅಲ್ಲದೋ…
  ಹಾಂಗೆ..
  ಗೋಪಾಲ ಮಾವನ ಭಾಮಿನಿಯೂ ಪಷ್ಟಾಯಿದು….

 4. ಬೊಳುಂಬು ಮಾವ says:

  ಆಟದ ಹೆರಪ್ಪಾಯಣದ ಎರಡನೆಯ ಕಂತುದೆ ಲಾಯಕಾತದ. ಸೂಟೆಯ ಬೆಣಂಚಿಲ್ಲಿ ಹೆರಟ ಮಕ್ಕಳ ಸೈನ್ಯದ ಗಮ್ಮತ್ತು ಕಣ್ಣಿಂಗೆ ಕಟ್ಟಿತ್ತದ. ಮಾಪಳೆ ಕಡ್ಡಿಲಿ ಹಲ್ಲು ಒಕ್ಯೊಂಡು ಬಾಳು ಬೇಕೋ ಕೇಳಿದ್ದದು ಸಹಜವಾಗಿ ಬಯಿಂದು. ಪೆರ್ಲಲ್ಲಿ ನೆಡದ ಆಟದ ವರ್ಣನೆಗೆ ಕಾಯ್ತಾ ಇದ್ದೆ ಮುಳಿಯ ಭಾವಯ್ಯಾ.

 5. ಪುಟ್ಟಭಾವ ಹಾಲುಮಜಲು says:

  ರೈಸಿದ್ದು ಭಾವಯ್ಯ………

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *