ಉಂಡಾಡಿ ಭಟ್ಟ

October 22, 2012 ರ 10:10 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉಂಡಾಡಿ ಭಟ್ಟನ ಮೇಲೆ ಕೊಂಡಾಟ ಹೆಚ್ಚಾಗಿ
ಅವನ ಗುಣ ಕೊಂಡಾಡಿದರೆ ಕೋಪ ಬಕ್ಕು ಹೆಚ್ಚಾಗಿ
ಮೊಂಡಾಟ ಹೆಚ್ಚಾಗಿ ಬಡಿವಲೆ ಬಕ್ಕು ಕೋಪಂದಾಗಿ
ಪೈಸೆ ಕೊಟ್ಟರೆ ರಾಜಿ ಮಾಡ್ಯೊಂಡು ಹತ್ತರೆ ಬಕ್ಕು ಹೆಚ್ಚಾಗಿ

ಸಣ್ಣ ಸಣ್ಣ ಮಕ್ಕಳ ಕಂಡರೆ  ಓಡ್ಯೊಂಡು ಬಕ್ಕು ಹತ್ತರಾಗಿ
ಪ್ರೀತಿ ಮಾಡ್ಯೊಂಡು ಅಪ್ಪ್ಯೊಂಡು ಹೇಳುಗು ಖುಶಿಯಾಗಿ
ಎಲ್ಯೆಲ್ಲಿ ಊಟ ಇದ್ದರು ಅವಂಗೆ ಶುದ್ದಿ ಸಿಕ್ಕುಗು ಮೇಲಾಗಿ
ಕಂಡೋರತ್ರೆಲ್ಲ ಕೇಳೋಂಡಿಕ್ಕು  ಹೋಪಲೆ ಎಲ್ಯಾಗಿ

ಬಂದೋರತ್ರೆ ನಾಳೆಯ  ಬಗ್ಗೆ ಕೇಳ್ಯೊಂಡಿಕ್ಕು ಮುಂದಾಗಿ
ಬಂದೋರ ಎಲ್ಲ ಮಾತಾಡ್ಸುತ್ತ ಪರಿಚಯವಿಕ್ಕು ಮೊದಲಾಗಿ
ಎಲ್ಲೋರನ್ನು ಮಾತಾಡ್ಸುಗು ಕಷ್ಟ ಸುಖ ಕೇಳ್ಯೊಂಡು
ಮೊದಲೇ ಅವ ನಮಸ್ಕಾರ ಹೇಳ್ಯೊಂಡು ಬಕ್ಕು

ಮತ್ತೆ ಅವಂಗೇ ನಮಸ್ಕಾರ ಮೊದಲೆ ಹೇಳುತ್ತವು
ಹಾಂಗೆ ಎಲ್ಲೋರಿಂಗೂ ಅವನ ಗುರ್ತವೇ ಇಕ್ಕು
ಊಟಕ್ಕೆ ಬರೆಕು ಹೇಳಿ ಹೇಳಿಕೆಹೇಳ್ಸ್ಯೊಂಡಿಕ್ಕು

ಬಂದರೆ ಸುಧರಿಕೆಯಾಗಿ ಬಳುಸಲೂ ಬಕ್ಕುಊಟಕ್ಕೆ
ಬಂದರೆ ಆರಿಂಗು ಬೇಜಾರಾಗ ಸೇರ್ಸೊಂಗು ಕೂಟಕ್ಕೆ
ಬಯ್ದರೂ ಕೋಪ ಬಾರ ಕೂಡ್ಯೊಂಗು ಎಲ್ಲ ಬಗೆ ಆಟಕ್ಕೆ

ಕಂಡರೆ ಮಾಣಿ ಉಂಡರೆ ಗೋಣಿ ಹತ್ತುಗು ಏಣಿ
ಅಂಡಲೆಯುತಿಕ್ಕು ಉಂಬಲೆ ಎಲ್ಲಾ ಓಣಿ ಓಣಿ
ಊರೆಲ್ಲ ಮನೆ ಅವಂಗೆ ಬೇರಿಲ್ಲೆ ಮನೆ
ಹೋಯ್ಕೊಂಡಿಕ್ಕು ದಿನವೆಲ್ಲ ಮನೆ ಮನೆ

ಎಲ್ಲೋರು ಸೇರಿ ಅವಂಗೊಂದು ಕೂಸಿನ ಹುಡುಕಿ
ಮದುವೆ  ಮಾಡಿಕ್ಕುಲೆ ಹೆರಟೇ ಬಿಟ್ಟವು
ಮದುವೆಯಾದರೆ ಸಾಕೊ ಅವು ಇಪ್ಪಲೊಂದು
ಮನೆಯನ್ನೂ ಹುಡುಕಿ ಒಕ್ಕಲೂ ಮಾಡಿದವು

ಮನೆ ಹೊಕ್ಕ ರಜ ಹೊತ್ತಿಂಗೆ ಹೋಗಿತ್ತಿದ್ದವು
ಹತ್ರಾಣ ಮನೆಲಿ  ಇಬ್ರುದೆ ಒಟ್ಟಿಂಗೆ ಕೂದು
ತಿಥಿ ಊಟವೇ ಉಂಡುಗೊಂಡಿತ್ತಿದ್ದವು
ಓಟೆಲ್ಲಿ ಹಾಕಿ ಸರ್ತ ಮಾಡಿದರೂ ನಾಯಿ

ಬಾಲ ಡೊಂಕು ಡೊಂಕೇ ಆಗಿಕ್ಕು ಅಲ್ಲದೋ?
ಇನ್ನೂ ಹೇಳಿದರೆ ಕತೆ  ಕೇಳುವೋರಿರವು
ಕೇಳಿಗೊಂಡಿದ್ದುದಕ್ಕೆ ನಿಂಗೊಗೆಲ್ಲ ಥೇಂಕ್ಸ್

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಹೇಳಿದ್ದಷ್ಟಕ್ಕೆ ಥ್ಯಾಂಕ್ಸ್. ಒಳ್ಳೆ ಲಾಯಕ ಆಯ್ದು.

  [Reply]

  VA:F [1.9.22_1171]
  Rating: -2 (from 2 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಚೊಕ್ಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಲಾಯಕಾಯಿದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°ಚೂರಿಬೈಲು ದೀಪಕ್ಕಪುಣಚ ಡಾಕ್ಟ್ರುಬಂಡಾಡಿ ಅಜ್ಜಿಮುಳಿಯ ಭಾವಕಳಾಯಿ ಗೀತತ್ತೆಶಾಂತತ್ತೆಅನುಶ್ರೀ ಬಂಡಾಡಿಶ್ಯಾಮಣ್ಣಅಡ್ಕತ್ತಿಮಾರುಮಾವ°ಅನಿತಾ ನರೇಶ್, ಮಂಚಿವೆಂಕಟ್ ಕೋಟೂರುಮಾಷ್ಟ್ರುಮಾವ°ಪುತ್ತೂರುಬಾವಚುಬ್ಬಣ್ಣನೆಗೆಗಾರ°ಸುಭಗವಿದ್ವಾನಣ್ಣತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆವಾಣಿ ಚಿಕ್ಕಮ್ಮಪೆರ್ಲದಣ್ಣಪುಟ್ಟಬಾವ°ಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ