ಓಡ್ವ ಕಾಲವೇ ಹಿಂದಂಗೋಡೆಯೋ

May 25, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಳಿಯದ ಭಾವನ ಮಾತಿನ ಸ್ಫೂರ್ತಿಲಿ ನಮ್ಮ ಭಾಷೆಲಿ ಬರವಲೆ ಮಾಡಿದ ಪ್ರಯತ್ನ ಇದು. ಓಡುವ ಕಾಲ ಹಿಂದಂಗೆ ಯಾವತ್ತೂ ಓಡ, ಇಪ್ಪಗಳೇ ಅದರ ಸದುಪಯೋಗ ಮಾಡಿಗೊಳ್ಳೆಕ್ಕು. ಭವಿತನಿಧಿಗಳ ತಾಕೋಲಾದರೂ ಹುಗುದುಮಡುಗಿದ ನಿಧಿಗಳ ತಾಕೋಲಾದರೂ ಇಡುಕ್ಕಿಹೋದರೆ ಪುನಾ ಸಿಕ್ಕುಲೆ ಕಷ್ಟ ಇದ್ದು. ಹಳತ್ತು ಪುನಾ ಬರಳಿ ಹೇಳಿಗೊಂಡು ಹಾರಯಿಸುವಗಳೂ ಯೋಚನೆ ಇಂದಿಂಗೆ ಇಪ್ಪದರ ಬಗ್ಗೆಯೇ ಇರುತ್ತು.

~ಬೊಳುಂಬು ಕೃಷ್ಣಭಾವ°


ಓಡ್ವ ಕಾಲವೇ:


ಓಡ್ವ ಕಾಲವೇ ಹಿಂದಂಗೋಡೆಯೋ |
ಮತ್ತೊಂದು ಬಾಲ್ಯವ ತಾರೆಯೋ |
ಓಡ್ವ ಕಾಲವೇ ಹಿಂದಂಗೋಡೆಯೋ |
ಇನ್ನೊಂದು ಕಾವ್ಯವ ಬರಶೆಯೋ ||

ಮೂಡ್ಲಾಗಿ ಬಾನಲ್ಲಿ ತೇರ ಏರಿದ ಆದಿತ್ಯದೇವನ ಹಿಂದೆಯೇ |
ಓಡ್ಲೆ ಓಟವ ಮಾಡ್ಲೆ ಕೆಲಸವ ಆಡ್ಲೆ ಆಟವ | ಎಡೆಬಿಡದ್ದೆ ||

ಓಡ್ವ ಕಾಲವೇ ಹಿಂದಂಗೋಡ್ವೆಯೋ |
ಮತ್ತೊಂದು ಜವ್ವನವ ತಪ್ಪೆಯೋ |
ಓಡ್ವ ಕಾಲವೇ ಹಿಂದಂಗೋಡ್ವೆಯೋ |
ತೊಂಡನಾಗದ್ದೆ ಒಳುಶ್ವೆಯೋ ||

ಕಳುದುಹೋದ ಆ ದಿನಂಗಳೆಲ್ಲದರ ಆನಂದವ ಕೊಡು ಇನ್ನೊಂದರಿ |
ಕಣ್ಣಿಂಗೆ ಕಂಡರೂ ಕೈಗೆ ಎಕ್ಕದ್ದ ಕನಸನ್ನೂ ಕೊಡು | ಎಡೆಬಿಡದ್ದೆ ||

ಓಡ್ವ ಕಾಲವೇ ಹಿಂದಂಗೋಡೆಯೋ |
ಮತ್ತೊಂದು ಬಾಲ್ಯವ ತಾರೆಯೋ |
ಓಡ್ವ ಕಾಲವೇ ಹಿಂದಂಗೋಡೆಯೋ |
ಇನ್ನೊಂದು ಕಾವ್ಯವ ಬರಶೆಯೋ ||

ಪಡ್ಲಾಗಿ ಬಾನಲ್ಲಿ ತೇಲಿಂಡಿಪ್ಪ ಆ ಚಂದ್ರಬಿಂಬದ  ಹಾಂಗೆಯೇ |
ಸುರುಕ್ಕಂಡಿದ್ದರೂ ಮೆಯ್ಗೆ ತಾಗದ್ದ ಬೆಳಿಬೆಣಚ್ಚಿನ ಕೊಡು | ಎಡೆಬಿಡದ್ದೆ ||

ಓಡ್ವ ಕಾಲವೇ ಹಿಂದಂಗೋಡೆಯೋ |
ಇನ್ನೊಂದು ಕಾವ್ಯವ ಬರಶೆಯೋ ||

ಭೂತಕಾಲದ ಭವಿತನಿಧಿಗಳ ಕಾಣೆಯಾದ ತಾಕೋಲದೊಂದರ |
ಹುಡುಕ್ಕಿ ತಂದುಕೊಡು ಹುಡುಕ್ಕಿ ತಂದುಕೊಡು ಹುಡುಕ್ಕಿ ತಂದುಕೊಡು ದಯೆಯಿರಲಿ ||

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕಳೆದು ಹೋದ ಆ ದಿನಂಗ ಇನ್ನು ಬಾರ ಹೇಳಿ ಗೊಂತಿದ್ದರೂ,ಕಾಲ ಹಿಂದಂಗೆ ಓಡೆಕ್ಕು ಹೇಳಿ ಅನ್ಸುವದು ಸಹಜ.
  ಹಳೆ ಹಳೆ ನೆನಪುಗೊ ಅತಿ ಮಧುರ.
  [ಭೂತಕಾಲದ ಭವಿತನಿಧಿಗಳ ಕಾಣೆಯಾದ ತಾಕೋಲದೊಂದರ |
  ಹುಡುಕ್ಕಿ ತಂದುಕೊಡು]- ಲಾಯಿಕ ಆಯಿದು

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಶರ್ಮಪ್ಪಚ್ಚಿಗೆ ಧನ್ಯವಾದಂಗೊ.
  ಕಾಲ ಹಿಂದಂಗೆ ಓಡ ಹೇಳಿ ಗೊಂತಿದ್ದರೂ ಸುಭಗ ಭಾವ° ಹೇಳಿದ ಹಾಂಗೆ ಹೃದಯ ಬುದ್ಧಿಯ ಮೀರುಸುತ್ತು.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಚೆಲುವಯ್ಯ ಚೆಲುವೋ ತಾನಿ ತಂದಾನ ಪದ್ಯವ ನೆನಪಿಸಿದ ಕಳೆದ ದಿನಗಳ ರಿವೈಂಡ್ ಮಾಡ್ಳೆ ಹೇಳಿದ ಪದ್ಯ ಲಾಯಕಿತ್ತು. ಆಶಯ, ಕಲ್ಪನೆ ಚೆಂದ ಆಯಿದು. ಕಳೆದ ದಿನಂಗಳ ನೆಂಪು ಮಾಡ್ತದು ಹೇಳಿರೆ ಅದೆಷ್ಟು ಸೊಗಸು ಅಲ್ಲದೊ ? ಒಂದೆರಡು ಕಡೆ ಮಾತ್ರೆ ರಜಾ ಜಾಸ್ತಿ ಆತೊ ಹೇಳಿ. ಹೇಳಿದೆ ಹೇಳಿ ಬೇಜಾರು ಮಾಡೆಡ ಪುಟ್ಟಾ. ಇನ್ನೂ ಲಾಯಕಾಗಲಿ ಹೇಳಿ ಹೇಳಿದೆ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಬೊಳುಂಬು ಗೋಪಾಲ ಮಾವಂಗೆ ಧನ್ಯವಾದಂಗೊ, ನಿಂಗಳ ಸೂಕ್ಷ್ಮದೃಷ್ಟಿ ನೋಡೀ ಕೊಶಿ ಆತು.
  “ದಿನಂಗಳೆಲ್ಲದರ ಆನಂದವ” ಹೇಳಿ ಇಪ್ಪಲ್ಲಿ “ದಿನಂಗಳೆಲ್ಲದರಾನಂದವ” ಹೇಳಿಗೊಂಡು ಹಾಡಿರೆ ಸರಿಯಾವುತ್ತು. ಹಾಂಗೆಯೇ “ಏರಿದ ಆದಿತ್ಯದೇವನ” ಹೇಳಿ ಇಪ್ಪಲ್ಲಿ “ಏರಿದಾದಿತ್ಯದೇವನ” ಮಾಡಿಗೊಮ್ಡು ಹಾಡೆಕ್ಕು. ಇನ್ನು “ಬೆಳಿಬೆಣಚ್ಚಿನ” ಹೇಳಿ ಇಪ್ಪಲ್ಲಿ “ಬೆಳಿ” ಶಬ್ದಂದ ಎರಡು ಹೆಚ್ಚಿಗೆ ಮಾತ್ರೆಗೊ ಪದ್ಯದ ಹರಿವಿಂಗೆ ತೊಂದರೆ ಆವುತ್ತಿಲ್ಲೆ. ನಾಲ್ಕನೆಯ ಚರಣಲ್ಲಿ ಧಾಟಿ ರಜ್ಜ ಬದಲಾವುತ್ತು. “ತಾಕೋಲದೊಂದರ” ಮಾಂತ್ರ ತಾರಕಲ್ಲಿ ಇದ್ದು. ಒಳುದ ಮೂರು ಚರಣಂಗಳಲ್ಲಿ ಹಾಂಗೆ ಇಲ್ಲೆ.

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಪಸ್ಟಾಯಿದು. ಬೊಳುಂಬು ಕೃಷ್ಣ ಭಾವಂಗೆ ಬರೆತ್ತ ರುಚಿ ಸಿಕ್ಕಿದ್ದೀಗ. ಅದರಿಲ್ಲಿಪ್ಪ ಸುಖ ತೃಪ್ತಿ ಅಂದವ ಸವಿದುಂಡು ಬರದ್ದಿ ಹೇಳಿ ನಮ್ಮ ಒಪ್ಪ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಧನ್ಯವಾದ ಚೆನ್ನೈಭಾವಾ…
  ನಿಂಗಳ ಒಪ್ಪ ನೋಡಿ ಕೊಶಿ ಆತು.

  [Reply]

  VN:F [1.9.22_1171]
  Rating: 0 (from 0 votes)
 4. ವಿವೇಕ ಮುಳಿಯ

  “ಓಡ್ವ ಕಾಲವೇ ಹಿಂದಂಗೋಡೆಯೋ” ಒಪ್ಪ ಆಯ್ದು :). ಹಿ೦ದ೦”ಗೋಡೆ”ಯೋ ಹೇಳಿ ಬರದ್ರಲ್ಲಿಯೇ ಇದ್ದು ಅಡ್ಡಗೋಡೆ. :(
  //ಭೂತಕಾಲದ ಭವಿತನಿಧಿಗಳ… -ಒಪ್ಪ ಆಯ್ದಾತ.

  ಪ್ರೀತಿ ಇರಳಿ,
  ವಿವೇಕ ಮುಳಿಯ

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ವಿವೇಕ ಭಾವಂಗೆ ಧನ್ಯವಾದ…
  “ಮುಳಿಯದ ಭಾವನ ಮಾತಿನ ಸ್ಫೂರ್ತಿಲಿ” ಹೇಳಿ ಬರದ್ದು ನಿಂಗಳ ಬಗ್ಗೆ ಅಲ್ಲ. ಮುಳಿಯದ ರಘುಭಾವನ ಬಗ್ಗೆ! :)

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಬೊಳು೦ಬು ಭಾವ,
  ವಿಭಿನ್ನ ಪ್ರಯತ್ನ, ಲಾಯ್ಕಾಯಿದು.
  ಸೂರ್ಯನ ಒ೦ದು ದಿನದ ಪ್ರಯಾಣದ ಹಾ೦ಗೆಯೇ ನಮ್ಮ ಜೀವನ ಹೇಳಿರೂ ತಪ್ಪಾಗ ,ಅಲ್ಲದೋ?
  ಮೂಡು ದಿಕ್ಕಿಲಿ ಉದಯಿಸುವ ಹೊತ್ತಿಲಿ ಚೆ೦ದಕೆ ಹೊಳಕ್ಕೊ೦ಡು ನೋಡುವ ಜೆನ೦ಗೊಕ್ಕೆಲ್ಲಾ ಸ೦ತೋಷ,ಉತ್ಸಾಹವ ಕೊಟ್ಟು ನೆಡು ಮಧ್ಯಾಹ್ನಲ್ಲಿ ಪ್ರಕಾಶಮಾನನಾಗಿ ತನ್ನ ಸುತ್ತ ಬೆಣಚ್ಚಿಯ ಹರಡಿ ಹೊತ್ತೋಪ್ಪಗ ತನ್ನ ತೀಕ್ಷ್ಣತೆಯ ಕಮ್ಮಿ ಮಾಡಿ ದಿಗ೦ತಲ್ಲಿ ಲೀನ ಅಪ್ಪದು.
  ಮು೦ದೆ ನೆಡವಗ ಹಿ೦ದೆ ನೆಡದ್ದರ ನೆನಪ್ಪುಗೊ,ಯೋಚನೆಗೊ ಬ೦ದಪ್ಪಗ ಸ೦ತೋಷದ ಕ್ಷಣ೦ಗಳ ಗ್ರೇಶಿಯಪ್ಪಗ ಸಮಾಧಾನ ಅಪ್ಪದು ಸ್ವಾಭಾವಿಕ.ಮು೦ದೆ ಎ೦ತ ಇದ್ದು ಹೇಳುವ ವಿಷಯ ನಮ್ಮ ಊಹೆಗೂ ಮೀರಿದ್ದು. ಈ ಭೂತ ಭವಿತವ್ಯದ ನಿಧಿಯ ತಾಕೋಲು ಸಿಕ್ಕೆಕ್ಕು ಹೇಳುವ ಆಶಯ ಸಹಜ.ಆದರೆ ಸಿಕ್ಕಿರೆ ಮತ್ತೆ ಜೀವನದ ಗುಟ್ತೆಲ್ಲಾ ರಟ್ಟಾಗಿ ನೀರಸ ಆಗಿ ಹೋಕೋ?
  ಯೋಚನೆ ಮಾಡುವ ಹಾ೦ಗಾತು,ಸು೦ದರ ಕವಿತೆಯ ಓದಿ.ರಾಗ ಸೇರುಸುವ ಪ್ರಯತ್ನ ಮಾಡಿದ್ದಿರೋ?

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಒಳ್ಳೆಯ ವಿಶ್ಲೇಷಣೆ ಮಾಡಿದ ರಘುಭಾವಂಗೆ ಧನ್ಯವಾದಂಗೊ.
  ಮನಸ್ಸಿಲಿ ಒಂದು ರಾಗದ ಕಲ್ಪನೆ ಇದ್ದು.

  [Reply]

  VN:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  Gopalakrishna BHAT S.K.

  ಓಡ್ವ ಕಾಲದ ಉತ್ತರ ಹೀಂಗಿಕ್ಕು-
  ಓಡುದೊಂದೆ ಗೊಂತು ಎನಗೆ,ಹಿಂದೆ ಓಡೆನೋ
  ಮುಂದೆ ಮಾತ್ರ ಗೊಂತು ಎನಗೆ ಹಿಂದೆ ನೋಡೆನೋ
  ಭೂತಕಾಲ ಭೂತ ಎನಗೆ , ಭಾರಿ ಹೆದರಿಕೆ
  ಏಕೆ ಎನ್ನ ತಡೆವೆ ? ಬೇಡ ನಿನ್ನ ಸುಧರಿಕೆ

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಲಾಯ್ಕ ಆಯಿದು ಗೋಪಾಲಣ್ಣಾ…
  ಚೆಂದದ ಒಪ್ಪಕ್ಕಾಗಿ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 7. ಸುಭಗ
  ಸುಭಗ

  ತುಂಬ ಅರ್ಥಪೂರ್ಣವಾಗಿ ಮೂಡಿಬೈಂದು ಕವನ.

  ಕಾಲವ ಹಿಂದಂಗೆ ತಪ್ಪದು ಅಸಂಭವ ಹೇಳುವ ವಿಚಾರ ‘ಬುದ್ಧಿ’ಗೆ ಗೊಂತಿದ್ದು. ಆದರೂ ಇಲ್ಲಿ ‘ಹೃದಯ’ದ ಬಯಕೆಗೊ ಬುದ್ಧಿಯ ಮೀರಿ ಕಾಲ ಹಿಂದಂತಾಗಿ ಬರೆಕು ಹೇಳಿ ಅಪೇಕ್ಷೆಪಡ್ತಾ ಇದ್ದು. ಅದಕ್ಕೆ ಹೃದಯ ಕೊಡುವ ಕಾರಣ ಅತಿ ವಿಶಿಷ್ಟ. ‘ನೀನು ಎನ್ನ ನಿನ್ನೊಟ್ಟಿಂಗೆ ಕರಕ್ಕಂಡುಹೋಗಿ ಭವಿತವ್ಯದ ನಿಧಿಯ ಎನಗೆ ಒದಗುಸುದು ಕೊಶಿಯ ಸಂಗತಿಯೇ..ಅದರೆ ಆ ನಿಧಿಯ ತಾಕೋಲು ತುಂಬಾ ಹಿಂದೆ- ಎನ್ನ ಬಾಲ್ಯಲ್ಲೇ ಬಾಕಿ ಆಯಿದು. ವಾಪಾಸು ಹೋಗಿ ಅದರ ತೆಕ್ಕಂಡು ಬಪ್ಪೊ’ ಇದು ಅನನ್ಯ ಪರಿಕಲ್ಪನೆ.

  ಬೊಳುಂಬು ಭಾವಂಗೆ ಅಭಿನಂದನೆಗೊ..

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಚೆಂದದ ವಿಶ್ಲೇಷಣೆಗಾಗಿ ಧನ್ಯವಾದಂಗೊ ಸುಭಗ ಭಾವಾ.

  [Reply]

  VN:F [1.9.22_1171]
  Rating: 0 (from 0 votes)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  https://soundcloud.com/krishnaprakasha-bolumbu/chalisu-kalave

  ಕನ್ನಡಲ್ಲಿ ಹಾಡಿದ “ಓಡ್ವ ಕಾಲವೇ” ಹುಂಡುಪದ್ಯ ಇಲ್ಲಿದ್ದು. ಭಾಷೆಗೆ ತಕ್ಕ ಹಾಂಗೆ ಅಲ್ಲಲ್ಲಿ ಬದಲಾವಣೆ ಆಯಿದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಅನು ಉಡುಪುಮೂಲೆಕಳಾಯಿ ಗೀತತ್ತೆಸಂಪಾದಕ°ಎರುಂಬು ಅಪ್ಪಚ್ಚಿರಾಜಣ್ಣಪುಟ್ಟಬಾವ°ವಸಂತರಾಜ್ ಹಳೆಮನೆಪೆಂಗಣ್ಣ°ಪುತ್ತೂರುಬಾವಶಾಂತತ್ತೆವೇಣೂರಣ್ಣಪುಣಚ ಡಾಕ್ಟ್ರುಅಕ್ಷರದಣ್ಣಮಂಗ್ಳೂರ ಮಾಣಿವೇಣಿಯಕ್ಕ°ಅಕ್ಷರ°ಶ್ಯಾಮಣ್ಣಜಯಶ್ರೀ ನೀರಮೂಲೆದೊಡ್ಡಭಾವಚುಬ್ಬಣ್ಣಬಂಡಾಡಿ ಅಜ್ಜಿದೇವಸ್ಯ ಮಾಣಿಬಟ್ಟಮಾವ°ನೀರ್ಕಜೆ ಮಹೇಶಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ