ಜಾಲಕರೆಲಿ ಒಂದು ದಿನ ಭಾಮಿನಿಲಿ

November 19, 2010 ರ 5:31 pmಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಣ್ಣ ಹಾಕಿದ ಎಲೆಯ ಅಗಿಯುತ
ಬಣ್ಣ ಕೆ೦ಪಾಗಿರಲು ನಾಲಗೆ
ಕಣ್ಣ ಮಿಟುಕಿಸಿ ಕುಂಞ ಕಿಸಿದತ್ತದರ ಬಾಯಿಯನು
ತಣ್ಣಗಿನ ಕೋಣೆಯಲಿ ವಿರಮಿಸಿ
ಮಣ್ಣನೆಲದಲಿ ಕುಳಿತಿರಲು ಶಾ
ಮಣ್ಣ ದೆನಿಗೇಳಿದವು ಜಾಲಿನ ಮಣ್ಣ ಕೆರಸೆನುತ

ಅಡಕೆ ಜಾಲಿನ ಮಣ್ಣ ಕೆರಸುತ
ಬಡಬಡಿಸಿ ಬಾಯಿಯಲಿ ಪದ್ಯವ
ಜಡತೆಯಿಲ್ಲದೆ ಕೆಲಸ ಮಾಡಿರೆ ಬೆಗರು ಸುರಿಸುತಲಿ
ಬುಡಕೆ ಹಾಕುತ ಸೊಪ್ಪು ಗೊಬ್ಬರ
ಗೆಡುವ ನೆಟ್ಟರೆ ತೋಟದುದ್ದಕೆ
ಒಡೆಯನಾಗುವೆ ಬೇಡ ಸ೦ಶಯ ಸರ್ವಸ೦ಪದಕೆ

ಕೊಟ್ಟುಪಿಕ್ಕಾಸುಗಳು ಹೆಗಲಿಲಿ
ದಟ್ಟ ಹುಲ್ಲಿನ ರಾಶಿ ತೋಟವು
ಕೆಟ್ಟು ಹೋಗದ ಹಾ೦ಗೆ ಕೆಲಸವ ಮಾಡುವಾ° ಮುದದಿ
ಗುಟ್ಟು ಮರೆಯದಿರಣ್ಣರೇ ಸಮ
ತಟ್ಟು ಮಾಡಿರೆ ಕರೆಯ ಗುಡ್ಡೆಯ
ನೆಟ್ಟು ತೆ೦ಗಿನ ಸೆಸಿಯ ಇಡಿ ಜೀವನವು ಹಸಿರಕ್ಕು

ಹಳೆಯ ತೋಟದ ನೆಡುಕೆ ಅಡಕೆಯ
ಹಾಳೆ ಕ೦ಡತ್ತೀಗ ಬಟ್ಯಗೆ
ಮಳೆಯ ಎಡಕಿಲಿ ಕೊರದು ಕೆಲಸವ ಮಾಡುಗದು ಬೀಸ
ತಳೆಯ ಕಟ್ಟಿದ್ದದರ ಕಾಲಿ೦
ಗಿಳಿಯ ಅಡಕೆಯ ಕೊನೆಯ ಕೊಯ್ವಗ
ಚಳಿಯೆ ನೆಡುಗುಗು ಹೆದರಿ ಕೆಲಸದ ಚಳಕವನು ನೋಡಿ

ಮಳೆಯು ಹೆಚ್ಚಾಗೀವರುಷವಿಡಿ
ಕೊಳೆಯ ರೋಗವು ಬ೦ದು ತೋಟ
ಕ್ಕಿಳಿವ ಕೆಲಸವೆ ಇರದೊ ಹೇಳುವ ಸ೦ಶಯವು ಮನಕೆ
ಅಳಿವಲೆ೦ದಿಗು ಬಿಡೆನು ಈ ಕೃಷಿ
ತೆಳಿಯ ಕುಡಿದರು ಇಲ್ಲೆ ಕಸಿವಿಸಿ
ಕಳೆಯ ಕೊಚ್ಚುವೆ ತೋಡಿ ಗು೦ಡಿಯ ನೆಡುವೆ ಬಾಳೆಸೆಸಿ

ಜಾಲಕರೆಲಿ ಒಂದು ದಿನ ಭಾಮಿನಿಲಿ , 4.6 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಬಲ್ನಾಡುಮಾಣಿ

  ಅದಾ, :) ರಘುಮಾವನ ಭಾಮಿನೀ ಮಗದೊಮ್ಮೆ ವಿಜೃಂಭಿಸಿತು ನೋಡಾ!! :) ಪಷ್ಟಾಯಿದು ಮಾವಾ :) ಒಂದರಿ ಎನ್ನ ಮನೆ ಜಾಲು ಕಣ್ಣಿಂಕಟ್ಟಿತ್ತು :)

  [Reply]

  VA:F [1.9.22_1171]
  Rating: +2 (from 2 votes)
 2. ಬಂಡಾಡಿ ಅಜ್ಜಿ
  ಬಂಡಾಡಿ ಅಜ್ಜಿ

  ಇದುದೇ ಭಾರೀ ಲಾಯಿಕಾಯಿದು…
  ಆ ಬಟ್ಯನ ಹಾಂಗೆ ಕೆಲಸ ಮಾಡುತ್ತವು ಈಗ ಸಿಕ್ಕುಗೋ…
  ಇಂದು ಮಳೆ ಬಂದರೆ ನಾಕು ದಿನ ಕೆಲಸಕ್ಕೇ ಬಾರವು… ಬೆಳ್ಳಕ್ಕೆ ಹೋದವೋ ಗ್ರೇಶೆಕ್ಕು…

  ಅಕೇರಿಗೂ ಕೃಷಿಯೇ ಕಾಪಾಡುದು ನಮ್ಮ ಹೇಳುತ್ತ ಆಶಯ ಕುಶೀ ಆತಬ್ಬೊ…

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಮರವಲೆಡಿಗೋ ಅಜ್ಜಿ,ಆನು ಸಣ್ಣಾಗಿಪ್ಪಗ ನಿಂಗೊ ಹೇಳಿದ ಮಾತುಗೊ ಅಲ್ಲದೋ.ಕೃಷಿ ಖಂಡಿತ ಕಾಪಾಡುಗು ನಮ್ಮ.

  [Reply]

  ಸುಬ್ಬಯ್ಯ ಭಟ್ಟ ವರ್ಮುಡಿ Reply:

  ಕೃಷಿಯನ್ನೂ ಕೃಷಿಕನನ್ನೂ ದೇವರು ಕಾಪಾಡಲಿ.

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ರಘು ಭಾವ, ಭಾಮಿನಿಲಿ ಜಾಲು ಕೆತ್ತಿದ್ದು ಲಾಯ್ಕಾಯಿದು.. :-)
  ಸಕಾಲಿಕವಾಗಿಯೇ ಬಯಿಂದು… ಆದರೆ.., ಈ ಮಳೆ ಹೀಂಗೇ ಬಂದರೆ ಜಾಲು ಕೆತ್ತುದು ಹೇಂಗೆ? ಅಡಕ್ಕೆ ಒಣಗುಸುದು ಹೇಂಗೆ?
  ಹಿರಿಯರ ಪುಣ್ಯವೇ ಕಾಪಾಡೆಕ್ಕಷ್ಟೇ ಕೃಷಿಕರ!!!!

  [Reply]

  VA:F [1.9.22_1171]
  Rating: +1 (from 1 vote)
 4. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಭಾರೀ ಲಾಯ್ಕಾಯ್ದು!!

  (ಜಡತೆಯಿಲ್ಲದೆ ಕೆಲಸ ಮಾಡಿರೆ ಬೆಗರು ಸುರಿಸುತಲಿ,ಬುಡಕೆ ಹಾಕುತ ಸೊಪ್ಪು ಗೊಬ್ಬರ, ಗೆಡುವ ನೆಟ್ಟರೆ ತೋಟದುದ್ದಕೆ
  ಒಡೆಯನಾಗುವೆ ಬೇಡ ಸ೦ಶಯ ಸರ್ವಸ೦ಪದಕೆ)

  ಇದು ಮಾತ್ರ ಅದ್ಬುತ ಆಯ್ದು!! ಒಳ್ಳೆ ನುಡಿಮುತ್ತಿನ ಹಾಂಗೆ!!! (ಅನುಭವದ ಮಾತೂ ಆದಿಕ್ಕು!!)
  ಸಶೇಷ ಕಂಡತ್ತಿಲ್ಲೇ 😀 😀

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಪುಟ್ಟ ಭಾವ,
  ಅನುಭವದ ಮಾತೇ ಅಲ್ಲದೋ ಕೃತಿ ಅಪ್ಪದು?ನಾವು ಮಾಡುವ ಪ್ರತಿ ಕೆಲಸವ ಮನಸ್ಸು ಕೊಟ್ಟು,ಕಷ್ಟಪಟ್ಟು ಮಾಡಿರೆ ಒಳ್ಳೆ ಫಲ ಸಿಕ್ಕುಗು,ಸಂಪದ ಸಿಕ್ಕುಗು.
  ಸಶೇಷ ಬಿಟ್ಟು ಹೋದ್ದು ಆತೋ.ನೀನು ಕಡೆಂದ ಕೊಡಿ ವರೆಗೆ ಸರಿ ಗಮನಿಸಿ ಓದುತ್ತೆ ಹೇಳಿ ಕೊಷಿ ಆತು.

  [Reply]

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ನಿಂಗ ಹೇಳಿದ್ದು ಸರಿ! ಇರುಳು ಆಗಿ ಉದಿಅಪ್ಪಗ ಆರಿಂಗೂ ಯಶಸ್ಸು ಸಿಕ್ಕುತ್ತಿಲ್ಲೆ ಹೇಳುದು ಸಹಜ ಹಾಗೂ ಸತ್ಯ!! ಆದರೆ ಸಾಮಾನ್ಯವಾಗಿ ಎಲ್ಲರೂದೆ ಅದರ ಒಪ್ಪುಲೇ ರೆಡಿ ಇಲ್ಲೇ!!(ಅರ್ಜೆಂಟು ಇದಾ, ಯಶಸ್ಸಿನ ಹಿಂದೆ ಶ್ರಮದ ತಪಸ್ಸು ಇರ್ತು ಹೇಳುದರ ತುಂಬಾ ಜನ ನೋಡ್ತವಿಲ್ಲೇ )

  [Reply]

  VA:F [1.9.22_1171]
  Rating: 0 (from 0 votes)
 5. ಬೋಸ ಬಾವ
  ಬೋಸ...

  ರಘು ಭಾವೊ.. ಬಾಳೆಸೆಸಿ ಈ ಕರ್ಮದ ಮಳೆ-ಗಾಳಿಗೆ ಬಗ್ಗುಗು.. 😀
  ಹಾ೦ಗೆ ಹೀ೦ಗು ಗೊನೆ ಹಾಕ್ಯಪ್ಪಗ ಮ೦ಗ೦ಗೊ ಕಿತ್ತೊ೦ಡು ಹೋಕಿದಾ… ಎ೦ತ ಮಾಡುಸ್ಸು??? 😛

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಸೆಸಿ ನೆಟ್ಟು ನಿನ್ನನ್ನೇ ಕಟ್ಟಿ ಬಿಡುವ°,ಆಗದೋ? ಬಾಳೆ ಕೊನೆ ಬಿಟ್ಟಪ್ಪಗ ಮಂಗನ ಉಪದ್ರವೂ ಇರ,ನಿನ್ನ ನೋಡಿರೆ ಏವ ಮಂಗ° ಬಕ್ಕು??

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಮಾವಾ! ಸರಿಯಾಗಿ ಹೇಳಿದಿ! :) ಅವನ ಹಲ್ಲು ನೋಡಿರೆ ಮಂಗ ನಾಪತ್ತೆ ಅಕ್ಕು ! :)

  [Reply]

  ಸುಬ್ಬಯ್ಯ ಭಟ್ಟ ವರ್ಮುಡಿ Reply:

  ಆ ಹಲ್ಲಿಂದ ಎಂತದೂ ಆಗ; ಕಚ್ಚಲೆಡಿಯ; ಮೇಲಿಪ್ಪಲ್ಲಿ ಕೆಳ ಇಲ್ಲೆ – ಕೆಳ ಇಪ್ಪಲ್ಲಿ ಮೇಲಿಲ್ಲೆ.

  ಮುಳಿಯ ಭಾವ

  raghumuliya Reply:

  ಬೋಸ ಬಾಯಿ ಬಿಟ್ಟರೆ ಕಾಂಬದು ತಡಮ್ಮೆ
  ಕಿಸಿದ ಚೆಂದವ ನೋಡಿ ಹಲ್ಲುಗಳೆ ಕಡಮ್ಮೆ

  ಬೋಸ ಬಾವ

  ಬೋಸ... Reply:

  😀

  VA:F [1.9.22_1171]
  Rating: 0 (from 0 votes)
 6. ಗಣೇಶ ಮಾವ°

  ಭಾಮಿನಿಲಿ ಜಾಳು ಕೆತ್ತುದು ಫಷ್ಟಾಯಿದು..ಎಲ್ಲವೂ ಕಣ್ಣಿಂಗೆ ಕಟ್ಟಿದ ಹಾಂಗೆ ವಿವರ್ಸಿದ್ದಿ ಮಾವಾ,,
  ತಟ್ಟು ಮಾಡಿರೆ ಕರೆಯ ಗುಡ್ಡೆಯ
  ನೆಟ್ಟು ತೆ೦ಗಿನ ಸೆಸಿಯ ಇಡಿ ಜೀವನವು ಹಸಿರಕ್ಕು
  ಇದು ಮಾತ್ರ ಸತ್ಯವೇ,ಎಷ್ಟು ನಾವು ರಬ್ಬರು ನೆಟ್ಟರೂ ಮೇಲಾರಕ್ಕೆ ಕಾಯಿ ಹಾಕದ್ದೆ ಕಳಿಯ..ಅಷ್ಟು ಒಗ್ಗಿ ಹೊಯಿದು ನಾವು ಅದಕ್ಕೆ..
  ರಘು ಭಾವನ ಭಾಮಿನಿಗೆ ನಮೋ ನಮ:

  [Reply]

  VN:F [1.9.22_1171]
  Rating: +2 (from 2 votes)
 7. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  [ಚಳಿಯೆ ನೆಡುಗುಗು ಹೆದರಿ ಕೆಲಸದ ಚಳಕವನು ನೋಡಿ]-ಒಳ್ಳೆ ಮಾತು ರಘು.
  ಭಾಮಿನಿ ಲಾಯಿಕ ಆಯಿದು
  ಕೆಲಸ ಮಾಡ್ಲೆ ಮನಸ್ಸಿಪ್ಪವಕ್ಕೆ ಚಳಿ, ಬೆಶಿಲು, ಮಳೆ ಯಾವದೂ ಲೆಕ್ಕಕ್ಕೆ ಇಲ್ಲೆ. ಮನಸ್ಸಿಲ್ಲದ್ದರೆ ಕಾರಣ ಯಾವುದೂ ಆವುತ್ತು.

  [Reply]

  VA:F [1.9.22_1171]
  Rating: +2 (from 2 votes)
 8. ಮೋಹನಣ್ಣ

  ಅಳಿವಲೆ೦ದಿಗೂ ……………ವಹ್ವ ಮುಳಿಯ ಭಾವ ಎ೦ತ ಅರ್ಥಗರ್ಭಿತ ಮಾತುಗೊ.ಒ೦ದಷ್ಟು ಜೆನ ಆದರೂ ಅರ್ಥ ಮಾಡಿಯೊ೦ಡು ಹೊರಟರೆ ಖ೦ಡಿತಾ ಚಳಿಯೇ ……ಕೆಲಸದ ಚಳಕವ ನೋಡಿ.ಭಾಮಿನಿಯ ಭಾವದಲಿ ತು೦ಬಿ ಬಯಲಿನೋರ ಭಾವನೆಯ ಅಲೇಲಿ ತೇಲುಸುವ ಮುಳಿಯ ಭಾವನ ಹಾಡುಗೊ ಸದಾ ಬ೦ದೊ೦ಡೇ ಇರಲಿ.ನಿನ್ನ ಹೆತ್ತಬ್ಬೆಯ ಒಡಲು ತ೦ಣ್ಣಗಿರಲಿ.ಎನ್ನಪ್ಪನ ಪ್ರಿಯ ಗುರು ತಿಮ್ಮಪ್ಪಯ್ಯನ ಹೆಸರು ಸದಾ ಹಸಿರಾಗಿಪ್ಪ೦ತೆ ಆ ಮುಕ್ಕಣ್ಣೇಶ್ವರ೦ ಕರುಣಿಸಲಿ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: +1 (from 1 vote)
 9. ಬೊಳುಂಬು ಮಾವ°
  ಗೋಪಾಲ ಮಾವ

  ತೆಳಿಯ ಕುಡುದಾದರು ಕೃಷಿ ಯ ಮುಂದುವರಿಸುವೆ ಹೇಳ್ತ ಮುಳಿಯ ಭಾವಯ್ಯನ ಕಳಕಳಿಯ ಮಾತು ಕೇಳಿ ಕೊಶಿ ಆತು. ಪ್ರಯತ್ನ ಪಟ್ಟವಕ್ಕೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಕ್ಕುತ್ತು. ಹವ್ಯಕ ಪದಲ್ಲಿ ಭಾಮಿನಿ ಪದ ಚೆಂದ ಆಯಿದು. ಅರ್ಥ ಪ್ರಾಸ ಎಲ್ಲ ಕೂಡಿ ಬಯಿಂದು. ಓದುವಗ ರಜಾ ತಡ ಆದ್ದಕ್ಕೆ ಕ್ಷಮೆ ಇರಳಿ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಚುಬ್ಬಣ್ಣಕಜೆವಸಂತ°ಚೆನ್ನಬೆಟ್ಟಣ್ಣಪುತ್ತೂರುಬಾವvreddhiಅಕ್ಷರ°ಚೆನ್ನೈ ಬಾವ°ಸುಭಗಒಪ್ಪಕ್ಕಜಯಶ್ರೀ ನೀರಮೂಲೆವೆಂಕಟ್ ಕೋಟೂರುಶುದ್ದಿಕ್ಕಾರ°ದೇವಸ್ಯ ಮಾಣಿಚೂರಿಬೈಲು ದೀಪಕ್ಕಮಾಷ್ಟ್ರುಮಾವ°ಹಳೆಮನೆ ಅಣ್ಣದೊಡ್ಡಮಾವ°ವೇಣಿಯಕ್ಕ°ವಿದ್ವಾನಣ್ಣತೆಕ್ಕುಂಜ ಕುಮಾರ ಮಾವ°ವಿಜಯತ್ತೆಪಟಿಕಲ್ಲಪ್ಪಚ್ಚಿಯೇನಂಕೂಡ್ಳು ಅಣ್ಣಅಕ್ಷರದಣ್ಣದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ