ತರವಾಡು ಮನೆಲಿ ಉದಿಯಪ್ಪಗ – ಭಾಮಿನಿಲಿ

March 7, 2011 ರ 10:01 amಗೆ ನಮ್ಮ ಬರದ್ದು, ಇದುವರೆಗೆ 45 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೂಡುದಿಕ್ಕಿಲಿ ಸೂರ್ಯ ಮೂಡೊಗ
ಕಾಡ ಮರಗಳ ಎಡೆಲಿ ಹಾರುವ
ಜೋಡು ಹಕ್ಕಿಗೊ ಆಡಿ ಹೊಸ ಸ೦ಗೀತ ಹಾಡುವಗ
ತೋಡ ನೀರದ ಹರುದು ಜುಳುಜುಳು
ಓಡುತಿಪ್ಪಗಳೇ ಹೊಳೆಗೆ ತರ
ವಾಡು ಮನೆಯೊಳ ನೋಡು ಬಗೆಬಗೆ ಕೆಲಸಕಾರ್ಯ೦ಗೋ

ಮಿ೦ದು ದೇವರೊಳ೦ಗೆ ಮಡಿಯಲಿ
ಬ೦ದು ನಿಷ್ಟೆಲಿ ರ೦ಗಮಾವನು
ಒ೦ದು ತೊಳಶಿಯ ಚಾಮಿಗರ್ಪುಸಿ ಶ೦ಖ ಉರುಗಿದವು
ಇ೦ದು ಹೇಳಿದವೆ೦ದಿನಾ೦ಗೆಯೆ
ಮು೦ದೆಯೂ ನೆಮ್ಮದಿಯ ಕರುಣಿಸಿ
ಚೆ೦ದದೀ ಮನೆತು೦ಬ ಬೆಳಗುಲೆ ಮ೦ತ್ರಪುಷ್ಪವನೂ

ಕಾ೦ಬು ಅಜ್ಜಿಯು ತೆ೦ಗಿನಾ ಒಲಿ
ಕಾ೦ಬ ಚೆ೦ದವೆ ಕೈಯ ಮುಗುದದ
ಚಾ೦ಬಿದವು ಮೆಲ್ಲ೦ಗೆ ಅಡಿಗೆಯ ಕೋಣೆಯೊಳದಿಕ್ಕೆ
ಮಾ೦ಬಳಕೆ ಹಣ್ಣಿದ್ದೊ ಹುಡುಕುತ
ಕೂ೦ಬೆ ಕೂ೦ಬಾಳೆಯನು ಹೆರ್ಕುತ
ತೂ೦ಬು ಕಟ್ಟುಲೆ ಕೆರೆಗೆ ಬೊಳು೦ಬು ಮಾವ° ಸಾಗಿದವು

ಹಾಲು ಕರದಾ ಪಾತಿ ಅತ್ತೆಯು
ಜಾಲಕೊಡಿಯಲಿ ಬಪ್ಪ ಹೊತ್ತಿಲಿ
ಮಾಲೆ ಕಟ್ಟುಲೆ ಹೂಗು ಕೊಯ್ಕೊ೦ಡಿದ್ದದಾ ಕೂಸು
ಶಾಲೆ ಕಲಿವದರಲ್ಲಿ ಧೀರೆ ಸು
ಶೀಲೆ ಗುಣಗ೦ಭೀರೆ ಮಲ್ಲಿಗೆ
ಸಾಲಿನಾ೦ಗಿದ್ದದರ ಹಲ್ಲುಗೊ ವ೦ಶಕೈಸಿರಿಯೂ

ಗಿ೦ಡಿನೀರಿನ ತೊಳಶಿಗೆರೆದವು
ಚೆ೦ಡಿಹರ್ಕಿನ ಸರಿಗೆಗಾರುಸಿ
ಉ೦ಡೆರವೆಗದ್ದಿದವು ಶರ್ಮಪ್ಪಚ್ಚಿ ಹರುಷಲ್ಲಿ
ತಿ೦ಡಿ ತಿ೦ಬದರೊಳವೆ ಬಟ್ಯನು
ಮ೦ಡಗೆಗೆ ಕೈಹಾಕಿ ಮರಿಗೆಲಿ
ಹಿ೦ಡಿ ತೆಗೆದಾಗಿಕ್ಕದಾ ಬೈಪ್ಪಣೆಗೆ ಸಾಗುಸುಲೆ

(ತರವಾಡಿಲಿ ಇನ್ನಾಣದ್ದು ಬಪ್ಪ ವಾರ ನೋಡುವ°,ಆಗದೋ)

ತರವಾಡು ಮನೆಲಿ ಉದಿಯಪ್ಪಗ - ಭಾಮಿನಿಲಿ, 4.8 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 45 ಒಪ್ಪಂಗೊ

 1. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಅನಂತ

  ಭಾಮಿನೀ ಬಹಳ ಲಾಯಿಕ ಆಯಿದು..ಫಟ ಎಲ್ಯಾಣದ್ದು ಹೇಳಿ ಅಂದಾಜಿ ಆತು…..

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಬೆಟ್ಟುಕಜೆ ಭಾವ,
  ನಮಸ್ಕಾರ.ಎಲ್ಯಾಣದ್ದು?

  [Reply]

  ಬೆಟ್ಟುಕಜೆ ಮಾಣಿ

  anantha krishna Reply:

  adu helvange ille….

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ರಘು ಭಾವ°, ತರವಾಡು ಮನೆಯ ಸುಪ್ರಭಾತ ಭಾಮಿನಿಲಿ ಹೇಳಿದ ಹಾಂಗೆ ಆತು ಇದರ ಓದುವಾಗ!!!
  ಮನಸ್ಸಿಲಿ ಉದಿಯಪ್ಪಗಾಣ ರಾಗ ಕೇಳ್ಸಿತ್ತು ಸುರುವಾಣ ಸಾಲುಗಳ ಓದುವಾಗ. ಮನೆಯ ಅಂಶ ನಾವಾಗಿದ್ದ ಹಾಂಗೇ ಬಯಿಂದು ನಿಂಗಳ ಭಾಮಿನಿ. ಪ್ರತಿಯೊಂದು ಸಾಲುದೇ ಸೂಕ್ಷ್ಮ ವಿವರಣೆ ಕೊಡ್ತು.
  ಮನೆಲಿರ್ತ ಎಲ್ಲೋರ ವಿವರ್ಸಿದ್ದು ಲಾಯ್ಕಾಯಿದು. ಪುಳ್ಳಿಯುದೇ ಅಜ್ಜಿಯ ಹಾಂಗೆ ಹೂಗು ಕಟ್ಟುತ್ತದರಲ್ಲಿ ಉಶಾರಿಯೇ ಕಲಿತ್ತದರಲ್ಲಿ ಇದ್ದ ಹಾಂಗೇ!! ಶರ್ಮಪ್ಪಚ್ಚಿ ಉಂಡೆ ಒಪ್ಪಣ್ಣಂಗೆದೇ ತೆಗದು ಮಡುಗುಲೆ ಹೇಳಿದ್ದವಡ್ಡ ಅವಂಗೆ ಪ್ರೀತಿ ಹೇಳಿ. ಕಳುದ ಸರ್ತಿ ಮಾವಿನ ಹಣ್ಣು ಸಿಕ್ಕಿದ್ದು. ಈ ಸರ್ತಿ ಸಿಕ್ಕುಗೋ? ಉಮ್ಮ!!! ಬೊಳುಂಬು ಮಾವ° ಹೇಳೆಕ್ಕಷ್ಟೇ!! ಈ ಸರ್ತಿಯೂ ಕೊಡುಗು ಮಾವಿನ ಹಣ್ಣು ಎಲ್ಲೊರಿಂಗೂ ಧಾರಾಳ ಇದ್ದನ್ನೇ ತರವಾಡು ಮನೆಲಿ!!!

  ರಘು ಭಾವ°, ತುಂಬಾ ಲಾಯ್ಕಲ್ಲಿ ಮನಸ್ಸಿಂಗೆ ಮುಟ್ಟುತ್ತ ಹಾಂಗೆ ಬಯಿಂದು. ಇನ್ನಾಣ ಕಂತುದೇ ಬರಲಿ…

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಕ್ಕ,
  ಒ೦ದು ಹೊಸಾ ಕಲ್ಪನೆ ಗುರಿಕ್ಕಾರ್ರು ಕೊಟ್ಟವು,ಹಾ೦ಗೆ ನಮ್ಮದೊ೦ದು ಪ್ರಯತ್ನವೂ ಆತು.ಎಲ್ಲೋರಿ೦ಗೆ ಕೊಶಿ ಆದರೆ ಎನಗೂ ತೃಪ್ತಿ. ಓ,ಆ ಕೂಸು ಹೂಗು ಕಟ್ಟುತ್ತ ಅಜ್ಜಿಯ ಪುಳ್ಳಿಯೋ?ಎನಗೆ ಗುರ್ತವೇ ಸಿಕ್ಕದ್ದದು ಹಾ೦ಗಾರೆ.
  ಈ ಸರ್ತಿ ಮಾವಿನ ಬೆಳೆ ಲಾಯಿಕಿದ್ದು ಹೇಳಿ ಶಉದ್ದಿ,ಬೊಳು೦ಬು ಮಾವ ಮಾವಿನ ಮರದ ಬುಡಲ್ಲಿಯೇ ಇಕ್ಕೋ ಹೇಳಿ.
  ಬೋಸಭಾವನ ಕ೦ಡಿದಿಲ್ಲೆ,ಎಲ್ಲಿದ್ದಾ° ಹೇಳಿ ಹುಡುಕ್ಕೆಕ್ಕಷ್ಟೆ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  [ಒ೦ದು ಹೊಸಾ ಕಲ್ಪನೆ ಗುರಿಕ್ಕಾರ್ರು ಕೊಟ್ಟವು]
  ಗುರಿಕ್ಕಾರ್ರು ಸರಿಯಾದ ಜೆನಕ್ಕೆ ಕಾರ್ಯ ನಿರ್ವಹಿಸಲೆ ಕೊಟ್ಟಿದವು.
  [ಬೋಸಭಾವನ ಕ೦ಡಿದಿಲ್ಲೆ]
  ಭೋಸ ಭಾವ ಮಾವಿನ ಮರದ ಬುಡಲ್ಲಿ ಕೂದೊಂಡು ಕಂಡವು ಇದ್ದವಡ.
  ಅವಂಗೆ ಎಳತ್ತು ಮಾವಿನ ಕಾಯಿಗೆ ಉಪ್ಪು ಮೆಣಸು ಹಾಕಿ ತಿಂಬದು ಹೇಳಿರೆ ಕೊಶೀ ಅಡ!!!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ‘ … ಮಾವಿನ ಮರದ ಬುಡಲ್ಲಿ ಕೂದೊಂಡು ಕಂಡವು ಇದ್ದವಡ.
  ಅವಂಗೆ ಎಳತ್ತು ಮಾವಿನ ಕಾಯಿಗೆ ಉಪ್ಪು ಮೆಣಸು ಹಾಕಿ ತಿಂಬದು ಹೇಳಿರೆ ಕೊಶೀ ಅಡ!!!’ – ಸುಮ್ಮನಲ್ಲ ರಘು ಭಾವನ ಕಣ್ಣಿಂಗೆ ನಾಯಿ ಪುಚ್ಚೆ ಕಾಣದ್ದು.

  ಈಗ ಬಂದಿಕ್ಕೋಳಿ ಶರ್ಮಪ್ಪಚಿ?!!

  VA:F [1.9.22_1171]
  Rating: 0 (from 0 votes)
 3. ಬೋಸ ಬಾವ
  ಬೋಸ...

  ರಘು ಭಾವ.. ಪದ್ಯ ಲಾಕೆ ಆಯಿದು… 😉
  ಆದರೆ.. ಹಟ್ಟಿಲ್ಲಿ ದನ ಕ೦ಡತ್ತಿಲ್ಲೆ ಅನ್ನೆ.. :(

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಯೆ ಬೋಚೊ
  ದನ ಇಪ್ಪ ಪಟ ತೋರ್ಸುಗು ಆತೋ. ಅದು ದನಗಳ ಗುಡ್ಡೆಗೆ ಬಿಟ್ಟಿಪ್ಪಗ ತೆಗೆದ ಪಟ ಅಲ್ಲದೊ ರಘು ಬಾವ

  ಬಾವಾ ಭಾಮಿನಿಗೊ ಹರುಭಜನ್ ಬಲ್ಲೆ ಬಲ್ಲೆ ಹೇಳ್ತ ಹಾಂಗೆ ರೈಸಿದ್ದು..
  ಅಪಾರ್ಥ ಮಾಡೇಡಿ ಬಲ್ಲೆ ಬಲ್ಲೆ ಹೇಳವಾಗ ಕೈ ಯೇವತ್ತು ಮೇಲೆ ಹೇಳಿದ್ದ ಗುಣಾಜೆ ಮಾಣಿ. ಹಾಂಗೆ ಒಂದಕ್ಕೊಂದು ಬಲ ಇದ್ದು ಹೇಳಿದ್ದು..

  [Reply]

  ಬೋಸ ಬಾವ

  ಬೋಸ ಬಾವ Reply:

  {..ಬಲ್ಲೆ ಬಲ್ಲೆ} 😀

  ಇದಾ.. ಬಲ್ಲೆಯೋ???
  ಬಲ್ಲೆತು೦ಬಿದ್ದೊ?? ಅದರ ತೆಗೆಯೆಕು.. ಚೆ೦ದ ಕಾಣೆಕಿದಾ. ಜಾಳು.. 😉

  [Reply]

  VN:F [1.9.22_1171]
  Rating: +1 (from 1 vote)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಕಂಡತ್ತೋ…., ಪ್ರತ್ಯೇಕ ದೆನಿಗೊಲ್ಳದ್ರೆ ಬೋಸನೂ ಬತ್ತಾ ಇಲ್ಲೆ ಇದಾ ಬೈಲಿಂಗೆ!!

  [Reply]

  VA:F [1.9.22_1171]
  Rating: +1 (from 1 vote)
 5. ಬಲ್ನಾಡುಮಾಣಿ

  ರಘುಮಾವನ ಭಾಮಿನಿ ಒಂದರಿ ಓದಿಯಪ್ಪದ್ದೆ ಒಂದು ವಾಹ್! ಹೇಳ್ತ ಉದ್ಗಾರ ಬಿಟ್ರೆ ಬೇರೇನೂ ಹೊಳೆತ್ತಿಲ್ಲೆ.. ಓದಿಸಿಗೊಂಡೇ ಹೋಪ ವಿವರಣೆ, ನವಿರಾದ ಹಾಸ್ಯದೊಟ್ಟಿಂಗೆ ಭಾಮಿನಿಲಿ ತರವಾಡುಮನೆಯ ನೆನಪು ಬಂದದು ಪಷ್ಟಾಯಿದು.. ಮುಂದಾಣ ಕಂತಿಂಗೆ ಕಾದು ಕೂಯ್ದೆ!
  [ನಾಕನೇ ಪ್ಯಾರಲ್ಲಿ ಹೇಳಿದ ಕೂಸಿನ ಬಗ್ಗೆ ವಿವರ ಕೇಳ್ತಾ ಇದ್ದವು ಕೆಲವರು ಬೈಲಿಲಿ.. ಗುಣಾಜೆಮಾಣಿ ಅವನ ಹೆಸರು ಹೇಳುದು ಬೇಡ ಹೇಳಿದ್ದ! 😉 ]

  [Reply]

  ಸುಭಗ

  ಸುಭಗ Reply:

  ಓಯ್.. ಅದು ‘ಶಾಲೆಲಿ’ ಕಲಿವ ಕೂಸು ಮಾರಾಯರೆ! ಹೇಂಗೂ ಐದಾರು ವರ್ಷಕ್ಕೆ ಆಲೋಚನೆ ಇರ. ಅಂತೇ ಮರ್ಳುಕಟ್ಟೆಡಿ..!

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಅದಾ, ಸುಭಗಣ್ಣೋ! ಆನ ಕೇಳಿದ್ದಲ್ಲ! 😉 ಆನು ಇನ್ನುದೆ ಸಣ್ಣ ಮಾಣಿ, :) ಬೈಲಿನ ಜವ್ವನಿಗರು ಕೇಳಿದ್ದು! 😉

  [Reply]

  VN:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘುಮುಳಿಯ Reply:

  ಅ೦ದು ಬದಿಯಡ್ಕಲ್ಲಿ ನುಸಿ ಬಡುದ ತರವಾಡಿಲಿ ಆ೦ಜಿದನೋ ನೋಡೆಕ್ಕಾತು.

  [Reply]

  VA:F [1.9.22_1171]
  Rating: +1 (from 1 vote)
 6. purushothama

  ಹೆಸರು ಹೆಲಿದರೆ ಒಲ್ಲೆಯದಲ್ಲದ

  [Reply]

  VA:F [1.9.22_1171]
  Rating: 0 (from 0 votes)
 7. ಸುಭಗ
  ಸುಭಗ

  ಭಾವಯ್ಯಾ, ಭಾಮಿನಿ ಫಸ್ಟ್ ಕ್ಲಾಸ್ ಆಯಿದು. ಸಾಂಪ್ರದಾಯಿಕ ಜೀವನ ನಡೆಸುವ ಒಂದು ಹವ್ಯಕ ಮನೆಲಿ ಉದಿಯಪ್ಪಗ ನಡೆವ ಚಟುವಟಿಕೆಗಳ ನೈಜ ಚೆಂದದ ಚಿತ್ರಣ. ತರವಾಡು ಮನೆಯ ಪರಿಚಯ ಇಲ್ಲದ್ದವಕ್ಕೂ ಆ ಮನೆ ಹೇಂಗಿಕ್ಕು ಹೇಳ್ತ ಕಲ್ಪನೆಯ ಮಾಡಿಕೊಡುವಷ್ಟು ಸಮರ್ಥವಾಗಿ ಬಯಿಂದು ಭಾಮಿನಿ.

  ಅಕೇರಿಯಾಣ ಚರಣ ಹೆಚ್ಚು ಕೊಶಿ ಕೊಟ್ಟತ್ತು.
  ಮನಃಪೂರ್ವಕ ಅಭಿನಂದನೆಗೊ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಧನ್ಯವಾದ ಸುಭಗ ಭಾವಾ,
  ಎಲ್ಲ ಅಭಿನ೦ದನೆಗೊ ಗುರಿಕ್ಕಾರ್ರಿ೦ಗೆ ಸಲ್ಲೆಕ್ಕು.
  ಸತ್ಯಕ್ಕಾರೆ,ಎನಗೆ ಶುರುವಾಣ ಚರಣ ಬರದಪ್ಪಗ ಮು೦ದುವರಿಸುಲೆ ಧೈರ್ಯಬ೦ದದು.

  [Reply]

  VA:F [1.9.22_1171]
  Rating: +1 (from 1 vote)
 8. ಅರ್ಗೆ೦ಟು ಮಾಣಿ

  ಭಾರೀ ಲಾಯಕ ಆಯ್ದು ಭಾವ ಈ ಭಾಮಿನಿ! ನಿ೦ಗಳ ಭಾವನೆಗಳ ಭಾಮಿನಿಲಿ ಬಹು ಸು೦ದರವಾಗಿ ಚಿತ್ರಿಸಿದ್ದಿ :)
  ಈ ಮನೆ ಮುಳಿಯದ್ದೋ? ಎಲ್ಲೊ ನೋಡಿದ ಹಾ೦ಗಿದ್ದಲ್ದೋ!
  ಗೆ೦ಟ
  http://argentanagentugo.blogspot.com/

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಜಯಗೌರಿ ಅಕ್ಕ°ಶ್ರೀಅಕ್ಕ°ಡಾಮಹೇಶಣ್ಣಪಟಿಕಲ್ಲಪ್ಪಚ್ಚಿಸುಭಗಹಳೆಮನೆ ಅಣ್ಣಪುಟ್ಟಬಾವ°ದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣಬೋಸ ಬಾವಗಣೇಶ ಮಾವ°ಪೆಂಗಣ್ಣ°ಪುಣಚ ಡಾಕ್ಟ್ರುವೇಣೂರಣ್ಣಮುಳಿಯ ಭಾವಜಯಶ್ರೀ ನೀರಮೂಲೆದೊಡ್ಡಮಾವ°ಸುವರ್ಣಿನೀ ಕೊಣಲೆಅನಿತಾ ನರೇಶ್, ಮಂಚಿಕಜೆವಸಂತ°ಕಳಾಯಿ ಗೀತತ್ತೆಉಡುಪುಮೂಲೆ ಅಪ್ಪಚ್ಚಿಶರ್ಮಪ್ಪಚ್ಚಿಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ