ತರವಾಡು ಮನೆಲಿ ಉದಿಯಪ್ಪಗ ಮತ್ತೆ೦ತಾತು?-ಭಾಮಿನಿಲಿ

March 16, 2011 ರ 3:56 pmಗೆ ನಮ್ಮ ಬರದ್ದು, ಇದುವರೆಗೆ 47 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತರವಾಡು ಮನೆ ಜಾಲಿ೦ದ ಒಂದು ನೋಟ
ಮೂಡುದಿಕ್ಕಿಲಿ ಸೂರ್ಯ ಮೂಡೊಗ
ಕಾಡ ಮರಗಳ ಎಡೆಲಿ ಹಾರುವ
ಜೋಡು ಹಕ್ಕಿಗೊ ಆಡಿ ಹೊಸ ಸ೦ಗೀತ ಹಾಡುವಗ
ತೋಡ ನೀರದ ಹರುದು ಜುಳುಜುಳು
ಓಡುತಿಪ್ಪಗಳೇ ಹೊಳೆಗೆ ತರ
ವಾಡು ಮನೆಯೊಳ ನೋಡು ಬಗೆಬಗೆ ಕೆಲಸಕಾರ್ಯ೦ಗೋ

ಹಾ೦ಗೆ… ಉದಿಯಪ್ಪಗ ತರವಾಡು ಮನೆಲಿ  ನೆಡೆತ್ತ ಕಾರ್ಯ೦ಗಳ ನೋಡುಲೆ ಶುರು ಮಾಡಿತ್ತು ನಾವು,ಅಲ್ಲದೋ? ಮು೦ದೆ ನೋಡುವ°, ಬನ್ನಿ.
~~
ಅಜ್ಜ ಜೆಗುಲಿಲಿ ಎಲೆಗೆ ಸುಣ್ಣವ
ರಜ್ಜರಜ್ಜವೆ ಉದ್ದಿಯಪ್ಪಗ
ಅಜ್ಜಿ ಕೇಳಿದವಿ೦ದು ತಾಳಿ೦ಗೇವ ತರಕಾರಿ
ಗೊಜ್ಜಿ ಬೋಳಿನಕೊದಿಲ ಜತೆಯಲಿ
ಗುಜ್ಜೆ ತಾಳಿನ ಸವಿಯುವಾಸೆಲಿ
ಅಜ್ಜಕಾನದ ಭಾವ° ತೋಟಕೆ ಇಳುದವದ ಹಾರಿ
~
ಆಸರಾವುತ್ತೆನಗೆ ಹೇಳುತ
ಕಾಸಿ ನೀರಿನ ಸಣ್ಣ ಚೆ೦ಬಿಲಿ
ಬೋಸಭಾವನು ಕುಡುದು ಹೆರಟನೊ ಕುರುವೆ ಹಿಡುಕೊ೦ಡೂ
ಕಾಸೆಯಾಗದ ಗುಜ್ಜೆ ಕಾ೦ಬಗ
ಆಸೆಗಣ್ಣಿಲಿ ನೋಡಿ ತೋಟಲಿ
ಮೀಸೆಯಡಿ ನೆಗೆಮಾಡಿ ಹಳೆಮನೆಯಣ್ಣ ಬ೦ದವದಾ
~
ಮೆಟ್ಟುಕತ್ತಿಯ ತೆಗದು ಅಕ್ಕನು
ನೆಟ್ಟಿಕಾಯಿಯ ಕೊರವ ರಭಸವ
ಚಿಟ್ಟೆಕರೆಲಿಯೆ ನೋಡುಗದ ಪೊಸವಣಿಕೆ ಚುಬ್ಬಣ್ಣ
ಚುಟ್ಟಿಕಿಟ್ಟಿದ ಕಾವಲಿಗೆ ರಜ
ಹಿಟ್ಟು ಎರೆವಗ ತೆಳ್ಳವಿನ ಹೊಸ
ಸಟ್ಟುಗಿನ ಹಿಡುದೋಡಿ ಬಕ್ಕದ ನಮ್ಮ ನೆಗೆಗಾರ°
~
ಉದಯಕಾಲದಲೆದ್ದ ಭೂಪನು
ಹದದಿ ಹಲ್ಲನು ತಿಕ್ಕಿ ಹೇಳಿದ°
ಉದಯರಾಗವ ಅಟ್ಟು ಉ೦ಬೊಳ ನಲ್ಲೆಯೊಟ್ಟಿ೦ಗೆ
ಬದನೆಯನು ಕೊಯ್ದಾಗಿ ಪಡಿಗೆಲಿ
ಕುದನೆ ಜೊ೦ಕುಳಿ ತು೦ಬುಸಿಯೆ ಪಟ
ಮುದದಿ ತೆಗೆಯೆಕ್ಕೆ೦ದ ಯೇನ೦ಕೂಡ್ಲು ಅಣ್ಣನದೋ
~
ಗೆಡ್ಡ ತೆಗವಲೆ ಕೊಟ್ಟಗೆಲಿ ಹಳೆ
ಬಡ್ಡು ಬಾಳಿನ ಮಸದು ಮೋರೆಯ
ಒಡ್ಡಿ ಕನ್ನಟಿಯೆದುರು ನಿ೦ದವು ಚೆನ್ನಬೆಟ್ಟಣ್ಣ
ಅಡ್ಡ ತಡಮೆಯ ತೆಗದು ದಾ೦ಟಿದ
ದೊಡ್ಡಭಾವನು ಬಡಿಗೆ ಹಿಡಿಯುತ
ಗುಡ್ಡೆ ಹತ್ತಿಯೆ ಹೋಕು ಗಾಡಿಲಿ ವಾಯುವೇಗಲ್ಲಿ
~
(ಇನ್ನೂ ಇಕ್ಕೋ ?)
ತರವಾಡು ಮನೆಲಿ ಉದಿಯಪ್ಪಗ ಮತ್ತೆ೦ತಾತು?-ಭಾಮಿನಿಲಿ, 4.6 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 47 ಒಪ್ಪಂಗೊ

 1. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಭಾರೀ ಲಾಯ್ಕಾಯಿದು ರಘುಅಣ್ಣ.

  [Reply]

  VA:F [1.9.22_1171]
  Rating: 0 (from 0 votes)
 2. ಅಡ್ಕತ್ತಿಮಾರುಮಾವ°

  ತರವಾಡು ಮನೆಯ ಭಾಮಿನಿ ಬಾರೀ ಪಸ್ಟ್ಟಾಯಿದು..ಬಿಡದ್ದೆ 3 ಸರ್ತ್ತಿ ಓದಿದೆ ಓದಿದಸ್ತ್ತು ರುಚಿ ಹೆಚ್ಹುತ್ತನ್ನೆ..ಇನ್ನಾಣದ್ದು ಯಾವಾಗ??ಒಪ್ಪಂಗಳೊಟ್ಟಿಂಗೆ…

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಡ್ಕತ್ತಿಮಾರು ಮಾವನ ಬೈಲಿಲಿ ಕಾಣದ್ದೆ ಸುಮಾರು ದಿನ ಆಗಿತ್ತು.ಗುಜ್ಜೆ ತಾಳಿನ ಹಾ೦ಗಾಯಿದು ಹೇಳಿ ಆತದಾ.

  [Reply]

  VA:F [1.9.22_1171]
  Rating: 0 (from 0 votes)
 3. ಮೋಹನಣ್ಣ

  ಗೆಣಮೆಣಸು ಸಜ್ಜಿ ಮಾಡಿ ಎಲ್ಲ ಆಯಿದು.ಸೌತೆ ಸಾಲು ತೆಗದು ಬಿತ್ತು ಹಾಕಿರಕ್ಕೋ ಹೇಳಿ ಅ೦ದಾಜಿ.ಅದಕ್ಕೊ೦ದಷ್ಟು ಕೆಲಸ ಇದ್ದದ.ಚೆನ್ನಯಿ ಭಾವ ಎನ್ನ ಮಗನೂ ಚೆನ್ನಯಿಲಿಯೇ ಇಪ್ಪದು ವಿಪ್ರೊಲ್ಲಿ ಕೆಲಸ.ಒಪ್ಪ೦ಗಳೊಟ್ಟಿ೦ಗೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಪುಣಚ ಡಾಕ್ಟ್ರುಮಾಷ್ಟ್ರುಮಾವ°ಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಶರ್ಮಪ್ಪಚ್ಚಿದೊಡ್ಡಮಾವ°ನೆಗೆಗಾರ°ದೇವಸ್ಯ ಮಾಣಿಅನು ಉಡುಪುಮೂಲೆಬೊಳುಂಬು ಮಾವ°ನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಬೋಸ ಬಾವವಿನಯ ಶಂಕರ, ಚೆಕ್ಕೆಮನೆಅಕ್ಷರ°ಚೆನ್ನೈ ಬಾವ°ಚೆನ್ನಬೆಟ್ಟಣ್ಣಜಯಶ್ರೀ ನೀರಮೂಲೆತೆಕ್ಕುಂಜ ಕುಮಾರ ಮಾವ°ಅಜ್ಜಕಾನ ಭಾವವಸಂತರಾಜ್ ಹಳೆಮನೆಸಂಪಾದಕ°ದೀಪಿಕಾವೆಂಕಟ್ ಕೋಟೂರುಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ