ತರವಾಡು ಮನೆಲಿ ಮತ್ತೆ೦ತ ಶುದ್ದಿ? – ಭಾಮಿನಿಲಿ

March 29, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಎರಡು ವಾರ೦ದ ತರವಾಡುಮನೆಯ ಜೀವನವ ನೋಡುತ್ತಾ ಇದ್ದಲ್ಲದೋ ನಾವೂ?ತರವಾಡಿಲಿ ನಮ್ಮ ಬೈಲಿನ ಸುಮಾರು ಜೆನ ಒಟ್ಟು ಸೇರಿದ್ದು ಕೊಶಿಯೂ ಆಗಿತ್ತು.ಇ೦ದೂ ಜೆಗುಲಿಕಟ್ಟೆಲಿ ಕೂದ೦ಡು  ಆರೆಲ್ಲ ಬತ್ತವೂ ಹೇಳಿ ನೋಡುವ° ,ಆಗದೋ?
~
ಜೆಗುಲಿಕಟ್ಟೆಲಿ ಮಾಷ್ಟ್ರುಮಾವನು
ಜಗುದು ಎಲೆಯಡಕೆಯನು ಎರಡನೆ
ಮಗನ ಚೋದ್ಯ೦ಗೊಕ್ಕೆ ಉತ್ತರ ಹೇಳಿಯಪ್ಪಗಳೇ
ಅಗಲಕ೦ಬಿಯ ವಸ್ತ್ರ ಸುತ್ತಿದ
ನೆಗೆಯ ಮೋರೆ ಗಣೇಶಮಾವನು
ಹೆಗಲ ಶಾಲಿನ ತಲಗೆ ಮು೦ಡಾಸಾಗಿ ಕಟ್ಟಿದವು
~
ಬಟ್ಟಮಾವನು ಮ೦ತ್ರಪುಸ್ತಕ
ಕಟ್ಟು ಕಿ೦ಕುಳಿನೆಡೆಲಿ ಮಡುಗಿಯೆ
ಗಟ್ಟಿ ಕೂಕಿಲು ಹಾಕಿದವದಾ ತಡಮೆ ದಾ೦ಟುವಗ
ತಟ್ಟಿಕರೆಯಲ್ಲಿಪ್ಪ ದಾಸುವ
ಕಟ್ಟಿಹಾಕುಲೆ ನಾಯಿಸ೦ಕಲೆ
ಮೆಟ್ಟು ಹಾಕಿಯೆ ತಪ್ಪಲೋಡಿದ° ಮಹೇಶಣ್ಣನದೋ
~
ಬೆ೦ದ ಅಶನವ ಇಳುಗಿಯಪ್ಪಗ
ಬ೦ದ ಡಾಗುಟ್ರಕ್ಕರಿ೦ಗದೊ
ಮ೦ದಮಜ್ಜಿಗೆಗಿ೦ಗು ಹಾಕಿಯೆ ಕೊಡುಗು ಶಾ೦ತತ್ತೆ
ತ೦ದ ಚಿತ್ತುಪ್ಪುಳಿಯ ಬಾಗಿಲ
ಸ೦ದಿಯೆಡಕಿಲಿ ಮಡುಗಿ ಚೆ೦ದಕೆ
ಕು೦ದ ಕರೆಲಿ ಶುಬತ್ತೆ ಮಾತಾಡಿದವು ಸೊರ ತೆಗದು
~

ಈಟು ಹೊರುಸಿಯೆ ಪುಟ್ಟಭಾವನು
ತೋಟಕಿಳಿಯುವ ಹೊತ್ತು ಬಾಬುವು
ನೋಟು ಕೇಳುಲೆ ಬ೦ತು ಅಡಕೆಯೆ ಕೊಯ್ದು ಕಳುಶುಗಡ
ಗೋಟುಕಾಯಿಯ ಒಡೆಶಿ ಅಜ್ಜಿಗೆ
ಕಾಟು ಮಾವಿನ ಮೆಡಿಯ ಕೊಯ್ಸೊಗ
ಕೋಟಿ ಹೆರಟಿದು ನೆಡದು ಪಾರೆಯ ಅಜ್ಜಿ ದರ್ಶನಕೆ

~

ತರವಾಡ ಮನೆ ಜಾಲಿಲಿ
ಹವ್ಯಕರ ತರವಾಡಿಲಿಯೆ ವಾ
ಸ್ತವ್ಯ ಮಾಡುವ ಯೋಗವೇ ಭವಿ
ತವ್ಯ ಕಾಲವು ಮು೦ದುವರಿಯಲಿ ಬೈಲ ನೆ೦ಟ್ರಿ೦ಗೆ
ಭವ್ಯ ಭಾಷೆಯ ಕೃಷಿಯ ನೆಡೆಶುತ
ಅವ್ಯಯನ ಸೇವೆಲಿಯೆ ನಿರತವು
ಸವ್ಯಸಾಚಿಗಳಾಗಿರಲಿ ಒಪ್ಪಣ್ಣನೊಟ್ಟಿ೦ಗೆ
~

ಸೂ: ಬೈಲಿನ ಬೆಶಿಬೆಶಿ ಶುದ್ದಿಗೊ ಭಾಮಿನಿಲಿ, ಸದ್ಯಲ್ಲೇ ಇನ್ನೊಂದು ಕಟ್ಟ!

ತರವಾಡು ಮನೆಲಿ ಮತ್ತೆ೦ತ ಶುದ್ದಿ? - ಭಾಮಿನಿಲಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಗಣೇಶ ಮಾವ°

  ವಾವ್ ಸೂಪರ್ ರಘುಮಾವಾ,,

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಗಣೇಶ ಮಾವ° ಮು೦ಡಾಸು ಕಟ್ಟಿದ್ದೂ ಅಷ್ಟೇ ಸುಪರ್ ಆಯಿದನ್ನೇ..

  [Reply]

  VA:F [1.9.22_1171]
  Rating: 0 (from 0 votes)
 2. ವಿನಯ

  ತು೦ಬಾ….ಲಾಯಿಕಾಯಿದು!!

  [Reply]

  VA:F [1.9.22_1171]
  Rating: 0 (from 0 votes)
 3. ಡೈಮಂಡು ಭಾವ

  ಲಾಯಿಕಾಯಿದು

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ
  ಮಹೇಶ

  ರಘು ಅಣ್ಣ,
  ತು೦ಬಾ ಒಳ್ಳೆದಾಯಿದು.
  {ಹವ್ಯಕರ ತರವಾಡಿಲಿಯೆ ವಾಸ್ತವ್ಯ ಮಾಡುವ ಯೋಗ….}
  ಪದ್ಯದ `ಫಲಶ್ರುತಿ’ ಲಾಯಕ ಆಯಿದು. ಮ೦ಗಳ ಪದ್ಯದ ಹಾ೦ಗೆ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಮಹೇಶ,ಮುಗುಶುವ ಕ್ರಮ ಹೇಳಿ ಒ೦ದು ಇದ್ದನ್ನೇ..

  [Reply]

  VA:F [1.9.22_1171]
  Rating: 0 (from 0 votes)
 5. ಭೂಪಣ್ಣ
  ಭೂಪಣ್ಣ

  ಕವನ ತು೦ಬಾ ಲಾಯಿಕ ಆಯಿದು..

  ರಘು ಭಾವಯ್ಯಾ… ಅದೆಲ್ಲ ಅಪ್ಪು…. ನಿ೦ಗಳ ಕೆಮಿಗೆ ಮಾತ್ರ…

  ಈ ಭಾಮಿನಿ ಅಕ್ಕ ಆರು?….

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ಸೂಟೆ,ದಗಣೆ,ದುರ್ದುಂಡಿ ಯೇವುದೋ ಓಂದು ಆಗಿಪ್ಪಲೂ ಸಾಕು. ಒಟ್ರಾಶಿ ಆರು ಕಾಲಿನದ್ದೇ ಆಯೆಕ್ಕು ಹೇಳುಗು ರಘು..
  ಅಲ್ಲ ಭೋಪಣ್ಣ, ನಿಂಗ ಹೇಳಿದ್ದು ಎನ್ನ ಕೆಮಿಗೆ ಕೇಳಿದ್ದಿಲೆ ಆತೋ….

  [Reply]

  VN:F [1.9.22_1171]
  Rating: 0 (from 0 votes)
 6. ಭೂಪಣ್ಣ
  ಭೂಪಣ್ಣ

  ಮುಳಿಯ ಭಾವಯ್ಯಾ…
  ಇನ್ನಾಣ ಭಾಮಿನಿಲಿ ಎನ್ನ ಹೆಸರೂ ಬಕ್ಕೋ ಹೇಳಿ ಕಾದುಗೊ೦ಡಿರುತ್ತೆ..

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಚೆಲ,ಕಳುದ ವಾರವೇ ಭೂಪ ಸಲ್ಲಾಪ ಮಾಡೊದು ಕ೦ಡಿದನ್ನೇ…

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°

  ರಘುಭಾವ°, ತರವಾಡು ಮನೆಯ ಭಾಮಿನಿಯ ಈ ಕಂತುದೇ ಲಾಯ್ಕಲ್ಲಿ ಬಯಿಂದು.

  ಜೆಗುಲಿಲಿ ಮಾಷ್ಟುಮಾವ° ಎಲೆ ತಿಂದುಗೊಂಡು ಸಣ್ಣಮಗನ ಚೋದ್ಯಂಗೊಕ್ಕೆ ಉತ್ತರ ಕೊಡುದು ಸಹಜವಾಗಿ ಬಯಿಂದು. ಆ ಹೊತ್ತಿಂಗೆ ಗಣೇಶಮಾವ° ಬಂದದುದೇ ಲಾಯ್ಕಾಯಿದು.

  ಬಟ್ಟಮಾವ° ಆಚಮನೆ ದೊಡ್ಡಣ್ಣಂಗೆ ಕೂಕಿಲು ಹಾಕಿದ್ದದಡ್ಡ.. ಬೈಕು ಮೇಲಾಣ ಚಡವಿಂಗೆ ತರಲಿ ಹೇಳಿ. :-)

  ದಾಸು ಡಾಮಹೇಶಣ್ಣಂಗೆ ಸಿಕ್ಕುಗೋ ಕಟ್ಟಿಹಾಕುಲೆ!! ಅದಕ್ಕೆ ಒಪ್ಪಣ್ಣನ ಹತ್ತರೆ ಭಾರೀ ಪ್ರೀತಿ.. ಒಪ್ಪಣ್ಣ ದಿನಿಗೆಳಿದರೆ ಸಾಕು ಎಲ್ಲಿದ್ದರೂ ಬಕ್ಕು..

  ಬೆಶಿಲಿಲಿ ಬಂದ ಡಾಗುಟ್ರಕ್ಕೊಗೆ, ಶಾಂತತ್ತೆ ಮಜ್ಜಿಗೆ ಕೊಟ್ಟದು ಲಾಯ್ಕಾಯಿದು. ಬೆಶಿಲಿಂಗೆ ಬಂದ ಬಚ್ಚೆಲು ತಣುದಿಕ್ಕು!!!:-) :-)

  ಕೋಟಿ ಪಾರೆಅಜ್ಜಿಯ ದರ್ಶನ ಮಾಡ್ಲೆ ಹೋಗಿ ಬೈಲಿಂಗೆ ಒಳ್ಳೆದಾಗಲಿ ಹೇಳಿದೇ ಕೇಳಿಗೊಂಡಿಕ್ಕು.. ಬೈಲಿನ ಮೇಲೆ, ಒಪ್ಪಣ್ಣನ ಮೇಲೆ ಅಭಿಮಾನ ಇದ್ದಿದಾ ಅದಕ್ಕೆ!!!

  ರಘು ಭಾವ, ಅಕೇರಿಯಾಣ ಸಾಲುಗಾ ತುಂಬಾ ಚೆಂದಲ್ಲಿ ಬಯಿಂದು. ಅದರಲ್ಲಿ ಬಂದ ಭಾವನೆ ಬೈಲಿನ ಮನಸಾ ಇಷ್ಟ ಪಡುವ ಎಲ್ಲೋರ ಮನಸ್ಸಿನ ಭಾವನೆಯೇ ಹೇಳಿ ಹೇಳುಲಕ್ಕು. ಒಪ್ಪಣ್ಣನ ಮನಸ್ಸಿಲಿಯೂ ಇದೇ ಆಶಯ ಇಪ್ಪದನ್ನೇ!!

  ತರವಾಡು ಮನೆ, ಆ ಮನೆಯ ಬಂಧುಗೊ ಎಲ್ಲೋರೂ ಒಂದೇ ಮನಸ್ಥಿತಿಲಿ ಒಗ್ಗಟ್ಟಾಗಿ ಬೆಳೆಯಲಿ..
  ತರವಾಡು ಮನೆ ಬೆಳಗಲಿ… ಬೈಲು ಬೆಳೆಯಲಿ…

  ಇನ್ನಾಣ ಕಂತುಗಳುದೇ ಒಂದೊಂದೇ ಬರಲಿ….

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಒಪ್ಪಣ್ಣ ದಿನಿಗೆಳಿದರೆ ಸಾಕು ಎಲ್ಲಿದ್ದರೂ ಬಕ್ಕು..
  – ಒಪ್ಪಣ್ಣ ಅದರ ಬಾಳೆ ಬಳ್ಳಿಲಿ ಕಟ್ಟಿ ಹಾಕುತ್ತಡಡೊಯ್. ಎನಗೆಡಿಯಪ್ಪ… ಮೇಗೆ ದಡಮ್ಮೆ ಹತ್ರಂದ ಕೂಕಿಲು ಹಾಕಿ ಕೆಳ ಇಳಿತ್ತದು ಒಳ್ಳೆದು ನಿಂಗೊ ಹೋಪಗ.

  ‘ಮಾಷ್ಟುಮಾವ° ಎಲೆ ತಿಂದುಗೊಂಡು’ – ಎಂತಾರು ಹೊಗೆಸೊಪ್ಪು ಬರ್ಕತ್ತಿಲ್ಲೆ ಹೇಳಿ ಮಾಸ್ಟ್ರುಮಾವ ಪರಂಚಿಯೋಂಡಿರ್ತವಡ.

  ‘ಬಟ್ಟಮಾವ° ಆಚಮನೆ ದೊಡ್ಡಣ್ಣಂಗೆ ಕೂಕಿಲು ಹಾಕಿದ್ದದಡ್ಡ.. ‘ – ಬಟ್ಟಮಾವ ಹೆರಟಪ್ಪದ್ದೆ ದೊಡ್ಡಣ್ಣ ತೋಟಕ್ಕೆ ಇಳಿತ್ತೆಂತಕ್ಕಡಾ?!!

  ‘ಶಾಂತತ್ತೆ ಮಜ್ಜಿಗೆ ಕೊಟ್ಟದು ಲಾಯ್ಕಾಯಿದು’ – ಡಾಗುಟರಕ್ಕ ಹೇಳಿದ್ದವಡ – ಮಜ್ಜಿಗೆನೀರಿಂಗೆ ಗೆಣಮೆಣಸು ಒಗ್ಗರಣೆ ಹಾಕಿರೆ ಅರೋಗ್ಯಕ್ಕೆ ಒಳ್ಳೆದು ಹೇಳಿ.!!

  ‘ಪಾರೆಅಜ್ಜಿಯ ದರ್ಶನ ಮಾಡ್ಲೆ ‘ – ಅವರ ಅನುಭವದ ಎದುರು ನಾವೆಲ್ಲಿ ಹು!

  ‘ಅಕೇರಿಯಾಣ ಸಾಲುಗಾ ತುಂಬಾ ಚೆಂದಲ್ಲಿ ಬಯಿಂದು.’ – ಪ್ರತಿಯೊಂದು ಸಾಲುಗಳನ್ನು ಆಸ್ವಾದಿಸಿದ್ದವಪ್ಪೋ ಈ ಅಕ್ಕ!

  (ಬೇಜಾರ ಮಾಡೆಡಿ , ಇದು ಅಂತೆ ಕೆಣಕ್ಕಿದ್ದು ಆತೋ)

  [Reply]

  ಶ್ರೀಶಣ್ಣ

  ಶ್ರೀಶ.ಹೊಸಬೆಟ್ಟು Reply:

  [– ಒಪ್ಪಣ್ಣ ಅದರ ಬಾಳೆ ಬಳ್ಳಿಲಿ ಕಟ್ಟಿ ಹಾಕುತ್ತಡಡೊಯ್][ ಭಾವಯ್ಯ, ಬಾಳೆ ಬಳ್ಳಿಲಿ ನಾಯಿಯ ಕಟ್ಟಿ ಹಾಕುತ್ತ ಕ್ರಮ ನಿಂಗಳ ಚೆನ್ನೈಲಿ ಇದ್ದಾಯಿಕ್ಕು. ಎಂಗಳ ಊರಿಲ್ಲಿ ಇಲ್ಲೆ. ಪ್ರೀತಿ ಇಪ್ಪ ನಾಯಿಗಳ ಕಟ್ಟದ್ದರೂ ಕಟ್ಟಿದರೂ ಯೆಜಮಾನ ಹೇಳಿದ ಹಾಂಗೆ ಕೇಳ್ತವು.
  [ಮಾಸ್ಟ್ರುಮಾವ ಪರಂಚಿಯೋಂಡಿರ್ತವಡ]- ಅದು ಹೊಗೆ ಸೊಪ್ಪು ಸರಿ ಇಲ್ಲೆ ಹೇಳಿ ಅಲ್ಲ. ಮಕ್ಕೊ ಪೆರಟ್ಟು ಮಾಡಿರೆ ಮಾತ್ರ ಅಡ.
  [ಬಟ್ಟಮಾವ ಹೆರಟಪ್ಪದ್ದೆ ದೊಡ್ಡಣ್ಣ ತೋಟಕ್ಕೆ ಇಳಿತ್ತೆಂತಕ್ಕಡಾ?!!]-ನಿಂಗೊ ಎಂತಕೆ ಹೇಳಿ ಜಾನ್ಸಿದ್ದಿ?
  ಒಳ್ಳೆ ಕೆಲಸಕ್ಕೆ ಹೇಳ್ತಲ್ಲಿ ಸಂಶಯ ಇಲ್ಲೆ. ದೊಡ್ಡಣ್ಣ ಅವು ಎಲ್ಲ ವಿಶಯಲ್ಲಿಯೂ ದೊಡ್ಡ ಅಣ್ಣನೇ.
  [‘ಪಾರೆಅಜ್ಜಿಯ ದರ್ಶನ ಮಾಡ್ಲೆ ‘ – ಅವರ ಅನುಭವದ ಎದುರು ನಾವೆಲ್ಲಿ ಹು]-ನಿಂಗಗೆ ಗೊಂತಿಲ್ಲದ್ದ ಪಾರೆ ಅಜ್ಜಿ ಇವು. ಎಲ್ಲರನ್ನೂ ಪುಳ್ಳಿಯಕ್ಕಳ ಹಾಂಗೆ ಕೊಂಗಾಟ ಮಾಡಿ ಅವರ ಕ್ಶೇಮವ ನೋಡಿಗೊಂಬ ದೈವ.

  [Reply]

  VA:F [1.9.22_1171]
  Rating: +2 (from 2 votes)
  ಮುಳಿಯ ಭಾವ

  ರಘುಮುಳಿಯ Reply:

  ಶ್ರೀ ಅಕ್ಕ,
  ಬೈಲಿನ ಸರ್ವರೂ ಒ೦ದೇ ಮನಸ್ಸಿಲಿ ಒ೦ದೇ ಮನೆಯೋರಾಗಿ ಮು೦ದೆ ನೆಡೆಯೆಕ್ಕು,ಸಮಾಜಮುಖಿಯಾಗಿ ಬೈಲಿನ ಬೆಳೆಸೆಕ್ಕು ಹೇಳುವ ಆಸೆ ಎನ್ನದೂ..ಧನ್ಯವಾದ.

  [Reply]

  VA:F [1.9.22_1171]
  Rating: +2 (from 2 votes)
 8. ಡಾಗುಟ್ರಕ್ಕ°

  ರಘು ಭಾವಾ,ಲಾಯಿಕ್ಕಾಲಿ ಹೇಳಿದ್ದಿ ತರವಾಡು ಮನೆಯ ಶುದ್ದಿ… ತರವಾಡು ಮನೆಗಳಲ್ಲಿ ಹೀಂಗಿಪ್ಪ ಸನ್ನಿವೇಷಂಗೊ ಸಹಜ..ಅಲ್ಲದಾ?ಎಂಗೊ ಇದರ ಮಾತಿಲಿ ಹೇಳುವೆಯ..ಆದರೆ ನಿಂಗೊ ಅದೇ ವಿಷಯಂಗಳ ಭಾಮಿನಿಲಿ ಚೆಂದಕ್ಕೆ ಹೇಳಿದ್ದಿ.ಎಲ್ಲರಿಂಗೂ ಎಡಿಯ ಹೀಂಗೆ ಬರವಲೆ..ನಿಂಗಳ ಭಾಮಿನಿ ಓದಿ ತುಂಬಾ ಖುಷಿ ಆತು.. ಃ)

  [Reply]

  VA:F [1.9.22_1171]
  Rating: +2 (from 2 votes)
 9. ಗಣೇಶ ಪೆರ್ವ
  ಗಣೇಶ

  ರಘುಭಾವಾ ಯಾವತ್ರಾಣ ಹಾ೦ಗೆ ಭಾರೀ ಲಾಯ್ಕಾಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ದೀಪಿಕಾಕಳಾಯಿ ಗೀತತ್ತೆದೇವಸ್ಯ ಮಾಣಿಅಡ್ಕತ್ತಿಮಾರುಮಾವ°ಸುಭಗಅಕ್ಷರದಣ್ಣಬಂಡಾಡಿ ಅಜ್ಜಿದೊಡ್ಡಮಾವ°ಪ್ರಕಾಶಪ್ಪಚ್ಚಿಪುಣಚ ಡಾಕ್ಟ್ರುವಸಂತರಾಜ್ ಹಳೆಮನೆರಾಜಣ್ಣವೆಂಕಟ್ ಕೋಟೂರುಅಜ್ಜಕಾನ ಭಾವಚೆನ್ನೈ ಬಾವ°ಶರ್ಮಪ್ಪಚ್ಚಿವಿದ್ವಾನಣ್ಣದೊಡ್ಮನೆ ಭಾವಬೋಸ ಬಾವಡೈಮಂಡು ಭಾವಪವನಜಮಾವಚೂರಿಬೈಲು ದೀಪಕ್ಕಜಯಶ್ರೀ ನೀರಮೂಲೆಶ್ರೀಅಕ್ಕ°ಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ