ದೀಪ ಹಬ್ಬ

October 23, 2014 ರ 9:49 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓಷಧೀಶನು ಮೂಡೊ ಹೊತ್ತಿಲಿ
ಕಾಸುಲೇಳಿಯೆ ನೀರ ತುಂಬ್ಸುಗು
ಪೂಷ ಮುಳುಗಿದ ಮೇಲೆ, ಶರದದ ಹತ್ತು ಮೂರರೊಳ |
ಮಾಸವಾಶ್ವಿಜ ಬಹುಳ ಪಕ್ಷದೆ
ಭೂಸುತಾರಿಯ ನೆಂಪು ಮಾಡುವ
ದೇಸಿಹಬ್ಬವು ಮನೆಯ ಮಕ್ಕೊಗೆ ಭಾರಿ ಗೌಜಿಯದಾ ||Diwali-Festival

ಬಳ್ಳಿ ಬರೆಗದ ಸೇಡಿಹೊಡಿಲಿಯೆ
ಮುಳ್ಳುಸೌತೆಯ ಹಂಬು ಕಟ್ಟುಗು
ಕೊಳ್ಳಿತುಂಡಿಲಿ ಕಿಚ್ಚು ಹೊತ್ತುಸಿಯೊಲೆಗೆ ಹಾಕುಗದಾ |
ಎಳ್ಳಿನೆಣ್ಣೆಯ ತಲೆಗೆ ಕಿಟ್ಟುಲೆ
ಮಿಳ್ಳೆಸೌಟಿನ ಹಿಡುದು ಬಪ್ಪಗ
ಕಳ್ಳನಾಂಗೆಯೆ ಜಾರಲಬ್ಬೆಯು ಕೆಮಿಯ ಹಿಂಡುಗದಾ ||

ಸಿರಿಯ ದೇವರ ಜಾನ್ಸಿ ಮನಸಿಲಿ
ಗರಿಕೆ ಸಕ್ಕಣ ಸೇರ್ಸಿಯಬ್ಬೆಯು
ಮರದ ಮಣೆಯೊಳ ಕೂರ್ಸಿಯೆಣ್ಣೆಲಿ ಮೈಪಳಂಚುಗದಾ |
ಚೆರಿಗೆ ತುಂಬಿದ ನೀರ ತೋಡಿಯೆ
ಕಿರಿಯ ಮಕ್ಕಳ ತಲೆಗೆಯೆರದಿಕಿ
ನೆರಿಗೆ ಸಿಕ್ಕಿಸಿ ಹಬ್ಬದಡಿಗೆಯ ಮಾಡಿ ಬಡುಸುಗದಾ ||

ಜಾಲನೆಡುಕಿನ ತೊಳಶಿಕಟ್ಟೆಲಿ
ಹಾಲೆಮರದಾ ಬಲಿಯ ಕೂರುಸಿ
ಸೀಳಿಸಲಕೆಯ ಕಟ್ಟಿ ಹೂಗಿನ ಮಾಲೆ ನೇಲುಸುಗು |
ಮೂಲೆಮೂಲೆಲಿ ಸೊಡಲು ನಿಲ್ಲಿಸಿ
ಸಾಲು ಹಣತೆಯ ಬೆಣಚು ತುಂಬುಸಿ
ಕೋಲ ಕಬರಿನ ವಿಷ್ಣುಪಾದದೆ ದೀಪ ಹೊತ್ತುಸುಗು ||

ಕರವ ದನಗೊಕೆ ಪುಟ್ಟು ಕಂಜಿಗೆ
ಸುರಗಿ, ತೊಳಶಿಯ ಮಾಲೆ ಹಾಕುಗು
ಎರದ ತೆಳ್ಳವು ಬಾಳೆಹಣ್ಣಿನ ಕೊಶಿಲಿ ತಿನ್ನುಸುಗು |
ದುರುಸು ಕುಂಡಕೆ ನೆಲದ ಚಕ್ರಕೆ
ಬಿರುಸು ಕಡ್ಡಿಗೆ ಕಿಚ್ಚು ಕೊಟ್ಟರೆ
ಕರಗಿಹೋಕದ ಕಪ್ಪುಕಸ್ತಲೆ ದೀಪಹಬ್ಬಕ್ಕೆ ||

 

(ಚಿತ್ರಕೃಪೆ : ಅ೦ತರ್ಜಾಲ)

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಸಡಗರದ ಹಬ್ಬವ ಬಾರೀ ಲಾಯಕಕೆ ಬರದ್ದಿ ಇ೦ದಿರತ್ತೆ.ಮೇಲಾಗಿ ಸಾಲು ಸಾಲು ದೀಪ೦ಗಳ ಪಟವ ಕಣ್ಣಿ೦ಗೆ ಕಟ್ಟುವಾ೦ಗೆ ಕೊಟ್ಟ ನಿ೦ಗಗೆ ಮನಸಾ ಅಭಿನ೦ದನಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಷ್ಮಿ

  ಮೆರವ ಹಬ್ಬದ ಭಾರಿ ಗೌಜಿಯು
  ಮರದು ಹೋಪದರಿಂದ ಮೊದಲೇ
  ಸೊರುಗಿ ನೀರಿನ ತಲೆಗೆರದ ರೀತಿಲೆ ಹರುದು ಬಂತು I
  ತೊರೆಶಿ ಹಾಲಿನ ಬೆಳೆಶಿ ಕಂಜಿಯ
  ಮರದು ಮೇವಿನ ನಕ್ಕುಗಬ್ಬೆಯು
  ಇರುಳು ಪೂಜೆಲಿ ಕೊರಳ ಮಾಲೆಯ ಕೆರಳಿ ಮೊದಲೆಳಗು II

  ಲಾಯಿಕಾಯಿದತ್ತೆ . ಗೋಪೂಜಗೆ , ದನಗೊಕ್ಕೆ ನೈವೇದ್ಯಕ್ಕೆ ಎಂಗಳಲ್ಲಿ ಚೆಕ್ಕರ್ಪೆ ಕೊಟ್ಟಿಗೆ ಮಾಡುದು .

  [Reply]

  VA:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ

  ವ್ಹಾ ! ಎಂಥ ಸೊಬಗಿನ ಪದ್ಯ!
  ಶಬ್ದ ಸಂಪದ್ಭರಿತ! ವರ್ಣರಂಜಿತ ಪರ್ವ ವರ್ಣನೆ!!

  [Reply]

  VN:F [1.9.22_1171]
  Rating: 0 (from 0 votes)
 4. K M Prasad

  ಎಕ್ಸಲೆಂಟ್ !!. ವೆರಿ ನೈಸ್. ಒಳ್ಳೆ ಪದ್ಯ. ಲಾಯಿಕ್ಕಯಿದು .ಸಾಹಿತ್ಯ, ಶಬ್ಧನ್ಗೋ ಒಳ್ಳೆದಿದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಮಳೆಯ ನೆಡುಕೆಯೆ ಬ೦ದ ದೀಪಾ
  ವಳಿಯ ಹಬ್ಬದ ಗೌಜಿ ಮನಸಿ೦
  ಗಿಳುದು ಕೊಶಿ ಹೆಚ್ಚಾತು ಪದ್ಯದ ಸಾಲುಗಳ ಓದಿ !
  ಕಳುದು ಕಸ್ತಲೆ ಜೀವಜಾಲ
  ಲ್ಲೆಳಕ ಮೂಡಲಿ ಅಬ್ಬೆ ಭಾಷೆಯು
  ಬೆಳದು ಹೊಸ ಎತ್ತರಕೆ ಹಬ್ಬಲಿ ದಿಕ್ಕುಗಳ ದಾ೦ಟಿ !!

  [Reply]

  VA:F [1.9.22_1171]
  Rating: 0 (from 0 votes)
 6. ಶ್ಯಾಮಣ್ಣ
  ಶ್ಯಾಮಣ್ಣ

  ಓಂ ಸ್ವಸ್ತಿ (ಕ)…ಇಂದಿರತ್ತೆಯ ಸುಂದರ ಪದ್ಯವ ಓದಿ ಕುಶಿಯಾತು…

  [Reply]

  VN:F [1.9.22_1171]
  Rating: 0 (from 0 votes)
 7. parvathimbhat
  parvathimbhat

  ಶಾಲಗೆ ಹೋಪಗ ಕುಮಾರವ್ಯಾಸ ಭಾರತ ಕಾವ್ಯ ವಾಚನ ಮಾಡಿದ ಹಾ೦ಗೆ ವಾಚನ ಮಾಡಿ ಖುಷಿ ಪಟ್ಟೆಇಂದಿರೆ .ಲಾಯಿಕ ಆಯಿದು..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಸಂಪಾದಕ°ಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿಕೇಜಿಮಾವ°ಕಜೆವಸಂತ°ಶಾ...ರೀವಿದ್ವಾನಣ್ಣಅಕ್ಷರ°ಗೋಪಾಲಣ್ಣವಿನಯ ಶಂಕರ, ಚೆಕ್ಕೆಮನೆಶುದ್ದಿಕ್ಕಾರ°ಶಾಂತತ್ತೆಬಂಡಾಡಿ ಅಜ್ಜಿನೀರ್ಕಜೆ ಮಹೇಶಬೋಸ ಬಾವಚುಬ್ಬಣ್ಣದೇವಸ್ಯ ಮಾಣಿಸರ್ಪಮಲೆ ಮಾವ°ಪುಟ್ಟಬಾವ°ಡೈಮಂಡು ಭಾವವಾಣಿ ಚಿಕ್ಕಮ್ಮಪುಣಚ ಡಾಕ್ಟ್ರುಪಟಿಕಲ್ಲಪ್ಪಚ್ಚಿಸುಭಗಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ