ದೊಡ್ದರಜೆಯ ನೆನಪು -ಭಾಮಿನಿಲಿ

February 2, 2011 ರ 10:06 amಗೆ ನಮ್ಮ ಬರದ್ದು, ಇದುವರೆಗೆ 43 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೊಡ್ಡರಜೆ ಶುರುವಾತು ನಿನ್ನೆಯೆ
ದೊಡ್ಡಮಾವನು ಬ೦ದವದ ಹೊಸ
ಚಡ್ಡಿಯ೦ಗಿಯ ಸುರುದು ಹೆರಡುವ° ಅಜ್ಜನಾ ಮನೆಗೆ |
ದೊಡ್ಡ ಚೀಲವ ನೇಲುಸಿಯೆ ಮುಳಿ
ಗುಡ್ಡೆ ಹತ್ತಿಳಿಯದ್ದೆ ಸುಲಭದ
ಅಡ್ಡದಾರಿಲಿ ನೆಡದು ಬೀಸಕೆ ಹೋಪ° ಬಾರಣ್ಣಾ ||

ಎತ್ತರದ ಕಶಿ ಮಾವಿನಾಮರ
ಹತ್ತಿ ಕೂಯಿದ° ಭಾವ ಹರುಷದ
ಲತ್ತೆ ಮಕ್ಕಳ ಎದುರುಗೊ೦ಬಲೆ ಮೆಡಿಯ ಕೊಯ್ಯುತ್ತಾ |
ಕೊತ್ತಳಿ೦ಕೆಯು ಚೆ೦ಡುಪುಳ್ಳೆಯು
ಉತ್ತಮದ ಸಾಮಾಗ್ರಿ ಆಡುಲೆ
ಕುತ್ತಕ೦ಡೆಯ ಬೈಲಕರೆಯೇ ನಮ್ಮ ಮೈದಾನ ||

ಗಾಡಿಯಾಟಕೆ ಹಳೆಯ ಚಕ್ರವೆ
ರೂಡಿಯಲ್ಲದೊ ನವಗೆ ತೋಟದ
ತೋಡ ಕರೆಲಿದ್ದನ್ನೆ ಹೊ೦ಡವು ಹಾರಿ ನೀ೦ದೊದಕೆ |
ಆಡಿಬಚ್ಚೊದರೊಳವೆ ಎಲ್ಲರು
ಓಡಿ ಬೀಜದ ಗುಡ್ಡೆ ಹತ್ತುವ°
ಕಾಡ ಕರೆಲಿಯೆ ಮುಳ್ಳಹಣ್ಣಿನ ರಜ್ಜ ರುಚಿ ನೋಡಿ ||

ಕಾಯಿ ಕೊಯ್ವಲೆ ಬಟ್ಯ° ಬಪ್ಪಗ
ನಾಯ ಸ೦ಕಲೆ ಹಿಡುದು ತೋಟಕೆ
ಚಾಯ ಕುಡುದಾದಿಕ್ಕಿ ಹೆರಡುವ° ಎಲ್ಲರೊಟ್ಟಿ೦ಗೆ |
ಆಯನವೆ ದೊಡ್ಡರಜೆ ಸ೦ತಸ
ದಾಯವಳವಲಸಾಧ್ಯ ತಿ೦ಗಳು
ಮಾಯವಪ್ಪದರಿ೦ದ ಮದಲೇ ಆಡಿ ಕೊಶಿಪಡುವ° ||

ರಜೆಯು ಮುಗುದರೆ ಮತ್ತೆ ವರುಷದ
ಸಜೆಯು ಶುರುವಕ್ಕಿನ್ನು ಶಾಲೆಗೆ
ಪಿಜುರಿ ನಿ೦ದರೆ ಹುಳಿಯ ಅಡರಿಲಿ ಪೊಳಿಯು ಬೀಳುಗದಾ |
ಮುಜುಡ° ಹೇಳುಸಿಗೊ೦ಬ ಬದಲಿ೦
ಗುಜುರುವಿನ ತರ ಸಾಗಿ ಜೀವನ
ಮಜಲು ತು೦ಬಲಿ ಬುದ್ಧಿಶಗುತಿಯ ನೀರ ಸುಧೆ ಹರುದು ||

ದೊಡ್ದರಜೆಯ ನೆನಪು -ಭಾಮಿನಿಲಿ , 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 43 ಒಪ್ಪಂಗೊ

 1. ಶಂಕರ ಪಿ. ಎಸ್. ಮಂಗಳೂರು

  ಕೊತ್ತಳಿಂಕೆ,ಚೆಂಡುಪೈಲೆ,ಗಾಡಿಯಾಟಕ್ಕೆ ಹಳೆಯ ಚಕ್ರ,ತೋಟದ ಕರೆಲಿಪ್ಪ ಹಳ್ಳದ ಗಯ,ರಜೆ ಮುಗಿದಪ್ಪಗ ವರುಷದ ಸಜೆ-ಎಲ್ಲವು ಎನ್ನ ಲೈಫ಼ಿನ ಫ಼್ಲಾಶ್ ಬೇಕ್ ಆದ ಹಾಂಗೆ ಆತು.ಇಂದು ಎನ್ನ ಮಕ್ಕೊಗೆ ಈ ರಜೆಗೊ ಬರೇ ಸಜೆಗೊ ಮಾತ್ರ ಆಗಿ ಇದ್ದು.
  ರಘು ಭಾವನ ಭಾಮಿನಿ ನೋಸ್ಟಾಲ್ಜಿಯ ಭಾರಿ ಒಳ್ಳೆಯದಾಗಿ ಬಯಿಂದು,ಬಹುಶಃ ಕೊಂಕ್ರೀಟ್ ಕಾಡಿಲ್ಲಿ ಇಪ್ಪಗ ಈ ತರದ ಲಹರಿಗೊ ಚೆಂದಕೆ ಮೂಡಿಬಪ್ಪದೋ?–ಇನ್ನು ಮೂಡಿಬರಲಿ!!

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಶ೦ಕರಣ್ನಾ, ತನು ಪೇಟೆಲಿ ಮನ ಊರಿಲಿ ಹೇಳುವ ನಿ೦ಗಳ ಮಾತು ನಿಜವೋ ಹೇಳಿ ಕಾಣುತ್ತು..ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಸುಬ್ಬಯ್ಯ ಭಟ್ಟ ವರ್ಮುಡಿ

  ಭಾವನ ಭಾಮಿನಿ ಚೊಕ್ಕ ಆಯಿದು .
  ಸುರುದು
  ಬೀಸ
  ಆಯನ
  ಪಿಜುರಿ
  ಮುಜುಡ°
  ಮಜಲು
  ನೀಂದು
  ಪೊಳಿ
  ಉಜುರು(ಕಣಿ)
  — ಈ ಶಬ್ದಂಗಳ ಬಳಕೆ ಕಡಮ್ಮೆ ಆಯಿದು

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಬಳಕೆ ಕಡಮ್ಮೆ ಆದರೆ ಕು೦ಬಾಗಿ ಮಣ್ಣು ಸೇರುತ್ತು ಅಲ್ಲದೊ ವರ್ಮುಡಿ ಭಾವ?
  ನಾವಾದರೂ ಬಳಸುವ°,ಬೈಲಿ೦ಗೆ ಬಪ್ಪ ನೆ೦ಟ್ರಿ೦ಗೆ ಬಳುಸುವ°,ಆಗದೋ?
  .

  [Reply]

  VA:F [1.9.22_1171]
  Rating: 0 (from 0 votes)
 3. pakalakunja gopalakrishna

  ವಾಹ್ಹ್ !

  ಮುಳಿಯ ಭಾವನ ಮನದ
  ಆಳದಾ ಭಾವ ಬತ್ತದಾ
  ಹೊಳೆಯಾಗಿ ಹರಿದುದು ಇಕ್ಕೆಲಗಳನುತುಂಬಿ !
  ಇಳೆಯಲಿ ಹೊನ್ನ ತೆನೆ
  ಬೆಳೆವಂತೆ ಈ ಪ್ರತಿಭೆ
  ಬೆಳಕ ಕಾಣಲಿ ಸಹೃದಯರ ಶುಭ ಹಾರೈಕೆಗಳಲಿ !!

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಮಾವನ ಎ೦ದಿನ ವಿದ್ವತ್ತಿನ ಹಾರೈಕೆಗೊಕ್ಕೆ ನಮನ.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ನಮ್ಮವು ವರ್ಷ ಹೋದ ಹಾಂಗೆ ನಮ್ಮ ಭಾಷೆಯ ಶಬ್ದಂಗಳ ಉಪಯೋಗ ಕಮ್ಮಿ ಮಾಡುತ್ತಾ ಇದ್ದವು.ತುಂಬಾ ಜನ ಕೃಷಿಂದಲೂ ದೂರ ಆದ ಕಾರಣ ಕೆಲವು ಶಬ್ದ ಉಪಯೋಗ ಆವುತ್ತಿಲ್ಲೆ.
  ಭಾಮಿನಿ ತುಂಬಾ ಚೆಂದ ಆಯಿದು.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಗೋಪಾಲಣ್ಣ,ನಿ೦ಗಳ ಮಾತು ನಿಜ.ಇ೦ಗ್ಲಿಶು ಎಲ್ಲವನ್ನೂ ತಿ೦ದತ್ತೋ ಹೇಳಿ ಸ೦ಶಯ ಬತ್ತು ಒ೦ದೊ೦ದರಿ.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°

  ರಘು ಭಾವ°, ಹಳೆ ನೆನಪ್ಪೆಲ್ಲಾ ಒಂದರಿ ಕಣ್ಣೆದುರು ಬಂತು ಭಾಮಿನಿ ಓದಿ ಅಪ್ಪಗ!!!!
  ನಿಂಗೊ ಹೇಳಿದ ಹಾಂಗೆ ದೊಡ್ಡ ರಜೆ ಹೇಳಿದರೆ ಆಯನವೆ!! ರಜೆಯ ದಿನಂಗ ಉರುಳಿಗೊಂಡಿದ್ದದು ಗೊಂತೇ ಆಯಿಕ್ಕೊಂಡಿತ್ತಿಲ್ಲೆ..
  ಎಷ್ಟು ಕೊಶಿ, ಸಂಭ್ರಮ!!! ಆ ಅನುಭವಂಗ ಎಲ್ಲ ಮನಸ್ಸಿಲಿ ಭದ್ರವಾಗಿ, ಬೆಶ್ಚಂಗೆ ಕೂಯಿದು.

  ಈಗಾಣ ಮಕ್ಕಳ ಗ್ರೆಶುವಾಗ ಅವು ಸುಮಾರು ಕಳಕ್ಕೊಂಡಿದವು ಹೇಳಿ ಆವುತ್ತು. ಮೊದಲು ಅಜ್ಜನ ಮನೆಲಿ ಸೇರ್ಲೆ ಜನ ಎಷ್ಟಿಕ್ಕು ಮಕ್ಕೋ? ಈಗ ಕುಟುಂಬಂಗೋ ಸಣ್ಣ ಆಗಿ, ಮಕ್ಕಳ ಪ್ರಾಯಲ್ಲಿ ವೆತ್ಯಾಸ ಆಗಿ, ಒಂದೇ ಪ್ರಾಯದವ್ವು ಸಿಕ್ಕುತ್ತವಿಲ್ಲೆ, ಒಬ್ಬಂಗೆ ರಜೆ ಇದ್ದರೆ ಇನ್ನೊಬ್ಬಂಗೆ ಇಲ್ಲೆ ಹೇಳ್ತ ಕಾಲ!!!
  ಈ ಒಂದು ವಿಷಯಲ್ಲಿ ನಮ್ಮ ಬಾಲ್ಯದ ಮಧುರತೆಯ ನಮ್ಮ ಮಕ್ಕೊಗೆ ಕೊಡ್ಲೆ ನಾವು ಸೋತತ್ತಾ ಹೇಳಿ ಆವುತ್ತು ಅಲ್ಲದಾ ಭಾವ°?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಕ್ಕಾ, ಮಾತು ನಿಜ.ಕಾಲಕ್ಕೆ ತಕ್ಕ ಕೋಲ ಹೇಳಿ ಆಯಿದನ್ನೇ..

  [Reply]

  VA:F [1.9.22_1171]
  Rating: 0 (from 0 votes)
 6. ಮೋಹನಣ್ಣ

  ಶ್ರೀ ಅಕ್ಕೋ ನೀನು ಹೇಳಿದ್ದು ನೂರಕ್ಕೆ ನೂರೂ ಸತ್ಯ.ಮೊದಲೆಲ್ಲಾ ಒಟ್ಟಿ೦ಗೆ ದೊಡ್ಡ ರಜೆ ಹೇಳಿ ಬೇಸಗೇಲಿ ಎರಡು ತಿ೦ಗಳು ರಜೆ ಸಿಕ್ಕುಗು ಈಗ ಎಲ್ಲಾ ಸೆಮಿಸ್ಟೆರುಗೊ ಒಬ್ಬ೦ಗೆ ರಜೆ ಇದ್ದರೆ ಮತ್ತೊಬ್ಬ೦ಗೆ ರಜೆ ಇಲೆ.ಎಲ್ಲೋರೂ ಸೇರುತ್ತ ಹಾ೦ಗೆ ಜೆ೦ಬ್ರ ಕೂಡಾ ಮದಿಕ್ಕೊ೦ಬಲೆ ಎಡಿತ್ತಿಲ್ಲೆ.ಕಾಲ ಬದಲಿತ್ತಲ್ಲದೊ.ಕೇ೦ಗಿದ್ದರೂ ಕಾಲಾಯ ತಸ್ಮಯಿ ನಮಃ. ಆದರೂ ರಘು ಭಾವನ ಹಾ೦ಗೆ ಒಬ್ಬೊಬ೦ ಹಳೆ ಕಾಲವ ನೆ೦ಪು ಮಾಡಿಯಪ್ಪಗ ಒ೦ದು ಖೊಶಿ ಆವುತ್ತದ.ಒಪ್ಪ೦ಗಳೊಟ್ಟಿ೦ಗೆ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಮಾವ,ಹಳೆ ನೆನಪುಗೊ ಹೊಸ ಸ೦ತೋಷ ಕೊಡುತ್ತು .ಮು೦ದಾಣ ಮಕ್ಕೊಗೆ ಈ ಸ೦ತೋಷದ ದಿನ೦ಗೊ ಸಿಕ್ಕಲಿ ಹೇಳಿ ಹಾರೈಸುವ°.

  [Reply]

  VA:F [1.9.22_1171]
  Rating: 0 (from 0 votes)
 7. ಪುಚ್ಚಪ್ಪಾಡಿ ಮಹೇಶ

  ಲಾಯ್ಕ ಆಯ್ದು ಮುಳಿಯ ಅಣ್ಣ. .:)

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಪುಚ್ಚಪ್ಪಾಡಿ ಮಹೇಶ ಭಾವ೦ಗೆ ಸ್ವಾಗತ ಮತ್ತೆ ಧನ್ಯವಾದ,ಒಟ್ಟಿ೦ಗೆ..

  [Reply]

  VA:F [1.9.22_1171]
  Rating: 0 (from 0 votes)
 8. ರಾಜಣ್ಣ

  ಭಾವಯ್ಯ ನಿಂಗ ಇದರ ಪೋಸ್ಟ್ ಮಾಡಿದ ದಿನಂದ ದಿನಕ್ಕೆ ನಾಲ್ಕು ಸರ್ತಿ ಓದುತ್ತ ಇದ್ದೆ….ಓದಿಗೊಂಡು ಹೋಪಗ ಹಳತ್ತು ಎಲ್ಲ ನೆನಪ್ಪಾಗಿ ಖುಷಿ ಆಉತ್ತು…… ಹಿಂಗಿಪ್ಪದು ಇನ್ನುದೆ ಬರಲಿ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ರಾಜಣ್ಣ, ಎನಗೆ ಬರವಗ ಆದ ಅನುಭವ ನಿ೦ಗೊಗೆ ಓದೊಗ ಸಿಕ್ಕಿರೆ ಆನು ಧನ್ಯ.ನಿ೦ಗಳ ಪ್ರೋತ್ಸಾಹಕ್ಕೆ ಧನ್ಯವಾದ.ಇನ್ನೂ ಪ್ರಯತ್ನ ಮಾಡ್ತೆ.

  [Reply]

  VA:F [1.9.22_1171]
  Rating: 0 (from 0 votes)
 9. ಚುಬ್ಬಣ್ಣ

  ರಘು ಅಣ್ಣ, ಭಾರಿ ಲಾಯಕಿಲಿ ಬರದ್ದಿ.ಎನ್ನ ಅಜ್ಜನ ಮನೆ ನೆ೦ಪಾತು ಒ೦ದಾರಿ.. :) ಸಣ್ಣಾಗಿಪ್ಪಗ ಮಾಡಿದ ಲೂಟಿ, ಅಜ್ಜ೦ದ್ರಿ೦ಗೆ ಕೊಟ್ಟ ಕಾಟ, ಎಲ್ಲಾವೂ ಒ೦ದಾ ಕಣ್ಣ ಮು೦ದೆ ಬೊ೦ತು.ಧನ್ಯವಾದ೦ಗೊ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅದಾ..ಚುಬ್ಬಣ್ಣ ಜೋರಿತ್ತಿದ್ದ° ಹೇಳಿ ಆತದಾ.ನಮ್ಮ ಅಜ್ಜ೦ದ್ರೂ ಸ೦ತೋಷಲ್ಲಿ ಸಹಿಸಿಗೊ೦ಡು ಇತ್ತಿದ್ದವನ್ನೇ..

  [Reply]

  VA:F [1.9.22_1171]
  Rating: 0 (from 0 votes)
 10. ಸುಭಗ
  ಸುಭಗ

  ಬಲು ಸಮರ್ಥರು ನಿಜಕು ನಿಂಗಳೆ-
  ಒಲುಸಿಗೊಂಡಿದಿ ಬೊಮ್ಮನರಸಿಯ!
  ಕಲಶ ಮಡುಗಿದಿಯದರ ಮುಡಿಗೆ ಸುಲಲಿತ ಭಾಮಿನಿಲಿ
  ಕಲುಶಿ ಕೊಡುವಿರೊ ಭಾವ ಎಂಗೊಗು
  ಬಳಸಿ ಹವ್ಯಕ ಪದಂಗಳನ್ನೆ
  ಕಲಸಿ ಚೊಕ್ಕಕೆ ಕಾವ್ಯ ಕಟ್ಟುವ ಕೆಣಿಯ ಅನುನಯಲಿ? 😉

  [Reply]

  VN:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆವೇಣೂರಣ್ಣಅಕ್ಷರದಣ್ಣಅನಿತಾ ನರೇಶ್, ಮಂಚಿವಿದ್ವಾನಣ್ಣಪುಟ್ಟಬಾವ°ದೊಡ್ಡಮಾವ°ಡಾಮಹೇಶಣ್ಣಮಾಲಕ್ಕ°ಶುದ್ದಿಕ್ಕಾರ°ಮಾಷ್ಟ್ರುಮಾವ°ಒಪ್ಪಕ್ಕದೊಡ್ಡಭಾವಅಕ್ಷರ°ಪವನಜಮಾವವಿಜಯತ್ತೆಚೂರಿಬೈಲು ದೀಪಕ್ಕಪೆಂಗಣ್ಣ°ಕಾವಿನಮೂಲೆ ಮಾಣಿಸಂಪಾದಕ°ಪುತ್ತೂರಿನ ಪುಟ್ಟಕ್ಕಪ್ರಕಾಶಪ್ಪಚ್ಚಿಗಣೇಶ ಮಾವ°ಜಯಗೌರಿ ಅಕ್ಕ°ರಾಜಣ್ಣಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ