ನಂಬುಗೆ – ಹುಂಡುಪದ್ಯ

ಒಪ್ಪಣ್ಣ-ಒಪ್ಪಕ್ಕಂದ್ರಿಂಗೆ ಬೇಕಾಗಿ ಇಪ್ಪದಿದು. ಕನ್ನಡಲ್ಲಿ ಬರದ್ದದರ ನಮ್ಮ ಭಾಷೆಗ ತಪ್ಪಲೆ ರಜ್ಜ ಕಷ್ಟವೇ.
– ಬೊಳುಂಬು ಕೃಷ್ಣಭಾವ°

ನಂಬುಗೆ – ಹುಂಡುಪದ್ಯ

ನಂಬೆಕ್ಕು ಆದಿಯೊಳು, ಪರಮ ಚೇತನ ವಿಭುವ
ಲೋಕವಾ ಸೃಷ್ಟಿಸಿದ ಪರದೈವವ

ತಾನು ತಾನಲ್ಲದ್ದ, ತಾನೆ ತಾನಾಗಿಪ್ಪ
ತನಗೆ ಮಿಗಿಲಿಲ್ಲದ್ದ ಅಧಿದೈವವ

ಎಲ್ಲವನು ಒಳಗೊಂಡ, ಎಲ್ಲದರ ಹಿಡಿವಡೆದ
ಎಲ್ಲದಕು ಮಿಗಿಲಾದ ಚೈತನ್ಯವ

ತಿರುತಿರುಗಿದಾ ಬುಗರಿ, ತಿರುಗಿ ತಿರೆಗುರುಳಿದರೆ
ತಿರಿದುದರ ತಿರುಗುಸುವ ವೈಚಿತ್ರ್ಯವ

ಎಲ್ಲದಕು ಎತ್ತರದ, ಆದಿಅಂತ್ಯಗಳಿರದ
ಎಲ್ಲರೊಳು ನೆಲೆಸಿಪ್ಪ ಆನಂದವ

ರೂಪಗಳ ಮೀರಿಪ್ಪ, ರೂಪಲ್ಲೆ  ಮೈದೋರ್ವ
ಕಾಲದೇಶಗಳಿರದ ಬ್ರಹ್ಮಾಂಡವ

ಬೇಡಿಗೊ೦ಬಾ೦ಗಿಲ್ಲೆ, ನೂರು ವರಗಳ ಕೃಪೆಯ
ಮೂರುಮೂರರೊಳು ಕಾಣ್ಗೆ ಬಲ್ಲಱವನು

ಬೊಳುಂಬು ಕೃಷ್ಣಭಾವ°

   

You may also like...

10 Responses

 1. ಭಾವಯ್ಯನ ಜನುಮದಿನದಂದು ಬೈಲಿಂಗೆ ಭಾವಯ್ಯನ ಕೊಡುಗೆ ಈ ಹುಂಡುಪದ್ಯ ಆಯ್ಕು ಅಲ್ದಾ.

  ಭಾವಯ್ಯ., ಜನುಮದಿನದ ಶುಭಾಶಯಗಳು.

  ನಂಬುಗೆ ತುಂಬಾ ಲಾಯಕ ಆಯ್ದು ಭಾವ. ಅಭಿನಂದನೆಗೊ.

  • ಕೊರೆಂಗು ಭಾವ° says:

   ಭಾವ,
   ಕೊರೆಂಗು ಭಾವನ ಜನ್ಮದಿನಕ್ಕೆ ಒಪ್ಪಣ್ಣನ ಕೊಡುಗೆ ಇದು. ಧನ್ಯವಾದಂಗೊ.

 2. ತೆಕ್ಕುಂಜ ಕುಮಾರ ಮಾವ° says:

  ಕನ್ನಡಂದ ಹವಿಕನ್ನಡಕ್ಕೆ ತಪ್ಪದು ಕಷ್ಟದ ಕೆಲಸವೇ. ಆದರೂ “ತಾನು ತಾನಲ್ಲದ್ದ,ತಾನೆ ತಾನಗಿಪ್ಪ…” ಹೇಳುವಲ್ಲಿ ಅನುವಾದ ತುಂಬ ಚೆಂದಕ್ಕೆ, ಪ್ರಾಸವ ಮಡಿಕ್ಕೊಂಡು ತಂದದು ಒಳ್ಳೆ ಪ್ರಯತ್ನ. “ತಿರು ತಿರುಗಿದಾ ಬುಗರಿ..’ ಮೇಲ್ನೋಟಕ್ಕೆ ಕನ್ನಡ ಹೇಳಿ ಅನಿಸಿದರೂ, ಹವಿಕನ್ನಡ ಹೇಳಿಯೇ ತೆಕ್ಕೊಂಬಲೆ ಏನೂ ಅಡ್ಡಿ ಇಲ್ಲೆ. ಬಹುಶಃ ಹೀಂಗೆ ಮಾಡಿದು ನಮ್ಮ ಭಾಷಾ ಸಾಹಿತ್ಯ ಬೆಳವಲೆ ಸಹಕಾರಿ ಅಕ್ಕು ಹೇಳಿ ಎನ್ನ ಅನಿಸಿಕೆ.
  ಚೆಂದದ ಪದ್ಯ.

  • ಕೊರೆಂಗು ಭಾವ° says:

   ಧನ್ಯವಾದಂಗೊ ಮಾವ.
   ಒಪ್ಪಣ್ಣನ ಭಾಷೆಲಿ ಬರವಲೆ ಬಙ್ಙ ತುಂಬ ಇದ್ದು. 🙂
   ಕೊರೆಂಗು ಭಾವ°

 3. ಗೋಪಾಲ ಬೊಳುಂಬು says:

  ಪುಳ್ಳಿಯ ಪದ್ಯ ಚೆಂದಕೆ ಪ್ರಾಸಬದ್ದವಾಗಿದ್ದು ಎಲ್ಲೋರು ನಂಬುತ್ತಾ ಇಪ್ಪ ದಿವ್ಯ ಚೇತನವ ವರ್ಣಿಸಿದ್ದು ಲಾಯಕಾಯಿದು. ಹವ್ಯಕ ಭಾಷೆಂದ ತುಂಬಾ ಹೆರ ಬಂದ ಹಾಂಗೆ ಕಂಡತ್ತಿಲ್ಲೆ. ಬೈಲಿಲ್ಲಿ ಹವ್ಯಕ ಭಾಷೆಲೇ ಬರವಲೆ ಪ್ರಯತ್ನ ಪಟ್ಟದು ತುಂಬಾ ಕೊಶಿ ಕೊಟ್ಟತ್ತು. ಪುಳ್ಳಿಗೆ ಹುಟ್ಟು ಹಬ್ಬದ ಶುಭಾಶಯಂಗಳ ಒಟ್ಟಿಂಗೆ ಅಭಿನಂದನೆಗೊ.

 4. ಕೊರೆಂಗು ಭಾವ° says:

  ಧನ್ಯವಾದಂಗೊ ಮಾವ.
  ನಿಂಗೊ ಪ್ರೋತ್ಸಾಹ ಕೊಡುವದು ನೋಡಿಯರೆ ಪುಳ್ಳಿಗೆ ಇನ್ನೂ ಬರವಲೆ… 🙂
  ಕೊರೆಂಗು ಭಾವ°.

 5. ಶರ್ಮಪ್ಪಚ್ಚಿ says:

  ಪದ್ಯ ಲಾಯಿಕ ಆಯಿದು.
  ಎಲ್ಲದಕು ಮಿಗಿಲದ ಚೈತನ್ಯವ ನಂಬೆಕ್ಕು ಹೇಳಿದ್ದು ತುಂಬಾ ಕೊಶಿ ಆತು.
  ಕನ್ನಡಂದ ನಮ್ಮ ಭಾಷೆಗೆ ತಪ್ಪಲ್ಲಿ ಸಫಲತೆ ಸಿಕ್ಕಿದ್ದು.

 6. ಕೊರೆಂಗು ಭಾವ° says:

  ಧನ್ಯವಾದಂಗೊ ಅಪ್ಪಚ್ಚಿ.
  -ಕೊರೆಂಗು ಭಾವ°.

 7. ಕೆ.ಜಿ.ಭಟ್ says:

  ಪದ್ಯ ಲಾಯಕ್ಕಾಯಿದು.

 8. ಕೊರೆಂಗು ಭಾವ° says:

  ಧನ್ಯವಾದಂಗೊ ಮಾವ.
  -ಕೊರೆಂಗು ಭಾವ°.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *