ನಮ್ಮ ಸರ್ವ ಸ್ವಾತಂತ್ರ್ಯ

August 13, 2010 ರ 2:33 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಿಕ್ಕಿದ್ದು ಜನರಿಂಗೆ ಸರ್ವ ಸ್ವಾತಂತ್ರ್ಯ
ಎಲ್ಲ ಕಡೆಲಿಯುದೆ ಸ್ವಾಹಾ-ತಂತ್ರ
ಯಂತ್ರ, ಮಂತ್ರಗಳಿಂದ ಜನತೆ ಅತಂತ್ರ
ಗುರುವಿಂಗೆ ತಿರುಮಂತ್ರ ಕಾಲೆಳೆತ್ತ ತಂತ್ರ |

ಐಟಿ ಬಿಟಿ ಕೋಟಿಲಿ ಮೆರೆತ್ತವು ಒಂದು ಕಡೆ
ಚೀಟಿ ರೋಟಿ ನಾಟಿಲಿ ಮರೆತ್ತವು ಈ ಕಡೆ
ಸರಕಾರಿ ಕಡತಲ್ಲಿ ಆರ್ಥಿಕ ಹಿನ್ನಡೆ
ಸ್ವಂತ ವಹಿವಾಟಿಲ್ಲಿ, ಮುನ್ನಡೆ, ಎಲ್ಲೆಡೆ |

ನೆರೆ, ನೆಲ, ಬರ, ಜ್ವರಕ್ಕೆ ಕೋಟಿ ಪರಿಹಾರ
ಮೆರೆವಲೆ ಹಿಂಬಾಲಕರಿಂದ ನೋಟಿನಾ ಹಾರ
ಬಾಯಿಲಿ ಬಡಿವಾರ, ಎಲ್ಲ ಕಾಟಾಚಾರ
ಜನಕ್ಕಿಲ್ಲೆ ಆಹಾರ, ಬರೀ ಹಾಹಾಕಾರ |

ಅಂದು ದೇಶ ಪ್ರೇಮಲ್ಲಿ ದಂಡಿ ಪಾದಯಾತ್ರೆ
ಇಂದು ಬಲು ಪ್ರಚಾರಕ್ಕಾಗಿ ಬರಿ ದಂಡ ಯಾತ್ರೆ
ಪ್ರತಿಯೊಂದು ವಿಷಯಕ್ಕು ವಿದೇಶ ಯಾತ್ರೆ
ಬಡಜನರಿಂಗೆಲ್ಲಾ ಚಿಕಂಗುನ್ಯ ಮಾತ್ರೆ,  ಉಚಿತವಾಗಿ ಕೊಡುತ್ತವು ಕೈಗೆ ಭಿಕ್ಷಾ ಪಾತ್ರೆ |

ಡೈವೋರ್ಸು, ಕೊಲೆ ದರೋಡೆ ಸಾಮಾನ್ಯ ವಿಷಯ
ವಿಷಯದಾಸಕ್ತಿಲಿ ನೆಡೆತ್ತ ವರದಿ ಹಸಿ ಬಿಸಿಯ
ಮನದಣಿಯೆ ತೋರುಸುಗು ದಿನನಿತ್ಯ ಹುಸಿಯ
ಜೆನಂಗೊಕ್ಕೆ ಬೇಕಲ್ದ ಖಾದ್ಯ ರುಚಿ ರುಚಿಯ |

 

ಇನ್ನೂ ಬರೆತ್ತರೆ ತುಂಬಾ ವಿಷಯಂಗೊ ಇದ್ದು. ಸದ್ಯಕ್ಕೆ ಇಷ್ಟು ಸಾಕು.    ನಿಂಗಳ ವಿಮರ್ಶೆಗೆ ಸ್ವಾಗತ.

ಬೈಲಿಲ್ಲಿಪ್ಪ, ಬೈಲಿಂದ ಹೆರ ಇಪ್ಪ ಎಲ್ಲೋರಿಂಗು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಂಗೊ.

ಗೋಪಾಲ ಮಾವ ಬೊಳುಂಬು

 

ನಮ್ಮ ಸರ್ವ ಸ್ವಾತಂತ್ರ್ಯ, 4.5 out of 10 based on 4 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಅನುಶ್ರೀ ಬಂಡಾಡಿ

  ಓಹ್! ಭಾರೀ ಲಾಯ್ಕಾಯಿದು ಬೊಳುಂಬುಮಾವ. ನವಗೆ ಸ್ವಾತಂತ್ರ್ಯ ಸಿಕ್ಕಿರೂ ಟೊಪ್ಪಿ ಹಾಕಿದ(ಕುವ)ವರ ಪರತಂತ್ರವೇ ಮೆರೆತ್ತಾ ಇಪ್ಪದು. :-(
  ಅರ್ಥಪೂರ್ಣವಾಗಿ, ಪ್ರಾಸಬದ್ಧವಾಗಿ ಬರದ್ದಿ. ಇನ್ನುದೇ ಬರೆರಿ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಬೊಳುಂಬು ಮಾವಾ.. (ಬೇಜಾರಾದರೂ) ಲಾಯಿಕ್ಕಾಯಿದು. ಎರಡು ಸಾಲು ಎನ್ನದು ಸೇರುಗು..

  ಬೆಳಿಚರ್ಮದವು ಬಿಟ್ಟುಕೊಟ್ಟಪ್ಪಗ ದೇಶ
  ಸಿಕ್ಕಿತ್ತು ನಮ್ಮ ಲೀಡರುಗೊಕ್ಕೆ ಕೋಶ
  ಕಟ್ಟುತ್ತವು ದಿನವು ಹೊಸಹೊಸ ವೇಷ
  ಬೇಕಾರೆ ನೋಮ್ಪಾಗಿ ಬೋಳಿಸಿ ಕೇಶ

  ಓಟಿನ ನೋಟಿನ ಗೌಜಿಯು ಇದ್ದು
  ಹಂಚುಗು ತೀರ್ಥದ ಕುಪ್ಪಿಯ ಕದ್ದು
  ಎಲ್ಲ ರೋಗಗಳಿನ್ಗು ಒಂದೇ ಮದ್ದು
  ಬಡವನ ಹೊಟ್ಟೆಗೂ ಬೆನ್ನಿಂಗು ಗುದ್ದು

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಬೊಳುಂಬು ಭಾವನ ಪದ್ಯ ಎಂತ ಬತ್ತಿಲ್ಲೆ ಹೇಳಿ ಜಾನ್ಸಿಂಡು ಇತ್ತಿದ್ದೆ. ಬರವಲೆ ಈಗ ಸ್ವಾತಂತ್ರ್ಯ ಸಿಕ್ಕಿತ್ತೋ?
  ಲಾಯಿಕ್ ಆಯಿದು. ಹೀಂಗಿಪ್ಪ ಬಾಣಂಗೊ ಬರಲಿ ಇನ್ನೂದೆ.

  [Reply]

  VA:F [1.9.22_1171]
  Rating: +1 (from 1 vote)
 4. ಬಲ್ನಾಡುಮಾಣಿ

  {ಸರಕಾರಿ ಕಡತಲ್ಲಿ ಆರ್ಥಿಕ ಹಿನ್ನಡೆ
  ಸ್ವಂತ ವಹಿವಾಟಿಲ್ಲಿ, ಮುನ್ನಡೆ, ಎಲ್ಲೆಡೆ}

  ಸತ್ಯವಾದ ಮಾತು ಮಾವ.. ಎಲ್ಲಾ ರಾಜಕಾರಣಿಗಳ ಆಸ್ತಿ ಬೆಳದ್ದು ನೋಡಿರೆ, 100%, 200% ಬೆಳವಣಿಗೆ(growth) ಕಾಣ್ತು. ನಮ್ಮ ದೇಶದ್ದು ಮಾತ್ರ 10% ಕೂಡ ದಾಂಟುತ್ತಿಲ್ಲೆ !! ದೇಶದ ವಾಸ್ತವಕ್ಕೆ ಅತಿ ಹತ್ರಾಣ ಚಿತ್ರಣ ನಿಂಗಳ ಪದ್ಯಲ್ಲಿ ಕಂಡತ್ತು.. ಪಷ್ಟಾಸಾಯಿದು ಮಾವ… :)

  [Reply]

  VA:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ಬೊಳುಂಬುಮಾವಾ°..
  ಮಾತ್ರೆ, ಲಘು, ಗುರು, ಪ್ರಾಸ – ಎಲ್ಲವೂ ಬಪ್ಪ ಹಾಂಗೆ ಚೆಂದಕೆ ಬರದ್ದಿ.
  ಕೊಶೀ ಆತು.

  ಇನ್ನೂ ಬರೆಯಿ, ಚೆಂದ ಆಯಿದು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಬೊಳುಂಬು ಮಾವ°ಹಳೆಮನೆ ಅಣ್ಣಪೆಂಗಣ್ಣ°ವಸಂತರಾಜ್ ಹಳೆಮನೆಮಾಲಕ್ಕ°ದೀಪಿಕಾವೆಂಕಟ್ ಕೋಟೂರುತೆಕ್ಕುಂಜ ಕುಮಾರ ಮಾವ°ಪೆರ್ಲದಣ್ಣಶೇಡಿಗುಮ್ಮೆ ಪುಳ್ಳಿಕಳಾಯಿ ಗೀತತ್ತೆಬಂಡಾಡಿ ಅಜ್ಜಿರಾಜಣ್ಣಚುಬ್ಬಣ್ಣವೇಣೂರಣ್ಣಶರ್ಮಪ್ಪಚ್ಚಿನೀರ್ಕಜೆ ಮಹೇಶವಾಣಿ ಚಿಕ್ಕಮ್ಮದೊಡ್ಮನೆ ಭಾವದೇವಸ್ಯ ಮಾಣಿಶ್ಯಾಮಣ್ಣಪುತ್ತೂರುಬಾವಡಾಮಹೇಶಣ್ಣಸರ್ಪಮಲೆ ಮಾವ°ವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ