ಪ್ಲಾಸ್ಟಿಕ್ ಭೂತ !

ಎಲ್ಲೋರ ಪ್ರೀತಿಯ ಆಧುನಿಕ ಭೂತ

ಎಲ್ಲ ಕಡೆಲಿಯು ಅದು ಬಹಳ ಕುಖ್ಯಾತ

ನೀರಲ್ಲಿ ಸಾಯದು, ಕೊಳೆತುದೆ ಹೋಗದು

ಕೊಳ್ಳಿ ಮಡಗಿದರೆ ವಿಷದನಿಲ ಬಿಡುಗದು  |

 

ಮೂಕ (mooka) ಪ್ರಾಣಿಗೊ ಇದರ ಗಬಗಬನೆ ತಿಂದು

ಹೊಟ್ಟೆ ಉಬ್ಬರುಸೆಂಡು ಇಕ್ಕು ಎಂದೆಂದು

ಹೊಟ್ಟೆಯ ಬಗದು ಹೆರ ಬಪ್ಪಲೂ ಹೇಸ

ಊರಿನ ಸೌಂದರ್ಯ ಇವನಿಂದ ನಾಶ |

ಎಲ್ಲೆಂದರಲ್ಲಿ ಪ್ಲಾಸ್ಟಿಕ್ಕಿನಬ್ಬರ

ಆಗನವ ಕೃಷಿಕರಿಗೆ ಉಪಯುಕ್ತ ಗೊಬ್ಬರ

ಮಳೆಯ ಇಂಗಲು ಬಿಡದ ಚಿರಾಯು ಈ ಅಸುರ

ನೆಡೆಕೀಗ ಅದರೆದುರು ಭಯಂಕರ ಸಮರ |

ಬೊಳುಂಬು ಮಾವ°

   

You may also like...

7 Responses

 1. ಲಾಯ್ಕಾಯಿದು ಮಾವ. ನಮ್ಮ ಪೂರ್ತಿ ಆವರುಸಿಗೊಂಡಿಪ್ಪ ಈ ಪ್ಲಾಸ್ಟಿಕ್ಕಿನ ಭೂತವ ಓಡ್ಸುದು ರಜ ಬಂಙವೇ. ನಿಂಗ ಹೇಳಿದಾಂಗೆ ಎಲ್ಲೊರು ಸೇರಿ ಸುರು ಮಾಡುವ ಒಂದು ಸಮರ.

 2. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಗೋಪಲ ಮಾವನ ಚುಟುಕುಗೊ ಲಾಯಿಕ ಆಯಿದು.
  ಪ್ಲಾಸ್ಟಿಕ್ ಉಪಯೋಗದ ಬಗ್ಗೆ ಈಗ ಆದರೂ ಜೆನಂಗಳಲ್ಲಿ ಜಾಗೃತಿ ಮೂಡಿದರೆ, ಮುಂದಾಣ ಪೀಳಿಗೆಯವಕ್ಕೆ ಈ ಭೂಮಿ ಉಪಯೋಗಕ್ಕೆ ಸಿಕ್ಕುಗು.

 3. raghumuliya says:

  ಕವನ ತುಂಬಾ ಅರ್ಥಪೂರ್ಣ ಆಗಿದ್ದು ಮಾವಾ.
  ಈ ಭೂತಕ್ಕೆ ದಿನವೂ ಕೋಲ,ನೇಮ. ನಾವು ಸಮರವನ್ನೇ ಮಾಡೆಕ್ಕಾದ ಸ್ಥಿತಿ ಬೈಂದು,ಈ ಪ್ಲಾಸ್ತಿಕ್ಕಾಸುರನ ಎದುರು !!

 4. Krishnamohana Bhat says:

  ee bhuthake baarane raja doddake aayeku janango koduthavu adu tekkoluttu.mattentara bhutha adara kelasa maaduttu.estadaru adu bhutha allado?barane koduvaaga raja kai hiditha madagiyondre navagu namma santatigokku olledu.Bolumbu mavana kavithage Jai.oppangalottinge.

 5. ಮಾವಾ°..
  ಪ್ಲೇಷ್ಟಿಕಿನ ತೊಂದರೆಗಳ ವಾಕ್ಯ ವಾಕ್ಯಲ್ಲಿ ಸೇರುಸೆಂಡು, ಚೆಂದಕೆ ವಿವರುಸಿದ್ದಿ.
  ಪ್ರಾಸಬದ್ದವಾದ ಬರವಣಿಗೆ ಓದುವಗ ಕೊಶಿಯೂ ಆವುತ್ತು – ವಸ್ತು ಕಂಡಪ್ಪಗ ಬೇಜಾರವೂ ಆವುತ್ತು!

  ಮಾವಾ°, ಶುದ್ದಿ ಚಿಕ್ಕದಾಗಿ-ಖಾರ ಆಯಿದು, ಗಾಂಧಾರಿ ಮೆಣಸಿನ ಹಾಂಗೆ! ತುಂಬಾ ಲಾಯಿಕಾಯಿದು!
  ಪ್ಲೇಷ್ಟಿಕಿನ ಎದುರು ಒಂದು ಸಮರ ಸುರು ಆಗಲಿ, ನಾವೆಲ್ಲರೂ ಸೇನಾನಿಗೊ ಅಪ್ಪ°.

 6. ಗೋಪಾಲ ಮಾವ°ನ ಕವನ ಕೊಶಿ ಆತು. ಅಂದು ಒಂದಾರಿ ಉದಯವಾಣಿಲಿ ಪ್ಲಾಸ್ಟಿಕ್‍ನ ಬಗ್ಗೆ ಒಂದು ಲೇಖನ ಬರದಿತ್ತಿದ್ದೆ. ಅದು ವಿಶ್ವ ಪರಿಸರ ದಿನ (ಜೂನ್ ೫)ಕ್ಕೆ ಪ್ರಕಟ ಆಗಿತ್ತಿದ್ದು. ಯಾವ ವರ್ಷ ಹೇಳಿ ಈಗ ಸರೀ ನೆಂಪಿಲ್ಲೆ.

 1. September 17, 2010

  […] ಪ್ಲೇಶ್ಟಿಕು ಬೂತದ ಬಗ್ಗೆ ಬೊಳುಂಬುಮಾವನ ಹುಂಡುಪದ್ಯ: ಸಂಕೊಲೆ […]

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *