ಬಾಲ್ಯದ ಬದುಕು — ಭಾಮಿನಿಲಿ

ಚಿಳ್ಳಿ ಚೆ೦ದಕೆ ಹಿಡುದು ನೀರಿನ
ಪುಳ್ಳಿ ಚೇಪಿದ° ಮನದಿ ಬೇಡುತ
ನಳ್ಳಿ ಉದುರದೆ ಅಡಕೆ ಕೊನೆಯಲಿ ಒಳಿಯಲೀವರುಷ
ಕಳ್ಳರೆ೦ದಿಗು ತೋಟಕಿಳಿಯದೆ
ಉಳ್ಳಿಗೆ೦ಡೆ ಪಟೋರ ಇಲ್ಲ
ದ್ದೊಳ್ಳೆ ಅಡಕೆಯ ಬೆಳೆಯು ಜಾಲಿಲಿ ತು೦ಬಿದರೆ ಹರುಷ

ಓಳಿ ತೋಟದ ನೆಡುಕೆ ಬೀಸುವ
ಗಾಳಿ ಬೇಸಗೆ ಸೆಕೆಯ ಮರೆಶೊಗ
ಆಳುಗಳು ದ೦ಬೆಯಲಿ ಗೆಡುವಿಗೆ ನೀರು ಚೇಪುವಗ
ಗಾಳಿ ಬಾಳೆಯ ಎಲೆಗೊ ಅಡಕೆಯ
ಹಾಳೆ ಬೀಸಣಿಗೆಗಳ ಚಾಮರ
ಕೇಳುವಗ ಹಕ್ಕಿಗಳ ಚಿಲಿಪಿಲಿ ಲೋಕವನೆ ಮರವೆ

ಎಲೆಯ ಸ೦ಚಿಯ ಗೆ೦ಟು ಸೊ೦ಟಲಿ
ತಲೆಲಿ ಮಡಲಿನ ಕಟ್ಟ ಬಟ್ಯನ
ಒಲೆಯ ಹೊತ್ತುಸಿ ಬೆಶಿಯ ನೀರಿನ ಜಳಕ ಅದ್ಭುತವು
ಬೆಲೆಯ ಕಟ್ಟುಲೆ ಎಡಿಯದಾ ಸ೦
ಕಲೆಲಿ ಕಟ್ಟಿದ ಕಾಳು ಬೊಳ್ಳುಗ
ಳಲೆಲಿ ಬಾ೦ಕಿನ ಹೊಡವ ದನಿಯೇ ಸುಗಮ ಸ೦ಗೀತ

ದ೦ಡು ಕ೦ಡರೆ ಬಿಡದೆ ಬಾಳೆಯ
ತು೦ಡು ಮಾಡಿಯೆ ಕೊಚ್ಚಿ ಸಣ್ಣಕೆ
ಕೆ೦ಡದೊಲೆ ಮೇಲೊ೦ದು ಅಳಗೆಲಿ ತಾಳು ಮಾಡಿದರೆ
ಉ೦ಡು ಜೆಗುಲಿಯ ಕರೆಲಿ ಮನುಗಿರೆ
ಚೆ೦ಡೆ ಬಡುದರು ಆಗ ಎಚ್ಚರ
ಬ೦ಡು ಮಾತುಗಳಲ್ಲ ಸತ್ಯವಿದೆನ್ನ ಅನುಭವವು

ಕಟ್ಟು ಉಗ್ರಾಣ೦ದ ತಾರೇ
ಸಟ್ಟುಗಿನ ಜೆ೦ಗ೦ದ ತೆಗೆ ಚೀ೦
ಚಟ್ಟಿಲೆಣ್ಣೆಯ ಕಾಸಿ ಹೊರಿ ಬಾ ಹಲಸ ಹಪ್ಪಳವಾ
ಚಿಟ್ಟೆ ಕರೆಯಲಿ ಕಾಯಿಹೋಳಿನ
ತಟ್ಟೆ ಮಳೆದಿನ ಕೂಡಿ ತಿ೦ದರೆ
ರಟ್ಟುಗದು ನಿಜ ಹೊಟ್ಟೆಹಶುವೆದೆ ತಟ್ಟಿ ಹೇಳುತ್ತೆ

ಮುಳಿಯ ಭಾವ

   

You may also like...

29 Responses

 1. ಮಹೇಶ says:

  {ಸ೦ಕಲೆಲಿ ಕಟ್ಟಿದ ಕಾಳು ಬೊಳ್ಳುಗಳಲೆಲಿ} ಇದೆ೦ತದು ಹೇಳ್ತಿರಾ?

  • ಶ್ಯಾಮಣ್ಣ says:

   ಕಾಳು ಮತ್ತೆ ಬೊಳ್ಳು ಹೇಳ್ತ ಎರಡು ಕಟ್ಟಿ ಹಾಕಿದ ನಾಯಿಗ ಉದ್ದಕ್ಕೆ ಬ್ಯಾರಿಗ ಬಾಂಕು ಕೊಟ್ಟಾಂಗೆ ಕೂಗುದಕ್ಕೆ ಹೇಳಿದ್ದು… ಆಲ್ಲದಾ ರಘು ಬಾವ?

  • raghumuliya says:

   ಕಾಳು ಬೊಳ್ಳುಗಳು + ಅಲೆಲಿ ಹೇಳಿ ಬರದೆ ಮಹೇಶ,ಶ್ಯಾಮಣ್ಣ ಹೇಳಿದ ಹಾಂಗೆ. ಪೇಟೇಲಿ ಸುಖ ಇದ್ದೋ?ಪೆಟ್ರೋಲ್ ನೀರುಳ್ಳಿ೦ದ ಮೇಲೆ ಹಾರಿತ್ತು ಹೇಳಿ ಬೋಸ ಹೇಳಿದ.ಕಡೆಂಗೆ ತೋಟಕ್ಕೆ ಹೋಗದ್ದೆ ನಿವೃತ್ತಿ ಇರ.

 2. ವಾಹ್… ಅದ್ಭುತ…! ಭಾವನ ಭಾಮಿನಿ ರೈಸಿದ್ದು.

 3. ಬಾಲ್ಯದ ಬಗ್ಗೆ ಬರದ್ದು ನಿಜವಾಗಿಯೂ ತುಂಬಾ ಲಾಯ್ಕಾಯ್ದು..ನೆರೆಕರೆಯ ಹೆಚ್ಚಿನೋರು ಇದರ ಓದಿಯಪ್ಪಗ ತಮ್ಮ ಬಾಲ್ಯವ ನೆಂಪುಮಾಡೀಗೊಂಡವು ಹೇಳಿ ಬರದ ಒಪ್ಪಂಗಳ ನೋಡಿ ಗೊಂತಾತು 🙂
  ಇಲ್ಲಿ ಬರದ ಯಾವುದನ್ನೂ ಕೂಡ ಬಾಲ್ಯಲ್ಲಿ ಅನುಭವಿಸದೇ ಇದ್ದ ಎನಗೆ ಎಂತದೋ miss ಮಾಡಿಗೊಂಡೆ ಹೇಳಿ ಅನ್ಸುತ್ತಾ ಇದ್ದು 🙁

  • ರಘುಮುಳಿಯ says:

   ಆ ವೈಭವ ಅನುಭವಿಸಿದರೇ ಗೊಂತಕ್ಕಷ್ಟೇ,ಬರದು ವರ್ಣನೆ ಮಾಡೋದು ಕಷ್ಟವೇ ದಾಗುಟ್ರಕ್ಕೋ..ಕಾಲದೊಟ್ಟಿ೦ಗೆ ಜೀವನಕ್ರಮ ಬದಲಾವುತ್ಸು ಜೀವನ ನಿಯಮ…

 4. ಆನೆಂತ ಹೇಳ್ಲಿ?

 5. ಪುಟ್ಟಭಾವ ಹಾಲುಮಜಲು says:

  ರಘುಭಾವ ! ಇದು ರೈಸಿದ್ದು!! ಬಾಲ್ಯದ ಬದುಕಿನ simulation ಮಾಡಿದ ಹಾಂಗೆ ಆತು!!

  • ರಘುಮುಳಿಯ says:

   ಕಾಲ ಬದಲಾದರೂ ನೆನಪ್ಪು ಬತ್ತನ್ನೇ ಭಾವ, ..ಬೋಸ° simulation ಹೇಳಿರೆ ಎಂತ್ಸು ,ಸೆಮಿಲೊದಾ? ಹೇಳಿ ಕೇಳಿಗೊಂಡಿದ್ದ°!!.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *