ಭಾವನೆಗೊ ತೇಲಿ ಭಾಮಿನಿಲಿ ಪದವಾಗಿ…

November 8, 2010 ರ 11:36 amಗೆ ನಮ್ಮ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅರಿಯದಿದ್ದರು ಕಾವ್ಯರಚನೆಯ
ಗರಿಕೆ ಹುಲ್ಲಿನ ಗೆಣಪಗರ್ಪಿಸಿ
ವಿರಚಿಸಿದೆ ಹೊಸತೊಂದು ಪದ ಭಾಮಿನಿಯ ಷಟ್ಪದಿಲಿ
ಶಿರವ ಬಗ್ಗುಸಿ ಮುಳಿಯದಜ್ಜಗೆ
ಕರಮುಗಿದು ಪಿತ ಕೇಶವಯ್ಯಗೆ
ಗುರುಚರಣಕರ್ಪಿಸುವೆ ರಚಿಸೀ ಸರಳ ಕವಿತೆಯನು
 
ಬಡ್ದು ಕತ್ತಿಯ ಮಸೆಯುವ೦ದದಿ
ಜಡ್ಡು ಮನಸಿನ ಹರಿತಗೊಳಿಸುತ
ಹೆಡ್ಡುತನವ ನಿವಾರಿಸುವ ಹವ್ಯಕದ ಕವನದಲಿ
ಅಡ್ಡ ದಾರಿಯ ಹಿಡಿವ ಯೋಚನೆ
ಕಡ್ಡಿ ಮುರಿಯುವ ಹಾಂಗೆ ಖಂಡಿಪ
ದೊಡ್ಡ ಮನಸಿನ ಕೊಡಲಿ ದೇವರು ಓದಿ ಬರವವಕೆ
 
ಗಂಟು ಕಟ್ಟೊಗ ಪುಸ್ತಕಗಳ ನಿ
ಘಂಟು ಮರವಲೆ ಆಗ ಹೇಳಿ ನಿ
ಘಂಟು ಮಾಡಿಯೆ ನೆನೆಮನವೆ ಮರಿಯಪ್ಪಭಟ್ಟರನು
ಗೆಂಟು ಮಾಡೋದು ಬಿಟ್ಟೆನಗೆ ದಿನ
ಘಂಟೆಗಳೆ ಮರದತ್ತು ಒಳ ಜಯ
ಘಂಟೆ ಬಡಿವಾ ಶಬ್ದ ಮನಸಿಲಿ ಪುಟವನೋದುವಗ
 
ಅಂತರಂಗದ ಯೋಚನೆಗಳನು
ಕಂತೆ ಕಟ್ಟಿಯೆ ಮಡುಗೊದೆಂತಗೆ
ಸಂತೆಯಲ್ಲವು ಬೈಲು ನೆರೆಸುಜ್ಞಾನಿಗಳ ಸಭೆಯು
ಸಂತಸದಿ ವಿವರಿಸುಲೆ ನಿಮಗೇ
ಕಾಂತದಲಿ ನಾ ಮೊಡೆಯಲಕ್ಷರ
ಬಂತು ಮಣ್ಣಿನ ವಾಸನೆಯು ಹಿತವಾಗಿ ಪದಗಳಲಿ
 
ಖಂಡಿ ಅಡಕೆಯ ಕೊನೆಯ ಹೆಡಗೆಲಿ
ಕಂಡು ಹೊರುವಾಸೆಯದು ಮನಸಿಲಿ
ಹೆಂಡತಿಯನೊಡಗೂಡಿ ಹೆರಟಿದೆ ಹಳ್ಳಿಮಾರ್ಗದಲಿ
ಹೊಂಡಗಳು ತುಂಬಿಪ್ಪ ದಾರಿಯ
ಗುಂಡಿಗಳ ತಪ್ಪಿಸುತ ಬೀಸಕೆ
ಉಂಡೆಕೊದಿಲಿನ ರುಚಿಯ ಸವಿವಲೆ ಊರ ನಿಳಯದಲಿ
(ಸಶೇಷ) 
ಭಾವನೆಗೊ ತೇಲಿ ಭಾಮಿನಿಲಿ ಪದವಾಗಿ... , 5.0 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ರಘು ಭಾವ, ನಿಂಗೊ ಬರದ ಭಾಮಿನಿಯ ಬಗ್ಗೆ ಎನಗೆ ಹೇಳ್ಲೇ ಅರಡಿಯಾ, ಎನಗೆ ಬೇರೆ ಭಾಮಿನಿಯ ಗೊಂತಿದ್ದು ಅಷ್ಟೇ!!!! 😉
  ಬರದ ಶೈಲಿ, ವಿಷಯಂಗ ತುಂಬಾ ಚೆಂದ ಆಯಿದು ಹೇಳ್ಲೇ ಅರಡಿಗಿದಾ.
  ಇನ್ನುದೇ ಬರಲಿ ಹೀಂಗಿಪ್ಪ ರಮಣೀಯ ಕೃತಿಗಾ..
  ಇನ್ನುದೇ ಬಕ್ಕು ಮುಳಿಯದ ನೆತ್ತರಿಲಿ ಎಲ್ಲಾ ಷಟ್ಪದಿಗ ಸರಾಗ!!!!

  [Reply]

  VA:F [1.9.22_1171]
  Rating: 0 (from 0 votes)
 2. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಅದ್ಭುತ ಕವಿತ್ವಕ್ಕೆ ಎನ್ನದೊಂದು ನಮನ,
  ಹರಿದು ಬರಲಿ ನಮ್ಮ ಮುಳಿಯದವರ ಕವನ!!

  ಭಾರೀ ಲಾಯ್ಕಾಯ್ದು ಆತಾ!!!, (ಕಲ್ಲುಗುಂಡಿಲಿ ಬಲಿಪಜ್ಜನ ಪದದ ಹಾಂಗೆ!!):D 😀

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಪುಟ್ಟಭಾವಾ.. ಎಂಥಾ ಹೋಲಿಕೆ!!ಮೇರುಪರ್ವತಕ್ಕೂ ಮಣ್ಣಿನ ಕಣಕ್ಕೂ.
  ಕಲ್ಲುಗುಂಡಿಲಿ ಕಂಡತ್ತಿಲ್ಲೆನ್ನೇ ನಿಂಗಳ..

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಮಾವ°

  ಪ್ರಾರಂಭವೇ ಲಾಯ್ಕಿದ್ದು.
  ಅರಿಯದಿದ್ದರು ಕಾವ್ಯರಚನೆಯ
  ಗರಿಕೆ ಹುಲ್ಲಿನ ಗೆಣಪಗರ್ಪಿಸಿ
  ವಿರಚಿಸಿದೆ ಹೊಸತೊಂದು ಪದ ಭಾಮಿನಿಯ ಷಟ್ಪದಿಲಿ
  ಇದೊಂದು ಮಹಾನ್ ಗ್ರಂಥಕ್ಕೆ ನಾಂದಿ ಆಗಲಿ …

  [Reply]

  VN:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ಅಂತೂ ಮುಳಿಯದ ಭಾವನೂ ಭಾಮಿನೀ-ಕಲ್ತೊಂಡು ಪದಮಾಡಿದಾ°
  ಲೀಲಾಜಾಲ-ವಿನೋದ-ರಾಗ-ಸಹಿತಾ, ಶಬ್ದಂಗೊ ಒಂಬುತ್ತಿದಾ |
  ಸಾಹಿತ್ಯಾಸಕ್ತಿ ಮಾಂತ್ರ ಅಲ್ಲ, ಕುಲ-ದೇವ ಒಲುಮೆಂದಲೂ –
  ಎಲ್ಲೋರೂ ಇವರಂತೆ ಶುದ್ದಿ ಹುಡ್ಕೀ, ಬೈಲಿಂಗೆ ಹೇಳಿಕ್ಕಿದಾ || :-)

  [Reply]

  ಬೊಳುಂಬು ಮಾವ°

  ಗೋಪಾಲ ಮಾವ Reply:

  ಮಾದೇ…..ವ.

  [Reply]

  VA:F [1.9.22_1171]
  Rating: +2 (from 2 votes)
 6. ಮುಳಿಯ ಭಾವ
  ರಘುಮುಳಿಯ

  ಸಂತೋಷಾಮೃತ ಸುಧೆಯೆ ಬಂತು ನೋಡಿ ಚೂರ್ಣಿಕೆಯ ಒಪ್ಪಂಗಳಾ
  ಸಾಹಿತ್ಯಾಕೃತಿ ರೂಪು ತಳೆಗು ನೋಡಿ ಬೈಲ ವೈವಿಧ್ಯಂಗಳಾ |
  ಸಮಮನದ ಗೆಳೆಯರೊಂದುಗೂಡಿ ಬೆಳೆಶಿರೀ ಒಪ್ಪಂಗಳಾ
  ನಿಜಜೀವನದೊಳ್ ಅಳವಡಿಕೆ ಮಾಡಿ ಒಳುಶಿ ಸಂಸ್ಕಾರಂಗಳಾ ||

  (ಹರೇ ಭೋಜನಕ್ಕಾಲೇ..ಹೇಳುಗು ನೆಗೆಗಾರ..)

  [Reply]

  ಬೊಳುಂಬು ಮಾವ°

  ಗೋಪಾಲ ಮಾವ Reply:

  ಲಾಯಕಾಯಿದು. ಭಾವಯ್ಯ.

  [Reply]

  VA:F [1.9.22_1171]
  Rating: +2 (from 2 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನೆಗೆ ಬಾವಂಗೆ ಅದು ಬಾರ.. ಉಂಬಗ ಕೈಗು ಬಾಯಿಗೂ ಜೆಗಳ ಸುರು ಆವುತ್ತು.. ಬೇರೆಂತದಕ್ಕೂ ಪುರುಸೋತ್ತಿರ್ತಿಲ್ಲೆ ಅಂಗೆ…

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಕೈಗೂ ಬಾಯಿಗೂ ಜಗಳವೋ ಅಲ್ಲ ದೋಸ್ತಿಯೋ ಅಜ್ಜಕಾನ ಭಾವ?

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಬಾವ ನಮ್ಮ ಕೈ ಬಾಯಿಗೆ ದೋಸ್ತಿ ಬಾವ.. ಅವಂಗೆ ಜಗಳವೇ

  ಮುಳಿಯ ಭಾವ

  ರಘುಮುಳಿಯ Reply:

  ಓ,ಹಾಂಗೆ ಕೈ ಬಾಳೆಲಿ ಸಿಕ್ಕಿದ್ದರ ಬಾಯಿಗೆ ಇಡುಕ್ಕೊದೋ? ಬಾಯಿ ಎಡೆಲಿ ಬೆರಳು ಕಚ್ಚೊದೋ??

  ನೆಗೆಗಾರ°

  ನೆಗೆಗಾರ° Reply:

  ಉಂಬಗ ಹರಟೆ ಮಾಡೆಡಿ.. :-(

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಕಾವಿನಮೂಲೆ ಮಾಣಿಸುಭಗವೇಣಿಯಕ್ಕ°ಮಾಲಕ್ಕ°ಕಜೆವಸಂತ°ದೊಡ್ಡಮಾವ°ಶಾ...ರೀಅನಿತಾ ನರೇಶ್, ಮಂಚಿಅಕ್ಷರದಣ್ಣಚುಬ್ಬಣ್ಣಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣvreddhiಡಾಮಹೇಶಣ್ಣನೀರ್ಕಜೆ ಮಹೇಶಕೆದೂರು ಡಾಕ್ಟ್ರುಬಾವ°ರಾಜಣ್ಣಕಳಾಯಿ ಗೀತತ್ತೆಬೋಸ ಬಾವದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುಡೈಮಂಡು ಭಾವಸುವರ್ಣಿನೀ ಕೊಣಲೆಬಂಡಾಡಿ ಅಜ್ಜಿಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ