ಭೂತಕನ್ನಡಿಲಿ ದೃಶ್ಯ …

October 28, 2010 ರ 10:08 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪೈಸೆ ನು೦ಗೊದರಲ್ಲಿ ವಿಶ್ವದಾಖಲೆ ಬ೦ದು
ರೈಸಿದವು ನಮ್ಮ ನವನಾಯಕರು ಇಂದು
ಹೇಸಿಗೆಯೆ ಇಲ್ಲೆ ಕಾಂಚಾಣ ಕಂಡರೆ ಎಂದು
ಕೆಸರಗುಂಡಿಗು ಕೈಯ ಹಾಕುಗಿವು ಮುಂದು

ಮರದಿಂದ ಮರಕೆ ಹಾರುತ್ತ ಮರ್ಕಟ ನೋಡಿ
ನೀರಾತು ನಾಚಿ ಜೆನ ನಾಯಕರ ಖೋಡಿ
ಊರಿಂದ ಊರಿಂಗೆ ಹಾರುತ್ತವಿವು ಮೋಡಿ
ಗಾರಂಗ ರಾಜ್ಯವನೆ ಅಡಿಮೇಲು ಮಾಡಿ

ಅದುರಿತ್ತೊ  ಗಡಗಡನೆ ಅದಿರಧನಿಗಳ ಬುಡವು 
ಆದಾಯಕರದ ಅಧಿಕಾರಿಗಳ ಸೆಡವು
ಹೆದರಿತ್ತೊ ಮುಂಗುಸಿಯ ಅಟ್ಟಹಾಸಕೆ ಹಾವು
ಚದುರಿ ಕತ್ತಲೆ ಬಕ್ಕೊ ಶುಭ್ರ ಮುಂಜಾವು

ಕನ್ನಡದ ಮರ್ಯಾದೆ ಸೇರಿತ್ತು ಮಣ್ಣಿ೦ಗೆ
ಕನ್ನಡಿಯು ಬೇಕೊ ಅಂಗೈ ಹುಣ್ಣಿಗೆ
ಹೊನ್ನು ಸಿಕ್ಕುಗು ಮಾಡಿದರೆ ಕೈಯ ಬೆಚ್ಚಂಗೆ
ಎನ್ನ ಹೆಸರಿರಲಿ ಉತ್ಸವ ಪಟ್ಟಿಗೆ

ಬರೆದು ಬಲಗೈ ಬಚ್ಚಿ ಬೈದು ನಾಲಗೆ ಕಚ್ಚಿ
ಕೆರೆದೆ ತಲೆಯನ್ನೆ ಮುಂಡಾಸು ಬಿಚ್ಚಿ
ಬರಗಾಲ ಕಳುದು ಕೊಳೆ ಅಳುದು ಹೋಗಲಿ ಕೊಚ್ಚಿ
ಹರಿದು ನೀತಿಯ ಸುಧೆಯು ಮನಸುಬಿಚ್ಚಿ

ಭೂತಕನ್ನಡಿಲಿ ದೃಶ್ಯ ..., 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಮೋಹನಣ್ಣ

  ವಾಹ್ ವಾ ಮುಳಿಯ ಭಾವ ಎ೦ತ ಸು೦ದರ ಪದ್ಯ ರಾಜಕಾರಣಿಗಳ ಹೊಲಸಿನ ಹೊ೦ಡಕ್ಕೆ ಇಳುಸಿರೆ ಆ ಹೊಲಸಿ೦ಗೆ ಹೊಲಸಕ್ಕಲ್ಲದ್ದೆ ಇವಕ್ಕಾಗ.ಅದಕ್ಕೆ ಪಾರ್ಟಿ ಜಾತಿ ಯಾವದೂ ಇಲ್ಲೆ.ಬರೆದು ಬಲಗೈ…….. ….ಸುಧೆಯು ಮನಸುಬಿಚ್ಚಿ ಬಾರಿ ಕೊಶಿ ಆತು ಈ ಸಾಲುಗಳ ನೋಡಿ.ಲೇಖನ೦ಗಳ ಹಾಡುಗಳ ಜನಪ್ರಿಯ ಪತ್ರಿಕಗೋಕ್ಕೆ ಕಳುಸಲೆ ಸ೦ಕೋಚ ಮಾಡೆಕಾದ್ದೇ ಇಲ್ಲೆ ಅದರಲ್ಲಿ ಬತ್ತ ಎಷ್ಟೋ ಹಾಡು ಲೇಖನ೦ಗಳಿ೦ದ ಭಾವನದ್ದೇ ಒ೦ದು ಕೈ ಮೇಲೆ.ಜೈ ಮು೦ದೆ ಸಾಗಲಿ.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಗೋಪಾಲ ಮಾವ

  ಮುಳಿಯ ಭಾವಯ್ಯ ಹೇಳಿದ ಹಾಂಗೆ ನೀತಿಯ ಸುಧೆ ಹರುದು ಈ ಕಳ್ಳಂಗಳು, ಅವರ ಕೊಳೆ ಎಲ್ಲವೂ ಅದರಲ್ಲಿ ಕೊಚ್ಚಿ ಹೋಯೆಕು. ಅಂಬಗ ದೇಶ ಉದ್ದಾರ ಅಕ್ಕು. ರಾಜಕಾರಣಿಗಳ ಮುಸುಡಿಂಗೆ ಭೂತಕನ್ನಡಿ ಹಿಡುದು ದೊಡ್ಡ ಮಾಡಿ ತೋರುಸಿದ್ದು ಲಾಯಕಾಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ರಘು,,
  ರಾಜಕಾರಿಣಿಗಳ ಭೂತ ಬಿಡುಸಿದ ಹಾಂಗೆ ಆತು, ನಿನ್ನ ಭೂತ ಕನ್ನಡಿಲಿ
  ಇವರ ಬಗ್ಗೆ ಮಾತಾಡಿರೆ ನಮ್ಮ ಬಾಯಿ ಬಚ್ಚುಗಲ್ಲದ್ದೆ, ಬೇರೆ ಎಂತ ಪ್ರಯೋಜನವೂ ಇಲ್ಲೆ

  [Reply]

  VA:F [1.9.22_1171]
  Rating: +1 (from 1 vote)
 4. ಶಂಪಿಎಸ್,ಮಂಗಳೂರು

  “ಬರೆದು ಬಲಗೈ ಬಚ್ಚಿ ಬೈದು ನಾಲಗೆ ಕಚ್ಚಿ
  ಕೆರೆದೆ ತಲೆಯನ್ನೆ ಮುಂಡಾಸು ಬಿಚ್ಚಿ
  ಬರಗಾಲ ಕಳುದು ಕೊಳೆ ಅಳುದು ಹೋಗಲಿ ಕೊಚ್ಚಿ
  ಹರಿದು ನೀತಿಯ ಸುಧೆಯು ಮನಸುಬಿಚ್ಚಿ–”
  ಓದಿ ಭಾರಿ ಖುಶಿ ಆತು,ಖಂಡಿತ ಮುಳಿಯ ಭಾವ ಕನ್ನಡದ ಕಾವ್ಯ ಲೋಕಕ್ಕೆ ಇದರ ಅರ್ಪಿಸೆಕು, ಲಹರಿ, ಹರಿವಿನ ಪದ ಲಾಲಿತ್ಯ ಮೋಡಿ ಮಾಡ್ತು,ಕೀಪ್ ಇಟ್ ಅಪ್!!!

  [Reply]

  VA:F [1.9.22_1171]
  Rating: +2 (from 2 votes)
 5. ಡೈಮಂಡು ಭಾವ
  ಸೂರ್ಯ

  ಮುಳಿಯ ಬಾವಾ ಭಾರಿ ಲಾಯ್ಕಲ್ಲಿ ವರ್ಣಿಸಿದ್ದೀರಿ ರಾಜ್ಯದ ಪರಿಸ್ತಿತಿಯ..
  (ಚದುರಿ ಕತ್ತಲೆ ಬಕ್ಕೊ ಶುಭ್ರ ಮುಂಜಾವು)
  ವಾಕ್ಯ ಅಂತು ಲಾಯಿಕ ಆಯಿದಾತ…ಕೊಶಿ ಆತು …:)

  [Reply]

  VA:F [1.9.22_1171]
  Rating: +1 (from 1 vote)
 6. ಗಣೇಶ ಮಾವ°

  ರಘು ಮಾವಾ,ಕವನ ಸೂಪರ್ ಆಯಿದು.ನಿಂಗಳ ಬ್ಯುಸೀ ಸಮಯಲ್ಲಿ ಇಂತಹ ಅರ್ಥಪೂರ್ಣ,ಸಾಂದರ್ಭಿಕ ಅದರ್ಲಿಯೂ ಹವ್ಯಕ ಭಾಷೇಲಿ ಅತ್ಯಂತ ಚೆಂದಕ್ಕೆ(ಟ್ರಾಫಿಕ್ ಸಿಗ್ನಲ್ ಸಮಯಲ್ಲಿಯೂ)ಬರದು ಬೈಲಿಂಗೆ ತಿಳುಶಿದ ನಿಂಗಳಲ್ಲಿಪ್ಪ ಕಲಾಸರಸ್ವತಿಗೆ ನಮೋನ್ನಮ:!!!

  [Reply]

  VN:F [1.9.22_1171]
  Rating: 0 (from 0 votes)
 7. ನೆಗೆಗಾರ°

  ಪದ ಭಾರೀ ಕೊಶಿ ಆಯಿದಡ, ಎಲ್ಲೋರುದೇ ಹೇಳಿದವು. ಎನಗೂ ಕೊಶಿ ಆತು.

  {
  ಹರಿದು ನೀತಿಯ ಸುಧೆಯು ಮನಸುಬಿಚ್ಚಿ
  ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
  }
  – ಈ ಗೆರೆಯ ಪ್ರಾಸ ಅಷ್ಟು ಹಿಡುಸಿತ್ತಿಲ್ಲೆ ಮುಳಿಯಭಾವಾ!! 😉 :-(

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಶುದ್ದಿಯ ಪ್ರಿಂಟು ಮಾಡ್ಳೆ ಇದೇ ಸ್ವಿಚ್ಚಿ,
  ಹೇಳಿ ಅಕ್ಕೋ..ಛೀ,ಛೀ,

  [Reply]

  VA:F [1.9.22_1171]
  Rating: +1 (from 1 vote)
 8. ನಿಂಗಳ ಕವನ ಒಂದು ಹೊಸ ಅಧ್ಯಾಯದತ್ತ ಮೋರೆ ಮಾಡ್ತು ಹೇಳಿರೆ ತಪ್ಪಾಗ. “ಚದುರಿ ಕತ್ತಲೆ ಬಕ್ಕೊ ಶುಭ್ರ ಮುಂಜಾವು” – ಸಾಲು ರಾಜಕೀಯದ ಹೊಲಸು ತಿಳಿಯಪ್ಪದು ಎಂದು? ಹೇಳ್ತ ದನಿ ಮೂಡ್ಸಿದ್ದಿ. ಕೆಲವು ಪದಂಗಳ ಜೋಡಣೆ, ಪ್ರಾಸ ಕವನವ ಬೇರೆ ಕವನಂಗಳಿಂದ ಭಿನ್ನವಾಗಿ ಚಿತ್ರಿಸುತ್ತು. ಇಂತಹ ಕವನವ ಹವಿಗನ್ನಡಲ್ಲಿ ಬರದ್ದಕ್ಕೆ ಧನ್ಯವಾದಂಗ. ಭಾರೀ ಲಾಯಿಕಾಯ್ದು.

  [Reply]

  VA:F [1.9.22_1171]
  Rating: +1 (from 1 vote)
 9. ಮುಳಿಯ ಭಾವ
  ರಘುಮುಳಿಯ

  ಓದಿದ,ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲೋರಿಂಗೂ ಧನ್ಯವಾದ.ಹೊಸತ್ತು ಬರವಲೆ ನಿಂಗಳೇ ಸ್ಪೂರ್ತಿ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶಶುದ್ದಿಕ್ಕಾರ°ಪುಣಚ ಡಾಕ್ಟ್ರುದೀಪಿಕಾದೇವಸ್ಯ ಮಾಣಿಕಜೆವಸಂತ°ಸುಭಗಜಯಗೌರಿ ಅಕ್ಕ°ಶರ್ಮಪ್ಪಚ್ಚಿಮುಳಿಯ ಭಾವವಿದ್ವಾನಣ್ಣಶ್ರೀಅಕ್ಕ°ಶಾ...ರೀಅಕ್ಷರದಣ್ಣಡಾಗುಟ್ರಕ್ಕ°ಚೂರಿಬೈಲು ದೀಪಕ್ಕಅಕ್ಷರ°ನೆಗೆಗಾರ°ಬಟ್ಟಮಾವ°ಮಂಗ್ಳೂರ ಮಾಣಿಪೆಂಗಣ್ಣ°ಅನುಶ್ರೀ ಬಂಡಾಡಿಪೆರ್ಲದಣ್ಣಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ