ಮದುವೆ ಗೌಜಿ -ಭಾಮಿನಿಲಿ

April 26, 2011 ರ 12:51 pmಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ೦ಭು ಮಾವನ ಮಗನ ಮದುವೆಯ
ಜೆ೦ಬರವು ಎದ್ದತ್ತು ಅಡಕೆಯ
ಕ೦ಭ ನೆಟ್ಟವು ಮಡಲ ಚೆಪ್ಪರ ಸಜ್ಜಿ ಮಾಡಿದವು
ಜೆ೦ಬುಕಾನವ ತೆಗದವದ ತಲೆ
ಕೊ೦ಬು ಕೊ೦ಬಿನಗಿ೦ಡಿ ಒಯಿಶಿಯೆ
ಒ೦ಬುಸುಲೆ ಜತೆ ನ೦ಬಿಗೊ೦ಡವು ಲ೦ಬದುದರನನೇ

ದಿಬ್ಬಣವು ಹೆರಟಾತು ಬೆಣ್ಚಿಗೆ
ಉಬ್ಬೆ ಹಾಕಿದ ಹಾ೦ಗೆ ತೆರಕಿಲಿ
ಬೊಬ್ಬೆ ಹಾಸ್ಯದ ಹೊಳೆಯೆ ಹರಿಗದ ವರನ ಕಾಲೆಳೆದು
ಇಬ್ಬರಿದ್ದರೆ ಸಾಕು ಕಟ್ಟುಲೆ
ಅಬ್ಬರದ ಮು೦ಡಾಸಿನಾಯಿತ
ಉಬ್ಬಿ ಅರಳಿತ್ತೀಗ ಮಾಣಿಯ ಮೋರೆ ಹರುಷಲ್ಲಿ

ಬಕ್ಕು ಪಟ್ಟೆಯ ಸೀರೆಲಿಯೆ ಹೆ
ಮ್ಮಕ್ಕೊ ಗೌಜಿಯ ಮಾತಿನಬ್ಬರ
ಬೊಕ್ಕು ಬಾಯಿಯ ಅಜ್ಜಿ ಹಸೆಲಿಯೆ ಕೂದು ಕೇಳುಗದಾ
ಅಕ್ಕು ಮದಿಮಾಳಾಯಿತವು ಆ
ಟಿಕ್ಕಿ ತೆಗೆ ಒಪ್ಪುತ್ತು ಕೆಮಿಗದೊ
ಸಿಕ್ಕುಸಿರೆ ಜತೆ ಕೊಪ್ಪು ಬುಗುಡಿಗೆ ಕೊರಳ ಚಕ್ರಸರ

ತೆರೆಯ ವಸ್ತ್ರವ ಮ೦ಟಪದ ನಡು
ಹಿರಿಯ ಸೋದರಮಾವ ಹಿಡುದರೆ
ಕೊರಳು ಉದ್ದವದಾತೊ ಮದಿಮಾಯ೦ಗೆ ಸ೦ತಸಲಿ
ಮರಗು ದುಃಖವ ಕೂಸ ಹೆತ್ತವ
ರೆರದು ಧಾರೆಯ ಕೈಯ ಮುಗಿವಗ
ಮೆರಗು ಮದುವೆಯ ಸಭೆಯು ಚೆ೦ದಕೆ ಒಸಗೆಯಕ್ಷತೆಲಿ

ಹೆಟ್ಟಿ ಕೇಳಿದರಾತು ಹೇಳುಗು
ಬಟ್ಟಮಾವನೆ ಮ೦ತ್ರದರ್ಥವ
ಗುಟ್ಟು ಮಾಡದೆ ದೊಡ್ಡ ದೊ೦ಡೆಲಿ ಬೇಡ ಸ೦ಶಯವು
ಸಟ್ಟುಮುಡಿಗಟ್ಟಣೆಯ ಮಾಡುತ
ಕೊಟ್ಟು ಕೆಮಿ ಕೇಳಿದರೆ ಸಾಕದ
ಚಿಟ್ಟೆ ಕರೆಲಿಯೆ ಕೂಪ ಭಕ್ತಿಲಿ ಚಾಯ ಕುಡುದಾಗಿ

ಮದುವೆ ಹೇಳಿದರೊ೦ದು ಯೋಗವು
ಅದುವೆ ಪೂರ್ವದ ಪುಣ್ಯ ಸುಕೃತವು
ಮಧುರ ಜೀವನ ಕಥೆಗೆ ದೇವರು ಬರದ ಮುನ್ನುಡಿಯು
ಮದನಕೈಯಾಸರೆಯ ಮೀರುವ
ಹದದ ಹೊ೦ದಾಣಿಕೆಲಿ ಜತೆಯಲಿ
ಮುದದಿ ಮು೦ದಕೆ ಕಷ್ಟಸುಖವೆದುರುಸುಲೆ ಮಾರ್ಗವಿದು

ಮದುವೆ ಗೌಜಿ -ಭಾಮಿನಿಲಿ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಪವನಜಮಾವ

  ಲಾಯಕ್ಕಾಯಿದು. ಈಗಿನ ಕಾಲಲ್ಲಿ ಈ ಲಘು ಗುರು ಮಾತ್ರೆ ಲೆಕ್ಕ ಹಾಕಿಕೊಂಡು ಬರವಲೆ ತುಂಬ ಕಷ್ಟ. ಎನಿಗಂತೂ ಕವನ ಬರಿಲೇ ಎಡಿತ್ತಿಲ್ಲೆ. ಒಂದೊಂದರಿ ಮಿನಿ ಪದ್ಯ ಬರೆತ್ತೆ ಅಷ್ಟೆ :)

  [Reply]

  ಚೆನ್ನಬೆಟ್ಟಣ್ಣ

  ಚೆನ್ನಬೆಟ್ಟಣ್ಣ Reply:

  ಮಿನಿ ಆದರೂ ತೊಂದರೆ ಇಲ್ಲೆ, ಬರಳಿ ಬೈಲಿನ್ಗೆ

  [Reply]

  ದೊಡ್ಡಭಾವ

  ದೊಡ್ಡಭಾವ Reply:

  ಅಪ್ಪು ಕಾದೊಂಡಿದ್ದೆಯೊ, ಪವನಜ ಮಾವನ ಮಿನಿ ಪದ್ಯಂಗಳ…

  [Reply]

  VA:F [1.9.22_1171]
  Rating: 0 (from 0 votes)
 2. ರಾಜನಾರಾಯಣ ಹಾಲುಮಜಲು

  ಮುಳಿಯ ಬಾವನ ಭಾಮಿನಿ ಯಾವಗನ ಹಾ೦ಗೆ ರ ರೈಸಿದ್ದು.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಮದುವೆಯ ಭಾಮಿನಿಯ ಎರಡನೆಯ ಕಂತು ಚೆಂದಕೆ ಬಂತು. ಲಾಯಕಾಯಿದು. ಮದುವೆ ರಜಾ ಸ್ಪೀಡಿಲ್ಲಿ ಹೋತೋ ಹೇಳಿ. ಚೆನ್ನೈ ಭಾವ ಹೇಳಿದ ಹಾಂಗೆ ವರ್ಣನೆ ಇನ್ನು ರಜ ಇರೆಕಾತು ಭಾವಯ್ಯ. ಕುತೂಹಲಲ್ಲಿ ಕಾಯ್ತಾ ಇತ್ತಿದ್ದೆ. ಇದು ಬಂಟರ ಮದುವೆ ಹಾಂಗೆ ಗಡಿಬಿಡಿಲಿ ಕಳಾತು. ಒಳ್ಳೆ ಒಂದು ವಿಷಯ, ಎರಡು ಅಥವಾ ೩ ಕಂತಿಲ್ಲಿ ಮುಗಿತ್ತಾನೆ ಹೇಳಿ ಉತ್ಸಾಹಕ್ಕೆ ತಣ್ಣೀರು ಎರದ ಹಾಂಗೆ ಆತು, ಮುಳಿಯ ಭಾವಯ್ಯಾ. ಹೇಳಿದೆ ಹೇಳಿ ಬೇಜಾರು ಮಾಡಿಕ್ಕೆಡ. ಮದುವೆಯ ಇನ್ನೂ ರಜಾ ಉದ್ದ ಎಳೆಕು ಹೇಳಿ ಎನ್ನ ಅಲ್ಲ ಎಲ್ಲೋರ ಕಳಕಳಿಯ ಪ್ರಾರ್ಥನೆ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  [ಮದುವೆಯ ಇನ್ನೂ ರಜಾ ಉದ್ದ ಎಳೆಕು] ಶುಭಸ್ಯ ಶೀಘ್ರಂ

  [Reply]

  VA:F [1.9.22_1171]
  Rating: 0 (from 0 votes)
  ಸುಭಗ

  ಸುಭಗ Reply:

  ಬೊಳುಂಬು ಮಾವ, ಚೆನ್ನೈ ಭಾವ ಹೇಳಿದ್ದಕ್ಕೆ ಎನ್ನದೂ ಸಹಮತ ಇದ್ದು. ಮದುವೆ ಜಂಬ್ರದ ಪರಿಪೂರ್ಣ ಚಿತ್ರಣ ಭಾಮಿನಿಲಿ ಬರಲಿ.

  ಬರವಲೆ ಸಮಯಾವಕಾಶ ಸಾಕಾವ್ತಿಲ್ಯೋ ರಘುಭಾವ? ಉಮ್ಮಪ್ಪ.. ಬರವ ಸಾಮರ್ತಿಕೆಯಂತೂ ನಿಂಗೊಗೆ ಇದ್ದೇ ಇದ್ದು! 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹಾಂಗಲ್ಲ, ಊರಿಲ್ಲಿ ತಿರುಗಿ ದಿನ ಮುಂದೆ ಹೋತು ಹೇಳಿ ಅಮ್ಸರಲ್ಲಿ ಮುಗಿಶಿದಾಂಗೆ ಇದ್ದು ಮದುವೆ ರಘು ಭಾವಯ್ಯ. ನೋಡಿ ಇನ್ನಾಣದ್ದು…

  [Reply]

  VA:F [1.9.22_1171]
  Rating: 0 (from 0 votes)
 4. ಮುಣ್ಚಿಕ್ಕಾನ ಪ್ರಮೋದ
  ಪ್ರಮೋದ ಮುಣ್ಚಿಕಾನ

  ಸಟ್ಟುಮುಡಿಯದಿನದ ೧ ಭಾಮಿನಿಲಿಯೊ ಬರದರೆ ಲಾಯಿಕ್ಕಕ್ಕು……..

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಓದಿದ,ಒಪ್ಪ ಕೊಟ್ಟು ಪ್ರೀತಿಲಿ ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.
  ಎನಗೂ ಮದುವೆಯ ಗೌಜಿ ಚುಟುಕಲ್ಲಿ ಮುಗಾತೋ ಹೇಳಿ ಸ೦ಶಯ ಆತೀಗ.ವಿಸ್ತಾರಲ್ಲಿ ಬರವಲೆ ಪ್ರಯತ್ನ ಮಾಡ್ತೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಅನು ಉಡುಪುಮೂಲೆಅನುಶ್ರೀ ಬಂಡಾಡಿತೆಕ್ಕುಂಜ ಕುಮಾರ ಮಾವ°vreddhiಎರುಂಬು ಅಪ್ಪಚ್ಚಿಚೆನ್ನಬೆಟ್ಟಣ್ಣಡೈಮಂಡು ಭಾವಒಪ್ಪಕ್ಕಕೆದೂರು ಡಾಕ್ಟ್ರುಬಾವ°ಪುಣಚ ಡಾಕ್ಟ್ರುಮಂಗ್ಳೂರ ಮಾಣಿಶ್ಯಾಮಣ್ಣಅಡ್ಕತ್ತಿಮಾರುಮಾವ°ಕಳಾಯಿ ಗೀತತ್ತೆಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿಶಾಂತತ್ತೆನೆಗೆಗಾರ°ಮಾಷ್ಟ್ರುಮಾವ°ವಸಂತರಾಜ್ ಹಳೆಮನೆವೇಣಿಯಕ್ಕ°ಪುಟ್ಟಬಾವ°ವೇಣೂರಣ್ಣಸಂಪಾದಕ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ