ಮದುವೆ ನಿಜ ಆತು -ಭಾಮಿನಿಲಿ

April 13, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 32 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ನೆ೦ಟರ ಮದುವೆ ಶುದ್ದಿಯ
ಸುಮ್ಮನಿರದಿ೦ದಿಲ್ಲಿ ಹೇಳೊಗ
ಒಮ್ಮನಸ್ಸಿಲಿ ಕೂದು ಬೈಲಿನವೆಲ್ಲ ಕೇಳುವಿರಾ
ಹೆಮ್ಮೆಯಲ್ಲದೊ ನಮ್ಮದೀ ಕ್ರಮ
ಗಮ್ಮತಿನ ಅನುಪತ್ಯ ಸಕಲರ
ಸಮ್ಮತಿಯು ಇದ್ದರದೊ ಹೇಳುವೆ ಆನು ವಿನಯಲ್ಲಿ
.
ವರುಷ ಇಪ್ಪತ್ತಾರು ಮಾಣಿಗೆ
ತರುಸಿ ಜಾತಕ ಯೋಗ್ಯ ಕೂಸಿನ
ಹರುಷದಲಿ ಮಾಡೆಕ್ಕು ಮದುವೆಯ ದಿನವ ನಿಜಮಾಡಿ
ಕರವಲೆಡ್ತರೆ ಸಾಕು ಕೂಸಿ೦
ಗೆರಡು ಬಗೆ ಗೊ೦ತಿರಲಿ ಅಡಿಗೆಲಿ
ಎರವಲೆಡ್ತರೆ ಸಾಕು ಉದ್ದಿನದೋಸೆ ಹೊತ್ತಿ೦ಗೆ
.
ಮಾಣಿ ಗಟ್ಟಿಗ° ಸಕಲ ವಿದ್ಯೆಲಿ
ಜಾಣ ಲೆಕ್ಕಾಚಾರ ಬರವಲೆ
ಗೋಣಿ ಕಾಯಿಯ ಹೊರುಗು ನೇರ್ಪಕೆ ಪೋಕುಮುಟ್ಟಿ೦ಗೆ
ತೂಣದಷ್ಟೇ ತ್ರಾಣಿ ಹುಡುಕಿರು
ಕಾಣ ಕೊರತೆಯು ತಡವು ಮಾಡದೆ
ಚಾಣೆ ತಲೆಯಪ್ಪದರ ಮದಲೇ ಮದುವೆ ಕಳುಶೆಕ್ಕು
.
ಅಕ್ಕ° ಕಳುಸಿದವೊ೦ದು ಜಾತಕ
ಪಕ್ಕನೆಯೆ ತೋರುಸಿರೆ ಕೂಡಲೆ
ಲೆಕ್ಕ ಹಾಕಿದ ಜೋಯಿಸರು ಬೆಳಿನೆಗೆಲಿ ಹೇಳಿದವು
ಅಕ್ಕು ಕೂಡುತ್ತೀ ಜತೆಯು ಸರಿ
ಬಕ್ಕು ಜೀವನ ನೊಗವ ಕಟ್ಟುಲೆ
ಒಕ್ಕಿ ನೋಡಿರೆ ಸಾಕು ಸಣ್ಣಕೆ ಮನೆಯ ಹಿನ್ನೆಲೆಯ
.
ಜಾತಕವು ಕೂಡುತ್ತು ಕೂಸಿದು
ಜಾತಿಲಿಯೆ ಸಿಕ್ಕಿದ್ದು ಪುಣ್ಯವೆ
ಕೀತಳೆಯ ಹಾ೦ಗಿಪ್ಪ ಚೆ೦ದದ ತೋಟ ಬೀಗರದು
ಆತು ಬದ್ಧದ ಕಾರ್ಯ ಹೇಳಿಕೆ
ಹೋತು ಬ೦ಧುಗಳಿ೦ಗೆ ಕೂಡಲೆ
ಸೂತಕದ ಹೆದರಿಕೆಯು ತಪ್ಪುಗು ನಾ೦ದಿ ಮಾಡಿದರೆ
.
( ಮದುವೆ ಗೌಜಿ ಬೇಗ ಇಕ್ಕು ಹಾ೦ಗಾರೆ)
ಮದುವೆ ನಿಜ ಆತು -ಭಾಮಿನಿಲಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 32 ಒಪ್ಪಂಗೊ

 1. mankuthimma

  engala oorili ondu majjige,mosaru aagadda koosu iddu,aaringaadaru aavuttare helikki.

  [Reply]

  ಗಣೇಶ ಪೆರ್ವ

  ಗಣೇಶ Reply:

  ಎ೦ತರ ಆವುತ್ತರೆ ಹೇಳೆಕಾದ್ದದು? ಮಜ್ಜಿಗೆ, ಮೊಸರು? ಎನಗೆ ಅಕ್ಕು ಆತಾ.. 😉

  [Reply]

  VA:F [1.9.22_1171]
  Rating: +1 (from 1 vote)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಆವುತ್ತರೆ ಎಂತಕೆ ಹೇಳೆಕು? ಅಕ್ಕಾದರೆ ಅಲ್ಲದೋ ಹೇಳೆಕ್ಕಾದ್ದು?!

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಅದ್ಭುತ ಕಾವ್ಯಸಂವಾದ!

  [Reply]

  VA:F [1.9.22_1171]
  Rating: 0 (from 0 votes)
 3. ಅಡ್ಕತ್ತಿಮಾರುಮಾವ°

  ಕಾವ್ಯ ಸಂವಾದ ಬಾರೀ ಒಳ್ಳೆದಾಯಿದು…ಸುರೂವಿಂಗೆ ಇಸ್ತ್ತು ಗೌಜಿ ಆದರೆ ಮದುವೆ ಹೇಂಗಿಕ್ಕಾಪ್ಪಾ???ಬೈಲ ಮದುವೆ ಅಲ್ಲದಾ ರೈಸಲಿ….

  [Reply]

  VN:F [1.9.22_1171]
  Rating: 0 (from 0 votes)
 4. ಶ್ರೀಅಕ್ಕ°

  ರಘು ಭಾವ! ನಿಂಗೋ ಯೇವ ಶುದ್ದಿ ಹೇಳ್ತಾರುದೇ ಎಂಗೊ ಎಲ್ಲೋರೂ ಒಮ್ಮನಸ್ಸಿಲಿಯೇ ಕೇಳ್ತೆಯಾ°. ಅದರಲ್ಲಿಯೂ ಭಾಮಿನಿಲಿ ಆದರೆ ಒಮ್ಮನಸ್ಸಿನ ಒಟ್ಟಿಂಗೆ ಒಕ್ಕೊರಳುದೇ!!!

  ಭಾಮಿನಿಲಿ ನಮ್ಮ ಸಂಪ್ರದಾಯಲ್ಲಿ ನಡೆತ್ತ ಹಾಂಗೇ ಮದುವೆಗೆ ಪೀಠಿಕೆ ಹಾಕಿದ್ದದು ಲಾಯ್ಕಾಯಿದು. ಈಗ ಹೆಚ್ಚಿನದ್ದು ಅವ್ವವ್ವೇ ನಿಗಂಟು ಮಾಡಿಗೊಂಬ ಮದುವೆಗ ಅಪ್ಪ ಕಾರಣ ಅಕ್ಕಂದ್ರಿಂಗೂ ಕೆಲಸ ಕಮ್ಮಿ ಕೊಡ್ತವು ತಮ್ಮಂದ್ರು ಕೂಸು ಹುಡ್ಕುದರ ಅಲ್ಲದೋ ಭಾವ°?
  ನಿಂಗಳ ಭಾಮಿನಿಲಿ ಜೊತೆ ಆದ ಜೋಡಿಗ ಹೇಂಗೆ ಮುಂದರುದು ಹೊಸ ಬಾಳಿಂಗೆ ಕಾಲು ಮಡುಗುತ್ತವು ಹೇಳಿ ನೋಡ್ಲೆ ಇನ್ನಾಣ ಕಂತುಗಳ ಕಾಯ್ತೆ.
  ಆದಷ್ಟು ಬೇಗ ಬರಲಿ ರಘು ಭಾವ°!! ಜೆಂಬ್ರಂಗಳ ಚೊರಿ ಇದ್ದಿದಾ ಇನ್ನು!! ಮತ್ತೆ ಬೈಲಿನ ತಮ್ಮಂದ್ರ ಮದುವೆ ಮುಹೂರ್ತಂಗಳೂ ಇದ್ದು.. ಅದಕ್ಕೆ ತೊಂದರೆ ಅಪ್ಪ ಹಾಂಗೆ ಭಾಮಿನಿಲಿ ಅಪ್ಪ ಬೈಲ ಮದುವೆ ಬಾರದ್ದೆ!!!

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವವಿಜಯತ್ತೆಜಯಗೌರಿ ಅಕ್ಕ°ಶ್ರೀಅಕ್ಕ°ಕಜೆವಸಂತ°ದೇವಸ್ಯ ಮಾಣಿಚೆನ್ನೈ ಬಾವ°ಉಡುಪುಮೂಲೆ ಅಪ್ಪಚ್ಚಿಪೆರ್ಲದಣ್ಣಗೋಪಾಲಣ್ಣಪುತ್ತೂರುಬಾವಕೊಳಚ್ಚಿಪ್ಪು ಬಾವಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ಡಾಮಹೇಶಣ್ಣಶ್ಯಾಮಣ್ಣಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಪೆಂಗಣ್ಣ°ಶರ್ಮಪ್ಪಚ್ಚಿಅನು ಉಡುಪುಮೂಲೆನೀರ್ಕಜೆ ಮಹೇಶವೆಂಕಟ್ ಕೋಟೂರುಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ