ಮನದಾಸೆ – ಭಾಮಿನಿಲಿ

ಜೋಡು ಎತ್ತಿನ ಗಾಡಿ ನೋಡುಲೆ
ಜೋಡು ಇಲ್ಲದೆ ಬರಿಯಗಾಲಿಲಿ
ತೋಡು ಕಾಡಿನ ಕರೆಲಿ ನೆಡೆಯುವ ಆಸೆ ಎನಗಾತು
ನೋಡಿದರೆ ಕಾಡಿಲ್ಲೆ ಕಟ್ಟಡ
ಕಾಡು ಬೆಳದಾಕಾಶದೆತ್ತರ
ಓಡಬೇಕೆನಿಸುತ್ತು ಈ ಸುಡುಗಾಡು ಬೇಡ ಸುಡು

ಹಲಸಿನಾಮರ ಗೆಲ್ಲ ಕೊಡಿಯಲಿ
ಕೆಲಸಕಾಲಕೆ ಕೂದು ರಾಗದೊ
ಳುಲಿವ ಕೋಗಿಲೆ ದನಿಯ ಕೇಳುವ ಆಸೆ ಎನಗಾತು
ನೆಲದ ಮೇಗಣ ಮರಗಳೆಲ್ಲವು
ಅಲಗ ಕೊಡಲಿಗೆ ಆತು ಲಯ ಕೋ
ಗಿಲೆಯ ಕೂಜನವಿರದ ಜೀವನ ಬರಡು ಬೇಡ ಬಿಡು

ಚ೦ದ ಮಾಮನ ಜತೆಯಿರುಳು ಮಕ
ರಂದ ಹಾಲಿ೦ಗೆರದ ಅಂದದ
ಚೆಂದ ತಾರಕೆ ಗಡಣ ನೋಡುವ ಆಸೆ ಎನಗಾತು
ಇಂದಿರುಳ ಕತ್ತಲೆಲಿ ನಾ ಸೊಬ
ಗಿಂದ ಹುಣ್ಣಮೆ ಬಾನ ನೋಡಿರೆ
ಮಂದ ಹೊಗೆಗಡಲಿಂದ ಮನದಾನಂದ ದೂರ ಬಿಡು

ಸಾರಸತ್ವವು ತುಂಬಿ ಅಮೃತದ
ಧಾರೆ ಸುಧೆಯನು ದಿನವು ಎರೆಯುವ
ಊರಿನುಂಬೆಯ ಹಾಲು ಕುಡಿಯುವ ಆಸೆ ಎನಗಾತು
ತಾರು ಮಾರ್ಗಗಳಲ್ಲಿ ಹುಡುಕಿರೆ
ದಾರಿಯುದ್ದಕು ಹಾಲು ತೊಟ್ಟೆಲಿ
ಬೇರೆ ದೇಶದ ದನದ ಹಾಲಿಗೆ ರುಚಿಯೆ ಇಲ್ಲೆ ಬಿಡು

ಇರುಳು ಒರಕಿಲ್ಲದ್ದೆ ಅನುದಿನ
ಉರುಳಿ ಕೊರಗಿದೆ ಬಿಡದೆ ಯೋಚನೆ
ಅರಮನೆಯ ನೆಮ್ಮದಿಲಿ ಬದುಕುವ ಆಸೆ ಎನಗಾತು
ಸೆರೆಮನೆಯ ಜೀವನದ ನಗರವ
ತುರಿತದಲಿ ಬಿಟ್ಟೋಡಿ ಊರಿನ
ಭೂರಮೆಯ ಸನ್ನಿಧಿಯ ಸೇರೊಗ ಆಸೆ ಫಲಿಸಿತ್ತು

ಮುಳಿಯ ಭಾವ

   

You may also like...

14 Responses

  1. Gopalakrishna BHAT S.K. says:

    ತುಂಬಾ ಒಳ್ಳೆ ಪದ.ಇಷ್ಟು ಒಳ್ಳೆ ಕವಿ ಇಪ್ಪದು ನಮ್ಮ ಭಾಗ್ಯ.ಅಭಿನಂದನೆಗೋ.ಅವು ಕನ್ನಡಲ್ಲೂ ಸಾಕಷ್ಟು ಬರೆಯಲಿ ಪ್ರಸಿದ್ಧರಾಗಲಿ ಹೇಳಿ ಹಾರೈಸುತ್ತೇ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *