ಮನಸಿನ ಭಾವನೆಗೊ ಭಾಮಿನಿಲಿ…

December 30, 2010 ರ 12:05 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಊರು ಕೇರಿಗಳಲ್ಲಿ ಸಿಕ್ಕ ಕು
ಮೇರಿ ಕಡಿವೊದರಿ೦ದ ಕಷ್ಟ ಕು
ಮಾರಿ ಹುಡುಕುವ ಕೆಲಸ ಮಾಣಿಗೆ ಹೇಳಿ ಸುಖವಿಲ್ಲೆ
ಬಾರದಿರ ಹೊಸತೊ೦ದು ಕಾಲ ಸ
ರಾಗವಾಗಲಿ ಜೀವನವು ಅಣು
ರಾಗದಾ ಸತಿ ಕರವ ಪಿಡಿಯಲಿ ಎನುತ ಹಾರೈಸಿ

ಗಟ್ಟ ಹತ್ತುವ ಮನಸು ಮಾಡದ
ಗಟ್ಟಿಗರಿಗೆಂದೆನ್ನ ನಮನವು
ಗಟ್ಟಿಗೆತ್ತಿಗೊ ಕೈಯ ಹಿಡಿಯಲಿ ಊರ ಮಾಣಿಗಳ
ನೆಟ್ಟು ಸೆಸಿಗಳ ಬೆಳೆದು ಪೈಸೆಯ
ಕಟ್ಟು ಸಂಪಾದಿಸುವ ದಿನಗಳ
ಇಷ್ಟದೇವರು ಕರುಣಿಸಲಿ ವರವಾಗಿ ಮುಂದಿನಲಿ

ಅಂಬೆಗಾಲಿನ ಬಾಬೆಯೂ ಕೆದೆ
ಲು೦ಬೆ ಕ೦ಜಿಗೆ ಹುಲ್ಲು ಹಾಕುಲೆ
ಕೊ೦ಬು ಉರುಗುಗು ಬಿಡುಲೆಡಿಯ ಕೆಮಿ ಬೆಣಚಿ ಬಿಡುವಗಳೇ
ಬೊ೦ಬೆ ಕೊಟ್ಟರು ನಿಲ್ಲಿಸದು ಹಠ
ಎಂಬ ಹಳೆ ಅನುಭವದಿ ಪುಳ್ಳಿಯ
ಬೆಂಬಲಕೆ ತೋ೦ಪಟವ ಮಾಡುತ ಅಜ್ಜ ಹೆರಟವದಾ

ಕರವ ದನಗಳ ಕೆದೆಯ ಕೆಲಸವು
ಸೆರೆಮನೆಯ ಬದುಕಲ್ಲ ದೇವರ
ವರವೆನುತ ಗೋಮಾತೆ ಸೇವೆಯ ಮಾಡೆ ಧನ್ಯತೆಯು
ಸುರಿವ ಮಳೆ ಗಾಳಿಗಳ ಎದುರಿಸಿ
ದುರಿತಗಳ ಕಡೆಗಣಿಸಿ ಧೈರ್ಯವ
ಮೆರೆದು ಬದುಕುವ ಜೀವಿತವ ಪರಮಾತ್ಮ ಕರುಣಿಸಲಿ

ಸುರಿವ ಮಳೆಚಳಿ ಹವೆಗು ಹಳ್ಳಿಯ
ಪರಿಸರದಿ ನೆಮ್ಮದಿಲಿ ಬದುಕುವ
ಪರಮಸುಖ ತರವಾಡು ಮನೆಯಲಿ ನೆಲೆಸಲನವರತ
ಹಿರಿಕಿರಿಯರುಪಚಾರ ಮಾಡುತ
ಹರಿಯ ಸೇವೆಯ ಕೈಗೊಳುತ ಗುರು
ಚರಣಸೇವೆಯ ಮಾಳ್ಪ ಯೋಗವ ದೇವಿ ಕರುಣಿಸಲಿ

ಮನಸಿನ ಭಾವನೆಗೊ ಭಾಮಿನಿಲಿ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  @ {ಬಾರದಿರ ಹೊಸತೊ೦ದು ಕಾಲ ಸರಾಗವಾಗಲಿ ಜೀವನವು }

  :-) ಹಾ೦ಗೊ೦ದು ಕಾಲ ಇನ್ನು ಬಕ್ಕೊ? ಬಕ್ಕಾಯ್ಕು ಅಲ್ಲದೋ… ಬಕ್ಕು ಹೇಳಿ ತಿಳ್ಕೊ೦ಬ.. ಧನಾತ್ಮಕ ನಿರೀಕ್ಷೆಗಳೇ ಅಲ್ಲದೋ ಜೀವಿಸಲೆ ಇಪ್ಪ ಚಾಲನಾಶಕ್ತಿ..

  ಪದ್ಯ ಯಾವತ್ತಿನ ಹಾ೦ಗೆ ಒಳ್ಳೆದಾಯಿದು.. ಅಭಿನ೦ದನೆಗೊ

  [Reply]

  ಮುಳಿಯ ಭಾವ

  raghumuliya Reply:

  ಗಣೇಶ ಭಾವ,ನಿಜ.ಧನಾತ್ಮಕ ಚಿಂತನೆಯೇ ನಮ್ಮ ಮುಂದೆ ನಡೆಸೊದು.ಪ್ರೋತ್ಸಾಹಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಗೋಪಾಲ ಮಾವ

  ಹಳ್ಳಿಯ ಜೀವನವೇ ಒಳ್ಳೆಯ ಜೀವನ ಹೇಳಿ ಉತ್ತಮ ಆಶಯವ ಹೊಂದಿದ, ಪೇಟೆಯ ಸುಖ (?!)ದ ಜೀವನಕ್ಕೆ ಹಲುಬುವ ಹಳ್ಳಿಯ ಕೂಸುಗವಕ್ಕೆ ಬುದ್ದಿವಾದ ಹೇಳುವ, ನಶಿಸಿ ಹೋವ್ತಾ ಇದ್ದ ಅವಿಭಾಜ್ಯ ಕುಟುಂಬ ವ್ಯವಸ್ಥೆ ಲಿಪ್ಪ ಸುಖ ಸಂತೋಷ, ಪ್ರಯೋಜನಂಗಳ ವರ್ಣಿಸುವ, ಈ ಪದ್ಯ ಬಹಳ ಸೊಗಸಾಗಿ ಬಯಿಂದು. ಹಳ್ಳಿಯ ಜವ್ವನಿಗರ ಮಾನಸಿಕ ತುಮುಲವ ನೆನೆಸ್ಯೊಂಡ ಮುಳಿಯದ ಭಾವಯ್ಯನ ಸುಂದರ ಕಲ್ಪನೆ ಕಲ್ಪನೆ ಆಗಿರದ್ದೆ, ನಿಜವಾಗಿ ಆಗಲಿ, ಕನಸು ನೆನಸಾಗಲಿ. ಭಾವಯ್ಯಾ, ಬೈಲಿಂಗೆ ಭಾಮಿನಿಯ ಮೂಲಕ ಉತ್ತಮ ಕೊಡುಗೆ ನೀಡಿದ ನಿನಗೆ ಮತ್ತೊಂದರಿ ಅಭಿನಂದನೆಗೊ.

  [Reply]

  ಮುಳಿಯ ಭಾವ

  raghumuliya Reply:

  ಮಾವ,ನಿಂಗಳ ಸತತ ಪ್ರೋತ್ಸಾಹ,ವಿಮರ್ಶೆಗೋ ಎನ್ನ ಇಲ್ಲಿಯವರೆಗೆ ಎತ್ತುಸಿದ್ದು.ಸದಾ ಆಶೀರ್ವಾದ ಇರಲಿ,ಧನ್ಯವಾದ.

  [Reply]

  VA:F [1.9.22_1171]
  Rating: +2 (from 2 votes)
 3. ಬಲ್ನಾಡುಮಾಣಿ

  ರಘುಮಾವ, ಆನಂತೂ ನಿಂಗಳ ’ಭಾಮಿನಿ’ಯ ಪಕ್ಕಾ ಅಭಿಮಾನಿ ಆದೆ! ಹಳ್ಳಿ ಜೀವನದ ಚಿತ್ರಣ ತುಂಬಾ ಚೆಂದಕ್ಕೆ ಬಯಿಂದು.. [ಪುಳ್ಳಿಯ ಬೆಂಬಲಕೆ ತೋ೦ಪಟವ ಮಾಡುತ ಅಜ್ಜ ಹೆರಟವದಾ] ಈ ಸಾಲು ಎನ್ನ ಬಾಲ್ಯವ ಕಣ್ಣಿಂಗೆ ಕಟ್ಸಿತ್ತು.. ಈಗ ತೋಂಪಟ ಮಾಡ್ಸಿಗೊಂಡು ಅಜ್ಜನ ಹೆಗಲಿಲಿ ಸವಾರಿ ಮಾಡುವ ಅನುಭವ ಎಷ್ಟು ಮಕ್ಕೊಗೆ ಸಿಕ್ಕುತ್ತು ಹೇಳಿ ಒಂದು ಗಳಿಗೆ ಯೋಚನೆಯೂ ಆತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಹೇಳಿ ದೊಡ್ಡೋರು ಹೇಳಿದ್ದು ಇಂದ್ರಾಣ ಸುಖದ(?) ಪೇಟೆ ಜೀವನವನ್ನೆಯೋ ಹೇಳಿ ಸಂಶಯ ಎನಗೆ.. ಪೇಟೆ ಜೀವನವ ದೂರುದಲ್ಲ, ಅದು ಎಷ್ಟೋ ಸತ್ತಿ ಅನಿವಾರ್ಯ ಆಗಿರ್ತು.. ಆದರೆ ಹೆಚ್ಚಿನೋರು ಸಿಕ್ಕಿಬೀಳುವ ಆ ಯಾಂತ್ರಿಕ ಜೀವನಶೈಲಿ ಅವರ ನೆಮ್ಮದಿಯ ಕಸಿದೊಗೊಂಬದು ಕಟುಸತ್ಯ,ಅದರ ಪ್ರಭಾವ ಅವರ ಮಕ್ಕಳ ಬಾಲ್ಯದ ಖುಷಿಯ ಕದಿವದೂ ಬೇಜಾರು ಕೊಡುವ ವಿಷಯ ಎನಗೆ..
  ಕಾಲಚಕ್ರ ತಿರುಗಿದ ಹಾಂಗೆ ಹಳ್ಳಿಜೀವನಕ್ಕೂ ಪುನಾ ಬೆಲೆಬಕ್ಕು ಹೇಳ್ತ ಸತ್ಯವ ಸೂಕ್ಷ್ಮವಾಗಿ ತಿಳಿಶಿದ್ದಿ… ಬೆಂಗ್ಳೂರಮಾಣಿಯೇ ಆದರೊಳ್ಳೆದು ಹೇಳುವ ನಮ್ಮ ಆಲೋಚನೆ ರಜಾ ದೂರ ಹೋದರೆ, ಬೌಷ ಹಳ್ಳಿಮನೆಲಿ ಗೈಯ್ತ ಎಷ್ಟೋ ಬ್ರಹ್ಮಚಾರಿಗಳ ಜೀವನ ಸುಗಮ ಅಕ್ಕು ಕಾಣ್ತು..
  ಒಟ್ಟಿಲಿ ರಘುಮಾವನ ಭಾಮಿನಿ ಮನವ ತಟ್ಟಿತ್ತು! :)

  [Reply]

  ಮುಳಿಯ ಭಾವ

  raghumuliya Reply:

  ಮನಸ್ಸು ತುಂಬಿ ಬಂತು ಮಾಣೀ,ಬರದ್ದು ಸಾರ್ಥಕ ಅಪ್ಪದು ಒಬ್ಬ ಓದಿ/ಹಾಡಿ ಕೊಶಿ ಪಟ್ಟಪ್ಪಗ.ಮತ್ತೆ ತನ್ನ ಮನಸ್ಸಿನ್ಗೆ ಹತ್ತರೆ ತಂದಪ್ಪಗ.ಇಂದು ಎನಗೆ ಆ ಸಾರ್ಥಕತೆ ಬಂತು.

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ
  ಮಹೇಶ

  {ಉ೦ಬೆ ಕ೦ಜಿಗೆ ಹುಲ್ಲು ಹಾಕುಲೆ}
  ಅಣ್ಣನ ಮಕ್ಕಳ ಉ೦ಬೆ ಪ್ರೀತಿ ಮನಃಪಟಲಲ್ಲಿ ಹಾದು ಹೋವುತ್ತಾ ಇದ್ದು. :)

  {‘ಸೇ’ಸಿಗಳ} ಹೇಳಿ ದೀರ್ಘ ಮಾಡುವದರಿ೦ದ ಸಸ್ಯಗಳ ಹೇಳಿರೆ ಸರಿ ಅಕ್ಕೊ ಹೇಳಿ ಕಾಣ್ತು. ಛ೦ದಸ್ಸಿ೦ಗೆ ಹೊ೦ದುಗಾಯಿಕ್ಕು, ಅಲ್ಲದ?

  [Reply]

  ಮುಳಿಯ ಭಾವ

  raghumuliya Reply:

  ಮಹೇಶ,ಧನ್ಯವಾದ,ನೀನು ಹೇಳಿದ್ದು ಸರಿ.ಈಗ ಸರಿ ಆತೋ ನೋಡು.

  [Reply]

  ಡಾಮಹೇಶಣ್ಣ

  ಮಹೇಶ Reply:

  ಛ೦ದಸ್ಸಿ೦ಗೆ ಹೊ೦ದುಸಲೆ ಒ೦ದು ಮಾತ್ರೆ ಹೆಚ್ಚು ಮಾಡಿದ್ದೊ ಹೇಳಿ ಆನು ಗ್ರೇಶಿದ್ದದು. ಕಮ್ಮಿ ಆಯೆಕಾದ್ದದೊ?

  [Reply]

  VA:F [1.9.22_1171]
  Rating: 0 (from 0 votes)
 5. ಮೋಹನಣ್ಣ
  Krishnamohana Bhat

  ರಘುಭಾವನ ಭಾಮಿನಿ ಬಾರದ್ದೆ ಎನೋಕಳಕ್ಕೊಡ ಹಾ೦ಗೆ ಆಗಿಯೊ೦ಡಿತ್ತು.ಈಗ ಬ೦ತಾನೆ ಬರ್ಜರೀಲಿ.ಭಾವ ಬಾರಿ ಲಾಯಕಾಯಿದು.ಬಲ್ನಾಡುಮಾಣಿ ಹೇಳಿದ ಹಾ೦ಗೆ ಅಜ್ಜ೦ತೊ೦ಪಟಮಾಡುತ್ತದು ಕೇಳಿ ಹಳತ್ತೂ ಹೊಸತ್ತು ಒಟ್ಟಿ೦ಗೆ ನೆ೦ಪಾತು.ಎನ್ನ ಪುಳ್ಳಿ ಅಜ್ಜ ಹೆಗಲ ಮೇಲೆ ಹೇಳುಗು ಅವಕ್ಕೆಲ್ಲ ತೊ೦ಪಟ ಶಬ್ದವೇ ಗೊ೦ತಿಲ್ಲೆ ನಾವು ಕಲಿಸಿದ್ದೂ ಇಲ್ಲೆ.ಇರಳಿ ಭಾಮಿನಿಯ೦ತು ರೈಸಿದ್ದು.ಒಪ೦ಗಳೊಟ್ಟಿ೦ಗೆ.

  [Reply]

  ಮುಳಿಯ ಭಾವ

  raghumuliya Reply:

  “ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಗಸು ” ಅಲ್ಲದೋ ಮಾವ?ತೋ೦ಪಟ ಮಾಡಿಯೇ ಅಲ್ಲದೋ ನಾವೆಲ್ಲಾ ಬೆಳದದ್ದು?ಶಬ್ದವೂ ಬೆಳೆಯಲಿ ಮು೦ದಾಣ ಪೀಳಿಗೆಗೆ ಸೇರಲಿ.ಎರಡು ವಾರ ಉದ್ಯೋಗ ತಿರುಗಾಟ ಆಗಿ ರಜಾ ಅವ್ಯವಸ್ಥೆ ಆತು.ಕ್ಷಮಿಸೆಕ್ಕು,ಖಂಡಿತಾ ಪ್ರಯತ್ನ ಮಾಡ್ತೆ,ನಿಂಗೋ ಏನೂ ಕಳಕ್ಕೊಳ್ಳದ್ದ ಹಾಂಗೆ ನೋಡುಲೆ.

  [Reply]

  VA:F [1.9.22_1171]
  Rating: +1 (from 1 vote)
 6. ಮೋಹನಣ್ಣ

  ಆನು ಕಳಕ್ಕೊ೦ಡದರಿ೦ದ ಪಡದ್ದದೇ ಹೆಚ್ಚು ಈ ಬಯಲು ತು೦ಬಾ ಸುಖ ಸ೦ತೋಷ೦ಗಳ ಕೊಟ್ಟತ್ತು.ಹೊಸ ಚಿಗುರುಗೋಕ್ಕೆ ಕೊಡ್ಲೆ ಎನ್ನತ್ರೆ ಇದ್ದದು ಶುಭಾಶಯ೦ಗೊ ಮಾ೦ತ್ರ.ರಘುಭಾವನ ಪ್ರೋಮಿಸ್ಸಿ೦ದಾಗಿ ಹೊಸ ಹುಮ್ಮಸು ಬಯಿ೦ದು;ಕಾದೋ೦ಡಿರುತ್ತೆ.ಒಪ್ಪ೦ಗಳೊಟ್ಟಿ೦ಗೆ

  [Reply]

  VN:F [1.9.22_1171]
  Rating: 0 (from 0 votes)
 7. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ದೊಡ್ಡ ಸೌಟು (ಅಡಿಗೆಯವು) ಮತ್ತೆ ಸಣ್ಣ ಸೌಟು (ಪುರೋಹಿತಕ್ಕೊ) ಇವಕ್ಕೆ ಕೂಸು ಸಿಕ್ಕಲೆ ಕಷ್ಟ ಹೇಳಿ ರೆಜ ಸಮಯ ಮೊದಲು ಎನ್ನ ಗೆಳೆಯ ಒಬ್ಬ ಹೇಳಿತ್ತಿದ್ದ.
  ಆದ್ರೆ ಈಗ ಅದರೊಟ್ಟಿಂಗೆ ಕೃಷಿ ಮಾಡಿ ಹಳ್ಳಿಲಿ ಜೀವನ ಮಾಡುವವಕ್ಕೂ ಅದೇ ಸ್ಥಿತಿ ಬಯಿಂದು. ಪೇಟೆಲಿ ಇಪ್ಪವಕ್ಕೆ ತಿನ್ನೆಕ್ಕಾರೆ ಹಳ್ಳಿಯ ಬೆಳೆ ಬರೆಕು ಹೇಳ್ತ ಜ್ಞಾನ ಇಲ್ಲೆ.
  ಬಾಮಿನಿಲಿ ಇದೆಲ್ಲಾ ಲಾಯಿಕಲಿ ಬಯಿಂದು. [ಕರವ ದನಗಳ ಕೆದೆಯ ಕೆಲಸವು ಸೆರೆಮನೆಯ ಬದುಕಲ್ಲ ದೇವರ ವರವೆನುತ ಗೋಮಾತೆ ಸೇವೆಯ ಮಾಡೆ ಧನ್ಯತೆಯು]-ಎಲ್ಲರೂ ಹೀಂಗೆ ಜಾನ್ಸಿರೆ ಲೋಕ ಸುಭಿಕ್ಷ ಅಕ್ಕು

  [Reply]

  ಮುಳಿಯ ಭಾವ

  raghumuliya Reply:

  ಶರ್ಮಪ್ಪಚ್ಚಿ,ನಿಜವಾದ ಮಾತು.ಇಂದು ” ದೂರದ ಬೆಟ್ಟ ನುಣ್ಣಗೆ ” ಹೇಳಿ ಆಯಿದು.ಪರಿಸ್ಥಿತಿ ಬದಲಾಗಲಿ ಹೇಳಿ ಮನಸ್ಸು ಬಯಸುತ್ತು.ವಿಮರ್ಶೆಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಶುದ್ದಿಕ್ಕಾರ°ಶ್ರೀಅಕ್ಕ°ಸರ್ಪಮಲೆ ಮಾವ°ಅಕ್ಷರ°ಸುವರ್ಣಿನೀ ಕೊಣಲೆತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ಶೀಲಾಲಕ್ಷ್ಮೀ ಕಾಸರಗೋಡುಪೆರ್ಲದಣ್ಣಡಾಗುಟ್ರಕ್ಕ°ಅಜ್ಜಕಾನ ಭಾವಹಳೆಮನೆ ಅಣ್ಣಗಣೇಶ ಮಾವ°ಚೂರಿಬೈಲು ದೀಪಕ್ಕದೊಡ್ಡಮಾವ°ಕೆದೂರು ಡಾಕ್ಟ್ರುಬಾವ°ವಿಜಯತ್ತೆಮುಳಿಯ ಭಾವವೇಣೂರಣ್ಣಅನು ಉಡುಪುಮೂಲೆವಿದ್ವಾನಣ್ಣಡೈಮಂಡು ಭಾವಬೊಳುಂಬು ಮಾವ°ಶಾ...ರೀಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ