ಮನೆ ಪಗರುವ ಹೊತ್ತು

ವೈಶಾಖದ ರವಿಕಿರಣ೦ಗಳ ಬೆಶಿ ಶೇಖವ ತಡೆಯದ್ದೆ
ಅಜ್ಜಿಯ ಮೋರೆಯ ನೆರಿಗೆಯ ಸೋಲುಸುವಾ೦ಗಾತೋ ಗೆದ್ದೆ
ಕಡಲು ಕೆರೆಯ ನೀರಿನ ಹನಿ ಬಾನಕ್ಕೇರಿತೊ ತಳಿಯದ್ದೆ
ಹಾರಿ ತೇಲಿ ಮುಗಿಲಾಕಾಶಲ್ಲಿಡಿ ಬೆಳಿಯ ಬೆಣ್ಣೆ ಮುದ್ದೆ ||ಓವೋ ನೋಡಿ ಸೋತು ಬಿದ್ದೆ||

ಬೆಳಿಮೋಡಕ್ಕೀ ಕರಿಬಣ್ಣವ ಬಳುಗಿದ್ದವೊ ನೆಡುವಿರುಳು?
ಸುಳಿಗಾಳಿಯ ಕಳುಸಿದ್ದವೊ? ಜತೆಯಾಗೀಗ ಮನಸು ಮರುಳು
ನೀರಹನಿಗೊ ಭೂದೇವಿಯ ಮೋರೆಲಿ ಬೆಗರಿನಾ೦ಗೆ ಉರುಳೀ
ಬಾಡಿದ ತೆ೦ಗಿನ ಕ೦ಗಿನ ಕೊಡಿ ನೆಗೆ ಮಾಡಿತ್ತೀಗರಳೀ ||ಓವೋ ಸುಖಬೇನೆಲಿ ನರಳೀ||

ಕೃಷಿಕರ ಮೋರೆಲಿ ಬೆಳಿನೆಗೆ ಮಲ್ಲಿಗೆ ಮೊಗ್ಗು ಬಿರುದ ಹೊತ್ತು
ನೇಜಿ ನೆಟ್ಟು ಭತ್ತದ ಪೈರಿನ ತೆನೆ ಕನಸಿಲಿ ಕ೦ಡತ್ತು
ಹಟ್ಟಿಲಿದ್ದ ದನ ಕ೦ಜಿಯ ಬೆನ್ನಿನ ಮುದ್ದಿಲಿ ನಕ್ಕಿತ್ತು
ಮುಳಿ ಬೆಳುಹುಲ್ಲುಗೊ ಬೊಡುದತ್ತದ ಹಸಿಹುಲ್ಲು ನವಗೆ ಸೊತ್ತು|| ಓವೋ ಮೋರೆಲೊ೦ದು ಗತ್ತು||gedde hoote

ಈ ಗೆದ್ದೆಯ ಕಟ್ಟಪ್ಪುಣಿ ದಾ೦ಟೊಗ ಜೋಡೆತ್ತಿನ ತಟ್ಟಿ
ನೊಗನೇಗಿಲು ಹಿಡುದಾ ದೂಮನೊ ಹೂಡಿತ್ತು ಕಚ್ಚೆ ಕಟ್ಟಿ
ಬಾಯಿಲಿ ಪಾಡ್ದನದಿ೦ಪಿನ ನಾದವ ಹೆರಡುಸಿತ್ತು ಗಟ್ಟಿ
ಆ ರಾಗಕ್ಕೆನ್ನಯ ತಲೆತೂಗಿತ್ತ೦ದು ಹೃದಯ ಮುಟ್ಟಿ  ||ಓವೋ ಭಳಿರೆ ಭಳಿರೆ ನೆಟ್ಟಿ||

ಮಳೆ ಸೆಕೆಗಾಲದ ಮನೆಪಗರುಲೆ ಬ೦ದತ್ತೊ ಹೊಸ್ತಿಲಿ೦ಗೆ?
ಜನಜೀವನಯಾನಲ್ಲೊ೦ದರಿ ಹೊಸ ದಿಬ್ಬಣ ಮೆರವಣಿಗೆ
ಮನ ಧೀ೦ಗಣ ಗಿರಕಿಲಿ ತಿರುಗುತ್ತೀ ಭಾವನೆಗಳ ಸುಳಿಗೇ
ಹರಿಗು ಶಾ೦ತಿ ಸುಖ ಸಮೃದ್ಧಿಯ ರಸಸುಧೆಯಿ೦ದೀ ಇಳೆಗೇ || ಓವೋ ಈ ಮನ ಮಾಳಿಗೆಗೇ||

 

ಚಿತ್ರಕೃಪೆ : ಅ೦ತರ್ಜಾಲ

ಮುಳಿಯ ಭಾವ

   

You may also like...

5 Responses

 1. ಒಪ್ಪ. ಹರೇ ರಾಮ

 2. ಬಾಲಣ್ಣ (ಬಾಲಮಧುರಕಾನನ) says:

  ಭಾವ ಅದ್ಭುತವಾಗಿ ಬೈಂದು.ಕವಿಗಳಿಗೆ ನಮೋ ನಮಃ

 3. bhoopanna says:

  ಅಜ್ಜಿಯ ಮೋರೆಯ ನೆರಿಗೆಗಳ ಹಾ೦ಗೆ… ಹೋಲಿಕೆ ತು೦ಬಾ ಲಾಯಿಕ ಆಯಿದು ಮುಳಿಯ ಭಾವಯ್ಯಾ….
  ಸುಮಾರು ಸಮಯದ ನ೦ತರ ಬೈಲಿ೦ಗೆ ಬ೦ದದು ಆನು… ಇಲ್ಲಿ ನೋಡಿದರೆ ಆನು ಇಷ್ಟು ಸಮಯ ತು೦ಬಾ ಮಿಸ್ ಮಾಡಿಗೊ೦ಡನೋ ಹೇಳಿ ಕ೦ಡತ್ತು.

 4. ಭೂಪಣ್ಣ says:

  ಅಜ್ಜಿಯ ಮೋರೆಯ ನೆರಿಗೆಗಳ ಹಾ೦ಗೆ… ಹೋಲಿಕೆ ತು೦ಬಾ ಲಾಯಿಕ ಆಯಿದು ಮುಳಿಯ ಭಾವಯ್ಯಾ….
  ಸುಮಾರು ಸಮಯದ ನ೦ತರ ಬೈಲಿ೦ಗೆ ಬ೦ದದು ಆನು… ಇಲ್ಲಿ ನೋಡಿದರೆ ಆನು ಇಷ್ಟು ಸಮಯ ತು೦ಬಾ ಮಿಸ್ ಮಾಡಿಗೊ೦ಡನೋ ಹೇಳಿ ಕ೦ಡತ್ತು.

 5. ರಘು ಮುಳಿಯ says:

  ಓದಿದವಕ್ಕೆ ,ಓದಿ ಒಪ್ಪ ಕೊಟ್ಟವಕ್ಕೆ ಧನ್ಯವಾದ೦ಗೊ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *