ಮಳೆಗಾಲಲ್ಲಿ ಒ೦ದು ದಿನ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ
ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಕವನ ಸ್ಪರ್ಧೆಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಬರಹ.
ಲೇಖಕರಾದ ಶ್ರೀ ಲಕ್ಶ್ಮೀನಾರಾಯಣ ಕೆ.ಜಿ. ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

 

ಲ.ನಾ.ಭಾವ ಪುಚ್ಚೆಗೆ ಕವಿತೆ ಹೇಳೊದೋ?

ಲ.ನಾ.ಭಾವ ಪುಚ್ಚೆಗೆ ಕವಿತೆ ಹೇಳೊದೋ?

ಮಳೆಗಾನ

ಮಳೆಸುರಿವ ಸಮಯಲ್ಲಿ
ಒಳ ಮನೆಲಿ ಕೂದಂಡು
ಇಳೆಯ ಸಂತಸ ಕಾಂಬಲೆಷ್ಟು ಸೊಗಸು।

ಕಳಿಯದ್ದೆ ಕಾದೋಳ
ತಳಿಯದ್ದೆ ಮೆಲ್ಲಂಗೆ
ಇಳುದು ಬಕ್ಕದ ಧರೆಯ ಕಾಂಬಲೇಳಿ॥

ಸೀರೆ ಬಣ್ಣವು ಹಸಿರು
ಮೋರೆ ಬಣ್ಣವು ಕೆಂಪು
ಅರರೆ ಹೇಳುವುದೆಂತ ನಾಚಿ ನೀರು।
ಕರವ ಹಿಡಿವಲೆ ಬಪ್ಪ
ಸುರರ ದೇವನ ಕಂಡು
ಶಿರವ ತಗ್ಗುಸಿ ನಿಂದ ಸುಗುಣ ಸಾರೆ॥

ಮಳೆಯಾಗಿ ಧರೆಗಿಳುದ
ಖಳರ ಕೊಂದವ ಅಂದು
ಸುಳುದ ಸಖಿ ಎದುರಂದು ಚೆಂದಲ್ಲಿಯೆ।
ಚಳಿಸೆಖೆಯು ಒಟ್ಟಿಂಗೆ
ಒಳ ಅಪ್ಪ ರೋಗಕ್ಕೆ
ಹೇಳ್ವುದೆಂತರ ಉಮ್ಮ ಹಾಂಗಾತಡ॥

ಮೋರೆ ಮೋರೆಯ ಕಂಡು
ಓರೆ ನೆಗೆ ಮಾಡಿದವು
ಸೇರಿದವು ಒಟ್ಟಿಂಗೆ ನಯನ ನಾಕು।
ಮಾರ ಕಣೆಗಳ ತೆಗದ
ಆರಲ್ಲ ಐದಾಡ
ಸರಿಯಾಗಿ ಗುರಿನೋಡಿ ಬಿಟ್ಟ ಅಂದು॥

ಮೊಗ್ಗಾತು ಹೂಗಾತು
ಹೂಗು ಕಾಯ್ ಹಣ್ಣಾತು
ಸುಗ್ಗಿ ಹೇಳಿದವೆಲ್ಲ ಹಸಿರ ಕಂಡು।
ಬೈಗು ಹೊತ್ತಿಲಿ ಇಂದು
ನುಗ್ಗಿ  ಬಂದೊಂಡಿಪ್ಪ
ಜಗ್ಗದಾ ಸುರಿಮಳೆಯು ಪದ್ಯವಾತು॥

ಸಂಪಾದಕ°

   

You may also like...

7 Responses

 1. ಚೆನ್ನೈ ಭಾವ° says:

  ಮಳೆಗಾನ ಒಪ್ಪ ಆಯ್ದು. ಅಭಿನಂದನೆಗೊ ಬಹುಮಾನಗಳಿಸಿದ್ದಕ್ಕೆ. ಹರೇ ರಾಮ

 2. ಮಾನೀರ್ ಮಾಣಿ says:

  ಚೊಲೋ ಆಯ್ದು ಪದ್ಯ. 🙂 ಅಭಿನ೦ದನೆಗಳು

 3. ಇಂದಿರತ್ತೆ says:

  ಸುರಿಮಳೆಯು ಚೆಂದಕ್ಕೆ ಪದ್ಯವಪ್ಪ ಹೊತ್ತಿಲಿ ಪುಚ್ಚೆಯೂ ಮಿಯಾಂವ್ ಹೇಳಿ ಏಕಾಗ್ರತೆಗೆ ಭಂಗ ಬಪ್ಪಲಾಗ ಹೇಳ್ತ ಜಾಗ್ರತೆ- ಎರಡೂ ಲಾಯ್ಕಾಯಿದು.

 4. ಬೊಳುಂಬು ಗೋಪಾಲ says:

  ಇಳೆ ಮಳೆಯ ಪ್ರಣಯ ಪ್ರಸಂಗಂದಲಾಗಿ ಬೆಳೆ ಬಂದದು ಲಾಯಕಾಯಿದು. ಲಾನಾ ಭಾವನ ಭಾವನೆ ಖುಶಿ ತಂತು.

 5. ಒಪ್ಪ ಪದ್ಯ. ಅಭಿನಂದನೆಗೊ

 6. ರಘುಮುಳಿಯ says:

  ಆಹಾ..ಓದುವ ಮನಸ್ಸಿ೦ಗೆ ಹಬ್ಬದ ವಾತಾವರಣ ಕೊಡುವ ಕವಿತೆ ಇದು.
  ನಿಜಕ್ಕೂ ಈ ವರುಷದ ವಿಷು ವಿಶೇಷ ಕವನ೦ಗೊ ತೀರ್ಪು ಕೊಡುಲೆ ಕೂದವಕ್ಕೆ ಸಮಸ್ಯೆ ಕೊಟ್ಟಿಕ್ಕು.ಲಾನ ಭಾವ೦ಗೆ ಅಭಿನ೦ದನೆ.ಬರಳಿ ಹೀ೦ಗೇ ಶುದ್ದಿಗೊ.

 7. kalpanaarun says:

  ಪದ್ಯ ಚಲೊ ಆಯ್ದು.ಈ ಮಳೆಗಾಲದಲ್ಲಿ ಒನ್ದಸಲ ಈ ಪದ್ಯ ಹೆಳಲಕ್ಕು.ಮಳೆ ಬೆಸರಾದ್ರೂ ಇಳೆಗೆ ಬೇಕು.ಅಬಿನನ್ದನೆ.ಒೞೇ ಹಾಡುಗಳು ಬರಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *