ರೋಗರಹಿತಜೀವನ ಪಥ – ಭಾಮಿನಿಲಿ

November 24, 2010 ರ 12:27 pmಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹತ್ತುಲೆಡಿಗಾತಿಲ್ಲೆ ಮಾಣಿಗೆ
ಕುತ್ತ ಚಡವಿನ ಮಾರ್ಗ ನಾಗರ
ಬೆತ್ತ ಬೇಡಜ್ಜಂಗೆ ಊರುಲೆ ಏರು ಜವ್ವನಿಗ°
ಹತ್ತಿ ಹಾಸಿಗೆ ಮೇಲೆ ಪವಡಿಸಿ
ಹೊತ್ತುಹೊತ್ತಿಗೆ ದೂರದರುಶನ
ಗತ್ತಿಲಿಯೆ ನೋಡಿದರೆ ಕಸ್ತಲೆ ನಿತ್ಯ ಜೀವನಕೆ

ಎದ್ದು ಸೂರ್ಯೋದಯದ ಮದಲೇ
ಸದ್ದಿರದೆ ಮಾಡಿದರೆ ಯೋಗವ
ಗೆದ್ದು ಬಪ್ಪದು ನಿಜವು ಜೀವನ ರೋಗ ಯುದ್ಧಗಳ
ರದ್ದಿತಿಂಡಿಯ ತಿನ್ನದಿರದಿರ
ದಿದ್ದರದು ಪರಮಸುಖ ಜೀವನ
ದುದ್ದ ಬೆಳಗಿನ್ನಿದಕೆ ಸಂಶಯ ಬೇಡ ನವಗೆ೦ದ

ಕಾಸುವೆಣ್ಣೆಲಿ ಹೊರುದು ತಿಂಡಿಯ
ಮಾಸದುದ್ದಕು ಮುಕ್ಕಿ ತೇಗುತ
ಲಾಸೆ ನಾಲಗೆ ಮಾತ ಕೇಳಿರೆ ಘಾಸಿ ನಿಶ್ಚಿತವು
ಹಸಿಯ ತರಕಾರಿಗಳ ಸೇವಿಸಿ
ಬಿಸಿಯ ಮಾಡಿದ ನೀರು ಕುಡುದರೆ
ವಾಸಿಯಾಗದ ರೋಗ ತಡೆಯುವ ಶಗುತಿ ಬಕ್ಕೆಂದ

ಧೂಮಪಾನವು ಶ್ವಾಸಕೋಶಕೆ
ಸೋಮಪಾನವು ಸಕಲರೋಗಕೆ
ವಾಮಮಾರ್ಗಗಳೆ೦ಬ ವಾಕ್ಯವ ಮನಸಿನೊಳ ಮಡುಗಿ
ನೇಮದಲಿ ಬದುಕೆಕ್ಕು ಎಂದಿಗು
ಹೋಮಗಳ ಕೈಗೊಂಡು ಪ್ರತಿದಿನ
ರಾಮದೇವರು ನಡೆದ ದಾರಿಯ ಬಳಸಿ ನಡೆಯೆಕ್ಕು

ಯುಕುತಿಯಲಿ ಬದುಕಿದರೆ ಇಚ್ಛಾ
ಶಕುತಿ ಬೆ೦ಬಲಕಿರಳಿ ಅನುದಿನ
ಭಕುತಿಮಾರ್ಗದ ನಡೆಯ ಪಾಲಿಸೆ ಗೆಲವು ಅನವರತ
ಭುಕುತಿಯಲಿ ಮಿತವಾದ ಯೋಜನೆ
ಉಕುತಿಯಲಿ ಹಿತವಾದ ಯೋಚನೆ
ಮುಕುತಿಮಾರ್ಗವ ಕ೦ಡುಗೊ೦ಬಲೆ ಸುಲಭ ಸಾಧನವು

(ಸಶೇಷ)

ರೋಗರಹಿತಜೀವನ ಪಥ - ಭಾಮಿನಿಲಿ , 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಭಾವಾ! ರೈಸಿದ್ದು!! 😀
  (ದೂರದರುಶನ ಗತ್ತಿಲಿಯೆ ನೋಡಿದರೆ ಕಸ್ತಲೆ ನಿತ್ಯ ಜೀವನಕೆ )
  😀
  ದೂರ ದರ್ಶಿತ್ವ ಬಕ್ಕು ಹೇಳಿ ನೋಡುದು ಆದಿಕ್ಕು!! “ದೂರದೃಷ್ಟಿ” ಬಪ್ಪದಂತೂ ಗ್ಯಾರಂಟಿ!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುvreddhiಅಜ್ಜಕಾನ ಭಾವಸುವರ್ಣಿನೀ ಕೊಣಲೆವಿದ್ವಾನಣ್ಣವೇಣೂರಣ್ಣಕೊಳಚ್ಚಿಪ್ಪು ಬಾವಪ್ರಕಾಶಪ್ಪಚ್ಚಿಸಂಪಾದಕ°ಪುಣಚ ಡಾಕ್ಟ್ರುಮಾಷ್ಟ್ರುಮಾವ°ಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಚೆನ್ನೈ ಬಾವ°ಶಾ...ರೀಕಾವಿನಮೂಲೆ ಮಾಣಿಎರುಂಬು ಅಪ್ಪಚ್ಚಿಡೈಮಂಡು ಭಾವಗೋಪಾಲಣ್ಣವಿಜಯತ್ತೆಬಂಡಾಡಿ ಅಜ್ಜಿವಸಂತರಾಜ್ ಹಳೆಮನೆಸುಭಗಕೇಜಿಮಾವ°ಒಪ್ಪಕ್ಕಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ