ಸುಪ್ರಭಾತ – ಭಾಮಿನಿಲಿ

September 18, 2013 ರ 12:30 pmಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೂಡು ಬಾನಿಲಿ ಕಸ್ತಲೆಯ ಹೊಡಿ
ಮಾಡಿ ಮೂಡುತ ಬಪ್ಪ ಸೂರ್ಯನ
ನೋಡುಲೆನಗುತ್ಸಾಹವನುದಿನ ಹೊಸತಿದನುಭವವು ।
ಆಡುತಾಡುತ ಮೇಲೆ ಕೆ೦ಪ೦
ಗೋಡಿ ಬಾನಿನ ಬಣ್ಣ ಬದಲುಸಿ
ಕಾಡು ನಾಡಿನ ಮೇಲೆ ತನ್ನಯ ಶಕ್ತಿ ಪಸರುಸೊಗ ।।ಸುಪ್ರಭಾತ

ಇಬ್ಬನಿಯ ಹನಿ ತು೦ಬಿ ಹುಲ್ಲಿಲಿ
ಕಬ್ಬ ಬರದಾ೦ಗಿಕ್ಕು ಮನಸಿದು
ನಿಬ್ಬೆರಗು ನೋಡೊಗಳೆ ಪರಿಸರದಾಟ ರಸದೂಟ ।
ಅಬ್ಬರದ ಸೊರವಿಲ್ಲೆ ಮನಸಿ೦
ಗುಬ್ಬರದ ಚೈತನ್ಯ ಕೊಡುವಾ
ಹಬ್ಬವಲ್ಲದೊ ಸೂರ್ಯನುದಯದ ಹೊತ್ತು ದಿನದಿನವೂ ।।

ಜಾಲ ಸುತ್ತಣ ಹೂಗಿನಾ ಸೆಸಿ
ಸಾಲು ನೋಡುಲೆ ಎರಡು ಕಣ್ಣುಗೊ
ಸಾಲ ನಕ್ಷತ್ರ೦ಗೊ ಮುಗುಟುಗಳಾಗಿ ಮೂಡಿದವೋ? ।
ಮೇಲೆ ರವಿಯುದಯಕ್ಕೆ ಸಕ್ಕರೆ
ಹಾಲು ಚೆಲ್ಲಿದ ಹಾ೦ಗೆ ಮಲ್ಲಿಗೆ
ಮಾಲೆ ಎಲೆಗಳ ಎಡೆಲಿ ಮುಗುಳಿನ ನೆಗೆಲಿ ಹರಡಿದವೋ? ।।

ಹಟ್ಟಿಯೊಳ ಮನುಗಿಪ್ಪ ಕ೦ಜಿಗೆ
ಕೊಟ್ಟು ಅಬ್ಬೆಯ ಹಾಲು ಹುಲ್ಲಿನ
ಕಟ್ಟ ಬೈಪಣೆಯುದ್ದ ಹಾಕೊಗ ದನವು ತಲೆಯಾಡ್ಸಿ ।
ದಿಟ್ಟಿಸಿಯೆ ನೋಡೊಗಳೆ ಮನಸಣ
ಕಟ್ಟೆ ತು೦ಬುಗು ಮಧುರತೆಯ ಸುಧೆ
ಗಟ್ಟಿಯಾಗಿಯೆ ಕೊರಳು ಹಾಡುಗು ಸುಪ್ರಭಾತ ದಿನಾ ।।

ಮರದ ಗೆಲ್ಲುಗಳೆಡೆಲಿ ಚಿಲಿಪಿಲಿ
ಗರವ ಹಕ್ಕಿಗೊ ಮುಳಿಯ ಗೂಡಿನ
ಹೆರಪಯಣಕಡಿಮಡುಗುಲಟ್ಟಣೆ ಮಾಡುವಾ ಹೊತ್ತು ।
ಕರಗಿ ಮ೦ಜಿನ ಮುಸುಕು ಮೈಮನ
ವರಳಿ ನನಸಾಗುಸುಲೆ ಬೇಗನೆ
ಹೆರಡುಗುತ್ಸಾಹಲ್ಲಿ ಇರುಳಿಲಿ ಕ೦ಡ ಕನಸುಗಳ ।।

 

ಚಿತ್ರಕೃಪೆ ಃ ಪವನಜ ಮಾವ

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಉದಿಯಪ್ಪಗಾಣ ವರ್ಣನೆ, ಉಪಮೆಗೊ ಎಲ್ಲವೂ ತುಂಬಾ ಲಾಯಿಕಕೆ ಮೂಡಿ ಬಯಿಂದು. ಕವನಕ್ಕೆ ಹೊಂದಿಗೊಂಬ ಚೆಂದದ ಪಟ. ಸೂಪರ್
  [ಹೆರಡುಗುತ್ಸಾಹಲ್ಲಿ ಇರುಳಿಲಿ ಕ೦ಡ ಕನಸುಗಳ]- ಒಳ್ಳೆ ಆಶಯ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಧನ್ಯವಾದ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 2. ಪಾರ್ವತಿ

  ಪದ್ಯ ತುಂಬಾ ಲಾಯಿಕಾಯಿದು… ಸೂರ್ಯೋದಯದ ಸುಂದರ ವರ್ಣನೆ… “ಹುಲ್ಲಿನ ಕಟ್ಟ ಬೈಪಣೆಯುದ್ದ ಹಾಕೊಗ ದನವು ತಲೆಯಾಡ್ಸಿ ।ದಿಟ್ಟಿಸಿಯೆ ನೋಡೊಗಳೆ “….ಕಂಜಿ, ದನದ ವರ್ಣನೆ ಮನಸ್ಸಿಂಗೆ ನಾಟಿತ್ತು. ಎನ್ನ ಅಪ್ಪನ ಮನೆಲಿ ಆನು ಸಣ್ಣಾದಿಪ್ಪಾಗ ಇದ್ದ ದನಗಳ ನೆಂಪಾತು.

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘುಮುಳಿಯ

  ಓದಿದ, ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಹಳೆಮನೆ ಅಣ್ಣಮಾಷ್ಟ್ರುಮಾವ°ಚೂರಿಬೈಲು ದೀಪಕ್ಕದೇವಸ್ಯ ಮಾಣಿಅಜ್ಜಕಾನ ಭಾವಮುಳಿಯ ಭಾವಬಟ್ಟಮಾವ°ಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ನೆಗೆಗಾರ°ರಾಜಣ್ಣದೀಪಿಕಾಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕಚುಬ್ಬಣ್ಣಗೋಪಾಲಣ್ಣವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ವೇಣೂರಣ್ಣಕೇಜಿಮಾವ°ವಾಣಿ ಚಿಕ್ಕಮ್ಮಡಾಮಹೇಶಣ್ಣಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ