ಹೊಟ್ಟೆ ತು೦ಬಿತ್ತೀಗ ಭಾಮಿನಿಲಿ

November 12, 2010 ರ 4:18 pmಗೆ ನಮ್ಮ ಬರದ್ದು, ಇದುವರೆಗೆ 44 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗಿಳಿಯ ಬಾಗಿಲ ಕರೆಲಿ ಕಟ್ಟಿದ
ಕಳಿತ ನೇ೦ದ್ರದ ಬಾಳೆ ಹಣ್ಣಿನ
ಕೊಳೆತು ಹೋಪೊದರೊಳವೆ ಮಾಡಿರೆ ಸೀವು ಪಾಯಸವ
ಬಳುಸಿದರೆ ಮುದದಿ೦ದ ಕೈಲಿಲಿ
ಅಳಗೆಯೊಳ ಬೆಶಿಯಾದ ಸೀವಿನ
ಎಳಿಯಡಕ ಸುಕುಮಾರ ಸುರಿಗಡ ಅಮಿತಹರುಷದಲಿ

ಅಜ್ಜಿ ಉದಿಯಪ್ಪಗಳೆ ಕಡೆದವು
ಮಜ್ಜಿಗೆಯ ಹಿತವಾಗಿ ಮ೦ತಿಲಿ
ರಜ್ಜ ಹುಳಿಯಾಗಿದ್ದರೆ೦ಗೊಗೆ ಕೊಡುಗು ಪ್ರೀತಿಯಲಿ
 ಸಜ್ಜಿಗೆಗೆ ಅವಲಕ್ಕಿ ಬೆರುಸಿರೆ
ಹೆಜ್ಜೆ ಬಾಳೆಯ ಎಲೆಲಿ ಮಾವಿನ
ಗೊಜ್ಜಿ ಸೇರುಸಿ ಉ೦ಡು ತೇಗಿದರದುವೆ ಸಗ್ಗ ಸುಖ

ಪುಟ್ಟುಕಾಯಿಯ ಸಾರು ಮಾಡೊಗ
ಗಟ್ಟಿಗರು ಗಾ೦ಧಾರಿ ಮಣಸಿನ
ಬಿಟ್ಟರೆ೦ದಿಗು ರುಚಿಯು ಬಾರದೆ ಹೋಪೊದದು ದಿಟವು
ಅಟ್ಟು ಉ೦ಬೊಳ ಕೂದು ತಿ೦ದರೆ
ಅಟ್ಟ ಮೆಟ್ಲಿನ ಹತ್ತಿದನುಭವ
ಸುಟ್ಟರೂ ಬಿಡ ನಾಲಗೆಯ ಹೊಗೆಯಟ್ಟಹಾಸದಲಿ

ತಾಳ ಹಾಕೊಗ ಹಶುವಿನುದರಕೆ
ತಾಳು ಸೇರುಸಿ ಹೆಜ್ಜೆ ಸೌತೆಯ
ಹೋಳು ತುಂಬಿದ ಹುಳಿಯಕೊದಿಲಿನ ಉಂಡರದೆ ರುಚಿಯು
ಹಾಳೆಲುಂಡರೆ ಹಸಿಯ ಅಡಕೆಯ
ಬೋಳುಕೊದಿಲೇ ಸಾಕು ಹಲಸಿನ
ಬೇಳೆಹೋಳಿಗೆ ಮೇಳವಿಸಿದರೆ ತಾಳಮದ್ದಲೆಯು

ಸುರಿದು ಉಂಡರೆ ಹಸರ ಪಾಯಸ
ಸುರಿಗು ಹರುಷದ ಸುಧೆಯು ಜೀವನ
ಮೆರೆಗು ಭತ್ತದ ಪೈರಿನಂದದಿ ಹಚ್ಚಹಸುರಿನಲಿ
ಕರಗಿಸದ್ದರೆ ತಿಂದ ಸೀವಿನ
ಕೊರಗು ಮಧುಮೇಹದ್ದು ಖಂಡಿತ
ಮರೆಯೆಡೀ ಒಳಗುಟ್ಟ ಮೋಹದ ಬಲೆಗೆ ಸಿಲುಕದಿರಿ

 ( ಸಶೇಷ )

ಹೊಟ್ಟೆ ತು೦ಬಿತ್ತೀಗ ಭಾಮಿನಿಲಿ , 4.5 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 44 ಒಪ್ಪಂಗೊ

 1. ಡಾಮಹೇಶಣ್ಣ
  ಮಹೇಶ

  ‘ಹವ್ಯಕ-ಜೀವನಚರ್ಯಾಮೃತರಸಧಾರೆ’ ತು೦ಬಿ ಹರಿತ್ತಾ ಇದ್ದು ಬಯಲಿಲ್ಲಿ!!
  ಮುಳಿಯದಣ್ಣ ಊರಿ೦ಗೆ ಹೋದ್ದು ಕವಿತಾ ಭಾಮಿನಿಯ ಒಲಿಸಿಗೊ೦ಬಲೆಯೊ?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಊರಿಂಗೆ ಹೋಗಿ ಅಷ್ಟು ಪ್ರಯೋಜನ ಆತು.ಕವಿತಾ ಭಾಮಿನಿಯ ಭಕ್ತಿಲಿ ಸೇವೆ ಮಾಡಿದಷ್ಟು ಒಲಿಗು ಅಲ್ಲದೋ?

  [Reply]

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ಭಕ್ತಿಲಿ ಸೇವೆ ಮಾಡಿರೆ “ಕವಿತಾಂದೆ” ಒಲಿಗು.. “ಭಾಮಿನಿಯೂ” ಒಲಿಗು 😀 😀

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅನುಭವದ ಮಾತೋ ಪುಟ್ಟ ಭಾವಂದು??

  VA:F [1.9.22_1171]
  Rating: +1 (from 1 vote)
  ಒಪ್ಪಣ್ಣ

  ಒಪ್ಪಣ್ಣ Reply:

  ವಾಹ್!
  ಅದ್ಭುತ ಕಾವ್ಯ, ಮುಳಿಯಭಾವಾ..
  ಇನ್ನೂ ಬರೆಯಿ!

  “ಹವ್ಯಕ-ಜೀವನಚರ್ಯಾಮೃತರಸಧಾರೆ” – ಬಹುಸುಂದರಮ್ ಅಸ್ತಿ!!
  ಎಷ್ಟು ಚೆಂದದ ಭಾಷೆಲಿ ಎಷ್ಟು ಚೆಂದದ ಹೆಸರು ಮಡಗಿದಿ ನಿಂಗೊ..
  ಇಬ್ರಿಂಗೂ ಅಭಿನಂದನೆಗೊ…

  [Reply]

  VA:F [1.9.22_1171]
  Rating: +1 (from 1 vote)
 2. ಶಂಕರ ಪಿ.ಎಸ್. ಮಂಗಳೂರು.

  ತುಂಬ ಒಳ್ಳೆಯದಾಗಿ ಮೂಡಿಬಯಿಂದು,ಭಾಷಾಲಂಕಾರಂಗಳ ಪರಿಚಯ ಇಲ್ಲದ್ದ ಎನಗೂ ಓದಿ ಖುಶಿ ಆತು.ಹೀಂಗೆ ಹವ್ಯಕ ಶಬ್ದಂಗೊ,ಆಚಾರ ವಿಚಾರಂಗಳ ಸೇರಿಸಿ ರಘುಭಾವ ಬರಕ್ಕೊಂಡು ಹೋಗಲಿ,ಖಂಡಿತವಾಗಿಯೂ ಅದು ಹವ್ಯಕರ ಒಂದು “ಕಗ್ಗ” ಪುಸ್ತಕ ಅಪ್ಪದರಲ್ಲಿ ಸಂಶಯವಿಲ್ಲೆ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  “ಕಗ್ಗ” ದ ಮಟ್ಟಕ್ಕೆ ಏರುಲೇ ಸಾಧ್ಯವೋ? ಎಲ್ಲಿಯ ಡಿ.ವಿ.ಜಿ.? ಎಲ್ಲಿಯ ಆನು?ಹೋಲಿಕೆಯೇ ಇಲ್ಲೆ ಭಾವ.
  ಆದರೆ ಎಡಿಗಾದಷ್ಟು ಬರವ ಪ್ರಯತ್ನ ಎನ್ನದು ,ಪೋಷಣೆಯ ಕಾರ್ಯ ನಿಂಗಳದ್ದು. ಪ್ರೋತ್ಸಾಹಕ್ಕೆ ಧನ್ಯವಾದ.

  [Reply]

  ಶಂಕರ ಪಿ.ಎಸ್.ಮಂಗಳೂರು Reply:

  ಹವ್ಯಕ ಕಗ್ಗ-ಇನ್ ದ ಸೆನ್ಸ್-ಹವ್ಯಕ ಕಾವ್ಯ ಹೇಳಿ ತೆಕ್ಕೊಂಡು ಮುಂದುವರೆಸಿ,ಪ್ರತಿ ಷಟ್‍ಪದಿ ಯು ನಮ್ಮ ಜೀವನ ಸಾಂಸ್ಕೃತಿಕ ಪರಂಪರೆಯ ಒತ್ತಿ ಹೇಳುವ ರೀತಿಲಿ ಇರಳಿ.ಕೆಲವು ವರ್ಷಗಳ ಸಾಧನೆಯ ನಂತರ ಅದು ನಮ್ಮ ಹವ್ಯಕ ಕಗ್ಗವೇ ಅಕ್ಕು,ಖಂಡಿತ!!!

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ರಘು ಭಾವ, ಭಾಮಿನಿಲಿ ಅಡಿಗೆಯೂ ಮಾಡ್ಲೆ ಆವುತ್ತು ಹೇಳಿ ಗೊಂತಿತ್ತಿಲ್ಲೆ. ತುಂಬಾ ಚೆಂದ ಆಯಿದು.
  ಎಳಿಯಡಕ ಸುಕುಮಾರ° ಖಂಡಿತಾ ಸುರಿಗನ್ನೇ ಪಾಯಸವ ಹೀಂಗೇ ಮಾಡಿ ಕೊಟ್ಟರೆ!!!! 😉 :-)
  ಡಾಗುಟ್ರಕ್ಕಂಗ ಇದ್ದವು ಬೈಲಿಲಿ ಹೇಳಿ ಹೆಚ್ಚು ತಿಂದಿಕ್ಕೆಡಿ ಹೇಳಿ ಜಾಗ್ರತೆ ಹೇಳಿದ್ದೂ ಲಾಯ್ಕಾಯಿದು.
  ಮನಸ್ಸು ತುಂಬಿತ್ತು ಭಾವ, ಇನ್ನುದೇ ಬರಲಿ ಮುಂದಾಣ ಕಂತು..

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಕ್ಕಾ,ಈ ಪಾಯಸ ವಿಚಾರಣೆ ಮಾಡುವ° ಹಾಂಗಾರೆ,ಬಕ್ಕು ಮುಂದಿನ ಕಂತು ಬೇಗಲ್ಲಿ .

  [Reply]

  ನೆಗೆಗಾರ°

  ನೆಗೆಗಾರ° Reply:

  {ಎಳಿಯಡಕ ಸುಕುಮಾರ ಸುರಿಗಡ ಅಮಿತಹರುಷದಲಿ}
  { ಖಂಡಿತಾ ಸುರಿಗನ್ನೇ ಪಾಯಸವ ಹೀಂಗೇ ಮಾಡಿ ಕೊಟ್ಟರೆ!!!! }
  – ಯೆಬೇಲೆ, ಅವಂಗೆ ಅಷ್ಟೆಲ್ಲ ಅರಡಿಯ.
  ಒಂದು ಚಮ್ಚ ಬಳುಸುವಗ ಸಾಕುಸಾಕು ಬೊಬ್ಬೆ ಹೊಡಗು, ಹಂತಿಲಿಡೀಕ ಕೇಳ್ತ ನಮುನೆಲಿ!! 😉

  ಎಂತ, ಬೈಲಿಂಗಿಡೀ ಭಾಮಿನಿ ಜೊರ ಹಿಡುದತ್ತೋ!!!
  ಸುರುವಾಣ ಶುದ್ದಿಗಪ್ಪಗ ಕಾನಾವಣ್ಣನ ಗುರ್ತದ ಜೆನವೋ ಗ್ರೇಶಿದೆ, ಈಗ ಗೊಂತಾತು, ಇದು ಪದ್ಯ ಹೇಳಿಗೊಂಡು..
  ಎರಡ್ಣೇ ಶುದ್ದಗಪ್ಪಗ ನೆಗೆಗಾರಂಗೂ ಒಂದು ಊಕು ಬಂತಿದಾ..
  _____________________________________
  ಆರೆ ಹೇಳಲಿ ಎನ್ನ ಭಾಮಿನಿ
  ಮೋರೆ ಪೀಂಟುಸಿ ನೆಗೆಯ ಮಾಡಲಿ
  ಸಾರ ಮುತ್ತಿನ ಮಾಲೆ ಕೊಡುಸಿದ° ಮುಳಿಯ ಭಾವಯ್ಯ°!
  ಖಾರ ಮಾತ್ರೆಲಿ ಮಾರಿ ತೊಲಗುಗು
  ದಾರಿ ಉದ್ದಕು ನೆಗೆಯ ತರುಸುಗು
  ಮೂರುನಾಕರ ಗಣವು ಸಿಕ್ಕುಗು ಸರಳ ರಾಗಲ್ಲಿ…!!
  _____________________________________

  ಲಾಇಕಾಗಿರ, ಆತೋ? 😉

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಬ್ಬ,ಇಷ್ಟು ಕಷ್ಟ ಆತದ ಇವನ ದರುಶನಕ್ಕೆ..

  ಆರ ಮೋರೆಯ ನೋಡಿ ಎದ್ದೆನೊ
  ಆ ರವಿಯೆ ಪಡುವಿಂದ ಎದ್ದನೊ
  ಮೋರೆಯಾ ನೆಗೆ ಹೆಚ್ಚಿಸುಲೆ ನೆಗೆಗಾರನೈತಂದ
  ಸಾರ ಮುತ್ತಿನ ಮಾಲೆ ಕೊಟ್ಟರೆ
  ಮಾರು ಅಗಲದ ಮೋರೆಯಾ ನೆಗೆ
  ಗಾರ ಶುರು ಮಾಡುಗದ ಒಪ್ಪದ ಮಳೆಯ ಸುರಿಸಲಿಕೆ

  ನೆಗೆಗಾರ°

  ನೆಗೆಗಾರ° Reply:

  { ಆ ರವಿಯೆ ಪಡುವಿಂದ ಎದ್ದನೊ }
  ಮೊನ್ನೆ ಗುಣಾಜೆಮಾಣಿ ಸುರೂವಾಣ ಸರ್ತಿ ಹಿಂದಾಣ ಸೀಟಿಲಿ ಕೂದಂಡು ಬೆಂಗುಳೂರಿಂದ ಬಂದದು.
  ಯೇವತ್ತೂ ಯಮ್ಮೆಲ್ಲೆ ಸೀಟಿಲಿ ಬತ್ತ ಮಾಣಿ ಹಿಂದಂದ ಇಳಿವಗ ಎನಗೂ ಹಾಂಗೇ ಆತೊಂದರಿ!! 😉

  ಡಾಮಹೇಶಣ್ಣ

  ಮಹೇಶ Reply:

  {ಹಿಂದಂದ ಇಳಿವಗ}
  ಹಿಂದೆ ಕೂದರೂ ಇಳಿವದು ಮುಂದಂದಲೇ ಅಲ್ಲದ? ಬೆಂಗಳೂರು ಬಸ್ಸಿಲ್ಲಿ.

  ಮುಳಿಯ ಭಾವ

  ರಘುಮುಳಿಯ Reply:

  @ನೆಗೆಗಾರ —ಹಿಂದುಳಿದವರ ಒಟ್ಟಿ೦ಗೆ ಸೇರುಲೆ ಹೆರಟದೋ? ಈಗೀಗ ಸುಮಾರು ಜೆನ ಹಿಂದುಳಿವಲೆ ಪ್ರಯತ್ನ ಮಾಡುತ್ತಾ ಇದ್ದವಿದಾ..
  ಏ,ಮಹೇಶಾ.. ಗಟ್ಟಿ ಹೇಳಿಕ್ಕೆಡ.ಇನ್ನು ಹೊಸ ಹರತಾಳ ಶುರು ಅಕ್ಕು ,ಹಿಂದುಳಿದವಕ್ಕೆ ಇಳಿವಲೆ ಹಿಂದೆ ಬಾಗಿಲು ಬೇಕು ಹೇಳಿ..

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಅಕ್ಷರ°ಅಜ್ಜಕಾನ ಭಾವಶ್ಯಾಮಣ್ಣಮುಳಿಯ ಭಾವಅಕ್ಷರದಣ್ಣವಾಣಿ ಚಿಕ್ಕಮ್ಮವೇಣೂರಣ್ಣಕೇಜಿಮಾವ°ಅಡ್ಕತ್ತಿಮಾರುಮಾವ°ಶ್ರೀಅಕ್ಕ°ಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿವೇಣಿಯಕ್ಕ°ಕಳಾಯಿ ಗೀತತ್ತೆಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆಗಣೇಶ ಮಾವ°ಪುಣಚ ಡಾಕ್ಟ್ರುಮಂಗ್ಳೂರ ಮಾಣಿನೆಗೆಗಾರ°ಬಟ್ಟಮಾವ°ವಿಜಯತ್ತೆಕಜೆವಸಂತ°ದೊಡ್ಡಭಾವಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ