​ಗೇಸ೦ಡೇ ಟ್ರಬಲ್

July 30, 2012 ರ 10:10 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದೊ೦ದು ದಿನ ಸುದ್ದಿ ಬ೦ತು
ಅ೦ದ್ರಾಣ ಕಾಲ ಆಗಿತ್ತು
ಅದು ಗೇಸು ಬ೦ದ ಹಾ೦ಗೇ ಬ೦ತು
ಅಡಿಗಗೆ ಇನ್ನು  ಗೇಸು ಬತ್ತು !

ಅದೆ೦ತರ ಹಾ೦ಗಿಪ್ಪ ಗೇಸು ?
ಅದು ಹಾ೦ಗಾಡ ಇದು ಹೀ೦ಗಾಡ
ನೋಡೊ ಹೇ೦ಗಾಡ
ಅದು ಬಾರೀ ಲಾಬಾಡ
ಸುರುವಾತು “ತಲೆಕೊ೦ಬು ಮ೦ತ್ರ”
ಅಪ್ಪೋ………….(ಇತ್ತ೦ದಾಗಿ)
ನಮಗೂ ತ೦ದರೆ ಏ೦ತ ತೊ೦ದರೆ ?

ಅದೊ೦ದು ದಿನ ಸುದ್ದಿ ಬ೦ತು
ಅದೂ ಗೇಸು ಬ೦ದ ಹಾ೦ಗೇ ಇತ್ತು
ಗೇಸ೦ಡೆ ಒಡದತ್ತಾಡ..!
ನಾಲ್ಕು ಜೆನ ಸತ್ತೋದವಾಡ..!
ಸಿಕ್ಕಿದ್ದೇ ಚಾನ್ಸು ಆನೂ ಸುರುಮಾಡಿದೆ
ಬುರುಡೇ ಪುರಾಣ

ಆನು ಅ೦ಬಗಳೇ ಹೇಳಿದ್ದಿಲ್ಲೆಯೋ
ಅದು ಹಾ೦ಗಕ್ಕೂ.. ಅದು ಹೀ೦ಗಕ್ಕೂ..
ಈಗ ಹೇ೦ಗಾತೂ..?
ಅಪ್ಪೋ…….(ಅತ್ತ೦ದಾಗಿ)

ನಮಗ೦ತೂ ಬೇಡಪ್ಪಾ..ಬೇಡ
ಆಗದೋ..ಹೇ೦ಗೇ..?
ಅಕ್ಕೂ…..(ಇತ್ತ೦ದಾಗಿ)

ಉಸ್ಸಪ್ಪಾ….ಬಚಾವ್
ರಜ್ಜ ದಿನ ಉರುಳಿತ್ತು
ಒ೦ದು ದಿನ ಅದು ಹೇಳಿತ್ತು
ಇದಾ ಕೇಳುತ್ತೋ..?

ಹೂ೦~~~~~~~
ಮೇಗಾಣ ಕೇಚಪ್ಪಚ್ಹಿಯಲ್ಲಿ ಇದ್ದಾಡ
ಕೆಳಾಣ ಶ೦ಬುಮಾವ೦ಗೂ ಬ೦ತಾಡ
ಈಚ ಮನೆ ಒಪ್ಪಕ್ಕ`ತರುಸಿಯೊ೦ಡಿದಾಡ
ಆಚ ಮನೆ ಒಪ್ಪಣ್ಣ೦ಗೆ ಈಗ ಇಳಿಸಿದ್ದವಾಡ
ಆತಪ್ಪಾ ಆತು….ನಮಗೂ ತಪ್ಪದು ಗೇಸು
ಹಾ೦ಗೆ ಒ೦ದಶ್ಟೂ ಬಿಚ್ಹಿದೆ ಕಾಸು

……………………….ಏಯ್ !

ನಿ೦ಗೋಗೆ ಸ೦ಗತಿ ಗೊ೦ತಿದ್ದೋ
ಈಗ ಎನ್ನಲ್ಲೂ ನಾಲ್ಕ೦ಡೆ ಇದ್ದು ಆತೊ
ಚಾಯಕ್ಕೂ ಗೇಸು..
ವೇನಿ೦ಗೂ ಗೇಸು
ಈಗ೦ತೂ ಗೇಸಿ೦ಗೆ ಟೈಟೀ ಟೈಟು

ಎನಗ೦ತೂ ಈಗ ” ಗೇಸ್ ಟ್ರಬಲು ”

~

ಗೋವಿ೦ದಬಳ್ಳಮೂಲೆ.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಗೇಸು ಇದ್ದರೂ ಟ್ರಬಲ್ , ಗೇಸು ಸಮಯಕ್ಕೆ ಬಾರದ್ರೂ ಟ್ರಬಲ್. ವ್ಯತ್ಸಾಸವಾಗಿ ಮೂಡಿಬಂದ ಬಳ್ಳಮೂಲೆ ಭಾವನ ಪದ ಲಾಯಕ ಆಯ್ದು ಎಂಬುದೀಗ – ‘ಚೆನ್ನೈವಾಣಿ’.

  [Reply]

  ಗೋವಿಂದ ಮಾವ, ಬಳ್ಳಮೂಲೆ

  ಗೋವಿ೦ದಬಳ್ಳಮೂಲೆ. Reply:

  ಕೃತಜ್ಞತೆಗಳು …… ‘ಚೆನ್ನೈವಾಣಿ’.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಎಲ್ ಪಿ ಜಿ ವಾಯುವಿನ ತೊಂದರೆಯ ಬಗೆಲಿ ಇಪ್ಪ ಕವನ ಬಳ್ಳಮೂಲೆ ಅಣ್ಣನ “ಕೀ ಬೋರ್ಡಿ”ಂದ ಚೆಂದಕೆ ಹೆರ ಹೆರಟಿದು. ಎಲ್ಲೋರ ಅನುಭವದ ಮಾತು ಅದು. ಲಾಯಕಾಯಿದು. ನಮ್ಮ ಬೈಲಿನ ಸಮಸ್ಯಾ ಪೂರಣಲ್ಲಿಯುದೆ ಗೋವಿಂದಣ್ಣ ಸಕ್ರಿಯವಾಗಿ ಭಾಗವಹಿಸಿ ನಮ್ಮೆಲ್ಲೋರನ್ನು ರಂಜಿಸಲಿ ಹೇಳುವ ಪ್ರಾರ್ಥನೆ.

  [Reply]

  ಗೋವಿಂದ ಮಾವ, ಬಳ್ಳಮೂಲೆ

  ಗೋವಿ೦ದಬಳ್ಳಮೂಲೆ. Reply:

  ನಿಂಗಳ ಅಭಿಪ್ರಾಯಕ್ಕೆ ಸಂತೋಷ..ಸ್ವಾಗತ

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಹರೇ ರಾಮ… ಪದ್ಯ ಒಳ್ಳೆದಾಯಿದು.

  [Reply]

  VA:F [1.9.22_1171]
  Rating: 0 (from 0 votes)
 4. ಗೋವಿಂದ ಮಾವ, ಬಳ್ಳಮೂಲೆ
  ಗೋವಿ೦ದಬಳ್ಳಮೂಲೆ.

  ಜಯಶ್ರೀ ಅತ್ತಿಗೆ ….ಅನಂತ ಧನ್ಯವಾದಂಗಳು

  [Reply]

  VA:F [1.9.22_1171]
  Rating: 0 (from 0 votes)
 5. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅದ! ಗೋವಿಂದಣ್ಣ ಬೈಲಿಂಗೆ ಇಳುದ್ದದು ,ಇನ್ನು ಹೊಡಿ ಹಾರುಗೋ ಹೇಂಗೆ?

  ನಿಂಗಳ ಗೇಸ್ ಟ್ರಬ್ಲು ಓದಿಯಪ್ಪಗ ನೆಂಪಾತದ! ಇಂದು ಮನೆಲಿ ದೀಗುಜ್ಜೆ ಮೇಲಾರ ಲಾಯಕಾಯಿದು ಮಿನಿಯ

  ಕವನವು ಲಾಯಕಾಯಿದು.

  [Reply]

  ಗೋವಿಂದ ಮಾವ, ಬಳ್ಳಮೂಲೆ

  ಗೋವಿ೦ದಬಳ್ಳಮೂಲೆ. Reply:

  ಕವನ ಓದಿ ದೀಗುಜ್ಜೆ ಮೆಲಾರ ನೆಂಪು ಮಾಡಿದ ಬಾಲಣ್ಣಂಗೆ ನಮನಂಗಳು ….ದೀಗುಜ್ಜೆ ತಂದು ಮಡಗಿದ್ದೆ ಪೋಡಿ ಮಾಡಲೇ..!

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ‘ ಗೇ’ ಶುದ್ದಿ ಹೋಗಿ ನಿಜಕ್ಕೂ ಅ೦ಡೆ ತ೦ದ ಮೇಲೆ ತಾಪತ್ರಯ ಶುರುವಾತೊ?

  ಗೇಸು ಬ೦ದ ಮೇಳೆ ಶುರುವಾತು ಗೇಸ್ ಟ್ರಬಲು
  ಮತ್ತೆ ತೋಟಕ್ಕೆ ಓಡೆಕ್ಕು ತಪ್ಪಲೆ ಕೊತ್ತಳಿ೦ಕೆ ಮಡಲು.

  ಪದ್ಯ ಲಾಯ್ಕ ಆಯಿದು ಅಣ್ಣಾ.

  [Reply]

  VA:F [1.9.22_1171]
  Rating: +1 (from 1 vote)
 7. ಗೋವಿಂದ ಮಾವ, ಬಳ್ಳಮೂಲೆ
  ಗೋವಿ೦ದಬಳ್ಳಮೂಲೆ.

  ರಘುವಣ್ಣಾ.. ಕೊತ್ತಳಿಂಕೆ ಮಡಲು ತಂದಾತು,
  ಆದರೆ ಟ್ರಬಲು ಹೆಚ್ಚಾತು..
  ಕಾರಣ ಅದು ಚೆಂಡಿ ಆತು..
  ಧನ್ಯವಾದಂಗಳು

  [Reply]

  VA:F [1.9.22_1171]
  Rating: +1 (from 1 vote)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ಗೋವಿಂದಣ್ಣಂಗೆ ಸ್ವಾಗತ.
  ಪೇಟೆ ಆಗಲೀ ಹಳ್ಳಿ ಆಗಲೀ ಎಲ್ಲರಿಂಗೂ ಅಡಿಗೆಗೆ “ಗೇಸ್” ಸುಲಭ ಮತ್ತೆ ಕಡಿಮೆ ಖರ್ಚಿಲ್ಲಿ ಅಪ್ಪದು ಹೇಳಿ ಗೊಂತಾಯಿದು. ಪೇಟೆಲಿ ಅಂತೂ ಗೇಸ್ ಇಲ್ಲದ್ದ ದಿನವ ಗ್ರೆಶಿಗೊಂಬಲೆ ಎಡಿಯದ್ದ ಪರಿಸ್ಥಿತಿ.
  ಕವನ ಲಾಯಿಕ ಆಯಿದು.
  ಬೈಲಿಲ್ಲಿ ನಿಂಗಳ ಧ್ವನಿಯ ನಿರೀಕ್ಷೆಲಿ ಇದ್ದೆಯೊ°

  [Reply]

  VA:F [1.9.22_1171]
  Rating: 0 (from 0 votes)
 9. ಗೋವಿಂದ ಮಾವ, ಬಳ್ಳಮೂಲೆ
  ಗೋವಿ೦ದಬಳ್ಳಮೂಲೆ.

  ಅಭಿಪ್ರಾಯ ಬರದು ಪ್ರೋತ್ಸಾಹ ಕೊಟ್ಟ ಶರ್ಮಪ್ಪಚ್ಹಿ ಅವಕ್ಕೆ ಚಿರ ರಿಣಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಮಾಷ್ಟ್ರುಮಾವ°ಅಕ್ಷರದಣ್ಣಸುಭಗಡಾಗುಟ್ರಕ್ಕ°ನೀರ್ಕಜೆ ಮಹೇಶದೊಡ್ಡಭಾವಶಾಂತತ್ತೆಸರ್ಪಮಲೆ ಮಾವ°ಪೆರ್ಲದಣ್ಣಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆಕಳಾಯಿ ಗೀತತ್ತೆವೇಣಿಯಕ್ಕ°ಅನಿತಾ ನರೇಶ್, ಮಂಚಿಡೈಮಂಡು ಭಾವದೇವಸ್ಯ ಮಾಣಿದೀಪಿಕಾವಿನಯ ಶಂಕರ, ಚೆಕ್ಕೆಮನೆಪೆಂಗಣ್ಣ°ಮಾಲಕ್ಕ°ಗೋಪಾಲಣ್ಣಚೆನ್ನಬೆಟ್ಟಣ್ಣಕಜೆವಸಂತ°ವಿದ್ವಾನಣ್ಣಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ