ಭಾರತವೆಂಬ ಮೂರಕ್ಷರಂಗೋ

May 22, 2011 ರ 7:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಾರತವೆಂಬ ಮೂರಕ್ಷರಂಗೋ ಹೇಳಿರೆ ನಿನಗೆಂತರ ಗೊಂತು |
ಬಲುಹಿನ ಸಿಂಧೂ ದ್ರಾವಿಡ ಸಂಸ್ಕೃತಿ ತಿಳಿಯದ್ದವಂಗೆ ಬರೇ ಭ್ರಾಂತು ||

ಆರ್ಯ ದ್ರಾವಿಡ ವೇಸರ ನಾಗರ ಸಕಲದರ ಸಂಗಮ ಇದುವೇ |
ಲಲಿತ ಕಲೆಗಳ ಕಾವ್ಯ-ಸಂಗೀತದ ಹುಟ್ಟೂರಿದು ಸಂಶಯ ಇದ್ದೋ ||

ಸಾವಿರ ಭಾಷೆ ಸಾವಿರ ಪಂಥವೂ ಸಾಗರಹೋಲುವ ಸಂಹಿತೆಗೋ |
ತತ್ತ್ವವಿಜ್ಞಾನದ ಜೀವಿತ ಕಲೆಗಳ ಆಗರವಾಗಿಪ್ಪ ಲಿಖಿತಂಗೋ ||

ವಾಸ್ತುವಿದ್ಯೆ ರಸ-ರಾಜತಂತ್ರವ ಕಲುಶುವ ಹಲ ಬಗೆಯ ಗ್ರಂಥಂಗಳೂ |
ನಾಟ್ಯಶಾಸ್ತ್ರದ ಆಯುರ್ ವಿಜ್ಞಾನದ ಬೆಣಚ್ಚಿನ ಬೀರುವ ದೊಂದಿಗಳೂ ||

ಭಾಷೆಗಳೊಳ ಅತಿ ಶ್ರೇಷ್ಠವಾಗಿಪ್ಪ ಸಂಸ್ಕೃತಕ್ಕೂ ಜನ್ಮಸ್ಥಾನ ಇದು |
ಮಿಗಿಲುಗಳೊಳ್ ಬಲು ಮಿಗಿಲು ತಾನೆನಿಸಿದ ಸವಿ ಕನ್ನಡಕ್ಕೂ ಇದು ತಾಯ್ನಾಡು, ಹವಿ ಕನ್ನಡಕ್ಕೂ ಇದು ತಾಯ್ನಾಡು ||

ಭಾರತವೆಂಬ ಮೂರಕ್ಷರಂಗೋ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ತಾಯ್ನಾಡು ಅಭಿಮಾನ ಗೀತೆ ಚೊಕ್ಕ ಆಯ್ದು ಹೇಳಿ ಒಪ್ಪ ಹೇಳುತ್ತು ಇಲ್ಲಿಂದ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಚೆನ್ನೈಭಾವಂಗೆ ಧನ್ಯವಾದಂಗೊ. ಇದೊಂದು ಅಭಿಮಾನದ ಗೀತೆ ಮಾಂತ್ರ ಅಲ್ಲ, ನಮ್ಮ ಸಂಸ್ಕೃತಿಯ ತಿಳುಕ್ಕೊಂಬ ಪ್ರಯತ್ನವೂ ಅಪ್ಪು.

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಅಭಿಮಾನದ ಗೀತೆಗೆ ಒಪ್ಪದ ಬಹುಮಾನ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಒಪ್ಪದ ಬಹುಮಾನ ಕೊಟ್ಟ ಗೋಪಾಲಣ್ಣಂಗೆ ಧನ್ಯವಾದಂಗೊ. ಭಾರತ, ಭಾಷೆ, ಸಂಸ್ಕೃತಿ – ಈ ಹಿನ್ನೆಲಿಲಿ ಬರದ ಹುಂಡುಪದ್ಯಕ್ಕೆ ನಿಂಗಳ ಒಪ್ಪ ಸಂಸ್ಕೃತಿಯನ್ನೂ ಭಾಷೆಯನ್ನೂ ತಿಳಿವಲೆ ಒಂದು ಪ್ರೇರಣೆಯಕ್ಕು ಹೇಳಿ ನಂಬಿದ್ದೆ. ನಿಂಗೊ ಬರದ ಅಸಂಗತ ಪದ್ಯಂಗೊ ಎನ್ನ ಇನ್ನೊಂದು ಅನುವಾದಕ್ಕೆ ಪ್ರೇರಣೆಯಾಯಿದು.

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ

  ಸೂಕ್ಷ್ಮವಾಗ ಎಲ್ಲವನ್ನೂ ಸೇರಿಸಿ, ಬರದ್ದು ಲಾಯಿಕ ಆಯಿದು ಕೃಷ್ಣ ಪ್ರಕಾಶ. ಬರೆತ್ತಾ ಇರು.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಪ್ರೋತ್ಸಾಹದ ಮಾತು ಹೇಳಿದ ಶರ್ಮಪ್ಪಚ್ಚಿಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಬಲ್ನಾಡುಮಾಣಿ

  ವಾವ್! ದೇಶಭಕ್ತಿಗೀತೆಯ ಪುಟಗಟ್ಲೆ ಓಡ್ಸದ್ದೆ, ಚಿಕ್ಕಕ್ಕೆ-ಚೊಕ್ಕಕ್ಕೆ ನಿರೂಪಿಸಿದ್ದು ಪಷ್ಟಾಯಿದು.. ಹಿಂಗಿಪ್ಪ ಮುತ್ತುಗೊ ಇನ್ನುದೆ ಬರಳಿ!

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಬಲ್ನಾಡು ಮಾಣಿಗೆ ನಮಸ್ಕಾರ…
  ಒಂದು ದೇಶಭಕ್ತಿಗೀತೆಯ ಬರವದು ಎನ್ನ ಉದ್ದೇಶ ಆಗಿತ್ತಿಲ್ಲೆ. ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈಂಟಿಫಿಕ್ ರೀಸರ್ಚ್ ಹೇಳ್ತ ಸಂಸ್ಥೆ ತಿರುವನಂತಪುರಲ್ಲಿ ಇದ್ದು. ನಮ್ಮ ಸಂಸ್ಕೃತಿಲಿ ಇಪ್ಪ ಒಳ್ಳೆಯ ವಿಷಯಂಗೊ ಹೇಳಿರೆ ಸಾಹಿತ್ಯ ಮಾಂತ್ರ ಅಲ್ಲ, ವೈಜ್ಞಾನಿಕವಾದ್ದದೂ ಬೇಕಾಷ್ಟು ಇದ್ದು ಹೇಳಿ ಅವರ ಐಐಎಸ್‍ಎಚ್ ಡಾಟ್ ಒಆರ್‍ಜಿ ಸೈಟಿನ ನೋಡಿರೆ ಗೊಂತಾವುತ್ತು. ಒಂದು ಉದಾಹರಣೆ ಹೇಳುತ್ತರೆ, ಪಾದರಸವ ಅದುರುಗಳಿಂದ ಬೇರ್ಪಡುಸುವ ತಂತ್ರ ಎರಡು ಸಾವಿರ ಒರುಶದಷ್ಟು ಮದಲೇ ಗೊಂತಿದ್ದತ್ತು. ಈ ಕಾರಣಕ್ಕೆ ರಸತಂತ್ರ (ರಸಾಯನ ಶಾಸ್ತ್ರ) ಹೇಳ್ತ ಹೆಸರು. ಅದನ್ನೇ ರಸ-ರಾಜತಂತ್ರ ಹೇಳಿ ಬರದ್ದದು. ಇಂದಿಂಗೂ ಹಳತ್ತಾಗದ್ದ ರಾಜತಂತ್ರಕ್ಕೆ ಮಹಾಭಾರತವೇ ಉದಾಹರಣೆ. ಹಾಂಗೆ ಸುಮಾರಿದ್ದು. ಈ ರೀತಿಲಿ ಈ ಪದ್ಯಕ್ಕೆ ಮೂಲಪ್ರೇರಣೆ ಐಐಎಸ್‍ಎಚ್-ನ ಗೋಪಾಲಕೃಷ್ಣನ್ ಹೇಳ್ತ ವೆಗ್ತಿಯೇ.

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಸರಿಯಾಗಿ ಹೇಳಿದಿ ಭಾವಯ್ಯ.. ನಮ್ಮ ದೇಶದ ಬಗ್ಗೆ ಹೆಮ್ಮೆ ಪಡೆಕ್ಕಾದ ನಮ್ಮ ಜನತೆ, ಹಚ್ಚಾಗಿ ಬರೀ ಅನಗತ್ಯ ಮತ್ತೆ ದೇಶ ಯಾವ ವಿಷಯಗಳಲ್ಲಿ ಹಿಂದೆ ಇದ್ದೋ ಅದರ ಬಗ್ಗೆಯೇ ಯೋಚನೆ ಮಾಡಿ ಕೊರಗುತ್ತು.. ಅದರೆ ನಮ್ಮ ದೇಶ ಜಗತ್ತಿಂಗೆ ಮಾದರಿ ಹೇಳ್ತದು ಸುಮಾರು ಜೆನಕ್ಕೆ ತಲಗೆ ಹೋವ್ತಿಲ್ಲೆ.. ಎನಗೆ ಗೊಂತಿಲ್ಲದ್ದ ಕೆಲವಿ ಸಂಗತಿ ನಿಂಗಳ ಒಪ್ಪಂದ ಗೊಂತಾತು, ಧನ್ಯವಾದಂಗೋ!

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ನಮ್ಮ ದೇಶದ ಸ೦ಸ್ಕೃತಿಲಿ ಅಡಕವಾಗಿಪ್ಪ ವಿಷಯ೦ಗಳ ಚೆ೦ದಕ್ಕೆ ಬರದ್ದಿ ಬೊಳು೦ಬು ಭಾವ. ಅಭಿನ೦ದನೆಗೊ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಮುಳಿಯದ ಭಾವಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ಪುಳ್ಳಿ ಬರದ ದೇಶ ಭಕ್ತಿ ಗೀತೆ ಮಾರ್ಮಿಕವಾಗಿದ್ದು. ಹವಿಕನ್ನಡವನ್ನುದೆ ಕಡೆಂಗೆ ಅಳವಡಿಸೆಂಡದು ಲಾಯಕಾಯಿದು. ಬರೆತ್ತಾ ಇರು, ಬೈಲಿಂಗೆ ಕೊಡ್ತಾ ಇರು.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಪ್ರೋತ್ಸಾಹದ ಮಾತು ಹೇಳಿದ ಬೊಳುಂಬು ಗೋಪಾಲ ಮಾವಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಶ್ಯಾಮಣ್ಣಶರ್ಮಪ್ಪಚ್ಚಿಬಟ್ಟಮಾವ°ಅಜ್ಜಕಾನ ಭಾವದೊಡ್ಡಮಾವ°ಜಯಗೌರಿ ಅಕ್ಕ°ಕಳಾಯಿ ಗೀತತ್ತೆಸಂಪಾದಕ°ಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ಮಾಷ್ಟ್ರುಮಾವ°ಶ್ರೀಅಕ್ಕ°ದೊಡ್ಡಭಾವಪುಟ್ಟಬಾವ°ಪವನಜಮಾವಅಕ್ಷರದಣ್ಣವಿದ್ವಾನಣ್ಣಚೆನ್ನಬೆಟ್ಟಣ್ಣಪೆಂಗಣ್ಣ°ಶಾ...ರೀಬೊಳುಂಬು ಮಾವ°ಅನಿತಾ ನರೇಶ್, ಮಂಚಿvreddhiನೀರ್ಕಜೆ ಮಹೇಶಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ