ಕರುಣಿಸು ನಿನ್ನದೊಂದು ಸೇವೆ

ಇದು ತೆಲುಗು ಭಾಷೆಲಿ ಇಪ್ಪ ಎನ್ನ ಇಷ್ಟದ ಒಂದು ಪದ್ಯದ ಅನುವಾದ.
ಅದೇ ರಾಗಲ್ಲಿ ಅದೇ ತಾಳಕ್ಕೆ ಹಾಡ್ಲೂ ಎಡಿಗು.
~
ಬೊಳುಂಬು ಕೃಷ್ಣಭಾವ°

ಕರುಣಿಸು

ಕರುಣಿಸು..
ಕರುಣಿಸು ನಿನ್ನದೊಂದು ಸೇವೆ |
ಕರುಣಿಸು ನಿನ್ನದೊಂದು ಸೇವೆ |
ಆ ಪದ ರಾಜೀವಂಗಳ ಸೇರ್‍ವ ನಿರ್ವಾಣ ಸೋಪಾನದಧಿರೋಹಣವ ಕಾಯ್ವ ಸೇವೆ ||

ರಾಗಂಗಳೆಲ್ಲವುದೇ ನಿನ್ನದೆಯೇ ರೂಪಂಗೊ |
ಭವರಾಗ ರಾಗದಂಧತೆಯ ಓಡ್‍ಸುತ್ತ ದೀಪಂಗೊ |
ನಾದಾತ್ಮ ರೂಪನೇ | ಎನ್ನದೊಂದು ಮೊರೆಯ ಕೇಳು |
ಎನ್ನಾತ್ಮದೀಪವ ನಿನ್ನೊಳವೇ ನೆಲೆಗೊಳುಸು |
ಕನಿಕರಿಸು ಇಂದು, ದೇವಾಧಿದೇವಾ ||

ಕರುಣಿಸು ನಿನ್ನದೊಂದು ಸೇವೆ |
ಕರುಣಿಸು ನಿನ್ನದೊಂದು ಸೇವೆ ||

ಉಚ್ಛ್ವಾಸ ನಿಃಶ್ವಾಸಂಗೊ ಪಿಟೀಲಿನ ಗಾನಂಗೊ |
ಸ್ಪಂದಿಸುವ ನವನಾಡಿಗೊ ವೀಣೆಯಾ ನಾದಂಗೊ |
ನಡೆಗೆ, ಎದೆಯ ಒಳ ಮಿಡಿವ ಮೃದಂಗಕ್ಕೆ |
ಎನಗಿರುವ ಜೀವವ, ನಂಬಿರುವ ದೇವನಲಿ |
ನೆಲೆಗೊಳುಸು ಇಂದು, ಮಹಾನುಭಾವಾ ||

ಕರುಣಿಸು ನಿನ್ನದೊಂದು ಸೇವೆ |
ಕರುಣಿಸು ನಿನ್ನದೊಂದು ಸೇವೆ ||

~*~*~

ಮೂಲ ಸಾಹಿತ್ಯ :

ಚಿತ್ರ: ಶಂಕರಾಭರಣಂ(ತೆಲುಗು)
ಸಂಗೀತ : ಕೆ. ವಿ. ಮಹಾದೇವನ್
ಸಾಹಿತ್ಯ : ವೇಟೂರಿ ಸುಂದರರಾಮಮೂರ್ತಿ
ಹಾಡುಗಾರರು : ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ

ದೊರಕುನಾ…
ದೊರಕುನಾ ಇಟುವಂಟಿ ಸೇವ |
ದೊರಕುನಾ ಇಟುವಂಟಿ ಸೇವ |
ನೀ ಪದ ರಾಜೀವಮುಲ ಚೇರು ನಿರ್ವಾಣ ಸೋಪಾನಮಧಿರೋಹಣಮು ಸೇಯು ತ್ರೋವ ||

ರಾಗಾಲನನ್ತಾಲು ನೀ ವೇಯಿ ರೂಪಾಲು |
ಭವರೋಗ ತಿಮಿರಾಲ ಪೋದಾರ್ಚು ದೀಪಾಲು |
ನಾದಾತ್ಮಕುಡವೈ | ನಾಲೋನ ಚೆಲಗಿ |
ನಾ ಪ್ರಾಣ ದೀಪಮೈ ನಾಲೋನ ವೆಲಿಗೆ |
ನಿನು ಕೊಲ್ಚು ವೇಳ ದೇವಾಧಿದೇವಾ ||

ದೊರಕುನಾ ಇಟುವಂಟಿ ಸೇವ |
ದೊರಕುನಾ ಇಟುವಂಟಿ ಸೇವ ||

ಉಚ್ಛ್ವಾಸ ನಿಃಶ್ವಾಸಮುಲು ವಾಯುಲೀನಾಲು |
ಸ್ಪಂದಿಂಚು ನವನಾಡುಲೇ ವೀಣಾಗಾನಾಲು |
ನಡಲು, ಎದಲೋನಿ ಸದುಲೇ ಮೃದಂಗಾಲು |
ನಾಲೋನಿ ಜೀವಮೈ, ನಾಕುನ್ನ ದೈವಮೈ |
ವೆಲುಗೊನ್ದು ವೇಳ ಮಹಾನುಭಾವಾ ||

ದೊರಕುನಾ ಇಟುವಂಟಿ ಸೇವ |
ದೊರಕುನಾ ಇಟುವಂಟಿ ಸೇವ ||

~*~*~

ಸೂ:

ಬೊಳುಂಬು ಕೃಷ್ಣಭಾವ°

   

You may also like...

8 Responses

 1. ರಘು ಮುಳಿಯ says:

  ಚೆ೦ದದ ಭಾವಾನುವಾದ. ಧನ್ಯವಾದ ಬೊಳು೦ಬು ಭಾವಾ.

 2. ಶರ್ಮಪ್ಪಚ್ಚಿ says:

  [ಎನ್ನಾತ್ಮದೀಪವ ನಿನ್ನೊಳವೇ ನೆಲೆಗೊಳುಸು]
  ಅನುವಾದ ಲಾಯಿಕ ಆಯಿದು

 3. prashantha says:

  olle anuvaada.. bhavartha iddandu..

  • ಬೊಳುಂಬು ಕೃಷ್ಣಭಾವ° says:

   ಏಮಿಟಿ.. ಅರ್ಥಂ ಕಾಲೇದು… 🙂 ಪ್ರಶಾಂತಂಗೆ ಧನ್ಯವಾದಂಗೊ.

 4. ಬೊಳುಂಬು ಮಾವ says:

  ಶಂಕರಾಭರಣದ ಚೆಂದದ ಪದ್ಯವೊಂದರ ಕನ್ನಡ ರೂಪ ಕಂಡು ಕೊಶಿ ಆತು. ರಾಗವೂ ಲಾಯಕಿದ್ದು, ಅರ್ಥವೂ ಲಾಯಕಿದ್ದು. ಪದ್ಯ ರಚಿಸಿದ ಪುಳ್ಳಿಗೆ ಧನ್ಯವಾದಂಗೊ.

 5. ಚೆನ್ನೈ ಭಾವ says:

  ಮೆಚ್ಚುಗೆ. ಕಾರ್ಯ ಲಾಯಕ ಆಯ್ದು ಹೇಳಿ ಒಪ್ಪ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *