ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಬಟ್ಟಮಾವ°ಶ್ಯಾಮಣ್ಣಸುಭಗಸರ್ಪಮಲೆ ಮಾವ°ಪುಟ್ಟಬಾವ°ದೊಡ್ಡಭಾವಗಣೇಶ ಮಾವ°ಅನುಶ್ರೀ ಬಂಡಾಡಿಯೇನಂಕೂಡ್ಳು ಅಣ್ಣಹಳೆಮನೆ ಅಣ್ಣಅಜ್ಜಕಾನ ಭಾವಪೆರ್ಲದಣ್ಣಡಾಗುಟ್ರಕ್ಕ°ದೇವಸ್ಯ ಮಾಣಿಚೂರಿಬೈಲು ದೀಪಕ್ಕಬಲ್ನಾಡುಮಾಣಿಶೇಡಿಗುಮ್ಮೆ ಪುಳ್ಳಿಮಾಷ್ಟ್ರುಮಾವ°ವೇಣಿಯಕ್ಕ°ಗೋಪಾಲಣ್ಣಶುದ್ದಿಕ್ಕಾರ°ಪೆಂಗಣ್ಣ°ಚುಬ್ಬಣ್ಣಪುತ್ತೂರುಬಾವಬೊಳುಂಬು ಮಾವ°ಚೆನ್ನೈ ಭಾವ°ಡೈಮಂಡು ಭಾವವಿದ್ವಾನಣ್ಣವಸಂತರಾಜ್ ಹಳೆಮನೆಶ್ರೀಅಕ್ಕ°ದೊಡ್ಡಮಾವ°ಕೆದೂರು ಡಾಕ್ಟ್ರುಬಾವ°ಮುಳಿಯ ಭಾವಶರ್ಮಪ್ಪಚ್ಚಿಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಸಂಪಾದಕ° (editor)ನೆಗೆಗಾರ°ಅಕ್ಷರ°ಅಕ್ಷರದಣ್ಣಬಂಡಾಡಿ ಅಜ್ಜಿನೀರ್ಕಜೆ ಮಹೇಶಶಾಂತತ್ತೆಅಡ್ಕತ್ತಿಮಾರುಮಾವ°ಡಾಮಹೇಶಣ್ಣವೇಣೂರಣ್ಣಚೆನ್ನಬೆಟ್ಟಣ್ಣಮಂಗ್ಳೂರ ಮಾಣಿಒಪ್ಪಕ್ಕಅನು ಉಡುಪುಮೂಲೆಸುವರ್ಣಿನೀ ಕೊಣಲೆದೀಪಿಕಾಕೊಳಚ್ಚಿಪ್ಪು ಬಾವಕೇಜಿಮಾವ°ಪವನಜಮಾವಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ಜಯಶ್ರೀ ನೀರಮೂಲೆ


ತರವಾಡು ಮನೆಲಿ ಉದಿಯಪ್ಪಗ ಮತ್ತೆ೦ತಾತು?-ಭಾಮಿನಿಲಿ

March 16, 2011 ರ 3:56 pmಗೆ ನಮ್ಮ ಮುಳಿಯ ಭಾವ ಬರದ್ದು, ಇದುವರೆಗೆ 47 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತರವಾಡು ಮನೆ ಜಾಲಿ೦ದ ಒಂದು ನೋಟ

ಮೂಡುದಿಕ್ಕಿಲಿ ಸೂರ್ಯ ಮೂಡೊಗ
ಕಾಡ ಮರಗಳ ಎಡೆಲಿ ಹಾರುವ
ಜೋಡು ಹಕ್ಕಿಗೊ ಆಡಿ ಹೊಸ ಸ೦ಗೀತ ಹಾಡುವಗ
ತೋಡ ನೀರದ ಹರುದು ಜುಳುಜುಳು
ಓಡುತಿಪ್ಪಗಳೇ ಹೊಳೆಗೆ ತರ
ವಾಡು ಮನೆಯೊಳ ನೋಡು ಬಗೆಬಗೆ ಕೆಲಸಕಾರ್ಯ೦ಗೋ

ಹಾ೦ಗೆ… ಉದಿಯಪ್ಪಗ ತರವಾಡು ಮನೆಲಿ  ನೆಡೆತ್ತ ಕಾರ್ಯ೦ಗಳ ನೋಡುಲೆ ಶುರು ಮಾಡಿತ್ತು ನಾವು,ಅಲ್ಲದೋ? ಮು೦ದೆ ನೋಡುವ°, ಬನ್ನಿ.
~~
ಅಜ್ಜ ಜೆಗುಲಿಲಿ ಎಲೆಗೆ ಸುಣ್ಣವ
ರಜ್ಜರಜ್ಜವೆ ಉದ್ದಿಯಪ್ಪಗ
ಅಜ್ಜಿ ಕೇಳಿದವಿ೦ದು ತಾಳಿ೦ಗೇವ ತರಕಾರಿ
ಗೊಜ್ಜಿ ಬೋಳಿನಕೊದಿಲ ಜತೆಯಲಿ
ಗುಜ್ಜೆ ತಾಳಿನ ಸವಿಯುವಾಸೆಲಿ
ಅಜ್ಜಕಾನದ ಭಾವ° ತೋಟಕೆ ಇಳುದವದ ಹಾರಿ
~
ಆಸರಾವುತ್ತೆನಗೆ ಹೇಳುತ
ಕಾಸಿ ನೀರಿನ ಸಣ್ಣ ಚೆ೦ಬಿಲಿ
ಬೋಸಭಾವನು ಕುಡುದು ಹೆರಟನೊ ಕುರುವೆ ಹಿಡುಕೊ೦ಡೂ
ಕಾಸೆಯಾಗದ ಗುಜ್ಜೆ ಕಾ೦ಬಗ
ಆಸೆಗಣ್ಣಿಲಿ ನೋಡಿ ತೋಟಲಿ
ಮೀಸೆಯಡಿ ನೆಗೆಮಾಡಿ ಹಳೆಮನೆಯಣ್ಣ ಬ೦ದವದಾ
~
ಮೆಟ್ಟುಕತ್ತಿಯ ತೆಗದು ಅಕ್ಕನು
ನೆಟ್ಟಿಕಾಯಿಯ ಕೊರವ ರಭಸವ
ಚಿಟ್ಟೆಕರೆಲಿಯೆ ನೋಡುಗದ ಪೊಸವಣಿಕೆ ಚುಬ್ಬಣ್ಣ
ಚುಟ್ಟಿಕಿಟ್ಟಿದ ಕಾವಲಿಗೆ ರಜ
ಹಿಟ್ಟು ಎರೆವಗ ತೆಳ್ಳವಿನ ಹೊಸ
ಸಟ್ಟುಗಿನ ಹಿಡುದೋಡಿ ಬಕ್ಕದ ನಮ್ಮ ನೆಗೆಗಾರ°
~
ಉದಯಕಾಲದಲೆದ್ದ ಭೂಪನು
ಹದದಿ ಹಲ್ಲನು ತಿಕ್ಕಿ ಹೇಳಿದ°
ಉದಯರಾಗವ ಅಟ್ಟು ಉ೦ಬೊಳ ನಲ್ಲೆಯೊಟ್ಟಿ೦ಗೆ
ಬದನೆಯನು ಕೊಯ್ದಾಗಿ ಪಡಿಗೆಲಿ
ಕುದನೆ ಜೊ೦ಕುಳಿ ತು೦ಬುಸಿಯೆ ಪಟ
ಮುದದಿ ತೆಗೆಯೆಕ್ಕೆ೦ದ ಯೇನ೦ಕೂಡ್ಲು ಅಣ್ಣನದೋ
~
ಗೆಡ್ಡ ತೆಗವಲೆ ಕೊಟ್ಟಗೆಲಿ ಹಳೆ
ಬಡ್ಡು ಬಾಳಿನ ಮಸದು ಮೋರೆಯ
ಒಡ್ಡಿ ಕನ್ನಟಿಯೆದುರು ನಿ೦ದವು ಚೆನ್ನಬೆಟ್ಟಣ್ಣ
ಅಡ್ಡ ತಡಮೆಯ ತೆಗದು ದಾ೦ಟಿದ
ದೊಡ್ಡಭಾವನು ಬಡಿಗೆ ಹಿಡಿಯುತ
ಗುಡ್ಡೆ ಹತ್ತಿಯೆ ಹೋಕು ಗಾಡಿಲಿ ವಾಯುವೇಗಲ್ಲಿ
~
(ಇನ್ನೂ ಇಕ್ಕೋ ?)
ತರವಾಡು ಮನೆಲಿ ಉದಿಯಪ್ಪಗ ಮತ್ತೆ೦ತಾತು?-ಭಾಮಿನಿಲಿ, 4.6 out of 5 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 47 ಒಪ್ಪಂಗೊ

  1. ಬಾಲಣ್ಣ
    ಬಾಲಣ್ಣ
    VA:F [1.9.3_1094]
    Rating: +1 (from 1 vote)

    ವ್ವ ವ್ವಾ ! !

    ಭಾರೀ ಲಾಯಕಕ್ಕೆ ಭಾಮಿನಿಯ ಒಲಿಶಿಕೊನ್ದವರಲಿ ನಿಂಗಳನ್ನೂ ಸೇರುಸೆಕು ! !

    ಹವ್ಯಕಭಾಶೆಲಿ, ಏನಾದರೂ ನೀಳಕಾವ್ಯವೋ ಮಣ್ಣೋ ಬರದ್ದದು ಇದ್ದೋ ? (ಮಣ್ಣು.. ರಜರಜ ಆಗಿ ಬೇಡ.. ಒಂದು ಹತ್ತಿಪ್ಪತ್ತು ಎಕ್ರೆ .. !)

    ಇನ್ನೂ ಒಳ್ೞೆದು , ಇದನ್ನೇ ಮುಂದರುಸಿ, ನಮ್ಮ ಹಳೆ ಮನೆಯೋ, ಕುಟುಂಬವೂ ಒಂದರ ಒಂದರುವತ್ತು ಎಪ್ಪತ್ತು ವರ್ಶದ ಕಥೇ ಮಾಡ್ಲೆ ಎಡಿಗೊ ?…

    ಬರವದು ಬಿಟ್ಟರೆ ಮತ್ತೆ ಸುರುಮಾಡ್ಲೆ ತುಂಬ ಕಶ್ಠ ಆವುತ್ತು, ಈಗಳೇ ಇದರ ಮುಂದುವರಿಸಿ, ಕನಿಷ್ಠ ಒಂದು ದಬ್ಬಲ್ ಚೋಲ್ ಮಾಡಿ ಮತ್ತೆ ಮತ್ತೆ ಓದಿ ಸಂತೋಷಪಡುವ ಉಶಿ ಕೊಡಿ !

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಒಪ್ಪ ನೋಡಿ ಕೊಶಿ ಆತು ಅಣ್ಣ. ನೀಳ ಕಾವ್ಯದ ಸವಿ ಸುರಿಯೆಕ್ಕಾರೆ ಬಾಳಿಲ ಪರಮೇಶ್ವರ ಭಟ್ಟರ “ಧರ್ಮವಿಜಯ” ಓದಿ.ಮಹಾಭಾರತದ ಕತೆ ನಮ್ಮ ಭಾಷೆಲಿ ಚೆ೦ದಕೆ ಬರದ್ದವು.
    {ಬರವದು ಬಿಟ್ಟರೆ ಮತ್ತೆ ಸುರುಮಾಡ್ಲೆ ತುಂಬ ಕಶ್ಠ ಆವುತ್ತು} ಆನು ಈಗ ಬರವಲೆ ಶುರು ಮಾಡಿದ್ದು ಬಾಲಣ್ಣ !! ಇನ್ನು ಬಿಡುಲಿಲ್ಲೆ,ಜೀವದೊಟ್ಟಿ೦ಗೆ ಇದೂ ಅ೦ಟಿತ್ತು,ಒಪ್ಪಣ್ಣನ ಬೈಲಿ೦ಗೆ ಬ೦ದು..

    [ಉತ್ತರುಸಿ]

  2. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +2 (from 2 votes)

    ತರವಾಡು ಮನೆಯ ನೈಜ ಚಿತ್ರಣ ಬತ್ತಾ ಇಪ್ಪದು ನೋಡುವಾಗ ಭಾರೀ ಕೊಶೀ ಆವುತ್ತು. ಅಜ್ಜಿ ಎಲಗೆ ಸುಣ್ಣ ಉದ್ದಿಗೊಂಡು ತಾಳಿಂಗೆ ಎಂತರ ಹೇಳಿ ಲೆಕ್ಕ ಹಾಕುದು, ಗುಜ್ಜೆ ತಪ್ಪಲೆ ಭಾವ ತೋಟಕ್ಕೆ ಹೋಪದು, ಕಾಸೆ ಆಗದ್ದ ಎಳತ್ತು ಕುಜುವೆ ನೋಡಿ ಹಳೆಮನೆ ಅಣ್ಣಂಗೆ ಕೊಶಿ ಆಗಿ ಮೀಸೆ ಅಡಿಲಿ ನೆಗೆ ಬಪ್ಪದು, ನಗೆಗಾರ ಸಟ್ಟುಗ ಹಿಡ್ಕೊಂಡು ತೆಳ್ಲವು ತಿಂಬಲೆ ಬಪ್ಪದು, ಒಂದಕ್ಕಿಂತ ಒಂದು ಸೂಪರ್
    ಈ ಭಾಮಿನಿಯ ಆಧಾರಲ್ಲಿ ಒಂದು ರೂಪಕ ಮಾಡಿರೆ ತುಂಬಾ natural ಆಗಿ ಬಕ್ಕು.
    [ಉದಯರಾಗವ ಅಟ್ಟು ಉ೦ಬೊಳ ನಲ್ಲೆಯೊಟ್ಟಿ೦ಗೆ] ಭೂಪ ಬರವ ಪದ್ಯಕ್ಕೂ ಇಲ್ಲಿ ಅವನ ವಿವರಿಸಿದ್ದಕ್ಕೂ ತುಂಬಾ ತಾಳೆ ಆಯಿದು.
    (ಇನ್ನೂ ಇಕ್ಕೋ ?)- ಖಂಡಿತಾ ಇರೆಕ್ಕು. ತುಂಬಾ ನಿರೀಕ್ಶೆ ಇದ್ದು.

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಅಪ್ಪಚ್ಚಿ, ರೂಪಕದ್ದು ಒಳ್ಳೆ ಕಲ್ಪನೆ,ಮಾಡುಲಕ್ಕು. ನಿ೦ಗಳ ಪ್ರೋತ್ಸಾಹವೇ ಮು೦ದೆ ಎನ್ನ ಬರೆಶುಗು ಅಪ್ಪಚ್ಚಿ.ಧನ್ಯವಾದ.

    [ಉತ್ತರುಸಿ]

  3. ತೆಕ್ಕುಂಜ ಕುಮಾರ
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: 0 (from 0 votes)

    ಈ ಸರ್ತಿಯಾಣದ್ದು ಪಷ್ತಾಯಿದು..(ಮದಲಾಣದೆಲ್ಲ ಹಾಳು ಹೇಳ್ತದಲ್ಲ…!)
    ಎಲ್ಲೋರಿಂಗೂ ಅವರವರ ಅಜ್ಜನ ಮನೆ ನೆಂಪು ಬಪ್ಪಾಂಗೆ ಅದಿಕ್ಕು.

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ಎನಗೆ ತೊಂಡಜ್ಜನ ಮನೆ ನೆಂಪು ಬತ್ತನ್ನೇ ಕುಮಾರಣ್ಣ

    [ಉತ್ತರುಸಿ]

  4. ಶಶಿ ಅತ್ತೆ
    shashivb
    VA:F [1.9.3_1094]
    Rating: 0 (from 0 votes)

    ರಘು..,
    ಭಾರಿ ಲಾಯಿಕ ಬರೆತ್ತಾ ಇದ್ದೆ….

    [ಉತ್ತರುಸಿ]

    ತೆಕ್ಕುಂಜ ಕುಮಾರ ಉತ್ತರ ಕೊಟ್ಟದು:
    ತೆಕ್ಕುಂಜ ಕುಮಾರ ಮಾವ°

    VN:F [1.9.3_1094]
    Rating: +1 (from 1 vote)

    ಶಶಿ,

    ಅಪ್ಪುದೇ..ಮನೆಗೆ ಹೋಗಿ ಉಪ್ಪು ಮೆಣಸು ಸುರುದು ಕಿಚ್ಚಿಂಗೆ ಹಾಕೆಕ್ಕಕ್ಕು.

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: +1 (from 1 vote)

    ಎ೦ತ ಮಾವ,ಕಣ್ಣು ಮುಟ್ಟುಗು ಹೇಳಿಯೋ?ಇಲ್ಲೆಪ್ಪಾ…

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಶಶಿ ಅತ್ತೆ,ಎಲ್ಲ ನಿ೦ಗಳ ಆಶೀರ್ವಾದ..

    [ಉತ್ತರುಸಿ]

  5. ಕುಂಟಿಕಾನ ಭಾವ
    ಕುಂಟಿಕಾನ ಭಾವ
    VN:F [1.9.3_1094]
    Rating: +3 (from 3 votes)

    ಮುಳಿಯ ಭಾವನ ಶಬ್ದಗಳ ಸರ-
    -ಪಳಿಗಳಿಂದರಳಿದ ಸುಕವಿತೆಯ
    ಇಳೆಯ ಹವ್ಯಕರೆಲ್ಲ ಮೆಚ್ಚುಗು ಒಳ್ಳೆದಾಯಿದಿದು
    ತಾಳು ಮಾಡಲೆ ಗುಜ್ಜೆ ತಪ್ಪದು,
    ಬೋಳುಕೊದಿಲಿಗೆ ನೆಟ್ಟಿ ಕೊರವದು,
    ಹಳೆಯ ಬಾಳಿನ ಮಸದ ಶುದ್ದಿಗೊ ಬಹಳ ಚೆಂದಾಯ್ದು

    ಹಸೆಯ ಮಡುಸೊದರಿಂದ ಎದ್ದಿಕಿ
    ಹಸೆಯ ಬಿಡುಸೊದರೊರೆಗೆ ಮನುಗಲೆ
    ಬೆಸಸಿ ಶುದ್ದಿಯ ನಿಂಗೊ ಆ ತರವಾಡುಮನೆಲಪ್ಪ
    ಹೊಸಹೊಸತು ಶುದ್ದಿಗಳ ಭಾಮಿನಿ-
    -ಲೆಸೆವ ಭಾವಯ್ಯಂಗೆ ನಿರತವು
    ಬಿಸಜಪುತ್ರನ ಭಾಮಿನಿಯ ಕೃಪೆ ಏವಗಳು ಇರಳಿ

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: +6 (from 6 votes)

    ಏ ಭಾವ,
    ಸುರುವಾಣ ಬಾಲಿ೦ಗೆ ಬಡುದ ಸಿಕ್ಸರು ರೈಸಿದ್ದು.ಬಾಲು ಹುಡುಕ್ಕುಲೆ ಹೋದ ಬೋಚ ಭಾವ ಅಲ್ಲಿಯೇ ಬಾಕಿ ಆಯಿದನೋ ಹೇಳಿ ಸ೦ಶಯ.
    {ಬಿಸಜಪುತ್ರನ ಭಾಮಿನಿಯ ಕೃಪೆ ಏವಗಳು ಇರಳಿ} ನಿ೦ಗಳ ಹಾರೈಕೆಯ ಓದಿ ಧನ್ಯ ಆದೆ.ನಮ್ಮ ಭಾಷೆಲಿ ಎಷ್ಟು ಚೆ೦ದಕೆ ಬರವಲೆಡಿಗು ಹೇಳಿ ಸೂಕ್ಷ್ಮಲ್ಲಿ ತೋರ್ಸಿದ್ದಿ. ಬೇಗ ಬೈಲಿ೦ಗೆ ಬ೦ದು ಶುದ್ದಿ ಬರವಲೆ ಶುರು ಮಾಡಿ ಆಗದೋ?

    ಕು೦ಟಿಕಾನದ ಭಾವ ಸವಿ ಕರ
    ದ೦ಟು ಕೊಟ್ಟವು ಬೈಲಿಲಿಯೆ ಜಯ
    ಘ೦ಟೆ ಬಾರಿಸಿತೆನ್ನ ಮನಸಿಲಿ ಒಪ್ಪವನು ನೋಡಿ
    ಎ೦ಟನೆಯ ಸುಕುಮಾರ ಬ೦ಟರ
    ನೆ೦ಟ ಕೃಷ್ಣನು ಅಜಯನಾಗಿಯೆ
    ಉ೦ಟು ಮಾಡಿದ ಭಕುತಿಸುಧೆಯೆನಗೀಗ ನೆ೦ಪಾತು.

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಬೈಲಿಲ್ಲಿ ಭಾಮಿನಿಯ ದ್ವಂದ್ವ ಕೊಶಿ ಆವ್ತಾ ಇದ್ದು.
    ಕುಂಟಿಕಾನ ಭಾವ ಬೈಲಿಲ್ಲಿ ಬಂದು ಶುದ್ದಿ ಹೇಳಲೇ ಬೇಕು ಹೇಳುವದು ಎನ್ನ ಕೋರಿಕೆ.

    [ಉತ್ತರುಸಿ]

    ಕುಂಟಿಕಾನ ಭಾವ ಉತ್ತರ ಕೊಟ್ಟದು:
    ಕುಂಟಿಕಾನ ಭಾವ

    VN:F [1.9.3_1094]
    Rating: +2 (from 2 votes)

    ಖಂಡಿತ ಅಪ್ಪಚ್ಚಿ.. ನಿಂಗಳ ಆಶೀರ್ವಾದ..
    ಆದರೆ ‘ಸ್ಟಾರ್ಟಿoಗು ಟ್ರಬುಲು’.. ವಿಲ್ಯರ್ಸು ಪಂಪಿನ್ಗೆ ಪೆಟ್ರೋಲು ಹಾಕಿ ಸ್ಟಾರ್ಟು ಮಾಡಿದಾಂಗೆ ಎಂತಾರು ಕೆಣಿ ಇದ್ದೋ ಹೇಳಿ ಬೋಚ ಭಾವನತ್ರೇ ಕೇಳೆಕಷ್ಟೇ..:)

    [ಉತ್ತರುಸಿ]

    vishnunandana ಉತ್ತರ ಕೊಟ್ಟದು:
    ವಿಷ್ಣು ನಂದನ

    VA:F [1.9.3_1094]
    Rating: 0 (from 0 votes)

    Hey idu Ajaya krishana allada?

    Hengidde marya…

    Ivana bidedi… Iva yengala collegeli kavana, kathe barvadalli prize thekkondittha. Bhayankara prathibhavantha…

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: +2 (from 2 votes)

    ಅದಾ,ಈಗ ಸಾಕ್ಷಿ ಸಮೇತ ಸಿಕ್ಕಿಬಿದ್ದ ಹಾ೦ಗಾತು ಕು೦ಟಿಕಾನ ಭಾವ.ಎನ್ನ ಒಪ್ಪವೂ ಈಗ ಸರಿ ಅರ್ಥ ಅಪ್ಪ ಹಾ೦ಗಾತು,ಅಲ್ಲದೋ?
    ಇನ್ನು ವಿಲ್ಯರ್ಸು,ಪೆಟ್ರೋಲು ಹೇಳಿ ರೈಲು ಬಿಟ್ಟರೆ ಬೋಚ ಭಾವನ ಒ೦ದರಿ ಕಳುಸೊದೇ, ಕೇಟತ್ತೋ?

    [ಉತ್ತರುಸಿ]

    ಮಂಗ್ಳೂರ ಮಾಣಿ... ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: +2 (from 2 votes)

    ಇಷ್ಟು ಲಾಯಕ ಬರೆತ್ತ ಕುಂಟಿಕಾನ ಭಾವ ಬೈಲಿಂಗೆ ಬರಲೇಬೇಕು… ಎಂಗೊ ಎಲ್ಲ ಒಪ್ಪ ಕೊಡಲೇ ಬೇಕು…

    [ಉತ್ತರುಸಿ]

  6. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ತರವಾಡಿಲ್ಲಿ ಕೊಕ್ಕೋ ಕೃಷಿ ಇಲ್ಲೆ ಕಾಣುತ್ತು.

    ಮೆಟ್ಟುಕತ್ತಿಲಿ ಕೊರವ ರಭಸಕೆ ಕೈಗೆ ತಾಗಿದ್ದಿಲ್ಲೆ ಕಂಡತ್ತೋ. ಒಳ್ಳೆ ಎಕ್ಷ್ಪರ್ಟೋ!

    ಎಂತದೇ ಆಗಲಿ ಮುಳಿಯ ಭಾವನ ಭಾಮಿನಿ ಭೇಷ್ ಭೇಷ್. ರಸಮಯವಾಗಿ ಮೂಡಿ ಬಯಿಂದು ಹೇಳಿಗೊಂಡು ಒಂದು ಒಪ್ಪ.

    ಕುಂಟಿಕ್ಕಾನ ಭಾವನೂ ಸ್ವರ ಸೇರ್ಸಿ ಜುಗಲುಬಂದಿ ಆತೀಗ.

    ಭೂಪ ಭಾವಯ್ಯ ಮನೆ ಬಿಟ್ಟು ಹೆರಡುತ್ತನೇ ಇಲ್ಯೋದು ಅಂಬಗ.!

    ತರವಾಡಿನ ಜಾಲು ನೋಡಿ. – ಭೂತ ಕೊಣಿಯಲೂ ಸಾಕಪ್ಪೋ.

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಚೆನ್ನೈಭಾವ,
    ಅಡಕ್ಕೆ ಕೊಯಿವವ್ವು ಬಾರದ್ದೆ ಜಾಲು ಖಾಲಿ ಇದ್ದು,ಬಟ್ಯ ಬ೦ದರೆ ಎರಡೇ ದಿನಲ್ಲಿ ಜಾಲು ತು೦ಬುಗು,ಅಲ್ಲದೋ?

    [ಉತ್ತರುಸಿ]

  7. ಕೇಶವ
    ಕೇಶವ ಬರೆಕರೆ
    VA:F [1.9.3_1094]
    Rating: 0 (from 0 votes)

    ರಘು ಅಣ್ಣ, ಈ ಭಾಮಿನಿ ತುಂಬ ಚೆಂದಕೆ ಮೂಡಿ ಬೈಂದು. ಎಡೆ ಎಡೆಲಿ ಬೈಲಿನ ಜನಂಗಳ ಹೆಸರು ಸೇರ್ಸಿದ್ದು ರೈಸಿದ್ದು!!

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: +1 (from 1 vote)

    ಹೋ, ಧನ್ಯವಾದ ಕೇಶವ.
    ತರವಾಡು ಮನೆಲಿ ಬೈಲಿನ ಎಲ್ಲ ಬ೦ಧುಗ ಒಟ್ಟಿ೦ಗೆ ಸೇರಿದ್ದದು ಎನಗೂ ಕೊಶಿ ಕೊಟ್ಟಿದು.

    [ಉತ್ತರುಸಿ]

  8. ಪ್ರದೀಪ್ ಮುಣ್ಚಿಕಾನ
    ಪ್ರದೀಪ್ ಮುಣ್ಚಿಕಾನ
    VA:F [1.9.3_1094]
    Rating: 0 (from 0 votes)

    ಒಪ್ಪ ಆಯಿದು…. :-)

    [ಉತ್ತರುಸಿ]

  9. pakalakunja gopalakrishna
    pakalakunja gopalakrishna
    VA:F [1.9.3_1094]
    Rating: 0 (from 0 votes)

    ನಿಜಕ್ಕೂ ಪುರಸ್ಕಾರ ಯೋಗ್ಯ ಭಾಮಿನಿಗಳಿಗೆ

    ಅಭಿನಂದನಾರ್ಹ ಮುಳಿಯದ ರಘುವಿನ ಕವಿತ್ವಕೆ

    ಅಳಿವಿರದ ಕಾವ್ಯ ರಚನೆಯ ಬೀಜಾಂಕುರಕ್ಕೆ ತುಂಬು ಹೃದಯದ ಪ್ರೋತ್ಸಾಹ

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಪಕಳಕು೦ಜ ಮಾವ,ಪ್ರೋತ್ಸಾಹಕ್ಕೆ ಧನ್ಯವಾದ.

    [ಉತ್ತರುಸಿ]

  10. ಚುಬ್ಬಣ್ಣ
    ಚುಬ್ಬಣ್ಣ
    VN:F [1.9.3_1094]
    Rating: 0 (from 0 votes)

    ರಘು ಅಣ್ಣ, ಎರಡು ಮಾತಿಲ್ಲೆ.. ಭಾರಿ ಲಾಯಕ್ಕೆ ಆಯಿದು ಬರದ್ದು…
    ಇನ್ನೂ ಇಕ್ಕೋ ಹೇಳಿ ಕಾದು ಕೂಯಿದ್ಯೊ.. :)

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: +2 (from 2 votes)

    ಚುಬ್ಬಣ್ಣ,
    ಬರದ್ದೋ ಅಲ್ಲ ಅಕ್ಕ ನೆಟ್ಟಿಕಾಯಿ ಕೊರದ್ದೋ?

    [ಉತ್ತರುಸಿ]

  11. vinaya
    VA:F [1.9.3_1094]
    Rating: 0 (from 0 votes)

    ತು೦ಬಾ ತ೦ಬಾ ಲಾಯಿಕಾಯಿದು ಃ-)

    [ಉತ್ತರುಸಿ]

  12. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ಯೆಬ್ಬಾ ನಿಂಗಳೇ????
    ಭಯಂಕರ ಲಾಯಿಕ ಆಯಿದಿದು…

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಭಯ೦ಕರ ಹೇಳಿ ಅಪ್ಪಗ ಒ೦ದರಿ ಹೆದರಿದೆ ಮಾಣೀ..

    [ಉತ್ತರುಸಿ]

    ಮಂಗ್ಳೂರ ಮಾಣಿ... ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: +2 (from 2 votes)

    ಹೇ ಇಲ್ಲೆ ಇಲ್ಲೆ.. ಅದು ಮಂಗ್ಳೂರಿನ ಪ್ರಭಾವ… ಇಲ್ಲಿ ಲಾಯಕ ಆದರೆ ಅದರ ಭಯಂಕರ ಹೇಳ್ತವು…

    [ಉತ್ತರುಸಿ]

    ವಿವೇಕ ಮುಳಿಯ ಉತ್ತರ ಕೊಟ್ಟದು:
    ವಿವೇಕ ಮುಳಿಯ

    VN:F [1.9.3_1094]
    Rating: 0 (from 0 votes)

    ಇದು ಸರಿ ಭಾವ!

    [ಉತ್ತರುಸಿ]

  13. vishnunandana
    ವಿಷ್ಣು ನಂದನ
    VA:F [1.9.3_1094]
    Rating: 0 (from 0 votes)

    Aaha.. Adbhutha bhava…

    Hemme avutthu Havyaka bhasheli ishtu chendake padya baraddadu odi…

    Super aaydu… Hange ondari mane nenpathu :)

    [ಉತ್ತರುಸಿ]

  14. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +3 (from 3 votes)

    ತರವಾಡು ಮನೆಯ ಕಾರ್ಯಕ್ರಮಂಗಳ ವಿವರಣೆ ಕೇಳುವಾಗ ಅದರ ಕಲ್ಪನೆ ಮಾಡಿ ಕೊಶೀ ಆವ್ತಾ ಇದ್ದು. ಮುಳಿಯದ ಭಾವಯ್ಯ ಆ ಕಲ್ಪನೆಯ ಚೆಂದಕೆ ಭಾಮಿನಿಗೆ ಇಳುಸಿ ನಮ್ಮ ಬೈಲಿನ ಅವಿಭಕ್ತ ಕುಟುಂಬದ ಹಾಂಗೆ ತೋರುಸಿದ್ದದು ಇನ್ನೂ ಚೆಂದ ಆಯಿದು. ಎರಡನೆಯ ಕಂತುದೆ, ಮದಲಾಣ ಕಂತಿನ ಹಾಂಗೆ ಮೆರದ್ದು. ಬೈಲಿನವೆಲ್ಲ ಮೆಚ್ಚಿ ಒಪ್ಪ ಕೊಟ್ಟದರ ಓದಲೇ ಮತ್ತೂ ಕೊಶಿ. ಆನು ರಜಾ ತಡವಾಗಿ ಓದಿದ ಕಾರಣ. ಆನು ಹೇಳೆಕ್ಕಾದ್ದರ ಎಲ್ಲೋರು ಹೇಳಿ ಆಯಿದು. ಈ ಸರ್ತಿಯಾಣ ಪಟಲ್ಲಿ ಕಾಣ್ತ ತರವಾಡು ಮನೆ ಮಾದರಿ ಮನೆಯಾಗಿ ಇದ್ದು, ಮುಳಿಯದ ಭಾಮಿನಿಗೆ ಪೂರಕವಾಗಿದ್ದು. ಕುಂಟಿಕಾನ ಭಾವನುದೆ ಭಾಮಿನಿಲೇ ಒಪ್ಪ ಒಪ್ಪ ಕೊಟ್ಟಿದ. ಜೆಂಬಾರದ ದಿನ ಹಂತಿಲಿ ಉಂಬಗ ದ್ವಂದ್ವಗಾರಿಕೆ ರೈಸಿದ ಹಾಂಗೆ ರೈಸಿತ್ತಿದ. ಕುಂಟಿಕಾನ/ ಮುಳಿಯ ಭಾವಯ್ಯರ ಭಾಮಿನಿಯ ಜೋಡಿ ಮೆರೆಯಲಿ. ಭಾಮಿನಿಲಿ ನಮ್ಮ ಮೈ ಮನ ಮರೆಸಲಿ.

    [ಉತ್ತರುಸಿ]

  15. ವಿವೇಕ ಮುಳಿಯ
    ವಿವೇಕ ಮುಳಿಯ
    VN:F [1.9.3_1094]
    Rating: 0 (from 0 votes)

    ರಘುವಣ್ಣಾ ಭಯ೦ಕರ ಆಯ್ದು ;) ನಿ೦ಗಳ ಭಾಮಿನಿ! (ಹೀ೦ಗೆ ಹೇಳುಲಕ್ಕೊ:)).

    [ಉತ್ತರುಸಿ]

    ತೆಕ್ಕುಂಜ ಕುಮಾರ ಉತ್ತರ ಕೊಟ್ಟದು:
    ತೆಕ್ಕುಂಜ ಕುಮಾರ ಮಾವ°

    VN:F [1.9.3_1094]
    Rating: 0 (from 0 votes)

    ಧಾರಾಳ..ಆಗದ್ದೇಕೆ. ಅಣ್ಣ ಆರು ಗೆರೆಯ ಭಾಮಿನಿಲಿ ಬರವಗ ನೀನು ನಾಲ್ಕು ಗೆರೆಲಿಯಾದರು ಬರೆಯದ್ದರೆ ಹೆಂಗೆ..! ಆವಾಗ ಅತಿ ಭಯಂಕರ ಅಕ್ಕು.

    [ಉತ್ತರುಸಿ]

    ವಿವೇಕ ಮುಳಿಯ ಉತ್ತರ ಕೊಟ್ಟದು:
    ವಿವೇಕ ಮುಳಿಯ

    VN:F [1.9.3_1094]
    Rating: 0 (from 0 votes)

    ಅದಾ ಕುಮಾರ ಮಾವ ಗವ್ಜಿ ಮಾದ್ಳೆ ಶುರು ಮಾಡಿದೊವು!
    ವಿವೇಕ ಮುಳಿಯ

    [ಉತ್ತರುಸಿ]

  16. ಉಂಡೆಮನೆ ಕುಮಾರ°
    ಉಂಡೆಮನೆ ಕುಮಾರ°
    VA:F [1.9.3_1094]
    Rating: 0 (from 0 votes)

    ಲಾಯಿಕಾಯಿದು..ತಾಳಿಂಗೇವದು, ಬೆಂದಿಗೆಂತದು? ವಾಹ್ ..ಹಳೇ ನೆಂಪು ಬಂತು..ಭಾವಂಗೆ ಧನ್ಯವಾದಂಗೊ..

    [ಉತ್ತರುಸಿ]

  17. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: 0 (from 0 votes)

    ಮುಳಿಯಭಾವಾ..
    ಅದ್ಭುತ ರಚನೆ, ಮತ್ತೊಂದರಿ.
    ಒಪ್ಪಣ್ಣಂಗೆ ತರವಾಡುಮನೆಯ ಶುದ್ದಿ ಹೇಳಿರೇ ಕೊಶಿ!
    ಮುಳಿಯಭಾವನ ಭಾಮಿನಿ ಹೇಳಿರೆ ಮತ್ತೂ ಕೊಶಿ.
    ಅದರ್ಲಿಯೂ ತರವಾಡುಮನೆ ಶುದ್ದಿ ಭಾಮಿನಿಲಿ ಹೇಳಿತ್ತುಕಂಡ್ರೆ ಇನ್ನೂ ಇನ್ನೂ ಕೊಶಿ..

    ಇನ್ನೂ ಇದ್ದವನ್ನೆ ಸುಮಾರು ಜೆನ..
    ಬೂತಕಟ್ಟುತ್ತ ಕೋಟಿ, ಮದ್ದುಬಿಡ್ತ ಬಾಬು, ರಂಗಮಾವನ ತಂಗೆ – ಮಾಲಚಿಕ್ಕಮ್ಮನ ಸಂಸಾರ, ರಂಗಮಾವನ ಸೋದರತ್ತಿಗೆ ಶಬತ್ತೆಯ ಸಂಸಾರ – ಇತ್ಯಾದಿ!!
    ಇವೆಲ್ಲರದ್ದುದೇ .. ;-)

    [ಉತ್ತರುಸಿ]

  18. Gopalakrishna BHAT S.K.
    ಗೋಪಾಲಣ್ಣ
    VA:F [1.9.3_1094]
    Rating: 0 (from 0 votes)

    ಅದ್ಭುತ ಕವನ.
    ಇನ್ನೂ ಬರೆಯಿರಿ.

    [ಉತ್ತರುಸಿ]

  19. ಶ್ರೀಅಕ್ಕ°
    ಶ್ರೀಅಕ್ಕ°
    VN:F [1.9.3_1094]
    Rating: 0 (from 0 votes)

    ರಘು ಭಾವ°,
    ತರವಾಡು ಮನೆಯ ಚಿತ್ರಣದ ಎರಡನೇ ಕಂತುದೇ ಲಾಯ್ಕ ಬಯಿಂದು ಸುರುವಾಣದ್ದರ ಹಾಂಗೆಯೇ!!
    ಧನ್ಯವಾದ ರಘು ಭಾವ°.

    ನವಗೆ ಎಲ್ಲೋರಿಂಗೂ ಜೀವನಲ್ಲಿ ಒಂದು ತರವಾಡು ಮನೆ ಇದ್ದು, ಎಂಗೊಗೆ ಹುಟ್ಟಿ ಬೆಳದ ಮನೆದೇ ಇರ್ತು ಮೂಲ ಆಗಿ, ಕೊಟ್ಟ ಮನೆಗೆ ಹೊಗ್ಗಿದ ಮೇಲೆದೇ!! ಒಪ್ಪಣ್ಣನ ಬೈಲಿಂಗೆ ಬಂದ ಮೇಲೆ ಬೈಲಿನ ತರವಾಡು ಮನೆದೇ ನಮ್ಮ ತರವಾಡು ಮನೆ ಆದ್ದದು ಜೀವನದ ಒಂದು ಸುಯೋಗವೇ ಅಲ್ಲದಾ? ಈ ಕೂಡು ಕುಟುಂಬದ ಭಾಗವಾಗಿಪ್ಪಲೆ ತುಂಬಾ ಹೆಮ್ಮೆ ಅನುಸುತ್ತು. ಒಪ್ಪಣ್ಣನ ಬೈಲು, ಬೈಲಿನ ಎಲ್ಲ ಬಂಧುಗೊ ನಮ್ಮ ನಿತ್ಯ ಜೀವನದ ಭಾಗಂಗಳೇ ಅಲ್ಲದಾ? ನಿಂಗಳ ಭಾಮಿನಿ ಬಂದ ಮೇಲೆ ಆ ಬಾಂಧವ್ಯ ಇನ್ನುದೇ ಹೆಚ್ಚಾತು. ತುಂಬಾ ಚೆಂದಕ್ಕೆ ಬರದ್ದಿ ಭಾವ°. ನಮ್ಮ ಬೈಲಿನ, ತರವಾಡು ಮನೆಯ ಎಲ್ಲ ವ್ಯಕ್ತಿತ್ವಂಗಳೂ ಬೆಳಕಿಂಗೆ ಬರಲಿ…

    ಇನ್ನಾಣ ಕಂತಿಂಗೆ ಕಾಯ್ತಾ ಇದ್ದೆ…

    [ಉತ್ತರುಸಿ]

  20. mohananna
    ಮೋಹನಣ್ಣ
    VN:F [1.9.3_1094]
    Rating: +1 (from 1 vote)

    ರಘುಭಾವ ಆನು ಹೇಳೇಕಾದ್ದದರ ಎಲ್ಲ ಎಲ್ಲೋರೂ ಹೇಳಿ ಮುಗುಸಿದ್ದವಾನೆ.ಇರಳಿ ಲಾಯಕಾಯಿದು ಹೇಳಿ ನಿಲ್ಲುಸುತ್ತೆ.ಬೆ೦ಕಿಲ್ಲಿಪ್ಪವರ ಹಾ೦ಗೆ ಎನಗೂ ಇಯರ್ ಎ೦ಡಿನ ತೊ೦ದರೆ ಬೈಲಿ೦ಗೆ ಬಪ್ಪಲೇ ಪುರುಸೊತ್ತಿಲ್ಲೆ.ಮಗಳ ಮನಗೆ ಹೋಯೇಕಾದರೂ ಸುತ್ತಿ ಹೋಯೇಕು ಬೇರೆ ಹಲವು ಕಾರ್ಯಕ್ರಮ೦ಗೊ ಇನ್ನಿಗ ವಿರಾಟ ಪೂಜೆಯೂ ಬ೦ತದ.ಇರಲಿ ಇನ್ನಣ ಭಾಮಿನಿ ಬೇಗ ಬರಳಿ.ಒಪ್ಪ೦ಗಳೊಟ್ಟಿ೦ಗೆ

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ಅಷ್ಟಪ್ಪಗ ಗೆಣಮೆಣಸು ಸಜ್ಜಿ ಮಾಡ್ಲೆ ಆತನ್ನೆ ಮೋಹನಣ್ಣ.

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಕೃಷ್ಣಮೋಹನ ಮಾವ,ಪುರುಸೊತ್ತು ಮಾಡಿ ಬ೦ದಿರನ್ನೆ.ಗೋಕರ್ಣಕ್ಕೆ ಹೆರಟಿರೋ?

    [ಉತ್ತರುಸಿ]

  21. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.3_1094]
    Rating: 0 (from 0 votes)

    ಭಾರೀ ಲಾಯ್ಕಾಯಿದು ರಘುಅಣ್ಣ.

    [ಉತ್ತರುಸಿ]

  22. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: 0 (from 0 votes)

    ತರವಾಡು ಮನೆಯ ಭಾಮಿನಿ ಬಾರೀ ಪಸ್ಟ್ಟಾಯಿದು..ಬಿಡದ್ದೆ 3 ಸರ್ತ್ತಿ ಓದಿದೆ ಓದಿದಸ್ತ್ತು ರುಚಿ ಹೆಚ್ಹುತ್ತನ್ನೆ..ಇನ್ನಾಣದ್ದು ಯಾವಾಗ??ಒಪ್ಪಂಗಳೊಟ್ಟಿಂಗೆ…

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಅಡ್ಕತ್ತಿಮಾರು ಮಾವನ ಬೈಲಿಲಿ ಕಾಣದ್ದೆ ಸುಮಾರು ದಿನ ಆಗಿತ್ತು.ಗುಜ್ಜೆ ತಾಳಿನ ಹಾ೦ಗಾಯಿದು ಹೇಳಿ ಆತದಾ.

    [ಉತ್ತರುಸಿ]

  23. mohananna
    ಮೋಹನಣ್ಣ
    VN:F [1.9.3_1094]
    Rating: 0 (from 0 votes)

    ಗೆಣಮೆಣಸು ಸಜ್ಜಿ ಮಾಡಿ ಎಲ್ಲ ಆಯಿದು.ಸೌತೆ ಸಾಲು ತೆಗದು ಬಿತ್ತು ಹಾಕಿರಕ್ಕೋ ಹೇಳಿ ಅ೦ದಾಜಿ.ಅದಕ್ಕೊ೦ದಷ್ಟು ಕೆಲಸ ಇದ್ದದ.ಚೆನ್ನಯಿ ಭಾವ ಎನ್ನ ಮಗನೂ ಚೆನ್ನಯಿಲಿಯೇ ಇಪ್ಪದು ವಿಪ್ರೊಲ್ಲಿ ಕೆಲಸ.ಒಪ್ಪ೦ಗಳೊಟ್ಟಿ೦ಗೆ.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME