ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಕೇಜಿಮಾವ°ಶ್ರೀಅಕ್ಕ°ಪೆಂಗಣ್ಣ°ಚುಬ್ಬಣ್ಣಕೆದೂರು ಡಾಕ್ಟ್ರುಬಾವ°ಬಟ್ಟಮಾವ°ಬಲ್ನಾಡುಮಾಣಿಅಜ್ಜಕಾನ ಭಾವಕೊಳಚ್ಚಿಪ್ಪು ಬಾವವಸಂತರಾಜ್ ಹಳೆಮನೆಹಳೆಮನೆ ಅಣ್ಣಪೆರ್ಲದಣ್ಣಸುಭಗಅಕ್ಷರದಣ್ಣಅನುಶ್ರೀ ಬಂಡಾಡಿಡಾಗುಟ್ರಕ್ಕ°ಶೇಡಿಗುಮ್ಮೆ ಪುಳ್ಳಿಶುದ್ದಿಕ್ಕಾರ°ತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ಬಂಡಾಡಿ ಅಜ್ಜಿಸರ್ಪಮಲೆ ಮಾವ°ಶ್ಯಾಮಣ್ಣಚೆನ್ನೈ ಭಾವ°ಶರ್ಮಪ್ಪಚ್ಚಿಪವನಜಮಾವಮಾಷ್ಟ್ರುಮಾವ°ದೊಡ್ಡಭಾವಜಯಶ್ರೀ ನೀರಮೂಲೆಶಾಂತತ್ತೆಪುತ್ತೂರುಬಾವನೀರ್ಕಜೆ ಮಹೇಶಚೆನ್ನಬೆಟ್ಟಣ್ಣಅನು ಉಡುಪುಮೂಲೆಚೂರಿಬೈಲು ದೀಪಕ್ಕನೆಗೆಗಾರ°ಅಕ್ಷರ°ಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಯೇನಂಕೂಡ್ಳು ಅಣ್ಣಕಾವಿನಮೂಲೆ ಮಾಣಿಮುಳಿಯ ಭಾವವೇಣೂರಣ್ಣದೀಪಿಕಾಡೈಮಂಡು ಭಾವದೇವಸ್ಯ ಮಾಣಿಬೊಳುಂಬು ಮಾವ°ಪುಟ್ಟಬಾವ°ಗಣೇಶ ಮಾವ°ವೇಣಿಯಕ್ಕ°ಸಂಪಾದಕ° (editor)ಎರುಂಬು ಅಪ್ಪಚ್ಚಿಮಂಗ್ಳೂರ ಮಾಣಿಒಪ್ಪಕ್ಕಕಳಾಯಿ ಗೀತತ್ತೆಡಾಮಹೇಶಣ್ಣವಿದ್ವಾನಣ್ಣ


ಮದುವೆ ಗೌಜಿ -ಭಾಮಿನಿಲಿ

April 26, 2011 ರ 12:51 pmಗೆ ನಮ್ಮ ಮುಳಿಯ ಭಾವ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ೦ಭು ಮಾವನ ಮಗನ ಮದುವೆಯ
ಜೆ೦ಬರವು ಎದ್ದತ್ತು ಅಡಕೆಯ
ಕ೦ಭ ನೆಟ್ಟವು ಮಡಲ ಚೆಪ್ಪರ ಸಜ್ಜಿ ಮಾಡಿದವು
ಜೆ೦ಬುಕಾನವ ತೆಗದವದ ತಲೆ
ಕೊ೦ಬು ಕೊ೦ಬಿನಗಿ೦ಡಿ ಒಯಿಶಿಯೆ
ಒ೦ಬುಸುಲೆ ಜತೆ ನ೦ಬಿಗೊ೦ಡವು ಲ೦ಬದುದರನನೇ

ದಿಬ್ಬಣವು ಹೆರಟಾತು ಬೆಣ್ಚಿಗೆ
ಉಬ್ಬೆ ಹಾಕಿದ ಹಾ೦ಗೆ ತೆರಕಿಲಿ
ಬೊಬ್ಬೆ ಹಾಸ್ಯದ ಹೊಳೆಯೆ ಹರಿಗದ ವರನ ಕಾಲೆಳೆದು
ಇಬ್ಬರಿದ್ದರೆ ಸಾಕು ಕಟ್ಟುಲೆ
ಅಬ್ಬರದ ಮು೦ಡಾಸಿನಾಯಿತ
ಉಬ್ಬಿ ಅರಳಿತ್ತೀಗ ಮಾಣಿಯ ಮೋರೆ ಹರುಷಲ್ಲಿ

ಬಕ್ಕು ಪಟ್ಟೆಯ ಸೀರೆಲಿಯೆ ಹೆ
ಮ್ಮಕ್ಕೊ ಗೌಜಿಯ ಮಾತಿನಬ್ಬರ
ಬೊಕ್ಕು ಬಾಯಿಯ ಅಜ್ಜಿ ಹಸೆಲಿಯೆ ಕೂದು ಕೇಳುಗದಾ
ಅಕ್ಕು ಮದಿಮಾಳಾಯಿತವು ಆ
ಟಿಕ್ಕಿ ತೆಗೆ ಒಪ್ಪುತ್ತು ಕೆಮಿಗದೊ
ಸಿಕ್ಕುಸಿರೆ ಜತೆ ಕೊಪ್ಪು ಬುಗುಡಿಗೆ ಕೊರಳ ಚಕ್ರಸರ

ತೆರೆಯ ವಸ್ತ್ರವ ಮ೦ಟಪದ ನಡು
ಹಿರಿಯ ಸೋದರಮಾವ ಹಿಡುದರೆ
ಕೊರಳು ಉದ್ದವದಾತೊ ಮದಿಮಾಯ೦ಗೆ ಸ೦ತಸಲಿ
ಮರಗು ದುಃಖವ ಕೂಸ ಹೆತ್ತವ
ರೆರದು ಧಾರೆಯ ಕೈಯ ಮುಗಿವಗ
ಮೆರಗು ಮದುವೆಯ ಸಭೆಯು ಚೆ೦ದಕೆ ಒಸಗೆಯಕ್ಷತೆಲಿ

ಹೆಟ್ಟಿ ಕೇಳಿದರಾತು ಹೇಳುಗು
ಬಟ್ಟಮಾವನೆ ಮ೦ತ್ರದರ್ಥವ
ಗುಟ್ಟು ಮಾಡದೆ ದೊಡ್ಡ ದೊ೦ಡೆಲಿ ಬೇಡ ಸ೦ಶಯವು
ಸಟ್ಟುಮುಡಿಗಟ್ಟಣೆಯ ಮಾಡುತ
ಕೊಟ್ಟು ಕೆಮಿ ಕೇಳಿದರೆ ಸಾಕದ
ಚಿಟ್ಟೆ ಕರೆಲಿಯೆ ಕೂಪ ಭಕ್ತಿಲಿ ಚಾಯ ಕುಡುದಾಗಿ

ಮದುವೆ ಹೇಳಿದರೊ೦ದು ಯೋಗವು
ಅದುವೆ ಪೂರ್ವದ ಪುಣ್ಯ ಸುಕೃತವು
ಮಧುರ ಜೀವನ ಕಥೆಗೆ ದೇವರು ಬರದ ಮುನ್ನುಡಿಯು
ಮದನಕೈಯಾಸರೆಯ ಮೀರುವ
ಹದದ ಹೊ೦ದಾಣಿಕೆಲಿ ಜತೆಯಲಿ
ಮುದದಿ ಮು೦ದಕೆ ಕಷ್ಟಸುಖವೆದುರುಸುಲೆ ಮಾರ್ಗವಿದು

ಮದುವೆ ಗೌಜಿ -ಭಾಮಿನಿಲಿ, 5.0 out of 5 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

  1. ಗಣೇಶ
    ಗಣೇಶ ಪೆರ್ವ
    VA:F [1.9.3_1094]
    Rating: +1 (from 1 vote)

    ವ್ಹಾಹವ್ವಾ.. ಒಪ್ಪ೦ಗೊ ರಘು ಭಾವಾ.. ಭಾರೀ ಲಾಯ್ಕಾಯಿದು. ಮದುವೆಯ ಊಟ ಬಿಟ್ಟು ಹೋತೋ? ಅದುದೆ ಇತ್ತಿದ್ದರೆ ಪೂರ್ತಿ ಆವ್ತಿತು ಅಲ್ಲದೊ?

    [ಉತ್ತರುಸಿ]

  2. ದೊಡ್ಡಭಾವ
    ದೊಡ್ಡಭಾವ
    VA:F [1.9.3_1094]
    Rating: +1 (from 1 vote)

    ಗಣೇಶೋ… ಊಟದ ಗೌಜಿ ಇನ್ನೊಂದರಿ ಭಾಮಿನಿಲಿ ಕೇಳುವೊ, ಆಗದೋ…?

    [ಉತ್ತರುಸಿ]

  3. ತೆಕ್ಕುಂಜ ಕುಮಾರ
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: 0 (from 0 votes)

    ಅದಕ್ಕು.. “ಭೋಜನ ಕಾಲೇ ” ಹೇಳುಲೆ ಚೆನ್ನೈ ಭಾವ ಕಾದುಗೋಂಡಿದ್ದವಡ. ಚೂರ್ಣಿಕೆ ಆರು ಹೇಳ್ತದು .ಶರ್ಮಪ್ಪಚ್ಚಿಯೊ, ಸುಭಗಣ್ಣನೊ ಅಥವ ಕುಂಟಿಕಾನ ಭಾವನೋ ಕಾದು ನೋಡುವಾ…

    [ಉತ್ತರುಸಿ]

    ಸುಭಗ ಉತ್ತರ ಕೊಟ್ಟದು:
    ಸುಭಗ

    VN:F [1.9.3_1094]
    Rating: +1 (from 1 vote)

    ಏ ಕುಮಾರಣ್ಣ.. ನಮ್ಮ ಊರಿನ ಒಂದು ಮದುವೆ ಊಟಲ್ಲಿ ಆದ ಕತೆ ಗೊಂತಿದ್ದೊ?
    ‘ಒಂದು ಹೇಳು ಮಾರಾಯಾ..’ ‘ನೀನು ಒಂದು ಹೇಳಿರೆ ಆನು ಎರಡು ಹೇಳುವೆ’ ಹೀಂಗೆಲ್ಲ ಎನ್ನ ಹತ್ತರೆ ಕೂದ ದೋಸ್ತಿಗೊ ಎನ್ನ ಚೂರ್ಣಿಕೆ ಹೇಳ್ಳೆ ಒತ್ತಾಯ ಮಾಡಿದವು. ಅಂತೂ ಇಂತೂ ಮಜ್ಜಿಗ್ಗೆ ವರೆಗೆ ಎತ್ತಿ ಕೆಲವರಿಂಗೆ ಉಂಡೂ ಆತು. ಮತ್ತುದೆ ಇವರ ಒತ್ತಾಯ ತಡವಲೆಡಿಯದ್ದಪ್ಪಗ ಮೆಲ್ಲಂಗೆ ದೊಂಡೆ ಸರಿಮಾಡಿ ‘ಏಕಶ್ಲೋಕೀ ಭಾಗವತ’ವ ಹೇಳುವೊ ಹೇಳಿ “ಆದೌ….” ಹೇಳಿ ಸುರುಮಾಡಿದೆ.

    ಅಷ್ಟಪ್ಪಗ ತೆಕ್ಕೊಳಿ- ಮತ್ತಾಣ ಶಬ್ದ ‘ದೇವಕಿ’ ಹೇಳೆಕ್ಕಾರೆ ಮದಲೆ “ಆದವು ಇನ್ನು ಆರನ್ನು ಕಾವಲಿಲ್ಲೆ” ಹೇಳಿಂಡು ಉಂಡಾಗಿದ್ದ ಮನುಷ್ಯರು ಹಂತಿ ಮಧ್ಯಂದ ಸೀತ ಎದ್ದಿಕ್ಕಿ ನೆಡದವು..!!

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ನಿಂಗೊ ದೇವಕಿ ಹೇಳಿಯಪ್ಪಗ ಅದಾರೋ ಭಾವ – ‘ಅದು ನಿನ್ನ ಸಣ್ಣತ್ತೆ’ ಹೇಳಿದ್ದವಡಾ ಅಪ್ಪೋ?!

    [ಉತ್ತರುಸಿ]

  4. ಬಾಲಣ್ಣ
    ಬಾಲಣ್ಣ
    VA:F [1.9.3_1094]
    Rating: 0 (from 0 votes)

    ಹಾಂ ! ಮುಳಿಯದ “ಭಾಮಿನೀಪತಿ”ಗೆ ಜಯವಾಗಲಿ ! ಒಂದಾರಿಯಂಗೆ ಎನ್ನ ಮದುವೆಯೂ ನೆಂಪಾತು !

    ಭೋಜನಕಾಲೇ ‘-ಈಗ ಸಿನೆಮಾ ಪದ್ಯಂಗೊ! ಆದರೂ ಹೇಳ್ಲೆ ಜನ ಇಲ್ಲೆ. ಭಟ್ಟಮಾವನೋ ಮಣ್ಣ ಸುರುಮಾಡಿರೆ, ಶಾಸ್ತ್ರಕ್ಕೆ ಆರಾರೂ ಮಹದೇವಾ. .ಆ. ..ಆ ಆ ಆ ! ಇದ್ದವೋ ?

    ಊಟಕ್ಕಪ್ಪಗ ಭುರ್ರ್ ರ್ ರ್ ರ್ರನೆ ಗಾಡಿಗೊ.. ಕೈತೊಳವಲೆ ಪುರುಸೊತ್ತಿಲ್ಲೆ…ಮತ್ತೆ ಭುರ್ರ್ರ್ರ್ರ್ರ್ರ್… !
    ಚೆಂಡಿಕೈಲೇ ಕವರು ಮಡುಗಿ ಓಡಲೆ ಅಂಬ್ರೆಪ್ಪು ! ಮಂತ್ರಾಕ್ಶತೆಗೆ ಇದ್ದರೆ ನಾಲ್ಕು ಜನ ..ಮನೆಯವನ ಪುಣ್ಯ ! !!

    [ಉತ್ತರುಸಿ]

  5. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    :)

    [ಉತ್ತರುಸಿ]

  6. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: +4 (from 4 votes)

    ಯೆಬ್ಬೆ..! ಬೊಳುಂಬು ಮಾವ ಮಾಣಿಗೆ ಕೊಡೆ ಹಿಡುದು ದಿಬ್ಬಾಣ ಎದುರುಗೊಂಡು ಹೊದಳಿಡಿಕ್ಕಿ ದೊಡ್ಡ ಭಾವ ಎರಡು ಬೊಂಡ ಒಡದು ದೊಡ್ಡ ಗ್ಲಾಸಿಲ್ಲಿ ಕಾಲು ಗ್ಲಾಸು ಎರೆಶಿ ಮಂಗಳೂರ ಮಾಣಿ ಚಾಕಲೇಟು ಬಾಚಿ ಜುಬ್ಬದೊಳ ತುಂಬಿಸಿಯೊಂಡಿಪ್ಪಿಗ ಗೆಂಟು ಮಾಣಿ ಸೆಂಟು ಬಡಿವದಾನು ಹೇಳಿ ತರ್ಕ ಹಿಡಿವಾಗ ಈ ಮುಳಿಯ ಭಾವ ಎಲ್ಲಿಗೋಗಿತ್ತವಪ್ಪ ?! ಅಡಿಗೆ ಕೊಟ್ಟಗೆಲಿ ಕಾಪಿಗೆಂತರ ಇಡ್ಲಿಯೋ ಹೇಳಿ ನೋಡ್ಲೋ!!

    ಓಯಿ.., ಕಡೆಂಗೆ ಬೋಸ ಭಾವಂಗೆ ಶರ್ಬತ್ತೂ ಇತ್ತಿಲ್ಲೇ ನೋಡಿದಿರೋ.

    [ಉತ್ತರುಸಿ]

  7. Gopalakrishna BHAT S.K.
    ಗೋಪಾಲಣ್ಣ
    VA:F [1.9.3_1094]
    Rating: 0 (from 0 votes)

    ಲಾಯ್ಕ ಆಯಿದು.

    [ಉತ್ತರುಸಿ]

  8. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ರಘು,
    ಮದುವೆಯ ಗೌಜಿಲಿ ಎಂಗಳೂ ಸೇರಿಗೊಂಡ ಹಾಂಗೆ ಆತು.
    [ಮದುವೆ ಹೇಳಿದರೊ೦ದು ಯೋಗವು
    ಅದುವೆ ಪೂರ್ವದ ಪುಣ್ಯ ಸುಕೃತವು
    ಮಧುರ ಜೀವನ ಕಥೆಗೆ ದೇವರು ಬರದ ಮುನ್ನುಡಿಯು]-ತುಂಬಾ ಕೊಶೀ ಆತು ಈ ಸಾಲುಗಳ ಓದಿ ಅಪ್ಪಗ.

    [ಉತ್ತರುಸಿ]

  9. ಗ೦ಗಣ್ಬಾವ
    VA:F [1.9.3_1094]
    Rating: 0 (from 0 votes)

    ರಾಶಿಚೊಲೊ ಇದ್ದು

    [ಉತ್ತರುಸಿ]

  10. ಪ್ರದೀಪ್ ಮುಣ್ಚಿಕಾನ
    ಪ್ರದೀಪ್ ಮುಣ್ಚಿಕಾನ
    VA:F [1.9.3_1094]
    Rating: 0 (from 0 votes)

    :) :) :)

    [ಉತ್ತರುಸಿ]

  11. ಪವನಜಮಾವ
    ಪವನಜಮಾವ
    VN:F [1.9.3_1094]
    Rating: 0 (from 0 votes)

    ಲಾಯಕ್ಕಾಯಿದು. ಈಗಿನ ಕಾಲಲ್ಲಿ ಈ ಲಘು ಗುರು ಮಾತ್ರೆ ಲೆಕ್ಕ ಹಾಕಿಕೊಂಡು ಬರವಲೆ ತುಂಬ ಕಷ್ಟ. ಎನಿಗಂತೂ ಕವನ ಬರಿಲೇ ಎಡಿತ್ತಿಲ್ಲೆ. ಒಂದೊಂದರಿ ಮಿನಿ ಪದ್ಯ ಬರೆತ್ತೆ ಅಷ್ಟೆ :)

    [ಉತ್ತರುಸಿ]

    ಚೆನ್ನಬೆಟ್ಟಣ್ಣ ಉತ್ತರ ಕೊಟ್ಟದು:
    ಚೆನ್ನಬೆಟ್ಟಣ್ಣ

    VN:F [1.9.3_1094]
    Rating: 0 (from 0 votes)

    ಮಿನಿ ಆದರೂ ತೊಂದರೆ ಇಲ್ಲೆ, ಬರಳಿ ಬೈಲಿನ್ಗೆ

    [ಉತ್ತರುಸಿ]

    ದೊಡ್ಡಭಾವ ಉತ್ತರ ಕೊಟ್ಟದು:
    ದೊಡ್ಡಭಾವ

    VA:F [1.9.3_1094]
    Rating: 0 (from 0 votes)

    ಅಪ್ಪು ಕಾದೊಂಡಿದ್ದೆಯೊ, ಪವನಜ ಮಾವನ ಮಿನಿ ಪದ್ಯಂಗಳ…

    [ಉತ್ತರುಸಿ]

  12. ರಾಜನಾರಾಯಣ ಹಾಲುಮಜಲು
    VA:F [1.9.3_1094]
    Rating: 0 (from 0 votes)

    ಮುಳಿಯ ಬಾವನ ಭಾಮಿನಿ ಯಾವಗನ ಹಾ೦ಗೆ ರ ರೈಸಿದ್ದು.

    [ಉತ್ತರುಸಿ]

  13. ಚೆನ್ನಬೆಟ್ಟಣ್ಣ
    ಚೆನ್ನಬೆಟ್ಟಣ್ಣ
    VN:F [1.9.3_1094]
    Rating: 0 (from 0 votes)

    ವ್ಹಾರೆವ್ಹಾ …..

    [ಉತ್ತರುಸಿ]

  14. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +1 (from 1 vote)

    ಮದುವೆಯ ಭಾಮಿನಿಯ ಎರಡನೆಯ ಕಂತು ಚೆಂದಕೆ ಬಂತು. ಲಾಯಕಾಯಿದು. ಮದುವೆ ರಜಾ ಸ್ಪೀಡಿಲ್ಲಿ ಹೋತೋ ಹೇಳಿ. ಚೆನ್ನೈ ಭಾವ ಹೇಳಿದ ಹಾಂಗೆ ವರ್ಣನೆ ಇನ್ನು ರಜ ಇರೆಕಾತು ಭಾವಯ್ಯ. ಕುತೂಹಲಲ್ಲಿ ಕಾಯ್ತಾ ಇತ್ತಿದ್ದೆ. ಇದು ಬಂಟರ ಮದುವೆ ಹಾಂಗೆ ಗಡಿಬಿಡಿಲಿ ಕಳಾತು. ಒಳ್ಳೆ ಒಂದು ವಿಷಯ, ಎರಡು ಅಥವಾ ೩ ಕಂತಿಲ್ಲಿ ಮುಗಿತ್ತಾನೆ ಹೇಳಿ ಉತ್ಸಾಹಕ್ಕೆ ತಣ್ಣೀರು ಎರದ ಹಾಂಗೆ ಆತು, ಮುಳಿಯ ಭಾವಯ್ಯಾ. ಹೇಳಿದೆ ಹೇಳಿ ಬೇಜಾರು ಮಾಡಿಕ್ಕೆಡ. ಮದುವೆಯ ಇನ್ನೂ ರಜಾ ಉದ್ದ ಎಳೆಕು ಹೇಳಿ ಎನ್ನ ಅಲ್ಲ ಎಲ್ಲೋರ ಕಳಕಳಿಯ ಪ್ರಾರ್ಥನೆ.

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    [ಮದುವೆಯ ಇನ್ನೂ ರಜಾ ಉದ್ದ ಎಳೆಕು] ಶುಭಸ್ಯ ಶೀಘ್ರಂ

    [ಉತ್ತರುಸಿ]

    ಸುಭಗ ಉತ್ತರ ಕೊಟ್ಟದು:
    ಸುಭಗ

    VN:F [1.9.3_1094]
    Rating: 0 (from 0 votes)

    ಬೊಳುಂಬು ಮಾವ, ಚೆನ್ನೈ ಭಾವ ಹೇಳಿದ್ದಕ್ಕೆ ಎನ್ನದೂ ಸಹಮತ ಇದ್ದು. ಮದುವೆ ಜಂಬ್ರದ ಪರಿಪೂರ್ಣ ಚಿತ್ರಣ ಭಾಮಿನಿಲಿ ಬರಲಿ.

    ಬರವಲೆ ಸಮಯಾವಕಾಶ ಸಾಕಾವ್ತಿಲ್ಯೋ ರಘುಭಾವ? ಉಮ್ಮಪ್ಪ.. ಬರವ ಸಾಮರ್ತಿಕೆಯಂತೂ ನಿಂಗೊಗೆ ಇದ್ದೇ ಇದ್ದು! ;)

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ಹಾಂಗಲ್ಲ, ಊರಿಲ್ಲಿ ತಿರುಗಿ ದಿನ ಮುಂದೆ ಹೋತು ಹೇಳಿ ಅಮ್ಸರಲ್ಲಿ ಮುಗಿಶಿದಾಂಗೆ ಇದ್ದು ಮದುವೆ ರಘು ಭಾವಯ್ಯ. ನೋಡಿ ಇನ್ನಾಣದ್ದು…

    [ಉತ್ತರುಸಿ]

  15. ಪ್ರಮೋದ ಮುಣ್ಚಿಕಾನ
    ಮುಣ್ಚಿಕ್ಕಾನ ಪ್ರಮೋದ
    VA:F [1.9.3_1094]
    Rating: 0 (from 0 votes)

    ಸಟ್ಟುಮುಡಿಯದಿನದ ೧ ಭಾಮಿನಿಲಿಯೊ ಬರದರೆ ಲಾಯಿಕ್ಕಕ್ಕು……..

    [ಉತ್ತರುಸಿ]

  16. ರಘುಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: +1 (from 1 vote)

    ಓದಿದ,ಒಪ್ಪ ಕೊಟ್ಟು ಪ್ರೀತಿಲಿ ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.
    ಎನಗೂ ಮದುವೆಯ ಗೌಜಿ ಚುಟುಕಲ್ಲಿ ಮುಗಾತೋ ಹೇಳಿ ಸ೦ಶಯ ಆತೀಗ.ವಿಸ್ತಾರಲ್ಲಿ ಬರವಲೆ ಪ್ರಯತ್ನ ಮಾಡ್ತೆ.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME