ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಶರ್ಮಪ್ಪಚ್ಚಿಸರ್ಪಮಲೆ ಮಾವ°ಡೈಮಂಡು ಭಾವಬಟ್ಟಮಾವ°ಗಣೇಶ ಮಾವ°ಬೊಳುಂಬು ಮಾವ°ಶ್ರೀಅಕ್ಕ°ದೀಪಿಕಾಡಾಗುಟ್ರಕ್ಕ°ಯೇನಂಕೂಡ್ಳು ಅಣ್ಣದೊಡ್ಡಭಾವಅಡ್ಕತ್ತಿಮಾರುಮಾವ°ಚೆನ್ನೈ ಭಾವ°ಅಕ್ಷರದಣ್ಣಮಂಗ್ಳೂರ ಮಾಣಿಪುಟ್ಟಬಾವ°ಎರುಂಬು ಅಪ್ಪಚ್ಚಿಚೂರಿಬೈಲು ದೀಪಕ್ಕವೇಣಿಯಕ್ಕ°ಒಪ್ಪಕ್ಕಮುಳಿಯ ಭಾವಪೆರ್ಲದಣ್ಣಸಂಪಾದಕ° (editor)ವಿದ್ವಾನಣ್ಣಡಾಮಹೇಶಣ್ಣಬಲ್ನಾಡುಮಾಣಿಗೋಪಾಲಣ್ಣನೆಗೆಗಾರ°ಶಾಂತತ್ತೆಚುಬ್ಬಣ್ಣತೆಕ್ಕುಂಜ ಕುಮಾರ ಮಾವ°ಬಂಡಾಡಿ ಅಜ್ಜಿಕಾವಿನಮೂಲೆ ಮಾಣಿಅನು ಉಡುಪುಮೂಲೆದೇವಸ್ಯ ಮಾಣಿದೊಡ್ಡಮಾವ°ಚೆನ್ನಬೆಟ್ಟಣ್ಣಪುತ್ತೂರಿನ ಪುಟ್ಟಕ್ಕಕೊಳಚ್ಚಿಪ್ಪು ಬಾವಕೇಜಿಮಾವ°ಸುವರ್ಣಿನೀ ಕೊಣಲೆವೇಣೂರಣ್ಣಕೆದೂರು ಡಾಕ್ಟ್ರುಬಾವ°ಅನುಶ್ರೀ ಬಂಡಾಡಿಮಾಷ್ಟ್ರುಮಾವ°ಶ್ಯಾಮಣ್ಣಜಯಶ್ರೀ ನೀರಮೂಲೆಶುದ್ದಿಕ್ಕಾರ°ಕಳಾಯಿ ಗೀತತ್ತೆನೀರ್ಕಜೆ ಮಹೇಶಶೇಡಿಗುಮ್ಮೆ ಪುಳ್ಳಿಅಜ್ಜಕಾನ ಭಾವಅಕ್ಷರ°ಪವನಜಮಾವಹಳೆಮನೆ ಅಣ್ಣಪುತ್ತೂರುಬಾವಸುಭಗಪೆಂಗಣ್ಣ°


ಮದುವೆ ನಿಜ ಆತು -ಭಾಮಿನಿಲಿ

April 13, 2011 ರ 7:30 amಗೆ ನಮ್ಮ ಮುಳಿಯ ಭಾವ ಬರದ್ದು, ಇದುವರೆಗೆ 32 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ನೆ೦ಟರ ಮದುವೆ ಶುದ್ದಿಯ
ಸುಮ್ಮನಿರದಿ೦ದಿಲ್ಲಿ ಹೇಳೊಗ
ಒಮ್ಮನಸ್ಸಿಲಿ ಕೂದು ಬೈಲಿನವೆಲ್ಲ ಕೇಳುವಿರಾ
ಹೆಮ್ಮೆಯಲ್ಲದೊ ನಮ್ಮದೀ ಕ್ರಮ
ಗಮ್ಮತಿನ ಅನುಪತ್ಯ ಸಕಲರ
ಸಮ್ಮತಿಯು ಇದ್ದರದೊ ಹೇಳುವೆ ಆನು ವಿನಯಲ್ಲಿ
.
ವರುಷ ಇಪ್ಪತ್ತಾರು ಮಾಣಿಗೆ
ತರುಸಿ ಜಾತಕ ಯೋಗ್ಯ ಕೂಸಿನ
ಹರುಷದಲಿ ಮಾಡೆಕ್ಕು ಮದುವೆಯ ದಿನವ ನಿಜಮಾಡಿ
ಕರವಲೆಡ್ತರೆ ಸಾಕು ಕೂಸಿ೦
ಗೆರಡು ಬಗೆ ಗೊ೦ತಿರಲಿ ಅಡಿಗೆಲಿ
ಎರವಲೆಡ್ತರೆ ಸಾಕು ಉದ್ದಿನದೋಸೆ ಹೊತ್ತಿ೦ಗೆ
.
ಮಾಣಿ ಗಟ್ಟಿಗ° ಸಕಲ ವಿದ್ಯೆಲಿ
ಜಾಣ ಲೆಕ್ಕಾಚಾರ ಬರವಲೆ
ಗೋಣಿ ಕಾಯಿಯ ಹೊರುಗು ನೇರ್ಪಕೆ ಪೋಕುಮುಟ್ಟಿ೦ಗೆ
ತೂಣದಷ್ಟೇ ತ್ರಾಣಿ ಹುಡುಕಿರು
ಕಾಣ ಕೊರತೆಯು ತಡವು ಮಾಡದೆ
ಚಾಣೆ ತಲೆಯಪ್ಪದರ ಮದಲೇ ಮದುವೆ ಕಳುಶೆಕ್ಕು
.
ಅಕ್ಕ° ಕಳುಸಿದವೊ೦ದು ಜಾತಕ
ಪಕ್ಕನೆಯೆ ತೋರುಸಿರೆ ಕೂಡಲೆ
ಲೆಕ್ಕ ಹಾಕಿದ ಜೋಯಿಸರು ಬೆಳಿನೆಗೆಲಿ ಹೇಳಿದವು
ಅಕ್ಕು ಕೂಡುತ್ತೀ ಜತೆಯು ಸರಿ
ಬಕ್ಕು ಜೀವನ ನೊಗವ ಕಟ್ಟುಲೆ
ಒಕ್ಕಿ ನೋಡಿರೆ ಸಾಕು ಸಣ್ಣಕೆ ಮನೆಯ ಹಿನ್ನೆಲೆಯ
.
ಜಾತಕವು ಕೂಡುತ್ತು ಕೂಸಿದು
ಜಾತಿಲಿಯೆ ಸಿಕ್ಕಿದ್ದು ಪುಣ್ಯವೆ
ಕೀತಳೆಯ ಹಾ೦ಗಿಪ್ಪ ಚೆ೦ದದ ತೋಟ ಬೀಗರದು
ಆತು ಬದ್ಧದ ಕಾರ್ಯ ಹೇಳಿಕೆ
ಹೋತು ಬ೦ಧುಗಳಿ೦ಗೆ ಕೂಡಲೆ
ಸೂತಕದ ಹೆದರಿಕೆಯು ತಪ್ಪುಗು ನಾ೦ದಿ ಮಾಡಿದರೆ
.
( ಮದುವೆ ಗೌಜಿ ಬೇಗ ಇಕ್ಕು ಹಾ೦ಗಾರೆ)
ಮದುವೆ ನಿಜ ಆತು -ಭಾಮಿನಿಲಿ, 5.0 out of 5 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 32 ಒಪ್ಪಂಗೊ

  1. ಗಣೇಶ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಅಪ್ಪಪ್ಪು, ಮದುವೆ ಗೌಜಿಯುದೆ ಭಾಮಿನಿಲೇ ಬಕ್ಕು ಹೇಳಿ ಕಾದುಗೊ೦ಡಿರ್ಥೆಯೋ ರಘು ಭಾವಾ..

    ಯಾವತ್ತಿನ ಹಾ೦ಗೆ ಒಳ್ಳೇದಾಯಿದು.. ಪ್ರತಿ ಸಾಲುದೆ ತನ್ನ ಹಿ೦ದೆ ಆಳವಾದ ಅರ್ಥ ಮಡಿಕ್ಕೊ೦ಡಿದು.. ಅಭಿನ೦ದನೆಗೊ ಮತ್ತು ಧನ್ಯವಾದ೦ಗೊ..

    [ಉತ್ತರುಸಿ]

  2. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: +1 (from 1 vote)

    ಭರ್ಜರಿ ಆತಿದು ಮುಳಿಯ ಭಾವ. ನಿಂಗಳ ಮಾಣಿಗೆ ತೆಳ್ಳವು ಅವ್ತಿಲ್ಲೇ ಹೇಳಿ ಗೊಂತಾತು. ದಿನಾ ಉದ್ದಿನ ದೋಸೆ ಮಾಡಿ ತಿಂಬಷ್ಟು ಗಟ್ಟಿ ಕುಳವಾರು. ಹುಮ್ಮ್ಮ್. ಹೇಳಿದಾಂಗೆ….. ಗೋಣಿ ಕಾಯಿಯ ಹೊರುತ್ತದಲ್ಲದೋ – ಬೋಸ ಭಾವನೂ ಇದ್ದನಡ ರೆಡಿ ಇದಕ್ಕೆ.

    ಭಾವ ., ಬದ್ದಲ್ಲಿ ನೆಂಪಿರಲಿ. – ಮುಹೂರ್ತ ದಕ್ಷಿಣೆ ೩ ಕೈ ಮಾಡುತ್ಸು ಬೇಡ. ಸಭೆ ಸರ್ವತ್ರ ಮಾಡಿಕ್ಕುವೋ ಆಗದೋ.
    ಉಮ್ಮಾ ಇತ್ತೀಚಗೆ ಒಬ್ಬ ಜೋಇಸ ತರ್ಕ ಮಾಡಿ ಮುಹೂರ್ತ ದಕ್ಷಿಣೆ ಮುಹುರ್ತಿಕಂಗೆ ಮಾತ್ರ. ೩ ಕೈ ಕೊಡ್ಲಾಗ ಹೇಳಿಯೂ , ತೆರೆಸೀರೆ ಹಿಡಿಡು ಗೋತ್ರ ಖಂಡನೆ ಮಾಡ್ಲಾಗ ಹೇಳಿಯೂ ಗೆಂಟು ಹಿಡುದು ಮನೆಯವರ , ಎರಡೂ ಕಡೆ ಭಟ್ರ ಬಗ್ಗಿಸಿ ಹಾಂಗೇ ಮಾಡ್ಸಿದ್ದ.
    ಅಂಬಗ ನಮ್ಮ ಸೀಮೆಲಿ ಇಷ್ಟನ್ನಾರ ನಡಕ್ಕೊಂಡು ಬಂದದು, ಬಪ್ಪದು , ಕ್ರಮ , ಪೌರೋಹಿತ್ಯವನ್ನೂ ಖಂಡಿಸಿದಾಂಗೆ ಆತಿಲ್ಯೋ. ಇಲ್ಲಿ ಬೈಲಿನೋರ ಅಭಿಪ್ರಾಯ ಮಂಡಿಸಿ ಸಮರ್ಥಿಸಿರೆ ನಮ್ಮ ಈ ಒಪ್ಪಣ್ಣ.ಕಾಂ ವೇದಿಕೆ ಸಾರ್ಥಕ ಅಕ್ಕು ಭಾವಿಸುತ್ತೆ.

    [ಉತ್ತರುಸಿ]

  3. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ಪಷ್ಟಾಯಿದು ಮಾವ…

    [ಉತ್ತರುಸಿ]

  4. ತೆಕ್ಕುಂಜ ಕುಮಾರ
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: +1 (from 1 vote)

    ಮದುವೆಯೂ ಗಡದ್ದಿಲಿ ಆಯೆಕ್ಕಿದಾ. ಅತ್ತಾಳಕ್ಕೆ ನೆರೆಕರೆಯವಕ್ಕೆ ಹೇಳಿಕೆ ಹೋಗಲಿ.(ಬೆಂದಿ ಕೊರವಲೆ ಪೀಶಕತ್ತಿ ತೆಕ್ಕೊಂಡು ಬರೆಕ್ಕು, ನೆಂಪಿಲಿ) ಆನು ಬತ್ತೆ. ಕಳ ಮಡಿಕಿ ಎರದಡಾಟ ಇಸ್ಪೀಟು ಆಡಿದರಕ್ಕು. ಚೆನ್ನೈ ಭಾವ ಹೇಳಿದಾಂಗೆ ಮುಹೂರ್ತ ದಕ್ಷಿಣೆ ವಿಷಯಲ್ಲಿ ಭೇದ ಮಾಡುಲಾಗ. ಮತ್ತೆ ಊಟ ಎಲ್ಲೋರಿಂಗೂ ಹಂತಿಲಿ ಹಾಕೆಕ್ಕು, ಬೈಪ್ಪಣೆಲಿ ಬೇಡ.(ಅಲ್ಲದ್ದರೆ ಭೂಪಣ್ಣ ಬಾರ). ಕೂಸು ಜಾಲ್ಸೂರು ಹೊಡೆಯಾಣದೊ..ಅಂಬಗ ತೊಂದರೆ ಇಲ್ಲೆ ಅವರ ಗುರಿಕ್ಕಾರ್ರು ನಮ್ಮವೇ..

    [ಉತ್ತರುಸಿ]

  5. ಕುಂಟಿಕಾನ ಭಾವ
    ಕುಂಟಿಕಾನ ಭಾವ
    VN:F [1.9.3_1094]
    Rating: +2 (from 2 votes)

    ಚೊಕ್ಕವಾಯಿದು ಭಾವ ಭಾಮಿನಿ
    ಯಕ್ಕು ಸಂತಸ ಬೈಲಿನ ಜನಕೆ
    ಸಿಕ್ಕುಗದ ಸವಿ ಪಾಚದೌತಣ ಹೋಳಿಗೆಯ ಸಹಿತ
    ಬಕ್ಕು ಕಾಗದ ಬದ್ಧವಾದರೆ
    ಅಕ್ಕಿಕಾಳಿನ ಹಾಕೆ ಹೋಯೆಕು
    ಸಕ್ಕರೆಯ ಜೀವನವ ಹಾರೈಸುತಲಿ ದಂಪತಿಗೆ

    ಜಾತಕವ ಕೊಟ್ಟಕ್ಕ ಸಿಕ್ಕಿರೆ
    ಈ ತೆರದ ಜಾತಕಗಳಿದ್ದರೆ
    ಕಾತರಿಸುತಿರುತಿರ್ಪ ಬಂಧುಗಳಿಂಗೆ ತಿಳುಶಿಕಲಿ
    ವೇತನವು ಇಲ್ಲದ್ರು ಮಾಸಿಕ
    ಚೇತನವು ಇಕ್ಕಪ್ಪ ಅವು ಝಷ-
    - ಕೇತನನ ಅರಗಿಣಿಯ ಸಾಂಕುಗು ಕೊರತೆಯಿಲ್ಲದ್ದೆ

    [ಉತ್ತರುಸಿ]

    ಗಣೇಶ ಉತ್ತರ ಕೊಟ್ಟದು:
    ಗಣೇಶ ಪೆರ್ವ

    VA:F [1.9.3_1094]
    Rating: +1 (from 1 vote)

    ಆಹಾಹಾ.. ಕು೦ಟಿಕಾನ ಭಾವಯ್ಯಾ.. ರೈಸಿದ್ದು.. ಹೀ೦ಗಿಪ್ಪದರ ಓದುವಗ ಎ೦ಥಾ ಸ೦ತೋಷ ಗೊ೦ತಿದ್ದಾ.. ಧನ್ಯವಾದ೦ಗೊ..ನಿ೦ಗೊಗೂ, ಒಪ್ಪಣ್ಣನ ಬೈಲಿ೦ಗೂ..

    ಝ್ಹಷಕೇತನ ಹೇಳಿರೆ ಎ೦ತರ ಹೇಳಿ ಗೊ೦ತಾಯಿದಿಲ್ಲೆ…

    [ಉತ್ತರುಸಿ]

    ಕುಂಟಿಕಾನ ಭಾವ ಉತ್ತರ ಕೊಟ್ಟದು:
    ಕುಂಟಿಕಾನ ಭಾವ

    VN:F [1.9.3_1094]
    Rating: 0 (from 0 votes)

    ಧನ್ಯವಾದಂಗೊ ಗಣೇಶಣ್ಣ…
    ‘ಝಷಕೇತನ’ ಹೇಳಿರೆ ಮನ್ಮಥ..:)

    [ಉತ್ತರುಸಿ]

    ಗಣೇಶ ಉತ್ತರ ಕೊಟ್ಟದು:
    ಗಣೇಶ ಪೆರ್ವ

    VA:F [1.9.3_1094]
    Rating: 0 (from 0 votes)

    ಓಹ್ಹ್…
    ನಿ೦ಗೊ ಇಷ್ಟರವರೇ೦ಗುದೆ ಜಾಸ್ತಿ ಬರದು ಕ೦ಡಿದಿಲ್ಲೆನ್ನೆ!!! ನಿ೦ಗಳ ಒಳ ಇಪ್ಪ ಪ್ರತಿಭೆಯ ಹೀ೦ಗೆ ಬೂದಿ ಮುಚ್ಚಿದ ಕೆ೦ಡ / ಎಲೆ ಮರೆಯ ಕಾಯಿ ಮಾಡಿ ಮಡುಗೆಡಿ, ಪ್ಲೀಸ್..

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: +1 (from 1 vote)

    ‘ಝಷಕೇತನ’ ಹೇಳಿರೆ ಮನ್ಮಥ..:)- ಒಂದು ಹೊಸ ಶಬ್ದ ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದಂಗೊ. ಭಾಮಿನಿಯೂ ಲಾಯಿಕ ಆಯಿದು.
    ಹೆಚ್ಚಿನ ನಿರೀಕ್ಷೆಲಿ ಇದ್ದೆಯೊ

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಝಷ ಹೇಳಿರೆ ಮೀನು ಹೇಳಿ ಅರ್ಥ ಗೊ೦ತಾತು ಈಗ.ಕು೦ಟಿಕಾನ ಭಾವನ ಉನ್ನತ ಪದಕೋಶಕ್ಕೆ ಒರಳೆ ಬಕ್ಕು ಬರೆಯದ್ದೆ ತಳೀಯದ್ದೆ ಹೀ೦ಗೆ ಕೂದರೆ..

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: +2 (from 2 votes)

    ಗೋತ್ರ ಹೇಳೈ ಭಾವ ಮ೦ಗಲ
    ಸೂತ್ರ ಬಿಗಿವಲೆ ಬೇಗ ಊರಿನ
    ಯಾತ್ರೆ ಮಾಡಿಯೆ ಒಳ್ಳೆ ಜಾತಕ ಹುಡುಕಿ ಕಳುಸುತ್ತೆ
    ಸ್ತೋತ್ರ ಭಜನಾಸಕ್ತೆ ಕೋಮಲ
    ಗಾತ್ರೆಯನ್ನೇ ಮದುವೆಯಾದರು
    ಪಾತ್ರ ತೊಳವಭ್ಯಾಸ ಬಿಡೆಡದೊ° ಮರದರದು ಕಷ್ಟಾ !!

    [ಉತ್ತರುಸಿ]

    ಕುಂಟಿಕಾನ ಭಾವ ಉತ್ತರ ಕೊಟ್ಟದು:
    ಕುಂಟಿಕಾನ ಭಾವ

    VN:F [1.9.3_1094]
    Rating: +1 (from 1 vote)

    ಯೇ ಭಾವ, ಎನಗಲ್ಲ ಕೇಳಿದ್ದು ಜಾತಕ.. ಎಂಗಳ ಪೈಕಿಯವಕ್ಕೆ..;)..

    ಗೋತ್ರ ಅವರದು ತಿಳುದು ಹೇಳುವೆ
    ಮಾತ್ರ ಒಳ್ಳೆಯ ಕೂಟದವು ಅವು
    ಶಾಸ್ತ್ರ ನಿಪುಣನು ಸಕಲ ಗೌರವಪಾತ್ರ ಸುಚರಿತ್ರ
    ಪಾತ್ರಗಳ ತೊಳಗು, ಚಿತ್ರಾನ್ನವ
    ಖಾತ್ರಿಯಾಗಿಯೆ ಮಾಡೆ ಸರಸಿಜ-
    - ನೇತ್ರೆ ಛಾತ್ರವೃತ್ತಿ ಮಾಡೆಕು ಪಾಕನಿಪುಣನಡಿ..:)

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: +2 (from 2 votes)

    ಓ,ಹಾ೦ಗೋ ವಿಷಯ ಭಾವ? ಈಗಾಣ ವೆವಸ್ಥೆ ಹೇ೦ಗೆ ಹೇಳಿರೆ,

    ಬೇಕು ಕುಟ್ಟುವ ಕೆಲಸ ಬೆಳಿಯರ
    ಚಾಕರಿಯ ಮಾಡುತ್ತ ಹೊಟ್ಟೇ
    ಬಾಕನಾಗಿರದಿದ್ದರೆಲ್ಲರು ಕೊಡುಗು ಜಾತಕವಾ
    ಪಾಕಶಾಸ್ತ್ರವ ಕಲ್ತುಗೊ೦ಡವ°
    ನಾಕು ಬಗೆಯಡಿಗೆಯನು ಮಾಡಿಯೆ
    ಲೋಕದೆಲ್ಲೆಡೆ ಬದುಕುಗಲ್ಲದೊ ಡಾ ಮಹೇಶಣ್ಣಾ ?

    [ಉತ್ತರುಸಿ]

    ಮಹೇಶ ಉತ್ತರ ಕೊಟ್ಟದು:
    ಡಾಮಹೇಶಣ್ಣ

    VA:F [1.9.3_1094]
    Rating: +3 (from 3 votes)

    ಇದಾ! ನಾವು ಭಾಮಿನಿ೦ದ ಎರಡು ಹೆಜ್ಜೆ ಹಿ೦ದೆ–

    ಪಾಕವಾ ತಿಳಕೊ೦ಡು
    ಬೇಕಷ್ಟು ಮಾಡ್ಯೊ೦ಡು
    ಸಾಕಷ್ಟು(ಷ್ಟೆ) ತಿ೦ದರದು ಎಷ್ಟು ಚೆ೦ದ !
    ರೊಕ್ಕವಾ ಕಳೆಯದ್ದೆ
    ತೂಕವೂ ಇಳಿಯದ್ದೆ (ಏರ್ಸದ್ದೆ)
    ಚೊಕ್ಕದಾ ಜೀವನ ಕುಸುಮ ಸುಗ೦ಧ !!

    [ಉತ್ತರುಸಿ]

  6. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +3 (from 3 votes)

    ರಘು, ಭಾಮಿನಿಲಿ ಮದುವೆ ತಯಾರಿ ಅಪ್ಪಗ, ಕುಂಟಿಕಾನ ಭಾವನ ಮತ್ತೆ ನಿನ್ನ ಜುಗಲ್ ಬಂದಿ ನೋಡುವಾಗ, ಎನಗೂ ಒಂದು ಬರವಲೆ ಎಡಿತ್ತೋ ನೋಡಿದ್ದೆ.

    ಬಂದ ಮದುವೆಯ ಹೇಳಿಕೆಂಗಳ
    ಒಂದು ಮಾಡಿಯು ಹೋಗದಿದ್ದರೆ
    ಮುಂದೆ ಜೆ೦ಬರ ಎದ್ದರೆ೦ಗಳ ಮನಗೆ ಬಾರವಿದಾ.
    ಇಂದೆ ಇಸ್ತ್ರಿಯ ಹಾಕಿ ಹೆರಟವ
    ಮಂದಹಾಸದ ಮೋರೆ ತೋರುಸಿ
    ಚೆಂದವಾಗಿಯು ಕಾಂಬಲಾಗಿಯೆ ನಮ್ಮ ಶಿರಿಶಣ್ಣಾ

    [ಉತ್ತರುಸಿ]

  7. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +3 (from 3 votes)

    ಮುಳಿಯ ಭಾವನ ಭಾಮಿನಿ ಒಟ್ಟಿಂಗೆ, ಕುಂಟಿಕಾನ ಭಾವ, ಶರ್ಮಪ್ಪಚ್ಚಿಯ ಭಾಮಿನಿಯ ಧಾರೆ ಹರುದ್ದದು ಕಂಡು ಕೊಶೀ ಆತಿದ. ಮದುವೆ ಅನುಪತ್ಯದ ಗೌಜಿಯ ಚೆಂದಕೆ ಸುರುಮಾಡಿದ್ದ ಭಾವಯ್ಯ. ಮುಳಿಯ ಭಾವಯ್ಯ, ಕನಿಷ್ಟ ಐದು ಕಂತಿಲ್ಲಿ ವಿವರವಾಗಿ ಬರೆಕು ಈ ವಿಷಯ. ಪ್ರಥಮ ಅಧ್ಯಾಯ ಚೆಂದಕೆ ಬಯಿಂದು. ಬೇಗ ಮುಗುಶಿಕ್ಕೆಡಾ ಮಿನಿಯಾ.
    ಚಾಣೆ ತಲೆಯಪ್ಪದರ ಮದಲೇ ಮದುವೆ ಕಳುಶೆಕ್ಕು. ಅಪ್ಪಪ್ಪಾ. ಪ್ರಾಯ ಅಪ್ಪ ಮದಲೇ ಒಂದು ಚೆಂದಕೆ ಮದುವೆ ಆದರೆ ಸಾಕು ಮಾಣ್ಯಂಗವಕ್ಕೆ. ಕರವಲೆ, ದೋಸೆ ಎರವಲೆ ಪ್ರಾಸ ಲಾಯಕು ಬಯಿಂದು.
    ಕೃಷಿಯನ್ನೇ ನಂಬಿದ, ಮಾಣ್ಯಂಗವಕ್ಕೆ ಹೀಂಗೇ ಚೆಂದಕೆ ಮದುವೆ ನೆಡೆಯಲಿ. ಬದ್ದದ ಕಾರ್ಯಕ್ರಮದ ಪದ್ಯಕ್ಕೆ ಕಾದೊಂಡಿದ್ದೆ.

    [ಉತ್ತರುಸಿ]

    ಉಂಡೆಮನೆ ಕುಮಾರ° ಉತ್ತರ ಕೊಟ್ಟದು:
    ಉಂಡೆಮನೆ ಕುಮಾರ°

    VA:F [1.9.3_1094]
    Rating: 0 (from 0 votes)

    {ಬದ್ದದ ಕಾರ್ಯಕ್ರಮದ ಪದ್ಯಕ್ಕೆ ಕಾದೊಂಡಿದ್ದೆ.} ಬದ್ಧ ಕಳಾತನ್ನೆ ಬಾವ !

    [ಉತ್ತರುಸಿ]

    ಬೊಳುಂಬು ಮಾವ ಉತ್ತರ ಕೊಟ್ಟದು:
    ಬೊಳುಂಬು ಮಾವ°

    VA:F [1.9.3_1094]
    Rating: 0 (from 0 votes)

    ಬದ್ದದ ಹೇಳಿಕೆ ಕಾರ್ಯ ಆತಷ್ಟೆ ಹೇಳಿ ಆನು ಗ್ರೇಶಿದ್ದು. ಮತ್ತೆಲ್ಲ ಮುಳಿಯ ಭಾವನ ಕೈಲಿ ಇದ್ದು.

    [ಉತ್ತರುಸಿ]

    ಉಂಡೆಮನೆ ಕುಮಾರ° ಉತ್ತರ ಕೊಟ್ಟದು:
    ಉಂಡೆಮನೆ ಕುಮಾರ°

    VA:F [1.9.3_1094]
    Rating: 0 (from 0 votes)

    ಅಪ್ಪಪ್ಪು..

    [ಉತ್ತರುಸಿ]

  8. ಉಂಡೆಮನೆ ಕುಮಾರ°
    ಉಂಡೆಮನೆ ಕುಮಾರ°
    VA:F [1.9.3_1094]
    Rating: 0 (from 0 votes)

    ಮುಳಿಯ ಭಾವನ ಭಾಮಿನಿ ಒಟ್ಟಿಂಗೆ, ಕುಂಟಿಕಾನ ಭಾವ-ಶರ್ಮಪ್ಪಚ್ಚಿಯ ಭಾಮಿನಿ ರೈಸಿದ್ದು..

    [ಉತ್ತರುಸಿ]

  9. ಚುಬ್ಬಣ್ಣ
    ಚುಬ್ಬಣ್ಣ
    VN:F [1.9.3_1094]
    Rating: 0 (from 0 votes)

    ರಘು ಭಾವನ ಭಾಮಿನಿ ಹೇಳಿರೆ.. ಎರಡು ಮಾತಿಲ್ಲೆ..!!
    ಎಲ್ಲಾ ಸರಿ ಭಾವ. ಮಾಣಿ ಆರು.. ;)

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ಮಂಗಳೂರ ಮಾಣಿ ಆದಿಕ್ಕೋ ಚುಬ್ಬಣ್ಣ?!

    [ಉತ್ತರುಸಿ]

    ತೆಕ್ಕುಂಜ ಕುಮಾರ ಉತ್ತರ ಕೊಟ್ಟದು:
    ತೆಕ್ಕುಂಜ ಕುಮಾರ ಮಾವ°

    VN:F [1.9.3_1094]
    Rating: +1 (from 1 vote)

    ಗೆಂಟಂಗೆ ಕಟ್ಟಿದರೆ ಎಂತ..?
    ಫಟ,ವೀಡ್ಯದವಕ್ಕೆ ಈಗಳೇ ಹೇಳಿ ಮಡಿಗಿ ಚುಬ್ಬಣ್ಣ.

    [ಉತ್ತರುಸಿ]

  10. ಪ್ರಮೋದ ಮುಣ್ಚಿಕ್ಕಾನ
    ಮುಣ್ಚಿಕ್ಕಾನ ಪ್ರಮೋದ
    VA:F [1.9.3_1094]
    Rating: 0 (from 0 votes)

    ಮದುವೆ ಗಡುದ್ದಿಲಿ ಆಯೆಕ್ಕಿದ.ಈಗ ದೊಡ್ಡ ರಜೆಯಾದ ಕಾರಣ ೪ ದಿನ ಮೊದಲೇ ಬಪ್ಪಲಕ್ಕದೋ.ಹಾಂಗೆ ಮದುವೆಯ ದಿನ ತಿಳಿಸಿಕ್ಕಿ……. ;) ;)

    [ಉತ್ತರುಸಿ]

  11. mankuthimma
    VA:F [1.9.3_1094]
    Rating: 0 (from 0 votes)

    engala oorili ondu majjige,mosaru aagadda koosu iddu,aaringaadaru aavuttare helikki.

    [ಉತ್ತರುಸಿ]

    ಗಣೇಶ ಉತ್ತರ ಕೊಟ್ಟದು:
    ಗಣೇಶ ಪೆರ್ವ

    VA:F [1.9.3_1094]
    Rating: +1 (from 1 vote)

    ಎ೦ತರ ಆವುತ್ತರೆ ಹೇಳೆಕಾದ್ದದು? ಮಜ್ಜಿಗೆ, ಮೊಸರು? ಎನಗೆ ಅಕ್ಕು ಆತಾ.. ;-)

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ಆವುತ್ತರೆ ಎಂತಕೆ ಹೇಳೆಕು? ಅಕ್ಕಾದರೆ ಅಲ್ಲದೋ ಹೇಳೆಕ್ಕಾದ್ದು?!

    [ಉತ್ತರುಸಿ]

  12. Gopalakrishna BHAT S.K.
    ಗೋಪಾಲಣ್ಣ
    VA:F [1.9.3_1094]
    Rating: 0 (from 0 votes)

    ಅದ್ಭುತ ಕಾವ್ಯಸಂವಾದ!

    [ಉತ್ತರುಸಿ]

  13. ಪ್ರದೀಪ್ ಮುಣ್ಚಿಕ್ಕಾನ
    ಪ್ರದೀಪ್ ಮುಣ್ಚಿಕಾನ
    VA:F [1.9.3_1094]
    Rating: 0 (from 0 votes)

    ಒಪ್ಪ ಆಯಿದು ಮುಳಿಯ ಬಾವ… :)

    [ಉತ್ತರುಸಿ]

  14. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: 0 (from 0 votes)

    ಕಾವ್ಯ ಸಂವಾದ ಬಾರೀ ಒಳ್ಳೆದಾಯಿದು…ಸುರೂವಿಂಗೆ ಇಸ್ತ್ತು ಗೌಜಿ ಆದರೆ ಮದುವೆ ಹೇಂಗಿಕ್ಕಾಪ್ಪಾ???ಬೈಲ ಮದುವೆ ಅಲ್ಲದಾ ರೈಸಲಿ….

    [ಉತ್ತರುಸಿ]

  15. ಚೆನ್ನಬೆಟ್ಟಣ್ಣ
    ಚೆನ್ನಬೆಟ್ಟಣ್ಣ
    VN:F [1.9.3_1094]
    Rating: 0 (from 0 votes)

    ಭಾಮಿನಿ ಸಂಕಲನ ಬಿಡುಗಡೆ ಮದುವೆಗೋ ? ಸಟ್ಟುಮುಡಿಗೋ ?

    [ಉತ್ತರುಸಿ]

  16. ಶ್ರೀಅಕ್ಕ°
    ಶ್ರೀಅಕ್ಕ°
    VN:F [1.9.3_1094]
    Rating: +1 (from 1 vote)

    ರಘು ಭಾವ! ನಿಂಗೋ ಯೇವ ಶುದ್ದಿ ಹೇಳ್ತಾರುದೇ ಎಂಗೊ ಎಲ್ಲೋರೂ ಒಮ್ಮನಸ್ಸಿಲಿಯೇ ಕೇಳ್ತೆಯಾ°. ಅದರಲ್ಲಿಯೂ ಭಾಮಿನಿಲಿ ಆದರೆ ಒಮ್ಮನಸ್ಸಿನ ಒಟ್ಟಿಂಗೆ ಒಕ್ಕೊರಳುದೇ!!!

    ಭಾಮಿನಿಲಿ ನಮ್ಮ ಸಂಪ್ರದಾಯಲ್ಲಿ ನಡೆತ್ತ ಹಾಂಗೇ ಮದುವೆಗೆ ಪೀಠಿಕೆ ಹಾಕಿದ್ದದು ಲಾಯ್ಕಾಯಿದು. ಈಗ ಹೆಚ್ಚಿನದ್ದು ಅವ್ವವ್ವೇ ನಿಗಂಟು ಮಾಡಿಗೊಂಬ ಮದುವೆಗ ಅಪ್ಪ ಕಾರಣ ಅಕ್ಕಂದ್ರಿಂಗೂ ಕೆಲಸ ಕಮ್ಮಿ ಕೊಡ್ತವು ತಮ್ಮಂದ್ರು ಕೂಸು ಹುಡ್ಕುದರ ಅಲ್ಲದೋ ಭಾವ°?
    ನಿಂಗಳ ಭಾಮಿನಿಲಿ ಜೊತೆ ಆದ ಜೋಡಿಗ ಹೇಂಗೆ ಮುಂದರುದು ಹೊಸ ಬಾಳಿಂಗೆ ಕಾಲು ಮಡುಗುತ್ತವು ಹೇಳಿ ನೋಡ್ಲೆ ಇನ್ನಾಣ ಕಂತುಗಳ ಕಾಯ್ತೆ.
    ಆದಷ್ಟು ಬೇಗ ಬರಲಿ ರಘು ಭಾವ°!! ಜೆಂಬ್ರಂಗಳ ಚೊರಿ ಇದ್ದಿದಾ ಇನ್ನು!! ಮತ್ತೆ ಬೈಲಿನ ತಮ್ಮಂದ್ರ ಮದುವೆ ಮುಹೂರ್ತಂಗಳೂ ಇದ್ದು.. ಅದಕ್ಕೆ ತೊಂದರೆ ಅಪ್ಪ ಹಾಂಗೆ ಭಾಮಿನಿಲಿ ಅಪ್ಪ ಬೈಲ ಮದುವೆ ಬಾರದ್ದೆ!!!

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME