ಕೃಷ್ಣ ಕಾಡಿದನು..

August 28, 2013 ರ 10:07 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಂಸ್ಕೃತಲ್ಲಿ ಲೀಲಾಶುಕ ಹೇಳ್ತ ಕವಿ ಬರದ ಕೃಷ್ಣನ ಬಾಲಲೀಲೆಯ ಸೊಗಸಿನ ಜಿ.ಪಿ.ರಾಜರತ್ನಂ ಅವು ಮನಸ್ಸಿಂಗೆ ತಟ್ಟುವಾಂಗೆ ಕನ್ನಡಕ್ಕೆ ಭಟ್ಟಿ ಇಳಿಸಿದ್ದವು. ಅದರ ಗರ್ತಿಕೆರೆ ರಾಘಣ್ಣ ಅವು ತನ್ನ ತುಂಬುಕಂಠಲ್ಲಿ ಸುಶ್ರಾವ್ಯವಾಗಿ ಹಾಡಿದ್ದವು. ಅದರ ಕೇಳಿ ಆ ಕವನದ ಸಾರವ ಹವ್ಯಕಭಾಷೆಗೆ ತಪ್ಪಲೆ ಹೀಂಗೊಂದು ಸಣ್ಣ ಪ್ರಯತ್ನಮಾಡ್ತಾಇದ್ದೆ. ರಾಜರತ್ನಂರ ಭಾಷೆಯ ಹಿಡಿತ ಇದರಲ್ಲಿ ಬಾರದ್ದರೂ ಇದು ಎನ್ನ ಸುರುವಾಣ ಪ್ರಯತ್ನ ಹೇಳಿ ಸ್ವೀಕಾರಮಾಡ್ತಿ ಹೇಳಿ ನಂಬುತ್ತೆ.
ಇಂದು ಶ್ರೀಕೃಷ್ಣಜನ್ಮಾಷ್ಟಮಿ- ಶ್ರೀಕೃಷ್ಣನ ಪಾದಕ್ಕೆ ಅವನ ಬಗ್ಗೆ ಬರದ ನಾಲ್ಕು ಗೆರೆಗಳ ಸಮರ್ಪಿಸುತ್ತೆ- ಸಜ್ಜನರಿಂಗೆ ಸದಾ ಶ್ರೀರಕ್ಷೆಯಾಗಿರು ಹೇಳಿ ಕೇಳಿಗೊ೦ಡು.

~

ಅಣ್ಣಂಗಪ್ಪಗ ನೀನೆಂತರನ್ನೊ ಕೊಟ್ಟಿದೆಡ್ಡ ಆಗ
ಸಣ್ಣ ಆನು, ಎನಗು ಸಾನುಬೇಕು,ಬೇಗ ಕೊಂಡ ಈಗ
ಮರದುಹೋಯಿದು, ಅಣ್ಣಂಗೆಂತರ ಕೊಟ್ಟಿದೆಪ್ಪ, ಕೇಳು
ಕರದು ತಂದ ನೊರೆಹಾಲಿನವಂಗೆ ನೀ ಕೊಟ್ಟದಪ್ಪೊ ಹೇಳು

~
ನೊರೆಯ ಪೂರ ಉರ್ಪಿಕ್ಕಿ ನೆಗೆಮಾಡುತ್ತನವ ನೋಡು
ಕರದು ತಂದುಕೊಡೆನಗೀಗಳೆ, ಅವಂಗೆ ಜೋರು ಮಾಡು
ಗುಡ್ಡೆಗೆಬ್ಬಿದ ದನಗೊ ಬಂದವೋ ನೋಡು ಹಟ್ಟಿಗೋಗಿ
ದೊಡ್ಡ ತಪಲೆಲಿ ಕಾಸಿಮಡಗುವೆ ಕಪಿಲೆಉಂಬೆ ಜಾಯಿ

~
ಮೂರುಸಂದಿಲಿ ದೇವರೊಳವೆ ನೀ ಚಾಮಿಚಾಮಿ ಮಾಡು
ಇರುಳು ಆಗಲಿ ಮತ್ತೆ ಕೊಡುವನೊ ಒಪ್ಪ ಚಾಮಿಹಾಲು
ಇರುಳು ಹೇಳಿರೆ ಎಂತರಬ್ಬೆ, ಅದರ ಗುರ್ತ ಹಿಡಿವದೇಂಗೆ?
ಇರುಳು ಹೇಳಿರೆ ಕರ್ಗುಟೆಕಸ್ತಲೆ, ಕಣ್ಣೇ ಕಾಣದ್ದಾಂಗೆimages

~
ಕೃಷ್ಣನಂಬಗ ತನ್ನ ಕಣ್ಣಿನ ಬಿಗುದು ಮುಚ್ಚಿಬಿಟ್ಟಾ
ಕಸ್ತಲಾತದ, ಇರುಳಹೊತ್ತಿದು, ಹಾಲ ಬೇಗ ಕೊಂಡಾ
ಕಳ್ಳ, ಮಾತುಕಲ್ತಿದೆ, ಜೋರು ಆಯಿದೆ, ಮಾಡ್ತೆ ನೋಡು ಈಗ
ಬೆಳ್ಳಿಗಿಂಡಿಯೊಳ ಹಾಲತುಂಬುಸಿ ಯಶೋದೆ ಕೊಟ್ಟತಾಗ

~
ಎಳೆಯ ತೊಡಿಗಳಲ್ಲಿ ಹಾಲಿನಂತದೆ ನೆಗೆಯ ಹರಿಸಿ ನಿಂದ
ಸೆಳೆದುಬಿಟ್ಟನದ ಎಲ್ಲರನ್ನುದೆ ಗೋಕುಲದ ಪುಟ್ಟುಕಂದ.

 

(ಚಿತ್ರಕೃಪೆ ಃ ಅ೦ತರ್ಜಾಲ)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಜಿ.ಪಿ.ರಾಜರತ್ನಂ ಚಾಯೆ ಇದ್ದು. ಎನಗೆ ಕೊಶಿ ಆತು

  [Reply]

  VA:F [1.9.22_1171]
  Rating: 0 (from 0 votes)
 2. ಶೈಲಜಾ ಕೇಕಣಾಜೆ

  ಅತ್ತೇ ಪಷ್ಟಾಯಿದು…

  ಎನ್ನ ಮಗ ಚಾಕ್ಲೇಟಿಂಗೆ ಹೀಂಗೇ ಮಾಡ್ತ…. ಇನ್ನು ನಾಳೆ ಕೊಡ್ತೆ ಹೇಳಿರೆ ನಾಳೆ ಅಪ್ಪದು ಯಾವಾಗ ಹೇಳಿ ಕೇಳ್ತ…. ಮತ್ತೆ ಒರಗಿ ಎದ್ದಪ್ಪಗ ಹೇಳಿರೆ ಹಾಸಿಗೆಲಿ ಒಂದು ಗಳಿಗೆ ಕಣ್ಣು ಮುಚ್ಚಿಕ್ಕಿ ಬಂದು ನಾಳೆ ಆತಮ್ಮಾ ಕೊಡೀಗ ಹೇಳ್ತಾ… :) :)

  [Reply]

  VA:F [1.9.22_1171]
  Rating: 0 (from 0 votes)
 3. ಅದಿತಿ

  ಕೃಷ್ಣನ ಹಟ ಲಾಯ್ಕಲ್ಲಿ ಮೂಡಿ ಬೈಂದು.

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ

  ಚಿಕ್ಕಮ್ಮಾ! ಲಾಯಕ ಆಯಿದು ಅನುವಾದ.

  ಶ್ರೀಕೃಷ್ಣ-ಕರ್ಣಾಮೃತಲ್ಲಿಪ್ಪ ಪದ್ಯ ನೆಂಪಾತು. ಅದು ಹೀಂಗಿದ್ದು –

  ಮಾತಃ! ಕಿಂ ಯದುನಾಥ? ದೇಹಿ ಚಷಕಂ। ಕಿಂ ತೇನ ? ಪಾತುಂ ಪಯಃ।
  (ಅಮ್ಮಾ! ಎಂತ ಮಗನೇ/ಯದುನಾಥ? ಕೊಡು ಗ್ಲಾಸು। ಅದೆಂತಕೆ? ಹಾಲು ಕುಡಿವಲೆ।)
  ತನ್ನಾಸ್ತಿ ಅದ್ಯ। ಕದಾಸ್ತಿ ತತ್? ನಿಶಿ। ನಿಶಾ ಕಾ ವಾ ? ಅಂಧಕಾರೋದಯೇ।
  (ಅದಿಲ್ಲೆ ಈಗ। ಯಾವಾಗಿಪ್ಪದು? ಇರುಳು। ಇರುಳು ಎಂತದು? ಕಸ್ತಲಪ್ಪಗ।)
  ಆಮೀಲ್ಯಾಕ್ಷಿಯುಗಂ ನಿಶಾಪ್ಯುಪಗತಾ ದೇಹೀತಿ ಮಾತುರ್ಮುಹುಃ
  (ಕಣ್ಣೆರಡರ ಮುಚ್ಚಿ, ಇರುಳಾತು ಕೊಡು ಕೊಡು ಹೇಳಿ ಅಮ್ಮನ)
  ವಕ್ಷೋಜಾಂಬರ-ಕರ್ಷಣೋದ್ಯತಕರಃ ಕೃಷ್ಣಃ ಸ ಪುಷ್ಣಾತು ನಃ।
  (ಸೆರಗೆಳವ ಆ ಕೃಷ್ಣ ನಮ್ಮೆಲ್ಲರ ಕಾಪಾಡಲಿ)

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಮಹೇಶ, ಶ್ರೀಕೃಷ್ಣ-ಕರ್ಣಾಮೃತಲ್ಲಿಪ್ಪ ಪದ್ಯವ ಲೀಲಾಶುಕ ಹೇಳ್ತ ಕವಿಯೇ ಬರದ್ದದೋ ಅಂಬಗ? ಎಂತಕೆ ಹೇಳಿರೆ ಜಿ. ಪಿ. ರಾಜರತ್ನಂ ಸಂಸ್ಕೃತದ ಪದ್ಯವನ್ನೆ ಅನುವಾದಿಸಿದ್ದದಡ. ಸಂಸ್ಕೃತಲ್ಲಿ ಹೇಂಗಿತ್ತು ಹೇಳಿ ಎನಗೆ ಗೊಂತಿಲ್ಲೆ- ನೋಡಿರೆ ಅದೇ ಇದು ಹೇಳುವಾಂಗಿದ್ದು ಅಲ್ಲದಾ.ಸಂಸ್ಕೃತದ ಪದ್ಯವ ನೀನು ಇದರಲ್ಲಿ ಹಾಕಿದ್ದು ತುಂಬಾ ಒಳ್ಲೆದಾತು- ತಿಳ್ಕೊಂಬಹಾಂಗಾತನ್ನೆ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅಪ್ಪು, ಕೃಷ್ಣಕರ್ಣಾಮೃತ `ಲೀಲಾಶುಕ’ನ ರಚನೆಯೇ. `ಲೀಲಾಶುಕ’ನ ಹೆಸರು ಬಿಲ್ವಮಂಗಲ ಹೇಳಿ. ಕೃಷ್ಣಭಕ್ತಿಯ ಕಾರಣಂದಾಗಿ ಅವನ `ಕೃಷ್ಣ ಲೀಲಾಶುಕ’ (ಕೃಷ್ಣನ ಲೀಲೆ/ಆಟಗಳ ಹೇಳುವ ಗಿಳಿ) ಹೇಳಿ ಹೇಳುವದಡ. ಲೀಲಾಶುಕನ ಇನ್ನೂ ಕೆಲವು ರಚನೆಗ — ಬಾಲಕೃಷ್ಣ ಕ್ರೀಡಾ ಕಾವ್ಯ, ಬಿಲ್ವಮಂಗಲ ಸ್ತೋತ್ರ, ಗೋವಿಂದಸ್ತೋತ್ರ ಇತ್ಯಾದಿ.

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅತ್ತೆ,”ಶ್ರೀ ಕೃಷ್ಣಕರ್ಣಾಮೃತಂ” ಪುಸ್ತಕ ಸ್ವಪ್ನ ಬುಕ್ ಹೌಸಿಲಿ ಸಿಕ್ಕುತ್ತು. ಮಾಸ್ತಿಯ ಕನ್ನಡ ಅನುವಾದದೊಟ್ಟಿಂಗೆ ಮೂಲ ಸಂಸ್ಕೃತ ಶ್ಲೋಕ ಇದರಲ್ಲಿದ್ದು. ಎಲ್ಲಾ ಶ್ಲೋಕಂಗೊ ಮಧುರ, ಓದಿಯೇ ( ಹಾಡಿಯೇ) ಅನುಭವಿಸೆಕ್ಕಪ್ಪದು.ಕವಿ ಲೀಲಾಶುಕನ ಬಗ್ಗೆಯೂ ಒಂದು ಸಣ್ಣ ಟಿಪ್ಪಣಿ ಇದ್ದ್ದು.

  VN:F [1.9.22_1171]
  Rating: 0 (from 0 votes)
 5. parvathi marakini

  ಇಂದಿರೆ…ಪದ್ಯ ಲಾಯಿಕಾಯಿದು..

  [Reply]

  VA:F [1.9.22_1171]
  Rating: 0 (from 0 votes)
 6. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಗರ್ತಿಕೆರೆ ರಾಗಣ್ಣ ಎಂಗಳಲ್ಲಿಗೆ ಬಂದಿಪ್ಪಾಗ ಈ ಪದ್ಯವ ಏವತ್ತುದೆ ಹಾಡುಲೆ ಇದ್ದು. ಇಂದಿರಕ್ಕ ,ನಿಂಗಳ ಅನುವಾದ ಲಾಯಕ ಆಯಿದು , ಒಂದೆರಡು ತಿದ್ದುಪಡಿ..

  *೨ ನೆ ಸಾಲು… ಸಣ್ಣ ಆನು, ಎನಗು ಬೇಕು ಕೊಡು ಬೇಗ ಕೊಂಡ ಈಗ

  *೫ನೆ ಸಾಲು… ನೊರೆಯ ಪೂರ ಉರ್ಪಿಕ್ಕಿನೆಗೆಯ ಮಾಡುತ್ತನವನ ನೋಡು

  *೬ನೆ ಸಾಲು… ಕರದು ತಂದು ಕೊಡು ಎನಗೆ ಈಗಳೆ ಅವಂಗೆ ಜೋರು ಮಾಡು

  * ೧೨ನೆ ಸಾಲು.. ಇರುಳು ಹೇಳಿರೆ ಕರ್ಗಾಣ ಕಸ್ತಲೆ …

  *೧೩ನೆ ಸಾಲು… ಕೃಷ್ಣ ಅಂಬಗ ….

  * ೧೫ನೆ ಸಾಲು.. ಮಾತು ಕಲ್ತಿದೆ ಜೋರು ಆಯಿದೆ ಕಳ್ಲ, ನೋಡು ಈಗ

  *೧೭ನೆ ಸಾಲು.. ಎಳೆ ತೊಡಿಗಳಲ್ಲಿ…

  ಹೀಂಗೆ ಮಾಡಿರೆ ಲಾಯಕ ಅಕ್ಕೋ ಹೇಳಿ ಕಾಣುತ್ತು ಅಕ್ಕಾ.

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಬಾಲಣ್ಣ, ನಿಂಗೊ ಈ ಪದ್ಯವ ಇನ್ನೂ ಚೆಂದಕ್ಕೆ ಅನುವಾದ ಮಾಡುವಿ ಹೇಳ್ತ ವಿಶ್ವಾಸ ಎನಗಿತ್ತು- ಸರಳವಾದರೂ ಅರ್ಥಪೂರ್ಣವಾದ ಶಬ್ದಂಗಳ ನಿಂಗೊಹಾಕುತ್ತೀರಿ. ಆದರೂ ಮಾಷ್ಟ್ರಕ್ಕಳ ಎದುರಿಂಗೆ ಶಿಷ್ಯಂದ್ರು ಮಾಡುವ ಹಾಂಗೆ ನಿಂಗಳ ಎದುರಿಲಿ ಆನುದೆ ಒಂದು ಪ್ರಯತ್ನಮಾಡೆಕ್ಕು ಹೇಳಿ ಮಾಡಿದ್ದಷ್ಟೆ. ತಪ್ಪಾದರೆ ತಿದ್ದಿ ಮಾರ್ಗದರ್ಶನ ಕೊಡ್ಳೆ ನಿಂಗಳೇ ಇದ್ದೀರನ್ನೆ ಹೇಳ್ತ ಧೈರ್ಯಲ್ಲಿ ಬರದೆ.ತಿದ್ದಿದ್ದಕ್ಕೆ ಧನ್ಯವಾದಂಗೊ ಬಾಲಣ್ಣ. ಮುಂದೆಯೂ ಹೀಂಗೆ ಯಾವತ್ತಾದರೂ ಅನುವಾದ ಮಾಡ್ತರೆ ಹೇಳಿಕೊಡೆಕ್ಕು ಬಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಪುತ್ತೂರುಬಾವಪುತ್ತೂರಿನ ಪುಟ್ಟಕ್ಕಬೋಸ ಬಾವಡಾಗುಟ್ರಕ್ಕ°ವಿನಯ ಶಂಕರ, ಚೆಕ್ಕೆಮನೆಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿಪ್ರಕಾಶಪ್ಪಚ್ಚಿವಿದ್ವಾನಣ್ಣಶ್ರೀಅಕ್ಕ°ಚೆನ್ನಬೆಟ್ಟಣ್ಣಡೈಮಂಡು ಭಾವದೊಡ್ಡಮಾವ°ವೆಂಕಟ್ ಕೋಟೂರುಕೇಜಿಮಾವ°ಶುದ್ದಿಕ್ಕಾರ°ವಿಜಯತ್ತೆಶಾಂತತ್ತೆಕಳಾಯಿ ಗೀತತ್ತೆಜಯಶ್ರೀ ನೀರಮೂಲೆಮಂಗ್ಳೂರ ಮಾಣಿಚುಬ್ಬಣ್ಣಪಟಿಕಲ್ಲಪ್ಪಚ್ಚಿಪುಟ್ಟಬಾವ°ಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ